Tag: ಸೂಪರ್ ಬೈಕ್

  • ಕ್ರೇಜ್‌ಗಾಗಿ 300km ವೇಗದಲ್ಲಿ ಸೂಪರ್‌ ಬೈಕ್‌ ರೈಡಿಂಗ್‌ – ಯೂಟ್ಯೂಬರ್‌ ಸಾವು

    ಕ್ರೇಜ್‌ಗಾಗಿ 300km ವೇಗದಲ್ಲಿ ಸೂಪರ್‌ ಬೈಕ್‌ ರೈಡಿಂಗ್‌ – ಯೂಟ್ಯೂಬರ್‌ ಸಾವು

    ಲಕ್ನೋ: ತನ್ನ ಯೂಟ್ಯೂಬ್‌ ಚಾನೆಲ್‌ಗೆ ವೀಡಿಯೋ ಮಾಡುವ ಸಲುವಾಗಿ 300 ಕಿಮೀ ವೇಗದಲ್ಲಿ ಬೈಕ್‌ (SuperBike) ಚಲಿಸುತ್ತಿದ್ದಾಗ ಭೀಕರ ಅಪಘಾತಕ್ಕೀಡಾಗಿ ಯೂಟ್ಯೂಬರ್‌ (YouTuber) ಸಾನ್ನಪ್ಪಿರುವ ಘಟನೆ ಉತ್ತರಪ್ರದೇಶದ (UttarPradesh) ಯಮುನಾ ಎಕ್ಸ್‌ಪ್ರೆಸ್‌ವೇ ನಲ್ಲಿ ನಡೆದಿದೆ.

    ಯೂಟ್ಯೂಬರ್‌ ಅಗಸ್ತೆ ಚೌಹಾಣ್‌ ಕವಾಸಕಿ ನಿಂಜಾ ZX10R – 1,000CC ಸೂಪರ್ ಬೈಕ್ ನಲ್ಲಿ ಆಗ್ರಾದಿಂದ ದೆಹಲಿಗೆ ಬರುತ್ತಿದ್ದ ವೇಳೆ ತನ್ನ ಚಾನೆಲ್‌ಗಾಗಿ ವೀಡಿಯೋ ಮಾಡುತ್ತಿದ್ದನು. ಅದಕ್ಕಾಗಿ 300 ಕಿಮೀ ವೇಗದಲ್ಲಿ ಬೈಕ್‌ ಚಾಲನೆ ಮಾಡುತ್ತಿದ್ದಾಗ ಭೀಕರ ಅಪಘಾತಕ್ಕೀಡಾಗಿದ್ದಾನೆ. ಸ್ನೇಹಿತರು ಸಾವಿನ ಸುದ್ದಿ ಕೇಳಿ ಆತಂಕಗೊಂಡಿದ್ದಾರೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ ಪ್ರಕರಣ – ಉಗ್ರರನ್ನು ಸುತ್ತುವರಿದ ಸೇನೆ, ಇಬ್ಬರು ಯೋಧರು ಸಾವು

    ಮೂಲಗಳ ಪ್ರಕಾರ, ಯೂಟ್ಯೂಬರ್‌ ಬೈಕ್‌ ನಿಯಂತ್ರಣ ತಪ್ಪಿ ಯಮುನಾ ಎಕ್ಸ್‌ಪ್ರೆಸ್‌ವೇ ಡಿವೈಡರ್‌ಗೆ ಡಿಕ್ಕಿ ಹೊಡೆದ್ದಾನೆ. ಬೈಕ್‌ ಡಿಕ್ಕಿ ಹೊಡೆದ ರಭಸಕ್ಕೆ ಹೆಲ್ಮೆಟ್‌ ತುಂಡುತುಂಡಾಗಿದೆ, ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಅಲಿಘರ್‌ನ ತಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯ 47 ಮೈಲ್ ಪಾಯಿಂಟ್‌ನಲ್ಲಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಒಂದು ಸೆಕೆಂಡ್‌ನಲ್ಲಿ ನಿನ್ನನ್ನು ಭಯೋತ್ಪಾದಕ ಅಂತ ಘೋಷಿಸುತ್ತೇನೆ – ಶಿಕ್ಷಕನಿಗೆ ಬಿಹಾರ ಪೊಲೀಸ್ ಬೆದರಿಕೆ

