Tag: ಸುಶೀಲ್ ಕುಮಾರ್ ಮೋದಿ

  • ಬಿಹಾರ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನಿಧನ

    ಬಿಹಾರ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನಿಧನ

    ಪಾಟ್ನಾ: ಬಿಹಾರದ (Bihar) ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ (Sushil Kumar Modi) ಅವರು ಸೋಮವಾರ 72ನೇ ವಯಸ್ಸಿನಲ್ಲಿ ಸೋಮವಾರ ನಿಧನರಾಗಿದ್ದಾರೆ.

    ಸುಶೀಲ್ ಕುಮಾರ್ ಮೋದಿ ಅವರು ಈ ವರ್ಷ ಏಪ್ರಿಲ್‌ನಲ್ಲಿ ದೀರ್ಘ ಕಾಲದ ಕ್ಯಾನ್ಸರ್‌ನಿಂದ (Cancer) ಬಳಲುತ್ತಿರುವ ಕಾರಣದಿಂದಾಗಿ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ಮಂಗಳವಾರ ರೇವಣ್ಣ ಬಿಡುಗಡೆ – ಕೋರ್ಟ್‌ನಲ್ಲಿ ವಾದ, ಪ್ರತಿವಾದ ಹೇಗಿತ್ತು? ಜಾಮೀನು ಷರತ್ತು ಏನು?

     

    ರಾಜ್ಯಸಭಾ ಮಾಜಿ ಸಂಸದರಾಗಿದ್ದ ಸುಶೀಲ್ ಮೋದಿ ಪಾರ್ಥಿವ ಶರೀರವನ್ನು ಮಂಗಳವಾರ (ಮೇ 14) ಪಾಟ್ನಾದ ರಾಜೇಂದ್ರ ನಗರ ಪ್ರದೇಶದಲ್ಲಿರುವ ಅವರ ನಿವಾಸಕ್ಕೆ ತರಲಾಗುವುದು ಮತ್ತು ಅಂತಿಮ ದರ್ಶನದ ಬಳಿಕ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು. ಇದನ್ನೂ ಓದಿ: ಮುಂಬೈನಲ್ಲಿ ಬಿರುಗಾಳಿಗೆ ಉರುಳಿತು ಬೃಹತ್‌ ಬಿಲ್‌ ಬೋರ್ಡ್‌ – 8 ಸಾವು, 59 ಮಂದಿಗೆ ಗಾಯ

    ಸುಶೀಲ್ ಕುಮಾರ್ ಮೋದಿ ಅವರ ನಿಧನಕ್ಕೆ ಬಿಹಾರದ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ಹಲವಾರು ಬಿಜೆಪಿ ನಾಯಕರು ದುಃಖ ವ್ಯಕ್ತಪಡಿಸಿದ್ದು, ಸುಶೀಲ್ ಕುಮಾರ್ ಮೋದಿಯವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಶಂಕರಾಚಾರ್ಯರು ಸಂಚರಿಸಿದ್ದ ರಸ್ತೆಯಲ್ಲಿ ಮೋದಿ 6 ಕಿ.ಮೀ ರೋಡ್‌ ಶೋ – ಮಂಗಳವಾರವೇ ನಾಮಪತ್ರ ಸಲ್ಲಿಕೆ ಯಾಕೆ?

  • ಸಲಿಂಗ ಸಂಬಂಧ ಸರಿ.. ಆದ್ರೆ ವಿವಾಹ ಒಪ್ಪುವಂಥದ್ದಲ್ಲ: ಸುಶೀಲ್ ಮೋದಿ

    ಸಲಿಂಗ ಸಂಬಂಧ ಸರಿ.. ಆದ್ರೆ ವಿವಾಹ ಒಪ್ಪುವಂಥದ್ದಲ್ಲ: ಸುಶೀಲ್ ಮೋದಿ

    ನವದೆಹಲಿ: ಸಲಿಂಗ ಸಂಬಂಧಗಳು ಸ್ವೀಕಾರಾರ್ಹವಾದರೂ ಅಂತಹ ವಿವಾಹಗಳು (Marriage) ಒಪ್ಪುವಂತಹದ್ದಲ್ಲ. ಅಂತಹ ವಿವಾಹಗಳಿಗೆ ಅವಕಾಶ ನೀಡುವುದರಿಂದ ವಿಚ್ಛೇದನ, ದತ್ತು ಸ್ವೀಕಾರ ಸೇರಿದಂತೆ ಹಲವು ಹಂತಗಳಲ್ಲಿ ಸಮಸ್ಯೆ ಉದ್ಭವಿಸಲಿದೆ ಎಂದು ಬಿಜೆಪಿ (BJP) ಸಂಸದ ಸುಶೀಲ್ ಕುಮಾರ್ ಮೋದಿ (Sushil Kumar Modi) ಹೇಳಿದ್ದಾರೆ.

