Tag: ಸೂಟ್

  • ಫ್ರೆಶ್ ಲುಕ್ ನೀಡುವ ವೆಡ್ಡಿಂಗ್ ಸೂಟ್ಸ್‌ – ಏನಿದೆ ವಿಶೇಷ?

    ಫ್ರೆಶ್ ಲುಕ್ ನೀಡುವ ವೆಡ್ಡಿಂಗ್ ಸೂಟ್ಸ್‌ – ಏನಿದೆ ವಿಶೇಷ?

    ಕಾಲ ಬದಲಾದಂತೆ ಫ್ಯಾಷನ್ ಸಹ ಬದಲಾಗುತ್ತಲೇ ಇದೆ. ಕಾಲಕ್ಕೆ ಸರಿ ಹೊಂದುವ ಉಡುಪುಗಳನ್ನು ಖರೀದಿಸಿ ಧರಿಸುವ ಹುಡುಗರ ಜಾಯಮಾನವೂ ಬದಲಾಗಿದೆ. ಆಧುನಿಕತೆಗೆ ತೆರೆದುಕೊಂಡು ಯುವಕರು ಫ್ಯಾಷನ್ ವಸ್ತುಗಳನ್ನು ಧರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

    ಧರಿಸಿದ ಬಟ್ಟೆ, ತೊಡುವ ಆಭರಣ ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಂದ ಹಾಗೆ ಇದು ತೋರಿಕೆಯ ಕಾಲ. ತೋಚಿದ್ದಕ್ಕೆ ರೂಪ ಕೊಡೋ ಕಾಲ. ಕಣ್ಣಿಗೆ ಕಂಡದ್ದು, ಹೊಸತು ಅನ್ನಿಸಿದ್ದನ್ನು ಕೊಂಡು ಧರಿಸುವ ಕಾಲ. ಹುಡುಗಿಯರನ್ನ ತಮ್ಮತ್ತ ಹೇಗೆ ಸೆಳೆಯಬೇಕು? ಎಂಬುದು ಈಗಿನ ಯುವಕರಿಗೆ ಗೊತ್ತು.

    ಸೌಂದರ್ಯ ಹೇಗೇ ಇರಲಿ, ಆದರೂ ಬಾಹ್ಯ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ತಂದುಕೊಳ್ಳಲು ಸೌಂದರ್ಯ ಸಾಧನಗಳನ್ನು ಬಳಸಲೇಬೇಕು. ಅಂತದರಲ್ಲಿ ಹುಡುಗರೇನೂ ಕಡಿಮೆ ಇಲ್ಲ ಬಿಡಿ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಶಾಪಿಂಗ್ ಮಾಲ್‌ಗಳಲ್ಲಿ ಯುವಕರ ಕಲರವವೇ ಹೆಚ್ಚಿದೆ. ಅದರಲ್ಲೂ ಸಿಕ್ಸ್‌ಪ್ಯಾಕ್‌ ಹುಡುಗರು ಫಿಟ್ ಆಗಿ ಕೂರುವ ಟೀಶರ್ಟ್‌ಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಅದರ ಮೇಲೆ ಸೂಟ್‌ಕೋಡ್ ಫ್ರೆಶ್ ಲುಕ್ ನೀಡುತ್ತದೆ.

    ವೆಡ್ಡಿಂಗ್ ದಿನಗಳಲ್ಲಂತು ತರಹೇವಾರಿಯ ಸೂಟ್ಸ್ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಮದುವೆಯ ಸಮಾರಂಭಗಳು ಅಥವಾ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಫ್ರೆಶ್ ಹಾಗೂ ಕಲರ್‌ಫುಲ್ ಲುಕ್ ನೀಡುತ್ತವೆ. ಅವುಗಳ ವಿವಿಧ ಶೈಲಿಗಳನ್ನಿಲ್ಲಿ ನೋಡಬಹದು. ಇದನ್ನೂ ಓದಿ: ಫ್ಯಾಷನ್‍ನಲ್ಲೂ ರಾಷ್ಟ್ರಪ್ರೇಮ ಅಭಿವ್ಯಕ್ತ

