Tag: ಸೂರತ್

  • ಪತ್ನಿಯನ್ನು ಕೊಂದು 11 ಪೀಸ್ ಮಾಡಿ ಬೇರೆ ಬೇರೆ ಕಡೆ ಹೂಳುವಾಗ ಸಿಕ್ಕಿಬಿದ್ದ!

    ಪತ್ನಿಯನ್ನು ಕೊಂದು 11 ಪೀಸ್ ಮಾಡಿ ಬೇರೆ ಬೇರೆ ಕಡೆ ಹೂಳುವಾಗ ಸಿಕ್ಕಿಬಿದ್ದ!

    ಸೂರತ್: ಪತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಬಳಿಕ ಆಕೆಯನ್ನು ದೇಹವನ್ನು 11 ಪೀಸ್ ಗಳನ್ನಾಗಿ ಮಾಡಿ ನಗರದ ಬೇರೆ ಬೇರೆ ಕಡೆಗಳಲ್ಲಿ ಹೂಳುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆಯೊಂದು ಇಂದು ಬೆಳಕಿಗೆ ಬಂದಿದೆ.

    ಈ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದ್ದು, ಮೃತ ದುರ್ದೈವಿ ಮಹಿಳೆಯನ್ನು ಝುಲೇಕಾ ಎಂದು ಗುರುತಿಸಲಾಗಿದೆ. ಈಕೆ ಆರೋಪಿ ಶಹನವಾಜ್ ಶೇಖ್ ನ ಎರಡನೇ ಪತ್ನಿಯಾಗಿದ್ದಾರೆ.

    ಘಟನೆ ವಿವರ: ಶಹನವಾಜ್ ಗೆ ತನ್ನ ಎರಡನೇ ಪತ್ನಿಯಾಗಿರೋ ಝುಲೇಖಾ ಜೊತೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಜಗಳ ತಾರಕಕ್ಕೇರಿದ್ದರಿಂದ ಸಿಟ್ಟುಗೊಂಡ ಪತಿ ಆಕೆಯನ್ನು ಕೊಲೆಗೈದು 11 ಪೀಸ್ ಗಳನ್ನಾಗಿ ಮಾಡಿ ನಗರದ ಬೇರೆ ಬೇರೆ ಕಡೆಗಳಲ್ಲಿ ಹೂತು ಹಾಕುತ್ತಿದ್ದನು. ಇದನ್ನು ನೋಡಿದ ಪೇದೆಯೊಬ್ಬರು ಸ್ಥಳಕ್ಕೆ ತೆರಳಿದ್ದಾರೆ. ಆತನನ್ನು ಪ್ರಶ್ನಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಶಹನವಾಜ್ ಮೊದಲು ಪತ್ನಿ ಕೂಡ ಇವರ ಜೊತೆಗೆ ವಾಸಿಸುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡನೇ ಪತ್ನಿ ಝುಲೇಕಾ ಕ್ಯಾತೆ ತೆಗೆದಿದ್ದಾರೆ. ಹೀಗಾಗಿ ಸಿಟ್ಟಿಗೆದ್ದ ಶಹನವಾಜ್ ತನ್ನ ಎರಡನೇ ಪತ್ನಿಯನ್ನು ಪೀಸ್ ಪೀಸ್ ಮಾಡಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

  • ಅಮೆರಿಕದ ನದಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ಮೂವರ ಶವಪತ್ತೆ

    ಅಮೆರಿಕದ ನದಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ಮೂವರ ಶವಪತ್ತೆ

    ವಾಷಿಂಗ್ಟನ್: ಅಮೆರಿಕದ ಈಲ್ ನದಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ಕುಟುಂಬದ 4 ಸದಸ್ಯರಲ್ಲಿ ಮೂವರು ಪತ್ತೆಯಾಗಿದ್ದಾರೆ.

    ಗುಜರಾತ್ ನ ಸೂರತ್ ಮೂಲದವರಾದ ಸಂದೀಪ್, ಪತ್ನಿ ಸೌಮ್ಯ ಹಾಗೂ ಇಬ್ಬರು ಮಕ್ಕಳು ಈಲ್ ನದಿ ಬಳಿ ಏಪ್ರಿಲ್ 8 ರಂದು ಕಾಣೆಯಾಗಿದ್ದರು. ಕಳೆದ ವಾರ ಸ್ಯಾನ್ ಜೋಸ್ ನಲ್ಲಿರುವ ಕುಟುಂಬ ಸದಸ್ಯರನ್ನು ಭೇಟಿಯಾಗಲು ಸಂದೀಪ್ ಕುಟುಂಬ 2016ರ ಮಾಡೆಲ್ ಕಡುಕೆಂಪು ಬಣ್ಣದ ಹೋಂಡಾ ಪೈಲಟ್ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು.

