Tag: ಸುಹಾನ ಖಾನ್

  • ಮಗಳ ಬಾಯ್‌ಫ್ರೆಂಡ್‌ಗೆ ಶಾರುಖ್ ಖಾನ್ ಧಮ್ಕಿ: ಅಷ್ಟಕ್ಕೂ ಅಸಲಿ ವಿಚಾರವೇನು?

    ಮಗಳ ಬಾಯ್‌ಫ್ರೆಂಡ್‌ಗೆ ಶಾರುಖ್ ಖಾನ್ ಧಮ್ಕಿ: ಅಷ್ಟಕ್ಕೂ ಅಸಲಿ ವಿಚಾರವೇನು?

    ಬಾಲಿವುಡ್ ನಟ ಶಾರುಖ್ ಖಾನ್ ಮಗಳು ಸುಹಾನಾ ಖಾನ್ ವಿಚಾರದಲ್ಲಿ ಫುಲ್ ಗರಂ ಆಗಿದ್ದಾರೆ. ತನ್ನ ಪುತ್ರಿಯ ಬಾಯ್‌ಫ್ರೆಂಡ್ ಅಗುವವನಿಗೆ 7 ಷರತ್ತಗಳನ್ನು ವಿಧಿಸಿದ್ದಾರೆ. ತನ್ನ ಮಗಳಿಗೆ ಕಿಸ್ ಮಾಡಿದ್ರೆ ಆತನ ತುಟಿ ಕತ್ತರಿಸುತ್ತೇನೆ ಎಂದಿದ್ದಾರೆ.

    ಬಿಟೌನ್ ಸೂಪರ್ ಸ್ಟಾರ್ ತನ್ನ ಮಗಳ ವಿಚಾರದಲ್ಲಿ ಸಖತ್ ಕಟ್ಟುನಿಟ್ಟು. ಮಗಳ ಭವಿಷ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಆಕೆಯ ಜೀವನದ ಕುರಿತು ಕನಸು ಕಾಣುತ್ತಾರಂತೆ ಹಾಗಂತ ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪುತ್ರಿಯ ಬಾಯ್ ಪ್ರೇಂಡ್‌ಗೆ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

    ಇತ್ತೀಚೆಗೆ ಮೇ 22ರಂದು ಸುಹಾನಾ ಖಾನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ಮಾತನಾಡಿದ ಶಾರುಖ್ ಖಾನ್, ನನ್ನ ಮಗಳ ಬಾಯ್‌ಫ್ರೆಂಡ್ ಆಗುವವನು 7 ಷರತ್ತುಗಳನ್ನು ಪಾಲಿಸಲೇಬೇಕು. ಒಳ್ಳೆಯ ಕೆಲಸ ಮಾಡಬೇಕು, ಮಗಳ ಜೊತೆ ಸದಾ ಇರಬೇಕು, ಇನ್ನೂ ಒಬ್ಬ ವಕೀಲನನ್ನು ಇಟ್ಟಕೊಳ್ಳಬೇಕು, ಆಕೆಯ ಏನಾದ್ರು ಅನಾಹುತ ಆದರೆ ಅದೇ ರೀತಿ ಆತನಿಗೂ ಆಗುತ್ತದೆ ಎಂದು ಶಾರುಖ್ ಖಡಕ್ ಷರತ್ತುಗಳನ್ನೇ ಹಾಕಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಖಾನ್ ಚಿತ್ರದಿಂದ ಹೊರ ನಡೆದ ತಂಗಿಯ ಪತಿ ಆಯುಷ್‌

    ಇನ್ನು ಖಾಸಗಿ ಕಾರ್ಯಕ್ರಮವೊಂದರಲ್ಲಿ ನಿರ್ದೇಶಕ ಕಮ್ ನಿರೂಪಕ ಕರಣ್ ಜೋಹರ್, ಶಾರುಖ್‌ಗೆ ನಿಮ್ಮ ಮಗಳಿಗೆ ಯಾರಾದರೂ ಕಿಸ್ ಮಾಡಿದ್ರೆ ಏನು ಮಾಡುತ್ತೀರಾ ಎಂದು ಪ್ರಶ್ನಿಸಿದ್ದರು. ಕಿಸ್ ಮಾಡಿದ್ರೆ ಆತನ ತುಟಿಯನ್ನೇ ಕತ್ತರಿಸುತ್ತೇನೆ ಅಂತಾ ಶಾರುಖ್ ನೇರವಾಗಿ ಹೇಳಿದ್ದರು. ಒಟ್ನಲ್ಲಿ ಶಾರುಖ್ ಖಾನ್ ತಮ್ಮ ಮುದ್ದಿನ ಮಗಳ ವಿಚಾರದಲ್ಲಿ ತಾವೆಷ್ಟು ಖಡಕ್ ಎಂಬುದನ್ನ ತಮ್ಮ ಉತ್ತರದ ಮೂಲಕ ತಿಳಿಸಿದ್ದರು.

