Tag: ಸೂರಪ್ಪ ಬಾಬು

  • ಸೂರಪ್ಪ ಬಾಬುಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡ್ತೀನಿ ಎಂದ ಚಕ್ರವರ್ತಿ ಚಂದ್ರಚೂಡ

    ಸೂರಪ್ಪ ಬಾಬುಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡ್ತೀನಿ ಎಂದ ಚಕ್ರವರ್ತಿ ಚಂದ್ರಚೂಡ

    ನ್ನಡದ ಹೆಸರಾಂತ ನಿರ್ಮಾಪಕ ಸೂರಪ್ಪ ಬಾಬು (Surappa Babu) ವಿರುದ್ಧ ಮತ್ತೆ ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ (Chakravarty Chandrachuda) ಹರಿಹಾಯ್ದಿದ್ದಾರೆ. ಮೊನ್ನೆಯಷ್ಟೇ ವಿಡಿಯೋವೊಂದನ್ನು ಮಾಡಿ ಸೂರಪ್ಪ ಬಾಬು ಅವರನ್ನು ‘ಶಿಖಂಡಿ’ ಎಂದು ಕರೆದಿದ್ದರು ಚಂದ್ರಚೂಡ, ಇಂದು ಮತ್ತೆ ಮಾಧ್ಯಮ ಗೋಷ್ಠಿಯಲ್ಲಿ’ಸೂರಪ್ಪ ಬಾಬುಗೆ ನಮ್ಮ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಖಾಲಿ ಇದೆ. ಬೇಕಾದರೆ ಕೊಡುತ್ತೇನೆ’ ಎಂದು ವಾಗ್ದಾಳಿ ನಡೆಸಿದರು.

    ಕಿಚ್ಚ ಸುದೀಪ್ (Sudeep) ವಿಚಾರವಾಗಿ ಒಂದು ಕಡೆ ನಿರ್ಮಾಪಕ ಎನ್.ಕುಮಾರ್ (N. Kumar) ಮತ್ತು ಸುದೀಪ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದರೆ, ಮತ್ತೊಂದು ಕಡೆ ಇದೇ ಸುದೀಪ್ ಅವರ ವಿಚಾರವಾಗಿ ನಿರ್ಮಾಪಕ ಸೂರಪ್ಪ ಬಾಬು ಮತ್ತು ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಕಚ್ಚಾಡಿಕೊಳ್ಳುತ್ತಿದ್ದಾರೆ. ಈ ಕಚ್ಚಾಟ ಅಷ್ಟು ಸುಲಭಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.

    ಸೂರಪ್ಪ ಬಾಬು ವಿಚಾರದಲ್ಲಿ ಚಂದ್ರಚೂಡ ವಿಡಿಯೋವೊಂದನ್ನು ಮಾಡಿ ಯೂಟ್ಯೂಬ್ ಗೆ ಹಾಕಿದ್ದರು. ಅದರಲ್ಲಿ ಸೂರಪ್ಪ ಬಾಬು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಸೂರಪ್ಪ ಬಾಬು ಫ್ಯಾಮಿಲಿಯನ್ನು ಈ ವಿಚಾರದಲ್ಲಿ ಎಳೆತಂದಿದ್ದರು. ಬಾಬು ಮಗಳ ಬಗ್ಗೆಯೂ ಕೆಲವೊಂದಿಷ್ಟು ಮಾಹಿತಿಯನ್ನು ಆಚೆ ಹಾಕಿದ್ದರು. ಇದು ಬಾಬು ಕೋಪಕ್ಕೆ ಕಾರಣವಾಗಿತ್ತು. ಇದನ್ನೂ ಓದಿ:ಮೋಹನ್ ಲಾಲ್-ನಂದಕಿಶೋರ್ ಚಿತ್ರಕ್ಕೆ ಚಾಲನೆ: ಇದು ಪ್ಯಾನ್ ಇಂಡಿಯಾ ಸಿನಿಮಾ

    ನಿನ್ನೆಯಷ್ಟೇ ಸೂರಪ್ಪ ಬಾಬು ಮಾಧ್ಯಮಗೋಷ್ಠಿಯಲ್ಲಿ ಚಂದ್ರಚೂಡ ಅವರ ವಿರುದ್ಧ ಹಲವಾರು ಆರೋಪ ಮಾಡಿದ್ದರು. ಚಂದ್ರಚೂಡ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದ್ದರು. ಜೊತೆಗೆ ಚಂದ್ರಚೂಡ ಯಾರು ಅಂತಾನೇ ತಮಗೆ ಗೊತ್ತಿಲ್ಲ. ಅವರಿಗೂ ಈ ವಿವಾದಕ್ಕೂ ಸಂಬಂಧವಿಲ್ಲ ಎಂದಿದ್ದರು.

     

    ಇಂದು ಮತ್ತೆ ಚಂದ್ರಚೂಡ ಮಾಧ್ಯಮಗಳ ಜೊತೆ ಮಾತನಾಡಿ, ‘ಸುದೀಪ್ ಅವರು ಸುಮ್ಮನಿದ್ದರೂ ನಾನು ಈ ವಿಚಾರದಲ್ಲಿ ಸುಮ್ಮನಿರುವುದಿಲ್ಲ. ಸುದೀಪ್ ಅವರಿಗೆ ಸೂರಪ್ಪ ಬಾಬು ಆರು ಕೋಟಿ ರೂಪಾಯಿ ಕೊಡಬೇಕು. ಅಲ್ಲದೇ ಅಣ್ಣನಂತಿರುವ ಸುದೀಪ್ ಅವರ ಮನಸ್ಸಿಗೆ ಬಾಬು ಸಾಕಷ್ಟು ನೋವು ಕೊಟ್ಟಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ’ ಎಂದಿದ್ದಾರೆ ಚಂದ್ರಚೂಡ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುದೀಪ್ ಅವರಿಗೆ ಸೂರಪ್ಪ ಬಾಬು 6 ಕೋಟಿ ರೂಪಾಯಿ ಕೊಡಬೇಕು : ಚಕ್ರವರ್ತಿ ಚಂದ್ರಚೂಡ

    ಸುದೀಪ್ ಅವರಿಗೆ ಸೂರಪ್ಪ ಬಾಬು 6 ಕೋಟಿ ರೂಪಾಯಿ ಕೊಡಬೇಕು : ಚಕ್ರವರ್ತಿ ಚಂದ್ರಚೂಡ

    ಕಿಚ್ಚ ಸುದೀಪ್ (Sudeep) ವಿಚಾರವಾಗಿ ಒಂದು ಕಡೆ ನಿರ್ಮಾಪಕ ಎನ್.ಕುಮಾರ್ (N. Kumar) ಮತ್ತು ಸುದೀಪ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದರೆ, ಮತ್ತೊಂದು ಕಡೆ ಇದೇ ಸುದೀಪ್ ಅವರ ವಿಚಾರವಾಗಿ ನಿರ್ಮಾಪಕ ಸೂರಪ್ಪ ಬಾಬು (Surappa Babu) ಮತ್ತು ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಕಚ್ಚಾಡಿಕೊಳ್ಳುತ್ತಿದ್ದಾರೆ. ಈ ಕಚ್ಚಾಟ ಅಷ್ಟು ಸುಲಭಕ್ಕೆ ಮುಗಿಯುವಂತೆ ಕಾಣುತ್ತಿಲ್ಲ.

