Tag: ಸೂಪರ್ ಟೆನ್ ಕ್ರಿಕೆಟ್ ಲೀಗ್

  • ಸೂಪರ್ ಟೆನ್ ಲೀಗ್‍ನಲ್ಲಿ ಗೇಲ್ ಜೊತೆ ಬ್ಯಾಟ್‍ ಬೀಸಲಿದ್ದಾರೆ ಕಿಚ್ಚ ಸುದೀಪ್

    ಸೂಪರ್ ಟೆನ್ ಲೀಗ್‍ನಲ್ಲಿ ಗೇಲ್ ಜೊತೆ ಬ್ಯಾಟ್‍ ಬೀಸಲಿದ್ದಾರೆ ಕಿಚ್ಚ ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್ (Sandalwood) ಖ್ಯಾತ ನಟ ಕಿಚ್ಚ ಸುದೀಪ್ (Kichcha Sudeep) ಮತ್ತು ವೆಸ್ಟ್ ಇಂಡೀಸ್‍ನ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ (Chris Gayle) ಸೂಪರ್ ಟೆನ್ ಕ್ರಿಕೆಟ್ ಲೀಗ್‍ನಲ್ಲಿ (Super Ten League) ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

    ಸೂಪರ್ ಟೆನ್ ಕ್ರಿಕೆಟ್ ಲೀಗ್‍ನಲ್ಲಿ ಸೆಲೆಬ್ರಿಟಿಗಳು ಮತ್ತು ವಿಶ್ವದ ಮಾಜಿ ಕ್ರಿಕೆಟ್ ಆಟಗಾರರು ಜೊತೆ ಸೇರಿ ಆಡಲಿದ್ದಾರೆ. 10 ಓವರ್‌ಗಳ ಸ್ವರೂಪದ ಕ್ರಿಕೆಟ್ ಲೀಗ್ ಇದಾಗಿದ್ದು, 2 ದಿನ ಬೆಂಗಳೂರಿನಲ್ಲಿ ಸೂಪರ್ ಟೆನ್ ಲೀಗ್ ನಡೆಸಲು ಈಗಾಗಲೇ ಸಿದ್ಧತೆ ಆರಂಭವಾಗಿದೆ. ಕ್ರಿಕೆಟ್ ಲೀಗ್‍ನಲ್ಲಿ ಬಾಲಿವುಡ್ (Bollywood), ಕನ್ನಡ (Kannada), ತಮಿಳು (Tamil)  ಮತ್ತು ತೆಲುಗು (Telugu)  ಚಿತ್ರರಂಗದ ನಟರು ಮತ್ತು ವಿಶ್ವದ ಮಾಜಿ ಕ್ರಿಕೆಟಿಗರು ಒಟ್ಟಿಗೆ ಸೇರಿ ಕ್ರಿಕೆಟ್ ಟೂರ್ನಿ ಆಡಲಿದ್ದಾರೆ. ಇದನ್ನೂ ಓದಿ: ಶಿಫಾಲಿ, ದೀಪ್ತಿ ಆಟಕ್ಕೆ ಥಾಯ್ಲೆಂಡ್‌ ಥಂಡಾ – ಏಷ್ಯಾಕಪ್ ಫೈನಲ್‍ಗೆ ಭಾರತ

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಗೇಲ್, ಜಗತ್ತಿನಾದ್ಯಂತ ಇರುವ ನನ್ನ ಕ್ರಿಕೆಟ್ ಗೆಳೆಯರು ಮತ್ತು ಚಿತ್ರರಂಗದಲ್ಲಿರುವ ದಿಗ್ಗಜರೊಂದಿಗೆ ಕ್ರಿಕೆಟ್ ಆಡಲು ಉತ್ಸುಕನಾಗಿದ್ದೇನೆ. ಪಂದ್ಯಾವಳಿಯು ಸೂಪರ್ 10 ಮಾದರಿಯಲ್ಲಿ ಇರಲಿದ್ದು, ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಬುಮ್ರಾ ಬದಲು ಶಮಿ, ಚಹರ್ ಔಟ್ – ಆಸ್ಟ್ರೇಲಿಯಾಗೆ ಹಾರಲಿದ್ದಾರೆ ಶಾರ್ದೂಲ್, ಸಿರಾಜ್

    ನಮ್ಮ ದೇಶ ಕ್ರಿಕೆಟ್ ಆಟವನ್ನು ತುಂಬಾ ಪ್ರೀತಿಸುತ್ತದೆ. ಇದೀಗ ಮಾಜಿ ಕ್ರಿಕೆಟಿಗರು, ಚಿತ್ರರಂಗದ ಗೆಳೆಯರು ಮತ್ತು ಉದ್ಯಮಿಗಳೊಂದಿಗೆ ಕ್ರಿಕೆಟ್ ಟೂರ್ನಿ ನಡೆಸಲು ಮುಂದಾಗಿದ್ದೇವೆ. ಸ್ಪರ್ಧಾತ್ಮಕ ಕ್ರಿಕೆಟ್‌ ಟೂರ್ನಿಯ ಮೂಲಕ ಇನ್ನಷ್ಟು ಮನರಂಜನೆ ಸಿಗಲಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]