Tag: ಸೂನು ಸೂದ್

  • IAS ಆಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ ನೀಡಿದ ಸೋನು ಸೂದ್

    IAS ಆಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ ನೀಡಿದ ಸೋನು ಸೂದ್

    ಮುಂಬೈ: ಬಾಲಿವುಡ್ ನಟ ಸೋನು ಸೂದ್ IAS ಕಾಂಕ್ಷಿಗಳಿಗೆ ಫ್ರೀ ಕೋಚಿಂಗ್ ಆಫರ್ ನೀಡುವ ಮೂಲಕವಾಗಿ ಮತ್ತೊಂದು ನೆರವನ್ನು ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತ ಅಭಿಮಾನಿಗಳು ಸೋನು ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

    ಕೊರೊನಾ ಬಂದಾಗಿನಿಂದ ಹಾಗೂ ಲಾಕ್‍ಡೌನ್ ಆದಾಗಿನಿಂದ ಸಾಮನ್ಯ ಜನರಿಗೆ ವಾಲಿವುಡ್ ನಟ ಸೋನು ಸೂದ್ ಒಂದಿಲ್ಲೊಂದು ಸಹಾಯ ಮಾಡುತ್ತ ಬಂದಿದ್ದಾರೆ. ಇದೀಗ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಇದನ್ನೂ ಓದಿ :700 ಕಿ.ಮೀ ಪಾದಯಾತ್ರೆ ಮಾಡಿದ ಅಭಿಮಾನಿ – ಮೆಚ್ಚುಗೆ ಜೊತೆಗೆ ಸೋನು ಬುದ್ಧಿವಾದ

    ದೆಹಲಿಯ ಯುವ ಸಂಘಟನೆಯ ದಿಯಾ ಹಾಗೂ ಸೋನು ಸೂದ್ ಒಟ್ಟಾಗಿ ಸಂಭವಂ ಎಂಬ ಯೋಜನೆ ಒಂದನ್ನು ಲಾಂಚ್ ಮಾಡಿದ್ದಾರೆ. ಇದರ ಅಡಿಯಲ್ಲಿ ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಲು ಸಿದ್ಧವಾಗುತ್ತಿರುವ ಆಕಾಂಕ್ಷಿಗಳಿಗೆ ಉಚಿತವಾಗಿ ಕೋಚಿಂಗ್ ಸ್ಕಾಲರ್ ಶಿಪ್ ನೀಡಲಾಗುತ್ತದೆ.

    ಐಎಎಸ್ ತಯಾರಿ ಮಾಡಬೇಕಾ ನೀವು? ಕೋಚೀಂಗ್ ಪಡೆಯಲು ಬಯಸುವವರು www.SoodCharityFoundation.org ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ಜೂನ್ 30 ರಿಜಿಸ್ಟ್ರೇಷನ್‍ಗೆ ಕೊನೆಯ ದಿನವಾಗಿದೆ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.

    ಸೋನು ಸೂದ್‍ಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವಂತೆ ನೆಟ್ಟಿಗರ ಒತ್ತಾಯ:

    ತೆರೆಮೇಲೆ ಅನೇಕ ಸಿನಿಮಾಗಳಲ್ಲಿ ಖಳನಾಯಕನಾಗಿ ಅಭಿನಯಿಸಿರುವ ನಟ ಸೋನು ಸೂದ್ ನಿಜ ಜೀವನದಲ್ಲಿ ಹಲವರ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ. ಕಳೆದ ಬಾರಿ ಕೋವಿಡ್ ಲಾಕ್‍ಡೌನ್ ವೇಳೆ ನೂರಾರು ವಲಸೆ ಕಾರ್ಮಿಕರ ಕಷ್ಟಕ್ಕೆ ಮಿಡಿದ ಸೋನು ಸೂದ್ ಈ ಬಾರಿ ಸೋಂಕಿತರ ಜೀವ ಉಳಿಸಲು ಹಗಲು ರಾತ್ರಿ ಎನ್ನದೆ ಶ್ರಮ ವಹಿಸಿದ್ದದ್ದಾರೆ. ಮಾನವೀಯತೆ ಮೆರೆದ ಸೋನು ಸೂದ್‍ಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮವಿಭೂಷಣ’ ನೀಡುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.