    ಸೂರಪ್ಪ ಬಾಬು ವಿಚಾರದಲ್ಲಿ ಚಂದ್ರಚೂಡ (Chakravarty Chandrachuda) ವಿಡಿಯೋವೊಂದನ್ನು ಮಾಡಿ ಯೂಟ್ಯೂಬ್ ಗೆ ಹಾಕಿದ್ದರು. ಅದರಲ್ಲಿ ಸೂರಪ್ಪ ಬಾಬು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಶಿಖಂಡಿ ಎನ್ನುವ ಪದಬಳಕೆಯನ್ನೂ ಚಂದ್ರಚೂಡ ಮಾಡಿದ್ದರು. ಜೊತೆಗೆ ಸೂರಪ್ಪ ಬಾಬು ಫ್ಯಾಮಿಲಿಯನ್ನು ಈ ವಿಚಾರದಲ್ಲಿ ಎಳೆತಂದಿದ್ದರು. ಇದನ್ನೂ ಓದಿ:ರಾಜಮೌಳಿ ಡೈರೆಕ್ಷನ್, ರಾಮ್ ಚರಣ್ ಜೊತೆ ಆಕ್ಟಿಂಗ್- ಪ್ರಭಾಸ್ ಕೊಟ್ರು ಗುಡ್ ನ್ಯೂಸ್

     

    ನಿನ್ನೆಯಷ್ಟೇ ಸೂರಪ್ಪ ಬಾಬು ಮಾಧ್ಯಮಗೋಷ್ಠಿಯಲ್ಲಿ ಚಂದ್ರಚೂಡ ಅವರ ವಿರುದ್ಧ ಹಲವಾರು ಆರೋಪ ಮಾಡಿದ್ದರು. ಚಂದ್ರಚೂಡ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದ್ದರು. ಜೊತೆಗೆ ಚಂದ್ರಚೂಡ ಯಾರು ಅಂತಾನೇ ತಮಗೆ ಗೊತ್ತಿಲ್ಲ. ಅವರಿಗೂ ಈ ವಿವಾದಕ್ಕೂ ಸಂಬಂಧವಿಲ್ಲ ಎಂದಿದ್ದರು.

     

    ಇಂದು ಮತ್ತೆ ಚಂದ್ರಚೂಡ ಮಾಧ್ಯಮಗಳ ಜೊತೆ ಮಾತನಾಡಿ, ‘ಸುದೀಪ್ ಅವರು ಸುಮ್ಮನಿದ್ದರೂ ನಾನು ಈ ವಿಚಾರದಲ್ಲಿ ಸುಮ್ಮನಿರುವುದಿಲ್ಲ. ಸುದೀಪ್ ಅವರಿಗೆ ಸೂರಪ್ಪ ಬಾಬು ಆರು ಕೋಟಿ ರೂಪಾಯಿ ಕೊಡಬೇಕು. ನನ್ನ ಮನೆಯಲ್ಲಿ ಸೆಕ್ಯೂರಿಟಿ ಗಾಡ್ ಪೋಸ್ಟ್ ಖಾಲಿ ಇದೆ. ಬೇಕಾದರೆ ಆ ಕೆಲಸವನ್ನು ಕೊಡುತ್ತೇನೆ’ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುದೀಪ್-ಕುಮಾರ್ ಕಾಲ್‌ಶೀಟ್ ಕದನದ ನಡುವೆ ಚಂದ್ರಚೂಡ್‌ಗೆ ಸೂರಪ್ಪ ಬಾಬು ಕ್ಲಾಸ್

    ಸುದೀಪ್-ಕುಮಾರ್ ಕಾಲ್‌ಶೀಟ್ ಕದನದ ನಡುವೆ ಚಂದ್ರಚೂಡ್‌ಗೆ ಸೂರಪ್ಪ ಬಾಬು ಕ್ಲಾಸ್

    ಸ್ಯಾಂಡಲ್‌ವುಡ್ ನಟ ಸುದೀಪ್- ನಿರ್ಮಾಪಕ ಕುಮಾರ್ (Kumar) ಕಾಲ್‌ಶೀಟ್ ಕದನ ಸಂಧಾನದ ಹಂತದಲ್ಲಿದೆ. ಜುಲೈ 21ರ ಶುಕ್ರವಾರದಿಂದ ಸುದೀಪ್- ಕುಮಾರ್ ಸಂಧಾನಕ್ಕೆ ರವಿಚಂದ್ರನ್ ಎಂಟ್ರಿಯಾಗಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ರವಿಚಂದ್ರನ್ ಪ್ರಕಟಿಸುವ ನಿರ್ಧಾರಕ್ಕೆ ಇಬ್ಬರು ಬದ್ಧರಾಗ್ತಾರಾ ಎಂಬ ಪ್ರಶ್ನೆಯ ನಡುವೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ‘ಕೋಟಿಗೊಬ್ಬ’ (Kotigobba) ನಿರ್ಮಾಪಕ ಸೂರಪ್ಪ ಬಾಬು (Soorappa Babu) ಅವರು ಪ್ರತಿಕಾಗೋಷ್ಠಿ ನಡೆಸಿ, ಚಂದ್ರಚೂಡ್ ಅವರ ವಿರುದ್ಧ ಕಿಡಿಕಾರಿದ್ದಾರೆ.  ಇದನ್ನೂ ಓದಿ:ಮನೀಷ್ ಮಲ್ಹೋತ್ರಾ ನಿರ್ದೇಶನದಲ್ಲಿ ಮೀನಾ ಕುಮಾರಿ ಬಯೋಪಿಕ್- ಕೃತಿ ಸನೋನ್ ನಾಯಕಿ?

