Tag: ಸುವರ್ಣಸೌಧ

  • ಬಸ್ಸಿಗಾಗಿ ಹೆದ್ದಾರಿ ಬಂದ್‌ ಮಾಡಿ ಸುವರ್ಣ ಸೌಧದ ಮುಂಭಾಗ ವಿದ್ಯಾರ್ಥಿಗಳಿಂದ ದಿಢೀರ್‌ ಪ್ರತಿಭಟನೆ

    ಬಸ್ಸಿಗಾಗಿ ಹೆದ್ದಾರಿ ಬಂದ್‌ ಮಾಡಿ ಸುವರ್ಣ ಸೌಧದ ಮುಂಭಾಗ ವಿದ್ಯಾರ್ಥಿಗಳಿಂದ ದಿಢೀರ್‌ ಪ್ರತಿಭಟನೆ

    ಬೆಳಗಾವಿ: ಬಸ್ಸಿಗಾಗಿ ಆಗ್ರಹಿಸಿ ಬೆಂಗಳೂರು – ಪುಣೆ (Bengaluru-Pune) ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ವಿದ್ಯಾರ್ಥಿಗಳ ಪ್ರತಿಭಟನೆ (Students Protest) ನಡೆಸಿದ ಘಟನೆ ಬುಧವಾರ ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ನಡೆದಿದೆ.

    ಬೆಳಗಾವಿ (Belagavi) ತಾಲೂಕಿನ ಕೊಂಡಸಕಪ್ಪ ಗ್ರಾಮದ ವಿದ್ಯಾರ್ಥಿಗಳು ದಿಢೀರ್‌ ಪ್ರತಿಭಟನೆ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಬಸ್ಸು ಬಿಡುವಂತೆ ಹಲವಾರು ಬಾರಿ ಮನವಿ ಮಾಡಿದರೂ ಸ್ಪಂದಿಸದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಏಕಾಏಕಿ ಇಂದು ರಸ್ತೆ ತಡೆ ಮಾಡಿ ತಮ್ಮೂರಿಗೆ ಬಸ್ ಬಿಡುವಂತೆ ಒತ್ತಾಯಿಸಿದರು. ಇದನ್ನೂ ಓದಿ: ಸರಿಯಾದ ಸಮಯಕ್ಕೆ ಬಾರದ ಬಸ್; ನಿತ್ಯ ಕುದುರೆ ಏರಿ ಶಾಲೆಗೆ ಹೋಗ್ತಿದ್ದಾನೆ ಬಾಲಕ

    ಬೆಳಗ್ಗೆ ಸರಿಯಾದ ಸಮಯದಲ್ಲಿ ಬಸ್ಸು ಬಾರದೇ ಇದ್ದರೆ ಶಾಲೆ, ಕಾಲೇಜಿಗೆ ಹೋಗಲು ಅನಾನುಕೂಲ ಆಗುತ್ತಿದೆ.  ಹೀಗಾಗಿ ಸ್ ಬಿಡುವವರೆಗೆ ರಸ್ತೆ ಬಂದ್ ಮಾಡುವುದಾಗಿ ವಿದ್ಯಾರ್ಥಿಗಳ ಪೋಷಕರ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನಿತ್ಯ 1.05 ಕೋಟಿ ಲೀಟರ್ ಹಾಲು – KMF ಇತಿಹಾಸದಲ್ಲೇ ಮೊದಲ ಬಾರಿಗೆ ಅತಿಹೆಚ್ಚು ಸಂಗ್ರಹ

    ಹೆದ್ದಾರಿಯಲ್ಲಿ ಒಂದು ಕಿ.ಮೀ ಗೂ ಅಧಿಕ ಟ್ರಾಫಿಕ್ ಜಾಮ್ ಆಗಿತ್ತು. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರ ಭೇಟಿ ನೀಡಿ ಬಸ್ಸು ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಟ್ಟರು.

     

  • ಸುವರ್ಣಸೌಧದಲ್ಲಿ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ – ಹೆಬ್ಬಾಳ್ಕರ್‌ ಆಪ್ತ ಸೇರಿ 10 ಜನರ ವಿರುದ್ಧ FIR

    ಸುವರ್ಣಸೌಧದಲ್ಲಿ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ – ಹೆಬ್ಬಾಳ್ಕರ್‌ ಆಪ್ತ ಸೇರಿ 10 ಜನರ ವಿರುದ್ಧ FIR

    ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ (CT Ravi) ಮೇಲೆ ಹಲ್ಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಆಪ್ತ ಸೇರಿ 10 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ಹೌದು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ವಿರುದ್ಧ ಸಿ.ಟಿ ರವಿ ಅಸಂವಿಧಾನಿಕ ಪದ ಬಳಕೆ ಆರೋಪ ಕೇಳಿಬಂದ ಬಳಿಕ ಸುವರ್ಣಸೌಧದಲ್ಲಿ ಭಾರೀ ಹೈಡ್ರಾಮಾ ನಡೆದಿತ್ತು. ಲಕ್ಷ್ಮಿ ಹೆಬ್ಬಾಳ್ಕರ್‌ ಬೆಂಬಲಿಗರು ಸೌಧದೊಳಕ್ಕೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದರು. ಅಲ್ಲದೇ ಹಿರೇಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಶಾಸಕರ ವಿರುದ್ಧ ಪ್ರಕರಣ ಸಹ ದಾಖಲಾಗಿತ್ತು. ಇದೀಗ ಸಿ.ಟಿ ರವಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

