Tag: ಸೂಪರ್ ಲೀಗ್

  • ಷೇರು ಮಾರಾಟ ಮಾಡಿ ಕೇರಳ ಫುಟ್‍ಬಾಲ್ ತಂಡಕ್ಕೆ ಸಚಿನ್ ಗುಡ್‍ಬೈ

    ಷೇರು ಮಾರಾಟ ಮಾಡಿ ಕೇರಳ ಫುಟ್‍ಬಾಲ್ ತಂಡಕ್ಕೆ ಸಚಿನ್ ಗುಡ್‍ಬೈ

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಇಂಡಿಯನ್ ಸೂಪರ್ ಲೀಗ್‍ನಲ್ಲಿ ಕೇರಳ ಬ್ಲಾಸ್ಟರ್ಸ್ ಫುಟ್ಬಾಲ್ ಕ್ಲಬ್ ನಲ್ಲಿ ಹೊಂದಿದ್ದ ತಮ್ಮ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಮೂಲಕ ತಂಡದ ಸಹ ಮಾಲೀಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ.

    ಕಳೆದ ನಾಲ್ಕು ಆವೃತ್ತಿಗಳಿಂದ ಸಚಿನ್ ಕೇರಳ ಬ್ಲಾಸ್ಟರ್ಸ್ ತಂಡದ ಸಹ ಮಾಲೀಕರಾಗಿದ್ದರು. ಈ ವರ್ಷದ ಆವೃತ್ತಿ ಆರಂಭವಾಗುವ ಮುನ್ನವೇ ಸಚಿನ್ ತಮ್ಮ ಷೇರು ಮಾರಾಟ ಮಾಡಿದ್ದಾರೆ.

    ಸದ್ಯ ಸಚಿನ್‍ರ ಈ ನಿರ್ಧಾರ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಶಾಕ್ ನೀಡಿದೆ. ಏಕೆಂದರೆ ಕೇರಳ ತಂಡಕ್ಕೆ ಸಚಿನ್ ಬೆಂಬಲವಾಗಿ ನಿಂತಿದ್ದರು. ಅವರ ಅಪಾರ ಅಭಿಮಾನಿಗಳು ಕೂಡ ತಂಡವನ್ನು ಬೆಂಬಲಿಸುತ್ತಿದ್ದರು. ಇದು ಆಟಗಾರರಲ್ಲಿ ಹೆಚ್ಚಿನ ಸ್ಫೂರ್ತಿ ತುಂಬುತ್ತಿತ್ತು.

    ತಂಡದ ಮಾಲೀಕತ್ವ ತೊರೆದ ಬಳಿಕ ಮಾತನಾಡಿದ ಸಚಿನ್, ತಂಡ ಸದ್ಯ ಉತ್ತಮ ರೂಪವನ್ನು ಪಡೆದಿದ್ದು, ಸಾಧನೆಯ ದಾರಿಯಲ್ಲಿದೆ. ಈ ವೇಳೆ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿ. ಎಂದಿಗೂ ನಾನು ತಂಡದ ಪರ ಇರಲಿದ್ದೇನೆ ಎಂದು ಹಾರೈಸುವುದಾಗಿ ತಿಳಿಸಿದ್ದಾರೆ.

    ಆರಂಭದಲ್ಲಿ ಹೆಚ್ಚಿನ ಷೇರು ಹೊಂದಿದ್ದ ಸಚಿನ್ ನಂತರ ತನ್ನಲ್ಲಿದ್ದ ಷೇರುಗಳನ್ನು ಮಾರಾಟ ಮಾಡುತ್ತಾ ಬಂದಿದ್ದರು. ಕೊನೆಗೆ ಸಚಿನ್ ಬಳಿ 20% ಷೇರು ಇದ್ದರೆ, ಹೈದರಾಬಾದಿನ ಮೀಡಿಯಾ ಆಂಡ್ ಎಂಟರ್‍ಟೈನ್‍ಮೆಂಟಿನ ಪ್ರಸಾದ್ ಗ್ರೂಪ್ 80% ಷೇರು ಹೊಂದಿತ್ತು. ಸಚಿನ್ ಅವರ ಬಳಿಯಿದ್ದ ಷೇರನ್ನು ಅಂತಾರಾಷ್ಟ್ರೀಯ ಉದ್ಯಮಿ ಎಂ.ಎ. ಯೂಸುಫ್ ಆಲಿ ಅವರ ಲುಲು ಗ್ರೂಪ್ ಖರೀದಿಸಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ. ಆದರೆ ಈ ಬಗ್ಗೆ ಲುಲು ಗ್ರೂಪ್ ಆಗಲಿ ಕೇರಳ ಬ್ಲಾಸ್ಟರ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂಗ್ಲೆಂಡ್ ಸೂಪರ್ ಲೀಗ್ ಸ್ಮೃತಿ ಮಂಧಾನ ದಾಖಲೆ – 6 ಇನ್ನಿಂಗ್ಸ್, 338 ರನ್

