Tag: ಸೂರತ್

  • ಅಳುವ ಕ್ಲಬ್‌ಗಳು ಎಂದರೇನು? ಮೊದಲು ಎಲ್ಲಿ ಆರಂಭವಾಯ್ತು?

    ಅಳುವ ಕ್ಲಬ್‌ಗಳು ಎಂದರೇನು? ಮೊದಲು ಎಲ್ಲಿ ಆರಂಭವಾಯ್ತು?

    ಕೆಲಸದ ಒತ್ತಡ, ಒಂಟಿ ಜೀವನ ಅಥವಾ ಮಾನಸಿಕ ಖಿನ್ನತೆ ಇದನ್ನೆಲ್ಲಾ ದೂರ ಮಾಡಲು ಬೆಂಗಳೂರಿನಂತಹ ನಗರಗಳಲ್ಲಿ ಲಾಫಿಂಗ್ ಕ್ಲಬ್ ಅಂತ ಬೆಳಗ್ಗೆ ಅಥವಾ ಸಂಜೆ ಜನ ಸೇರಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಹೋಗುವುದನ್ನು ನಾವು ಕೇಳಿದ್ದೇವೆ. ಅದೇ ರೀತಿ ತನ್ನ ಎಲ್ಲಾ ಬೇಸರಗಳನ್ನು ಹೊರಹಾಕಲು ಅಳುವ ಕ್ಲಬ್ (Crying Club) ಅಂತ ಇದೆ ಅಂದ್ರೆ ನೀವು ನಂಬ್ತೀರಾ?

    ಹೌದು, ಇದು ಆಶ್ಚರ್ಯವೆನಿಸಿದರೂ ಸತ್ಯ. ಒತ್ತಡ ಮತ್ತು ನಿರಾಶೆಗಳ ನಡುವೆ ನಮ್ಮ ಭಾವನೆಗಳನ್ನು ಹೊರಹಾಕಲು ಮಾಡಿಕೊಳ್ಳಲು ಮುಂಬೈ, ದೆಹಲಿ ಸೇರಿ ಅನೇಕ ಮಹಾನಗರಗಳು  ಅಳುವ ಕ್ಲಬ್ ಅನ್ನು ಪರಿಚಯಿಸಿದೆ. 

    ಸಾಂದರ್ಭಿಕ ಚಿತ್ರ

    ಅಳುವ ಕ್ಲಬ್‌ಗಳು ಎಂದರೇನು? 

    ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲಿರುವ ಸುರಕ್ಷಿತ ಸ್ಥಳವಾಗಿದೆ. ಇಲ್ಲಿ ಯಾರೇ ತಮ್ಮ ಮಾನಸಿಕ ದುಗುಡಗಳನ್ನು ಹಾಕಿಕೊಂಡರೆ ಯಾರೂ ಸಹ ತೀರ್ಪುರಹಿತಗಳನ್ನು ನೀಡುವುದಿಲ್ಲ. ಇದು ಕೇವಲ ಬೆಂಬಲ ನೀಡುವ ಅಪರಿಚಿತರು ಮುಕ್ತವಾಗಿ ಕೇಳಲು ಸಿದ್ಧರಿರುವ ಸ್ಥಳವಾಗಿದೆ.

    ಎಲ್ಲೆಲ್ಲಿ ಈ  ಕ್ಲಬ್‌ಗಳು ಇವೆ?

    ಇತ್ತೀಚೆಗೆ ಮುಂಬೈನಲ್ಲಿ (Mumbai) ದಿ ಕ್ರೈ ಕ್ಲಬ್ ಇಂತಹದೊಂದು ನೂತನ ಪರಿಕಲ್ಪನೆಯನ್ನು ಪರಿಚಯಿಸಿದೆ. ಸೂರತ್‌ನಲ್ಲಿ 2017 ರಿಂದ ಆರೋಗ್ಯಕರ ಕ್ರೈಯಿಂಗ್ ಕ್ಲಬ್ ಇದೆ, ಅಲ್ಲಿ ಜನರು ತಿಂಗಳಿಗೊಮ್ಮೆ ಅಳಲು ಸೇರುತ್ತಾರೆ. 

    ಅಳುವ ಕ್ಲಬ್‌ಗಳು ಏಕೆ ಫೇಮಸ್ ಆಗುತ್ತಿವೆ? 

    ಭಾವನೆಗಳನ್ನು ನಿಯಂತ್ರಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಪರಿಹಾರವನ್ನು ಉತ್ತೇಜಿಸಲು ಅಳುವುದು ಮಾನಸಿಕ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೆಲವು ಅಧ್ಯಯನಗಳು ಹೇಳುತ್ತದೆ.

    ಭಾವನಾತ್ಮಕ ವಿಚಾರಕ್ಕೆ ಅಳುವುದು ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಸಕ್ರಿಯಗೊಳಿಸುತ್ತದೆ. ಇದು ಒತ್ತಡದ ನಂತರ ದೇಹದ ಮನಸ್ಥಿತಿಯನ್ನು ಶಾಂತಗೊಳಿಸುತ್ತದೆ. ಮನಸ್ಥಿತಿಯನ್ನು ಸುಧಾರಿಸುವ ಮತ್ತು ನೋವನ್ನು ನಿವಾರಿಸುವ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್‌ಗಳಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. 

    AI ಚಿತ್ರ

    ಅಳು ದುಃಖವನ್ನು ಸೂಚಿಸುವ ಮೂಲಕ ಮತ್ತು ಭಾವನಾತ್ಮಕ ಸಂಪರ್ಕವನ್ನು ಬೆಳೆಸುವ ಮೂಲಕ ಸಾಮಾಜಿಕ ಬೆಂಬಲವನ್ನು ಬಯಸುತ್ತದೆ. ಇಂತಹ ಎಲ್ಲ ಮನಸ್ಥಿತಿಗಳಿಗೆ ಬೆಂಬಲವನ್ನು ನೀಡುವ ಮೂಲಕ ಅಳುವ ಕ್ಲಬ್ ಜನಪ್ರಿಯಗಳಿಸುತ್ತಿದೆ.

    ಅಳುವ ಕ್ಲಬ್‌ ಎಲ್ಲಿಂದ ಬಂತು?