    ಸುದೀಪ್ ವಿರುದ್ಧ ಕುಮಾರ್ ಮಾಡಿರುವ ಆರೋಪದ ಹಿಂದೆ ನಿರ್ಮಾಪಕ ಸೂರಪ್ಪ ಬಾಬು ಕೈವಾಡವಿದೆ ನಟ ಚಂದ್ರಚೂಡ್‌ ಅವರು ಈ ಹಿಂದೆ ಹೇಳಿದ್ದರು. ಸೂರಪ್ಪ ಬಾಬು ಒಬ್ಬ ಶಿಖಂಡಿ. ಕೋಟಿಗೊಬ್ಬ 2 ಸಿನಿಮಾದ ಸಂಭಾವನೆ 2.50 ಕೋಟಿ ರೂಪಾಯಿ, ಜಾಕ್ ಮಂಜು ಅವರಿಗೆ ಒಂದೂವರೆ ಕೋಟಿ ರೂಪಾಯಿ, ಕೋಟಿಗೊಬ್ಬ 3 ಸಿನಿಮಾದ 3.5 ಕೋಟಿ ಸೇರಿ ಒಟ್ಟು ಏಳು ಕೋಟಿ ಬಾಕಿ ಹಣವನ್ನು ಸೂರಪ್ಪ ಬಾಬು ಕೊಡಬೇಕಿದೆ ಎಂದು ಚಕ್ರವರ್ತಿ ಚಂದ್ರಚೂಡ್ ಈ ಹಿಂದೆ ಆರೋಪಿಸಿದ್ದರು. ಕೋಟಿಗೊಬ್ಬ 3 ಸಿನಿಮಾ ರಿಲೀಸ್ ತಡವಾದಾಗ ಸೂರಪ್ಪ ಅವರ ಮಗಳು ಸುದೀಪ್‌ಗೆ ವಿನಂತಿಸಿದ್ದರು. ಅಂದು ನಾನು ಜೊತೆ ಇದ್ದೆ ಎಂದು ಚಂದ್ರಚೂಡ್ ಅವರು ಮಾತನಾಡಿದ್ದರು. ಈ ವಿಚಾರಕ್ಕೆ ನಿರ್ಮಾಪಕ ಸೂರಪ್ಪ ಬಾಬು ಪ್ರತಿಕ್ರಿಯೆ ನೀಡಿದ್ದಾರೆ.

    ಚಂದ್ರ ಚೂಡ್ (Chandrachud) ಅವರು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಹಕ್ಕಿಲ್ಲದೇ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ನಾನು ಉತ್ತರ ಕೊಡಬೇಕಾಗಿರೋದು ನನಗೆ ಹಣ ಕೊಟ್ಟವರಿಗೆ ಹಾಗೂ ನನ್ನ ಮನೆಯವರಿಗೆ ಮಾತ್ರ. ನೀವು ಸತ್ಯ ಹರಿಶ್ಚಂದ್ರನ ತುಂಡು ಅಂತ ಅಂದ್ಕೊಂಡಿದ್ದಾರಾ ಅಂತಾ ಚಂದ್ರಚೂಡ್‌ಗೆ ಸೂರಪ್ಪ ಬಾಬು ಟಾಂಗ್ ಕೊಟ್ಟಿದ್ದಾರೆ.

    ನನ್ನ ಶಿಖಂಡಿ ಅಂತ ಚಂದ್ರಚೂಡ್ ಹೇಳ್ತಿದ್ದಾರೆ. ನನಗೆ ಹೆಂಡತಿ ಮತ್ತು ಇಬ್ಬರು ಮಕ್ಕಳು ಇದ್ದಾರೆ. ನಾನು 34 ವರ್ಷ ಆಯ್ತು ಚಿತ್ರರಂಗಕ್ಕೆ ಬಂದು. ಚಿತ್ರರಂಗಕ್ಕೆ ಬರುವ ಮುಂಚೆ ನಾನು ಕಾಫಿ ಲೋಟ ತೊಳೀತಿದ್ದೆ, ಈಗ ಕೋಟಿ ಕೋಟಿ ರೂಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡ್ತಿದ್ದಿನಿ ಅಂತ ಹೆಮ್ಮೆ ಇದೆ. ವೀರ ಸ್ವಾಮಿ ಅವರು ಮೊದಲು ಒಂದು ಆಫೀಸಲ್ಲಿ ಕೆಲಸ ಮಾಡ್ತಿದ್ರು. ನಂತರ ಅವರೂ ದೊಡ್ಡ ನಿರ್ಮಾಪಕರಾಗಿದ್ರು. ಹಾಗೆ ನಾವೂ ಬೆಳೆದು ಬಂದ ದಾರಿ ಇತ್ತು.

    ಕುಮಾರ್ ಅವರ ಆರೋಪದ ಹಿಂದೆ ನಾನಿದ್ದೀನಿ ಅಂತಾ ಸುಳ್ಳು ಆರೋಪ ಮಾಡ್ತಿದ್ದಾರೆ. ಎಲ್ಲೋ ಕುತ್ಕೊಂಡು ಮನೆ ಹಾಳು ಮಾಡ್ತೀರಾ. ಕುಮಾರ್ ಅವರು ನನ್ನ ಸ್ನೇಹಿತ. 8 ತಿಂಗಳು ಅವೈಡ್ ಮಾಡಿದ್ದೆ, ಕುಮಾರ್ 2 ಸಲ ಸುಸೈಡ್ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಅವರು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು, ಯಾರಿಗಾದ್ರು ಗೊತ್ತಾ? ದೇವರ ಮೇಲೆ ಭಾರ ಹಾಕಿ ಎಲ್ಲಾ ಸರಿ ಹೋಗುತ್ತೆ ಅಂತಾ ಹೇಳಿದ್ದೆ, ಇಂಡಸ್ಟ್ರಿಯಲ್ಲಿ ಈಗಾಗಲೇ ಸಿನಿಮಾ ಇಲ್ಲದೇ ಸಾಯುತ್ತಾ ಇದ್ದೀವಿ? ಅದನ್ನ ಮತ್ತಷ್ಟು ಹಾಳು ಮಾಡಬೇಡಿ ಎಂದು ಸೂರಪ್ಪ ಬಾಬು ಹೇಳಿದ್ದಾರೆ. ಸುದೀಪ್ ಅವರು ನನ್ನ ಬಗ್ಗೆ ಏನೂ ಮಾತನಾಡಿಲ್ಲ. ಆದರೆ ನಮ್ಮ ಮಧ್ಯೆ ತಂದು ಇಡುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ:ಟಾಲಿವುಡ್‌ನಲ್ಲಿ ಕನ್ನಡತಿಯರ ದರ್ಬಾರ್- ತೆಲುಗು ನಟಿಯರ ಬಗ್ಗೆ ಅಲ್ಲು ಅರ್ಜುನ್ ಬೇಸರ

    ಇನ್ನೂ ಕುಮಾರ್- ಸುದೀಪ್ (Sudeep) ಸಂಧಾನದ ಬಗ್ಗೆ ಮೀಟಿಂಗ್ ನಡೆದಿದೆ. ಕಾಲ್‌ಶೀಟ್ ಕದನದಲ್ಲಿ ಇಬ್ಬರ ದಾಖಲೆಗಳನ್ನ ರವಿಚಂದ್ರನ್ ಅವರು ಪರಿಶೀಲನೆ ನಡೆಸಿದ್ದಾರೆ. ಕಳೆದ 3 ದಿನಗಳ ಸತತ ಮೀಟಿಂಗ್ ನಂತರ ರವಿಚಂದ್ರನ್ (Ravichandran) ಅವರ ಮಾತಿಗೆ ಸುದೀಪ್- ಕುಮಾರ್ ಇಬ್ಬರೂ ಆಲ್‌ಮೋಸ್ಟ್ ಓಕೆ ಅಂದಿದ್ದಾರೆ ಎಂಬುದು ಇನ್‌ಸೈಡ್ ಸ್ಟೋರಿ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವಣ್ಣ-ಗಣೇಶ್ ನಟನೆಯ ಚಿತ್ರಕ್ಕೆ ಸ್ಟಾರ್ ನಿರ್ದೇಶಕನ ಎಂಟ್ರಿ

