Tag: ಸೂರರೈ ಪೊಟ್ರು

  • 70 ಕೋಟಿ ಮೊತ್ತದ ದುಬಾರಿ ಫ್ಲಾಟ್‌ ಖರೀದಿಸಿದ ಸೂರ್ಯ- ಜ್ಯೋತಿಕಾ ದಂಪತಿ

    70 ಕೋಟಿ ಮೊತ್ತದ ದುಬಾರಿ ಫ್ಲಾಟ್‌ ಖರೀದಿಸಿದ ಸೂರ್ಯ- ಜ್ಯೋತಿಕಾ ದಂಪತಿ

    ಕಾಲಿವುಡ್‌ನ (Kollywood) ಸ್ಟಾರ್ ಕಪಲ್ ಸೂರ್ಯ – ಜ್ಯೋತಿಕಾ (Jyothika) ತಮ್ಮ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದಾರೆ. ತೆರೆಯ ಮೇಲೆ ಕಮಾಲ್ ಮಾಡಿರುವ ಈ ಜೋಡಿ, ತೆರೆ ಹಿಂದೆ ಕೂಡ ಅದೆಷ್ಟೋ ಅಭಿಮಾನಿಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ. ಸೂರ್ಯ (Suriya) ದಂಪತಿ ಇದೀಗ ಹೊಸ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಮುಂಬೈ ಐಷಾರಾಮಿ ಫ್ಲಾಟ್ ಖರೀದಿಸಿದ್ದಾರೆ. ಈ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.

    ಸೂರರೈ ಪೊಟ್ರು, ಜೈ ಭೀಮ್ (Jai Bheem) ಚಿತ್ರಗಳ ಮೂಲಕ ಸೂರ್ಯ ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಿದ್ದರೆ, ಜ್ಯೋತಿಕಾ ಅವರು ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿದ್ದಾರೆ.ಇದನ್ನೂ ಓದಿ: ಸಲ್ಮಾನ್ ಖಾನ್ ಗೆ ಕೊಲೆ ಬೆದರಿಕೆ : ನಟನ ನಿವಾಸಕ್ಕೆ ಫುಲ್ ಸೆಕ್ಯೂರಿಟಿ

    ಇದೀಗ ಮುಂಬೈನಲ್ಲಿ ಬರೋಬ್ಬರಿ 70 ಕೋಟಿ ರೂ. ಮೊತ್ತದ ಅಪಾರ್ಟ್ಮೆಂಟ್ ಫ್ಲಾಟ್ ಅನ್ನು ನಟ ಸೂರ್ಯ ಖರೀದಿಸಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಗಾರ್ಡನ್ ಏರಿಯಾ, ಪಾರ್ಕಿಂಗ್, ಸ್ವಿಮ್ಮಿಂಗ್ ಫೂಲ್, ಜಿಮ್, ಥಿಯೇಟರ್ ಸೇರಿದಂತೆ ಎಲ್ಲಾ ಸೌಕರ್ಯ ಇರುವ ದುಬಾರಿ ಫ್ಲಾಟ್ ಇದಾಗಿದ್ದು, ಅಂದಾಜು 9 ಸಾವಿರ ಚದರ ಅಡಿ ವಿಸ್ತೀರ್ಣ ಇದೆಯಂತೆ. ಇನ್ನೂ 2016ರಲ್ಲಿ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ಪ್ರೀತಿಸಿ ಮದುವೆ ಆಗಿದ್ದರು. ದಂಪತಿಗೆ ದಿಯಾ, ದೇವ್ ಎನ್ನುವ ಇಬ್ಬರು ಮಕ್ಕಳು ಇದ್ದಾರೆ.