    ಇಂಗ್ಲೆಂಡ್ ಸೂಪರ್ ಲೀಗ್ ಸ್ಮೃತಿ ಮಂಧಾನ ದಾಖಲೆ – 6 ಇನ್ನಿಂಗ್ಸ್, 338 ರನ್

    ಟೌನ್‍ಟನ್: ಇಂಗ್ಲೆಂಡ್ ನ್ ಟೌನ್‍ಟನ್ ನಲ್ಲಿ ನಡೆಯುತ್ತಿರುವ ಟಿ20 ಸೂಪರ್ ಲೀಗ್ ನಲ್ಲಿ ಭಾಗವಹಿಸಿದ ಮೊದಲ ಟೀಂ ಇಂಡಿಯಾ ಆಟಗಾರ್ತಿ ಎಂಬ ಹೆಗ್ಗಳಿಕೆ ಗಳಿಸಿದ ಸ್ಮೃತಿ ಮಂಧಾನ 6 ಇನ್ನಿಂಗ್ಸ್ ಗಳಲ್ಲಿ 328 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ.

    22 ವರ್ಷ ಮಂಧಾನ ಸೂಪರ್ ಲೀಗ್ ನ ವೆಸ್ಟರ್ನ್ ಸ್ಟೋಮ್ ತಂಡದ ಪರ ಆಡುತ್ತಿದ್ದು, ಇದುವರೆಗೂ ಆಡಿರುವ 6 ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 48, 37, 52*, 43*, 102, 56 ಗಳಿಸಿ ಟೂರ್ನಿಯಲ್ಲಿ ವೈಯಕ್ತಿಕವಾಗಿ ಅತಿಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಈ ಹಿಂದೆ 2016 ರಲ್ಲಿ ವೆಸ್ಟ್ ವಿಂಡೀಸ್ ಆಟಗಾರ್ತಿ ಸ್ಟೆಫಾನಿ ಟೇಲರ್ 289 ರನ್ ಗಳಿಸಿ ದಾಖಲೆ ಬರೆದಿದ್ದರು.

    ಟೂರ್ನಿಯಲ್ಲಿ 18 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ ದಾಖಲೆಯನ್ನು ಮಂಧಾನ ಮಾಡಿದ್ದು, ಉಳಿದಂತೆ ಐಸಿಸಿ ಮಹಿಳಾ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 4ನೇ, ಟಿ20 ಯಲ್ಲಿ 13 ಸ್ಥಾನ ಪಡೆದಿದ್ದಾರೆ.

    ಮಂಧಾನ ಬ್ಯಾಟಿಂಗ್ ಕುರಿತು ಪ್ರಶಂಸೆ ವ್ಯಕ್ತಪಡಿಸಿರುವ ವೆಸ್ಟರ್ನ್ ಸ್ಟೋಮ್ ತಂಡದ ನಾಯಕಿ ಹೀಥರ್ ನೈಟ್, ತಂಡದ ಪ್ರತಿ ಪಂದ್ಯದ ಗೆಲುವಿಗೆ ಮಂಧಾನ ಅವರ ಆಕ್ರಮಣಕಾರಿ ಆಟವೇ ಕಾರಣವಾಗಿದ್ದು, ಪ್ರತಿ ಎಸೆತವನ್ನು ಬೌಂಡರಿಗೆ ಸಿಡಿಸಲು ಯತ್ನಿಸುತ್ತಾರೆ. ಪ್ರತಿ ಎಸೆವನ್ನು ತಮಗೆ ಅನುಕೂಲವಾಗುವಂತೆ ಮಾರ್ಪಡು ಮಾಡಿಕೊಳ್ಳವುದು ಮಂಧಾನ ಬ್ಯಾಟಿಂಗ್ ಶೈಲಿಯ ವಿಶೇಷತೆ ಎಂದು ಹೊಗಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://twitter.com/SirJadejaaaa/status/1025471477049581568

  • ಪಾಕ್ ಸೂಪರ್ ಲೀಗ್ ಖಾಲಿ ಸ್ಟೇಡಿಯಂ ಫೋಟೋ ಟ್ರೋಲ್! – ಇಲ್ಲಿದೆ ಟಾಪ್ ಟ್ವೀಟ್

    ಪಾಕ್ ಸೂಪರ್ ಲೀಗ್ ಖಾಲಿ ಸ್ಟೇಡಿಯಂ ಫೋಟೋ ಟ್ರೋಲ್! – ಇಲ್ಲಿದೆ ಟಾಪ್ ಟ್ವೀಟ್

    ನವದೆಹಲಿ: ಪಾಕಿಸ್ತಾನ ಸೂಪರ್ ಕ್ರಿಕೆಟ್ ಲೀಗ್ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆಯಲು ವಿಫಲವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪಿಎಸ್‍ಎಲ್ ಲೀಗ್ ನ ಫೋಟೋಗಳು ಭಾರೀ ಟ್ರೋಲ್ ಆಗ್ತಿದೆ.

    ಭಾರತದ ಐಪಿಎಲ್ ಕ್ರಿಕೆಟ್ ಲೀಗ್ ನಿಂದ ಪ್ರೇರಣೆ ಪಡೆದ ಹಲವು ದೇಶಗಳು ಇದನ್ನು ಅನುಕರಿಸಿ ಯಶ್ವಸಿಯಾಗಿದ್ದವು. ಇದರಂತೆ ನೆರೆಯ ಪಾಕಿಸ್ತಾನವೂ ಇದೇ ಹಾದಿಯಲ್ಲಿ ಪಾಕಿಸ್ತಾನ ಸೂಪರ್ ಲೀಗ್ ಆಯೋಜಿಸಿದೆ. ಆದರೆ ಈ ಲೀಗ್ ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯಲು ವಿಫಲವಾಗಿದ್ದು, ಕ್ರೀಡಾಂಗಣದಲ್ಲಿ ಪ್ರೇಕ್ಷಕರೇ ಇಲ್ಲದೇ ಖಾಲಿ ಖಾಲಿ ಕುರ್ಚಿಗಳು ಕಾಣಸಿಗುತ್ತಿದೆ.

    ಪಾಕಿಸ್ತಾನ ಈಗಾಗಲೇ ಮೂರು ಆವೃತ್ತಿಯ ಸೂಪರ್ ಲೀಗ್ ಆಯೋಜಿಸಿದೆ. ಕಳೆದ ಬಾರಿ ಯುಎಇ ನಲ್ಲಿ ಲೀಗ್ ಏರ್ಪಡಿಸಲಾಗಿತ್ತು. ಆದರೆ ಅಲ್ಲಿ ಅಭಿಮಾನಿಗಳನ್ನು ಸೆಳೆಯಲು ಆಯೋಜಕರು ವಿಫಲವಾಗಿದ್ದರು. ಇದರಿಂದ ಪ್ರಸ್ತುತ ಲೀಗ್ ದುಬೈನಲ್ಲಿ ನಡೆಸುತ್ತಿದ್ದು, ಇಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಲಿ ಖಾಲಿ ಕ್ರೀಡಾಂಗಣದಲ್ಲಿ ಬೆರಳೆಣಿಕೆಯಷ್ಟು ಪ್ರೇಕ್ಷಕರೊಂದಿಗೆ ನಡೆಯುತ್ತಿರುವ ಪಂದ್ಯಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.

    ಟ್ವಿಟ್ಟರಿಗರು ಖಾಲಿ ಕ್ರೀಡಾಂಗಣದ ಫೋಟೋಗಳಿಗೆ ಹಾಸ್ಯವನ್ನು ಲೇಪಿಸಿ ತಮ್ಮದೇ ವಿಭಿನ್ನ ಶೈಲಿಯಲ್ಲಿ ಟ್ವೀಟ್ ಮಾಡುತ್ತಿದ್ದಾರೆ.

    https://twitter.com/James_Beyond/status/967997773860737026?

    https://twitter.com/Woh_ladka/status/968020622231060481?

    https://twitter.com/RamratanGodara/status/967365061550383104?