    ಖಾನಾಪುರ ಪೊಲೀಸ್ ಠಾಣೆಗೆ ಸಿ.ಟಿ ರವಿ ಲಿಖಿತ ದೂರು ಸಲ್ಲಿಸಿದ್ದರು. ಈ ಪ್ರಕರಣವನ್ನು ಹಿರೇಬಾಗೇವಾಡಿ ಠಾಣೆಗೆ ವರ್ಗಾಯಿಸಲಾಗಿತ್ತು. ಭಾನುವಾರ ಸಿ.ಟಿ ರವಿ ಅವರು ನೀಡಿದ್ದ ಲಿಖಿತ ದೂರಿನ ಪ್ರತಿ ಪೋಸ್ಟ್‌ ಮೂಲಕ ಪೊಲೀಸರ ಕೈ ಸೇರಿದ ಬೆನ್ನಲ್ಲೇ ಬೆಳಗಾವಿ ಹಿರೇಬಾಗೇವಾಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

  • ಸುವರ್ಣ ಸೌಧದಲ್ಲಿ ನಾಳೆ ಸಾವರ್ಕರ್ ಫೋಟೋ ಅನಾವರಣ – ಬಿಜೆಪಿಯಿಂದ ಸಿದ್ಧತೆ

    ಸುವರ್ಣ ಸೌಧದಲ್ಲಿ ನಾಳೆ ಸಾವರ್ಕರ್ ಫೋಟೋ ಅನಾವರಣ – ಬಿಜೆಪಿಯಿಂದ ಸಿದ್ಧತೆ

    ಬೆಳಗಾವಿ: ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಈ ವೇಳೆ ಸಾವರ್ಕರ್ ಫೋಟೋ ಅನಾವರಣ ಮಾಡಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ. ಈ ಮೂಲಕ ಮತ್ತೆ ಸಾವರ್ಕರ್ ಸಮಯ ಜೋರಾಗುವ ಸಾಧ್ಯತೆ ಇದೆ.

    ರಾಜ್ಯ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿಯಿದ್ದು, ಈ ಬಾರಿ ಬಿಜೆಪಿಗೆ ಹಿಂದೂ ಅಸ್ತ್ರದ ಜೊತೆಗೆ ಸಾವರ್ಕರ್ ಕೂಡ ಒಂದು ಅಜೆಂಡಾ ಆಗುವ ಸಾಧ್ಯತೆ ಇದೆ. ನಾಳೆಯಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಮತ್ತೆ ಸಾವರ್ಕರ್ ಸಮಯ ಜೋರಾಗುವ ಸಾಧ್ಯತೆ ಇದೆ. ವಿಧಾನಸಭೆಯಲ್ಲಿ ಗಾಂಧೀಜಿ, ನೆಹರೂ, ಅಂಬೇಡ್ಕರ್, ಸ್ವಾಮಿ ವಿವೇಕಾನಂದರ ಜೊತೆಗೆ ಸಾವರ್ಕರ್ ಫೋಟೋ ಅನಾವರಣ ಮಾಡಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ.

    ಈಗಾಗಲೇ ವಿಧಾನಸಭೆಯ ಸಿಬ್ಬಂದಿ ಎಲ್ಲಾ ಫೋಟೋಗಳಿಗೆ ಕರ್ಟನ್ ಹಾಕಿ ಮುಚ್ಚಿದ್ದಾರೆ. ನಾಳೆ ಬೆಳಗ್ಗೆ 10:30ಕ್ಕೆ ಸ್ಪೀಕರ್ ಕಾಗೇರಿ ನೇತೃತ್ವದಲ್ಲಿ ಅಧಿವೇಶನ ಆರಂಭಕ್ಕೂ ಮುನ್ನವೇ ಸಾವರ್ಕರ್ ಫೋಟೋ ಅನಾವರಣವಾಗಲಿದೆ ಎನ್ನಲಾಗಿದೆ. ಬಿಜೆಪಿ ಸಾವರ್ಕರ್ ಫೋಟೋ ಅಸ್ತ್ರಕ್ಕೆ ಕಾಂಗ್ರೆಸಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ತಂದೆಯ ಆತ್ಮ ವಿಲವಿಲ ಅಂತ ಒದ್ದಾಡುತ್ತಿರಬಹುದು : ಸಿ.ಟಿ.ರವಿ

    ಮಾಹಿತಿ ಬಂದಿದೆ. ನಾಳೆ ಮಾತಾಡ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಾವರ್ಕರ್‍ಗೂ ಕರ್ನಾಟಕಕ್ಕೂ ಏನ್ ಸಂಬಂಧ ಎಂದು ಕಿಡಿಕಾರಿದ್ದಾರೆ. ಮಾಜಿ ಡಿಸಿಎಂ ಪರಮೇಶ್ವರ್ ಕೂಡ ಬಿಜೆಪಿಯವರು ವಿವಾದಗಳನ್ನೇ ಹುಟ್ಟುಹಾಕಿದ್ದಾರೆ. ಏಕಾಏಕಿ ಇಂಥಹ ತೀರ್ಮಾನ ಮಾಡ್ತಾರೆ ಅಂದರೆ ಏನರ್ಥ? ಕನಿಷ್ಠ ಜ್ಞಾನವೂ ಇಲ್ವಾ ಅಂತ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಒಬ್ಬ ಕೃತಜ್ಞತೆ ಇಲ್ಲದ ಕೃತಘ್ನ; ಮೆದುಳು, ನಾಲಿಗೆಗೆ ಕಂಟ್ರೋಲ್ ತಪ್ಪಿದೆ: ಕೆ.ಜಿ ಬೋಪಯ್ಯ

