Tag: ಸುಶ್ಮಿತಾ ಸೇನ್

  • ಸುಶ್ಮಿತಾ ಸೇನ್ ಮಾಜಿ ಅತ್ತಿಗೆಗೆ ಆರ್ಥಿಕ ಸಂಕಷ್ಟ- ಆನ್‌ಲೈನ್‌ನಲ್ಲಿ ನಟಿ ಸೀರೆ ಮಾರಾಟ

    ಸುಶ್ಮಿತಾ ಸೇನ್ ಮಾಜಿ ಅತ್ತಿಗೆಗೆ ಆರ್ಥಿಕ ಸಂಕಷ್ಟ- ಆನ್‌ಲೈನ್‌ನಲ್ಲಿ ನಟಿ ಸೀರೆ ಮಾರಾಟ

    ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmita Sen) ಮಾಜಿ ಅತ್ತಿಗೆ ಚಾರು ಅಸೋಪಗೆ (Charu Asopa) ಆರ್ಥಿಕ ಸಂಕಷ್ಟ ಎದುರಾದ ಹಿನ್ನೆಲೆ ಮುಂಬೈ ತೊರೆದಿದ್ದಾರೆ. ಇದರ ನಡುವೆ ಆನ್‌ಲೈನ್‌ನಲ್ಲಿ ಸೀರೆ ಮಾರಾಟ ಮಾಡ್ತಿರೋ ನಟಿ ಚಾರು ವಿಡಿಯೋ ಭಾರೀ ವೈರಲ್ ಆಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ತಾವು ಹೊಸ ಬ್ಯುಸಿನೆಸ್ ಶುರು ಮಾಡಿರುವ ಬಗ್ಗೆ ಅವರು ಮಾತನಾಡಿದ್ದಾರೆ. ಇದನ್ನೂ ಓದಿ:ಸಿಂಗಾಪುರದಲ್ಲಿ ಅಗ್ನಿ ಅವಘಡ: ಪವನ್ ಕಲ್ಯಾಣ್ ಪುತ್ರನ ಆರೋಗ್ಯದ ಬಗ್ಗೆ ಅಪ್‌ಡೇಟ್ ಕೊಟ್ರು ಚಿರಂಜೀವಿ

    ಸಂದರ್ಶನವೊಂದರಲ್ಲಿ ನಟಿ ಚಾರು ಅಸೋಪ ಮಾತನಾಡಿ, ಆನ್‌ಲೈನ್‌ನಲ್ಲಿ ಬಟ್ಟೆ ಮಾರಾಟ ಮಾಡ್ತಿರೋದು ನಿಜ. ಮುಂಬೈ ಬಿಟ್ಟು ನನ್ನ ಪೋಷಕರೊಂದಿಗೆ ನಾನು ಮತ್ತು ಮಗಳು ರಾಜಸ್ಥಾನದ ಬಿಕಾನೇರ್‌ಗೆ ವಾಸಿಸುತ್ತಿದ್ದೇನೆ ಎಂದಿದ್ದಾರೆ. ಮುಂಬೈನಲ್ಲಿ ವಾಸಿಸೋದು ಸುಲಭವಲ್ಲ. ಮನೆಯ ಬಾಡಿಗೆ ಮತ್ತು ಇತರೆ ಖರ್ಚು ಸೇರಿ 1 ಲಕ್ಷದಿಂದ 1.5 ಲಕ್ಷ ರೂ. ಆಗುತ್ತಿತ್ತು. ಅದನ್ನು ನಿಭಾಯಿಸುವುದು ಅಷ್ಟು ಸುಲಭವಾಗಿರಲಿಲ್ಲ. ಮಗಳನ್ನು ಒಂಟಿಯಾಗಿ ದಾದಿ ಜೊತೆ ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಶೂಟಿಂಗ್ ಇದ್ದ ಸಂದರ್ಭದಲ್ಲಿ ಕಷ್ಟವಾಗುತ್ತಿತ್ತು. ಹಾಗಾಗಿ ನನ್ನೂರಿಗೆ ಬಂದು ಸ್ವಂತ ಬ್ಯುಸಿನೆಸ್ ಆರಂಭಿಸಿದೆ. ಇದು ಆತುರದಲ್ಲಿ ಕೈಗೊಂಡ ನಿರ್ಧಾರವಲ್ಲ ಎಂದಿದ್ದಾರೆ.

     

    View this post on Instagram

     

    A post shared by Charu Asopa (@asopacharu)

    ಅವರ ಆರ್ಥಿಕ ಸ್ಥಿತಿಯನ್ನು ಟ್ರೋಲ್ ಮಾಡಿದ್ದರ ಕುರಿತು ನಟಿ ಮಾತನಾಡಿ, ನೀವು ಹೊಸದನ್ನು ಶುರು ಮಾಡಿದಾಗ ಎಲ್ಲರೂ ಕಷ್ಟಪಡುತ್ತಾರೆ. ನನ್ನ ವಿಚಾರದಲ್ಲೂ ಅದೇ ಆಗಿದೆ. ಆರ್ಡರ್ ತೆಗೆದುಕೊಳ್ಳುವುದರಿಂದ ಹಿಡಿದು ಈಗ ಎಲ್ಲವನ್ನು ನಿಭಾಯಿಸುತ್ತಿದ್ದೇನೆ. ನನ್ನ ಮಗುವಿನ ಕಡೆ ಗಮನ ಹರಿಸಲು ಈ ನಿರ್ಧಾರ ಕೈಗೊಂಡಿದ್ದೇನೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ವೇಳೆ, ಶೂಟಿಂಗ್ ಇದ್ದಾಗ ಮಾತ್ರ ಮುಂಬೈಗೆ ಬರೋದಾಗಿ ಚಾರು ಹೇಳಿದ್ದಾರೆ. ಇದನ್ನೂ ಓದಿ:ಸಿನಿಮಾ ಸೋತ್ರೂ ಶ್ರೀವಲ್ಲಿಗೆ ಬೇಡಿಕೆ- ಶಾಹಿದ್ ಕಪೂರ್‌ಗೆ ರಶ್ಮಿಕಾ ಜೋಡಿ

    ಅಂದಹಾಗೆ, ಬಾಲಿವುಡ್ ನಟಿ ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್‌ರನ್ನು ಚಾರು ಅಸೋಪ ಮದುವೆಯಾಗಿದ್ದರು. ಈ ಜೋಡಿಗೆ ಜಿಯಾನಾ ಎಂಬ ಮಗಳಿದ್ದಾಳೆ. ಕೆಲ ಮನಸ್ತಾಪಗಳಿಂದ ರಾಜೀವ್ ಮತ್ತು ಚಾರು ಡಿವೋರ್ಸ್ ಪಡೆದರು.