    Suits 05

    ಇಟಾಲಿಯನ್ ಸ್ಟೈಲ್‌: ಎರಡು ಪಾಕೆಟ್‌ಗಳಿರೋ ಈ ಸೂಟ್ ಸಾಂಪ್ರದಾಯಿಕ ಲುಕ್ ನೀಡುತ್ತದೆ. ತೆಳ್ಳಗಿದ್ದು ಎತ್ತರವಾಗಿರುವವರಿಗೆ ಇಟಾಲಿಯನ್ ಸೂಟ್ ಒಳ್ಳೆಯ ಲುಕ್ ನೀಡುತ್ತದೆ. ಆದರೆ ಕುಳ್ಳಗಿರುವವರಿಗೆ ಈ ಸೂಟ್ ವಿಚಿತ್ರವಾಗಿ ಕಾಣಿಸುತ್ತದೆ. ಇದನ್ನೂ ಓದಿ: ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ

    ಬ್ರಿಟಿಷ್ ಶೈಲಿಯ ಸೂಟ್: ಯುವಕರಿಗೆ ಎಲೆಗೆಂಟ್ ಲುಕ್ ನೀಡುವುದರ ಜೊತೆಗೆ ಫ್ಯಾಷನೇಬಲ್ ಆಗಿ ಕಾಣಿಸುತ್ತಾರೆ. ಸಾಮಾನ್ಯ ಕಾರ್ಯಕ್ರಮಗಳಿಗೆ ಸಂದರ್ಶನದ ವೇಳೆ ಮತ್ತು ಕಚೇರಿಗೆ ಧರಿಸಬಹುದು. ಇದು ಜಾಕೆಟ್ 3 ಬಟನ್, ಮಧ್ಯಮ ಗಾತ್ರದ ಲಾಪೆಲ್ಸ್ ಮತ್ತು 3 ಹೊರ ಪಾಕೆಟ್‌ಗಳನ್ನು ಹೊಂದಿರುತ್ತದೆ.

    Suits 04

    ಅಮೇರಿಕನ್ ಮಾದರಿಯ ಸೂಟ್: ಈ ಸೂಟ್ ಬಹುಮುಖ ಹೊಂದಿರುತ್ತದೆ. ಅಂದರೆ ಯಾವುದೇ ಸೆಟ್ಟಿಂಗ್‌ಗೂ ಹೊಂದಿಕೊಳ್ಳುತ್ತದೆ. ಯಾವುದೇ ಸಂದರ್ಭಗಳಿಗೆ ಬೇಕಾದರೂ ಪುರುಷರು ಇದನ್ನು ಧರಿಸಬಹುದು.

    ಬ್ರೋಕೇಡ್ ಸೂಟ್: ಸ್ವಲ್ಪ ಗ್ಲಾಮರ್ ಆಗಿ ಕಾಣುವ ಈ ಸೂಟ್ ಭಾರತೀಯ ಕರಕುಶಲ ಶೈಲಿಯನ್ನೇ ಹೋಲುತ್ತದೆ. ಟೀ ಶರ್ಟ್ ಮೇಲೆ ಧರಿಸಿದರೂ ಹೊಂದಿಕೊಳ್ಳುತ್ತದೆ.

    Suits 02

    ವೆಲ್ವೆಟ್ ಸೂಟ್: ವಿಶಾಲ ಭುಜ ವುಳ್ಳವರಿಗೆ ಈ ಸೂಟ್ಸ್ ಪರ್ಫೆಕ್ಟ್, ಪುರುಷರಿಗೆ ಸಾಂಪ್ರದಾಯಿಕ ಸೂಟ್‌ಗಳ ಸ್ಫರ್ಶವನ್ನೇ ಇದು ನೀಡುತ್ತದೆ. ಜ್ಯುವೆಲ್ಸ್ನೊಂದಿಗೆ ಧರಿಸಿದರೆ, ಐಶಾರಾಮಿ ಲುಕ್ ನೀಡುತ್ತದೆ. ಜೊತೆಗೆ ಶೈನ್ ಹೆಚ್ಚಿಸುತ್ತದೆ. ಬಿಸಿಲಿನಲ್ಲಿ ಧರಿಸುವುದು ಸೂಕ್ತವಲ್ಲ.