    ಇದು ಜಪಾನ್‌ನಿಂದ (Japan) ಬಂದಿದೆ. ಜಪಾನ್‌ನಲ್ಲಿ ಈ ಕ್ಲಬ್ ಅನ್ನು ರುಯಿಕಾಟ್ಸು ಎಂದು ಕರೆಯುತ್ತಾರೆ. ಅಂದರೆ ಕಣ್ಣೀರಿನ ಚಟುವಟಿಕೆ ಎಂದರ್ಥ. ಇದು ಜಪಾನ್‌ನಲ್ಲಿ ಜನರ ಒತ್ತಡವನ್ನು ನಿವಾರಿಸಲು, ಭಾವನಾತ್ಮಕ ಆರೋಗ್ಯವನ್ನು ಸುಧಾರಿಸಲು ಮತ್ತು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲು ಉದ್ದೇಶಪೂರ್ವಕವಾಗಿ ಆರಂಭಿಸಿದ್ದಾರೆ. 

    ರುಯಿಕಾಟ್ಸುನಲ್ಲಿ ಭಾಗವಹಿಸುವವರು ಭಾವನಾತ್ಮಕ ಚಲನಚಿತ್ರಗಳನ್ನು ವೀಕ್ಷಿಸಲು, ಕಥೆಗಳನ್ನು ಕೇಳಲು ಅಥವಾ ಹೃದಯಸ್ಪರ್ಶಿ ಪತ್ರಗಳನ್ನು ಓದಲು ಒಟ್ಟುಗೂಡುತ್ತಾರೆ. ಅಳುವು ಜನರ ಭಾವನೆಗಳನ್ನು ಮನಸ್ಸಿನಿಂದ ಹೊರಹಾಕಲು ಸಹಾಯ ಮಾಡುತ್ತದೆ ಎಂಬುದು ಈ ರುಯಿಕಾಟ್ಸುನ ಕಲ್ಪನೆ. 

    ಜಪಾನ್‌ನಲ್ಲಿ ಈ ಪರಿಕಲ್ಪನೆ ಹೇಗೆ ಬಂತು?

    ಮೊದಲು 2013ರ ಸುಮಾರಿಗೆ ಜಪಾನಿನ ಉದ್ಯಮಿ ಹಿರೋಕಿ ಟೆರೈ ಅವರು ಪರಿಚಯಿಸಿದರು. ಅವರು ಮೊದಲು ‘ಡಿವೋರ್ಸ್ ಸೆರೆಮನಿ’ ಮಾಡುವ ಮೂಲಕ ಎಲ್ಲರ ಗಮನಸೆಳೆದರು. ಒತ್ತಡದ ಜೀವನವನ್ನು ನಡೆಸುತ್ತಿರುವ ಜನರು ಸಾಮಾನ್ಯವಾಗಿ ಅತ್ತ ನಂತರ ಅವರ ಮನಸ್ಸು ಹಗುರವಾಗುತ್ತದೆ ಎಂದು ಅವರು ಗಮನಿಸಿದ್ದರು. ಇದರಿಂದ ಅವರು ಜನರ ಭಾವನಾತ್ಮಕ ಒತ್ತಡವನ್ನು ನಿವಾರಿಸಲು ಇದನ್ನು ಪ್ರಾರಂಭಿಸಿದರು.

    ಜಪಾನ್‌ನಲ್ಲಿ ಕೆಲಸಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಇಂತಹ ವಾತಾವರಣದಲ್ಲಿ, ಒತ್ತಡ ಹಾಗೂ ಭಾವನೆಗಳನ್ನು ಹೊರಹಾಕಲು ರುಯಿಕಾಟ್ಸು ಒಂದು ಒಳ್ಳೆಯ ಸ್ಥಳವೆಂದು ಅಲ್ಲಿನ ಜನರು ಭಾವಿಸುತ್ತಾರೆ. ಈ ಒಂದು ಚಟುವಟಿಕೆಯು ಒತ್ತಡವನ್ನು ಹೆಚ್ಚು ಮಾಡುವಂತಹ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೇ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅಲ್ಲಿನ ವೈಜ್ಞಾನಿಕ ಅಧ್ಯಯನಗಳು ತಿಳಿಸಿವೆ.

    ಜಪಾನಿನಲ್ಲೇ ಪ್ರಾರಂಭವಾದ ಅಳುವ ಕ್ಲಬ್ ಇದೀಗ ಭಾರತದಲ್ಲೂ ಜನಪ್ರಿಯತೆಯನ್ನು ಪಡೆಯುತ್ತಿದೆ. ಒಂಟಿತನ, ಕೆಲಸದ ಒತ್ತಡ, ಮಾನಸಿಕ ಖಿನ್ನತೆ, ಭಾವನೆಗಳನ್ನು ನಿಯಂತ್ರಣ ಮಾಡಲು ಈ ಅಳುವ ಕ್ಲಬ್ ಸಹಾಯ ಮಾಡುತ್ತದೆ ಎಂಬುದು ಕೆಲವು ತಜ್ಞರ ಅನಿಸಿಕೆಯಾಗಿದೆ.

  • ಪತ್ನಿಗೆ ಅಕ್ರಮ ಸಂಬಂಧ – ಎರಡು ಮಕ್ಕಳಿಗೆ ವಿಷವುಣಿಸಿ ಪತಿ ಆತ್ಮಹತ್ಯೆ

    ಪತ್ನಿಗೆ ಅಕ್ರಮ ಸಂಬಂಧ – ಎರಡು ಮಕ್ಕಳಿಗೆ ವಿಷವುಣಿಸಿ ಪತಿ ಆತ್ಮಹತ್ಯೆ

    ಗಾಂಧಿನಗರ: ಪತ್ನಿ ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ (Affair) ಹೊಂದಿದ್ದ ಹಿನ್ನೆಲೆ ಗಂಡ ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೂರತ್‌ನಲ್ಲಿ (Surat) ನಡೆದಿದೆ.

    ಘಟನೆ ಸಂಬಂಧ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ. ಸೂರತ್ ನಗರದ ದಿಂಡೋಲಿಯ (Dindoli) ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ ಅಲ್ಪೇಶ್‌ಭಾಯ್ (41) ತನ್ನ 7 ವರ್ಷ ಹಾಗೂ 2 ವರ್ಷದ ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವರ್ತೂರ್‌ ಪ್ರಕಾಶ್‌ ಕಿಡ್ನ್ಯಾಪ್‌ ಕೇಸಲ್ಲಿ ಆರೋಪಿಯಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರ ಬಂಧನ