    Live Tv
    [brid partner=56869869 player=32851 video=960834 autoplay=true]

  • ಬೆಲೆ ನಿಗದಿ ಪಡಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ 100ಕ್ಕೂ ಅಧಿಕ ರೈತರು ವಶಕ್ಕೆ

    ಬೆಲೆ ನಿಗದಿ ಪಡಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ 100ಕ್ಕೂ ಅಧಿಕ ರೈತರು ವಶಕ್ಕೆ

    ಬೆಳಗಾವಿ: ರೈತರು (Farmers) ಬೆಳೆದ ಪ್ರತಿ ಟನ್ ಕಬ್ಬಿಗೆ (Sugarcane) 5,500 ರೂ. ದರ ನಿಗದಿ ಮಾಡುವಂತೆ ಆಗ್ರಹಿಸಿ ಸುವರ್ಣಸೌಧಕ್ಕೆ (Suvarna Soudha) ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು (Police) ವಶಕ್ಕೆ ಪಡೆದುಕೊಂಡಿದ್ದಾರೆ.

    ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಇಂದು ಬೆಳಗಾವಿ ಜಿಲ್ಲೆಯ ತಾಲೂಕಿನ ಹಲಗಾ ಬಳಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ರೈತರು ಮುಖಂಡರು ಕರೆ ಕೊಟ್ಟಿದ್ದರು. ಆದ್ರೆ, ರೈತ ಹೋರಾಟಕ್ಕೆ ಬರುತ್ತಿದ್ದ ರೈತರನ್ನು ಪೊಲೀಸರು ರಸ್ತೆ ಮಧ್ಯದಲ್ಲಿಯೇ ತಡೆಯುತ್ತಿದ್ದು, ರೈತರ ಹೋರಾಟವನ್ನು ರಾಜ್ಯ ಸರ್ಕಾರ ಪೊಲೀಸರ ಮೂಲಕ ಹತ್ತಿಕ್ಕುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಸಲಿಂಗಿಯ ಕಾಟದಿಂದ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣು

    ಗ್ರಾಮೀಣ ಪ್ರದೇಶದಿಂದ ಬೆಳಗಾವಿ ನಗರಕ್ಕೆ ಹೋರಾಟಕ್ಕೆ ಬರುತ್ತಿದ್ದ ರೈತರು ಬೆಳಗಾವಿ ನಗರ ಪ್ರವೇಶಿಸದಂತೆ ಹುಕ್ಕೇರಿ ತಾಲೂಕಿನ ಹತ್ತರಗಿ ಹಾಗೂ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್‍ನಲ್ಲಿ ರೈತರನ್ನು ಪೊಲೀಸರು ತಡೆಯುತ್ತಿದ್ದಾರೆ. ರೈತ ಮುಖಂಡರಾದ ಚೂನಪ್ಪ ಪೂಜಾರಿ, ರಾಘವೇಂದ್ರ ನಾಯಕ, ಪ್ರಕಾಶ ನಾಯಕ, ರವಿ ಸಿದ್ದನ್ನವರ ನೇತೃತ್ವದಲ್ಲಿ ಯಮಕನಮರಡಿ ಬಳಿಯ ಹತ್ತರಗಿ ಟೋಲ್ ನಾಕಾ ಹಾಗೂ ರೈತ ಮುಖಂಡರಾದ ರಾಘವೇಂದ್ರ ನಾಯಕ, ಗಣಪತಿ ಇಳಿಗೆರ, ಶಿವಾನಂದ ಮುಗಳಿಹಾಳ ನೇತೃತ್ವದಲ್ಲಿ ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ 10ಕ್ಕೂ ಅಧಿಕ ರೈತರನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಇದಲ್ಲದೇ ನೇಸರಗಿ ಬಳಿಯೂ 50ಕ್ಕೂ ಅಧಿಕ ಹಾಗೂ ಯಮಕನಮರಡಿ ಬಳಿಯ 100ಕ್ಕೂ ಅಧಿಕ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆಯೇ ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ರೈತರು ಪ್ರತಿ ಟನ್ ಕಬ್ಬಿಗೆ 5,500 ರೂ. ದರ ನಿಗದಿ ಮಾಡುವಂತೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ರೈತರ ಪ್ರತಿಭಟನೆಗೆ ಮಣಿದಿದ್ದ ಸರ್ಕಾರ ಸಿಎಂ ನೇತೃತ್ವದಲ್ಲಿ ಸಭೆ ನಡೆಸುವುದಾಗಿ ಹೇಳಿತ್ತು. ಆದ್ರೆ, ಬೆಂಗಳೂರಿನಲ್ಲಿ ಸಕ್ಕರೆ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ (Shankar Patil Munenakoppa) ನೇತೃತ್ವದಲ್ಲಿ ರೈತರು ಮುಖಂಡರ ಸಭೆ ಜರುಗಿತು. ಆದರೆ, ಸಭೆಯಲ್ಲಿ ಸಚಿವರ ಭರವಸೆ ತೃಪ್ತಿ ತರದ ಹಿನ್ನೆಲೆಯಲ್ಲಿ ಇಂದು ರೈತರು ಪ್ರತಿಭಟನೆಗೆ ಮುಂದಾಗಿದ್ರು. ಇದನ್ನೂ ಓದಿ: ಬಾಬುರಾಯನ ಕೊಪ್ಪಲಿನ ಜೈ ಭುವನೇಶ್ವರಿ ಹೊಟೇಲ್ ಅಪ್ಪು ಫೇವರೆಟ್