    ಅಗಸ್ತೆ ಉತ್ತರಾಖಂಡದ ಡೆಹ್ರಾಡೂನ್ ನಿವಾಸಿಯಾಗಿದ್ದು, ʻಪ್ರೊ ರೈಡರ್ 1000ʼ ಎಂಬ ಶೀರ್ಷಿಕೆಯ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಸುಮಾರು 12 ಲಕ್ಷ ಚಂದಾದಾರರನ್ನ ಹೊಂದಿದ್ದ. ತಾನು ದೆಹಲಿಗೆ ಹೋಗುತ್ತಿರುವುದಾಗಿ ತನ್ನ ಚಾನೆಲ್‌ಗೆ ಕೊನೆಯ ವೀಡಿಯೋ ಅಪ್ಲೋಡ್‌ ಮಾಡಿದ್ದ. ದೆಹಲಿಗೆ ಮತ್ತೆ ಮರಳುವಾಗ ನಾನು 300 ಕಿಮೀ ವೇಗದಲ್ಲಿ ಬೈಕ್‌ ಓಡಿಸುವುದನ್ನ ತೋರಿಸುತ್ತೇನೆ ಎಂದು ಹೇಳಿದ್ದ. ಅದಕ್ಕಾಗಿ ವೀಡಿಯೋ ಮಾಡಲು ಹೋಗಿ ಬೈಕ್‌ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಯೂಟ್ಯೂಬರ್‌ ಸಾವಿನ ಸುದ್ದಿ ಕೇಳಿದ ನೆಟ್ಟಿಗರು ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್‌ ವೇಗಳಲ್ಲಿ ಬೈಕ್‌ ಓಡಿಸುವ ಮುನ್ನ ಎಚ್ಚರಿಕೆ ವಹಿಸಬೇಕು. ಬೈಕ್‌ ಸ್ಟಂಟ್‌ ಮಾಡುವುದು, ಅತೀ ವೇಗವಾಗಿ ಚಲಿಸುವುದು ಹಾಗೂ ಬೈಕ್‌ ಚಾಲನೆ ಮಾಡುವಾಗ ಮೊಬೈಲ್‌ ಬಳಕೆ ಮಾಡುವುದನ್ನು ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

  • ಗೆಳೆಯರ ಜೊತೆ ‘ರಾಬರ್ಟ್’ ಬೈಕ್ ರೈಡ್ – 3 ದಿನ ಮಡಿಕೇರಿಯಲ್ಲಿ ಸಾರಥಿ

    ಗೆಳೆಯರ ಜೊತೆ ‘ರಾಬರ್ಟ್’ ಬೈಕ್ ರೈಡ್ – 3 ದಿನ ಮಡಿಕೇರಿಯಲ್ಲಿ ಸಾರಥಿ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಚಿತ್ರರಂಗದ ಗೆಳೆಯರು ಮತ್ತು ಕೆಲ ಬಾಲ್ಯದ ಸ್ನೇಹಿತರ ಜೊತೆಗೆ ಜಾಲಿಯಾಗಿ ಬೈಕ್ ರೈಡ್ ಹೋಗಿದ್ದಾರೆ.

    ದರ್ಶನ್ ಅವರು ಆಗಾಗ ಟ್ರಿಪ್ ಹೋಗುತ್ತಿರುತ್ತಾರೆ. ಅದರಲ್ಲೂ ಕಾರು, ಬೈಕಿನ ಮೇಲೆ ಹೆಚ್ಚಿನ ಕ್ರೇಜ್ ಹೊಂದಿರುವ ಡಿಬಾಸ್, ಗೆಳೆಯರ ಜೊತೆ ವರ್ಷಕ್ಕೆ ಒಂದು ಬಾರಿ ಟ್ರಿಪ್ ಹೋಗುತ್ತಾರೆ. ಅಂತಯೇ ಈ ಬಾರಿ ಕೂಡ ತಮ್ಮ 15ಕ್ಕೂ ಹೆಚ್ಚು ಮಂದಿ ಗೆಳೆಯರೊಂದಿಗೆ ಮಡಿಕೇರಿಗೆ ಮೂರು ದಿನದ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ.