    ಪತ್ನಿ ಫಲ್ಗುಣಿ ಭಾಯಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಗುಮಾಸ್ತಳಾಗಿದ್ದಳು. ಫಲ್ಗುಣಿ ಪತಿಗೆ ಫೋನ್ ಮಾಡಿದ ವೇಳೆ ಅಲ್ಪೇಶ್ ಉತ್ತರಿಸಿರಲಿಲ್ಲ. ಈ ಹಿನ್ನೆಲೆ ಮನೆಗೆ ಬಂದು ನೋಡಿದಾಗ ಬಾಗಿಲುಗಳು ಲಾಕ್ ಆಗಿತ್ತು. ನಂತರ ಪತ್ನಿ ಸಂಬಂಧಿಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ. ಮನೆಗೆ ಬಂದ ಸಂಬಂಧಿಕರು ಮನೆಯ ಬಾಗಿಲು ಒಡೆದು ಒಳಗೆ ಹೋದಾಗ ಹಾಸಿಗೆಯ ಮೇಲೆ ಇಬ್ಬರು ಮಕ್ಕಳು ಹಾಗೂ ಪಕ್ಕದಲ್ಲೇ ಪತಿ ಕೂಡ ಶವವಾಗಿ ಬಿದ್ದಿದ್ದರು ಎಂದು ಎಂದು ಸೂರತ್‌ನ ಉಪ ಪೊಲೀಸ್ ಆಯುಕ್ತ (ಡಿಸಿಪಿ) ವಿಜಯ್ ಸಿಂಗ್ ಗುರ್ಜರ್ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕೇಸಲ್ಲಿ ತೀರ್ಪು ವಿಳಂಬಕ್ಕೆ ಶತಪ್ರಯತ್ನ ನಡೆದಿತ್ತು: ಎಸ್‌ಐಟಿ ಮುಖ್ಯಸ್ಥ ಬಿಕೆ ಸಿಂಗ್

    ಮೃತ ಅಲ್ಪೇಶ್ ಮೊಬೈಲ್‌ನಲ್ಲಿ ಡೆತ್ ನೋಟ್ ಹಾಗೂ ಕೆಲವು ವೀಡಿಯೋಗಳು ಲಭಿಸಿವೆ. ಅಲ್ಲದೇ ರೂಮ್‌ನಲ್ಲಿ ಎರಡು ಡೈರಿಗಳು ಕೂಡ ಸಿಕ್ಕಿದೆ. ಘಟನೆ ಸಂಬಂಧ ಅಲ್ಪೇಶ್ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ಅಲ್ಪೇಶ್ ಪತ್ನಿ ಫಲ್ಗುಣಿ ಭಾಯಿ, ನರೇಶ್ ಕುಮಾರ್ ರಾಥೋಡ್ ಎಂಬ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧದಿಂದಾಗಿ ಅಲ್ಪೇಶ್ ತೀವ್ರ ಒತ್ತಡದಲ್ಲಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ಹೇಳಿದ್ದಾರೆ. ಇದನ್ನೂ ಓದಿ: ದೊಡ್ಡಗಾಜನೂರಿನಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಿದ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ

    ಡೈರಿಯಲ್ಲಿ ಅಕ್ರಮ ಸಂಬಂಧದಿಂದ ಮನನೊಂದಿರುವುದಾಗಿ ತಿಳಿದುಬಂದಿದೆ. ಹೆಚ್ಚಿನ ತನಿಖೆಗಾಗಿ ಡೈರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಕಸಿತ ಭಾರತ್ @ 2047: ಹೂಡಿಕೆದಾರರ ದುಂಡುಮೇಜಿನ ಸಮ್ಮೇಳನ

  • ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡು ಮಾಡೆಲ್ ಆತ್ಮಹತ್ಯೆ

    ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡು ಮಾಡೆಲ್ ಆತ್ಮಹತ್ಯೆ

    ಗಾಂಧಿನಗರ: ಮಾಡೆಲ್ (Model) ಒಬ್ಬಳು ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‌ನ (Gujarat) ಸೂರತ್‌ನಲ್ಲಿ ನಡೆದಿದೆ.

    ಸೂರತ್‌ನಲ್ಲಿರುವ (Surat) ಮನೆಯಲ್ಲಿ ಮಾಡೆಲ್ ಅಂಜಲಿ ಅಲ್ಪೇಶ್ ವರ್ಮೋರಾ (23) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂಜಲಿ ಕಳೆದ ಹಲವಾರು ವರ್ಷಗಳಿಂದ ಫ್ರೀಲ್ಯಾನ್ಸ್ ಮಾಡೆಲ್ ಮಾಡುತ್ತಿದ್ದಳು. ಇದನ್ನೂ ಓದಿ: ಅಭಿಮಾನಿಗಳಿಗೆ ಬಿಗ್‌ ಶಾಕ್‌ – ಆರ್‌ಸಿಬಿ ಸೇಲ್‌..?

    ಅಂಜಲಿ (Anjali Alpesh Varmora) ಆತ್ಮಹತ್ಯೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸೂರತ್‌ನ ಡಿಸಿಪಿ ವಿಜಯ್ ಸಿಂಗ್ ಗುರ್ಜಾರ್, ಮಾಡೆಲ್ ಅಂಜಲಿ ಸೂರತ್‌ನಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಂಜಲಿ, ಫ್ಯಾಷನ್ ಶೂಟ್‌ಗಳ ಜೊತೆಗೆ ವಾಣಿಜ್ಯ ಮಾಡೆಲಿಂಗ್‌ಗಳಲ್ಲೂ ತೊಡಗಿಸಿಕೊಂಡಿದ್ದಳು ಎಂದಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ದುರಂತ – ಬೆಂಗಳೂರಿನಿಂದ ಪಂದ್ಯಗಳು ಸ್ಥಳಾಂತರ

    ಅಂಜಲಿಗೆ ಈ ಹಿಂದೆಯೇ ನಿಶ್ಚಿತಾರ್ಥವಾಗಿತ್ತು. ಮದುವೆ ದಿನಾಂಕ ಕೂಡಾ ನಿಗದಿಯಾಗಿತ್ತು. ಆದರೆ ಆಕೆಯ ಭಾವಿ ಪತಿಯ ತಾಯಿ ನಿಧನರಾದ ಬಳಿಕ, ಈ ಮದವೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿತ್ತು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ಅಂಜಲಿ ಭಾವಿ ಪತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಳು. ಆ ಸಮಯದಲ್ಲಿ ಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಟ ಸೂರ್ಯ ಜೊತೆಗೆ ಬಿಗ್‌ ಬಜೆಟ್‌ ಸಿನಿಮಾಗೆ ಕಮಲ್‌ ಪ್ಲ್ಯಾನ್‌

    ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಅಂಜಲಿ ನೇಣು ಬಿಗಿದುಕೊಂಡಿದ್ದಾಳೆ. ಮನೆಯವರು ಹಿಂದಿರುಗಿದಾಗ, ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮೊದಲು, ಅಂಜಲಿ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಭಾವನಾತ್ಮಕ ಪೋಸ್ಟ್ ಹಾಕಿದ್ದಳು. ಆದರೆ ಅದರಲ್ಲಿ ಯಾರ ನಿರ್ದಿಷ್ಟ ಹೆಸರುಗಳನ್ನು ಉಲ್ಲೇಖಿಸಿಲ್ಲ. ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

  • 70,000 ರೂ.ನಂತೆ 1,500 ಮಂದಿಗೆ ನಕಲಿ ವೈದ್ಯಕೀಯ ಪದವಿ ಪ್ರಮಾಣ ಪತ್ರ ಸೇಲ್‌ – 13 ಮಂದಿ ಅರೆಸ್ಟ್!