    ಈ ವೇಳೆ ಮಾತನಾಡಿದ ರೈತ ಮುಖಂಡ ಚುನ್ನಪ್ಪ ಪೂಜೇರಿ, ಕಿತ್ತೂರ ಉತ್ಸವಕ್ಕೆ ತಾಖತ್ ಇದ್ದರೆ ಬನ್ನಿ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಸವಾಲ್ ಹಾಕಿದರು. ಕಬ್ಬಿನ ಬೆಲೆ 5,500 ರೂ. ನಿಗದಿ ಮಾಡದೇ ಇದ್ದರೆ ಕಿತ್ತೂರ ಉತ್ಸವಕ್ಕೆ ಬಂದು ತೋರಿಸಿ. ಬೊಮ್ಮಾಯಿ ಹೋದ ಕಡೆಯಲ್ಲಿ ನಮ್ಮ ರೈತರು ರಿಪೇರಿ ಮಾಡುತ್ತಾರೆ. ಕಾರ್ಖಾನೆಗಳಿಂದ 27,000 ಕೋಟಿ ರೂ. ಸರ್ಕಾರಕ್ಕೆ ತೆರಿಗೆ ಬರುತ್ತದೆ. ಪ್ರತಿಟನ್‍ಗೆ 4,000 ರೂ.ಗಳ ತೆರಿಗೆ ಬರುತ್ತದೆ. ಈ ತೆರಿಗೆಯಲ್ಲಿ 2,000 ತೆಗೆದು ರೈತರಿಗೆ ಕೊಡಬೇಕು. ಈಗ ಇರುವ 3,500ಗೆ 2000 ಸೇರಿಸಿ 5,500 ರೂ.ಪ್ರತಿ ಟನ್‍ಗೆ ದರ ನಿಗದಿ ಮಾಡಿ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಸಿಎಂಗೆ ಸವಾಲ್ ಹಾಕಿದರು. ಒಂದು ವೇಳೆ ಕಬ್ಬಿನ ದರ ನಿಗದಿ ಮಾಡದೇ ಇದ್ದರೆ ಕಿತ್ತೂರ ಉತ್ಸವಕ್ಕೆ ಬಂದು ತೋರಿಸಿ. ಸುವರ್ಣ ಸೌಧ, ಕಿತ್ತೂರು ಉತ್ಸವ ಎಲ್ಲಕಡೆಯೂ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಮುಂಜಾಗ್ರತಾ ಕ್ರಮವಾಗಿ ಹತ್ತರಗಿ ಟೋಲ್ ನಾಕಾ ಬಳಿ ಬೆಳಗಾವಿ ಎಸ್‍ಪಿ ಡಾ.ಸಂಜೀವ್ ಪಾಟೀಲ್ ಹಾಗೂ ಸುವರ್ಣ ಸೌಧ ಮುಂಭಾಗದಲ್ಲಿ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಸುವರ್ಣಸೌಧದ ಎದುರು ಶಾವಿಗೆ ಒಣಹಾಕಿದ ಪ್ರಕರಣ – ಗುತ್ತಿಗೆದಾರನಿಗೆ ನೋಟಿಸ್

    ಸುವರ್ಣಸೌಧದ ಎದುರು ಶಾವಿಗೆ ಒಣಹಾಕಿದ ಪ್ರಕರಣ – ಗುತ್ತಿಗೆದಾರನಿಗೆ ನೋಟಿಸ್

    ಬೆಳಗಾವಿ: ಸುವರ್ಣಸೌಧದ ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ ‘ಶಾವಿಗೆ’ ಒಣಗಿಸಿದ್ದ ಪ್ರಕರಣದ ವಿಚಾರವಾಗಿ ಗುತ್ತಿಗೆದಾರನಿಗೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.

    ಸುವರ್ಣಸೌಧದ ಸ್ವಚ್ಛತಾ ಕಾರ್ಯ ಗುತ್ತಿಗೆ ಪಡೆದ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದೆ. ಗುತ್ತಿಗೆದಾರರು ಕೊಂಡಸಕೊಪ್ಪ ಗ್ರಾಮದ ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಅಚಾತುರ್ಯದಿಂದ ಘಟನೆ ನಡೆದಿದೆ ಎಂದು ಸಮಜಾಯಿಷಿ, ಘಟನೆ ಮರುಕಳಿಸಿದಂತೆ ಎಲ್ಲಾ ಗುತ್ತಿಗೆದಾರರಿಗೆ ಲೋಕೋಪಯೋಗಿ ಇಲಾಖೆ ನೋಟಿಸ್ ನೀಡಿದೆ. ಇದನ್ನೂ ಓದಿ: ಪಠ್ಯದಲ್ಲಿರುವ ತಮ್ಮ ಕವಿತೆ ವಾಪಸ್ ಪಡೆದ ಮತ್ತೊಬ್ಬ ಸಾಹಿತಿ