    ಶಿವಣ್ಣ-ಗಣೇಶ್ ನಟನೆಯ ಚಿತ್ರಕ್ಕೆ ಸ್ಟಾರ್ ನಿರ್ದೇಶಕನ ಎಂಟ್ರಿ

    ನ್ನಡದಲ್ಲಿ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಸದ್ದಿಲ್ಲದೇ ರೂಪುಗೊಳ್ಳುತ್ತಿದೆ. ಮೊನ್ನೆಯಷ್ಟೇ ಶಿವರಾಜ್ ಕುಮಾರ್ (Shivaraj Kumar) ಮತ್ತು ಗಣೇಶ್ (Ganesh) ಕಾಂಬಿನೇಷನ್ ಸಿನಿಮಾ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್ ಎಕ್ಸ್ ಕ್ಲೂಸಿವ್ ಸುದ್ದಿ ನೀಡಿತ್ತು. ಇದೀಗ ಆ ಚಿತ್ರಕ್ಕೆ ಸ್ಟಾರ್ ನಿರ್ದೇಶಕರೊಬ್ಬರ ಎಂಟ್ರಿಯಾಗಿದೆ. ಈಗಾಗಲೇ ಆ ನಿರ್ದೇಶಕರು ಇಬ್ಬರೂ ನಟರನ್ನು ಭೇಟಿ ಮಾಡಿ ಮಾತುಕತೆ ಕೂಡ ನಡೆಸಿದ್ದಾರೆ ಎನ್ನುವುದಕ್ಕೆ ಫೋಟೋವೊಂದು ಸಾಕ್ಷಿಯಾಗಿದೆ.

    ಶಿವರಾಜ್ ಕುಮಾರ್ ಜೊತೆ ಈಗಾಗಲೇ ಹಲವು ಸ್ಟಾರ್ ಗಳು ನಟಿಸಿದ್ದಾರೆ. ಉಪೇಂದ್ರ, ಸುದೀಪ್, ರವಿಚಂದ್ರನ್ ಸೇರಿದಂತೆ ಹಲವು ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಶಿವಣ್ಣ ಜೊತೆ ಗಣೇಶ್ ಸೇರಿಕೊಂಡಿದ್ದಾರೆ. ಹೀಗಾಗಿ ಈ ಚಿತ್ರಕ್ಕೆ ಮಹತ್ವ ಬಂದಿದೆ. ಅಲ್ಲದೇ ಈ ಸಿನಿಮಾಗೆ ನಿರ್ದೇಶಕರು ಯಾರಿರಬಹುದು ಎನ್ನುವ ಕುತೂಹಲ ಕೂಡ ಮೂಡಿದೆ. ಇದೀಗ ಕುತೂಹಲಕ್ಕೆ ತೆರೆ ಬಿದ್ದಿದೆ. ಇದನ್ನೂ ಓದಿ: ಪಾಕಿಸ್ತಾನದ ಡಿಸೈನರ್ ವಿನ್ಯಾಸ ಮಾಡಿದ ಲೆಹೆಂಗಾದಲ್ಲಿ ಕಂಗೊಳಿಸಿದ ಸ್ವರಾ ಭಾಸ್ಕರ್

    ತಮಿಳಿನಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ಮತ್ತು ರಜನಿಕಾಂತ್ ಜೊತೆ ಹಲವಾರು ಸಿನಿಮಾಗಳನ್ನು ಮಾಡಿರುವ ಕೆ.ಎಸ್.ರವಿಕುಮಾರ್ (KS Ravikumar) ಮತ್ತೆ ಕನ್ನಡ ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ. ಈ ಹಿಂದೆ ಅವರು ಸುದೀಪ್ ನಟನೆಯ ಕೋಟಿಗೊಬ್ಬ 2 ಸಿನಿಮಾಗೆ ನಿರ್ದೇಶನವನ್ನು ಮಾಡಿದ್ದರು. ಇದೀಗ ಶಿವಣ್ಣ ಮತ್ತು ಗಣೇಶ್ ಕಾಂಬಿನೇಷನ್ ಚಿತ್ರಕ್ಕೆ ಇವರೇ ನಿರ್ದೇಶಕರು ಎಂದು ಹೇಳಲಾಗುತ್ತಿದೆ.

    ನಿರ್ಮಾಪಕ ಸೂರಪ್ಪ ಬಾಬು (Surappa Babu) ಜೊತೆ ಶಿವರಾಜ್ ಕುಮಾರ್, ಗಣೇಶ್ ಮತ್ತು ರವಿಕುಮಾರ್ ಕಾಣಿಸಿಕೊಂಡ ಫೋಟೋ ವೈರಲ್ ಆಗಿದ್ದು, ಇವರೇ ಈ ಸಿನಿಮಾದ ನಿರ್ದೇಶಕರು ಎಂದು ಹೇಳಲಾಗುತ್ತಿದೆ. ಚಿತ್ರತಂಡ ಅಧಿಕೃತವಾಗಿ ಯಾವುದೇ ಮಾಹಿತಿ ನೀಡದೇ ಇದ್ದರು, ವೈರಲ್ ಆಗಿರುವ ಫೋಟೋ ಎಲ್ಲವನ್ನೂ ಹೇಳುವಂತಿದೆ.

  • ಸ್ಟಾರ್ ನಟರ ಸಿನಿಮಾ ನಿರ್ಮಾಣ ಮಾಡಿದ್ದ ಖ್ಯಾತ ನಿರ್ಮಾಪಕನ ಕಾರು ಅಪಘಾತ

    ಸ್ಟಾರ್ ನಟರ ಸಿನಿಮಾ ನಿರ್ಮಾಣ ಮಾಡಿದ್ದ ಖ್ಯಾತ ನಿರ್ಮಾಪಕನ ಕಾರು ಅಪಘಾತ

    ವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಕಿಚ್ಚ ಸುದೀಪ್ ಸೇರಿದಂತೆ ಚಂದನವನದ ಖ್ಯಾತ ನಟರ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ ಸೂರಪ್ಪ ಬಾಬು ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತವಾಗಿದೆ.