    ಸಂಸತ್ತಿನ (Parliament) ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕೆಲ ಎಡ- ಉದಾರವಾದಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸಲಿಂಗ ವಿವಾಹದ ಕಾನೂನು (Law) ಮಾನ್ಯತೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಇಂಥ ಪ್ರಯತ್ನವನ್ನು ಸರ್ಕಾರ ತೀವ್ರವಾಗಿ ವಿರೋಧಿಸಬೇಕು. ದೇಶದ ಸಂಸ್ಕೃತಿಗೆ ಧಕ್ಕೆ ತರುವಂತಹ ಇಂಥ ನೀತಿಯ ಪರವಾಗಿ ನ್ಯಾಯಾಂಗವು ಯಾವುದೇ ತೀರ್ಪು ನೀಡಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ನನಗೆ ಗುಂಡು ಹೊಡೆದ್ರೂ ಟಿಪ್ಪು ಭಾವಚಿತ್ರ ಅಳವಡಿಸಲು ಬಿಡಲ್ಲ – ಯತ್ನಾಳ್

    ಯಾವುದೇ ಕಾನೂನುಗಳು ದೇಶದ ಸಂಪ್ರದಾಯದದೊಂದಿಗೆ ಹೊಂದಿಕೆಯಾಗಬಾರದು. ಭಾರತೀಯ ಸಮಾಜ ಹೇಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇಲ್ಲಿನ ಜನರು ಹೇಗೆ ಅದನ್ನು ಸ್ವೀಕರಿಸಲು ಸಿದ್ಧರಿದ್ದಾರೆ ಎಂಬುದನ್ನು ನಿರ್ಣಯಿಸಬೇಕು. ಸಲಿಂಗ ಸಂಬಂಧವನ್ನು ಅಪರಾಧೀಕರಿಸಲಾಗಿದೆ. ಸಲಿಂಗ ದಂಪತಿಗೆ ಒಟ್ಟಿಗೆ ವಾಸಿಸಲು ಕಾನೂನು ಸ್ಥಾನಮಾನ ನೀಡುವುದು ಬೇರೆ ವಿಚಾರ. ಆದರೆ ಮದುವೆ ಪವಿತ್ರ ಸಂಬಂಧ. ಭಾರತವನ್ನು ಅಮೆರಿಕದಂತೆ (US) ಮಾಡಬೇಡಿ ಎಂದು ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 1,050 ರೂ. LPG ಸಿಲಿಂಡರ್ ಇನ್ಮುಂದೆ 500 ರೂ.ಗೆ – ಗುಡ್‌ನ್ಯೂಸ್ ಕೊಟ್ಟ ರಾಜಸ್ಥಾನ ಸಿಎಂ

    ಭಾರತದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಅಥವಾ ಯಾವುದೇ ಕ್ರೋಢೀಕರಿಸದ ವೈಯಕ್ತಿಕ ಕಾನೂನಿನಲ್ಲಿ ಸಲಿಂಗ ವಿವಾಹವನ್ನು ಅಂಗೀಕರಿಸಲಾಗುವುದಿಲ್ಲ. ಸಲಿಂಗ ವಿವಾಹವು ದೇಶದಲ್ಲಿ ವೈಯಕ್ತಿಕ ಕಾನೂನುಗಳ ಸೂಕ್ಷ್ಮ ಸಮತೋಲನಕ್ಕೆ ಹಾನಿಯುಂಟು ಮಾಡುತ್ತದೆ. ಇಂತಹ ಮಹತ್ವದ ಸಾಮಾಜಿಕ ವಿಷಯದ ಬಗ್ಗೆ ಇಬ್ಬರು ನ್ಯಾಯಮೂರ್ತಿಗಳು ನಿರ್ಧರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟ ಸುಶೀಲ್ ಕುಮಾರ್, ಈ ವಿಷಯವು ಸಂಸತ್ತು ಮತ್ತು ಸಮಾಜದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಗೆ ಒಳಪಡಬೇಕಿದೆ ಎಂದು ಸಲಹೆ ನೀಡಿದ್ದಾರೆ.