    ಮಹಿಳೆಯು ದಿನಗೂಲಿ ಆಧಾರದ ಮೇಲೆ ಸುವರ್ಣಸೌಧದ ಸ್ವಚ್ಛತಾ ಕೆಲಸ ಮಾಡುತ್ತಿದ್ದರು. ಸುವರ್ಣ ಸೌಧ ಉಪವಿಭಾಗದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿಯಿಂದ ನೋಟಿಸ್ ನೀಡಲಾಗಿದೆ. ನೋಟಿಸ್ ನೀಡಿದ ಬಗ್ಗೆ ಬೆಳಗಾವಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಪತ್ರ ಬರೆದು ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಿಯುಸಿ ಪಠ್ಯ ಪರಿಷ್ಕರಣೆ ಮುಕ್ತಾಯ

  • ಬೆಳಗಾವಿಯ ಸುವರ್ಣಸೌಧ ಎದುರು ಶಾವಿಗೆ ಒಣಹಾಕಿದ ಫೋಟೋ ವೈರಲ್

    ಬೆಳಗಾವಿಯ ಸುವರ್ಣಸೌಧ ಎದುರು ಶಾವಿಗೆ ಒಣಹಾಕಿದ ಫೋಟೋ ವೈರಲ್

    ಬೆಳಗಾವಿ: ಕುಂದಾನಗರಿಯ ಸುವರ್ಣ ಸೌಧದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆಯೂ ಶಾವಿಗೆ ಒಣಹಾಕಿರುವ ಫೋಟೋ ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಹಪ್ಪಳ, ಸಂಡಿಗೆ, ಶಾವಿಗೆ ಒಣಗಿಸೋಕೆ ಸುವರ್ಣ ಸೌಧ ಬಳಕೆಯಾಗುತ್ತಿದೆಯೇ ಎಂದು ಅಸಮಾಧಾನವ್ಯಕ್ತವಾಗಿದೆ.

    ಬೆಳಗಾವಿ ತಾಲೂಕಿನ ಹಲಗಾ ಮತ್ತು ಬಸ್ತವಾಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಲೆಂಬ ಕಾರಣಕ್ಕೆ 400ಕ್ಕೂ ಅಧಿಕ ಕೋಟಿ ರೂಪಾಯಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಾಣ ಮಾಡಲಾಗಿದೆ. ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಅಂತಾ ಸುವರ್ಣ ಸೌಧವನ್ನು ಕಟ್ಟಲಾಗಿದೆ. ಆದರೆ ಇಲ್ಲಿನ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲಾಗಿ ಶಾವಿಗೆ, ಹಪ್ಪಳ, ಸಂಡಿಗೆ ಒಣಗಿಸೋಕೆ ಈ ಸುವರ್ಣ ಸೌಧ ಬಳಕೆಯಾಗುತ್ತಿದೆ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಹಿಂದೂಗಳ ಬಗ್ಗೆ ಅವಹೇಳನಕಾರಿ ಭಾಷಣ – ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸ್ ಅಧಿಕಾರಿಗಳು

    ಈ ಕುರಿತಂತೆ ಬೆಳಗಾವಿಯ ನಾಗರಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಾಸ್ಪದ ರೀತಿಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಸರ್ಕಾರ ಮತ್ತು ಜಿಲ್ಲಾಡಳಿತಗಳ ದಿವ್ಯ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದೀಗ ಈ ಫೋಟೊಗಳು ಸಾಕಷ್ಟು ವೈರಲ್ ಆಗಿವೆ. ಇನ್ನೂ ಇದರ ನಿರ್ವಣೆಯ ಹೊಣೆ ಹೊತ್ತಿರುವ ಪಿಡಬ್ಲ್ಯೂಡಿ ಅಧಿಕಾರಿಗಳು ಸುವರ್ಣ ಸೌಧದ ಕಡೆಗೆ ತಿರುಗಿ ನೋಡಿಲ್ಲ. ಇನ್ನು ಈ ಕಟ್ಟಡದ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿರುವ ಕೈಗಾರಿಕಾ ಭದ್ರತಾ ಪೊಲೀಸ್ ಸರಿಯಾಗಿ ಕರ್ತವ್ಯ ಮಾಡದ ಹಿನ್ನೆಲೆ ಈ ಅವಾಂತರಕ್ಕೆ ಕಾರಣವಾಗಿದೆ. ಒಟ್ಟಾರೆ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಸುವರ್ಣ ಸೌಧದ ಮುಂದೆ ಶಾವಿಗೆ ಹಾಕಿರೋದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

  • ಮತಾಂತರ ಕಾಯ್ದೆಯಿಂದ ಸಮಾಜಕ್ಕೆ ಒಳ್ಳೆದಾಗುತ್ತದೆ: ಅಶ್ವತ್ಥ್ ನಾರಾಯಣ

    ಮತಾಂತರ ಕಾಯ್ದೆಯಿಂದ ಸಮಾಜಕ್ಕೆ ಒಳ್ಳೆದಾಗುತ್ತದೆ: ಅಶ್ವತ್ಥ್ ನಾರಾಯಣ

    ಬೆಳಗಾವಿ: ಆರ್‌ಎಸ್‌ಎಸ್‌ ಸಮಾಜದ ಪರವಾಗಿ ಕೆಲಸ ಮಾಡುತ್ತದೆ. ಆ ಸಂಘಟನೆ ಮಾಡುವುದೆಲ್ಲ ಒಳ್ಳೆಯದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

    ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮತಾಂತರ ನಿಷೇಧ ಮಸೂದೆ ಅನುಮೋದನೆ ಆಗಿದೆ. ಸದನದಲ್ಲಿ ಇಂದು ಬಹಳಷ್ಟು ಚರ್ಚೆಗಳು ಆಗಿದೆ. ಆಮಿಷಕ್ಕೆ ಒಳಗಾಗಿ ಮತಾಂತರ ಆಗಬಾರದು ಅಂತಾ ಜಾರಿ ಮಾಡಿದ್ದೇವೆ. ಪಾರದರ್ಶಕವಾಗಿ ಆಗಬೇಕು ಅಂತಾ ಮಸೂದೆ ಪಾಸ್‌ ಮಾಡಲಾಗಿದೆ  ಎಂದು ನುಡಿದರು. ಇದನ್ನೂ ಓದಿ: ಬಿಸಿಸಿಐಯನ್ನು ಟೀಕಿಸಿ ಕೊಹ್ಲಿ ಪರ ಅಫ್ರಿದಿ ಬ್ಯಾಟಿಂಗ್

    ಈ ಕಾಯ್ದೆ ಸಮಾಜಕ್ಕೆ ಒಳ್ಳೆಯದಾಗುವಂತದ್ದು. ಕಾಯ್ದೆ ಜಾರಿ ಮಾಡಿದ ಕ್ರೆಡಿಟ್ ಬಿಜೆಪಿ ಪಕ್ಷಕ್ಕೆ ಬರುತ್ತೆ. ವಿರೋಧ ಪಕ್ಷ ಮಾಡಿದ್ದರೆ ಅವರಿಗೆ ಕ್ರೆಡಿಟ್ ಹೋಗುತ್ತಿತ್ತು. ಅವರು ಪಾರದರ್ಶಕವಾಗಿದೆ ಅಂತಾ ಬೆಂಬಲ ನೀಡಿದರೆ ಕಾಂಗ್ರೆಸ್ ನವರಿಗೆ ಕ್ರೆಡಿಟ್ ಬರತ್ತಿತ್ತು ಇತ್ತು. ಹಿಡನ್ ಅಜೆಂಡಾ ಏನು ಇಲ್ಲ. ಗೋಹತ್ಯೆ ನಿಷೇಧ ಸಂವಿಧಾನದಲ್ಲೇ ಇದೆ. ಮತಾಂತರ ನಿಷೇಧ ಸಂವಿಧಾನದಲ್ಲೇ ಇದೆ ಎಂದು ಹೇಳಿದರು. ಇದನ್ನೂ ಓದಿ: ಯುವತಿಯರ ಮದುವೆ ವಯಸ್ಸು 21ಕ್ಕೆ ಏರಿಕೆ ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಅಲ್ಲ: ಶೋಭಾ ಕರಂದ್ಲಾಜೆ

  • ಭೋಗದ ವಸ್ತು ನೀಡೋರನ್ನ ಸಿಎಂ ಮಾಡಲ್ಲ, ಅಂತಹ ಅಯೋಗ್ಯನ ಜೊತೆ ನಾನು ಸೇರಲ್ಲ: ಯತ್ನಾಳ್

    ಭೋಗದ ವಸ್ತು ನೀಡೋರನ್ನ ಸಿಎಂ ಮಾಡಲ್ಲ, ಅಂತಹ ಅಯೋಗ್ಯನ ಜೊತೆ ನಾನು ಸೇರಲ್ಲ: ಯತ್ನಾಳ್

    ಬೆಳಗಾವಿ: ಭೋಗದ ವಸ್ತುಗಳನ್ನು ಕೊಡುವವರನ್ನು ಸಿಎಂ ಮಾಡಲ್ಲ. ಅಂತಹ ಅಯೋಗ್ಯನ ಜೊತೆ ನಾನು ಸೇರಲ್ಲ ಎಂದು ಸಚಿವ ಮುರುಗೇಶ್ ನಿರಾಣಿಗೆ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಟಾಂಗ್ ನೀಡಿದ್ದಾರೆ.

