Tag: ಸುಹಾಸ್ ಯತಿರಾಜ್

  • ಪ್ಯಾರಾ ಒಲಿಂಪಿಕ್ಸ್ ಆಟಗಾರ ಸುಹಾಸ್ ಯತೀರಾಜ್‍ಗೆ ಬಂಪರ್ – ವಿಶೇಷ ಗೌರವಕ್ಕೆ ಭಾಜನರಾದ ಕನ್ನಡಿಗ

    ಪ್ಯಾರಾ ಒಲಿಂಪಿಕ್ಸ್ ಆಟಗಾರ ಸುಹಾಸ್ ಯತೀರಾಜ್‍ಗೆ ಬಂಪರ್ – ವಿಶೇಷ ಗೌರವಕ್ಕೆ ಭಾಜನರಾದ ಕನ್ನಡಿಗ

    ನವದೆಹಲಿ: ಟೋಕಿಯೋದಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಕನ್ನಡಿಗ, ಉತ್ತರ ಪ್ರದೇಶ ಗೌತಮ್ ಬುದ್ದ ನಗರ ಜಿಲ್ಲೆಯ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್‍ಗೆ ಅದೃಷ್ಟ ಖುಲಾಯಿಸಿದ್ದು ಉತ್ತರ ಪ್ರದೇಶ ಸರ್ಕಾರ ವಿಶೇಷ ಪುರಸ್ಕಾರ ನೀಡುವ ಮೂಲಕ ಗೌರವ ಸಲ್ಲಿಸಿದೆ.

    ಬ್ಯಾಂಡ್ಮಿಟನ್‍ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸುಹಾಸ್ ಯತಿರಾಜ್‍ಗೆ ಉತ್ತರ ಪ್ರದೇಶ ಸರ್ಕಾರ ನಾಲ್ಕು ಕೋಟಿ ನಗದು ಬಹುಮಾನ ನೀಡಿದ್ದು, ವಿಶೇಷ ತಿದ್ದುಪಡಿ ಮೂಲಕ  ವಿಶೇಷ ಗೌರವ ನೀಡಿದೆ.

    ಒಲಿಂಪಿಕ್ಸಗೂ ಮುನ್ನ ಉತ್ತರ ಪ್ರದೇಶ ಸರ್ಕಾರ ವಿಜೇಯರಿಗೆ ಬಹುಮಾನ ಘೋಷಣೆ ಮಾಡಿತ್ತು. ಬಂಗಾರ ಪದಕ ವಿಜೇತರಿಗೆ ಐದು ಕೋಟಿ, ಬೆಳ್ಳಿ ಪದಕ ವಿಜೇತರಿಗೆ ನಾಲ್ಕು ಹಾಗೂ ಕಂಚು ಗೆದ್ದವರಿಗೆ ಎರಡು ಕೋಟಿ ನಗದು ನೀಡುವ ಭರವಸೆ ನೀಡಿತ್ತು ಅಂತೆಯೇ ಈಗ ಸುಹಾಸ್ ಯತಿರಾಜ್‍ಗೆ ನಾಲ್ಕು ಕೋಟಿ ನೀಡುವ ಮೂಲಕ ಗೌರವಿಸಿದೆ. ಇದನ್ನೂ ಓದಿ: ನೀವು ನನ್ನ ಫೇವರೆಟ್ – ಬಾಲಕಿಯ ಸಿಹಿ ಮಾತಿಗೆ ನೀರಜ್ ಚೋಪ್ರಾ ಪ್ರತಿಕ್ರಿಯೆ ಏನು ಗೊತ್ತಾ?

