Tag: ಸುಲ್ತಾನ್

  • ಮುಂಬೈ ಥಿಯೇಟರ್ ಮುಂದೆ ರಶ್ಮಿಕಾ – ನೆಚ್ಚಿನ ನಟಿ ನೋಡಲು ಮುಗಿಬಿದ್ದ ಫ್ಯಾನ್ಸ್

    ಮುಂಬೈ ಥಿಯೇಟರ್ ಮುಂದೆ ರಶ್ಮಿಕಾ – ನೆಚ್ಚಿನ ನಟಿ ನೋಡಲು ಮುಗಿಬಿದ್ದ ಫ್ಯಾನ್ಸ್

    ಮುಂಬೈ: ದಕ್ಷಿಣ ಭಾರತದ ಚೆಲುವೆ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‍ನ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಆದರೆ ಈ ಮಧ್ಯೆ ರಶ್ಮಿಕಾ ಮುಂಬೈನ ಥಿಯೇಟರ್ ಮುಂಭಾಗ ಕಾಣಿಸಿಕೊಂಡಿದ್ದಾರೆ.

    ಹೌದು, ಕಾಲಿವುಡ್ ನಟ ಕಾರ್ತಿಕ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಸುಲ್ತಾನ್ ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ಹೀಗಾಗಿ ಸಿನಿಮಾ ವೀಕ್ಷಿಸಲು ರಶ್ಮಿಕಾ ಮುಂಬೈನ ಥಿಯೇಟರ್‍ವೊಂದಕ್ಕೆ ಬಂದಿದ್ದರು. ಈ ವೇಳೆ ರಶ್ಮಿಕಾ ಬಿಳಿ ಬಣ್ಣದ ಶರ್ಟ್ ಹಾಗೂ ಚಿಕ್ಕ ಶಾಟ್ರ್ಸ್ ತೊಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಬೇಸಿಗೆಗೆ ಸರಿ ಹೊಂದುವಂತೆ ಮತ್ತು ಡ್ರೆಸ್ ಗೆ ಮ್ಯಾಚ್ ಆಗುವಂತಹ ಬಿಳಿ ಬಣ್ಣದ ಶೂವನ್ನು ಧರಿಸಿದ್ದರು. ಜೊತೆಗೆ ಸಿನಿಮಾ ಹಾಲ್‍ಗೆ ಪ್ರವೇಶಿಸುವ ಮುನ್ನ ರಶ್ಮಿಕಾ ಫೋಟೋಗೆ ಸ್ಮೈಲ್ ಮಾಡಿ ಪೋಸ್ ನೀಡಿ ಒಳಗೆ ಹೋದರು. ಈ ವೇಳೆ ರಶ್ಮಿಕಾರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.

    ಸುಲ್ತಾನ್ ಸಿನಿಮಾ ಏಪ್ರಿಲ್ 2ರಂದು ಬಿಡುಗಡೆಗೊಂಡಿದ್ದು, ಸಿನಿಮಾಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ದೊರೆಯುತ್ತಿದೆ. ಇದೇ ಮೊದಲ ಬಾರಿಗೆ ರಶ್ಮಿಕಾ ಅವರು ಕಾರ್ತಿಕ್‍ಗೆ ಜೋಡಿಯಾಗಿ ಅಭಿನಯಿಸಿದ್ದು, ಸಿನಿಮಾಕ್ಕೆ ಬಕ್ಕಿಯರಾಜ್ ಕಣ್ಣನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ನೆಪೋಲಿಯನ್, ಲಾಲ್, ಯೋಗಿ ಬಾಬು ಮತ್ತು ರಾಮಚಂದ್ರ ರಾಜು ನಟಿಸಿದ್ದಾರೆ. ಜೊತೆಗೆ ವಿವೇಕ್-ಮರ್ವಿನ್ ಹಾಗೂ ಯುವನ್ ಶಂಕರ್ ರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

     