    ನಟ ಸೋನು ಸೂದ್‍ಗೆ ‘ಪದ್ಮವಿಭೂಷಣ’ ಪ್ರಶಸ್ತಿ ನೀಡಬೇಕೆಂದು ನೆಟ್ಟಿಗರು  #PadmaVibhushanForSonuSood ಹ್ಯಾಶ್‍ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ. ಅನೇಕರಿಗೆ ಸಹಾಯ ಮಾಡಿರುವ ಸೋನು ಸೂದ್‍ರನ್ನ ಗುರುತಿಸಿ ಭಾರತ ಸರ್ಕಾರ ಪದ್ಮವಿಭೂಷಣ ಪುರಸ್ಕಾರ ನೀಡಲೇಬೇಕು ಎಂದು ಟ್ವೀಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

    135 ಕೋಟಿ ಭಾರತೀಯರ ಪ್ರೀತಿಯೇ ನನಗೆ ಅತ್ಯಂತ ದೊಡ್ಡ ಪ್ರಶಸ್ತಿ. ಇದನ್ನು ನಾನು ಈಗಾಗಲೇ ಸ್ಕೀಕರಿಸಿದ್ದೇನೆ ಎಂದು ಸೋನು ಟ್ವೀಟ್ ಮಾಡಿ ಎಲ್ಲರ ಹೃದಯ ಗೆದ್ದಿದ್ದಾರೆ.

  • ಬಿಜೆಪಿ ಟಿಕೆಟ್ ಕೊಡಿಸುವಂತೆ ಹೇಳಿದ ಅಭಿಮಾನಿಗೆ ಸೋನು ಸೂದ್ ಖಡಕ್ ಉತ್ತರ

    ಬಿಜೆಪಿ ಟಿಕೆಟ್ ಕೊಡಿಸುವಂತೆ ಹೇಳಿದ ಅಭಿಮಾನಿಗೆ ಸೋನು ಸೂದ್ ಖಡಕ್ ಉತ್ತರ

    ಮುಂಬೈ: ಸಂಕಷ್ಟದಲ್ಲಿದ್ದವರಿಗೆ ಸದಾ ಸಹಾಯ ಹಸ್ತ ಚಾಚುತ್ತಿರುವ ಬಾಲಿವುಡ್ ನಟ ಸೋನು ಸೂದ್ ಅವರು ಅಭಿಮಾನಿಯೊಬ್ಬನ ಪ್ರಶ್ನೆಗೆ ಖಡಕ್ ಉತ್ತರ ನೀಡಿರುವುದು ಸದ್ಯ ವೈರಲ್ ಆಗಿದೆ.

    ಟ್ವಿಟ್ಟರ್ ಬಳಕೆದಾರನೊಬ್ಬ ಸೋನು ಸೂದ್ ಬಳಿ ನನಗೆ ಬಿಜೆಪಿ ಟಿಕೆಟ್ ಕೊಡಿಸಿ ಎಂದು ಕೇಳಿದ್ದಾನೆ. ಇದಕ್ಕೆ ನಟ ಉತ್ತರಿಸಿರುವ ಪರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿ ಸೋನು ಸೂದ್ ಅವರಿಗೆ ಟ್ವೀಟ್ ಮಾಡಿ, ಸರ್ ನಾನು ಬಿಹಾರದ ಭಾಗಲ್ಪುರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜನರ ಸೇವೆ ಮಾಡಲು ಬಯಸಿರುತ್ತೇನೆ. ಹೀಗಾಗಿ ದಯವಿಟ್ಟು ನೀವು ನನಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿ ಎಂದು ಹೇಳಿದ್ದಾನೆ.