    ಅಲ್ಲದೇ ಇದೇ ಮೊದಲ ಬಾರಿಗೆ ಸುಹಾಸ್ ವಿಶೇಷ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಐಎಎಸ್ ಅಧಿಕಾರಿಗಳಿಗೆ ತಮ್ಮ ಸೇವಾ ಅವಧಿಯಲ್ಲಿ ನೀಡುವ ಐದು ಇನ್ಕ್ರಿಮೆಂಟ್‍ಗಳನ್ನು ಒಟ್ಟಿಗೆ ನೀಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ತಿದ್ದುಪಡಿ ಮಾಡಿದೆ. ಅಂತರಾಷ್ಟ್ರೀಯ ಮಟ್ಡದಲ್ಲಿ ಸಾಧನೆ ಮಾಡುವ ಐಎಎಸ್, ಐಪಿಎಸ್ ಸೇರಿ ಸಮಾನ ಶ್ರೇಣಿಯ ಅಧಿಕಾರಿಗಳಿಗೆ ಈ ರೀತಿಯ ಪುರಸ್ಕಾರ ನೀಡಲು ನಿರ್ಮಾನಿಸಿದ್ದು ಸುಹಾಸ್ ಯತಿರಾಜ್ ಮೂಲಕವೇ ಇದು ಆರಂಭವಾಗಿದೆ. ಇದನ್ನೂ ಓದಿ: ಚಿನ್ನಾಭರಣ ಕಳವು ಮಾಡಿರುವುದಾಗಿ ಮಗಳ ವಿರುದ್ಧವೇ ದೂರು ಕೊಟ್ಟ ತಾಯಿ

    ಸುಹಾಸ್ ಯತಿರಾಜ್ 2016ರ ಬೀಜಿಂಗ್ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ, 2017ರ ಟರ್ಕಿಶ್ ಓಪನ್‍ನಲ್ಲಿ ಬೆಳ್ಳಿ, 2018 ರ ಜಕಾರ್ತಾ ಏಷ್ಯನ್ ಪ್ಯಾರಾ ಗೇಮ್ಸ್‍ನಲ್ಲಿ ಕಂಚು, 2018ರ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ, 2019ರ ಐಲೆರ್ಂಡ್ ಓಪನ್‍ನಲ್ಲಿ ಬೆಳ್ಳಿ, 2019 ರ ಟರ್ಕಿಶ್ ಓಪನ್‍ನಲ್ಲಿ ಚಿನ್ನ, 2020 ರ ಬ್ರೆಜಿಲ್ ಓಪನ್‍ನಲ್ಲಿ ಚಿನ್ನ 2020 ಪೆರು ಓಪನ್‍ನಲ್ಲಿ ಚಿನ್ನ, 2021ರ ಟೋಕಿಯೊ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

  • ಪ್ಯಾರಾಲಂಪಿಕ್ಸ್ ಕ್ರೀಡಾಪಟುಗಳನ್ನು ನಿವಾಸದಲ್ಲಿ ಅಭಿನಂದಿಸಿದ ಪ್ರಧಾನಿ

    ಪ್ಯಾರಾಲಂಪಿಕ್ಸ್ ಕ್ರೀಡಾಪಟುಗಳನ್ನು ನಿವಾಸದಲ್ಲಿ ಅಭಿನಂದಿಸಿದ ಪ್ರಧಾನಿ

    ನವದೆಹಲಿ: ಟೋಕಿಯೋದಲ್ಲಿ ನಡೆದ ಪ್ಯಾರಾಲಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ  ಅಭಿನಂದನೆ ಸಲ್ಲಿಸಿ, ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

    ದೆಹಲಿಯ ತಮ್ಮ ನಿವಾಸದಲ್ಲಿ ಕ್ರೀಡಾಪಟುಗಳನ್ನು ಭೇಟಿ ಮಾಡಿದ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಅವರ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಭಾರತ ಅಮೃತ ಮಹೋತ್ಸವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತಕ್ಕೆ ಪ್ಯಾರಾಲಂಪಿಕ್ಸ್‌ನಲ್ಲಿ ದಾಖಲೆಯ 19 ಪದಕಗಳನ್ನು ಕ್ರೀಡಾಪಟುಗಳು ಗೆದ್ದಿದ್ದರು. ಪದಕಗಳನ್ನು ಗೆದ್ದ ಕ್ರೀಡಾಪಟುಗಳಿಗೆ ಮೋದಿ ವಿಶೇಷವಾಗಿ ಅಭಿನಂದನೆ ಸಲ್ಲಿಸಿ ಅವರೊಂದಿಗೆ ಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಕನ್ನಡಿಗ ಸುಹಾಸ್ ಯತಿರಾಜ್, ಅವನಿ ಲೇಖರಾ ಸೇರಿ ಹಲವು ಕ್ರೀಡಾಪಟುಗಳ ಸಾಧನೆಗೆ ಮೋದಿ ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೊಟ್ಟ ಮಾತಿನಂತೆ ಸಿಂಧು ಜೊತೆ ಐಸ್‍ಕ್ರೀಂ ಸವಿದ ಮೋದಿ

    ಈ ಮೊದಲು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಮೋದಿ ಔತಣಕೂಟ ಏರ್ಪಡಿಸಿದ್ದರು. ಈ ಸಂದರ್ಭ ಪಿ.ವಿ ಸಿಂಧು ಜೊತೆ ಐಸ್‍ಕ್ರೀಂ ಸವಿದು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರು. ಎಲ್ಲಾ ಕ್ರೀಡಾಪಟುಗಳೊಂದಿಗೆ ಫೋಟೋಗೆ ಫೋಸ್ ನೀಡಿದ್ದರು. ಇದನ್ನೂ ಓದಿ: ಅವರು ನಿರ್ಧರಿಸಿದ್ದ ಗುರಿಯನ್ನು ತಲುಪಿದ್ದಾರೆ- ಸುಹಾಸ್ ಸಾಧನೆಗೆ ಪತ್ನಿಯ ಮೆಚ್ಚುಗೆ

  • ಅವರು ನಿರ್ಧರಿಸಿದ್ದ ಗುರಿಯನ್ನು ತಲುಪಿದ್ದಾರೆ- ಸುಹಾಸ್ ಸಾಧನೆಗೆ ಪತ್ನಿಯ ಮೆಚ್ಚುಗೆ

    ಅವರು ನಿರ್ಧರಿಸಿದ್ದ ಗುರಿಯನ್ನು ತಲುಪಿದ್ದಾರೆ- ಸುಹಾಸ್ ಸಾಧನೆಗೆ ಪತ್ನಿಯ ಮೆಚ್ಚುಗೆ

    – ಸುಹಾಸ್ ಆಟವಾಡೋದನ್ನು ಕಂಡರೆ ಭಯ

    ಟೋಕಿಯೋ: ಪ್ಯಾರಾಲಂಪಿಕ್ಸ್ ಬ್ಯಾಡ್ಮಿಂಟನ್‍ನಲ್ಲಿ ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದಿರುವ ಬಗ್ಗೆ ಅವರ ಪತ್ನಿ ರಿತು ಮೆಚ್ಚುಗೆ ಸೂಚಿಸಿದ್ದು, ಅವರು ನಿರ್ಧರಿಸಿದ್ದ ಗುರಿಯನ್ನು ತಲುಪಿದ್ದಾರೆ ಎಂದು ಅವರ ಪತಿಯ ಸಾಧನೆಯನ್ನು ಕೊಂಡಾಡಿದ್ದಾರೆ.

    ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿರುವ ಸುಹಾಸ್ ಯತಿರಾಜ್, ತಮ್ಮ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಮತ್ತು ಮಂಡ್ಯದಲ್ಲಿ ಪೂರೈಸಿದ್ದರು. ಬಳಿಕ ಐಎಎಸ್ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ಐಎಎಸ್ ಪಾಸಾಗಿದ್ದರು. ಪ್ರಸ್ತುತ ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಹಾಸ್ ಕುಟುಂಬ ಸಮೇತರಾಗಿ ದೆಹಲಿಯ ನೋಯ್ಡಾದಲ್ಲಿ ನೆಲೆಸಿದ್ದಾರೆ.

    ಪ್ಯಾರಾಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಖುಷಿಯನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡ ಸುಹಾಸ್ ಪತ್ನಿ ರಿತು, ನಮಗೆ ತುಂಬಾ ಸಂತೋಷವಾಗಿದೆ. ಈ ದಿನಕ್ಕಾಗಿ ಕಳೆದ 6 ವರ್ಷಗಳಿಂದ ಸುಹಾಸ್ ಅವರು ಕಷ್ಟ ಪಟ್ಟಿದ್ದರು. ಅವರು ಪದಕ ಗೆಲ್ಲುತ್ತಾರೆ ಎಂದು ನಿರೀಕ್ಷೆ ಇತ್ತು, ನಾವು ದೇವರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ವೀರ ಕನ್ನಡಿಗ ಸುಹಾಸ್ ಬೆಳ್ಳಿ ಸಾಧನೆ