  • ಪದವಿ ಪಡೆದ ಶಾರೂಕ್ ಪುತ್ರ ಆರ್ಯನ್ – ಫೋಟೋ ವೈರಲ್

    ಪದವಿ ಪಡೆದ ಶಾರೂಕ್ ಪುತ್ರ ಆರ್ಯನ್ – ಫೋಟೋ ವೈರಲ್

    ಮುಂಬೈ: ಬಾಲಿವುಡ್ ಬಾದ್ ಶಾ ನಟ ಶಾರೂಕ್ ಖಾನ್‍ರವರ ಪುತ್ರ ಆರ್ಯನ್ ಖಾನ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆರ್ಯನ್ ಖಾನ್‍ರವರು ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಸಮಾರಂಭದ ಉಡುಪು ಧರಿಸಿ ಕೈನಲ್ಲಿ ಸರ್ಟಿಫಿಕೇಟ್ ಹಿಡಿದುಕೊಂಡಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

    ಸೋಶಿಯಲ್ ಮೀಡಿಯಾದಲ್ಲಿ ಆರ್ಯನ್ ಅಷ್ಟಾಗಿ ಆಕ್ಟೀವ್ ಆಗಿಲ್ಲ. ಆದರೆ ಅವರ ಅಭಿಮಾನಿಗಳು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪದವಿ ಪ್ರಧಾನ ಕಾರ್ಯಕ್ರಮ ನಡೆದಿದ್ದು, ವಿದ್ಯಾರ್ಥಿಗಳನ್ನು ದೂರ ದೂರ ಕೂರಿಸಿ ಪದವಿ ಪ್ರಧಾನ ಸಮಾರಂಭ ನಡೆಸಲಾಗಿದೆ. ಈ ಸಮಾರಂಭದಲ್ಲಿ ಶಾರೂಕ್ ಪುತ್ರ ಆರ್ಯನ್ ಕೂಡ ಭಾಗಿಯಾಗಿದ್ದರು.

     

    View this post on Instagram

     

    A post shared by ???????????????? (@devoted2srk65)

    ಆರ್ಯನ್ ಖಾನ್ 2020ರ ಬ್ಯಾಚ್‍ನ ಬ್ಯಾಚುಲರ್ ಆಫ್ ಫೈನ್ ಆಟ್ರ್ಸ್, ಸಿನಿಮ್ಯಾಟಿಕ್ ಆಟ್ರ್ಸ್, ಫಿಲ್ಮ್ ಅಂಡ್ ಟೆಲಿವಿಷನ್ ಪ್ರೊಡಕ್ಷನ್, ಸ್ಕೂಲ್ ಆಫ್ ಸಿನಿಮ್ಯಾಟಿಕ್ ಆಟ್ರ್ಸ್ ನಲ್ಲಿ ಪದವಿ ಪಡೆದಿದ್ದಾರೆ. ಸದ್ಯ ಆರ್ಯನ್‍ನ ಈ ಫೋಟೋವನ್ನು ಅಭಿಮಾನಿಗಳು ಶೇರ್ ಮಾಡಿಕೊಳ್ಳುವ ಮೂಲಕ ವಿಶ್ ಮಾಡುತ್ತಿದ್ದಾರೆ.

     

    View this post on Instagram

     

    A post shared by kiara ♡ (@aryankhanforever)

    ಆರ್ಯನ್ ಖಾನ್ ಹಾಗೂ ಗೌರಿ ಖಾನ್ ಏಪ್ರಿಲ್‍ನಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ತಾಯಿ-ಮಗ ವಿದೇಶಕ್ಕೆ ಹಾರಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದರು. ಆದರೆ ಗೌರಿ ಖಾನ್ ಮಗನ ಪದವಿ ಪ್ರಧಾನ ಕಾರ್ಯಕ್ರಮಕ್ಕೆ ತೆರಳಿದ್ದರು. ಶಾರೂಖ್ ಪುತ್ರಿ ಸುಹಾನಖಾನ್ ಕೂಡ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

  • ಶಾರುಖ್ ಪುತ್ರಿ ಸುಹಾನ ನಟನೆಯ ಚಿತ್ರದ ಟೀಸರ್

    ಶಾರುಖ್ ಪುತ್ರಿ ಸುಹಾನ ನಟನೆಯ ಚಿತ್ರದ ಟೀಸರ್

    ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರಿ ಸುಹಾನ ನಟನೆಯ ಮೊದಲ ಕಿರುಚಿತ್ರದ ಟೀಸರ್ ರಿಲೀಸ್ ಆಗಿದೆ.