    ಏಪ್ರಿಲ್ 8 ರಂದು ಸ್ಯಾನ್ ಜೋಸ್ ನಲ್ಲಿ ಕುಟುಂಬ ಸದಸ್ಯರನ್ನು ಭೇಟಿ ಮಾಡಬೇಕಿದ್ದ ಸಂದೀಪ್ ಭೇಟಿ ಮಾಡಿರಲಿಲ್ಲ. ಒರೆಗಾನ್ ನಿಂದ ಕ್ಯಾಲಿಫೋರ್ನಿಯ ಗೆ ಪ್ರಯಾಣ ಮಾಡುತ್ತಿದ್ದ ವೇಳೆ ಕುಟುಂಬ ಕಾಣೆಯಾದ ಬಗ್ಗೆ ವರದಿಯಾಗಿತ್ತು. ಕ್ಲಾಮತ್ ರೆಡ್ವುಡ್ ರಾಷ್ಟ್ರೀಯ ಉದ್ಯಾನವನದಲ್ಲಿ ಕುಟುಂಬ ಕೊನೆಯದಾಗಿ ಫೋಟೋ ತೆಗೆದಿತ್ತು ಎಂದು ಸಂದೀಪ್ ಸ್ನೇಹಿತರು ಮತ್ತು ಕುಟುಂಬದವರು ತಿಳಿಸಿದ್ದಾರೆ.

    70 ಜನರ ತನಿಖಾ ತಂಡ ಘಟನೆ ನಡೆದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದೆ. ಅದರಲ್ಲಿ 20 ಜನರ ತಂಡ ನದಿಯಲ್ಲಿ ಹುಡುಕಾಟ ನಡೆಸಿದೆ. ಅಪಘಾತ ವರದಿಯಾದ ಒಂದು ಕಿಮೀ ಅಂತರದಲ್ಲಿ ಪಟ್ರೋಲ್ ವಾಸನೆ ಸಿಕ್ಕ ತಂಡ ಕಾರನ್ನು ಪತ್ತೆಹಚ್ಚಿದೆ. ಕಾರು ಕೆಸರಿನಲ್ಲಿ ಹೂತು ಹೋಗಿತ್ತು. ಟ್ರಕ್ ಸಹಾಯದಿಂದ ಇಬ್ಬರ ದೇಹವನ್ನು ಹೊರ ತೆಗೆಯಲಾಗಿದೆ.

    41 ವರ್ಷದ ಸಂದೀಪ್ ತೊಟ್ಟಪಿಲ್ಲಿ ಮತ್ತು ಅವರ 9 ವರ್ಷದ ಮಗಳು ಸಾಚಿ ಈಲ್ ನದಿಯಲ್ಲಿ ಕಾರಿನ ಒಳಗೆ ಸಿಲುಕಿದ್ದರು. 38 ವರ್ಷದ ಸೌಮ್ಯ ಅವರ ದೇಹವನ್ನು ಶುಕ್ರವಾರ ತನಿಖಾ ತಂಡ ಪತ್ತೆ ಹಚ್ಚಿದೆ. 12 ವರ್ಷದ ಸಿದ್ಧಾಂತನ ಮೃತದೇಹಕ್ಕಾಗಿ ಹುಡುಕಾಟ ನಡೆದಿದೆ.

    ಕುಟುಂಬದ ನಾಲ್ಕು ಸದಸ್ಯರಲ್ಲಿ ಮೂರು ಮಂದಿಯನ್ನು ಪತ್ತೆ ಹಚ್ಚುವಲ್ಲಿ ತನಿಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಾಣೆಯಾದ ದಿನವೇ 5 ರಿಂದ 13 ಸೆಂಟಿ ಮೀಟರ್ ಮಳೆಯಾಗಿರುವ ವರದಿಯಾಗಿದೆ.

    ಯೂನಿಯನ್ ಬ್ಯಾಂಕ್ ಉಪಾಧ್ಯಕ್ಷರಾಗಿದ್ದ ಸಂದೀಪ್ ಲಾಸ್ ಏಂಜಲೀಸ್ ನಲ್ಲಿ ವಾಸವಿದ್ದರು. ಸುಮಾರು 15 ವರ್ಷಗಳಿಂದ ಅಮೆರಿಕದಲ್ಲಿ ವಾಸವಿದ್ದಾರೆ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.

  • ಬಾಲಕಿಯ ಮೇಲೆ ರೇಪ್: ಗುರುತು ಪತ್ತೆಗೆ ಸಾಮಾಜಿಕ ಜಾಲತಾಣ ಮೊರೆ ಹೋದ ಪೊಲೀಸರು

    ಬಾಲಕಿಯ ಮೇಲೆ ರೇಪ್: ಗುರುತು ಪತ್ತೆಗೆ ಸಾಮಾಜಿಕ ಜಾಲತಾಣ ಮೊರೆ ಹೋದ ಪೊಲೀಸರು

    ಸೂರತ್: ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದ್ದ ಬಾಲಕಿಯ ಮೃತ ಪತ್ತೆಯಾಗಿ 10 ದಿನಗಳು ಕಳೆದರೂ ಆಕೆಯ ಗುರುತು ಪತ್ತೆ ಹಚ್ಚುವಲ್ಲಿ ಸೂರತ್ ಪೊಲೀಸರು ವಿಫಲರಾಗಿದ್ದಾರೆ.

    ಘಟನೆ ಬೆಳಕಿಗೆ ಬಂದು ಹತ್ತು ದಿನಗಳು ಕಳೆದರು ಮಾಹಿತಿ ನೀಡಲು ಯಾರು ಬಾರದ ಕಾರಣ ಸೂರತ್ ಪೊಲೀಸರು ಬಾಲಕಿಯ ಮಾಹಿತಿ ಕಲೆ ಹಾಕಲು ಸಾಮಾಜಿಕ ಜಾಲತಾಣ ಮೊರೆ ಹೋಗಿದ್ದಾರೆ. ದುರ್ಷಮಿಗಳ ಈ ಕೃತ್ಯದ ವಿರುದ್ಧ ಸೂರತ್ ನಗರದಲ್ಲಿ ಸಾವಿರಾರು ಜನರು ಭಾನುವಾರ ಪ್ರತಿಭಟನೆ  ನಡೆಸಿದ್ದರು. ಬಳಿಕ ಸೋಮವಾರ ಬೆಳಗ್ಗೆ ಈ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿತ್ತು.