    ಅವರು ಜಿಲ್ಲಾಧಿಕಾರಿಯಾಗಿದ್ದರು ಕೂಡ ಅಥ್ಲೆಟಿಕ್‍ನ್ನು ಸಮಾನವಾಗಿ ನಿರ್ವಹಿಸಿದ್ದರು. ತುಂಬಾ ಶ್ರಮದಿಂದ ದಿನಗಳನ್ನು ಕಳೆಯುತ್ತಿದ್ದರು. ಕ್ರೀಡೆ ಮತ್ತು ಡಿಸಿಯಾಗಿ ಎರಡು ಕೆಲಸಗಳ ಜವಾಬ್ದಾರಿ ಅವರ ಮೇಲೆ ತುಂಬಾ ಇತ್ತು. ಎರಡನ್ನು ಕೂಡ ಸಮಾನವಾಗಿ ಸ್ವೀಕರಿಸಿದ್ದರು. ಪ್ರತಿದಿನ 3 ರಿಂದ 4 ಗಂಟೆಗಳ ಕಾಲ ಪ್ರ್ಯಾಕ್ಟೀಸ್ ಮಾಡುತ್ತಿದ್ದರು. ಹಬ್ಬ ಹರಿದಿನಗಳನ್ನು ತೊರೆದು ಕ್ರೀಡೆಗಾಗಿ ಅವರ ಗುರಿಗಾಗಿ ಶ್ರಮ ವಹಿಸುತ್ತಿದ್ದರು. ಮೊದಲು ಬ್ಯಾಡ್ಮಿಂಟನ್‍ನ್ನು ಹವ್ಯಾಸವಾಗಿಸಿಕೊಂಡಿದ್ದರು ಬಳಿಕ ವೃತ್ತಿಪರವಾಗಿ ತೆಗೆದುಕೊಂಡು ಯಶಸ್ಸುಗಳಿಸಿದ್ದಾರೆ ಎಂದರು.

    ಅಷ್ಟು ದೊಡ್ಡ ಕ್ರೀಡಾಕೂಟದಲ್ಲಿ ಆಟವಾಡುವ ಬಗ್ಗೆ ತುಂಬಾ ದೊಡ್ಡ ಗುರಿ ಹೊಂದಿದ್ದರು. ನಾನು ಅವರೊಂದಿಗೆ ನಿಮ್ಮ ನೈಜಾ ಸಾಮಥ್ರ್ಯದೊಂದಿಗೆ ಆಟವಾಡಿ ಎಂದಿದ್ದೆ. ಆದರೆ ನಾನು ಮಾತ್ರ ಅವರ ಆಟವನ್ನು ಯಾವತ್ತು ನೋಡುವುದಿಲ್ಲ. ನನಗೆ ತುಂಬಾ ಹೆದರಿಕೆ ಆದರೆ ದೇವರೊಂದಿಗೆ ಪ್ರಾರ್ಥಿಸುತ್ತಿದ್ದೆ. ನಾನು ಮ್ಯಾಚ್ ನೋಡಿಲ್ಲ ಆದರು ಕೂಡ ಅಂಕಗಳನ್ನು ತಿಳಿದುಕೊಳ್ಳುತ್ತಿದ್ದೆ. ಅವರ ಪಂದ್ಯ ನಡೆಯುತ್ತಿದ್ದಾಗ ನಾನು ವಾಕಿಂಗ್ ಮಾಡುತ್ತಿದೆ ಒಂದು ಗಂಟೆಗಳ ಒಂದ್ಯದಲ್ಲಿ ಅವರು ಆಡುತ್ತಿದ್ದರೆ ನಾನು ಇಲ್ಲಿ 6 ಕಿಮೀ. ವಾಕಿಂಗ್ ಮಾಡಿದ್ದೇನೆ. ನನಗೆ ಕುಳಿತುಕೊಳ್ಳಲು ಆಗದೆ ಓಡಾಡಿಕೊಂಡು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಅವರಿಂದ ನಾನು ಕಲಿಯಲು ಇನ್ನು ಇದೆ. ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಖುಷಿಪಟ್ಟರು. ಇದನ್ನೂ ಓದಿ: ಬೆಂಬಲಿಸಿದ ಕರ್ನಾಟಕದ ಜನತೆಗೆ ಧನ್ಯವಾದ: ಸುಹಾಸ್

    ನನ್ನ ಮಗ ಎಲ್ಲರಿಗೂ ಕೂಡ ಸ್ಪೂರ್ತಿ:
    ಸುಹಾಸ್ ತಾಯಿ ಜಯಶ್ರೀ ಮಾತನಾಡಿ, ನಮಗೆ ತುಂಬಾ ಸಂತೋಷವಾಗಿದೆ. ಅವನ ಒಂದು ಗುರಿಯಾಗಿತ್ತು ಈ ಕ್ರೀಡಾಕೂಟದ ಸಾಧನೆ. ನಾನು ಸಾಧನೆ ಮಾಡಬೇಕೆಂಬ ಹಂಬಲ ಇತ್ತು ದೇವರು ನೇರವೇರಿಸಿದ್ದಾನೆ. ಅವನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಅವನು ಎಲ್ಲರಿಗೂ ಕೂಡ ಸ್ಪೂರ್ತಿ ಎಂದು ಸಂಭ್ರಮಿಸಿದರು.

    ಫೈನಲ್‍ನಲ್ಲಿ ವಿರೋಚಿತ ಸೋಲು ಕಂಡರು ಕೂಡ ಅವನ ಆಟ ತುಂಬಾ ಖುಷಿಯಾಯಿತು. ಆತ ಛಲವಾದಿ. ಆತನ ಪರಿಶ್ರಮ ಮತ್ತು ಗುರಿ ಆತನಿಗೆ ಯಶಸ್ಸು ತಂದು ಕೊಟ್ಟಿದೆ. ಕೆಲಸ ಮುಗಿಸಿ 10 ಗಂಟೆಗೆ ಬಂದರು ಕೂಡ ಅಭ್ಯಾಸವನ್ನು ಮಾತ್ರ ಯಾವತ್ತೂ ನಿಲ್ಲಿಸುತ್ತಿರಲಿಲ್ಲ. ಅವನು ತುಂಬಾ ಬುದ್ಧಿವಂತ ಎಂದು ಮಗನ ಸಾಧನೆಗೆ ಸಂಭ್ರಮ ಪಟ್ಟಿದ್ದಾರೆ. ಇದನ್ನೂ ಓದಿ: ಬ್ಯಾಡ್ಮಿಂಟನ್ ಅವಳಿ ಪದಕ- ಪ್ರಮೋದ್ ಭಗತ್‍ಗೆ ಚಿನ್ನ, ಮನೋಜ್ ಸರ್ಕಾರ್‌ಗೆ ಕಂಚು

  • ಬೆಳ್ಳಿ ಹುಡುಗ ಸುಹಾಸ್‍ಗೆ ಕುಟುಂಬಸ್ಥರ ಅಭಿನಂದನೆ

    ಬೆಳ್ಳಿ ಹುಡುಗ ಸುಹಾಸ್‍ಗೆ ಕುಟುಂಬಸ್ಥರ ಅಭಿನಂದನೆ

    ಬೆಂಗಳೂರು: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದು ಕೊಟ್ಟ ಐಎಎಸ್ ಅಧಿಕಾರಿಯ ಸಾಧನೆಗೆ ಕುಟುಂಬದವರು ಅಭಿನಂದಿಸಿ ಭಾವುಕರಾಗಿದ್ದಾರೆ.

    ಟೋಕಿಯೋದಲ್ಲಿ ನಡೆಯುತ್ತಿರೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇಂದು ಮತ್ತೊಂದು ಬೆಳ್ಳಿ ಪದಕ ಸಿಕ್ಕಿದೆ. ಈ ಬೆಳ್ಳಿ ಪದಕವನ್ನು ನಮ್ಮ ಕರ್ನಾಟಕದ ಹಾಸನ ಮೂಲದ ಸುಹಾಸ್ ಯತಿರಾಜ್ ತಂದುಕೊಟ್ಟಿದ್ದು, ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಇದನ್ನೂ ಓದಿ: ದೂಡಾದಲ್ಲಿ ಅರ್ಜಿ ಹಾಕೋಕೆ 4ರಿಂದ 5 ಸಾವಿರ ಕೊಡ್ಬೇಕಂತೆ..!

    ಐಎಎಸ್ ಅಧಿಕಾರಿ!:ಸುಹಾಸ್ ಯತಿರಾಜ್ ಅವರು ಐಎಎಸ್ ಅಧಿಕಾರಿ ಕೂಡ ಆಗಿದ್ದಾರೆ. ನೋಯ್ಡಾದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಡಳಿತಾಧಿಕಾರಿಯಾಗಿ ಸುಹಾಸ್ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಸುಹಾಸ್ ಪ್ಯಾರಾಲಿಂಪಿಕ್ಸ್ ಗೇಮ್ಸ್‍ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಿದ್ದು, ಪ್ಯಾರಾಲಿಂಪಿಕ್ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ:ಮಾಜಿ ಸೈನಿಕನಿಗೆ ಅಪಮಾನ – ರಾಷ್ಟ್ರಧ್ವಜ ಹಿಡಿದು ಮಾಜಿ ಸೈನಿಕರಿಂದ ಟೋಲ್ ಗೆ ಮುತ್ತಿಗೆ

    ಪುರುಷರ ಸಿಂಗಲ್ಸ್ ಎಸ್‍ಎಲ್ 4 ನಲ್ಲಿ 21-15, 21-15-21 ರಲ್ಲಿ ಅಗ್ರ ಶ್ರೇಯಾಂಕಿತ ಮತ್ತು ವಿಶ್ವ ಚಾಂಪಿಯನ್ ಫ್ರಾನ್ಸ್‍ನ ಲ್ಯೂಕಾಸ್ ಮಜೂರ್ ವಿರುದ್ಧ ಸೋತು ಬೆಳ್ಳಿ ಪದಕ ಪಡೆದಿದ್ದಾರೆ.

    ಸುಹಾಸ್ ಬೆಳ್ಳಿ ಪದಕ ಪಡೆಯುತ್ತಿದ್ದಂತೆ ಅವರ ಕುಟುಂಬದವರಲ್ಲಿ ಸಂಭ್ರಮ ಮನೆ ಮಾಡಿತ್ತು. ಅಣ್ಣನ ಸಾಧನೆ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ತಮ್ಮ ಶರತ್ ಯತಿರಾಜ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಸುಹಾಸ್ ಯತಿರಾಜ್ ನಾದಿನಿ ಸಂಜನಾ ಕೂಡ ತಮ್ಮ ಭಾವನ ಸಾಧನೆಯನ್ನು ಹೊಗಳಿ ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದರು. ಇದನ್ನೂ ಓದಿ:ಆತ್ಮಹತ್ಯೆಗೆ ಮುಂದಾಗಿದ್ದ ವೃದ್ಧೆಯನ್ನು ರಕ್ಷಿಸಿದ ಯುವಕರು

  • ಬೆಂಬಲಿಸಿದ ಕರ್ನಾಟಕದ ಜನತೆಗೆ ಧನ್ಯವಾದ: ಸುಹಾಸ್

    ಬೆಂಬಲಿಸಿದ ಕರ್ನಾಟಕದ ಜನತೆಗೆ ಧನ್ಯವಾದ: ಸುಹಾಸ್

    ಟೋಕಿಯೋ: ಬೆಳ್ಳಿ ಗೆದ್ದಿದ್ದಕ್ಕೆ ಖುಷಿ ಆಗಿದೆ, ಚಿನ್ನದ ಪದಕ ಗೆಲ್ಲದ್ದಕ್ಕೆ ಬೇಸರವಿದೆ ಎಂದು ಪ್ಯಾರಾಲಿಂಪಿಕ್ಸ್ ನ ಬ್ಯಾಡ್ಮಿಂಟನ್‍ನಲ್ಲಿ ಬೆಳ್ಳಿ ಪದಕ ಬೆಳ್ಳಿ ಪದಕ ಗೆದ್ದಿರುವ ಸುಹಾಸ್ ಯತಿರಾಜ್ ಹೇಳಿದ್ದರೆ.

    ಸುಹಾಸ್ ಅವರು ಈ ಕುರಿತು ಮಾತನಾಡಿದ್ದು, ಖುಷಿ ಮತ್ತು ದುಃಖ ಎರಡೂ ಆಗುತ್ತಿದೆ. ಬೆಳ್ಳಿ ಗೆದ್ದಿದ್ದಕ್ಕೆ ಖುಷಿ ಆಗಿದೆ. ಆದರೆ ಚಿನ್ನ ಗೆಲ್ಲದ್ದಕ್ಕೆ ಬೇಸರ ಆಗುತ್ತಿದೆ. ನನಗೆ ಬೆಂಬಲಿಸಿದ ಗುರು ಹಿರಿಯರಿಗೆ ಮತ್ತು ಕರ್ನಾಟಕದ ಜನತೆಗೆ ಧನ್ಯವಾದ ಸಲ್ಲಿಸ್ತೇನೆ ಎಂದು ಸುಹಾಸ್ ಹೇಳಿದ್ದಾರೆ.

    ತಮ್ಮ ಪುತ್ರನ ಬೆಳ್ಳಿ ಸಾಧನೆ ಬಗ್ಗೆ ಸುಹಾಸ್ ಯತಿರಾಜ್ ಅವರ ತಾಯಿ ಜಯಶ್ರೀ, ಸುಹಾಸ್ ಪತ್ನಿ ರಿತು, ಸಹೋದರ ಶರತ್, ನಾದಿನಿ ಸಂಜನಾ ಅವರು ಪಬ್ಲಿಕ್ ಟಿವಿ ಜೊತೆಗೆ ಖುಷಿ ಹಂಚಿಕೊಂಡಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದುಕೊಂಡೇ ಅವರು ಪ್ರತಿ ನಿತ್ಯ ಪ್ರ್ಯಾಕ್ಟಿಸ್ ಮಾಡುತ್ತಿದ್ದರು. ಸಂಜೆ ಅದಕ್ಕಾಗಿ ಸಮಯ ಮೀಸಲಿರಿಸುತ್ತಿದ್ದರು. ನಾನೂ ಸಹ ಚಿನ್ನದ ಪದಕಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದೆ. ಆದರೆ ಬೆಳ್ಳಿ ಗೆದ್ದಿದ್ದಾರೆ ಖುಷಿ ಇದೆ ಎಂದು ಸುಹಾಸ್ ಪತ್ನಿ ರಿತು ತಿಳಿಸಿದ್ದಾರೆ. ಇದನ್ನೂ ಓದಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ವೀರ ಕನ್ನಡಿಗ ಸುಹಾಸ್ ಬೆಳ್ಳಿ ಸಾಧನೆ

    ಸುಹಾಸ್ ಯತಿರಾಜ್ ಸಾಧನೆಗೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಭಿನಂದನೆ ಸಲ್ಲಿಸಿದ್ದಾರೆ. ಸುಹಾಸ್ ಅವರ ಬೆಳ್ಳಿ ಬೇಟೆಯೊಂದಿಗೆ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತದ ಪದಕಗಳ ಸಂಖ್ಯೆ 19ಕ್ಕೆ ಏರಿದೆ. 5 ಚಿನ್ನ, 8 ಬೆಳ್ಳಿ, 6 ಕಂಚು ಪದಕಗಳನ್ನು ಭಾರತ ಗೆದ್ದಿದೆ.

    ಬೆಳ್ಳಿ ಸಾಧನೆ:
    ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ವೀರ ಕನ್ನಡಿಗ ಬೆಳ್ಳಿ ಗೆದ್ದಿದ್ದಾರೆ. ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಬ್ಯಾಡ್ಮಿಂಟನ್‍ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದು, ಈ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಬ್ಯಾಡ್ಮಿಂಟನ್ ಫೈನಲ್‍ನ Sಐ4 ವಿಭಾಗದಲ್ಲಿ ಫ್ರಾನ್ಸ್ ನ ಲುಕಾಸ್ ಮಜೂರ್ ಎದುರು 15-21, 21-17, 21-15 ಅಂತರದಲ್ಲಿ ಸೋಲು ಅನುಭವಿಸಿ ಬೆಳ್ಳಿ ಕೊರಳಿಗೇರಿಸಿಕೊಂಡಿದ್ದಾರೆ. ಇಂದು ಮುಂಜಾನೆ ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ನ ಲುಕಾಸ್ ಮಜೂರ್ ವಿರುದ್ಧ ಸೋತಿದ್ದಾರೆ.