    ಕ್ಲಾಸಿಕ್ ಬಂದ್ ಗಲಾವ್: ಸಿಕ್ ಬಂಧ್‌ಗಲಾವು ಫಾರ್ಮಲ್ ವೇರ್ ಮತ್ತು ಭಾರತೀಯ ಶೈಲಿಯ ಧಿರಿಸುಗಳಿಗೆ ಹೊಂದಿಕೆಯಾಗುತ್ತದೆ. ಇದು ಹುಡುಗಿಯರನ್ನು ಸೆಳೆಯಲು ಹೆಚ್ಚು ಆಕರ್ಷಣೆ ನೀಡುತ್ತದೆ. ಸಿಟ್‌ಡೌನ್ ಡಿನ್ನರ್ ಪಾರ್ಟಿಗಳಲ್ಲಿ ಹೆಚ್ಚಿನ ಜನರು ಇದನ್ನು ಬಳಸುತ್ತಾರೆ.

  • ಕಾಂಗ್ರೆಸ್‍ನ 20 ಜನ ಸಿಎಂ ಸೂಟ್‍ಗೆ ಆರ್ಡರ್ ಮಾಡಿದ್ದಾರೆ: ಬಡಗಲಪೂರ ನಾಗೇಂದ್ರ

    ಕಾಂಗ್ರೆಸ್‍ನ 20 ಜನ ಸಿಎಂ ಸೂಟ್‍ಗೆ ಆರ್ಡರ್ ಮಾಡಿದ್ದಾರೆ: ಬಡಗಲಪೂರ ನಾಗೇಂದ್ರ

    ಧಾರವಾಡ: ಕಾಂಗ್ರೆಸ್‍ನಲ್ಲಿ ಈಗಲೇ ಹತ್ತಿಪ್ಪತ್ತು ಜನ ಸಿಎಂ ಸೂಟ್‍ಗೆ ಆರ್ಡರ್ ಕೊಟ್ಟಿದ್ದಾರೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪೂರ ನಾಗೇಂದ್ರ ಲೇವಡಿ ಮಾಡಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರೋಧ ಪಕ್ಷದ ಜವಾಬ್ದಾರಿ ನಿರ್ವಹಣೆ ಮಾಡುತ್ತಿಲ್ಲ, ಕಾಂಗ್ರೆಸ್‍ನ ಹತ್ತಿಪ್ಪತ್ತು ಜನ ಸಿಎಂ ಸೂಟ್‍ಗೆ ಆರ್ಡರ್ ಕೊಟ್ಟಿದ್ದಾರೆ. ಏಕೆಂದರೆ ಸಿಎಂ ಆದ ಮೇಲೆ ಅವರು ಪ್ರಮಾಣ ವಚನ ಸ್ವೀಕರಿಸಲು ಡ್ರೆಸ್ ಹಾಕಿಕೊಳ್ಳಬೇಕಲ್ವಾ ಎಂದಿದ್ದಾರೆ.

    ಜನ ಬಹುಮತವನ್ನೇ ಕೊಟ್ಟಿಲ್ಲ, ಆದರೂ 10 ರಿಂದ 20 ಜನ ಸಿಎಂ ಕನಸು ಹೊತ್ತಿದ್ದಾರೆ. ಚುನಾವಣೆ ಇನ್ನೂ ಎರಡು ವರ್ಷ ಇದೆ. ಆಗಲೇ ಮುಂಬೈ, ಮೈಸೂರು, ದೆಹಲಿ, ಬೆಂಗಳೂರು, ಕೋಲ್ಕತಾದ ಟೇಲರ್ ಅಂಗಡಿಗೆ ಸೂಟ್ ಆರ್ಡರ್ ಕೊಟ್ಟಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದೆಯಾ, ಜನರ ಸಮಸ್ಯೆಗೆ ಸ್ಪಂದಿಸುವ ವಿರೋಧ ಪಕ್ಷನಾ ಇದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಕ

    ಈಗಲೇ ಕಾಂಗ್ರೆಸ್ ನವರು ನಾನು ಸಿಎಂ, ನೀನು ಸಿಎಂ ಅಂತಾ ಬೀದಿಯಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ನಾಗೇಂದ್ರ ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಂ ವಿರುದ್ಧ ಭ್ರಷ್ಟಾಚಾರ ಆರೋಪ -ಯತ್ನಾಳ್‍ಗೆ ಬಿಎಸ್‍ವೈ ಅಭಿಮಾನಿಗಳಿಂದ ಘೆರಾವ್

