ಆನೇಕಲ್: ಸೂಟ್‌ಕೇಸ್‌ನಲ್ಲಿ (Suitcase) ಅಪರಿಚಿತ ಬಾಲಕಿ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯ ಆನೇಕಲ್ (Anekal) ತಾಲೂಕಿನ ಚಂದಾಪುರ (Chandapura) ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.
ಹೊಸೂರು ಮುಖ್ಯರಸ್ತೆಗೆ ಹೊಂದಿಕೊಂಡಿರುವ ರೈಲ್ವೆ ಬ್ರಿಡ್ಜ್ ಬಳಿ ಸುಮಾರು ಹತ್ತು ವರ್ಷದ ಬಾಲಕಿಯ ಮೃತದೇಹವಿದ್ದ ಸೂಟ್‌ಕೇಸ್ ಪತ್ತೆಯಾಗಿದೆ. ಚಲಿಸುವ ರೈಲಿನಿಂದ ಸೂಟ್‌ಕೇಸ್ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಗೃಹ ಸಚಿವ ಪರಂ ಕೇಸ್‌ಗೆ ರನ್ಯಾರಾವ್ ಲಿಂಕ್?
ಚಂಢೀಗರ್: ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಸೂಟ್‌ಕೇಸ್‌ನೊಳಗೆ ಬಚ್ಚಿಟ್ಟು ಬಾಲಕರ ಹಾಸ್ಟೆಲ್‌ಗೆ ಕರೆದೊಯ್ದ ವೇಳೆ ಸಿಕ್ಕಿ ಬಿದ್ದಿರುವ ಘಟನೆ ಹರಿಯಾಣದ (Haryana) ಸೋನಿಪತ್‌ನಲ್ಲಿರುವ ಒಪಿ ಜಿಂದಾಲ್ ವಿಶ್ವವಿದ್ಯಾಲಯದಲ್ಲಿ (OP Jindal Global University) ನಡೆದಿದೆ.
A boy tried sneaking his girlfriend into a boy’s hostel in a suitcase.
ಈ ದೃಶ್ಯವನ್ನು ಸಹ ವಿದ್ಯಾರ್ಥಿನಿಯೊಬ್ಬಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 4 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದರು. ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಯನ್ನು ಹರಿಸುವ ಮೂಲಕ ತಮ್ಮ ಕಾಲೇಜು ದಿನಗಳ ಅನುಭವವನ್ನು ಬರೆದುಕೊಂಡಿದ್ದಾರೆ. ಇದನ್ನೂ ಓದಿ: UPI Down | ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ವ್ಯತ್ಯಯ – ಬ್ಯಾಂಕಿಂಗ್ ಸೇವೆಗಳ ಮೇಲೂ ಪರಿಣಾಮ
ಈ ವಿಚಾರವಾಗಿ ವಿಶ್ವವಿದ್ಯಾಲಯದ ಪಿಆರ್‌ಓ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳು ತಮಾಷೆಗಾಗಿ ಈ ರೀತಿ ಮಾಡಿದ್ದಾರೆ. ನಮ್ಮಲ್ಲಿ ಭದ್ರತಾ ಸಿಬ್ಬಂದಿ ಬಿಗಿಯಾಗಿರುವುದರಿಂದ ವಿದ್ಯಾರ್ಥಿಯನ್ನು ಹಿಡಿಯಲಾಯಿತು. ಅದು ದೊಡ್ಡ ವಿಷಯವಲ್ಲ. ನಮ್ಮ ಭದ್ರತೆ ಯಾವಾಗಲೂ ಕಟ್ಟುನಿಟ್ಟಾಗಿರುತ್ತದೆ. ಈ ಘಟನೆಯ ಬಗ್ಗೆ ಯಾರೂ ಯಾವುದೇ ರೀತಿಯ ದೂರು ದಾಖಲಿಸಿಲ್ಲ ಎಂದು ಹೇಳಿದರು.
ಬೆಂಗಳೂರು: ಹೆಂಡತಿಯನ್ನು ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿಟ್ಟು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಟೆಕ್ಕಿಯನ್ನ(Techie) ಪೊಲೀಸರು ಬೆಂಗಳೂರಿಗೆ (Bengaluru) ಕರೆತಂದಿದ್ದಾರೆ. ಸ್ವಂತ ಅತ್ತೆ ಮಗಳನ್ನ ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದ ಟೆಕ್ಕಿ, ಇದೀಗ ಕೊಲೆ ಮಾಡಿ ಪಶ್ಚಾತ್ತಾಪದಲ್ಲಿದ್ದಾನೆ.
ಪತ್ನಿ ಗೌರಿಯನ್ನು ಕೊಂದು ಸೂಟ್‌ಕೇಸ್‌ಗೆ ತುಂಬಿದ್ದ ಆರೋಪಿ ಟೆಕ್ಕಿ ರಾಕೇಶ್ ಮಹಾರಾಷ್ಟ್ರಕ್ಕೆ(Maharashtra) ಎಸ್ಕೇಪ್ ಆಗಿದ್ದ. ಶನಿವಾರ ರಾತ್ರಿಯೇ ಪೊಲೀಸರು ಆತನನ್ನ ಕೋರಮಂಗಲದ ಮ್ಯಾಜಿಸ್ಟ್ರೇಟ್ ನಿವಾಸದಲ್ಲಿ ಹಾಜರು ಪಡಿಸಿದ್ದಾರೆ. ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ಏ. 1ರಂದು ಓಪನ್ ಕೋರ್ಟ್‌ನಲ್ಲಿ ಬಾಡಿ ವಾರಂಟ್ ಮೇಲೆ ಅರ್ಜಿ ಸಲ್ಲಿಸಿ ಕಸ್ಟಡಿಗೆ ಪಡೆಯಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಕಸಕ್ಕೆ ಸೆಸ್ ಜಾರಿ – ಎಷ್ಟು ಚದರ ಕಟ್ಟಡಕ್ಕೆ ಎಷ್ಟು ತೆರಿಗೆ?
ಆರೋಪಿ ರಾಕೇಶ್, ಪತ್ನಿಯನ್ನು ಕೊಲೆ ಮಾಡಿ ಕಾರಿನಲ್ಲಿ ಮಹಾರಾಷ್ಟ್ರ ಕಡೆ ಹೊರಟಿದ್ದ. ಕರ್ನಾಟಕ-ಮಹಾರಾಷ್ಟ್ರ ಗಡಿಯ ಕಾಗಲ್ ಎಂಬಲ್ಲಿ ವಿಷ ಖರೀದಿಸಿದ್ದ. ಫಿನಾಯಿಲ್, ಜಿರಲೆ ಔಷಧಿಯನ್ನ ಖರೀದಿಸಿ ಮುಂದೆ ಶಿರವಾಲ್‌ಗೆ ಹೋಗುವ ದಾರಿಯಲ್ಲಿ ಖಂಬಟ್ಕಿ ಎಂಬಲ್ಲಿ ಕಾರು ನಿಲ್ಲಿಸಿ ವಿಷ ಸೇವಿಸಿದ್ದ. ವಿಷ ಸೇವಿಸಿದ ಕೂಡಲೇ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು.