    ಶೀಘ್ರದಲ್ಲೇ ಸೂರ್ಯ ದಂಪತಿ ಮುಂಬೈಗೆ ಶಿಫ್ಟ್ ಆಗುತ್ತಾರೆ ಎನ್ನಲಾಗ್ತಿದೆ. ಇನ್ನು ಪೋಷಕರ ಜೊತೆಗಿನ ಮನಸ್ತಾಪದಿಂದ ಸೂರ್ಯ- ಜ್ಯೋತಿಕಾ ಬೇರೆ ಕಡೆ ವಾಸಿಸುತ್ತಿದ್ದಾರೆ ಎನ್ನುವ ಗುಸುಗುಸು ಕೂಡ ಇತ್ತೀಚೆಗೆ ಕೇಳಿಬಂದಿತ್ತು. ಇದೀಗ ಇಬ್ಬರು ಮುಂಬೈಗೆ ಶಿಫ್ಟ್ ಆಗ್ತಾರಾ? ಎನ್ನುವ ಚರ್ಚೆ ಶುರುವಾಗಿದೆ. ಸದ್ಯ ಸೂರ್ಯ ಇನ್ನು ಹೆಸರಿಡದ ಐತಿಹಾಸಿಕ ಕಥಾಹಂದರ ಚಿತ್ರವೊಂದರಲ್ಲಿ ನಟಿಸ್ತಿದ್ದಾರೆ. ಇದರಲ್ಲಿ ವಿಭಿನ್ನ ಗೆಟಪ್‌ಗಳಲ್ಲಿ ದರ್ಶನ ಕೊಡಲಿದ್ದಾರೆ. ನಿರ್ದೇಶಕ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

  • ʻಸೂರರೈ ಪೊಟ್ರುʼ ನಾಯಕಿ ಅಪರ್ಣಾ ಜೊತೆ ಕಾಲೇಜು ವಿದ್ಯಾರ್ಥಿಯ ಅನುಚಿತ ವರ್ತನೆ

    ʻಸೂರರೈ ಪೊಟ್ರುʼ ನಾಯಕಿ ಅಪರ್ಣಾ ಜೊತೆ ಕಾಲೇಜು ವಿದ್ಯಾರ್ಥಿಯ ಅನುಚಿತ ವರ್ತನೆ

    `ಸೂರರೈ ಪೊಟ್ರು’ (Soorarai Potru) ಸಿನಿಮಾದ ನಟಿ ಅಪರ್ಣಾ ಬಾಲಮುರಳಿ (Aparna Balamurali) ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಹಲವು ಭಾಷೆಗಳಲ್ಲಿ ಸಿನಿಮಾ ಮಾಡುತ್ತಿರುವ ನಟಿ ಅಪರ್ಣಾ ಇತ್ತೀಚೆಗೆ ಕೇರಳದ ಕಾಲೇಜಿಗೆ ಭೇಟಿ ನೀಡಿದ್ದರು. ಕಾಲೇಜು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬರು ಅಪರ್ಣಾ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ʻತಂಕಂʼ ಸಿನಿಮಾ ಪ್ರಚಾರ ಕಾರ್ಯಕ್ಕಾಗಿ ಕೇರಳದ (Kerala) ಕಾಲೇಜಿಗೆ ಅಪರ್ಣಾ ಮತ್ತು ತಂಡ ಬಂದಿದ್ದರು. ಈ ವೇಳೆ ವೇದಿಕೆ ಮೇಲೆ ಕುಳಿತಿದ್ದ ಅಪರ್ಣಾ ಕಡೆ ವಿದ್ಯಾರ್ಥಿಯೊಬ್ಬರು (Student) ಓಡಿ ಬಂದ. ಬಂದವನೇ ಅಪರ್ಣಾ ಕೈ ಹಿಡಿದು ಮಾತನಾಡಿದ, ಬಳಿಕ ಸೆಲ್ಫಿ ಕೇಳಿದ. ಅಪರ್ಣಾ ಕೂಡ ಸೆಲ್ಫಿ ಕೊಡಲು ಎದ್ದು ನಿಂತರು. ಆಗ ವಿದ್ಯಾರ್ಥಿ ಅಪರ್ಣಾ ಹೆಗಲ ಮೇಲೆ ಕೈ ಹಾಕಿದ. ಅಪರ್ಣಾ ಆತನಿಂದ ತಪ್ಪಿಸಿಕೊಂಡು ದೂರ ಹೋದರು. ಇದನ್ನೂ ಓದಿ: ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ `ಸತ್ಯ’ ಸೀರಿಯಲ್ ಖ್ಯಾತಿಯ ಸಾಗರ್- ಸಿರಿ ರಾಜು

    ಕಾಲೇಜು ವಿದ್ಯಾರ್ಥಿಯ ಕೆಟ್ಟ ವರ್ತನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಘಟನೆಯಿಂದ ಅಪರ್ಣಾ ತುಂಬಾ ಹಿಂಸೆ ಅನುಭವಿಸಿದ್ದಾರೆ.