    ಇಂದು ಆರ್.ಆರ್ ನಗರದ ನಿವಾಸದಿಂದ ಸಾರಥಿಯ ನೇತೃತ್ವದಲ್ಲೇ ನಟ ಚಿಕ್ಕಣ್ಣ, ನಿರ್ಮಾಪಕ ಉಮಾಪತಿ, ಪ್ರಜ್ವಲ್ ದೇವರಾಜ್, ಪ್ರಣಮ್ ದೇವರಾಜ್ ಮತ್ತು ಚಿಂಗಾರಿಯ ಬಾಲ್ಯದ ಗೆಳೆಯರು ಮಡಿಕೇರಿ ಕಡೆ ಹೋಗಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಡಿಬಾಸ್ ಮತ್ತವರ ಸ್ನೇಹಿತರು ಅಲ್ಲೇ ತಂಗಲಿದ್ದಾರೆ. ದರ್ಶನ್ ಅವರು ಟ್ರಿಪ್ ಹೊರಟಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

    ದರ್ಶನ್ ಅವರ ನಿವಾಸದ ಮುಂದೆ ಸುಮಾರು 15ಕ್ಕೂ ಹೆಚ್ಚಿನ ಬೈಕ್‍ಗಳು ನಿಂತಿರುವ ಫೋಟೋಗಳು ಮತ್ತು ಅವರು ಮನೆಯಿಂದ ಸೂಪರ್ ಬೈಕಿನಲ್ಲಿ ಹೋಗುತ್ತಿರುವ ವಿಡಿಯೋಗಳನ್ನು ಅವರ ಅಭಿಮಾನಿಗಳು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಡಿ ಬಾಸ್ ತಮ್ಮ ನೀಲಿ ಬಣ್ಣದ ಬೈಕಿನಲ್ಲಿ ಕಪ್ಪು ಜಾಕೆಟ್ ತೊಟ್ಟು ರೈಡ್‍ಗೆ ಹೋಗಿದ್ದಾರೆ. ಇದರ ಜೊತೆಗೆ ಪ್ರಜ್ವಲ್ ದೇವರಾಜ್ ಅವರು ತಾವು ರೈಡಿಗೆ ಸಿದ್ಧವಾಗಿರುವ ಫೋಟೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

  • ಸೂಪರ್ ಬೈಕ್ ಚಾಲನೆ ಮಾಡ್ತಿದ್ದಾಗ ಅಪಘಾತ- ಹೆಲ್ಮೆಟ್ ತೆಗೆಯಲಾಗದೆ ವ್ಯಕ್ತಿ ಸಾವು

    ಸೂಪರ್ ಬೈಕ್ ಚಾಲನೆ ಮಾಡ್ತಿದ್ದಾಗ ಅಪಘಾತ- ಹೆಲ್ಮೆಟ್ ತೆಗೆಯಲಾಗದೆ ವ್ಯಕ್ತಿ ಸಾವು

    ಜೈಪುರ: 30 ವರ್ಷದ ವ್ಯಕ್ತಿಯೊಬ್ಬರು ಸೂಪರ್ ಬೈಕ್ ಚಾಲನೆ ಮಾಡುತ್ತಿದ್ದಾಗ ಅಪಘಾತಕ್ಕೀಡಾಗಿ ಸಾವನ್ನಪ್ಪಿರೋ ಘಟನೆ ಬುಧವಾರದಂದು ರಾಜಸ್ಥಾನದ ಜೈಪುರ್‍ನಲ್ಲಿ ನಡೆದಿದೆ.

