Tag: ಸುಶ್ಮಿತಾ ಸೇನ್

  • ಐಶ್ವರ್ಯ ರೈ, ಸೋನಂ ಕಪೂರ್ ಸೇರಿದಂತೆ ಬಾಲಿವುಡ್ ನಟ-ನಟಿಯರಿಂದ ಶ್ರೀದೇವಿ ಅಂತಿಮ ದರ್ಶನ

    ಐಶ್ವರ್ಯ ರೈ, ಸೋನಂ ಕಪೂರ್ ಸೇರಿದಂತೆ ಬಾಲಿವುಡ್ ನಟ-ನಟಿಯರಿಂದ ಶ್ರೀದೇವಿ ಅಂತಿಮ ದರ್ಶನ

    ಮುಂಬೈ: ಅನೇಕ ಬಾಲಿವುಡ್ ನಟ ನಟಿಯರು ಹಾಗೂ ಚಿತ್ರರಂಗದವರು ನಟಿ ಶ್ರೀದೇವಿಯ ಅಂತಿಮ ದರ್ಶನ ಪಡೆದಿದ್ದಾರೆ.

    ಮುಂಬೈನ ಲೋಖಂಡ್ವಾಲಾದ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್‍ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಟಿ ಐಶ್ವರ್ಯಾ ರೈ ಬಚ್ಚನ್, ಜಯಾ ಬಚ್ಚನ್, ಜಯಪ್ರದಾ, ತಬು, ಸುಶ್ಮಿತಾ ಸೇನ್, ಮಾಧುರಿ ದೀಕ್ಷಿತ್, ಶ್ರೀದೇವಿಯ ಸೋದರ ಸೊಸೆ ಸೋನಂ ಕಪೂರ್, ಕಾಜೋಲ್, ಅಜಯ್ ದೇವಗನ್ ಮುಂತಾದ ಬಾಲಿವುಡ್ ನಟ ನಟಿಯರು ಸೇರಿದಂತೆ ಇತರೆ ಗಣ್ಯರು ಹಾಗೂ ಅಭಿಮಾನಿಗಳು ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

    ಇಂದು ಮಧ್ಯಾಹ್ನ 2 ಗಂಟೆಗೆ ಶ್ರೀದೇವಿಯ ಅಂತಿಮ ಯಾತ್ರೆ ಆರಂಭವಾಗಲಿದ್ದು, 3.30ರ ವೇಳೆಗೆ ವಿಲೆ ಪಾರ್ಲೆ ವೆಸ್ಟ್‍ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

    ಸಂಬಂಧಿಕರ ಮದುವೆಗೆಂದು ದುಬೈಗೆ ತೆರಳಿದ್ದ ವೇಳೆ ಕಳೆದ ಶನಿವಾರ ಶ್ರೀದೇವಿ ಮೃತಪಟ್ಟಿದ್ದರು. ವೈದ್ಯಕೀಯ ಹಾಘೂ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ಮಂಗಳವಾರ ರಾತ್ರಿ ಮುಂಬೈಗೆ ತರಲಾಗಿತ್ತು.

    ಆಕಸ್ಮಿಕವಾಗಿ ಬಾತ್‍ಟಬ್‍ನಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿದ್ದಾರೆಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೇಳಲಾಗಿದೆ.

  • 42ನೇ ವರ್ಷಕ್ಕೆ ಕಾಲಿಡ್ತಿರೋ ಸುಶ್ಮಿತಾ ಸೆನ್ ವರ್ಕೌಟ್ ಫೋಟೋ ವೈರಲ್

    42ನೇ ವರ್ಷಕ್ಕೆ ಕಾಲಿಡ್ತಿರೋ ಸುಶ್ಮಿತಾ ಸೆನ್ ವರ್ಕೌಟ್ ಫೋಟೋ ವೈರಲ್

    ಮುಂಬೈ: ಈ 40 ಪ್ಲಸ್ ಹಾಟಿ ಹುಡುಗಿಯನ್ನು ಜನರು ಮರೆತೇ ಹೋಗಿದ್ದರು. ಕೆಲವು ವರ್ಷಗಳ ಹಿಂದೆ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಕಾಣಿಸುತ್ತಿದ್ದರು. ಆದರೆ ಇತ್ತೀಚೆಗೆ ಪೇಜ್ 3 ಪಾರ್ಟಿಗೂ ಈ ಫೇಸ್‍ ಕಟ್ಟು ನೋ ಎಂಟ್ರಿಯಂತಾಗಿತ್ತು. ಆದರೆ ಇದೀಗ ಈಕೆ `ನನ್ನನ್ನು ಅಷ್ಟು ಬೇಗ ಮರೆಯೋಕೆ ಬಿಡ್ತೀನಾ’ ಎಂದು ತನ್ನ ಜಿಮ್ ವಕೌರ್ಟ್‍ನ ಝಲಕ್ ತೋರಿಸಿದ್ದಾರೆ.

    ಸುಶ್ಮಿತಾ ಸೆನ್ ಬಹುಶಃ ಬಾಲಿವುಡ್ ಮಾತ್ರ ಅಲ್ಲ, ಇಡೀ ಭಾರತೀಯ ಚಿತ್ರರಂಗವೇ ಈ ಹೆಣ್ಣನ್ನು ಮರೆತು ಹೋಗಿದೆ. ದಶಕಗಳ ಹಿಂದೆ ಐಶ್ವರ್ಯ ರೈ ಮತ್ತು ಸುಶ್ಮಿತಾ ಸೇನ್ ಇಬ್ಬರನ್ನೂ ಕಂಪೇರ್ ಮಾಡುತ್ತಿದ್ದರು. ಒಬ್ಬರು ಮಿಸ್ ಯುನಿವರ್ಸ್ ಇನ್ನೊಬ್ಬರು ಮಿಸ್ ವರ್ಲ್ಡ್. ಆದರೆ ಐಶ್ ಗೆ ಕೈ ಹಿಡಿದ ಅದೃಷ್ಟ ಸುಶ್ ಕಾಲ ಬಳಿಗೂ ಸುಳಿಯಲಿಲ್ಲ. ಅದೇ ಸುಶ್ಮಿತಾ ಈಗ ಮತ್ತೆ ಲೈಮ್‍ ಲೈಟಿಗೆ ಬರಲು ಜಬರ್‍ ದಸ್ತ್ ವರ್ಕೌಟ್ ಮಾಡ್ತಿದ್ದಾರೆ.

    ಇದೇ ತಿಂಗಳು 19ಕ್ಕೆ ಸುಶ್ಮಿತಾಗೆ 42 ವರ್ಷ ತುಂಬುತ್ತದೆ. ಅದಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ಸಿಕ್ಸ್ ಪ್ಯಾಕ್ ಆ್ಯಬ್‍ ಗಾಗಿ ಜಿಮ್‍ ನಲ್ಲಿ ಕಸರತ್ತು ನಡೆಸ್ತಿದ್ದಾರೆ. ಇದರ ಒಂದು ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಸದ್ಯ ವೈರಲ್ ಆಗಿದೆ.

    https://www.instagram.com/p/Ba_esGvHrxT/?hl=en&taken-by=sushmitasen47

    https://www.instagram.com/p/Bal1sk8HJsI/?hl=en&taken-by=sushmitasen47