    70,000 ರೂ.ನಂತೆ 1,500 ಮಂದಿಗೆ ನಕಲಿ ವೈದ್ಯಕೀಯ ಪದವಿ ಪ್ರಮಾಣ ಪತ್ರ ಸೇಲ್‌ – 13 ಮಂದಿ ಅರೆಸ್ಟ್!

    ಗಾಂಧಿನಗರ: ನಕಲಿ ಬಿಇಎಂಎಸ್ ಪದವಿ ಪ್ರಮಾಣ ಪತ್ರ ನೀಡಿ, ನಕಲಿ ವೈದ್ಯರನ್ನು ಸೃಷ್ಟಿಸುತ್ತಿದ್ದ ಮೂವರು ಆರೋಪಿಗಳನ್ನು ಗುಜರಾತ್‌ನ ಸೂರತ್‌ (Surat) ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ನಕಲಿ ಪದವಿ ಪಡೆದು ಆಸ್ಪತ್ರೆ ನಡೆಸುತ್ತಿದ್ದ 10 ಮಂದಿಯನ್ನು ಪೊಲೀಸರು (Police) ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಆರೋಪಿಗಳು ವಿವಿಧ ಸ್ಥಳಗಳಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಬಂಧಿತರ ವಿರುದ್ಧ ಗುಜರಾತಿನ ಮೆಡಿಕಲ್ ಪ್ರಾಕ್ಟೀಷನರ್ಸ್ ಆಕ್ಟ್ (ಜಿಎಂಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.‌

    ಮೂರು ಜನ ಆರೋಪಿಗಳು ಸೂರತ್‌ನಲ್ಲಿ ನಕಲಿ ಬ್ಯಾಚುಲರ್ ಆಫ್ ಎಲೆಕ್ಟ್ರೋ-ಹೋಮಿಯೋಪತಿ ಮೆಡಿಸಿನ್ ಮತ್ತು ಸರ್ಜರಿ (ಬಿಇಎಂಎಸ್) ಪದವಿ ಪ್ರಮಾಣಪತ್ರವನ್ನು ಜನರಿಗೆ ನೀಡುತ್ತಿದ್ದರು. ದಾಳಿ ವೇಳೆ ನಕಲಿ ಪ್ರಮಾಣ ಪತ್ರಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳ ಕ್ಲಿನಿಕ್‌ಗಳಿಂದ ಅಲೋಪತಿ ಮತ್ತು ಹೋಮಿಯೋಪತಿ ಔಷಧಗಳು, ಚುಚ್ಚುಮದ್ದು, ಸಿರಪ್ ಬಾಟಲಿಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

    ಮೂವರು ಆರೋಪಿಗಳು ಬೋರ್ಡ್ ಆಫ್ ಎಲೆಕ್ಟ್ರೋ ಹೋಮಿಯೋಪತಿಕ್ ಮೆಡಿಸಿನ್ ಎಂಬ ಹೆಸರಿನಲ್ಲಿ ಸಂಸ್ಥೆಯನ್ನು ನಡೆಸುತ್ತಿದ್ದರು. ಅದರಲ್ಲಿ ನಕಲಿ ಬಿಇಎಂಎಸ್ ಪದವಿ ಪ್ರಮಾಣ ಪತ್ರವನ್ನು 70,000 ರೂ.ಗೆ ಮಾರಾಟ ಮಾಡುತ್ತಿದ್ದರು. ಸುಮಾರು 1,500 ಮಂದಿಗೆ ಇಂತಹ ಪ್ರಮಾಣಪತ್ರ ಮಾರಾಟ ಮಾಡಿದ್ದಾರೆ. ಇವುಗಳಲ್ಲಿ ಕೇವಲರು 10ನೇ ತರಗತಿ ತೇರ್ಗಡೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಪಾಂಡೇಸರ ಪೊಲೀಸರು ಬಮ್ರೋಲಿ ಪ್ರದೇಶದ ವಿವಿಧ ವೈದ್ಯಕೀಯ ಚಿಕಿತ್ಸಾಲಯಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ.

  • ಸನ್ಮಾನಕ್ಕಾಗಿ ತಾವೇ ರೈಲು ಹಳಿಯಿಂದ ಕ್ಲಿಪ್, ಫಿಶ್ ಪ್ಲೇಟ್ ಕಿತ್ತಿದ್ದ ಮೂವರು ರೈಲ್ವೇ ಸಿಬ್ಬಂದಿ ಬಂಧನ

    ಸನ್ಮಾನಕ್ಕಾಗಿ ತಾವೇ ರೈಲು ಹಳಿಯಿಂದ ಕ್ಲಿಪ್, ಫಿಶ್ ಪ್ಲೇಟ್ ಕಿತ್ತಿದ್ದ ಮೂವರು ರೈಲ್ವೇ ಸಿಬ್ಬಂದಿ ಬಂಧನ

    ಗಾಂಧಿನಗರ: ಅಪಘಾತ ತಪ್ಪಿಸಿ ಪ್ರಶಂಸೆ ಪಡೆಯುವ ಉದ್ದೇಶಕ್ಕಾಗಿ ರೈಲು ಹಳಿತಪ್ಪಿಸುವ ಸಂಚು ರೂಪಿಸಿದ್ದಕ್ಕಾಗಿ ಮೂವರು ರೈಲ್ವೇ ಸಿಬ್ಬಂದಿಯನ್ನು ಬಂಧಿಸಿರುವ ಘಟನೆ ಸೂರತ್ (Surat) ಜಿಲ್ಲೆಯ ಕಿಮ್ ಬಳಿ ನಡೆದಿದೆ.