  • ಡೇಟಿಂಗ್ ಮಾಡುತ್ತಿಲ್ಲ, 3 ವರ್ಷಗಳಿಂದ ಒಂಟಿಯಾಗಿದ್ದೇನೆ ಎಂದ ಸುಶ್ಮಿತಾ ಸೇನ್

    ಡೇಟಿಂಗ್ ಮಾಡುತ್ತಿಲ್ಲ, 3 ವರ್ಷಗಳಿಂದ ಒಂಟಿಯಾಗಿದ್ದೇನೆ ಎಂದ ಸುಶ್ಮಿತಾ ಸೇನ್

    ಬಾಲಿವುಡ್ ಬ್ಯೂಟಿ ಸುಶ್ಮಿತಾ ಸೇನ್ (Sushmitha Sen) ಇದೀಗ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮೌನ ಮುರಿದಿದ್ದಾರೆ. ಯಾರೊಂದಿಗೂ ಡೇಟ್ ಮಾಡುತ್ತಿಲ್ಲ. ಕಳೆದ 3 ವರ್ಷಗಳಿಂದ ಒಂಟಿಯಾಗಿದ್ದೇನೆ ಎಂದು ನಟಿ ಸುಶ್ಮಿತಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    ನಟಿ ರಿಯಾ ಚಕ್ರವರ್ತಿಗೆ ನೀಡಿದ ಸಂದರ್ಶನದಲ್ಲಿ ಬದುಕಿನ ಹಲವು ವಿಚಾರಗಳನ್ನು ಮುಕ್ತವಾಗಿ ಮಾತನಾಡಿದ್ದಾರೆ. ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಬ್ರೇಕಪ್ ಆದ್ಮೇಲೆ 3 ವರ್ಷಗಳಿಂದ ಸಿಂಗಲ್ ಇದ್ದೇನೆ ಎಂದಿದ್ದಾರೆ. ನನ್ನ ಜೀವನದಲ್ಲಿ ಈಗ ಯಾವುದೇ ಪುರುಷ ಇಲ್ಲ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಸೋನಲ್‌ ಜೊತೆ ತರುಣ್‌ ರೊಮ್ಯಾಂಟಿಕ್‌ ಫೋಟೋಶೂಟ್‌- ಮದುವೆ ಬಗ್ಗೆ ಕೊಟ್ರು ಗುಡ್‌ ನ್ಯೂಸ್

    2021ರಿಂದಲೂ ನಾನು ಒಂಟಿ. ನನ್ನ ಜೀವನದಲ್ಲಿ ಕೆಲವು ಅದ್ಭುತವಾದ ಸ್ನೇಹಿತರಿದ್ದಾರೆ. ನಾನು ಅವರಿಗೆ ಕಾಲ್ ಮಾಡಿ ಕಾರಲ್ಲಿ ಗೋವಾಗೆ ಹೋಗೋಣ ಎಂದು ಹೇಳ್ತೀನಿ ಎಂದು ಕಾಯುತ್ತಿರುತ್ತಾರೆ ಎಂದು ನಟಿ ಮಾತನಾಡಿದ್ದಾರೆ.

    ಸದ್ಯಕ್ಕೆ ನಾನು ಈ ಬ್ರೇಕ್ ಎಂಜಾಯ್ ಮಾಡುತ್ತಿದ್ದೇನೆ. ನಾನು ಸಿಂಗಲ್ ಆಗಿದ್ರೂ ಯಾರ ಮೇಲೆಯೂ ನನಗೆ ಈ ಕ್ಷಣಕ್ಕೆ ಯಾವುದೇ ಆಸಕ್ತಿ ಬಂದಿಲ್ಲ ಎಂದಿದ್ದಾರೆ ನಟಿ ಸುಶ್ಮಿತಾ.

  • ತೃತೀಯ ಲಿಂಗಿಗಾಗಿ ಹೋರಾಡಿದ ಶ್ರೀಗೌರಿ ಸಾವಂತ್ ಕಥೆ ಹೇಳಲು ಸಜ್ಜಾದ ಸುಶ್ಮಿತಾ ಸೇನ್

    ತೃತೀಯ ಲಿಂಗಿಗಾಗಿ ಹೋರಾಡಿದ ಶ್ರೀಗೌರಿ ಸಾವಂತ್ ಕಥೆ ಹೇಳಲು ಸಜ್ಜಾದ ಸುಶ್ಮಿತಾ ಸೇನ್

    ಬಾಲಿವುಡ್ (Bollywood) ಬ್ಯೂಟಿ ಸುಶ್ಮಿತಾ ಸೇನ್ (Sushmitha Sen) ಅವರಿಗೆ ಕೆಲ ತಿಂಗಳುಗಳ ಹಿಂದೆ ಹಾರ್ಟ್ ಅಟ್ಯಾಕ್ ಆಗಿತ್ತು. ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡ ಬೆನ್ನಲ್ಲೇ ಬ್ಯಾಕ್ ಟು ಆ್ಯಕ್ಷನ್ ಅಂತಾ ‘ತಾಲಿ’ (Taali) ಸಿನಿಮಾ ಮೂಲಕ ಕಮ್‌ಬ್ಯಾಕ್ ಆಗ್ತಿದ್ದಾರೆ. ತೃತೀಯ ಲಿಂಗಿಗಾಗಿ ಹೋರಾಡಿದ ಶ್ರೀಗೌರಿ ಸಾವಂತ್ ಅವರ ಜೀವನದ ಕತೆಯನ್ನ ಹೇಳಲು ರೆಡಿಯಾಗಿದ್ದಾರೆ.

    ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿ ಸುಶ್ಮಿತಾ ಸೇನ್ ಬ್ಯುಸಿಯಾಗಿದ್ದಾರೆ. ತಾಲಿ ಸಿನಿಮಾದ ಟೀಸರ್ ಲುಕ್‌ನಿಂದ ನಟಿ ಗಮನ ಸೆಳೆಯುತ್ತಿದ್ದಾರೆ. ಟೀಸರ್ ಅನ್ನು ಹಂಚಿಕೊಳ್ಳುವಾಗ, ಸುಶ್ಮಿತಾ ಸೇನ್ ಬರೆದಿದ್ದಾರೆ – ನಿಂದನೆಯಿಂದ ಚಪ್ಪಾಳೆಯವರೆಗೆ ಪ್ರಯಾಣದ ಈ ಕಥೆ. ಭಾರತದ ತೃತೀಯಲಿಂಗಿಗಾಗಿ ಹೋರಾಡಿದ ಶ್ರೀ ಗೌರಿ ಸಾವಂತ್ (ShreeGauri Sawant) ಅವರ ಕಥೆ. ಆಗಸ್ಟ್ 15 ರಂದು ಒಟಿಟಿಯಲ್ಲಿ ಸಿನಿಮಾದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

    ಟೀಸರ್‌ನ ಆರಂಭದಲ್ಲಿ, ಸುಶ್ಮಿತಾ ಹೇಳುತ್ತಾರೆ- ನಾನು ಗೌರಿ, ಕೆಲವರು ಅವರನ್ನು ನಪುಂಸಕ ಮತ್ತು ಕೆಲವರು ಸಾಮಾಜಿಕ ಕಾರ್ಯಕರ್ತೆ ಎಂದು ಕರೆಯುತ್ತಾರೆ. ಕೆಲವರು ಇದನ್ನು ಗಿಮಿಕ್ ಮತ್ತು ಕೆಲವರು ಗೇಮ್ ಚೇಂಜರ್ ಎಂದು ಕರೆಯುತ್ತಾರೆ. ಇದು ನಿಂದನೆಯಿಂದ ಹಿಡಿದು ಚಪ್ಪಾಳೆ ತಟ್ಟುವವರೆಗಿನ ಪಯಣದ ಕಥೆ. ನನಗೆ ಸ್ವಾಭಿಮಾನ, ಗೌರವ, ಸ್ವಾತಂತ್ರ‍್ಯ, ಈ ಮೂರೂ ಬೇಕು. ಟೀಸರ್‌ನಲ್ಲಿ ಸುಶ್ಮಿತಾ, ಅವರ ಅವತಾರ ಅದ್ಭುತವಾಗಿ ಹೇಳಿದ್ದಾರೆ. ಇದನ್ನೂ ಓದಿ:ಪತಿಗೆ ಡಿವೋರ್ಸ್‌ ನೀಡಿದ್ಯಾಕೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ ಆ್ಯಂಕರ್ ಚೈತ್ರಾ

    ತಾಲಿ ಪೋಸ್ಟರ್ ಅನ್ನು ಸ್ವಲ್ಪ ಸಮಯದ ಹಿಂದೆ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಸುಶ್ಮಿತಾ ಲುಕ್ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಸೀರೆ ಉಟ್ಟು, ಹಣೆಯ ಮೇಲೆ ದೊಡ್ಡ ಕೆಂಪು ಕುಂಕುಮ, ಕೊರಳಲ್ಲಿ ಹಾರ ಹಾಕಿದ್ದ ಸುಶ್ಮಿತಾ ದಿಟ್ಟ ನೋಟ ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ತಾಲಿ’ ನಂತರ ಸುಶ್ಮಿತಾ ಆರ್ಯ 3 (Arya 3) ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯ ಎರಡು ಸೀಸನ್‌ಗಳು ಅದ್ಭುತವಾಗಿದ್ದವು. ಈಗ ಮೂರನೇ ಸೀಸನ್ ತಯಾರಿಯಲ್ಲಿ ಸುಶ್ಮಿತಾ ಬ್ಯುಸಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿವೋರ್ಸ್ ಆಗಿ ಒಂದು ವಾರ ಕಳೆದಿಲ್ಲ ಹೆಂಡ್ತಿ ಬೇಕು ಎಂದ ಸುಶ್ಮಿತಾ ಸೇನ್ ಅಣ್ಣ

    ಡಿವೋರ್ಸ್ ಆಗಿ ಒಂದು ವಾರ ಕಳೆದಿಲ್ಲ ಹೆಂಡ್ತಿ ಬೇಕು ಎಂದ ಸುಶ್ಮಿತಾ ಸೇನ್ ಅಣ್ಣ

    ಬಾಲಿವುಡ್ (Bollywood) ಸ್ಟಾರ್ ನಟಿ ಸುಶ್ಮಿತಾ ಸೇನ್ (Sushmitha Sen) ಅವರ ಸಹೋದರ ರಾಜೀವ್ ಸೇನ್ (Rajeev Sen) ಮತ್ತು ಅವರ ಪತ್ನಿ ಕಿರುತೆರೆ ನಟಿ ಚಾರು ಅಸೋಪಾ (Charu) ಅಧಿಕೃತವಾಗಿ ಡಿವೋರ್ಸ್ ಪಡೆದಿದ್ದರು. ಈ ಮೂಲಕ 4 ವರ್ಷಗಳ ದಾಂಪತ್ಯ ಬದುಕಿಗೆ ಜೂನ್ 8ರಂದು ಅಂತ್ಯ ಹಾಡಿದ್ದರು. ಹೀಗಿರುವಾಗ ಈಗ ಬೇರೇ ಕಥೆ ಶುರುವಾಗಿದೆ. ಡಿವೋರ್ಸ್ ಆಗಿ ಒಂದು ವಾರ ಕಳೆದಿಲ್ಲ ಹೆಂಡ್ತಿ ಬೇಕು ಅಂತಾ ಸ್ಟಾರ್‌ನಟಿ ಸುಶ್ಮಿತಾ ಸೇನ್ ಅಣ್ಣ ರಾಜೀವ್ ಬಾಯ್ಬಿಟ್ಟಿದ್ದಾರೆ.

    ಮಗಳನ್ನೂ ಒಳಗೊಂಡಿರುವ ಸಂಬಂಧ ಇದಾಗಿರುವುದರಿಂದ ನಮ್ಮಲ್ಲಿ ಗೆಳೆತನ ಮುಖ್ಯ. ನಾವಿಬ್ಬರೂ ಎಂದಿಗೂ ಪರಸ್ಪರ ಒಬ್ಬರಿಗೊಬ್ಬರ ಒಳ್ಳೆಯದನ್ನೇ ಬಯಸುತ್ತೇವೆ ಎಂದು ಚಾರು ಅಸೋಪಾ ಈ ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ಬೆನ್ನಲ್ಲೇ ರಾಜೀವ್ ಮಾತನಾಡಿ ತಾವಿಬ್ಬರೂ ಪರಸ್ಪರ ಸಪೋರ್ಟ್ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ತಂದೆಯಾಗಿ ಮಗಳಿಗೆ ಹೆಚ್ಚಿನ ಸಮಯ ಕೊಡುವುದು ನನ್ನ ಆದ್ಯತೆ. ಹಾಗೆಯೇ ಚಾರುವನ್ನು ಚೆನ್ನಾಗಿ ನೋಡಿಕೊಳ್ಳುವುದು ಕೂಡಾ ಅಗತ್ಯ. ನನ್ನ ಪ್ರೀತಿ ಹಾಗೂ ಬೆಂಬಲ ಹೀಗೆಯೇ ಇರುತ್ತದೆ. ಒಂದು ದಿನ ನಾನು ಚಾರು ಒಂದಾಗುತ್ತೇವೆ ಎನ್ನುವ ಭರವಸೆ ಇದೆ ಎಂದಿದ್ದಾರೆ. ಈ ಮೂಲಕ ಮಾಜಿ ಪತ್ನಿ ಜೊತೆ ಮತ್ತೆ ಒಂದಾಗುವ ಬಗ್ಗೆ ರಾಜೀವ್ ಸೇನ್ ಮಾತನಾಡಿದ್ದಾರೆ. ಜೂನ್‌ 16ಕ್ಕೆ ಮದುವೆ ವಾರ್ಷಿಕೋತ್ಸವದ ಸಂಭ್ರಮವಾಗಿದ್ದು, ಈ ಬೆನ್ನಲ್ಲೇ ನಟ ಈ ಹೇಳಿಕೆ ನೀಡಿರೋದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚಿತ್ರಕ್ಕೆ ಟೈಟಲ್ ಫಿಕ್ಸ್

    ರಾಜೀವ್ ಸೇನ್- ಚಾರು ಜೋಡಿ 2019ರಲ್ಲಿ ಜೂನ್ 16ರಂದು ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಇಬ್ಬರ ನಡುವೆ ಹಲವು ವಿಚಾರಗಳಲ್ಲಿ ಹೊಂದಾಣಿಕೆ ಸಮಸ್ಯೆ ಎದುರಾಯಿತು. ಚಾರು, ನನ್ನ ಪತಿಗೆ ಮೊದಲೇ ಮುದುವೆಯಾಗಿತ್ತು ಆದರೂ ತಿಳಿಸದೇ ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ರೆ, ನನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ರಾಜೀವ್ ಆರೋಪ ಮಾಡಿದ್ರು. ಇಬ್ಬರ ದಾಂಪತ್ಯದ ಗುದ್ದಾಟಕ್ಕೆ ಜೂನ್ ೮ರಂದು ತೆರೆ ಬಿದ್ದಿತ್ತು. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದಿರೋದಾಗಿ ಅಧಿಕೃತವಾಗಿ ತಿಳಿಸಿದ್ದರು. ಹಾಗೆಯೇ ಮಗಳು ಜಿಯಾ ಪೋಷಕರಾಗಿ ಇರುತ್ತೇವೆ ಎಂದು ತಿಳಿಸಿದ್ದಾರೆ.

    ತಮ್ಮ ಡಿವೋರ್ಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಜೀವ್ ತಿಳಿಸಿದ್ದಾರೆ. ಚಾರು ಅಸೋಪಾ ಅವರೊಂದಿಗಿನ ವಿಚ್ಛೇದನ ಮತ್ತು ನಾಲ್ಕು ವರ್ಷಗಳ ವಿವಾಹದ ಅಂತ್ಯಪಡಿಸುತ್ತಿರುವುದಾಗಿ ಹೇಳಿದ್ದರು. ನಾವು ಒಬ್ಬರಿಗೊಬ್ಬರು ಜೊತೆ ಇರಲು ಸಾಧ್ಯವಾಗದ ವ್ಯಕ್ತಿಗಳು. ಆದರೆ, ಪ್ರೀತಿ ಉಳಿಯುತ್ತದೆ. ನಾವು ಯಾವಾಗಲೂ ನಮ್ಮ ಮಗಳಿಗೆ ತಾಯಿ ಮತ್ತು ತಂದೆಯಾಗಿರುತ್ತೇವೆ ಎಂದು ಪೋಸ್ಟ್ ಹಾಕಿರುವ ರಾಜೀವ್ ಅವರು, ಪೋಸ್ಟ್ ಜೊತೆಗೆ ರಾಜೀವ್ ಚಾರು ಅವರೊಂದಿಗಿನ ಚಿತ್ರವನ್ನು ಸಹ ಕಳೆದ ವಾರ ಹಂಚಿಕೊಂಡಿದ್ದರು.

    ಇತ್ತೀಚಿಗೆ ಬಿಗ್ ಬಾಸ್ ಒಟಿಟಿ ಸೀಸನ್ 2ಕ್ಕೆ ರಾಜೀವ್ ಸೇನ್ ಹೋಗುವ ಬಗ್ಗೆ ಸುದ್ದಿಯಾಗಿತ್ತು. ಈ ಬಗ್ಗೆ ರಾಜೀವ್ ಸ್ಪಷ್ಟನೆ ನೀಡಿದ್ದಾರೆ. ತಾವು ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲ. ಪ್ರೇಕ್ಷಕನಾಗಿ ಈ ಶೋ ನೋಡಲು ಇಷ್ಟ. ಆದರೆ ನನಗೆ ಇಷ್ಟು ಲಾಂಗ್ ಕಮೀಟ್‌ಮೆಂಟ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಬಿಗ್ ಬಾಸ್‌ಗೆ ನಟ ಬರಲಿದ್ದಾರೆ ಎಂಬ ವದಂತಿಗೆ ರಾಜೀವ್ ಸ್ಪಷ್ಟನೆ ನೀಡಿದ್ದರು.

  • ಹೃದಯಾಘಾತದಿಂದ ಬದುಕುಳಿದ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ನಟಿ ಸುಶ್ಮಿತಾ ಸೇನ್

    ಹೃದಯಾಘಾತದಿಂದ ಬದುಕುಳಿದ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ನಟಿ ಸುಶ್ಮಿತಾ ಸೇನ್

    ಬಾಲಿವುಡ್ (Bollywood) ನಟಿ ಸುಶ್ಮಿತಾ ಸೇನ್ (Sushmitha Sen) ಅವರಿಗೆ ಕೆಲವೇ ದಿನಗಳ ಹಿಂದೆ ಹೃದಯಾಘಾತವಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ನಟಿ ತಿಳಿಸಿದ್ದರು. ಇದೀಗ ಸರ್ಜರಿ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಹೃದಯಾಘಾತ ಆದ ಬಳಿಕ ಮೊದಲ ಬಾರಿಗೆ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಲೈವ್‌ಗೆ ಬಂದಿದ್ದಾರೆ. ಹೃದಯಾಘಾರದಿಂದ ಬದುಕುಳಿದ ಬಗ್ಗೆ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ: ವರುಣ್ ತೇಜ್ ಜೊತೆ ಲಾವಣ್ಯ ಮದುವೆ? ಸ್ಪಷ್ಟನೆ ನೀಡಿದ ನಟಿ

    ಸಾಕಷ್ಟು ಸೆಲೆಬ್ರಿಗಳು ಇತ್ತೀಚಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜಿಮ್‌ಗೆ ಹೋಗಿ ಫಿಟ್ ಆಗಿದ್ದರೂ ಕೂಡ ಹಾರ್ಟ್ ಆಟ್ಯಾಕ್‌ನಿಂದ (Heart Attack) ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅದೆಷ್ಟೋ ಮಂದಿ ಜಿಮ್- ವರ್ಕೌಟ್ ಬಗ್ಗೆ ದೂರಿದ್ದುಯಿದೆ. ಈ ವಿಚಾರವಾಗಿ ನಟಿ ಕೂಡ ಲೈವ್‌ನಲ್ಲಿ ಮಾತನಾಡಿದ್ದಾರೆ.

    ನಿಮ್ಮಲ್ಲಿ ಬಹುತೇಕ ಜನರು ಜಿಮ್‌ಗೆ ಹೋಗೋದನ್ನು ನಿಲ್ಲಿಸುತ್ತೀರಿ ಅಂತ ನನಗೆ ಗೊತ್ತು. ಜಿಮ್‌ಗೆ ಹೋದರೂ ಆಕೆಗೆ ಏನೂ ಉಪಯೋಗ ಆಗಲಿಲ್ಲ ನೋಡು ಅಂತ ಮಾತಾಡಿಕೊಳ್ತೀರಿ. ಆದರೆ ಅದು ಸರಿಯಲ್ಲ. ವರ್ಕೌಟ್ ಮಾಡುವುದು ನನಗೆ ಉಪಯೋಗಕ್ಕೆ ಬಂದಿದೆ. ನಾನು ಬದುಕುಳಿದಿದ್ದು ಭೀಕರ ಹೃದಯಾಘಾತದಿಂದ. ನನ್ನ ಹೃದಯದಲ್ಲಿ ಶೇಕಡ 95ರಷ್ಟು ಬ್ಲಾಕೇಜ್ ಇತ್ತು. ನನ್ನ ಜೀವನದಲ್ಲಿ ಕ್ರಿಯಾಶೀಲತೆ ಇದ್ದಿದ್ದರಿಂದಲೇ ನಾನು ಬದುಕಿದೆ ಎಂದಿದ್ದಾರೆ ಸುಶ್ಮಿತಾ ಸೇನ್.

     

    View this post on Instagram

     

    A post shared by Sushmita Sen (@sushmitasen47)

    ಇನ್ಸ್ಟಾಗ್ರಾಂ ಲೈವ್‌ಗೆ ಬಂದಿದ್ದ ಸುಶ್ಮಿತಾ ಸೇನ್ ಅವರು ಈ ಎಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸರ್ಜರಿ ಬಳಿಕ ಅವರು ಸಾಕಷ್ಟು ಚೇತರಿಸಿಕೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ತಮಗೆ ಸಹಾಯ ಮಾಡಿದ ಎಲ್ಲರಿಗೂ ಸುಶ್ಮಿತಾ ಸೇನ್ ಧನ್ಯವಾದ ತಿಳಿಸಿದ್ದಾರೆ.

  • ನಟಿ ಸುಶ್ಮಿತಾ ಸೇನ್ ಗೆ ಹೃದಯಾಘಾತ: ಆತಂಕ ಬಿಚ್ಚಿಟ್ಟ ಭುವನಸುಂದರಿ

    ನಟಿ ಸುಶ್ಮಿತಾ ಸೇನ್ ಗೆ ಹೃದಯಾಘಾತ: ಆತಂಕ ಬಿಚ್ಚಿಟ್ಟ ಭುವನಸುಂದರಿ

    ‘ಹೃದಯಾಘಾತವಾದಾಗ (Heart Attack) ನನಗೂ ಆತಂಕವಾಗಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಾದೆ. ನನಗೆ ಆಗ ಆಂಜಿಯೋಪ್ಲ್ಯಾಸ್ಟಿ ಮಾಡಿ, ಸ್ಟಂಟ್ ಹಾಕಿದ್ದಾರೆ. ವೈದ್ಯರು ನನ್ನೊಂದಿಗೆ ಮಾತನಾಡುತ್ತಾ ನನ್ನ ಹೃದಯ ವಿಶಾಲವಾಗಿದೆ ಮತ್ತು ಪ್ರೀತಿಯಿಂದ ತುಂಬಿದೆ ಎಂದಿದ್ದಾರೆ. ಹಾಗಾಗಿ ನಾನು ನೆಮ್ಮದಿಯಿಂದ ಇದ್ದೇನೆ. ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದಿದ್ದಾರೆ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್.

    ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿಯೂ (Bhuvanasundari) ಆಗಿರುವ ಸುಶ್ಮಿತಾ ಸೇನ್ (Sushmita Sen) ಗೆ ಹೃದಯಾಘಾತ ಆಗಿರುವ ವಿಚಾರ ನಿನ್ನೆಯಷ್ಟೇ ತಿಳಿದಿತ್ತು. ಎರಡ್ಮೂರು ದಿನಗಳ ಹಿಂದೆಯೇ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ವಿಷಯವನ್ನು ಸ್ವತಃ ಸುಶ್ಮಿತಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.

    ಡೇಟಿಂಗ್, ಡಿವೋರ್ಸ್ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಿದ್ದ ಸುಶ್ಮಿತಾ, ಇಂಥದ್ದೊಂದು ವಿಷಯವನ್ನು ಹಂಚಿಕೊಂಡಾಗ ಅಭಿಮಾನಿಗಳಿಗೆ ಆತಂಕವಾಗಿದ್ದು ಸಹಜ. ಈಗ ನಿಮ್ಮ ಆರೋಗ್ಯ ಹೇಗಿದೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಹೃದಯಾಘಾತಕ್ಕೆ ಕಾರಣವನ್ನೂ ಹಲವರು ಕೇಳಿದ್ದಾರೆ. ತಡವಾಗಿ ಸುದ್ದಿ ಹಂಚಿಕೊಂಡಿದ್ದನ್ನೂ ಹಲವರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮಾರ್ಚ್ 4ಕ್ಕೆ ‘ಕಬ್ಜ’ ಸಿನಿಮಾ ಟ್ರೈಲರ್: ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಂಭ್ರಮ

    ಸುಶ್ಮಿತಾ ಅವರೇ ಹೇಳಿಕೊಂಡಂತೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದಿದ್ದಾರೆ. ಆರೋಗ್ಯದ ಬಗ್ಗೆ ಆತಂಕ ಪಡಬೇಕಿಲ್ಲ ಎಂದು ಅಭಿಮಾನಿಗಳಿಗೂ ಅವರು ಹೇಳಿದ್ದಾರೆ. ವೈದ್ಯರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಚಿಕಿತ್ಸೆ ನೀಡಿದ್ದರಿಂದ ಗುಣಮುಖರಾಗುತ್ತಿರುವ ವಿಚಾರವನ್ನೂ ಅವರು ತಿಳಿಸಿದ್ದಾರೆ.  ತಮ್ಮ ತಂದೆಯು ಈ ಸಮಯದಲ್ಲಿ ಧೈರ್ಯ ನೀಡಿದ್ದನ್ನೂ ಅವರು ಸ್ಮರಿಸಿಕೊಂಡಿದ್ದಾರೆ.

  • ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಗೆ ಹೃದಯಾಘಾತ

    ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಗೆ ಹೃದಯಾಘಾತ

    ಬಾಲಿವುಡ್ (Bollywood) ನಟಿ, ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ ಗೆ (Sushmita Sen) ಹೃದಯಾಘಾತ (Heart Attack) ಆಗಿದೆ. ಎರಡ್ಮೂರು ದಿನಗಳ ಹಿಂದೆಯೇ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ವಿಷಯವನ್ನು ಸ್ವತಃ ಸುಶ್ಮಿತಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಡೇಟಿಂಗ್, ಡಿವೋರ್ಸ್ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಿದ್ದ ಸುಶ್ಮಿತಾ, ಇಂಥದ್ದೊಂದು ವಿಷಯವನ್ನು ಹಂಚಿಕೊಂಡಾಗ ಅಭಿಮಾನಿಗಳಿಗೆ ಆತಂಕವಾಗಿದ್ದು ಸಹಜ. ಈಗ ನಿಮ್ಮ ಆರೋಗ್ಯ ಹೇಗಿದೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಹೃದಯಾಘಾತಕ್ಕೆ ಕಾರಣವನ್ನೂ ಹಲವರು ಕೇಳಿದ್ದಾರೆ. ತಡವಾಗಿ ಸುದ್ದಿ ಹಂಚಿಕೊಂಡಿದ್ದನ್ನೂ ಹಲವರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಮಾರ್ಚ್ 4ಕ್ಕೆ ‘ಕಬ್ಜ’ ಸಿನಿಮಾ ಟ್ರೈಲರ್: ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಂಭ್ರಮ

    ಸುಶ್ಮಿತಾ ಅವರೇ ಹೇಳಿಕೊಂಡಂತೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದಿದ್ದಾರೆ. ಆರೋಗ್ಯದ ಬಗ್ಗೆ ಆತಂಕ ಪಡಬೇಕಿಲ್ಲ ಎಂದು ಅಭಿಮಾನಿಗಳಿಗೂ ಅವರು ಹೇಳಿದ್ದಾರೆ. ವೈದ್ಯರು ಸೂಕ್ತ ರೀತಿಯಲ್ಲಿ ಸ್ಪಂದಿಸಿ ಚಿಕಿತ್ಸೆ ನೀಡಿದ್ದರಿಂದ ಗುಣಮುಖರಾಗುತ್ತಿರುವ ವಿಚಾರವನ್ನೂ ಅವರು ತಿಳಿಸಿದ್ದಾರೆ.

  • ಪತ್ನಿಗೆ ಟಿವಿ ಸ್ಟಾರ್ ಜೊತೆ ಸಂಬಂಧವಿದೆ ಎಂದು ಗಂಭೀರ ಆರೋಪ ಮಾಡಿದ ಸುಶ್ಮಿತಾ ಸೇನ್ ಸಹೋದರ

    ಪತ್ನಿಗೆ ಟಿವಿ ಸ್ಟಾರ್ ಜೊತೆ ಸಂಬಂಧವಿದೆ ಎಂದು ಗಂಭೀರ ಆರೋಪ ಮಾಡಿದ ಸುಶ್ಮಿತಾ ಸೇನ್ ಸಹೋದರ

    ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ (Sushmita Sen) ಮೊನ್ನೆ ಮೊನ್ನೆಯಷ್ಟೇ ಲಲಿತ್ ಮೋದಿ ವಿಚಾರಕ್ಕಾಗಿ ಸುದ್ದಿಯಾಗಿದ್ದರು. ಲಲತ್ ಮೋದಿ (Lalit Modi) ಮತ್ತು ಸುಶ್ಮಿತಾ ಸೇನ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ  ಅವರ ಸಹೋದರ ಕೂಡ ಸುದ್ದಿಗೆ ಕಾರಣರಾಗಿದ್ದಾರೆ. ಸುಶ್ಮಿತಾ ಸೇನ್ ಸಹೋದರ ರಾಜೀವ್, ಸ್ವತಃ ತನ್ನ ಪತ್ನಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪತ್ನಿ ಚಾರು ಅಸೋಪಾ ಟಿವಿ ಸ್ಟಾರ್ ಜೊತೆಗೆ ಅಫೇರ್ (Affair) ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

    ರಾಜೀವ್ (Rajeev Sen) ಮತ್ತು ಚಾರು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ದಾಂಪತ್ಯ ಕಲಹ ಬೀದಿಗೂ ಬಿದ್ದಿದೆ. ರಾಜೀವ್ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳುವುದಕ್ಕಾಗಿ ಚಾರು ವಿಚ್ಛೇದನಕ್ಕೆ (Divorce) ಮುಂದಾಗಿದ್ದಾರೆ. ಹೀಗಾಗಿ ರಾಜೀವ್ ಪತ್ನಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪತ್ನಿ ಚಾರುಗೆ ಟಿವಿ ನಟ ಕರಣ್ ಮೆಹ್ರಾ ಎನ್ನುವವರ ಜೊತೆ ಸಂಬಂಧ ಇರುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಚಾರು ತಾಯಿಯೇ ತಮಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಅವಳಿಂದಾಗಿ ನನಗೆ ಮೋಸವಾಗಿದೆ ಎನ್ನುವ ಆರೋಪ ಕೂಡ ರಾಜೀವ್ ಅವರದ್ದು. ಇದನ್ನೂ ಓದಿ:‘ಜುಗಲ್ ಬಂದಿ’ಗಾಗಿ ಕನ್ನಡಕ್ಕೆ ಬಂದ ಅಪರೂಪದ ತಮಿಳು ಗಾಯಕಿ ವೈಕಂ ವಿಜಯಲಕ್ಷ್ಮಿ

    ಚಾರು (Charu) ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ತಾನು ಗರ್ಭಿಣಿ ಆಗಿದ್ದಾಗ ರಾಜೀವ್ ಮೋಸ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಈ ಕಾರಣಕ್ಕಾಗಿಯೇ ಪತಿಯಿಂದ ತಾವು ಪ್ರತ್ಯೇಕವಾಗಿ ವಾಸಿಸುತ್ತಿರುವ ವಿಚಾರವನ್ನೂ ತಿಳಿಸಿದ್ದಾರೆ. ದಾಂಪತ್ಯದಲ್ಲಿ ನನಗೆ ದ್ರೋಹ ಮಾಡಿದ್ದನ್ನು ಕ್ಷಮಿಸುವುದಿಲ್ಲ ಎಂದು ಚಾರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಇಬ್ಬರ ಜಗಳ ಈಗಾಗಲೇ ಬೀದಿರಂಪ ಆಗಿದೆ. ಆರೋಪ ಪ್ರತ್ಯಾರೋಪ ಇಬ್ಬರ ಜೀವನವನ್ನು ಯಾವ ಕಡೆ ತಗೆದುಕೊಂಡು ಹೋಗುತ್ತದೆಯೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸುಶ್ಮಿತಾ ಸೇನ್

    ಮತ್ತೆ ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸುಶ್ಮಿತಾ ಸೇನ್

    ಭುವನ ಸುಂದರಿ ಸುಶ್ಮಿತಾ ಸೇನ್ ಸಿನಿಮಾಗಳಿಗಿಂತ ತಮ್ಮ ವೈಯಕ್ತಿಕ ವಿಚಾರವಾಗಿಯೇ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇದೀಗ ಮಾಜಿ ಬಾಯ್‌ಫ್ರೆಂಡ್ ಜೊತೆ ಸುಶ್ಮಿತಾ ಸೇನ್ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಬಾಲಿವುಡ್‌ನ ಸಾಕಷ್ಟು ಸಿನಿಮಾ ಮತ್ತು ವೆಬ್ ಸಿರೀಸ್ ಮೂಲಕ ಸಂಚಲನ ಮೂಡಿಸಿರುವ ಸುಶ್ಮಿತಾ ಸೇನ್ ಇತ್ತಿಚೆಗೆ ಸಿನಿಮಾಗಿಂತ ಖಾಸಗಿ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಲಲಿತ್ ಮೋದಿ ಜತೆಗಿನ ಡೇಟಿಂಗ್ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಬೆನ್ನಲ್ಲೇ ಈಗ ಮಾಜಿ ಬಾಯ್‌ಫ್ರೆಂಡ್ ರೋಹ್ಮನ್ ಜೊತೆ ಸುಶ್ಮಿತಾ ಸೇನ್ ಭೇಟಿಯಾಗಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

     

    View this post on Instagram

     

    A post shared by Viral Bhayani (@viralbhayani)

    ರೋಹ್ಮನ್ ಜೊತೆಗಿನ ಬ್ರೇಕಪ್ ನಂತರ ಸುಶ್ಮಿತಾ ತಮ್ಮ ಖಾಸಗಿ ಬದುಕಿನತ್ತ ಗಮನ ಹರಿಸಿದ್ದರು. ಆದರೆ ಇತ್ತೀಚೆಗೆ ಲಲಿತ್ ಮೋದಿ ಜತೆ ಡೇಟಿಂಗ್ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿತ್ತು. ಸುಶ್ಮಿತಾ ಅವರನ್ನ ಗೋಲ್ಡ್ ಡಿಗ್ಗರ್ ಎಂದು ಟ್ರೋಲ್ ಮಾಡಲಾಗಿತ್ತು. ಈ ಬೆನ್ನಲ್ಲೇ ಮಾಜಿ ಬಾಯ್‌ಫ್ರೆಂಡ್‌ನ ಸುಶ್ಮಿತಾ ಮತ್ತೆ ಭೇಟಿಯಾಗುವುದಕ್ಕೆ, ಈ ಮಾಜಿ ಜೋಡಿ ಮತ್ತೆ ಜೊತೆಯಾದ್ರಾ ಅಂತಾ ಕೆಲ ನೆಟ್ಟಿಗರು ಪ್ರಶ್ನಿಸಿದ್ದರೆ ಇನ್ನೂ ಕೆಲ ಮಂದಿ ಲಲಿತ್ ಮೋದಿ ಎಲ್ಲಿ ಅಂತಾ ಸೋಷಿಯಲ್ ಮೀಡಿಯಾದಲ್ಲಿ ನಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಸೋನು ಮುಖ ನೋಡಿ ಪ್ರಜ್ಞೆತಪ್ಪಿ ಬಿದ್ದಿದ್ರಂತೆ ಆರ್ಯವರ್ಧನ್!

    ಸದ್ಯ ಸುಶ್ಮಿನ್ ಸೇನ್ ಮತ್ತು ಅವರು ಮಗಳು ರಿನಿ ಸೇನ್ ಜತೆ ರೋಹ್ಮನ್ ಇರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಟ್ರೋಲ್ ಮಾಡುವವರಿಗೆ ಡೋಂಟ್ ಕೇರ್: ಹೊಸ ಫೋಟೋ ಶೇರ್ ಮಾಡಿ ಟಾಂಗ್ ಕೊಟ್ಟ ಸುಶ್ಮಿತಾ ಸೇನ್

    ಟ್ರೋಲ್ ಮಾಡುವವರಿಗೆ ಡೋಂಟ್ ಕೇರ್: ಹೊಸ ಫೋಟೋ ಶೇರ್ ಮಾಡಿ ಟಾಂಗ್ ಕೊಟ್ಟ ಸುಶ್ಮಿತಾ ಸೇನ್

    ಬಾಲಿವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸುದ್ದಿ ಅಂದ್ರೆ ಸುಶ್ಮಿತಾ ಸೇನ್ ಮತ್ತು ಲಿಲಿತ್ ಮೋದಿ ಡೇಟಿಂಗ್ ವಿಚಾರ. ಅದ್ಯಾವ ಗಳಿಗೆಯಲ್ಲಿ ಲಲಿತ್ ಮೋದಿ, ಸುಶ್ಮಿತಾ ಜತೆಗಿನ ರಿಲೇಷನ್‌ಶಿಪ್ ಬಗ್ಗೆ ಪೋಸ್ಟ್ ಮಾಡಿದ್ರೋ ಅಂದಿನಿಂದ ಸುಶ್ಮಿತಾ ಸೇನ್ ಸಖತ್ ಟ್ರೋಲ್ ಆಗುತ್ತಿದ್ದಾರೆ. ಇದೀಗ ಅದ್ಯಾವದಕ್ಕೂ ಕೇರ್ ಮಾಡದೇ, ಚೆಂದದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಭುವನ ಸುಂದರಿ ಸುಶ್ಮಿತಾ ಸೇನ್, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದ್ದಾರೆ. ಲಲಿತ್ ಮೋದಿ ಜತೆಗಿನ ಡೇಟಿಂಗ್ ಕುರಿತು ಸಖತ್ ಸುದ್ದಿಯಲ್ಲಿದ್ದಾರೆ. ಇವರಿಬ್ಬರ ವಯಸ್ಸಿನ ಅಂತರದ ಬಗ್ಗೆ. ದುಡ್ಡಿಗಾಗಿ ಪ್ರೀತಿ ಮಾಡುವ ಮಹಿಳೆ, ಗೋಲ್ಡ್ ಡಿಗ್ಗರ್ ಅಂತೆಲ್ಲಾ ಟ್ರೋಲ್ ಮಾಡಿದ್ದರು. ಕೆಟ್ಟ ಕಾಮೆಂಟ್‌ಗೆ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಹಾಯಾಗಿ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಮೂಲಕ ಸುಶ್ಮಿತಾ ಸೇನ್, ಮಿಂಚ್ತಿದ್ದಾರೆ. ಇದನ್ನೂ ಓದಿ:ಕೇಕ್ ಕತ್ತರಿಸುವ ಮೂಲಕ 17 ವರ್ಷದ ಸಿನಿಪಯಣದ ಸಂಭ್ರಮ ಆಚರಿಸಿದ ಅನುಷ್ಕಾ ಶೆಟ್ಟಿ

     

    View this post on Instagram

     

    A post shared by Sushmita Sen (@sushmitasen47)

    ಬಿಂದಾಸ್ ಆಗಿ ಫೋಟೋಗೆ ಪೋಸ್ ನೀಡುತ್ತ, ಖುಷಿ ಖುಷಿಯಾಗಿ ದಿನ ಕಳೆಯುತ್ತಿದ್ದಾರೆ. ಫೋಟೋ ಮೂಲಕ ತಮ್ಮ ಜೀವನದ ಬಗ್ಗೆ ನೀಡುತ್ತಿದ್ದಾರೆ. ಶೀಘ್ರದಲ್ಲೇ ಲಲಿತ್ ಮೋದಿ ಜತೆ ವೈವಾಹಿಕ ಬದುಕಿಗೆ ಕಾಲಿಡುತ್ತಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರಿಂದಲೇ ಅಧಿಕೃತ ಮಾಹಿತಿ ಸಿಗಬೇಕಿದೆ. ಇನ್ನು ನೀಲಿ ಬಣ್ಣದ ಟಾಪ್ ಧರಿಸಿರುವ ಫೋಟೋ ಶೇರ್ ಮಾಡಿ, ನಗು ಮುಖದಿಂದ ಪೋಸ್ ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]