    ಸರ್ಕಾರವು, ನ್ಯಾಯಾಲಯದಲ್ಲಿ ಇಂಥ ಪ್ರಕರಣಗಳ ವಿರುದ್ಧ ತೀವ್ರವಾಗಿ ವಾದ ಮಂಡಿಸಬೇಕು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 2025ರವರೆಗೂ ನಿತೀಶ್ ಕುಮಾರ್ ಸಿಎಂ ಆಗಿರುತ್ತಾರೆ: ಸುಶೀಲ್ ಕುಮಾರ್ ಮೋದಿ

    2025ರವರೆಗೂ ನಿತೀಶ್ ಕುಮಾರ್ ಸಿಎಂ ಆಗಿರುತ್ತಾರೆ: ಸುಶೀಲ್ ಕುಮಾರ್ ಮೋದಿ

    ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬದಲಾಯಿಸಲು ಪಕ್ಷ ಬಯಸಿದೆ ಎಂಬ ವದಂತಿಗಳ ಬಗ್ಗೆ ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಒಂದು ದಶಕಕ್ಕಿಂತಲೂ ಹೆಚ್ಚು ದಿನಗಳ ಕಾಲ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಿತೀಶ್ ಕುಮಾರ್ ಅವರನ್ನು ಬಿಜೆಪಿಯ ಹೆಚ್ಚು ನಂಬಿಗಸ್ಥ ವ್ಯಕ್ತಿಯಾಗಿ ಸುಶೀಲ್ ಕುಮಾರ್ ಮೋದಿ ಅವರು ಕಾಣುತ್ತಿದ್ದಾರೆ. ಜನಾದೇಶದೊಂದಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ನಿತೀಶ್ ಕುಮಾರ್ ಅವರನ್ನು ಯಾವುದೇ ಕಾರಣಕ್ಕೂ ಬದಲಾಯಿಸುವ ಮಾತೇ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯ ರಾತ್ರಿ ದಾಖಲೆಯ 18 ಸಾವಿರ ಫೋನ್ ಕರೆಗಳ ವಿನಿಮಯ

    NITHISH KUMAR

    ರಾಜಕೀಯ ಅಸ್ಥಿರತೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಆಧಾರವಿಲ್ಲದ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಇದೇ ವೇಳೆ ಪ್ರತಿಪಕ್ಷಗಳಿಗೆ ಟಾಂಗ್ ನೀಡಿದರು. ಎನ್‍ಡಿಎ 2020 ರ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ಹೋರಾಡಿ ಗೆದ್ದಿದೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಗೆ ಮುಂಬೈ ನಂಟು!

  • ಪ್ಯಾರೇ ದೇಶವಾಸಿಗಳಿಗೆ ಸಿಹಿ ಸುದ್ದಿ: ಇಳಿಕೆಯಾಗಲಿದೆ 178 ದಿನಬಳಕೆಯ ವಸ್ತುಗಳ ಬೆಲೆ

    ಪ್ಯಾರೇ ದೇಶವಾಸಿಗಳಿಗೆ ಸಿಹಿ ಸುದ್ದಿ: ಇಳಿಕೆಯಾಗಲಿದೆ 178 ದಿನಬಳಕೆಯ ವಸ್ತುಗಳ ಬೆಲೆ

    ಗುವಾಹಟಿ: ಪ್ಯಾರೇ ದೇಶವಾಸಿಗಳಿಗೆ ಸಿಹಿ ಸುದ್ದಿ. ನೀವು ದಿನನಿತ್ಯ ಬಳಸುವ ವಸ್ತುಗಳ ಬೆಲೆಗಳು ಇನ್ನು ಮುಂದೆ ಇಳಿಕೆಯಾಗಲಿವೆ. ಬರೋಬ್ಬರೀ 178 ದಿನಬಳಕೆ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) 10%ರಷ್ಟು ಇಳಿಕೆಯಾಗಿದೆ.