    ಶಿವಮೊಗ್ಗ ಮೂಲದ ಯತಿರಾಜ್ ಹಾಗೂ ಹಾಸನ ಮೂಲದ ಜಯಶ್ರೀ(34) ಅವರ ಪುತ್ರ ಸುಹಾಸ್ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಉತ್ತರ ಪ್ರದೇಶದ ನೋಯ್ಡಾದಲ್ಲಿ ಸುಹಾಸ್ ಜಿಲ್ಲಾಧಿಕಾರಿಯಾಗಿದ್ದಾರೆ. ಸುಹಾಸ್ ಅವರ ಪತ್ನಿ ರಿತು ಗಾಜಿಯಾಬಾದ್‍ನಲ್ಲಿ ಸಹಾಯಕ ವಿಭಾಗಾಧಿಕಾರಿ ಆಗಿದ್ದಾರೆ.

  • ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ವೀರ ಕನ್ನಡಿಗ ಸುಹಾಸ್ ಬೆಳ್ಳಿ ಸಾಧನೆ

    ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ವೀರ ಕನ್ನಡಿಗ ಸುಹಾಸ್ ಬೆಳ್ಳಿ ಸಾಧನೆ

    ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ವೀರ ಕನ್ನಡಿಗ ಬೆಳ್ಳಿ ಗೆದ್ದಿದ್ದಾರೆ. ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಬ್ಯಾಡ್ಮಿಂಟನ್‍ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದು, ಈ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

    ಬ್ಯಾಡ್ಮಿಂಟನ್ ಫೈನಲ್‍ನ SL4 ವಿಭಾಗದಲ್ಲಿ ಫ್ರಾನ್ಸ್ ನ ಲುಕಾಸ್ ಮಜೂರ್ ಎದುರು 15-21, 21-17, 21-15 ಅಂತರದಲ್ಲಿ ಸೋಲು ಅನುಭವಿಸಿ ಬೆಳ್ಳಿ ಕೊರಳಿಗೇರಿಸಿಕೊಂಡಿದ್ದಾರೆ. ಇಂದು ಮುಂಜಾನೆ ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ನ ಲುಕಾಸ್ ಮಜೂರ್ ವಿರುದ್ಧ ಸೋತಿದ್ದಾರೆ. ಇದನ್ನೂ ಓದಿ: ಬ್ಯಾಡ್ಮಿಂಟನ್ ಅವಳಿ ಪದಕ- ಪ್ರಮೋದ್ ಭಗತ್‍ಗೆ ಚಿನ್ನ, ಮನೋಜ್ ಸರ್ಕಾರ್‌ಗೆ ಕಂಚು

    ಶಿವಮೊಗ್ಗ ಮೂಲದ ಯತಿರಾಜ್ ಹಾಗೂ ಹಾಸನ ಮೂಲದ ಜಯಶ್ರೀ ಅವರ ಪುತ್ರ ಸುಹಾಸ್ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಉತ್ತರ ಪ್ರದೇಶದ ನೋಯ್ಡಾದಲ್ಲಿ ಸುಹಾಸ್ ಜಿಲ್ಲಾಧಿಕಾರಿಯಾಗಿದ್ದಾರೆ. ಸುಹಾಸ್ ಅವರ ಪತ್ನಿ ರಿತು ಗಾಜಿಯಾಬಾದ್‍ನಲ್ಲಿ ಸಹಾಯಕ ವಿಭಾಗಾಧಿಕಾರಿ ಆಗಿದ್ದಾರೆ.

    ಸುಹಾಸ್ ಯತಿರಾಜ್ ಸಾಧನೆಗೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಭಿನಂದನೆ ಸಲ್ಲಿಸಿದ್ದಾರೆ. ಸುಹಾಸ್ ಅವರ ಬೆಳ್ಳಿ ಬೇಟೆಯೊಂದಿಗೆ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತದ ಪದಕಗಳ ಸಂಖ್ಯೆ 19ಕ್ಕೆ ಏರಿದೆ. 5 ಚಿನ್ನ, 8 ಬೆಳ್ಳಿ, 6 ಕಂಚು ಪದಕಗಳನ್ನು ಭಾರತ ಗೆದ್ದಿದೆ.