    ಸೂರಪ್ಪ ಬಾಬು ಅವರು ಬೆಂಗಳೂರಿನಿಂದ ಬೆಳಗಿನ ಜಾವ ಕುಟುಂಬಸ್ಥರೊಂದಿಗೆ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದ್ದು, ಯಾರಿಗೂ ಯಾವುದೇ ರೀತಿ ತೊಂದರೆಯಾಗಿಲ್ಲ. ಹೊಸೂರಿನಲ್ಲಿ ಘಟನೆ ಸಂಭವಿಸಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದರೂ, ಯಾರಿಗೂ ತೀವ್ರ ಗಾಯವಾಗಿಲ್ಲ ಎಂದು ಸೂರಪ್ಪ ಬಾಬು ಅವರೇ ತಿಳಿಸಿದ್ದಾರೆ. ಇದನ್ನೂ ಓದಿ: ತಾಂತ್ರಿಕ ಸಮಸ್ಯೆಯಿಂದ ಕೋವಿಡ್‌ ಕೇಸ್‌ ಕಡಿಮೆ ದಾಖಲು – ಇಂದು 133 ಮಂದಿಗೆ ಸೋಂಕು

    ಭಾನುವಾರ ಬೆಳಗ್ಗೆ ಸೂರಪ್ಪ ಬಾಬು ಕುಟುಂಬಸ್ಥರು ತಮಿಳುನಾಡಿನಲ್ಲಿರುವ ಬ್ರಹ್ಮ ದೇವಸ್ಥಾನಕ್ಕೆ ಹೊರಟಿದ್ದರು. ಈ ವೇಳೆ ಹೊಸೂರು ಕ್ರಾಸ್ ಬಳಿ ಕಾರು ಆಕ್ಸಿಡೆಂಟ್ ಆಗಿದೆ. ಈ ವೇಳೆ ಮುಂಭಾಗದಲ್ಲಿ ಕೂತಿದ್ದ ಸೂರಪ್ಪ ಬಾಬು ಅವರ ಕಾಲಿಗೆ ಪೆಟ್ಟಾಗಿದ್ದು, ಇತರರಿಗೆ ಯಾವುದೇ ತೊಂದರೆಯಾಗಿಲ್ಲ. ಕಾಲಿಗೆ ಕೊಂಚ ಪೆಟ್ಟು ಬಿದ್ದ ಕಾರಣ ವೈದ್ಯರಿಗೆ ತೋರಿಸಲು ಸೂರಪ್ಪ ಬಾಬು ಅಲ್ಲಿಂದ ಬೆಂಗಳೂರಿಗೆ ಹಿಂದಿರುಗಿದ್ದಾರೆ.

    ಸೂರಪ್ಪ ಹೇಳಿದ್ದೇನು?
    ನಾವು ಏಳು ಜನರು ಇನ್ನೋವಾ ಕಾರಿನಲ್ಲಿ ದೇವಸ್ಥಾನಕ್ಕೆಂದು ಹೊರಟ್ಟಿದ್ದೆವು. ಆದರೆ ರಸ್ತೆ ಮಧ್ಯೆ ಅಪಘಾತ ಸಂಭವಿಸಿದೆ. ನನಗೆ ಇದೇ ಮೊದಲು ಈ ರೀತಿಯ ಅವಘಡ ಸಂಭವಿಸಿದೆ. ಈ ವೇಳೆ ನನ್ನನ್ನು ಅನೇಕರು ಬಂದು ಗುರುತಿಸಿ ಬೆಂಗಳೂರು ತಲುಪಲು ವ್ಯವಸ್ಥೆ ಮಾಡಿದರು.

    Soorappa Babu

    ನಾನು ಮುಂದಿನ ಸೀಟಿನಲ್ಲಿ ಕುಳಿತಿದ್ದೆ. ಅದಕ್ಕೆ ನನಗೆ ತೀವ್ರ ಕಾಲು ನೋವು ಕಾಣಿಸಿಕೊಂಡಿತು. ಹೀಗಾಗಿ ವೈದ್ಯರು ಚಿಕಿತ್ಸೆ ಕೊಟ್ಟಿದ್ದಾರೆ. ಪ್ರಸ್ತುತ ನನ್ನ ಕಾಲಿಗೆ ಬ್ಯಾಂಡೇಜ್ ಹಾಕಲಾಗಿದ್ದು, ಈಗ ಆರಾಮಾಗಿದ್ದೇನೆ. ಸ್ವಲ್ಪ ದಿನ ರೆಸ್ಟ್ ಮಾಡಿ ಎಂದು ವೈದ್ಯರು ಸೂಚಿಸಿದ್ದಾರೆ. ಇದನ್ನೂ ಓದಿ:  ಪಾಕ್ ವ್ಯಕ್ತಿ ಭೇಟಿಯಾಗಲು ತೆರಳುತ್ತಿದ್ದ ಯುವತಿಯನ್ನು ಗಡಿಯಲ್ಲಿ ತಡೆದ ಪೊಲೀಸರು – ಲುಕ್‍ಔಟ್ ನೋಟಿಸ್ ಜಾರಿ

    soorappa babu

    ಕನ್ನಡ ಚಿತ್ರರಂಗದಲ್ಲಿ ವಿತರಕರಾಗಿ ಹಾಗೂ ನಿರ್ಮಾಪಕರಾಗಿ ತೊಡಗಿಸಿಕೊಂಡಿರುವ ಸೂರಪ್ಪ ಬಾಬು ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪೃಥ್ವಿ, ರವಿಚಂದ್ರನ್ ಅಭಿನಯದ ದಶಮುಖ ಹಾಗೂ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-2, ಕೋಟಿಗೊಬ್ಬ-3 ಸಿನಿಮಾಗಳನ್ನು ಸೂರಪ್ಪ ಬಾಬು ನಿರ್ಮಿಸಿದ್ದರು.

    Live Tv

  • ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಕೋಟಿಗೊಬ್ಬ3 ಭರ್ಜರಿ ಕಲೆಕ್ಷನ್‌

    ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಕೋಟಿಗೊಬ್ಬ3 ಭರ್ಜರಿ ಕಲೆಕ್ಷನ್‌

    ಬೆಂಗಳೂರು: ಸುದೀಪ್‌, ಆಶಿಕಾ ರಂಗನಾಥ್‌ ಅಭಿನಯದ ಕೋಟಿಗೊಬ್ಬ 3 ಬಿಡುಗಡೆಯಾದ ನಾಲ್ಕು ದಿನದಲ್ಲಿ 40.5 ಕೋಟಿ ರೂ. ಕಲೆಕ್ಷನ್‌ ಮಾಡಿದೆ.

    ಸ್ವತ: ಸುದೀಪ್‌ ಅವರೇ ಈ ಸಿಹಿಸುದ್ದಿಯನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಚೀಯರ್ಸ್‌ ಟೀಂ ಕೆ3 ಎಂದು ಬರೆದು ಸಂತಸ ಹಂಚಿಕೊಂಡಿದ್ದಾರೆ.

    ಒಂದು ದಿನ ತಡವಾಗಿ ರಿಲೀಸ್‌ ಆದರೂ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

    ಅ.14 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಚಿತ್ರ ಬಿಡುಗಡೆ ರದ್ದಾಗಿತ್ತು. ಇದರಿಂದಾಗಿ ನಮಗೆ 7-8 ಕೋಟಿ ನಷ್ಟವಾಗಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ಆಕ್ರೋಶ ವ್ಯಕ್ತಪಡಿಸಿದ್ದರು. ಕೋವಿಡ್‌ 19 ಬಳಿಕ ಜನರು ಥಿಯೇಟರ್‌ ಕಡೆ ಬರುತ್ತಿರುವುದು ಸ್ಯಾಂಡಲ್‌ವುಡ್‌ ಮಂದಿಗೆ ಸಂತಸ ನೀಡಿದೆ. ಇದನ್ನೂ ಓದಿ: ಸುದೀಪ್ ದಂಪತಿಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ – ಅಪ್ಪ, ಅಮ್ಮನಿಗೆ ಸಾನ್ವಿ ಹೇಳಿದ್ದೇನು?