    28% ರಷ್ಟಿದ್ದ ಜಿಎಸ್‍ಟಿ ತೆರಿಗೆಯನ್ನು 18%ಕ್ಕೆ ಇಳಿಸಲಾಗಿದೆ. ಶುಕ್ರವಾರ ಅಸ್ಸಾಂನ ಗುವಾಹಟಿಯಲ್ಲಿ ನಡೆದ ಜಿಎಸ್‍ಟಿ ಮಂಡಳಿಯ 23ನೇ ಸಭೆಯಲ್ಲಿ 178 ವಸ್ತುಗಳಿಗೆ ವಿಧಿಸಲಾಗಿದ್ದ ತೆರಿಗೆಯನ್ನು 18% ಇಳಿಕೆ ಮಾಡಿ, 50 ಸಾಮಗ್ರಿಗಳಿಗೆ ಮಾತ್ರ 28% ರ ತೆರಿಗೆ ವ್ಯಾಪ್ತಿಯಲ್ಲಿ ಮುಂದುವರೆಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಹಣಕಾಸು ಸಚಿವ ಅರುಣ್ ಜೇಟ್ಲಿ ಸುದ್ದಿಗೋಷ್ಠಿ ನಡೆಸಿ, ಒಟ್ಟು 178 ವಸ್ತುಗಳ ಮೇಲಿನ ತೆರಿಗೆಯನ್ನು 18% ಇಳಿಸಲಾಗಿದ್ದು, ನವೆಂಬರ್ 15 ರಿಂದ ಪರಿಷ್ಕೃತ ತೆರಿಗೆ ಜಾರಿಯಾಗಲಿದೆ ಎಂದು ತಿಳಿಸಿದರು.

    ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಪ್ರತಿಕ್ರಿಯಿಸಿ, ಗ್ರಾನೈಟ್, ಮಾರ್ಬಲ್, ಚಾಕ್ಲೇಟ್, ಚೂಯಿಂಗ್‍ಗಮ್, ವಾಚ್, ಬ್ಲೇಡ್, ಸ್ಟೌ, ಸೌಂದರ್ಯವರ್ಧಕಗಳು, ಶಾಂಪು ಮೇಲಿನ ತೆರಿಗೆಯನ್ನು ಇಳಿಸಲಾಗಿದೆ ಎಂದು ತಿಳಿಸಿದರು.

    ಪೇಂಟ್, ಸೀಮೆಂಟ್ ಜೊತೆ ಲಕ್ಷುರಿ ಉತ್ಪನ್ನಗಳಾದ ವಾಶಿಂಗ್ ಮಶೀನ್, ಏರ್ ಕಂಡಿಷನ್ ಸೇರಿದಂತೆ 50 ಉತ್ಪನ್ನಗಳ ಮೇಲೆ ಈ ಹಿಂದೆ ವಿಧಿಸಲಾಗುತ್ತಿದ್ದ 28% ತೆರಿಗೆಯನ್ನು ಮುಂದುವರಿಸಲಾಗಿದೆ. ಸೆಣಬು ಮತ್ತು ಹತ್ತಿಯ ಕೈ ಚೀಲಗಳ ಮೇಲಿನ ತೆರಿಗೆಯನ್ನು 18% ರಿಂದ 12% ಕ್ಕೆ ಇಳಿಸಲಾಗಿದೆ.

    ಮುಂದಿನ ದಿನಗಳಲ್ಲಿ 28% ತೆರಿಗೆ ವಿಧಿಸುವ ವಸ್ತುಗಳು 18% ತೆರಿಗೆ ವ್ಯಾಪ್ತಿಗೆ ಬರಲಿದೆ. ಈಗಲೇ ಈ ವಸ್ತುಗಳ ಮೇಲೆ ತೆರಿಗೆ ಇಳಿಸಿದರೆ ಆದಾಯ ಸಂಗ್ರಹಕ್ಕೆ ಭಾರೀ ಹೊಡೆತ ಬೀಳುತ್ತದೆ ಎಂದು ಸುಶೀಲ್ ಮೋದಿ ತಿಳಿಸಿದರು.

    ಜುಲೈ ಒಂದರಂದು ದೇಶದಲ್ಲಿ ಜಿಎಸ್‍ಟಿ ಜಾರಿಯಾಗಿದ್ದು, ವಸ್ತುಗಳ ಮೇಲೆ 0%, 5%, 12%, 18%, 28% ತೆರಿಗೆ ವಿಧಿಸಲಾಗುತ್ತಿದೆ.