    ಅಭಿಮಾನಿಯ ಟ್ವೀಟ್ ಗೆ ಉತ್ತರಿಸಿರುವ ಸೋನು ಸೂದ್, ಬಸ್, ರೈಲು ಹಾಗೂ ವಿಮಾನ ಟಿಕೆಟ್ ಗಳನ್ನು ಹೊರತುಪಡಿಸಿ ಬೇರೆ ಟಿಕೆಟ್ ಗಳನ್ನು ಹೇಗೆ ವ್ಯವಸ್ಥೆ ಮಾಡುವುದು ಎಂದು ನನಗೆ ತಿಳಿದಿಲ್ಲ ಸಹೋದರ ಎಂದು ಖಡಕ್ಕಾಗಿ ತಿಳಿಸಿದ್ದಾರೆ. ಇದನ್ನೂ ಓದಿ; ಕೊಟ್ಟ ಮಾತಿನಂತೆ ನಡೆದ ಸೋನು ಸೂದ್ – ಯಾದಗಿರಿಯ ಕುಟುಂಬಕ್ಕೆ ಬಂತು ದಿನಸಿ

    ಈ ಹಿಂದೆ ಯುವಕನೊಬ್ಬ ಸೋನು ಸೂದ್ ಬಳಿ ಐ-ಫೋನ್‍ಗಾಗಿ ಬೇಡಿಕೆ ಇಟ್ಟಿದ್ದನು. ನನಗೆ ಐ-ಫೋನ್ ಕೊಡಿಸಿ, ಈ ಬಗ್ಗೆ ನಾನು ನಿಮಗೆ 20 ಬಾರಿ ಟ್ವೀಟ್ ಮಾಡಿದ್ದೇನೆ ಎಂದು ಈಶಾನ್ ದ್ವಿವೇದಿ ಎಂಬ ಯುವಕ ಬರೆದುಕೊಂಡಿದ್ದನು. ಇದಕ್ಕೆ ಉತ್ತರ ಕೊಟ್ಟಿದ್ದ ನಟ, ನನಗೂ ಐ-ಫೋನ್ ಬೇಕು, ನಾನು ಇದಕ್ಕಾಗಿ 21 ಬಾರಿ ಟ್ವೀಟ್ ಮಾಡುವೆ ಎಂದು ಪ್ರತಿಕ್ರಿಯೆ ಕೊಟ್ಟಿದ್ದರು.

    ಕೊರೊನಾ ವೈರಸ್ ಭೀತಿಯಿಂದ ಹೇರಿದ್ದ ಲಾಕ್‍ಡೌನ್ ಸಂದರ್ಭದಲ್ಲಿ ಅನೇಕ ಮಾನವೀಯ ಕಾರ್ಯಗಳು ನಡೆದಿವೆ. ಈ ಮಧ್ಯೆ ಬಾಲಿವುಡ್ ನಟ ಸೋನು ಸೂದ್ ಅವರ ಹೆದರು ಹೆಚ್ಚಾಗಿ ಕೇಳಿಬಂದಿತ್ತು. ವಲಸೆ ಕಾರ್ಮಿಕರಿಂದ ಹಿಡಿದು ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಷ್ಟು ಮಾತ್ರವಲ್ಲದೇ ಕಷ್ಟ ಎಂದು ಬಂದವರಿಗೆ ನಟ ಸಹಾಯ ಹಸ್ತ ಚಾಚುತ್ತಲೇ ಇದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