    ನ್ಯೂಯಾರ್ಕ್ ಅಭ್ಯಾಸ ನಡೆಸುತ್ತಿರುವ ಶಾರುಖ್ ಪುತ್ರಿ ತಮ್ಮ ಹಾಟ್ ಫೋಟೋಗಳಿಂದಲೇ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ಚೆಲುವೆ. ಯಾವುದೇ ಸಿನಿಮಾದಲ್ಲಿ ನಟಿಸದಿದ್ದರೂ ಸುಹಾನಾ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಹಿಂದೆ ಬಾಲಿವುಡ್ ಸಿನ್ಮಾದಲ್ಲಿ ಸುಹಾನ ನಟಿಸುತ್ತಿದ್ದಾರೆ ಎಂದು ಸುದ್ದಿಯೊಂದು ಹರಿದಾಡಿತ್ತು. ಈ ಬೆನ್ನಲ್ಲೇ ಸುಹಾನ ನಟನೆಯ ‘ದ ಗ್ರೇ ಪಾರ್ಟ್ ಆಫ್ ಬ್ಲ್ಯೂ’ ಕಿರುಚಿತ್ರದ ಟೀಸರ್ ನ್ನು ನಿರ್ದೇಶಕ ಥಿಯೋಡರ್ ಗಿಮೆನೋ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.

    ನನ್ನ ಮುಂದಿನ ‘ದ ಗ್ರೇ ಪಾರ್ಟ್ ಆಫ್ ಲೈಫ್’ ಕಿರುಚಿತ್ರದ ಕೆಲ ದೃಶ್ಯಗಳನ್ನು ಬಿಡುಗಡೆ ಮಾಡುತ್ತಿದ್ದೇನೆ. ಚಿತ್ರದ ಬಹುತೇಕ ಕೆಲಸಗಳು ಅಂತಿಮಗೊಂಡಿದ್ದು, ಬಿಡುಗಡೆ ದಿನಾಂಕ ನಿಗದಿಯಾಗಿಲ್ಲ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಕಿರುಚಿತ್ರ ಬಿಡುಗಡೆ ಮುನ್ನ ಈ ಟೀಸರ್ ಬಿಡುಗಡೆ ಮಾಡಿದ್ದು, ಎಂಜಾಯ್ ಮಾಡಿ ಎಂದು ಗಿಮೆನೋ ಬರೆದುಕೊಂಡಿದ್ದಾರೆ.

    ಈ ಹಿಂದೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶಾರೂಕ್, ಮಕ್ಕಳಾದ ಆರ್ಯನ್ ಮತ್ತು ಸುಹಾನ ಸಿನಿ ಇಂಡಸ್ಟ್ರಿಗೆ ಬರಲಿದ್ದಾರೆ ಎಂದು ಹೇಳಿದ್ದರು. ಆರ್ಯನ್ ನಿರ್ಮಾಪಕ ಮತ್ತು ನಿರ್ದೇಶಕನಾಗಲು ಇಷ್ಟಪಡುತ್ತಾನೆ ಮತ್ತು ಸುಹಾನ ಕಲಾವಿದೆಯಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತಾಳೆ ಎಂದು ಶಾರುಖ್ ತಿಳಿಸಿದ್ದರು.

    https://www.instagram.com/p/B29oXhVjE9B/

  • ಸುಹಾನಾಳ ಬಿಕಿನಿ ಫೋಟೋ ಶೇರ್ ಮಾಡ್ಕೊಂಡ ಪೂನಂ ಪಾಂಡೆ- ಟ್ವಿಟ್ಟರ್ ನಲ್ಲಿ ಸ್ಪೆಷಲ್ ಲೈನ್

    ಸುಹಾನಾಳ ಬಿಕಿನಿ ಫೋಟೋ ಶೇರ್ ಮಾಡ್ಕೊಂಡ ಪೂನಂ ಪಾಂಡೆ- ಟ್ವಿಟ್ಟರ್ ನಲ್ಲಿ ಸ್ಪೆಷಲ್ ಲೈನ್

    ಮುಂಬೈ: ನಟ ಶಾರೂಖ್ ಖಾನ್ ಪುತ್ರಿ ಬಾಲಿವುಡ್ ಪ್ರವೇಶಕ್ಕೂ ಮುನ್ನವೇ ಗ್ಲಾಮರ್, ಹಾಟ್ ಆ್ಯಂಡ್ ಸೆಕ್ಸಿ ಫೋಟೋಗಳ ಮೂಲಕ ಸಿನಿಲೋಕದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ.