    ಪಬ್ಲಿಕ್‌ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದ ಸುದೀಪ್‌, 25 ವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದು ಏನು ಮಾಡಿದ್ರಿ ಎಂದು ಕೇಳಿದರೆ ಜನರ ಪ್ರೀತಿ ಸಂಪಾದಿಸಿದ್ದೇನೆ ಅಂತ ಹೇಳಬಹುದು. ಸಿನಿಮಾ ಎಲ್ಲರಿಗೂ ಬೇಕು. ಊಟದಲ್ಲಿ ಕೂದಲು ಬಿದ್ದಿರುತ್ತೆ. ಆದರೆ ಆ ಕೂದಲನ್ನು ಬದಿಗಿರಿಸಿ ನಾವು ಊಟ ತಿನ್ನಬೇಕೇ ಹೊರತು ಊಟವನ್ನು ಎಸೆಯಬಾರದು ಎಂದು ಹೇಳಿದ್ದರು.

  • ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪಬಾಬು ವಿರುದ್ಧ FIR

    ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪಬಾಬು ವಿರುದ್ಧ FIR

    ಚಿತ್ರದುರ್ಗ: ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪಬಾಬು ವಿರುದ್ಧ ಚಿತ್ರದುರ್ಗ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

    khajapeer

    ಚಿತ್ರದುರ್ಗದ ಫಿಲಂ ವಿತರಕ ಖಾಜಾಪೀರ್ ಹಾಗೂ ನಿರ್ಮಾಪಕ ಸೂರಪ್ಪ ನಡುವೆ ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕೋಟಿಗೊಬ್ಬ-3 ಚಿತ್ರ ವಿತರಣೆ ವಿಚಾರವಾಗಿ 2 ಕೋಟಿ 90 ಲಕ್ಷ ರೂಪಾಯಿಗಳಿಗೆ ಒಪ್ಪಂದವಾಗಿತ್ತು.  ಇದನ್ನೂ ಓದಿ: ನನ್ನ ಜೀವಕ್ಕೆ ಹಾನಿಯಾದ್ರೆ ನಿರ್ಮಾಪಕ ಸೂರಪ್ಪಬಾಬು ಹೊಣೆ: ಖಾಜಾಪೀರ್

    soorappa babu

    ಅದರಂತೆ 60 ಲಕ್ಷ ರೂಪಾಯಿ ಹಣವನ್ನು ಮುಂಗಡವಾಗಿ ಪಡೆದಿದ್ದಾರೆ. ಆದರೆ ಆ ಅಗ್ರಿಮೆಂಟ್‍ನಂತೆ ನಡೆದುಕೊಳ್ಳದ ಸೂರಪ್ಪಬಾಬು, ಬೇರೆಯವರಿಗೆ ಚಿತ್ರವನ್ನು ನೀಡಿದ್ದಾರೆ. ಹೀಗಾಗಿ ನಮ್ಮ ಹಣ ನೀಡುವಂತೆ ಕೇಳಿದರೆ ವಾಪಾಸ್ ಕೊಡದೇ ದೌರ್ಜನ್ಯದಿಂದ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ನಟ ಸುದೀಪ್ ಅವರ ಅಭಿಮಾನಿಗಳನ್ನು ನನ್ನ ವಿರುದ್ಧ ಎತ್ತಿಕಟ್ಟಿ ದಮ್ಕಿ ಹಾಕುತ್ತಿದ್ದಾರೆ. ಅಲ್ಲದೇ ಪ್ರಾಣಬೆದರಿಕೆ ಹಾಕಿದ್ದಾರೆ. ಹೀಗಾಗಿ ನಾನು ಚಿತ್ರದುರ್ಗ ನಗರ ಠಾಣೆಗೆ ದೂರು ನೀಡಿದ್ದೂ, ನ್ಯಾಯ ಒದಗಿಸುವಂತೆ ಕೋರಿದ್ದೇನೆಂದು ಖಾಜಾಪೀರ್ ತಿಳಿಸಿದ್ದಾರೆ. ಇದನ್ನೂ ಓದಿ: ಅಂದು ನನ್ನ ನಂಬಿ ಸಿನಿಮಾ ಮಂದಿರಕ್ಕೆ ಬಂದವ್ರಲ್ಲಿ ಕ್ಷಮೆ ಕೇಳುತ್ತೇನೆ: ಸುದೀಪ್

    ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಎಂ.ಬಿ.ಬಾಬು ವಿರುದ್ಧ ಜೀವ ಬೆದರಿಕೆ ಆರೋಪ ಕೇಳಿಬಂದಿದ್ದು, ಖಾಜಾಪೀರ್ ನೀಡಿರುವ ದೂರಿನ ಮೇರೆಗೆ ನಿರ್ಮಾಪಕ ಸೂರಪ್ಪಬಾಬು ವಿರುದ್ಧ ಚಿತ್ರದುರ್ಗ ನಗರ ಠಾಣೆಯಲ್ಲಿ ಐಪಿಸಿ ಕಲಂ 506 ಹಾಗೂ 504 ಅಡಿ ಎಫ್‍ಐಆರ್ ದಾಖಲಾಗಿದೆ. ಈ ವೇಳೆ ಖಾಜಾಪೀರ್ ಅವರೊಂದಿಗೆ ಕುಮಾರ್ ಫಿಲ್ಮಂ ನಿರ್ಮಾಪಕ ಕುಮಾರ್ ಇದ್ದರು.

  • ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

    ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಅಕ್ಟೋಬರ್ 14ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೆಲವು ವಿತಕರು ಹಣ ನೀಡದೇ, ನನ್ನ ಹಾಗೂ ಸುದೀಪ್ ಅವರ ಹೆಸರಿಗೆ ಅಪಖ್ಯಾತಿ ತರಲು ಸಂಚು ರೂಪಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಚಿಂತನೆ ನಡೆಸಲಾಗಿದೆ ಎಂದು ನಿರ್ಮಾಪಕ ಸೂರಪ್ಪ ಬಾಬು ತಿಳಿಸಿದ್ದಾರೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಸೂರಪ್ಪ ಬಾಬು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನಮ್ಮ ಸಂಸ್ಥೆಯಿಂದ ನಿರ್ಮಾಣಗೊಂಡ ಕೋಟಿಗೊಬ್ಬ 3 ಚಿತ್ರದ ಬಿಡುಗಡೆ, ಇದೇ ಅಕ್ಟೋಬರ್ 14 ರಂದು ಕರ್ನಾಟಕ ರಾಜ್ಯಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ ನಮ್ಮ ಸಿನಿಮಾ ವಿತರಣೆ ಹಕ್ಕನ್ನು ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ ವಿತರಣೆ ಪಡೆದ ಮೆಹಲ್ ಫಿಲ್ಮ್ಸ್ ಮಾಲೀಕರಾದ ಗೌತಮ್ ಚಂದ್ ರವರು ಮತ್ತು ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ವಿತರಕರಾದ ಒ.ಆ ಖಾಜಾಪೀರ್ ಮತ್ತು ಕುಮಾರ್ ಫಿಲ್ಮ್ಸ್ ಮಾಲೀಕರಾದ ಕುಮಾರ್ ಅವರು ಮಾಡಿಕೊಂಡ ಕರಾರಿನ ಒಪ್ಪಂದದಂತೆ ಮುಂಗಡ ಹಣವಾಗಿ ಕೇವಲ 15% ಮಾತ್ರ ಪಡೆದು, ಚಿತ್ರ ಬಿಡುಗಡೆಯ ಒಂದು ದಿನ ಮೊದಲು ಅಂದರೆ 2021ರ ಅಕ್ಟೋಬರ್ 13ರಂದು ಚಿತ್ರದ ನಿರ್ಮಾಪಕರಿಗೆ ಬಾಕಿ ಹಣ ನೀಡಬೇಕೆಂದು ಒಪ್ಪಂದವಾಗಿರುತ್ತದೆ. ಇದನ್ನೂ ಓದಿ: ಸ್ಯಾಂಡಲ್‍ವುಡ್‍ನವರಿಂದಲೇ ಕೋಟಿಗೊಬ್ಬನ ಓಟಕ್ಕೆ ತಡೆ – ಜಾಕ್ ಮಂಜು ಆರೋಪ

    ಈ ಮೇಲೆ ತಿಳಿಸಿರುವ ಇಬ್ಬರು ವಿತರಕರು ಕಟ್ಟ ಕಡೆಯ ಸಮಯದಲ್ಲಿ ನಮಗೆ ಕೊಡಬೇಕಾದ ಹಣವನ್ನು ತಂದು ಕೊಡದೇ ನಮಗೆ ನಮ್ಮ ಕರೆಗಳಿಗೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸದೇ ನಮ್ಮ ಚಿತ್ರ ಅಂದುಕೊಂಡ ದಿನದಂದು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಕೋಟಿಗೊಬ್ಬ 3 ಅಬ್ಬರ – 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್

    soorappa babu

    ಇವರ ಈ ತಪ್ಪಿನಿಂದ ನಾವು ಒಂದು ದಿನದ ನಂತರ ಸಾಕಷ್ಟು ಕಷ್ಟದಲ್ಲಿ ಬಿಡುಗಡೆ ಮಾಡಬೇಕಾಯಿತು. ಹಾಗಾಗಿ ಈ ಮೇಲೆ ತಿಳಿಸಿದ ವಿತರಕರ ತಪ್ಪಿನಿಂದ ನಮ್ಮ ಸಂಸ್ಥೆಗೆ ಸರಿ ಸುಮಾರು 8 ರಿಂದ 10 ಕೋಟಿ ನಷ್ಟವಾಗಿದೆ ಹಾಗೂ ನಮ್ಮ ಸಂಸ್ಥೆಗೂ ಈ ವಿತರಕರಿಗೂ ಆದ ಕರಾರಿನ ಪ್ರಕಾರ ಹಣ ನೀಡದೇ ನಮಗೆ ವಂಚನೆ ಎಸಗಿದ್ದು, ನಮಗೆ ಬಹಳಷ್ಟು ಆರ್ಥಿಕ ನಷ್ಟ ಉಂಟು ಮಾಡಿರುತ್ತಾರೆ. ನನ್ನ ಮತ್ತು ನಮ್ಮ ನಾಯಕ ನಟರಿಗೆ ಅಪಖ್ಯಾತಿ ತರಲು ಸಂಚು ಮಾಡಿರುತ್ತಾರೆ. ಅದಕ್ಕಾಗಿ ಮಾನನಷ್ಟ ಮೊಕದ್ದಮೆ ಸೇರಿದಂತೆ ಯಾವ ರೀತಿಯ ಕಾನೂನು ಕ್ರಮ ಜರುಗಿಸಬೇಕೆಂದು ನಮ್ಮ ಕಾನೂನು ಸಲಹೆಗಾರರ ಸಂಪರ್ಕದಲ್ಲಿದ್ದೇವೆ. ಆದಷ್ಟು ಬೇಗ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.

  • ನಾಳೆ ಕೋಟಿಗೊಬ್ಬ-3 ಸಿನಿಮಾ ರಿಲೀಸ್

    ನಾಳೆ ಕೋಟಿಗೊಬ್ಬ-3 ಸಿನಿಮಾ ರಿಲೀಸ್

    ಬೆಂಗಳೂರು: ಕಾರಣಾಂತರಗಳಿಂದ ರದ್ದುಗೊಳಿಸಲಾಗಿದ್ದ ಕಿಚ್ಚ ಸುದಿಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ.

    2 ವರ್ಷಗಳ ನಂತರ ಸ್ಕ್ರೀನ್ ಮೇಲೆ ಕಿಚ್ಚನನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದ್ದು, ಹಲವಾರು ಚಿತ್ರಮಂದಿರ ಬಳಿ ಜಮಾಯಿಸಿದ್ದ ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಆಗದೇ ಗಲಾಟೆ ಮಾಡಲು ಶುರುಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಕಿಚ್ಚ ಟ್ವೀಟ್ ಮಾಡುವ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.  ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

    ಈ ವಿಚಾರವಾಗಿ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಕೋಟಿಗೊಬ್ಬ-3 ವೀಕ್ಷಿಸಲು ಚಿತ್ರಮಂದಿರಗಳಿಗೆ ಬಂದಿರುವವರಿಗೆ, ಬರುತ್ತಿರುವವರಿಗೆ, ಚಿತ್ರದ ಪ್ರದರ್ಶನ ತಡವಾಗುತ್ತಿರುವ ಬಗ್ಗೆ ತಿಳಿಸಲು ವಿಷಾದಿಸುತ್ತೇನೆ. ಈ ಸಮಸ್ಯೆಗೆ ಕಾರಣಕರ್ತರಾದವರ ಪರವಾಗಿ ನಾನು ವೈಯಕ್ತಿಕವಾಗಿ ಕ್ಷಮೆ ಯಾಚಿಸುತ್ತೇನೆ. ಇದರಲ್ಲಿ ಚಿತ್ರಮಂದಿರಗಳಿಂದ ಯಾವುದೇ ರೀತಿಯ ತಪ್ಪು ನಡೆದಿಲ್ಲ. ನಾನೂ ಕೂಡ ನನ್ನ ಚಿತ್ರವೊಂದು ಎರಡು ವರ್ಷಗಳ ನಂತರ ಬಿಡುಗಡೆ ಆಗುತ್ತಿರುವ ಬಗ್ಗೆ ನಿಮ್ಮಷ್ಟೇ ಉತ್ಸುಕನಾಗಿದ್ದೆ. ನಿಮ್ಮೆಲ್ಲರ ಪ್ರೀತಿ ಹಾಗೂ ತಾಳ್ಮೆಯೇ ನನ್ನ ಅತಿ ದೊಡ್ಡ ಶಕ್ತಿ. ಆದಷ್ಟು ಬೇಗ ಚಿತ್ರದ ಪ್ರದರ್ಶನದ ಬಗ್ಗೆ ಮಾಹಿತಿ ಕೊಡುತ್ತೇನೆ ಹಾಗೂ ಮುಂದಿನ ನನ್ನ ಚಿತ್ರಗಳಿಗೆ ಹೀಗಾಗದ ಹಾಗೇ ನೋಡಿಕೊಳ್ಳುತ್ತೇನೆ. ಅಲ್ಲಿಯವರೆಗೂ ಯಾವುದೇ ರೀತಿಯ ಹಾನಿಗೆ ಕಾರಣರಾಗದೆ, ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕಿಚ್ಚನ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಕ್ಷಮೆ

    ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಕಿಚ್ಚ ಧೈರ್ಯ ತುಂಬಿದ್ದು, ಈ ಸಂಬಂಧ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಬಾಬು ಅವರು ಅಪ್ಲೋಡ್ ಮಾಡಿದ ವೀಡಿಯೋ ನಾನು ನೋಡಿದೆ. ನೀವೊಬ್ಬರೇ ಅಲ್ಲ ನಿಮ್ಮ ಜೊತೆ ನಾವಿದ್ದೇವೆ. ಯಾರಿಂದ ತೊಂದರೆ ಆಗಿದೆ, ಯಾರು ಮಾಡಿದ್ದಾರೆ ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಕಾಲವೇ ಉತ್ತರ ಕೊಡುತ್ತದೆ. ನಾಳೆಯಿಂದ ಪ್ರದರ್ಶನ ಕಾಣುತ್ತದೆ. ಭರ್ಜರಿಯಾಗಿ ಹೋಗುತ್ತದೆ ಅನ್ನೋದ್ರಲ್ಲಿ ಅನುಮಾನ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ನಿಮ್ಮ ಜೊತೆ ನಾವಿದ್ದೇವೆ – ಸೂರಪ್ಪ ಬಾಬುಗೆ ಧೈರ್ಯ ತುಂಬಿದ ಕಿಚ್ಚ

    ರಾಜ್ಯಾದ್ಯಂತ ಇಂದು 300 ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ- 3 ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಶೋ ರದ್ದಾಗಿದ್ದು, ರಾಜ್ಯಾದ್ಯಂತ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ತಮ್ಮ ನೆಚ್ಚಿನ ನಟನ ಚಿತ್ರಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.

  • ನಿಮ್ಮ ಜೊತೆ ನಾವಿದ್ದೇವೆ – ಸೂರಪ್ಪ ಬಾಬುಗೆ ಧೈರ್ಯ ತುಂಬಿದ ಕಿಚ್ಚ

    ನಿಮ್ಮ ಜೊತೆ ನಾವಿದ್ದೇವೆ – ಸೂರಪ್ಪ ಬಾಬುಗೆ ಧೈರ್ಯ ತುಂಬಿದ ಕಿಚ್ಚ

    – ಯಾರು ಮಾಡಿದ್ದಾರೆ ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ

    ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆ ಚಿತ್ರ ಕೋಟಿಗೊಬ್ಬ-3 ವಿಳಂಬಕ್ಕೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಕಿಚ್ಚ ಧೈರ್ಯ ತುಂಬಿದ್ದಾರೆ.

    ಈ ಸಂಬಂಧ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಕಿಚ್ಚ, ಬಾಬು ಅವರು ಅಪ್ಲೋಡ್ ಮಾಡಿದ ವೀಡಿಯೋ ನಾನು ನೋಡಿದೆ. ನೀವೊಬ್ಬರೇ ಅಲ್ಲ ನಿಮ್ಮ ಜೊತೆ ನಾವಿದ್ದೇವೆ. ಯಾರಿಂದ ತೊಂದರೆ ಆಗಿದೆ, ಯಾರು ಮಾಡಿದ್ದಾರೆ ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಕಾಲವೇ ಉತ್ತರ ಕೊಡುತ್ತದೆ. ನಾಳೆಯಿಂದ ಪ್ರದರ್ಶನ ಕಾಣುತ್ತದೆ. ಭರ್ಜರಿಯಾಗಿ ಹೋಗುತ್ತದೆ ಅನ್ನೋದ್ರಲ್ಲಿ ಅನುಮಾನ ಇಲ್ಲ ಎಂದಿದ್ದಾರೆ.

    ಅಲ್ಲದೆ ಸ್ನೇಹಿತರಲ್ಲಿ ಕೇಳಿಕೊಳ್ಳುವುದುಬ ಇಷ್ಟೇ, ಯಾವುದೇ ಚಿತ್ರಮಂದಿರಗಳಿಗೆ ಡೈಮೇಜ್ ಮಾಡಬೇಡಿ. ನನಗೆ ನೀವು ತೋರಿಸುತ್ತಿರುವ ಪ್ರೀತಿ ತಿಳಿದಿದೆ. ಆದರೆ ಚಿತ್ರಮಂದಿರಗಳದ್ದು ತಪ್ಪಿಲ್ಲ. ನಾಳೆಯಿಂದ ಒಳ್ಳೆಯ ರೀತಿಯ ಪ್ರದರ್ಶನವನ್ನ 6 ಗಂಟೆಯಿಂದ ನೋಡ್ತೀರಿ ನೀವೆಲ್ಲ. ಎಲ್ಲರಿಗೂ ಧನ್ಯವಾದ. ಇವತ್ತು ಆಗಿರುವ ಈ ವಿಳಂಬಕ್ಕೆ ಕ್ಷಮೆ ಇರಲಿ ಎಂದು ವೀಡಿಯೋದಲ್ಲಿ ಅಭಿಮಾನಿಗಳಿಗೆ ಹಾಗೂ ಸಿನಿಮಾ ಟೀಮ್ ಗೆ ಕಿಚ್ಚ ಸುದೀಪ್ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಿಚ್ಚನ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಕ್ಷಮೆ

    ರಾಜ್ಯಾದ್ಯಂತ ಇಂದು ಸುಮಾರು 300 ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ-3 ರಿಲೀಸ್ ಆಗಬೇಕಿತ್ತು. ಅದಕ್ಕಾಗಿ ಕಿಚ್ಚನ ಅಭಿಮಾನಿಗಳು ಕೂಡ ಸಜ್ಜಾಗಿದ್ದರು. ಆದರೆ ಈ ಮಧ್ಯೆ ಸಿನಿಮಾ ರಿಲೀಸ್ ವಿಳಂಬವಾಗಿದ್ದು, ಇದು ಕಿಚ್ಚನ ಅಭಿಮಾನಿಗಳಿಗೆ ಆಕ್ರೋಸ ಹೊರಹಾಕುವಂತೆ ಮಾಡಿದೆ. ಈ ಸಂಬಂಧ ಸೂರಪ್ಪ ಬಾಬು ಹಾಗೂ ಕಿಚ್ಚ ಸುದೀಪ್ ಕೂಡ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