  • ಈ ಕಾರ್ ಶೋ ರೂಮ್‍ನಲ್ಲಿ ಟೈ, ಸೂಟು ಹಾಕಿದ ನಾಯಿಯೇ ಸೇಲ್ಸ್ ಮನ್

    ಈ ಕಾರ್ ಶೋ ರೂಮ್‍ನಲ್ಲಿ ಟೈ, ಸೂಟು ಹಾಕಿದ ನಾಯಿಯೇ ಸೇಲ್ಸ್ ಮನ್

    ಸೂಟು, ಬೂಟು, ಟೈ ಧರಿಸಿ ಶೋರೂಮ್‍ಗಳಲ್ಲಿ ಮನುಷ್ಯರು ಕಾರು ಮಾರಾಟ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ನಾಯಿ ಸೂಟು, ಟೈ ಧರಿಸಿ ಕಾರ್‍ಶೋರೂಮಿನ ಪ್ರಮೋಷನಲ್ ವಿಡಿಯೋದಲ್ಲಿ ಸೇಲ್ಸ್ ಮನ್ ಆಗಿ ಕಾಣಿಸಿಕೊಂಡಿದ್ದು, ಈಗ ಈ ವಿಡಿಯೋ ಸಖತ್ ವೈರಲ್ ಆಗಿದೆ.

    ಗಿಲ್ಡಾ ಅಲಿಯಾಸ್ ಬ್ರೂಸ್ ಗ್ರಿಫಿನ್ ಹೆಸರಿನ ನಾಲ್ಕು ವರ್ಷದ ನಾಯಿ ಇದೀಗ ಯೂಟ್ಯೂಬ್ ವಿಡಿಯೋದ ಸ್ಟಾರ್ ಆಗಿದೆ. ನನಗೆ ಓದಲು ಬರಲ್ಲ, ಹೀಗಾಗಿ ನಮ್ಮ ದರಗಳು ಸಿಕ್ಕಾಪಟ್ಟೆ ಕಡಿಮೆ ಅಂತ ಹಿನ್ನೆಲೆ ಧ್ವನಿಯಲ್ಲಿ ಕೇಳಬಹುದಾಗಿದ್ದು, ಯೂಟ್ಯೂಬ್‍ನಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ಹಿಟ್ ಆಗಿದೆ.

    https://www.instagram.com/p/BSrhqIrhzGe/

    ಹೇ ರಿಲ್ಯಾಕ್ಸ್ ಪ್ಲೀಸ್…. ಬ್ರೂಸ್ ಗ್ರಿಫಿನ್ ಮೋಟಾರ್ ಒಂದು ಕಾಲ್ಪನಿಕ ಶೋರೂಮ್ ಆಗಿದ್ದು ಗಿಲ್ಡಾ ಇಲ್ಲಿ ನಿಜವಾಗಿಯೂ ಸೇಲ್ಸ್ ಮನ್ ಅಲ್ಲ. ಇದರ ಮಾಲಿಕರು ತಾವು ತಂದ ಮಕ್ಕಳ ಸೈಜಿನ ಸೂಟ್ ಹಾಗೂ ಟೈ ಅನ್ನು ನಾಯಿಗೆ ಹಾಕಿ ಅದನ್ನ ಅನೇಕ ಕಾಲ್ಪನಿಕ ಪಾತ್ರಗಳಲ್ಲಿ ತೋರಿಸಿದ್ದಾರೆ.

    ಇನ್ನು ನಾಯಿ ಸೂಟ್ ಹಾಕಿರೋ ಫೋಟೋವನ್ನ ಅನೇಕ ಜನ ಫೋಟೋಶಾಪ್ ಮಾಡಲ ಕೂಡ ಬಳಸಿಕೊಂಡಿದ್ದಾರೆ.

     

    https://www.instagram.com/p/BUP_O5mhVWW/?taken-by=mister_griff

    https://www.instagram.com/p/BUNPPMPBs7v/?taken-by=mister_griff

    https://www.instagram.com/p/BT96b92hLLJ/?taken-by=mister_griff

    https://www.instagram.com/p/BUAEhykBlJc/?taken-by=mister_griff

    https://www.instagram.com/p/BUSgYsQh-n9/?taken-by=mister_griff

    https://www.instagram.com/p/BUU2Y8LhP7B/?taken-by=mister_griff

    https://www.instagram.com/p/BUVYU9uBCC9/?taken-by=mister_griff

    https://www.instagram.com/p/BUXj9pHBCsl/?taken-by=mister_griff