    ಇಟಲಿ ಪ್ರವಾಸದಲ್ಲಿರುವ ಶಾರೂಖ್ ಕುಟುಂಬ ತಮ್ಮ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಎರಡು ದಿನಗಳ ಹಿಂದೆ ಸುಹಾನ ತನ್ನ ಗೆಳೆಯರ ಜೊತೆಗೆ ಬಿಕಿನಿ ಡ್ರೆಸ್ ಫೋಟೋ ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದರು. ಸುಹಾನಳ ಬಿಕಿನಿ ಫೋಟೋ ಅಪ್ಲೋಡ್ ಮಾಡುತ್ತಿದ್ದಂತೆ ಸಖತ್ ವೈರಲ್ ಆಗಿದೆ. ಇತ್ತ ಫೋಟೋ ವೈರಲ್ ಆಗುತ್ತಿದ್ದಂತೆ ಸುಹಾನ ಸಿನಿಮಾಗೆ ಎಂಟ್ರಿ ಕೊಡೋದು ಪಕ್ಕಾ ಎಂಬ ಮಾತುಗಳು ಕೂಡ ಕೇಳಿಬರತೊಡಗಿದವು. ಇದೇ ಫೋಟೋವನ್ನು ಬಾಲಿವುಡ್ ಮಾಡೆಲ್, ಮಾದಕ ಚೆಲುವೆ ಪೂನಂ ಪಾಂಡೆ ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ. ಸುಹಾನಗಾಗಿ ಕೆಲವು ಸ್ಪೆಷಲ್ ಸಾಲುಗಳನ್ನು ಸಹ ಬರೆದಿದ್ದಾರೆ.

    https://twitter.com/iPoonampandey/status/1015171253110476800

    ಸುಹಾನ ಬಿಕಿನಿ ಫೋಟೋ ಜೊತೆ ತನ್ನ ಅರೆನಗ್ನ ಚಿತ್ರ ಸೇರಿಸಿಕೊಂಡಿರುವ ಫೋಟೋವನ್ನು ಟ್ವಿಟ್ಟರ್‍ನಲ್ಲಿ ಪೂನಂ ಅಪ್ಲೋಡ್ ಮಾಡಿಕೊಂಡಿದ್ದಾರೆ. `ನನ್ನ ಬಳಿಕ ಬಿಕಿನಿ ಫೋಟೋ ದಲ್ಲಿ ಸುಂದರವಾಗಿ ಕಾಣುತ್ತಿರುವ ಹುಡುಗಿ ಅಂದ್ರೆ ಶಾರೂಖ್ ಪುತ್ರಿ ಸುಹಾನ ಖಾನ್. ಈ ಹುಡುಗಿ ಆಕರ್ಷಕ ಮೈಮಾಟವನ್ನು ಹೊಂದಿದ್ದಾಳೆ’ ಎಂದು ಬರೆದುಕೊಂಡಿದ್ದಾರೆ.

    ಶಾರೂಖ್ ಪುತ್ರ ಆರ್ಯನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ತಮ್ಮ ಅಬ್ರಾಮ್ ಜೊತೆಗಿರುವ ಫೋಟೋ ಹಾಕಿಕೊಂಡಿದ್ದು, ಹಿಂದಿನಿಗಿಂತಲೂ ಡಿಫರೆಂಟ್ ಲುಕ್‍ನಲ್ಲಿ ಮಿಂಚಿದ್ದಾರೆ. ಉದ್ದ ತೋಳಿನ ನೀಲಿ ಬಣ್ಣದ ಟೀಶರ್ಟ್ ಧರಿಸಿರುವ ಆರ್ಯನ್ ತಂದೆಯಂತೆ ಕಾಣುತ್ತಿದ್ದಾರೆ. ಈಗಾಗಲೇ ಶಾರೂಖ್ ಅವರ ಜೀರೋ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ಶಾರೂಖ್ ಜೊತೆಯಾಗಿ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ನಟಿಸಿದ್ದಾರೆ. ಈ ಹಿಂದೆ `ಜಬ್ ತಕ್ ಹೈ ಜಾನ್’ ಚಿತ್ರದಲ್ಲಿ ಇದೇ ಮೂವರು ಜೊತೆಯಾಗಿ ತೆರೆಯನ್ನು ಹಂಚಿಕೊಂಡಿದ್ದರು.