    ಅಪಘಾತ ತಪ್ಪಿಸಿ ಪ್ರಶಂಸೆ ಪಡೆಯುವ ಉದ್ದೇಶದಿಂದ ಫಿಶ್ ಪ್ಲೇಟ್‌ಗಳು (Fish Plates) ಮತ್ತು ಇತರ ಭಾಗಗಳನ್ನು ತೆಗೆದು ಮತ್ತೆ ಅಳವಡಿಸಿರುವುದು ಗಮನಕ್ಕೆ ಬಂದಿದ್ದು, ರೈಲ್ವೆ ಸಿಬ್ಬಂದಿಗಳಾದ ಸುಭಾಷ್ ಪೊದಾರ್, ಮನೀಶ್ ಮಿಸ್ತ್ರಿ, ಶುಭಂ ಜಯಸ್ವಾಲ್ ಎಂಬುವವರನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬಾಡಿಗೆಗಿದ್ದ ಮಹಿಳೆಯ ಮನೆಯ ಬಾತ್‍ರೂಮ್, ಬೆಡ್‍ರೂಮ್‍ನಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ ಕಾಮುಕ ಅರೆಸ್ಟ್

    ಮೂವರ ಸಿಬ್ಬಂದಿಗಳನ್ನು ತನಿಖೆ ನಡೆಸಿದಾಗ ಬೆಳಗಿನ ಜಾವ 5:15ರ ಸುಮಾರಿಗೆ ಕಿಮ್ ಮತ್ತು ಕೊಸಾಂಬಾ ಗ್ರಾಮಗಳ ನಡುವಿನ ಹಳಿಯ ಬಳಿ ಮೂವರು ಓಡಿ ಹೋಗುವುದನ್ನು ಗಮನಿಸಿದ್ದೇವೆ. ಜೊತೆಗೆ ರೈಲು ಹಳಿಯಲ್ಲಿ 71 ಎಲಾಸ್ಟಿಕ್ ರೈಲ್ ಕ್ಲಿಪ್ ಕೀಗಳು (Elastic Rail Clip Keys) ಮತ್ತು ಎರಡು ಫಿಶ್ ಪ್ಲೇಟ್‌ಗಳನ್ನು ತೆಗೆದುಹಾಕಲಾಗಿರುವುದು ಕಂಡುಬಂದಿದೆ ಹಾಗೂ ಅದಾದ 25 ನಿಮಿಷಗಳಲ್ಲಿ ಅವುಗಳು ಮತ್ತೆ ಅಳವಡಿಸಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

    ಸೂರತ್ ಎಸ್ಪಿ ಹಿತೇಶ್ ಜೋಯ್ಸರ್ ಮಾತನಾಡಿ, ಇಷ್ಟು ಕಡಿಮೆ ಅವಧಿಯಲ್ಲಿ ಅಳವಡಿಸಿರುವುದು ಅನುಮಾನ ಉಂಟು ಮಾಡಿತ್ತು. ಬಳಿಕ ಮೂವರ ಫೋನ್‌ಗಳನ್ನು ಪರಿಶೀಲಿಸಿದಾಗ ಫೋನ್‌ನ ಬಿನ್‌ನಲ್ಲಿ ತೆಗೆದ ಭಾಗಗಳ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಲಭ್ಯವಾಗಿದೆ. ಫೋಟೋಗಳು ರಾತ್ರಿ 2 ರಿಂದ 3 ನಡುವೆ ತೆಗೆದಿರುವುದು ಗೊತ್ತಾಗಿದೆ. ಇದನ್ನು ಪ್ರಶ್ನಿಸಿದಾಗ ವಿವರಣೆ ಅಸಾಧ್ಯವಾದಾಗ ಅವರು ಭಾಗಿಯಾಗಿರುವುದು ಅನುಮಾನ ಉಂಟು ಮಾಡಿತ್ತು. ಮತ್ತಷ್ಟು ಪ್ರಶ್ನೆ ಮಾಡಿದಾಗ ನಿಜವಾದ ವಿವರ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

    ಹಳಿತಪ್ಪಿಸುವ ಯತ್ನದಂತೆ ತೋರಲು ಹಳಿಗಳ ಭಾಗಗಳನ್ನು ತೆಗೆದಿದ್ದಾರೆ. ಜೊತೆಗೆ ಅವುಗಳ ವೀಡಿಯೊ ಮತ್ತು ಫೋಟೋವನ್ನು ತೆಗೆದುಕೊಂಡಿದ್ದಾರೆ. ಅಪಘಾತವನ್ನು ತಪ್ಪಿಸಲು ಪ್ರಶಂಸೆ ಪಡೆಯುವ ಪ್ರಯತ್ನದಲ್ಲಿ ತೆಗೆದಿದ್ದ ಹಳಿ ಭಾಗಗಳನ್ನು ಮತ್ತೆ ಅಳವಡಿಸಿದ್ದು, ತನಿಖೆಯ ವೇಳೆ ಕಂಡು ಬಂದಿದೆ ಎಂದು ತಿಳಿಸಿದರು.

    ಸದ್ಯ ಪೊಲೀಸರು ಪ್ರಕರಣವನ್ನು ವಿಶೇಷ ಕಾರ್ಯಾಚರಣೆ ತಂಡಕ್ಕೆ ತನಿಖೆಯನ್ನು ಹಸ್ತಾಂತರಿಸಿದ್ದಾರೆ. ಪೊಲೀಸರು ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ‘ಲಾಪತಾ ಲೇಡಿಸ್’ ಬೆನ್ನಲ್ಲೇ ಆಸ್ಕರ್‌ಗೆ ಪ್ರವೇಶ ಪಡೆದ ‘ಸ್ವಾತಂತ್ರ‍್ಯ ವೀರ್ ಸಾವರ್ಕರ್’ ಚಿತ್ರ

  • ಭಾರೀ ಮಳೆಗೆ ಗುಜರಾತ್‍ನಲ್ಲಿ ಕುಸಿದು ಬಿದ್ದ ಕಟ್ಟಡ – 7 ಮಂದಿ ದುರ್ಮರಣ

    ಭಾರೀ ಮಳೆಗೆ ಗುಜರಾತ್‍ನಲ್ಲಿ ಕುಸಿದು ಬಿದ್ದ ಕಟ್ಟಡ – 7 ಮಂದಿ ದುರ್ಮರಣ

    ಗಾಂಧಿನಗರ: ಸೂರತ್‍ನಲ್ಲಿ (Surat) ಭಾರೀ ಮಳೆಯಿಂದ ಆರು ಅಂತಸ್ತಿನ ಕಟ್ಟಡ ಕುಸಿದು ಬಿದ್ದು (Building Collapse) 7 ಜನ ಸಾವಿಗೀಡಾಗಿದ್ದಾರೆ. ಕಟ್ಟಡದ ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅವರ ರಕ್ಷಣೆಗೆ ಎನ್‍ಡಿಆರ್‌ಎಫ್‌ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದಾರೆ.

    ಶನಿವಾರ ಮಹಿಳೆಯೊಬ್ಬರನ್ನು ಅವಶೇಷಗಳ ಅಡಿಯಿಂದ ರಕ್ಷಿಸಲಾಗಿತ್ತು. ಈ ದುರ್ಘಟನೆಯಲ್ಲಿ ಸುಮಾರು 15 ಮಂದಿ ಗಾಯಗೊಂಡಿದ್ದಾರೆ. ಜನರ ರಕ್ಷಣೆಗಾಗಿ ಎನ್‍ಡಿಆರ್‍ಎಫ್ ಸಿಬ್ಬಂದಿ ರಾತ್ರಿಯಿಡೀ ಕಾರ್ಯ ನಿರ್ವಹಿಸಿದ್ದಾರೆ. ಬಹುತೇಕ ಅವಶೇಷಗಳ ಅಡಿ ಇನ್ಯಾರು ಸಿಲುಕಿಲ್ಲ ಎಂದು ಬಾವಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 24 ಗಂಟೆಯಲ್ಲಿ ಟಿಬಿ ಡ್ಯಾಂಗೆ ಬಂತು 4 ಟಿಎಂಸಿ ನೀರು

    ಕುಸಿದು ಬಿದ್ದ ಕಟ್ಟಡದಲ್ಲಿ ಐದು ಕುಟುಂಬಗಳು ವಾಸವಾಗಿದ್ದವು. ಇದನ್ನು 2017 ರಲ್ಲಿ ನಿರ್ಮಿಸಲಾಗಿತ್ತು. ಈ ದುರ್ಘಟನೆ ವೇಳೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ಕಟ್ಟಡದ ಒಳಗೆ ಮಲಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    8 ವರ್ಷಗಳ ಹಿಂದಷ್ಟೇ ನಿರ್ಮಾಣವಾಗಿದ್ದ ಈ ಕಟ್ಟಡ ಬಹುತೇಕ ಶಿಥಿಲಾವಸ್ಥೆಯಲ್ಲಿತ್ತು. ಕಳೆದ ಕೆಲವು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಟ್ಟಡ ಕುಸಿದಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಆಟ ಆಡೋ ಮಕ್ಕಳೆಲ್ಲ ಮದ್ಯ ವ್ಯಸನಿಗಳಾಗಿದ್ದಾರೆ, ಬಾರ್ ಬಂದ್ ಮಾಡ್ಸಿ – ಸಚಿವರ ಬಳಿ ಮಹಿಳೆಯ ಅಳಲು

  • ಸೂರತ್‌ನಲ್ಲಿ ಕುಸಿದು ಬಿದ್ದ 6 ಅಂತಸ್ತಿನ ಕಟ್ಟಡ – ಮಹಿಳೆ ರಕ್ಷಣೆ, 15 ಮಂದಿಗೆ ಗಾಯ

    ಸೂರತ್‌ನಲ್ಲಿ ಕುಸಿದು ಬಿದ್ದ 6 ಅಂತಸ್ತಿನ ಕಟ್ಟಡ – ಮಹಿಳೆ ರಕ್ಷಣೆ, 15 ಮಂದಿಗೆ ಗಾಯ

    ಗಾಂಧಿನಗರ: ಆರು ಅಂತಸ್ತಿನ ಕಟ್ಟಡ (Building Collapse) ಕುಸಿದು ಬಿದ್ದ ಪರಿಣಾಮ 15 ಮಂದಿ ಗಾಯಗೊಂಡಿದ್ದು, ಓರ್ವ ಮಹಿಳೆಯನ್ನು ರಕ್ಷಿಸಿದ ಘಟನೆ ಸೂರತ್‌ನ (Surat) ಸಚಿನ್ ಪಾಲಿ ಗ್ರಾಮದಲ್ಲಿ ನಡೆದಿದೆ.

    ಘಟನೆಯಲ್ಲಿ ಹಲವರು ಕಟ್ಟಡದ ಕೆಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಟ್ಟಡ ಕುಸಿತದಿಂದ 15 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಂತೆ ಗುಜರಾತ್‌ನಲ್ಲೂ ಬಿಜೆಪಿ ಸೋಲಿಸುತ್ತೇವೆ: ರಾಹುಲ್‌ ಗಾಂಧಿ ಶಪಥ

    ಅಧಿಕಾರಿಗಳ ಪ್ರಕಾರ ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಕಟ್ಟಡ ಶಿಥಿಲಾವಸ್ಥೆಯಲ್ಲಿತ್ತು. ಇಂದು ಈ ಕಟ್ಟಡ ಕುಸಿದು ಬಿದ್ದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಮತ್ತೊಂದು ಝಿಕಾ ವೈರಸ್‌ ಕೇಸ್‌ ಪತ್ತೆ – ಡೆಂಗ್ಯೂ ನಡುವೆ ಹೆಚ್ಚಾಯ್ತು ಆತಂಕ!

  • ಚುನಾವಣೆಗೂ ಮುನ್ನವೇ ಖಾತೆ ತೆರೆದ ಬಿಜೆಪಿ – ʻಮ್ಯಾಚ್‌ ಫಿಕ್ಸಿಂಗ್‌ʼ ಎಂದ ಕಾಂಗ್ರೆಸ್‌

    ಚುನಾವಣೆಗೂ ಮುನ್ನವೇ ಖಾತೆ ತೆರೆದ ಬಿಜೆಪಿ – ʻಮ್ಯಾಚ್‌ ಫಿಕ್ಸಿಂಗ್‌ʼ ಎಂದ ಕಾಂಗ್ರೆಸ್‌

    – ಸರ್ವಾಧಿಕಾರಿಯ ಮತ್ತೊಂದು ಮುಖ ಎಂದ ರಾಗಾ

    ಗಾಂಧಿನಗರ (ಸೂರತ್‌): 2024ರ ಲೋಕಸಭಾ ಚುನಾವಣೆ ಮುಗಿಯುವ ಮುನ್ನವೇ ಸೂರತ್‌ನಲ್ಲಿ (Surat Lok Sabha Seat) ಬಿಜೆಪಿ ಮೊದಲ ಗೆಲುವಿನ ಖಾತೆ ತೆರಿದಿದೆ. ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ಧ ಮ್ಯಾಚ್‌‌ ಫಿಕ್ಸಿಂಗ್‌ ಎಂದು ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ಬಗ್ಗೆ ಜನರಿಗೆ ಕೋಪವೂ ಇದೆ, ಭಯವೂ ಇದೆ. ಹಾಗಾಗಿ ಈಗಿನಿಂದಲೇ ಬಿಜೆಪಿ ಮ್ಯಾಚ್‌ ಫಿಕ್ಸಿಂಗ್‌ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಜೈರಾಮ್ ರಮೇಶ್ (Jairam Ramesh) ಆರೋಪಿಸಿದ್ದಾರೆ.

    ಮೋದಿ ಅವರ ಅನ್ಯಾಯ ಕಾಲದಲ್ಲಿ ಎಂಎಸ್‌ಎಂಇ ಮಾಲೀಕರು ಮತ್ತು ಉದ್ಯಮಿಗಳು ಎದುರಿಸುತ್ತಿರುವ ಸಂಕಷ್ಟ ಮತ್ತು ಅವರ ಆಕ್ರೋಶ ಬಿಜೆಪಿಯನ್ನು ಯಾವ ಹಂತಕ್ಕೆ ಕೊಂಡೊಯ್ದಿದೆ ಎಂದರೆ, ಅವರು 1984ರಿಂದ ಲೋಕಸಭೆ ಚುನಾವಣೆಯಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿರುವ ಸೂರತ್ ಕ್ಷೇತ್ರದಲ್ಲಿ ʻಮ್ಯಾಚ್-ಫಿಕ್ಸ್ʼ ಮಾಡಲು ಪ್ರಯತ್ನಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಸರ್ವಾಧಿಕಾರಿಯ ಮತ್ತೊಂದು ಮುಖ:
    ಇನ್ನೂ ಈ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ (Rahul Gandhi), ಸರ್ವಾಧಿಕಾರಿಯ ನಿಜವಾದ ಮುಖ ಮತ್ತೊಮ್ಮೆ ದೇಶದ ಮುಂದಿದೆ. ಜನರ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಕಸಿದುಕೊಳ್ಳುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ನಾಶಪಡಿಸುವ ಮತ್ತೊಂದು ಹೆಜ್ಜೆ ಎಂದು ದೂರಿದ್ದಾರೆ.

    ಸೂರತ್‌ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದೇಗೆ?
    2024ರ ಲೋಕಸಭಾ ಚುನಾವಣೆಯಲ್ಲಿ ಸೂರತ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನೀಲೇಶ್‌ ಕುಂಭಾಣಿ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಅಲ್ಲದೇ ನಾಮಪತ್ರ ಸಲ್ಲಿಸಿದ್ದ ಉಳಿದ 8 ಮಂದಿ ಸ್ವತಂತ್ರ ಅಭ್ಯರ್ಥಿಗಳೂ ಹಿಂದೆ ಸರಿದಿದ್ದರು. ಹೀಗಾಗಿ ಮತದಾನ ನಡೆಯದೇ ಗೆಲುವು ಬಿಜೆಪಿ ಪಾಲಾಯಿತು. ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವರು ಅವಿರೋಧವಾಗಿ ಆಯ್ಕೆಯಾದರು.

    ಕಾಂಗ್ರೆಸ್‌ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದ್ದು ಯಾಕೆ?
    ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರದಲ್ಲಿನ ಸಹಿಗಳು ತಮ್ಮದಲ್ಲ ಎಂದು ಮೂವರು ಸೂಚಕರು ವಕೀಲರ ಮೂಲಕ ಚುನಾವಣಾಧಿಕಾರಿಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ್ದ ಚುನಾವಣಾಧಿಕಾರಿಗಳು ಸಹಿಯನ್ನು ಪರಿಶೀಲಿಸಿದ್ದರು. ಪರಿಶೀಲಿಸಿದ ಬಳಿಕ ನಾಮಪತ್ರಗಳಲ್ಲಿನ ಸೂಚಕರ ಸಹಿಯಲ್ಲಿ ವ್ಯತ್ಯಾಸಗಳಿದ್ದವು ಮತ್ತು ಅವು ನಿಜವಲ್ಲ ಎಂದು ತಿಳಿದುಬಂದಿದ್ದರಿಂದ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಸೌರಭ್ ಪರ್ಧಿ ತಿಳಿಸಿದರು. ತನ್ನ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ.

  • 9,999 ವಜ್ರಗಳಿಂದ ರಾಮಮಂದಿರದ ಕಲಾಕೃತಿ ರಚಿಸಿದ ಕಲಾವಿದ!

    9,999 ವಜ್ರಗಳಿಂದ ರಾಮಮಂದಿರದ ಕಲಾಕೃತಿ ರಚಿಸಿದ ಕಲಾವಿದ!

    ಗಾಂಧಿನಗರ: ಗುಜರಾತ್‍ನ ಸೂರತ್ (Surat) ನಗರದ ಕಲಾವಿದರೊಬ್ಬರು 9,999 ವಜ್ರಗಳನ್ನು ಬಳಸಿ ಅಯೋಧ್ಯೆಯ (Ayodhya) ರಾಮಮಂದಿರದ (Ram Mandir) ಕಲಾಕೃತಿಯನ್ನು ರಚಿಸಿದ್ದಾರೆ. ಈ ವೀಡಿಯೋ ಇದೀಗ ಎಕ್ಸ್‌ನಲ್ಲಿ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ.

    ಕಲಾವಿದ ಚಿಕ್ಕ ಚಿಕ್ಕ ವಜ್ರಗಳನ್ನು ಬಳಸಿ ಕಪ್ಪು ಬೋರ್ಡ್ ಮೇಲೆ ರಾಮಮಂದಿರದ ಕಲಾಕೃತಿ ರಚಿಸಿದ್ದಾರೆ. ಈ ಬೋರ್ಡ್ ಮೇಲ್ಭಾಗದಲ್ಲಿ ಜೈ ಶ್ರೀ ರಾಮ್ ಎಂದು ಬರೆಯಲಾಗಿದೆ. ಮೇಲಿನ ಬಲ ಮೂಲೆಯಲ್ಲಿ ಭಗವಾನ್ ರಾಮನ ಚಿತ್ರವಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಸ್ಯಾಟಲೈಟ್ ಚಿತ್ರ ಬಿಡುಗಡೆ ಮಾಡಿದ ಇಸ್ರೋ

    ಇನ್ನೂ ಸೂರತ್‍ನಲ್ಲಿ ವಿಶೇಷ ಸೀರೆಯನ್ನೂ ಸಹ ಸಿದ್ಧಪಡಿಸಲಾಗಿತ್ತು. ಇದನ್ನು ದೇವಾಲಯದ ಟ್ರಸ್ಟ್‌ನ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಸೀರೆಯ ಮೇಲೆ ಭಗವಾನ್ ರಾಮನ ಚಿತ್ರ ಮತ್ತು ಅದರ ಮೇಲೆ ಅಯೋಧ್ಯೆಯ ದೇವಾಲಯವನ್ನು ಮುದ್ರಿಸಲಾಗಿದೆ. ಈ ಸೀರೆಯೂ ಸೀತಾ ಮಾತೆಗೆ ಮೀಸಲಿಡಲಾಗಿದೆ.