    ಸದ್ಯ ಬಾಲಿವುಡ್‍ನ 2ನೇ ಸಿನಿಮಾ ಗುಡ್ ಬಾಯ್‍ಗಾಗಿ ರಶ್ಮಿಕಾ ಮುಂಬೈನಲ್ಲಿದ್ದಾರೆ. ಗುಡ್‍ಬಾಯ್ ಸಿನಿಮಾದಲ್ಲಿ ರಶ್ಮಿಕಾ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದು, ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ‘ಹೀಗೆ ಅಂದು ಕೊಂಡಿದ್ದು ಆಗುತ್ತಿದೆ. ಕಾತುರದಿಂದ ಕಾಯುತ್ತಿದ್ದ ನಟನೊಂದಿಗೆ ಕೊನೆಗೂ ಅಭಿನಯಿಸುತ್ತಿದ್ದೇನೆ. ನನ್ನ ಬಾಲ್ಯವನ್ನು ಅಮಿತಾಬ್ ಬಚ್ಚನ್‍ರನ್ನು ನೋಡಿಕೊಂಡು ಕಳೆದಿದ್ದೇನೆ. ಗುಡ್ ಬೈನೊಂದಿಗೆ ಹೊಸ ಪ್ರಾರಂಭವನ್ನು ಸ್ವಾಗತಿಸುತ್ತಿದ್ದೇನೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದರು.

     

  • ಸೀರೆಯಲ್ಲಿ ರಶ್ಮಿಕಾ ಮಂದಣ್ಣ – ಕೊಡಗಿನ ಕುವರಿ ಲುಕ್‍ಗೆ ಫಿದಾ ಆದ ಫ್ಯಾನ್ಸ್

    ಸೀರೆಯಲ್ಲಿ ರಶ್ಮಿಕಾ ಮಂದಣ್ಣ – ಕೊಡಗಿನ ಕುವರಿ ಲುಕ್‍ಗೆ ಫಿದಾ ಆದ ಫ್ಯಾನ್ಸ್

    ಬೆಂಗಳೂರು: ದಕ್ಷಿಣ ಭಾರತದ ಚೆಲುವೆ ನಟಿ ರಶ್ಮಿಕಾ ಮಂದಣ್ಣ ಸೀರೆಯಲ್ಲಿ ಮಿಂಚುವ ಮೂಲಕ ಅಭಿಮಾನಿಗಳನ್ನು ಕ್ಲೀನ್ ಬೌಲ್ಡ್ ಮಾಡಿದ್ದಾರೆ.

    ಇತ್ತೀಚೆಗಷ್ಟೇ ನಟ ಕಾರ್ತಿಕ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಸುಲ್ತಾನ್ ಸಿನಿಮಾದ ಟ್ರೈಲರ್ ಲಾಂಚ್ ಸಮಾರಂಭ ಚೆನ್ನೈನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ರಶ್ಮಿಕಾ ರೆಟ್ರೋ ಕಮ್ ಮಾಡ್ರೆನ್ ಸೀರೆ ಲುಕ್‍ನಲ್ಲಿ ಮಿಂಚಿದ್ದರು. ಸದ್ಯ ಸೀರೆ ತೊಟ್ಟು ಫೋಟೋಗೆ ಪೋಸ್ ನೀಡಿರುವ ರಶ್ಮಿಕಾ ಮಂದಣ್ಣ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಫೋಟೋದಲ್ಲಿ ರಶ್ಮಿಕಾ ಕ್ರೀಮ್ ಕಲರ್ ನೆಟ್ ಸೀರೆ ತೊಟ್ಟು, ಕೂದಲನ್ನು ಬನ್ ಮೂಲಕ ಮೇಲಕ್ಕೆ ಕಟ್ಟಿದ್ದಾರೆ ಹಾಗೂ ಅದಕ್ಕೆ ಕೃತಕ ಗುಲಾಬಿ ಹೂವೊಂದನ್ನು ಮುಡಿದುಕೊಂಡಿದ್ದಾರೆ.

    ಸದಾ ಹೊಸ ತರಹದ ಲುಕ್‍ಗಳಲ್ಲಿ ಕಾಣಿಸಿಕೊಳ್ಳಲು ಪ್ರಯತ್ನಿಸುವ ರಶ್ಮಿಕಾ ಮಂದಣ್ಣ ಸೀರೆಯಲ್ಲಿ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ಅಲ್ಲದೆ ಈ ಸೀರೆ ರಶ್ಮಿಕಾ ಮಂದಣ್ಣ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರೆ ತಪ್ಪಾಗಲಾರು. ಸದ್ಯ ಈ ಫೋಟೋವನ್ನು ರಶ್ಮಿಕಾ ತಮ್ಮ ಇನ್ ಸ್ಟಾಗ್ರಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನನ್ನ ರೀತಿಯ ಪರಿಪೂರ್ಣತೆ( ಮೈ ಕೈಂಡ್ ಪರ್ಫೆಕ್ಟ್ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ರಶ್ಮಿಕಾರ ಈ ಫೋಟೋಗೆ ಅಭಿಮಾನಿಗಳು ಕಮೆಂಟ್ ಸೆಕ್ಷನ್‍ನಲ್ಲಿ ಹಾರ್ಟ್ ಚಿಹ್ನೆಯನ್ನು ಹಾಕುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಕಾಲಿವುಡ್ ನಟಿ ಕೀರ್ತಿ ಸುರೇಶ್ ಕೂಡ ರಶ್ಮಿಕಾ ಮಂದಣ್ಣರ ಈ ಫೋಟೋಗೆ ಸ್ಮೈಲಿ ಚಿಹ್ನೆಯನ್ನು ಹಾಕಿ ಕಮೆಂಟ್ ಮಾಡಿದ್ದಾರೆ.

    ದಕ್ಷಿಣ ಭಾರತದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ರಶ್ಮಿಕಾ ಮಂದಣ್ಣ ಇದೀಗ ಮಿಷನ್ ಮಜ್ನು ಸಿನಿಮಾದ ಮೂಲಕ ಬಾಲಿವುಡ್‍ಗೆ ಲಗ್ಗೆ ಇಟ್ಟಿದ್ದು, ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣಗೆ ಜೋಡಿಯಾಗಿ ನಟ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯಿಸಿದ್ದಾರೆ.

  • ಕಂಗನಾ ಸುಲ್ತಾನ್ ಆಫರ್ ನಿರಾಕರಿಸಿದ್ದು ಯಾಕೆ?

    ಕಂಗನಾ ಸುಲ್ತಾನ್ ಆಫರ್ ನಿರಾಕರಿಸಿದ್ದು ಯಾಕೆ?

    ಮುಂಬೈ: ಸಲ್ಮಾನ್ ಖಾನ್ ನಟನೆಯ ಬ್ಲಾಕ್‍ ಬಸ್ಟರ್ ಚಿತ್ರ `ಸುಲ್ತಾನ್’ನಲ್ಲಿ ಮಹಿಳಾ ಕುಸ್ತಿಪಟುವಿನ ಪಾತ್ರವನ್ನು ನಿರಾಕರಿಸಿದ್ದು ಯಾಕೆ ಎಂಬ ಬಗ್ಗೆ ಕಂಗನಾ ರನಾವತ್ ಪ್ರತಿಕ್ರಿಯಿಸಿದ್ದಾರೆ.

    ಚಿತ್ರದಲ್ಲಿ ಸಲ್ಮಾನ್‍ಗೆ ನಾಯಕಿಯಾಗಿ ಕುಸ್ತಿ ಅಖಾಡದಲ್ಲಿ ಸೆಣಸುವ ಮಹಿಳಾ ಕುಸ್ತಿಪಟುವಿನ ಪಾತ್ರವನ್ನು ಕಂಗನಾ ಅವರಿಗೆ ನೀಡಲಾಗಿತ್ತು. ಆದರೆ ಅವರು ನಿರಾಕರಿಸಿದ್ದರಿಂದ ಅನುಷ್ಕಾ ಶರ್ಮಾ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಸಾಕಷ್ಟು ಯಶಸ್ವಿಯಾಗಿ ಅನುಷ್ಕಾ ಆ ಪಾತ್ರಕ್ಕಾಗಿ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದರು.