  • ಶಾರೂಖ್ ಪುತ್ರಿ ಸುಹಾನಾಳ ಹಾಟ್ ಫೋಟೋ ವೈರಲ್

    ಶಾರೂಖ್ ಪುತ್ರಿ ಸುಹಾನಾಳ ಹಾಟ್ ಫೋಟೋ ವೈರಲ್

    ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಕುಟುಂಬ ಇಟಲಿಯ ಪ್ರವಾಸದಲ್ಲಿದೆ. ಶಾರೂಖ್ ಖಾನ್ ಕುಟುಂಬಸ್ಥರು ಇಟಲಿಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಎಲ್ಲ ಫೋಟೋಗಳ ನಡುವೆ ಸುಹಾನಾಳ ಬಿಕಿನಿಯ ಚಿತ್ರ ಮಾತ್ರ ಪಡ್ಡೆ ಹುಡುಗರು ಗಮನ ಸೆಳೆದಿದೆ.

    ಸದ್ಯ ಶಾರೂಖ್ ಅಭಿನಯದ ಜೀರೋ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಕಿಂಗ್ ಖಾನ್ ಕುಟುಂಬದೊಂದಿಗೆ ರಜೆಯ ದಿನಗಳನ್ನು ಕಳೆಯುತ್ತಿದ್ದಾರೆ. ಸುಹನಾ ಖಾನ್ ಎರಡು ದಿನಗಳ ಹಿಂದೆ ಬಿಕಿನಿ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದರು. ಸದ್ಯ ಈ ಫೋಟೋ ಎಲ್ಲರ ಹುಬ್ಬೇರುವಂತೆ ಮಾಡಿದ್ದು, ಭವಿಷ್ಯದಲ್ಲಿ ಸುಹಾನಾ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಸಿನಿ ಅಡ್ಡದಲ್ಲಿ ಕೇಳಿ ಬರುತ್ತಿವೆ. ಇದನ್ನು ಓದಿ: ಕೆಕೆಆರ್ ತಂಡದ ಕ್ರಿಕೆಟಿಗನ ಮೇಲೆ ಸುಹಾನಾಗೆ ಪ್ಯಾರ್!

    ಶಾರೂಖ್ ಪುತ್ರ ಆರ್ಯನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ತಮ್ಮ ಅಬ್ರಾಮ್ ಜೊತೆಗಿರುವ ಫೋಟೋ ಹಾಕಿಕೊಂಡಿದ್ದು, ಹಿಂದಿನಿಗಿಂತಲೂ ಡಿಫರೆಂಟ್ ಲುಕ್‍ನಲ್ಲಿ ಮಿಂಚಿದ್ದಾರೆ. ಉದ್ದ ತೋಳಿನ ನೀಲಿ ಬಣ್ಣದ ಟೀಶರ್ಟ್ ಧರಿಸಿರುವ ಆರ್ಯನ್ ತಂದೆಯಂತೆ ಕಾಣುತ್ತಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದಂದೇ ಮಗಳ ಕಾನೂನುಬಾಹಿರ ಕೆಲಸದ ಬಗ್ಗೆ ರಿವೀಲ್ ಮಾಡಿದ್ರು ಶಾರೂಖ್!

    ಜೀರೋ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಶಾರೂಕ್ ಜೊತೆಯಾಗಿ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ನಟಿಸಿದ್ದಾರೆ. ಈ ಹಿಂದೆ `ಜಬ್ ತಕ್ ಹೈ ಜಾನ್’ ಚಿತ್ರದಲ್ಲಿ ಇದೇ ಮೂವರು ಜೊತೆಯಾಗಿ ತೆರೆಯನ್ನು ಹಂಚಿಕೊಂಡಿದ್ದರು. ಡ

    https://www.instagram.com/p/Bkz3oaXBxWf/?taken-by=suhanakha2

    https://www.instagram.com/p/Bk5c6J3hFHP/?taken-by=suhanakha2

    https://www.instagram.com/p/BgyUcVAhrAi/?taken-by=suhanakha2