    ಈಶ್ವರಪ್ಪ, ಯತ್ನಾಳ್, ನಿರಾಣಿ ಸಂಧಾನ ಸಭೆ ವಿಚಾರವಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರೂ ಖಾಸಗಿ ಹೋಟೆಲ್‍ನಲ್ಲಿದ್ದಾರೆ. ಸಿಎಂ ಆಗುತ್ತೇನೆ ಎಂದು ಯಾರ್‍ಯಾರೋ ಹಗಲುಗನಸು ಕಾಣುತ್ತಿದ್ದಾರೆ. ಸೂಟು ಹೊಲಿಸಿಕೊಂಡವರೂ ಇದ್ದಾರೆ. ದೊಡ್ಡವರಿಗೆ ಹಣ ಕೊಡುತ್ತಾರೆ. ನಾನು ರಿಸರ್ವ್ ಮಾಡಿದ್ದೇನೆ, ಬುಕ್ ಮಾಡಿದ್ದೇನೆ ಅಂತಿದ್ದಾರೆ. ಜನವರಿ 2ನೇ ವಾರದಲ್ಲಿ ಸಿಎಂ ಆಗುತ್ತೇನೆಂದು ಕನಸು ಕಾಣುತ್ತಿದ್ದಾರೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ. ಅವರ ಆಸೆಗಳು ಈಡೇರುವುದಿಲ್ಲ. ಸದ್ಯ ಸಿಎಂ ಬದಲಾವಣೆ ವಿಚಾರದ ಬಗ್ಗೆ ಚರ್ಚೆ ಇಲ್ಲ ಎಂದು ಯತ್ನಾಳ್ ತಿಳಿಸಿದ್ದಾರೆ. ಇದನ್ನೂ ಓದಿ: 2023ರ ಚುನಾವಣೆ ಬೊಮ್ಮಾಯಿ ನಾಯಕತ್ವದಲ್ಲೇ ನಡೆಯುತ್ತೆ: ವಿ. ಸೋಮಣ್ಣ

    basavaraj bommai

    ಭೋಗದ ವಸ್ತುಗಳನ್ನು ಕೊಡುವವರನ್ನು ಸಿಎಂ ಮಾಡಲ್ಲ. ದೊಡ್ಡ, ದೊಡ್ಡ ಸಂಧಾನ ಮಾಡುತ್ತಿರುವುದು ನಿಜ. ಮಂತ್ರಿ ಮಾಡುತ್ತೇನೆ, ಡಿಸಿಎಂ ಮಾಡುತ್ತೇನೆ ಎಂದು ನನಗೆ ಆಮಿಷ ಒಡ್ಡುತ್ತಿದ್ದಾರೆ. ಆದರೆ ಇಂತವರನ್ನು ಒಪ್ಪಿಕೊಳ್ಳುವ ಕೀಳುಮಟ್ಟದ ರಾಜಕಾರಣಿ ನಾನಲ್ಲ. ಇಂತಹ ಅಯೋಗ್ಯನ ಜೊತೆ ನಾನು ಸೇರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅಖಿಲೇಶ್ ಯಾದವ್‍ಗೆ ಕೊರೊನಾ ನೆಗೆಟಿವ್ – ಪತ್ನಿ, ಮಗಳಿಗೆ ಪಾಸಿಟಿವ್

  • ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ

    ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ: ಸಿ.ಎಂ ಇಬ್ರಾಹಿಂ

    ಬೆಳಗಾವಿ: ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಸರ್ಕಾರ ಜಾರಿಗೆ ತರಲಿ. ಹೊರಗಿಂದ ಬಂದು ಪಕ್ಷ ಸೇರಿದವರು ಆರು ತಿಂಗಳು ಮಂತ್ರಿಗಳಾಗುವಂತಿಲ್ಲ ಅಂತ ಕಾನೂನು ತರಲಿ ಎಂದು ಕಾಂಗ್ರೆಸ್ ಎಂಎಲ್‍ಸಿ ಸಿಎಂ ಇಬ್ರಾಹಿಂ ಸರ್ಕಾರಕ್ಕೆ ಸವಾಲೊಡ್ಡಿದ್ದಾರೆ.

    ಬೆಳಗಾವಿಯ ಸುವರ್ಣ ಸೌಧದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾನೂನಿಗೆ ವಿರೋಧ ಇದೆ. ಪರಿಷತ್ ನಲ್ಲಿ ಮಸೂದೆ ಮಂಡಿಸಿದರೆ ಬೇಡ ಎಂದು ವಿರೋಧಿಸುತ್ತೇವೆ. ಬಿಜೆಪಿಯವರು ದಾರಿ ತಪ್ಪಿದ ಮಕ್ಕಳು. ಅವರಿಗೆ ಏನೂ ಹೇಳುವುದಕ್ಕೆ ಆಗುವುದಿಲ್ಲ. ಬೊಮ್ಮಾಯಿ ಅವರು ಹೇಗೋ ಹೋಗುತ್ತಿದ್ದಾರೆ. ಅವರು ಹೋಗುವ ಮುನ್ನ ಒಳ್ಳೆ ಕೆಲಸ ಮಾಡಿ ಹೋಗಲಿ ಎಂದು ವ್ಯಂಗ್ಯವಾಡಿದ್ದಾರೆ.

    ಮತಾಂತರ ತಡೆ ಮಸೂದೆ ತರುವ ಮುನ್ನ ವಿದೇಶಿ ಕನ್ನಡಿಗರ ಬಗ್ಗೆಯೂ ಸರ್ಕಾರ ಯೋಚಿಸಲಿ. ಇಲ್ಲಿ ಆ ಕಾಯ್ದೆ ತಂದರೆ ವಿದೇಶಗಳಲ್ಲಿ ಕನ್ನಡಿಗರು ನೆಮ್ಮದಿಯಾಗಿ ಇರಲು ಸಾಧ್ಯವೇ? ಜೊತೆಗೆ ಈ ಕಾನೂನು ಕ್ರಿಶ್ಚಿಯನ್ ಸಮುದಾಯ ಗುರಿಯಾಗಿಸಿಕೊಂಡು ತರುತ್ತಿದ್ದಾರೆ. ಬಿಜೆಪಿಯವರು ತಮ್ಮ ಮಕ್ಕಳನ್ನು ಕ್ರಿಶ್ಚಿಯನ್ ಶಾಲೆಗಳಲ್ಲಿ ಓದಿಸುತ್ತಾರೆ. ಅವರ ವಿರುದ್ಧವೇ ಕಾನೂನು ತರುತ್ತಿರುವುದು ಸರೀನಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಮಸೂದೆ ಸಂವಿಧಾನಕ್ಕೆ ವಿರುದ್ಧವಾಗಿದೆ: ಡಿಕೆಶಿ