    ಇಲ್ಲಿನ ವಜ್ರದ ವ್ಯಾಪಾರಿಯೊಬ್ಬರು 5,000 ಅಮೆರಿಕನ್ ವಜ್ರಗಳು ಮತ್ತು ಎರಡು ಕಿಲೋಗ್ರಾಂಗಳಷ್ಟು ಬೆಳ್ಳಿಯನ್ನು ಬಳಸಿ ರಾಮಮಂದಿರದ ಆಕೃತಿಯ ವಿಶೇಷ ನೆಕ್ಲೇಸ್ ಸಹ ಮಾಡಿದ್ದಾರೆ. ಈ ಹಾರವನ್ನು ರಾಮಮಂದಿರ ಟ್ರಸ್ಟ್‌ಗೆ ಉಡುಗೊರೆಯಾಗಿ ನೀಡಲಾಗಿದೆ.

    ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ (Pran Pratishtha) ಸಕಲ ಸಿದ್ಧತೆಗಳು ಆಗಿದೆ. ಸೋಮವಾರ ಶಾಸ್ತ್ರೋಕ್ತವಾಗಿ ಸಮಾರಂಭ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶ-ವಿದೇಶಗಳ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: PublicTV Explainer: ‘ದಶಾವತಾರಿ ರಾಮ’ನೂರಿನ ಅಯೋಧ್ಯೆ ರಾಮಮಂದಿರದ 10 ವಿಶೇಷತೆಗಳು..

  • ಅಯೋಧ್ಯೆಯ ಸೀತಾಮಾತೆಗೆ ಸೂರತ್‌ನಲ್ಲಿ ಸಿದ್ಧಗೊಂಡಿದೆ ಸ್ಪೆಷಲ್ ಸೀರೆ – ವಿಶೇಷತೆ ಏನು?

    ಅಯೋಧ್ಯೆಯ ಸೀತಾಮಾತೆಗೆ ಸೂರತ್‌ನಲ್ಲಿ ಸಿದ್ಧಗೊಂಡಿದೆ ಸ್ಪೆಷಲ್ ಸೀರೆ – ವಿಶೇಷತೆ ಏನು?

    ಗಾಂಧಿನಗರ: ದೇಶದ ಪ್ರಮುಖ ಜವಳಿ ಕೇಂದ್ರವಾಗಿರುವ ಗುಜರಾತ್‌ನ (Gujarat) ಸೂರತ್ (Surat) ನಗರದಲ್ಲಿ ಅಯೋಧ್ಯೆಯಲ್ಲಿ (Ayodhya) ನೆಲೆಸಿರುವ ಸೀತಾಮಾತೆಗೆ (Sita Mata) ಅರ್ಪಿಸಲು ವಿಶೇಷ ಸೀರೆಯೊಂದು (Saree) ಸಿದ್ಧವಾಗಿದೆ. ಈ ಸೀರೆಯನ್ನು ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ (Ram Mandir) ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ ಕಳುಹಿಸಲಾಗುವುದು ಎಂದು ಜವಳಿ ಉದ್ಯಮಿ ಲಲಿತ್ ಶರ್ಮಾ (Lalith Sharma)ತಿಳಿಸಿದ್ದಾರೆ.

    ಸೀರೆಯ ವಿಶೇಷತೆಯೇನು?
    ಸೀತಾಮಾತೆಗೆಂದು ತಯಾರಿಸಿರುವ ಈ ಸೀರೆಯಲ್ಲಿ ಭಗವಾನ್ ರಾಮನ ಚಿತ್ರಗಳು ಮತ್ತು ಅಯೋಧ್ಯೆಯ ದೇವಾಲಯದ ಮುದ್ರಣವಿದೆ. ಸೀರೆ ತಯಾರಿಯ ಮೊದಲ ಕಚ್ಚಾ ವಸ್ತುವಿನ ತುಣುಕನ್ನು ಸೂರತ್‌ನ ಸೀತಾ ದೇವಿಯ ದೇವಾಲಯಕ್ಕೆ ಅರ್ಪಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಚಿನ್ನದ ಬಾಗಿಲು – ಇನ್ನು 3 ದಿನದಲ್ಲಿ 13 ಬಾಗಿಲು ಅಳವಡಿಕೆ

    ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಭೌತಿಕವಾಗಿ ಇರಲು ಸಾಧ್ಯವಾಗದ ಭಕ್ತರು ತಮ್ಮದೇ ಆದ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಂಪರ್ಕ ಸಾಧಿಸಲು ಬಯಸಿದ ಕಾರಣ ಈ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಲಲಿತ್ ಶರ್ಮ ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕಾಗಿ 30 ವರ್ಷಗಳಿಂದ ‘ಮೌನ ವ್ರತ’ – ಒಂದು ಮಾತೂ ಆಡದೇ ಇದ್ದ ಮಹಿಳೆ ಮುಖದಲ್ಲಿ ಮಂದಹಾಸ

    ನಾವು ಭಗವಾನ್ ರಾಮನ ಚಿತ್ರಗಳು ಮತ್ತು ಅಯೋಧ್ಯೆ ದೇವಸ್ಥಾನವನ್ನು ಮುದ್ರಿಸಿದ ವಿಶೇಷ ಸೀರೆಯನ್ನು ಸಿದ್ಧಪಡಿಸಿದ್ದೇವೆ. ನಾವು ಅದನ್ನು ಇಲ್ಲಿ ನೆಲೆಸಿರುವ ಸೀತಾಮಾತೆಯ ದೇವಸ್ಥಾನದಲ್ಲಿ ಅರ್ಪಿಸಿದ್ದೇವೆ. ಬಳಿಕ ಈ ಸೀರೆಯನ್ನು ಅಯೋಧ್ಯೆಯ ರಾಮಮಂದಿರಕ್ಕೆ ಕಳುಹಿಸುತ್ತೇವೆ. ಬೇಡಿಕೆ ಬಂದರೆ ಸೀತಾಮಾತೆ ನೆಲೆಸಿರುವ ಎಲ್ಲಾ ರಾಮನ ದೇವಾಲಯಗಳಿಗೆ ನಾವು ಅದನ್ನು ಉಚಿತವಾಗಿ ಕಳುಹಿಸುತ್ತೇವೆ ಎಂದು ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: Ayodhya Ram Mandir: ಶೀಘ್ರದಲ್ಲೇ ಸಂಚರಿಸಲಿವೆ ನೋಯ್ಡಾದಿಂದ ಅಯೋಧ್ಯೆಗೆ ಡೈರೆಕ್ಟ್ ಬಸ್‌