    ಈ ಘಟನೆಯ ಬಳಿಕ ಕೆಲವು ವಿದ್ಯಾರ್ಥಿಗಳು ನಟಿಯ ಬಳಿ ಬಂದು ಕ್ಷಮೆ ಕೇಳಿದ್ದಾರೆ. ಬಳಿಕ ಅನುಚಿತವಾಗಿ ವರ್ತಿಸಿದ ವಿದ್ಯಾರ್ಥಿ ಕೂಡ ಕ್ಷಮೆ ಕೇಳಿದ್ದಾರೆ. ನಾನು ನಿಮ್ಮ ದೊಡ್ಡ ಅಭಿಮಾನಿ, ನಿಮ್ಮ ಜೊತೆ ಹೀಗೆ ವರ್ತಿಸುವ ಯೋಚನೆ ನನ್ನಲ್ಲಿರಲಿಲ್ಲ ಎಂದು ಹೇಳಿದ್ದಾರೆ. ಘಟನೆ ನಡೆದ ವೇಳೆ `ತಂಕಂ’ ಚಿತ್ರತಂಡ ಒಂದು ಮಾತನಾಡದೇ ಸೈಲೆಂಟ್ ಆಗಿದ್ದಕ್ಕೆ ತಂಡದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 2021ರ ಆಸ್ಕರ್ ರೇಸ್‍ನಲ್ಲಿ ಸೂರರೈ ಪೊಟ್ರು

    2021ರ ಆಸ್ಕರ್ ರೇಸ್‍ನಲ್ಲಿ ಸೂರರೈ ಪೊಟ್ರು

    ಚೆನ್ನೈ: ಇತ್ತೀಚೆಗೆ ಬಿಡುಗಡೆಗೊಂಡ ಸೂರ್ಯ ನಟನೆಯ ಸೂರರೈ ಪೊಟ್ರು ಬಯೋಪಿಕ್ ಚಿತ್ರಪ್ರೇಮಿಗಳ ಮನಗೆದ್ದಿತ್ತು. ಇದೀಗ ಈ ಚಿತ್ರ 2021 ಆಸ್ಕರ್ ರೇಸ್ ಎಂಟ್ರಿ ಪಡೆದುಕೊಂಡಿದೆ.

    ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆಫ್ ಆರ್ಟ್ ಆ್ಯಂಡ್ ಸೈನ್ಸ್ ಬಿತ್ತರಿಸಿರುವ ಮಾಹಿತಿ ಪ್ರಕಾರ 366 ಚಲನಚಿತ್ರಗಳನ್ನು 93ನೇ ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು. ಇದರಲ್ಲಿ ಸೂರ್ಯ ನಟನೆಯ ಸೂರರೈ ಪೊಟ್ರು ಸಿನಿಮಾ ಕೂಡ ಒಂದಾಗಿದೆ.

    ಕನ್ನಡಿಗ ಜಿ.ಆರ್ ಗೋಪಿನಾಥ್ ಅವರ ಕಥೆಯನ್ನಾಧರಿಸಿಕೊಂಡು ಮಾಡಿರುವ ಚಿತ್ರ ಸೂರರೈ ಪೊಟ್ರು. ಕ್ಯಾಪ್ಟನ್ ಗೋಪಿನಾಥ್ ದೇಶಕ್ಕಾಗಿ ಕೊಟ್ಟ ಕೊಡುಗೆಯನ್ನು ತಿಳಿಸುವ ಪ್ರಯತ್ನ ಮಾಡಿರುವ ಚಿತ್ರತಂಡ ಸಿನಿಪ್ರಿಯರ ಮನಗೆದ್ದಿತ್ತು.