    ಮತಾಂತರ ನಿಷೇಧ ಜೊತೆಗೆ ಪಕ್ಷಾಂತರ ನಿಷೇಧ ಕಾನೂನನ್ನೂ ಜಾರಿಗೆ ತರಲಿ. ಹೊರಗಿಂದ ಬಂದು ಪಕ್ಷ ಸೇರಿದವರು ಆರು ತಿಂಗಳು ಮಂತ್ರಿಗಳಾಗುವಂತಿಲ್ಲ ಅಂತ ಕಾನೂನು ತರಲಿ. ಆರು ಜನ ಮಂತ್ರಿಗಳು ವೀಡಿಯೋ ಪ್ರಸಾರಕ್ಕೆ ಸ್ಟೇ ತಂದಿದ್ದಾರೆ. ಮೊದಲು ಆ ಸ್ಟೇ ತೆರವು ಮಾಡಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಲಸಿಗರಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ನಿಲ್ಲದ ಪುಂಡಾಟ – ಕನ್ನಡಿಗರ ಮೇಲೆ ಹಲ್ಲೆಗೈದು ನಿಂದಿಸಿದ ಶಿವಸೇನೆ ಕಾರ್ಯಕರ್ತರು!

  • ಎಲ್ಲರನ್ನೂ ಅಪರಾಧಿ, ಆರೋಪಿಗಳು ಎಂದು ನೋಡಬಾರದು: ಲಕ್ಷ್ಮಿ ಹೆಬ್ಬಾಳ್ಕರ್

    ಎಲ್ಲರನ್ನೂ ಅಪರಾಧಿ, ಆರೋಪಿಗಳು ಎಂದು ನೋಡಬಾರದು: ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ಮಹಾಪುರುಷರ ಪ್ರತಿಮೆಗೆ ಕಪ್ಪುಮಸಿ, ಪ್ರತಿಮೆ ಕೆಡವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ರಾಜಕೀಯ ಬೇಳೆ ಬೇಯಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಸುವರ್ಣಸೌಧದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಾಜ, ರಾಜ್ಯದ ಮಧ್ಯೆ ಹೀಗೆ ಮಾಡಿ ಒಕ್ಕೂಟ ವ್ಯವಸ್ಥೆ ಹಾಳು ಮಾಡುತ್ತಿದ್ದಾರೆ. ಯಾರು ತಪ್ಪಿತಸ್ಥರು ಇದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಎಂಇಎಸ್ ನಿಷೇಧ ಬಗ್ಗೆ ಚರ್ಚೆ ಮಾಡ್ತಾರೋ ಇಲ್ಲವೋ ಗೊತ್ತಿಲ್ಲ. ಕೆಲವರು ಸಮಾಜದ ಹೆಸರು ಕೆಡಿಸುತ್ತಿದ್ದಾರೆ. ಎಲ್ಲರನ್ನೂ ಅಪರಾಧಿ, ಆರೋಪಿಗಳು ಎಂದು ನೋಡಬಾರದು. ಕುರುಬ ಮತ್ತು ಮರಾಠ ಸಮುದಾಯದ ನಾಯಕರ ಜೊತೆ ಸೌಹಾರ್ದಯುತವಾಗಿ ಚರ್ಚೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಹಿಂದುತ್ವದಲ್ಲಿ ನಂಬಿಕೆ ಇದ್ದವರು ಭಾರತೀಯರ DNA ಒಂದೇ ಎಂದು ಭಾವಿಸುತ್ತಾರೆ: ರಾಹುಲ್

    ಎಲ್ಲರನ್ನೂ ಅಪರಾಧಿ, ಆರೋಪಿಗಳು ಎಂದು ನೋಡಬಾರದು. ಕೆಲವರು ಈ ರೀತಿಯ ವರ್ತನೆ ಮಾಡುತ್ತಿದ್ದಾರೆ. ಎಂಇಎಸ್ ಪುಂಡಾಟಿಕೆ ಬಗ್ಗೆ ಬೆಳಗಾವಿ ಮುಖಂಡರ ಮೌನ ವಿಚಾರವಾಗಿ ಮಾತನಾಡಿ, ಯಾರನ್ನೂ ಓಲೈಕೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಯಾರೂ ತಪ್ಪು ಮಾಡುತ್ತಾರೆ, ಆಗ ಅವರು ತಪ್ಪು ಮಾಡಿದ್ದಾರೆ ಎಂದು ಹೇಳುವ ಧೈರ್ಯ ನನಗೆ ಇದೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಗಲಾಟೆ ಮಾಡಿದವರೆಲ್ಲಾ ಕಾಂಗ್ರೆಸಿಗರು: ಶ್ರೀರಾಮುಲು