ಈತನನ್ನ ನೋಡಿದ ಬೈಕ್ ಸವಾರರೊಬ್ಬರು ವಿಚಾರಿಸಿದ್ದಾರೆ. ಆಗ ಟೆಕ್ಕಿ, ಪತ್ನಿ ಕೊಲೆ ಮಾಡಿದ ಕಥೆ ಹೇಳಿದ್ದಾನೆ. ತಾನು ವಿಷ ಸೇವಿಸಿರೋದಾಗಿ ಹೇಳಿದ್ದ. ಬೈಕ್ ಸವಾರರು ಕೂಡಲೇ ರಾಕೇಶ್‌ನನ್ನ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ಐಸ್‌ಕ್ರೀಂ ಪ್ರಿಯರೇ ಎಚ್ಚರ – ಕೂಲ್‌ಕೂಲ್ ಐಸ್‌ಕ್ರೀಂನಲ್ಲೂ ಹಾನಿಕಾರಕ ಅಂಶ ಪತ್ತೆ
ಘಟನೆ ಬಗ್ಗೆ ಆರೋಪಿ ರಾಕೇಶ್ ತಂದೆ ರಾಜೇಂದ್ರ ಕೇಡೆಕರ್ ಹೇಳಿಕೆ ನೀಡಿದ್ದು, ಮೃತ ಗೌರಿ ನನ್ನ ಸಹೋದರಿಯ ಮಗಳು. ರಾಕೇಶ್ ಗೌರಿ ಮದುವೆಗೆ ನಮ್ಮ ಕುಟುಂಬದ ಒಪ್ಪಿಗೆ ಇರಲಿಲ್ಲ. ಮದುವೆ ವಿಚಾರಕ್ಕೆ ಕುಟುಂಬದ ಜೊತೆ ಗೌರಿ ಜಗಳ ಮಾಡಿಕೊಂಡಿದ್ದಳು. 2 ವರ್ಷದ ಹಿಂದೆ ವಿರೋಧದ ನಡುವೆಯೂ ಮದುವೆ ಆಗಿದ್ದರು. ಗೌರಿ ಯಾವಾಗಲೂ ನಮ್ಮ ಜೊತೆ ಜಗಳ ಆಡುತ್ತಿದ್ದಳು. ಪೊಲೀಸ್ ಠಾಣೆವರೆಗೂ ಹೋಗಿತ್ತು. ಗುರುವಾರ ಕರೆ ಮಾಡಿ ಕೊಲೆ ಬಗ್ಗೆ ಮಾಹಿತಿ ನೀಡಿದ್ದ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೈಲೆಂಟ್ ಆಗಿದ್ದ ಶಾಸಕ ಯತ್ನಾಳ್ ಫುಲ್ ವೈಲೆಂಟ್ – ವಿಜಯದಶಮಿಗೆ ಹೊಸ ಪಕ್ಷ..?
ಪತ್ನಿ ಕೊಲೆಗೆ ಕಾರಣ ಏನು ಎನ್ನುವುದನ್ನು ಆರೋಪಿ ಇನ್ನೂ ಬಾಯ್ಬಿಟ್ಟಿಲ್ಲ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಬಳಿಕ ಕೊಲೆಗೆ ನಿಖರ ಕಾರಣ ಗೊತ್ತಾಗಲಿದೆ.
ಬೀದರ್: ಬಸ್ ನಿಲ್ದಾಣದಲ್ಲಿ (Bus Stand) ಅನಾಮಧೇಯ ಸೂಟ್‌ಕೇಸ್ (Suitcase) ಪತ್ತೆಯಾಗಿದ್ದರಿಂದ ಸಾರ್ವಜನಿಕರು ಬಾಂಬ್ (Bomb) ಇದೆಯೆಂದು ಆಂತಗೊಂಡಿರುವ ಘಟನೆ ಬೀದರ್ (Bidar) ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಅನಾಮಧೇಯ ವ್ಯಕ್ತಿ ಕೇಂದ್ರ ಬಸ್ ನಿಲ್ದಾಣದಲ್ಲಿ ಸೂಟ್ ಕೇಸ್ ಬಿಟ್ಟು ಹೋಗಿದ್ದು, ಅದರಲ್ಲಿ ಬಾಂಬ್ ಇದೆಯಾ ಎಂದು ಪ್ರಯಾಣಿಕರು ಸ್ವಲ್ಪ ಸಮಯ ಆತಂಕದಲ್ಲೇ ಕಾಲ ಕಳೆದಿದ್ದಾರೆ. ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ತಕ್ಷಣವೇ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ನ್ಯೂಟೌನ್ ಪೊಲೀಸರು ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಪತ್ತೆಯಾದ ಅನಾಮಧೇಯ ಸೂಟ್‌ಕೇಸ್ ತೀವ್ರ ತಪಾಸಣೆ ಮಾಡಿ, ಕೊನೆಗೆ ಭಯದಲ್ಲೇ ಸೂಟ್‌ಕೇಸ್ ತೆರೆದು ನೋಡಿದ್ದಾರೆ. ಇದನ್ನೂ ಓದಿ: ಕೊಲೆ ಆರೋಪಿಯನ್ನು ಬಂಧಿಸಲು ಸಹಾಯ ಮಾಡಿದ ತಾರಾಗೆ ಭಾರೀ ಮೆಚ್ಚುಗೆ
ಸೂಟ್‌ಕೇಸ್ ಓಪನ್ ಮಾಡಿದಾಗ ಅದರಲ್ಲಿ ಬಟ್ಟೆಗಳು ಮಾತ್ರವೇ ಪತ್ತೆಯಾಗಿವೆ. ಯಾವುದೇ ಸ್ಫೋಟಕ ವಸ್ತುಗಳ ಪತ್ತೆಯಾಗದ ಹಿನ್ನೆಲೆ ನ್ಯೂಟೌನ್ ಪೊಲೀಸರು ಹಾಗೂ ಸಾರ್ವಜನಿಕರು ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಊಬರ್ ಚಾಲಕನಿಂದ ಹಲ್ಲೆ
ಲಕ್ನೋ: ಆಸ್ತಿ ವಿವಾದಕ್ಕಾಗಿ ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಸುತ್ತಿಗೆಯಿಂದ (Hammer) ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ (Uttar Pradesh) ಗೋರಖ್‍ಪುರದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಸೂರಜ್ ಕುಂಡ್ ಕಾಲೋನಯಲ್ಲಿ ಈ ಘಟನೆ ನಡೆದಿದೆ. ಮುರುಳಿಧರ್ ಗುಪ್ತ (62) ಮೃತ ವ್ಯಕ್ತಿ ಹಾಗೂ ಆರೋಪಿಯನ್ನು ಸಂತೋಷ್ ಕುಮಾರ್ ಗುಪ್ತಾ ಅಲಿಯಾಸ್ ಪ್ರಿನ್ಸ್ (30) ಎಂದು ಗುರುತಿಸಲಾಗಿದೆ.
ಆಸ್ತಿ ಕುರಿತು ತಂದೆ ಹಾಗೂ ಮಗನ ನಡುವೆ ಜಗಳ ನಡೆದಿದೆ. ಈ ವೇಳೆ ಮುರುಳಿಧರ್ ಒಬ್ಬನೇ ಇದ್ದುದ್ದನ್ನು ನೋಡಿದ ಸಂತೋಷ್ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಮುರುಳಿಧರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅದಾದ ಬಳಿಕ ಮುರುಳಿಧರ್‌ನ ದೇಹವನ್ನು ವಿಲೇವಾರಿ ಮಾಡಲು ದೇಹವನ್ನು ತುಂಡಾಗಿ ಕತ್ತರಿಸಿದ್ದಾನೆ. ನಂತರ ಸಂತೋಷ್ ಸಹೋದರನ ಕೊಠಡಿಯಿಂದ ಸೂಟ್‍ಕೇಸ್ (Suitcase) ಅನ್ನು ತಂದು ಶವದ ತುಂಡುಗಳನ್ನು ಅದರಲ್ಲಿ ಹಾಕಿದ್ದಾನೆ. ಸೂಟ್‍ಕೇಸ್‍ನ್ನು ಮನೆಯ ಹಿಂದಿನ ರಸ್ತೆಯಲ್ಲಿ ಬಚ್ಚಿಟ್ಟಿದ್ದಾನೆ.