    ಅತೀ ಮನೋಜ್ಞವಾಗಿ ನಟಿಸಿರುವ ಸೂರ್ಯ ಅವರ ನಟನೆ ಹಾಗೂ ಅವರ ಪತ್ನಿ ಪಾತ್ರಧಾರಿಯಾಗಿ ಮಿಂಚಿರುವ ಅರ್ಪಣ ಬಾಲಮುರಳಿ ಅವರು ಸಿನಿಮಾದುದ್ದಕ್ಕೂ ಕೌಟುಂಬಿಕ ಸನ್ನಿವೇಶವನ್ನು ಉತ್ತಮವಾಗಿ ಅಭಿನಯದ ಮೂಲಕ ಸಿನಿರಸಿಕರಿಗೆ ಉಣಬಡಿಸಿದ್ದಾರೆ.

    ಸೂರರೈ ಪೊಟ್ರು ಚಿತ್ರವನ್ನು ಸುಧಾ ಕೊಂಗರಾ ನಿರ್ದೇಶನ ಮಾಡಿದ್ದು, ಸೂರ್ಯ ಅವರ ಹೋಮ್ ಬ್ಯಾನರ್ 2ಡಿ ಎಂಟಟೈನ್ಮೆಂಟ್‍ನಲ್ಲಿ ನಿರ್ಮಾಣಮಾಡಲಾಗಿದೆ. ಚಿತ್ರದಲ್ಲಿ ಸಂಗೀತವನ್ನು ಜಿ.ವಿ ಪ್ರಕಾಶ್ ನೀಡಿ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

    ಇದೀಗ ಸೂರರೈ ಪೊಟ್ರು ಸಿನಿಮಾ 2021ರ ಆಸ್ಕರ್ ಪ್ರಶಸ್ತಿ ಸುತ್ತಿನಲ್ಲಿ ಉತ್ತಮ ನಟ, ಉತ್ತಮ ನಟಿ, ಉತ್ತಮ ಡೈರೆಕ್ಟರ್ ಮತ್ತು ಇತರ ವಿಭಾಗಗಳಲ್ಲಿ ಸ್ವರ್ಧೆಗೆ ತಯಾರಾಗಿದೆ. ಅಕಾಡೆಮಿಯ ವೋಟಿಂಗ್ ಮಾರ್ಚ್ 5 ರಿಂದ 10 ವರೆಗೆ ನಡೆಯಲಿದ್ದು, ನಾಮಿನೇಶನ್ ಅಂತಿಮವಾಗಿ ಮಾರ್ಚ್ 15 ರಂದು ಹೊರಬೀಳಲಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದೆ.

    ಕೋವಿಡ್- 19ನಿಂದಾಗಿ ಈಬಾರಿಯ ಆಸ್ಕರ್ ಪ್ರಶಸ್ತಿಯಲ್ಲಿ ಹಲವು ಬದಲಾವಣೆ ಮಾಡಲಾಗಿದ್ದು, ಈ ಬಾರಿ ಒಟಿಟಿಗಳಲ್ಲಿ ಬಿಡುಗಡೆಗೊಂಡ ಚಿತ್ರಗಳನ್ನು ಪ್ರಶಸ್ತಿ ಸುತ್ತಿಗೆ ನಾಮನಿರ್ದೇಶನ ಮಾಡುವ ನಿಯಮವನ್ನು ಜಾರಿಗೆ ತರಲಾಗಿದೆ.

  • ಆಸ್ಕರ್ ರೇಸ್‍ನಲ್ಲಿ ಸೂರರೈ ಪೊಟ್ರು – ಕನ್ನಡಿಗ ಗೋಪಿನಾಥ್ ಜೀವನ ಕಥೆ

    ಆಸ್ಕರ್ ರೇಸ್‍ನಲ್ಲಿ ಸೂರರೈ ಪೊಟ್ರು – ಕನ್ನಡಿಗ ಗೋಪಿನಾಥ್ ಜೀವನ ಕಥೆ

    ಬೆಂಗಳೂರು: ಕನ್ನಡಿಗ ಜಿ.ಆರ್.ಗೋಪಿನಾಥ್ ಅವರ ಜೀವನಕಥೆಯ ಸೂರರೈ ಪೊಟ್ರು ಸಿನಿಮಾ ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗೆ ಎಂಟ್ರಿ ಪಡೆದುಕೊಂಡಿದೆ.