    ಬಾಲಕಿಯ ಬಗ್ಗೆ ಮಾಹಿತಿ ಪಡೆಯಲು ನೆರೆಯ ರಾಜ್ಯಗಳ ಪೊಲೀಸರ ಸಹಾಯ ಪಡೆಯಲಾಗುತ್ತಿದೆ. ಬಾಲಕಿಯ ಡಿಎನ್‍ಎ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ನಗರ ಪೊಲೀಸ್ ಮುಖ್ಯ ಅಧಿಕಾರಿ ಸತೀಶ್ ಶರ್ಮಾ ತಿಳಿಸಿದ್ದಾರೆ.

    ಬಾಲಕಿಯ ವಿವರಗಳನ್ನು ಪಡೆಯಲು ಈಗಾಗಲೇ ಗುಜರಾತ್ ಹಾಗೂ ನೆರೆಯ ರಾಜ್ಯಗಳ 8 ಸಾವಿರಕ್ಕೂ ಬಾಲಕಿಯರ ನಾಪತ್ತೆ ದೂರುಗಳನ್ನು ಪರಿಶೀಲನೆ ಮಾಡಲಾಗಿದೆ. ಅಲ್ಲದೇ ಘಟನೆ ನಡೆದ ಸ್ಥಳದಿಂದ 1.5 ಕಿಮೀ ದೂರದ ಎಲ್ಲಾ ವಸತಿ ಪ್ರದೇಶ ಪ್ರತಿ ಮನೆ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಬಾಲಕಿ ಕುಟುಂಬ ಬಂಗಾಳ ಅಥವಾ ಒಡಿಸ್ಸಾ ದಿಂದ ನಗರಕ್ಕೆ ವಲಸೆ ಬಂದಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 6 ರಂದು ಬಾಲಕಿಯ ಮೃತ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಬಾಲಕಿಯ ದೇಹದ ಮೇಲೆ 86 ಗಾಯದ ಗುರುತು ಪತ್ತೆಯಾಗಿತ್ತು.

  • ಗುಪ್ತಾಂಗ ಸೇರಿ ದೇಹದಲ್ಲಿ 86 ಗಾಯಗಳನ್ನು ಮಾಡಿ 9ರ ಬಾಲಕಿಯನ್ನು ಕತ್ತು ಹಿಸುಕಿ ಕೊಲೆಗೈದ್ರು!

    ಗುಪ್ತಾಂಗ ಸೇರಿ ದೇಹದಲ್ಲಿ 86 ಗಾಯಗಳನ್ನು ಮಾಡಿ 9ರ ಬಾಲಕಿಯನ್ನು ಕತ್ತು ಹಿಸುಕಿ ಕೊಲೆಗೈದ್ರು!

    ಗಾಂಧಿನಗರ: ಕಥುವಾದಲ್ಲಿ ನಡೆದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿರೋ ಬೆನ್ನಲ್ಲೇ ಇದೀಗ ಸೂರತ್ ನಲ್ಲಿ ಅಂತಹದ್ದೇ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಗುಜರಾತ್ ರಾಜ್ಯದ ಸೂರತ್‍ನ ಭೆಸ್ತಾನ ಪ್ರದೇಶದಲ್ಲಿ ಏಪ್ರಿಲ್ 6ರಂದು 9 ವರ್ಷದ ಬಾಲಕಿಯ ಶವ ಸಿಕ್ಕಿದ್ದು, ಆಕೆಯ ಮೇಲೆ ನಿರಂತರ 5 ದಿನ ಅತ್ಯಾಚಾರ ಮಾಡಿ, 8 ದಿನ ಚಿತ್ರಹಿಂಸೆ ನೀಡಿ, ನಂತರ ಕೊಲೆ ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ.

    ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಸಿದಾಗ, ಆಕೆಯ ಮೇಲೆ ನಿರಂತರವಾಗಿ 5 ದಿನ ಅತ್ಯಾಚಾರ ಮಾಡಿ, ಮರದ ಆಯುಧಗಳಿಂದ ಚುಚ್ಚಿ ಚಿತ್ರ ಹಿಂಸೆ ನೀಡಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಗುಪ್ತಾಂಗ ಸೇರಿದಂತೆ ದೇಹದ ವಿವಿಧ ಭಾಗದಲ್ಲಿ 80 ಗಾಯಗಳಾಗಿವೆ ಎಂದು 5 ಗಂಟೆ ನಡೆಸಲಾದ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

    ಏಳು ದಿನಗಳಿಂದಲೇ ನಿರಂತರವಾಗಿ ಆಕೆಗೆ ಚಿತ್ರಹಿಂಸೆ ನೀಡಿದ್ದು, ದೇಹದ ಹೊರಭಾಗದಲ್ಲಿ ಸುಮಾರು 86 ಗಾಯಗಳಿವೆ ಎಂದು ಸಿವಿಲ್ ಆಸ್ಪತ್ರೆಯ ಫಾರೆನ್ಸಿಸ್ ಮುಖ್ಯಸ್ಥ ಗಣೇಶ ಗೊವೇಕರ್ ತಿಳಿಸಿದ್ದಾರೆ.

    ಆದರೆ, ಮೃತ ಬಾಲಕಿಯ ಕುರಿತಾಗಿದೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • 5 ವರ್ಷದ ಮಗು, ಪತ್ನಿ ಜೊತೆಗೆ 12 ಅಂತಸ್ತಿನ ಕಟ್ಟಡದಿಂದ ಜಿಗಿದು ಉದ್ಯಮಿ ಸಾವು

    5 ವರ್ಷದ ಮಗು, ಪತ್ನಿ ಜೊತೆಗೆ 12 ಅಂತಸ್ತಿನ ಕಟ್ಟಡದಿಂದ ಜಿಗಿದು ಉದ್ಯಮಿ ಸಾವು

    ಸೂರತ್: ಉದ್ಯಮಿಯೊಬ್ಬ ಸಾಲಬಾಧೆ ತಾಳಲಾರದೇ ತನ್ನ ಪತ್ನಿ ಹಾಗೂ ಮಗುವಿನೊಂದಿಗೆ 12 ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ್ದ ಘಟನೆ ಗುಜರಾತ್‍ನ ಸೂರತ್ ನಗರದ ಸರ್ತಾನಾದಲ್ಲಿ ನಡೆದಿದೆ.

    ವಿಜಯ್ ವಘಸಿಯಾ (34), ಪತ್ನಿ ರೇಖಾ (30) ಹಾಘೂ ವಿನಯ್ (5) ಮೃತ ದುದೈವಿಗಳು. ಮೃತರು ಸರ್ತಾನಾದ ಬಿಆರ್ ಟಿಎಸ್‍ನ ಕೆನಲ್ ರಸ್ತೆಯಲ್ಲಿರುವ ಮೆಜಿಸ್ಟಿಕ ಟವರ್ ಬಳಿಯಿರುವ ಅಪಾರ್ಟ್‍ ಮೆಂಟ್‍ವೊಂದರಲ್ಲಿ ವಾಸವಾಗಿದ್ದರು. ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಆರಂಭದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ತನಿಖೆ ವೇಳೆ ಟೆರೇಸ್ ಬಾಗಿಲು ಬೀಗ ಹಾಕಿದ್ದರಿಂದ ಈ ಮೂವರು 12ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.

    ಎಂದಿನಂತೆ ವಿಜಯ್ ತನ್ನ ಅಪಾರ್ಟ್‍ಮೆಂಟ್ ಸ್ನೇಹಿತ ಗೌರವ್ ಜೊತೆ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದಾರೆ. ಗೌರವ್ ಜೊತೆ ಮಾತನಾಡಿಕೊಂಡು ಹೋಗುವಾಗ ನೀರಿನ ಬಾಟಲಿ ತೆಗೆದುಕೊಂಡು ಹೋಗಲು ಮತ್ತೆ ಅಪಾರ್ಟ್‍ಮೆಂಟ್‍ಗೆ ಬಂದಿದ್ದಾರೆ. ಈ ಸಮಯದಲ್ಲೇ ಮೂವರು ಕಟ್ಟಡದ 12ನೇ ಅಂತಸ್ತಿನಿಂದ ಜಿಗಿದಿದ್ದಾರೆ.

     

    ಈ ಘಟನೆ ನಡೆಯುತ್ತಿದ್ದಂತೆ ಗೌರವ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗ ವಿಜಯ್ ಜೇಬಿನಲ್ಲಿ ಡೆತ್‍ನೋಟ್ ಸಿಕ್ಕಿದೆ. ಆ ಡೆತ್‍ನೋಟ್ ವಿಜಯ್ ತನ್ನ ತಮ್ಮನಿಗಾಗಿ ಬರೆದಿದ್ದರು.

    ಡೆತ್‍ನೋಟ್‍ನಲ್ಲಿ ಏನಿದೆ?: ವಿಜಯ್ ಆ ಡೆತ್‍ನೋಟ್‍ನನ್ನು ತನ್ನ ತಮ್ಮನಿಗಾಗಿ ಬರೆದಿದ್ದು, ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ, ನನ್ನ ಬಿಸಿನೆಸ್‍ನನ್ನು ನನ್ನ ತಮ್ಮನೇ ನೋಡಿಕೊಳ್ಳಬೇಕು. ಸಾಲಬಾಧೆ ತಾಳಲಾರದೇ ನಾನು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ವಿಜಯ್ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ.

     

    ಈ ಘಟನೆ ನಡೆದ ನಂತರ ಸೂರತ್ ನಗರ ಪೊಲೀಸ್ ಆಯುಕ್ತ ಸುದ್ದಿಗೋಷ್ಠಿ ನಡೆಸಿ ಯಾರೂ ಈ ರೀತಿ ಮಾಡಿಕೊಳ್ಳದಂತೆ ತಿಳಿಸಿದ್ದಾರೆ. ನಿಮಗೆ ಯಾವುದೇ ಸಮಸ್ಯೆ ಇದ್ದರೆ ‘ಜೀವನ್ ಆಸ್ತಾ’ ಆತ್ಮಹತ್ಯೆ ಸಹಾಯವಾಣಿಗೆ ಸಂಪರ್ಕಿಸಿ ಎಂದು ತಿಳಿಸಿದ್ದಾರೆ.

    ಸದ್ಯ ಪೊಲೀಸರು ಈ ಕೇಸನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಿಜಯ್‍ಗೆ ಹಣ ನೀಡಿದವರು ತೊಂದರೆ ನೀಡಿದ್ದಾರಾ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಆಟವಾಡ್ತಿದ್ದಾಗ ಕುಕ್ಕರ್ ನಲ್ಲಿ ಸಿಲುಕಿತು ಮಗುವಿನ ತಲೆ- ಹೊರತೆಗೆಯಲು ಬೇಕಾಯ್ತು 12 ಗಂಟೆ

    ಆಟವಾಡ್ತಿದ್ದಾಗ ಕುಕ್ಕರ್ ನಲ್ಲಿ ಸಿಲುಕಿತು ಮಗುವಿನ ತಲೆ- ಹೊರತೆಗೆಯಲು ಬೇಕಾಯ್ತು 12 ಗಂಟೆ

    ಸೂರತ್: 2 ವರ್ಷದ ಮಗುವಿನ ತಲೆ ಪ್ರೆಶರ್ ಕುಕ್ಕರ್ ನಲ್ಲಿ ಸಿಲುಕಿದ್ದು, 12 ಗಂಟೆಗಳ ಬಳಿಕ ಮಗುವಿನ ತಲೆಯನ್ನ ಸುರಕ್ಷಿತವಾಗಿ ಹೊರತೆಗೆದ ಘಟನೆ ಗುಜರಾತ್‍ನ ಸೂರತ್‍ನಲ್ಲಿರುವ ಪಂದೇಸಾರಾದಲ್ಲಿ ನಡೆದಿದೆ.

    ಪರಿ(2) ಪ್ರೆಶರ್ ಕುಕ್ಕರ್ ನಲ್ಲಿ ತಲೆ ಸಿಲುಕಿಸಿಕೊಂಡಿದ್ದ ಮಗು. ಪರಿ ಅಡುಗೆಮನೆಯಲ್ಲಿ ಪಾತ್ರೆಗಳ ಜೊತೆ ಆಟವಾಡುತ್ತಿದ್ದ ವೇಳೆ ಅಕಸ್ಮಿಕವಾಗಿ ಆಕೆಯ ತಲೆ ಕುಕ್ಕರ್ ನಲ್ಲಿ ಸಿಲುಕಿಕೊಂಡಿತ್ತು. ಮಗುವಿನ ತಲೆ ಕುಕ್ಕರ್ ನಲ್ಲಿ ಸಿಲುಕಿದ ತಕ್ಷಣ ಜೋರಾಗಿ ಕಿರುಚಿ ಅಳುತ್ತಿದ್ದಳು. ಇದನ್ನು ಕೇಳಿದ ಪರಿ ಪೋಷಕರು ಓಡಿ ಬಂದು ಕುಕ್ಕರ್ ತೆಗೆಯಲು ಪ್ರಯತ್ನಿಸಿದ್ದಾರೆ.

    ಕುಕ್ಕರ್ ತೆಗೆಯುವಲ್ಲಿ ಪರಿ ತಂದೆ ಅಶುತೋಷ್ ವಿಫಲವಾಗಿದ್ದು, ನಂತರ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಕುಕ್ಕರ್ ತೆಗೆಯಲು 4 ಗಂಟೆಗಳ ಕಾಲ ಪ್ರಯತ್ನಿಸಿದ್ದಾರೆ. ಆದರೆ ಅವರಿಂದಲೂ ಮಗುವಿನ ತಲೆಯಿಂದ ಕುಕ್ಕರ್ ತೆಗೆಯಲು ಸಾಧ್ಯವಾಗಲಿಲ್ಲ.

    ಕೊನೆಗೆ ಕಮ್ಮಾರ ಮಾತ್ರ ಈ ಕುಕ್ಕರ್ ತೆಗೆಯಲು ಸಾಧ್ಯ ಎಂದು ವೈದ್ಯರು ಅಶುತೋಷ್‍ಗೆ ತಿಳಿಸಿದ್ದರು. ನಂತರ ಮಗುವಿನ ಪೋಷಕರು ಕಮ್ಮಾರನ ಹತ್ತಿರ ಹೋಗಿದ್ದಾರೆ. ಅಲ್ಲಿ ಕಮ್ಮಾರ ಕುಕ್ಕರ್ ಕಟ್ ಮಾಡಿ ಸಿಲುಕಿಕೊಂಡಿದ ಮಗುವಿನ ತಲೆಯನ್ನು 12 ಗಂಟೆಗಳ ಬಳಿಕ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

  • ಹೊಟ್ಟೆಯ ಮೇಲೆ 49 ಕಲ್ಲಂಗಡಿ ಕತ್ತರಿಸಿಕೊಳ್ಳುವ ಮೂಲಕ ಭಾರತೀಯನಿಂದ ವಿಶ್ವದಾಖಲೆ

    ಹೊಟ್ಟೆಯ ಮೇಲೆ 49 ಕಲ್ಲಂಗಡಿ ಕತ್ತರಿಸಿಕೊಳ್ಳುವ ಮೂಲಕ ಭಾರತೀಯನಿಂದ ವಿಶ್ವದಾಖಲೆ

    ಗಾಂಧಿನಗರ: ಗುಜರಾತಿನ ವ್ಯಕ್ತಿಯೊಬ್ಬರು ಸ್ನೇಹಿತನ ಸಹಾಯದಿಂದ ಹೊಟ್ಟೆಯ ಮೇಲೆ ಒಂದು ನಿಮಿಷದಲ್ಲಿ 49 ಕಲ್ಲಂಗಡಿಯನ್ನು ಕತ್ತರಿಸಿಕೊಳ್ಳುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.

    ವಿಸ್ಪಿ ಜಿಮ್ಮಿ ಖಾರಾಡಿ ತನ್ನ ಮಾರ್ಷಲ್ ಆರ್ಟ್ಸ್ ಸಾಹಸ ಪ್ರದರ್ಶನದಿಂದ ಹೊಸ ಗಿನ್ನಿಸ್ ದಾಖಲೆಯನ್ನು ಸೂರತ್‍ನಲ್ಲಿ ಬರೆದಿದ್ದಾರೆ. ಮಂಗಳವಾರದಂದು ನಡೆದ ಗಿನ್ನಿಸ್ ವಿಶ್ವದಾಖಲೆ ಪ್ರಯತ್ನದಲ್ಲಿ ಜಪಾನಿನ ಹರಿತವಾದ ಖಡ್ಗ ಕಟಾನಾದಿಂದ ತನ್ನ ಸ್ನೇಹಿತ ವಿಸ್ಪಿ ಬಾಜಿ ಕಸಾದ್‍ರ ಸಹಾಯದಿಂದ ಹೊಟ್ಟೆಯ ಮೇಲೆ 49 ಕಲ್ಲಗಂಡಿ ಹಣ್ಣನ್ನು ಕತ್ತರಿಸಿ ಕೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

    ವಿಸ್ಪಿ ಜಿಮ್ಮಿ ಖಾರಾಡಿ ಮತ್ತು ವಿಸ್ಪಿ ಬಾಜಿ ಕಸಾದ್ ಇಬ್ಬರು ಜಮ್ ಟ್ರೈನರ್ ಆಗಿದ್ದು, ಇಬ್ಬರು ಮಾರ್ಷಲ್ ಆರ್ಟ್ಸ್ ನಲ್ಲಿ ನಿಪುಣರು. 1 ನಿಮಿಷದಲ್ಲಿ 51 ಕಲ್ಲಂಗಡಿ ಹಣ್ಣನ್ನು ಕತ್ತರಿಸಿದ್ದರೂ, ನಿಯಮದ ಪ್ರಕಾರ ಎರಡು ಹಣ್ಣನ್ನು ಸರಿಯಾಗಿ ಕತ್ತರಿಸದ ಕಾರಣ ಮತ್ತು ಇನ್ನೊಂದು ಹಣ್ಣು 1 ನಿಮಿಷದ ನಂತರ ಕತ್ತರಿಸಿದ್ದಕ್ಕೆ ಈ ಎರಡು ಪ್ರಯತ್ನವನ್ನು ಪರಿಗಣಿಸಲಿಲ್ಲ.

    ಇಂತಹ ಸಾಹಸ ಮಾಡುವಾಗ ಕೆಲವು ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಇವರ ವಿಷಯದಲ್ಲಿ ಯಾವುದೇ ನೋವು ಮತ್ತು ಗಾಯಗಳಾಗದೇ ಸುಲಭವಾಗಿ ಈ ಸವಾಲನ್ನು ಪೂರ್ಣಗೊಳಿಸಿದ್ದಾರೆ. ಇದನ್ನು ಮಾಡುವ ಮೊದಲು ಸಾಕಷ್ಟು ಅಭ್ಯಾಸ ಮಾಡಿರುವ ಜಿಮ್ಮಿ ಖಾರಾಡಿ ಮತ್ತು ಬಾಜಿ ಕಸಾದ್ ತಮ್ಮ ಬಲವಾದ ಆತ್ಮವಿಶ್ವಾಸದಿಂದ ಇದನ್ನು ಸಾಧಿಸಿದ್ದಾರೆ.

  • ಮೋದಿಯಂತೆ ಭಾಷಣ ಮಾಡಲು ನನಗೆ ಹಲವು ವರ್ಷಗಳು ಬೇಕು: ರಾಹುಲ್ ಗಾಂಧಿ

    ಮೋದಿಯಂತೆ ಭಾಷಣ ಮಾಡಲು ನನಗೆ ಹಲವು ವರ್ಷಗಳು ಬೇಕು: ರಾಹುಲ್ ಗಾಂಧಿ

    ಸೂರತ್: ಪ್ರಧಾನಿ ನರೇಂದ್ರ ಮೋದಿ ಅವರಂತೆ ಭಾಷಣ ಮಾಡಲು ನನಗೆ ಹಲವು ವರ್ಷಗಳು ಬೇಕು. ಆದರೆ ಮೋದಿಗೆ ಭಾಷಣ ಮಾತ್ರ ಬರುತ್ತದೆ ಹೊರತು ಜನರ ಸಮಸ್ಯೆ ಬಗೆಹರಿಸಲು ಬರುವುದಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

    ಸೂರತ್ ನಲ್ಲಿ ನಡೆದ ಉದ್ಯಮ ಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಚೆನ್ನಾಗಿ ಭಾಷಣ ಮಾತ್ರ ಮಾಡುತ್ತಾರೆ. ಆದರೆ ಅವರು ನಿಮ್ಮ ಮಾತುಗಳನ್ನು ಕೇಳುವುದಿಲ್ಲ. ನಾವು ನಿಮ್ಮ ಮಾತುಗಳನ್ನು ಕೇಳಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತೇವೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವ್ಯತ್ಯಾಸ ಎಂದರು.

    ನೀವು ಸಮಸ್ಯೆಗಳನ್ನು ಬರೆದುಕೊಟ್ಟರೆ ಅದಕ್ಕೆ ನಾವು ಗಮನ ನೀಡುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಆ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದರು.

     

  • 21ನೇ ವರ್ಷಕ್ಕೆ ಸಿಎ, ಸಿಎಸ್, ಸಿಎಂಎ ಪೂರ್ಣ! ವಿಶೇಷ ಸಾಧನೆಗೈದ ಯುವಕನ ಕಥೆ ಓದಿ

    21ನೇ ವರ್ಷಕ್ಕೆ ಸಿಎ, ಸಿಎಸ್, ಸಿಎಂಎ ಪೂರ್ಣ! ವಿಶೇಷ ಸಾಧನೆಗೈದ ಯುವಕನ ಕಥೆ ಓದಿ

    ಸೂರತ್: 21 ವರ್ಷದ ಗುಜರಾತ್‍ನ ಸೂರತ್ ನಿವಾಸಿ ಆದಿತ್ಯಾ ಜಾವರ್ ಚಾರ್ಟರ್ಡ್ ಅಕೌಂಟೆಂಟ್ (ಸಿಎ), ಕಂಪನಿ ಸೆಕ್ರೇಟರಿ(ಸಿಎಸ್), ಕಾಸ್ಟ್ ಮತ್ತು ಮ್ಯಾನೇಜ್‍ಮೆಂಟ್ ಅಕೌಂಟೆನ್ಸಿ (ಸಿಎಂಎ) ಪರೀಕ್ಷೆಯನ್ನು ಪಾಸ್ ಮಾಡುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

    ಈ ಮೊದಲು ದೆಹಲಿಯ ಸಾರ್ಥಕ್ ಅಹುಜ ಮತ್ತು ಪಲ್ಲವಿ ಸಚ್‍ದೇವ 23 ವರ್ಷದಲ್ಲಿ ಸಿಎ, ಸಿಎಸ್, ಸಿಎಂಎ ಮುಗಿಸಿದ್ದರು. ಆದರೆ ಈಗ ಸಿಎಂಎ ಅಂತಿಮ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಜಾವರ್ ತೇರ್ಗಡೆಯಾಗುವ ಮೂಲಕ ಹೊಸ ಮೈಲಿಗಲ್ಲನ್ನು ಬರೆದಿದ್ದಾರೆ.

    12ನೇ ತರಗತಿ ಮುಗಿಸಿದ ನಂತರ ಜಾವರ್ ತನ್ನ ಓದಿನ ಜೊತೆಗೆ ಸಿಎ ಓದಲು ಆರಂಭಿಸಿದರು. 15ನೇ ವರ್ಷದಲ್ಲಿ ಸಿಎ ಎಲ್ಲ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ಸಿಎಎಸ್ ಪರೀಕ್ಷೆಯನ್ನು ಕಟ್ಟಿದರು. ನಂತರ ಸಿಎಂಎ ಪರೀಕ್ಷೆ ಬರೆದು ಈಗ ಉತ್ತೀರ್ಣರಾಗಿದ್ದಾರೆ.

    ಜಾವರ್ ಸೂರತ್‍ನ ಚಾರ್ಟರ್ಡ್ ಅಕೌಂಟೆಟ್ ಆಗಿರುವ ರವಿ ಚಾವ್‍ಚರಿಯ ಹತ್ತಿರ ತರಬೇತಿ ಪಡೆದಿದ್ದಾರೆ. ಇಂದಿರಾ ಗಾಂಧಿ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿಯನ್ನು ಓದಿರುವ ಜಾವರ್ ಈಗ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

    ಜಾವರ್‍ನ ತಂದೆ ಮಹೇಶ್ ಜಾವರ್ ಜವಳಿ ವ್ಯಾಪಾರಿ. ಅವರು ಸಹ ಸಿಎ ಎರಡನೇ ಹಂತವನ್ನು ಪೂರ್ಣಗೊಳಿಸಿದ್ದರೂ ಕುಟುಂಬ ವ್ಯವಹಾರದಲ್ಲಿ ತೊಡಗಿರುವುದರಿಂದ ಸಿಎ ಫೈನಲ್ ಪರೀಕ್ಷೆಯನ್ನು ಬರೆದಿರಲಿಲ್ಲ. ಜಾವರ್‍ನ ತಾಯಿ ಕಳೆದ 25 ವರ್ಷಗಳಿಂದ ಶಾಲಾ ಶಿಕ್ಷಕಿಯಾಗಿದ್ದಾರೆ.

     

  • 45 ಲಕ್ಷ ರೂ. ಮೌಲ್ಯದ ವಜ್ರಗಳನ್ನ ಹಿಂದಿರುಗಿಸಿದ ವಾಚ್‍ಮ್ಯಾನ್ ಮಗ

    45 ಲಕ್ಷ ರೂ. ಮೌಲ್ಯದ ವಜ್ರಗಳನ್ನ ಹಿಂದಿರುಗಿಸಿದ ವಾಚ್‍ಮ್ಯಾನ್ ಮಗ

    ಸೂರತ್: 45 ಲಕ್ಷ ರೂ. ಮೌಲ್ಯದ ವಜ್ರಗಳಿದ್ದ ಪೊಟ್ಟಣವನ್ನ ಮಾಲೀಕನಿಗೆ ಹಿಂದಿರುಗಿಸಿದ 15 ವರ್ಷದ ಬಾಲಕ ಹಾಗೂ ವಾಚ್‍ಮ್ಯಾನ್ ಆಗಿ ಕೆಲಸ ಮಾಡೋ ಆತನ ತಂದೆಗೆ ಸೂರತ್ ಡೈಮಂಡ್ ಅಸೋಸಿಯೇಷನ್(ಎಸ್‍ಡಿಎ) ಶನಿವಾರದಂದು ಸನ್ಮಾನ ಮಾಡಿದೆ.

    ಬಾಲಕ ವಿಶಾಲ್ ಉಪಾಧ್ಯಾಯ ಹಾಗೂ ಆತನ ತಂದೆ ಫುಲ್‍ಚಂದ್ ಅವರಿಗೆ ಸನ್ಮಾನ ಮಾಡಲಾಗಿದೆ. ಅಲ್ಲದೆ ವಿಶಾಲ್‍ನ ಪ್ರಾಮಾಣಿಕತೆಗೆ ಬಹುಮಾನವಾಗಿ ಆತನ ಒಂದು ವರ್ಷದ ಶಿಕ್ಷಣದ ಖರ್ಚನ್ನು ಭರಿಸುವುದಾಗಿ ಅಸೋಸಿಯೇಷನ್‍ನ ಮಾಜಿ ಅಧ್ಯಕ್ಷ ದಿನೇಶ್ ನವಾಡಿಯಾ ಹೇಳಿದ್ದಾರೆ.

    ವಜ್ರ ವ್ಯಾಪಾರಿ ಆಗಿರೋ ಮನ್‍ಸುಖ್‍ಭಾಯ್ ಸವಾಲಿಯಾ ಕಳೆದ ಭಾನುವಾರ ಸೇಫ್ ಲಾಕರ್‍ನಿಂದ ವಜ್ರದ ಪ್ಯಾಕೆಟ್‍ಗಳನ್ನ ತೆಗೆದುಕೊಂಡು ಹೋಗ್ತಿದ್ರು. ಈ ವೇಳೆ 45 ಲಕ್ಷ ರೂ. ಮೌಲ್ಯದ ವಜ್ರಗಳಿದ್ದ ಒಂದು ಪ್ಯಾಕೆಟ್ ಕೆಳಗೆ ಬಿದ್ದುಹೋಗಿತ್ತು. ಅಲ್ಲೇ ಹತ್ತಿರದಲ್ಲಿ ಕ್ರಿಕೆಟ್ ಆಡ್ತಿದ್ದ ಬಾಲಕ ವಿಶಾಲ್ ಆ ಪ್ಯಾಕೆಟ್ ನೋಡಿದ್ದು, ಅದನ್ನು ತೆಗೆದುಕೊಂಡು ಮನೆಗೆ ಹೋಗಿ ತನ್ನ ತಂದೆಗೆ ಅದನ್ನು ತೋರಿಸಿದ್ದ ಎಂದು ನವಾಡಿಯಾ ಹೇಳಿದ್ರು.

    ಮರುದಿನ ಸೋಮವಾರ ಹಾಗೂ ಮಂಗಳವಾರ ರಜೆ ಇದ್ದಿದ್ದರಿಂದ ಡೈಮಂಡ್ ಮಾರುಕಟ್ಟೆ ಮುಚ್ಚಲಾಗಿತ್ತು. ಬುಧವಾರ ಅಸೋಸಿಯೇಷನ್ ತೆರೆದ ಕೂಡಲೇ ಫುಲ್‍ಚಂದ್ ವಜ್ರಗಳನ್ನ ಹಿಂದಿರುಗಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

    ಮತ್ತೊಂದು ಕಡೆ ಮನ್‍ಸುಖ್‍ಭಾಯ್ ವಜ್ರಗಳಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದರು. ಆ ಪ್ರದೇಶದ ಸಿಸಿಟಿವಿ ಪರಿಶೀಲಿಸಿ ಏನಾದ್ರೂ ಸುಳಿವು ಸಿಗುತ್ತಾ ಎಂದು ನೋಡಿದ್ದರು. ಆದ್ರೆ ರಜೆಯಿದ್ದ ಕಾರಣ ಸೇಫ್ ಲಾಕರ್‍ನ ಸಿಸಿಟಿವಿ ದೃಶ್ಯಾವಳಿಯನ್ನ ಪರಿಶೀಲಿಸಲು ಸಾಧ್ಯವಾಗಿರಲಿಲ್ಲ.

    ಎಸ್‍ಡಿಎ ಕಚೇರಿ ತೆರೆದ ನಂತರ ಬಾಲಕ ಹಾಗೂ ಆತನ ತಂದೆ ವಜ್ರಗಳನ್ನ ಹಿಂದಿರುಗಿಸಿದ್ದು, ಬಳಿಕ ಅಸೋಸಿಯೇಷನ್‍ನವರು ಇದರ ಮಾಲೀಕನ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಯನ್ನ ಪರಿಶೀಲಿಸಿದ್ದರು. ನಂತರ ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಬ್ರೋಕರ್ ಸಂಪರ್ಕ ಮಾಡಿ ಅವರು ಕಳೆದುಕೊಂಡಿದ್ದ ವಜ್ರಗಳನ್ನ ಹಿಂದಿರುಗಿಸಿದ್ರು ಎಂದು ನವಾಡಿಯಾ ಹೇಳಿದ್ದಾರೆ.

    ಇಡೀ ವಿಶ್ವದಲ್ಲೇ ಸೂರತ್ ಅತೀ ದೊಡ್ಡ ವಜ್ರ ಪಾಲಿಶಿಂಗ್ ಕೇಂದ್ರವಾಗಿದೆ.