    ಆದ್ರೆ ಈ ಪಾತ್ರವನ್ನು ನಿರಾಕರಿಸಿದ್ದು ಯಾಕೆ ಎಂದು ಕೇಳಿದ್ದಕ್ಕೆ ಕಂಗನಾ, ಈ ಪಾತ್ರದಲ್ಲಿ ಅಂಥದ್ದೇನೂ ವಿಶೇಷತೆಯಿದೆ ಎಂದು ಅನ್ನಿಸಲಿಲ್ಲ. ಈಗಿನ ದಿನಗಳನ್ನ ನೋಡೋದಾದ್ರೆ ನನಗೆ ಯಾವುದು ಉತ್ತೇಜನ ನೀಡುತ್ತದೋ ಅಂತಹ ಪಾತ್ರಗಳಿಗೆ ಹೋಗ್ತೀನಿ. ಇಲ್ಲವಾದ್ರೆ ನಿದ್ದೆಯಲ್ಲಿ ನಡೆದಾಡಿದಂತೆ ಆಗುತ್ತದೆ. ಆ ಸಂದರ್ಭದಲ್ಲಿ ಸುಲ್ತಾನ್ ಚಿತ್ರದ ಆ ಪಾತ್ರ ಒಬ್ಬ ಹುಡುಗಿ ನಿರ್ವಹಿಸಲು ತುಂಬಾ ದೊಡ್ಡದ್ದೇ ಆಗಿದ್ದರೂ, ಆದ್ರೆ ಅದರಲ್ಲಿ ನನಗೆ ಸಿಗುವಂತದ್ದು ಏನೂ ಇರಲಿಲ್ಲ ಎಂದಿದ್ದಾರೆ.

    `ತನು ವೆಡ್ಸ್ ಮನು ರಿಟನ್ಸ್’ ಸಿನಿಮಾದಲ್ಲಿ ಡಬಲ್ ರೋಲ್‍ನಲ್ಲಿ ಕಾಣಿಸಿಕೊಂಡ ನಂತರ ತನಗೆ ಅಲಿ ಅಬ್ಬಾಸ್ ಜಾಫರ್ ಅವರ ಈ ಸಿನಿಮಾದಲ್ಲಿ ಅವಕಾಶ ನೀಡಲಾಗಿತ್ತು. ಒಂದು ಬಾರಿ ಡಬಲ್ ರೋಲ್ ಕಾಣಿಸಿಕೊಂಡು ಹಿಂದಿನ ಚಿತ್ರದಲ್ಲಿ ಅಷ್ಟೊಂದು ಮಾಡಿದ ನಂತರ ಅದಕ್ಕಿಂತ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ಅದಕ್ಕಾಗಿ ನಾನು ಆ ಪಾತ್ರವನ್ನ ಮಾಡಲಿಲ್ಲ ಅಂದ್ರು.

    ಜಾಗರಣ್ ಸಿನಿಮಾ ಸಮಿತ್‍ನಲ್ಲಿ ಚಲನಚಿತ್ರ ವಿಶ್ಲೇಷಕ ಮಾಯಾಂಕ್ ಶೇಖರ್ ಅವರೊಂದಿಗೆ ಮಾತನಾಡುವ ವೇಳೆ ಕಂಗನಾ ಈ ಎಲ್ಲಾ ವಿಚಾರವನ್ನ ಹಂಚಿಕೊಂಡಿದ್ದಾರೆ.

    ಆಮಿರ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ನಟನೆಯ ದಿ ಥಗ್ಸ್ ಆಫ್ ಹಿಂದುಸ್ತಾನ್ ಸಿನಿಮಾದಲ್ಲೂ ಕಂಗನಾಗೆ ಅವಕಾಶ ಸಿಕ್ಕಿತ್ತು ಎಂಬ ವರದಿಗಳಿದ್ದವು. ಆದ್ರೆ ಇದನ್ನು ತಳ್ಳಿಹಾಕಿದ ಕಂಗನಾ, ನನಗೆ ಚಿತ್ರದ ಸ್ಕ್ರಿಪ್ಟ್ ಏನು ಎಂಬುದೇ ಗೊತ್ತಿಲ್ಲ ಅಂದ್ರು.

    ಕಂಗನಾ ತಮ್ಮ ಮುಂದಿನ ಸಿನಿಮಾ `ಮನಿಕರ್ಣಿಕಾ-ದಿ ಕ್ವೀನ್ ಆಫ್ ಝಾನ್ಸಿ’ಯಲ್ಲಿ ರಾಣಿ ಲಕ್ಷ್ಮೀ ಬಾಯಿ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನ ಕ್ರಿಷ್ ನಿರ್ದೇಶಿಸುತ್ತಿದ್ದಾರೆ.