    ಸೂರರೈ ಪೊಟ್ರು ಓಟಿಟಿ ಪ್ಲಾಟ್‍ಫಾರಂನಲ್ಲಿ ಬಿಡುಗಡೆಯಾದ ಮೊದಲ ಸ್ಟಾರ್ ನಟನ ತಮಿಳು ಚಿತ್ರ. ಕನ್ನಡಿಗ ಗೋಪಿನಾಥ್ ಅವರ ಪಾತ್ರದಲ್ಲಿ ನಟ ಸೂರ್ಯ ನಟಿಸಿದ್ದರು. ತಮಿಳು ಭಾಷೆಯ ಬಹುನಿರೀಕ್ಷಿತ ಸಿನಿಮಾ ಆಗಿದ್ದರೂ ಕೋವಿಡ್-19 ಹಿನ್ನೆಲೆ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ರಿಲೀಸ್ ಮಾಡಲಾಗಿತ್ತು. ಓಟಿಟಿ ಪ್ಲಾಟ್‍ಫಾರಂನಲ್ಲಿ ವೀಕ್ಷಕರನ್ನ ತನ್ನತ್ತ ಸೆಳೆಯುವಲ್ಲಿ ಚಿತ್ರ ಯಶಸ್ವಿಯಾಗಿತ್ತು. ಅಬ್ಬರ ಪ್ರಚಾರವಿಲ್ಲದಿದ್ರೂ ಅಭಿಮಾನಿಗಳಿಂದಲೇ ದೊಡ್ಡ ಮಟ್ಟದ ಪ್ರಮೋಷನ್ ಪಡೆದುಕೊಂಡಿದ್ದು ಸತ್ಯ. ಹಾಗಾಗಿ ನೆಟ್ಟಿಗರು ಮೊಬೈಲ್ ಗಳಲ್ಲಿ ಸೂರರೈ ಪೊಟ್ರು ಹುಡುಕಾಡಿದ್ದರು.

    ಚಿತ್ರ ಜನರಲ್ ಕೆಟಗಿರಿಯಲ್ಲಿ ಆಸ್ಕರ್ ಪ್ರವೇಶಿಸಿದೆ. ಉತ್ತಮ ನಟ, ಉತ್ತಮ ನಟಿ, ಉತ್ತಮ ನಿರ್ದೇಶಕ, ಉತ್ತಮ ಸಂಯೋಜನೆ, ಉತ್ತಮ ಚಿತ್ರಕಥೆ, ರಚನೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸಿನಿಮಾ ಸ್ಪರ್ಧೆಯಲ್ಲಿದೆ. ಸೂರರೈ ಪೊಟ್ರು ವೀಕ್ಷಿಸಿದ ಅಕಾಡೆಮಿ ಸ್ಕ್ರೀನಿಂಗ್ ಸದಸ್ಯರು ಚಿತ್ರಕ್ಕೆ ಮತ ನೀಡಿ ಆಸ್ಕರ್ ಗೆ ನಾಮಿನೇಷನ್ ಮಾಡಿದ್ದಾರೆ.

    ಸುಧಾ ಕೊಂಗರ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಸೂರ್ಯ, ಪರೇಶ್ ರಾವಲ್, ಅಪರ್ಣಾ ಬಲಮುರಳಿ, ಊರ್ವಶಿ, ಮೋಹನ್ ಬಾಬು, ಕರುಣಾಸ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಪುಟ್ಟ ಗ್ರಾಮದ ಯುವಕ ಹೇಗೆ ಒಂದು ವಿಮಾನಯಾನ ಸಂಸ್ಥೆ ಕಟ್ಟುತ್ತಾನೆ? ಆತನಿಗೆ ಯಾವೆಲ್ಲ ತೊಂದರೆಗಳು ಎದುರಾಗುತ್ತೆ ಅನ್ನೋ ಕಥಾ ಹಂದರವನ್ನು ಸೂರರೈ ಪೊಟ್ರು ಹೊಂದಿದೆ.