    ಬೈಕರ್ ರೋಹಿತ್ ಸಿಂಗ್ ಶೆಖಾವತ್ ಬುಧವಾರ ರಾತ್ರಿ ತನ್ನ ಸೂಪರ್ ಬೈಕ್, ಕವಾಸಾಕಿ ನಿಂಜಾ ಝೆಡ್‍ಎಕ್ಸ್ 10ಆರ್ ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ರೋಹಿತ್ ಧರಿಸಿದ್ದ ಹೆಲ್ಮೆಟ್ ತೆಗೆಯಲಾಗದ ಕಾರಣ ಬ್ರೇನ್ ಹ್ಯಾಮೊರೇಜ್ (ಮೆದುಳಿನ ರಕ್ತಸ್ರಾವ)ದಿಂದ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

    ರೋಹಿತ್ ಆಟೋಮೋಟಿವ್ ಸಂಸ್ಥೆಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದರು. ಅವರ ಬೈಕ್ ಸುಮಾರು 22 ಲಕ್ಷ ರೂ ಮೌಲ್ಯದ್ದಾಗಿದ್ದು, ಗಂಟೆಗೆ 300 ಕಿ.ಮೀ ನಷ್ಟು ವೇಗವನ್ನ ತಲುಪುವ ಸಾಮರ್ಥ್ಯ ಹೊಂದಿದೆ. ಕೆಲವು ವರದಿಗಳ ಪ್ರಕಾರ ರೋಹಿತ್ 50 ಸಾವಿರ ರೂ. ಮೌಲ್ಯದ ಇಂಪೋರ್ಟೆಡ್ ಹೆಲ್ಮೆಟ್ ಧರಿಸಿದ್ದರು. ಅತೀ ವೇಗದಲ್ಲಿ ಚಾಲನೆ ಮಾಡುವಾಗಲೂ ಅಲುಗಾಡದಂತೆ ಈ ಹೆಲ್ಮೆಟ್ ವಿನ್ಯಾಸ ಮಾಡಲಾಗಿರುತ್ತದೆ.

    ರೋಹಿತ್ ಅವರು ಇಲ್ಲಿನ ಜೆಎಲ್‍ಎನ್ ಮಾರ್ಗ್‍ನಲ್ಲಿ ಹೋಗುವಾಗ ರಸ್ತೆ ದಾಟುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆಯೋದು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ಕಳೆದುಕೊಂಡಿದ್ದಾರೆ. ಈ ವೇಳೆ ರಸ್ತೆ ದಾಟುತ್ತಿದ್ದವರಿಗೆ ಗುದ್ದಿದ್ದು, ಬೈಕ್ ಸ್ಕಿಡ್ ಆಗಿ ಸುಮಾರು 50 ಅಡಿಗಳಷ್ಟು ದೂರ ರೋಹಿತ್‍ರನ್ನ ಎಳೆದುಕೊಂಡು ಹೋಗಿದೆ.

    ರಸ್ತೆ ಮೇಲೆ ಬಿದ್ದಿದ್ದ ರೋಹಿತ್‍ಗೆ ತೀವ್ರ ರಕ್ತಸ್ರಾವವಾಗಿದ್ದು, ಸ್ಥಳದಲ್ಲಿದ್ದವರು ರೋಹಿತ್ ಧರಿಸಿದ್ದ ಹೆಲ್ಮೆಟ್ ತೆಗೆಯಲು ಪ್ರಯತ್ನಿಸಿದ್ದಾರೆ. ಆದ್ರೆ ಹೆಲ್ಮೆಟ್ ತೆಗೆಯಲು ಆಗಿರಲಿಲ್ಲ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ವೈದ್ಯರು ಹೆಲ್ಮೆಟ್ ಕಟ್ ಮಾಡಿ ತೆಗೆಯಬೇಕಾಯ್ತು ಎಂದು ವರದಿಯಾಗಿದೆ.

    ಅತ್ತ ರೋಹಿತ್ ಅವರ ಬೈಕ್ ಗುದ್ದಿದ ವ್ಯಕ್ತಿಗೂ ಗಂಭೀರ ಗಾಯಗಳಾಗಿವೆ. ರೋಹಿತ್ ಅವರ ಬೈಕ್ ನಜ್ಜುಗುಜ್ಜಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.