Tag: ಸೂಫಿ ಸಂತರು

  • ಮುಸ್ಲಿಮರಿಗೆ ಭಾರತವೇ ಸುರಕ್ಷಿತ ಜಾಗ, ಜಿಹಾದ್‍ಗೆ ಕರೆ ನೀಡಿರುವ ಪಾಕ್‍ಗೆ ನಾಚಿಕೆಯಾಗಬೇಕು – ಸೂಫಿ ಸಂತರು

    ಮುಸ್ಲಿಮರಿಗೆ ಭಾರತವೇ ಸುರಕ್ಷಿತ ಜಾಗ, ಜಿಹಾದ್‍ಗೆ ಕರೆ ನೀಡಿರುವ ಪಾಕ್‍ಗೆ ನಾಚಿಕೆಯಾಗಬೇಕು – ಸೂಫಿ ಸಂತರು

    ಶ್ರೀನಗರ: ಮುಸ್ಲಿಮರಿಗೆ ಭಾರತ ಬಿಟ್ಟು ಸುರಕ್ಷಿತವಾದ ಸ್ಥಳ ಮತ್ತೊಂದಿಲ್ಲ. ಜಿಹಾದ್‍ಗಾಗಿ ಕರೆ ನೀಡಿರುವ ಪಾಕಿಸ್ತಾನದ ಕ್ರಮ ನಾಚಿಕೆಗೇಡಿನ ಸಂಗತಿ ಎಂದು ಸೂಫಿ ನಿಯೋಗ ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

    ಕಾಶ್ಮೀರದ ಕಣಿವೆಯಲ್ಲಿ ವಿವಿಧ ಧರ್ಮದ ಜನರನ್ನು ಭೇಟಿಯಾದ ನಂತರ ಇಸ್ಲಾಮಿಕ್ ವಿದ್ವಾಂಸರನ್ನೊಳಗೊಂಡ ಸೂಫಿ ನಿಯೋಗವು ಮಾಧ್ಯಮಗಳ ಜೊತೆ ಮಾತನಾಡಿ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿತು. ಜಿಹಾದ್‍ಗೆ ಕರೆ ನೀಡಿರುವ ಇಮ್ರಾನ್ ಖಾನ್ ನಿರ್ಧಾರ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದೆ.

    ಪಾಕಿಸ್ತಾನ ಸುಳ್ಳು ಪ್ರಚಾರವು ಯುದ್ಧದ ಪರಿಸ್ಥಿತಿಯನ್ನು ನಿರ್ಮಿಸುತ್ತಿದೆ. ಇದರಿಂದಾಗಿ ಅಭಿವೃದ್ಧಿ, ಸಮೃದ್ಧಿ ಬದಲಿಗೆ ಅಮಾನವೀಯತೆ ಇನ್ನೊಂದೆಡೆ ಸಂಕಟವನ್ನು ಎದುರಿಸುತ್ತಿದೆ. ಮುಸ್ಲಿಮರಿಗೆ ಭಾರತ ಅತ್ಯತ್ತಮ ದೇಶ, ಜಿಹಾದ್‍ಗಾಗಿ ಪಾಕಿಸ್ತಾನದ ಪ್ರಧಾನಿ ಕರೆ ನಾಚಿಕೆಗೇಡಿನ ಸಂಗತಿ. ಪಾಕಿಸ್ತಾನಕ್ಕೆ ಯುದ್ಧದಲ್ಲಿ ಆಸಕ್ತಿ ಇದ್ದರೆ ಪ್ಯಾಲೆಸ್ತೈನ್ ಅಥವಾ ಚೀನಾದಲ್ಲಿ ಹೋರಾಡಬೇಕು. ನಮಗೆ ಅವರ ಸಲಹೆ ಅಗತ್ಯವಿಲ್ಲ ಎಂದು ಸೂಫಿ ನಿಯೋಗದ ಮುಖ್ಯಸ್ಥ ನಸೀರುದ್ದೀನ್ ಚಿಶ್ತಿ ಅವರು ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ.

    ಗಡಿಯುದ್ಧಕ್ಕೂ ಇರುವ ಜಿಹಾದ್ ವಸ್ತ್ರದಡಿಯಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಕ್ಯಾನ್ಸರ್ ಖಾಯಿಲೆಗೆ ಯಾವೊಬ್ಬ ಮುಸ್ಲಿಂ ಸಹ ಬಲಿಯಾಗಬಾರದು. ಜಮ್ಮು ಕಾಶ್ಮೀರದ ಪರಿಸ್ಥಿತಿ ಯಾವುದೇ ಧರ್ಮದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಜಮ್ಮು ಕಾಶ್ಮೀರದ ಜನತೆಗೆ ಸಲಹೆ ನೀಡಿದರು.

    ಜಮ್ಮು ಕಾಶ್ಮೀರದಲ್ಲಿ ರಾಜ್ಯ ಸರ್ಕಾರವು ಇಂದು ಪೋಸ್ಟ್ ಪೇಯ್ಡ್ ಮೊಬೈಲ್ ಸಂವಹನವನ್ನು ಪ್ರಾರಂಭಿಸಿದೆ. 370ನೇ ವಿಧಿಯನ್ನು ರದ್ದುಪಡಿಸಿದ ಹಿನ್ನಲೆಯಲ್ಲಿ ಆಗಸ್ಟ್ 5 ರಂದು ಮೊಬೈಲ್, ದೂರವಾಣಿ ಹಾಗೂ ಅಂತರ್ಜಾಲ ಸೇವೆಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿತ್ತು.