  • ರಣ್‍ವೀರ್ ದೀಪಿಕಾರನ್ನು ಮದ್ವೆ ಆಗಿಲ್ಲ: ಸೈಫ್ ಪುತ್ರಿ ಸಾರಾ

    ರಣ್‍ವೀರ್ ದೀಪಿಕಾರನ್ನು ಮದ್ವೆ ಆಗಿಲ್ಲ: ಸೈಫ್ ಪುತ್ರಿ ಸಾರಾ

    ಮುಂಬೈ: ನವೆಂಬರ್ 14ರಂದು ಇಟಲಿಯಲ್ಲಿ ಆಪ್ತ ಬಂಧುಗಳ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ. ಮದುವೆ ಬಳಿಕ ರಣ್‍ವೀರ್ ತಮ್ಮ ಮುಂಬರುವ ಸಿಂಬಾ ಸಿನಿಮಾ ಪ್ರಚಾರದಲ್ಲಿ ಚಿತ್ರತಂಡದೊಂದಿಗೆ ಬ್ಯುಸಿಯಾಗಿದ್ದಾರೆ. ಇಂದು ನಡೆದ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದ ಸಿಂಬಾ ನಾಯಕಿ ಸಾರಾ ಅಲಿಖಾನ್, ರಣ್‍ವೀರ್ ಸರ್ ದೀಪಿಕಾರನ್ನು ಮದುವೆ ಆಗಿಲ್ಲ. ಸಿಂಹಿಣಿಯನ್ನು ಮದುವೆ ಆಗಿದ್ದಾರೆ. ಹುಷಾರ್ ಸರ್ ಎಂದು ಹೇಳುವ ಮೂಲಕ ಕಾಲೆಳೆದಿದ್ದಾರೆ.

    ಈಗಾಗಲೇ ರಣ್‍ವೀರ್ ಅವರನ್ನು ಮದುವೆ ಎಂಬ ಬಂಧನದಲ್ಲಿ ಎನ್‍ಕೌಂಟರ್ ಮಾಡಲಾಗಿದೆ. ನನ್ನ ಕಡೆಯಿಂದಲೂ ದೀಪಿಕಾ ಮತ್ತು ರಣ್‍ವೀರ್ ಸಿಂಗ್ ಅವರಿಗೆ ಮದುವೆ ಶುಭಾಶಯಗಳು ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಇದನ್ನೂ ಓದಿ: ಮಗಳ ಎದುರೇ ಪತ್ನಿ ಜೊತೆಗಿನ ಸೆಕ್ಸ್ ಲೈಫ್ ರಿವೀಲ್ ಮಾಡಿದ ಸೈಫ್!

    ರೋಹಿತ್ ಶೆಟ್ಟಿ ಆ್ಯಕ್ಷನ್ ಸಿನಿಮಾಗಳ ಕಿಂಗ್. ಶೂಟಿಂಗ್ ಸೆಟ್ ನಲ್ಲಿ ಪ್ರತಿಯೊಬ್ಬರೊಂದಿಗೆ ರೋಹಿತ್ ಸರ್ ತುಂಬಾ ಲವಲವಿಕೆಯಿಂದ ಇರುತ್ತಿದ್ದರು. ಇದೂವರೆಗೆ ನಾನು ಇಂತಹ ಒಳ್ಳೆಯ ವ್ಯಕ್ತಿಯನ್ನು ನೋಡಿಲ್ಲ. ಇಡೀ ಚಿತ್ರತಂಡವನ್ನು ತಮ್ಮ ಮಾತುಗಳಿಂದಲೇ ಎಲ್ಲರನ್ನು ಸೆಳೆಯುತ್ತಾರೆ. ಹೀಗಾಗಿ ರೋಹಿತ್ ಅವರ ಸಿನಿಮಾಗಳು ಯಶಸ್ವಿಯಾಗುತ್ತವೆ. ಇಂದು ನಾನು ಸಿಂಬಾ ಚಿತ್ರದ ಒಂದು ಭಾಗವಾಗಿದ್ದಕ್ಕೆ ಹೆಮ್ಮೆ ಅನ್ನಿಸುತ್ತದೆ ಎಂದು ಸಾರಾ ನಿರ್ದೇಶಕರನ್ನು ಹೊಗಳಿದರು.

    ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿಂಬಾ ಚಿತ್ರಕ್ಕೆ ಕರಣ್ ಜೋಹರ್, ಅಪೂರ್ವ ಮೆಹ್ತಾ, ಹೀರೂ ಯಶ್ ಜೋಹರ್ ಬಂಡವಾಳ ಹಾಕಿದ್ದಾರೆ. ರಣ್‍ವೀರ್ ಸಿಂಗ್, ಸಾರಾ ಅಲಿಖಾನ್ ಮತ್ತು ಸೂನು ಸೂದ್ ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ. ಚಿತ್ರ ಇದೇ ತಿಂಗಳು 28ರಂದು ಬಿಡುಗಡೆ ಆಗಲಿದೆ.

    https://www.youtube.com/watch?v=V1OnAADB8hY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv