ತಡರಾತ್ರಿ ತನಕ ಅಚಲ್ ಮತ್ತು ಪವನ್, ಚಂದನ್ ಮೂವರು ಪಾರ್ಟಿ ಮಾಡಿದ್ದರು. ನಂತರ ಜಾಲಿ ರೈಡ್ ಹೋಗೋಣ ಅಂತಾ ಚಂದನ್ ಕಾರಿನಲ್ಲೇ ಏರ್ಪೋರ್ಟ್ ಕಡೆಗೆ ಹೊರಟಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಕಾರಿನಲ್ಲಿದ್ದ ಮೂವರ ಮೇಲೂ ಹಲ್ಲೆ ಮಾಡಿ ಚಂದನ್ ಬಳಿಯಿದ್ದ ಮೂರು ಲಕ್ಷ ಮೌಲ್ಯದ ಚಿನ್ನ, ನಗದು ದೋಚಿ ಎಸ್ಕೇಪ್ ಆಗಿದ್ದರು. ಈ ವೇಳೆ ಜೊತೆಗಿದ್ದ ಅಚಲ್ ಮತ್ತು ಪವನ್ ಪೊಲೀಸರಿಗೆ ದೂರು ನೀಡೋದು ಬೇಡ ಅಂತಾ ಚಂದನ್‌ಗೆ ಮನವೊಲಿಸಿದ್ದರು.
ಇದಾದ ಒಂದು ವಾರದ ನಂತರದ ಘಟನೆ ಬಗ್ಗೆ ಅನುಮಾನಗೊಂಡ ಚಂದನ್ ಪೊಲೀಸರಿಗೆ ದೂರು ನೀಡಿದ್ದ. ತನಿಖೆಯಲ್ಲಿ ಜೊತೆಗಿದ್ದ ಸ್ನೇಹಿತರೇ ಸುಲಿಗೆಕೋರರಿಗೆ ಸುಪಾರಿ ನೀಡಿ ಸುಲಿಗೆ ಮಾಡಿರುವುದು ಗೊತ್ತಾಗಿತ್ತು. ಸದ್ಯ ಪವನ್, ಪ್ರೇಮ್ ಶೆಟ್ಟಿ, ಅಚಲ್, ತರುಣ್ ಎಂಬವರನ್ನು ಬಂಧಿಲಾಗಿದೆ. ಇದನ್ನೂ ಓದಿ: ಪ್ರೀತಿ ವಿಚಾರಕ್ಕೆ ಕಿರಿಕ್ – ಶಿಕ್ಷಕಿಗೆ ಚಾಕು ಇರಿದು ಕೊಂದ ಯುವಕ
ಚಿತ್ರದುರ್ಗ: ಬೈಕಲ್ಲಿ (Bike) ಬಂದು ಸುಲಿಗೆ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ಚಳ್ಳಕೆರೆ (Challakere) ಪೊಲೀಸರು ಯಶಸ್ವಿಯಾಗಿದ್ದಾರೆ.
ರೋಷನ್ ಎಂಬ ಆರೋಪಿ ಹಾಡುಹಗಲೇ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ. ಹೀಗಾಗಿ ಚಳ್ಳಕೆರೆ ಪೊಲೀಸರಿಗೆ ಬಾರಿ ತಲೆನೋವು ಎನಿಸಿದ್ದು, ಭರ್ಜರಿ ಕಾರ್ಯಚರಣೆ ನಡೆಸಿರುವ ಚಳ್ಳಕೆರೆ ಪೊಲೀಸರು ಹಿರಿಯೂರು (Hiriyur) ತಾಲೂಕಿನ ಖಂಡನೇಹಳ್ಳಿ ಗ್ರಾಮದ ಆರೋಪಿ ರೋಷನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಅಂಕುಶ – ಸಂಜೆ 5 ಗಂಟೆಯ ನಂತರ ವಸೂಲಿ ಮಾಡುವಂತಿಲ್ಲ
ಈ ಆರೋಪಿ ಸೆರೆಯಿಂದ ಚಳ್ಳಕೆರೆ ತಾಲೂಕಿನ ಜನರು ನಿಟ್ಟುಸಿರು ಬಿಡುವಂತಾಗಿದೆ. ಬಂಧಿತ ಆರೋಪಿಯಿಂದ 10 ಲಕ್ಷ ಮೌಲ್ಯದ 7 ಮಾಂಗಲ್ಯ ಸರಗಳು, 2 ಲಕ್ಷ ಮೌಲ್ಯದ ಎರಡು ಬೈಕ್‌ಗಳು ಸೇರಿದಂತೆ 12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿ ಚಳ್ಳಕೆರೆ ಸೇರಿದಂತೆ ವಿವಿಧ ಠಾಣೆಗಳಲ್ಲಿ 7 ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಭಾರೀ ಕಾಡ್ಗಿಚ್ಚು – ನೂರಾರು ಎಕರೆ ಅರಣ್ಯ ನಾಶ, ಸಂಕಷ್ಟದಲ್ಲಿ ಪ್ರಾಣಿ ಸಂಕುಲ
ಬಂಧಿತರನ್ನು ಸಜ್ಜಾದ್ ಖಾನ್ ಹಾಗೂ ಸೈಫ್ ಮೌಲಾನ ಎಂದು ಗುರುತಿಸಲಾಗಿದೆ. ಇವರು ರಾತ್ರಿ ವೇಳೆ ಒಬ್ಬಂಟಿಯಾಗಿ ತೆರಳುವ ಸ್ವಿಗ್ಗಿ ಡೆಲಿವರಿ ಬಾಯ್ಸ್ ಗಳನ್ನೇ ಟಾರ್ಗೆಟ್ ಮಾಡ್ತಿದ್ದರು.
ಅಕ್ಟೋಬರ್ 10ರಂದು ಮೊಬೈಲ್ (Mobile) ಗಾಗಿ ಆರೋಪಿಗಳು ಚಾಕುವಿನಿಂದ ಇರಿದಿದ್ದರು. ಆರೋಪಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರೋದು ತನಿಖೆ ವೇಳೆ ಬಹಿರಂಗವಾಗಿದೆ. ಚಾಮರಾಜಪೇಟೆ, ವಿಲ್ಸನ್ ಗಾರ್ಡನ್, ಕಲಾಸಿಪಾಳ್ಯ ವ್ಯಾಪ್ತಿಯಲ್ಲಿ ಕೂಡ ಆರೋಪಿಗಳು ಸುಲಿಗೆ ಮಾಡಿದ್ದರು.
ಮೊಬೈಲ್ ಸುಲಿಗೆ ಪ್ರಕರಣ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
Live Tv
[brid partner=56869869 player=32851 video=960834 autoplay=true]
ಭುವನೇಶ್ವರ: ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ 26 ವರ್ಷದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯನ್ನು ಅರ್ಚನಾ ನಾಗ್ (Archana Nag) ಎಂದು ಗುರುತಿಸಲಾಗಿದೆ. ಈಕೆ ಒಡಿಶಾದ ಕಲಹಂಡಿ ಜಿಲ್ಲೆಯ ನಿವಾಸಿಯಾಗಿದ್ದು, ಅಕ್ಟೋಬರ್ 6 ರಂದು ಬಂಧಿಸಲಾಯಿತು.
ರಾಜಕಾರಣಿಗಳು, ಉದ್ಯಮಿಗಳು ಮತ್ತು ಚಲನಚಿತ್ರ ನಿರ್ಮಾಪಕರು ಸೇರಿದಂತೆ ರಾಜ್ಯದ ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳಿಂದ ತಮ್ಮ ಆತ್ಮೀಯ ಕ್ಷಣಗಳ ಫೋಟೋ (Photo) ಗಳು ಮತ್ತು ವೀಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಸುತ್ತಾಳೆ. ಅಲ್ಲದೆ ಹಣ ಕೂಡ ವಸೂಲಿ ಮಾಡಿರುವ ಆರೋಪ ಎದುರಿಸುತ್ತಿದ್ದಾಳೆ.
ಮೂಲತಃ ಒಡಿಶಾದ ಲಂಜಿಘರ್ ನಿವಾಸಿಯಾಗಿರುವ ಈಕೆ 2015ರಲ್ಲಿ ಭುವನೇಶ್ವರಕ್ಕೆ ಬಂದು ನೆಲೆಸಿದ್ದಾಳೆ. ಮೊದಲು ಖಾಸಗಿ ಭದ್ರತಾ ಸಂಸ್ಥೆಯೊಂದರಲ್ಲಿ ಕೆಲ ಮಾಡುತ್ತಿದ್ದ ಈಕೆ ನಂತರ ಬ್ಯೂಟಿಪಾರ್ಲರ್ ಒಂದಕ್ಕೆ ಸೇರಿಕೊಳ್ಳುತ್ತಾಳೆ. ಇಲ್ಲಿ ಈಕೆ ಜಗಬಂಧು ಚಂದ್ ಎಂಬಾತನನ್ನು ಭೇಟಿಯಾಗುತ್ತಾಳೆ. ಅಲ್ಲದೆ 2018ರಲ್ಲಿ ಆತನ ಜೊತೆ ದಾಂಪತ್ಯ ಜೀವನಕ್ಕೂ ಕಾಲಿಡುತ್ತಾಳೆ. ಇದೇ ವೇಳೆ ಬ್ಯೂಟಿ ಪಾರ್ಲರ್ ಜೊತೆ ಸೆಕ್ಸ್ ರಾಕೆಟ್ ಕೂಡ ನಡೆಸುತ್ತಿದ್ದಳು ಎಂಬ ಆರೋಪ ಕೂಡ ಈಕೆಯ ಮೇಲಿದೆ.
ಜಗಬಂಧು, ಕಾರ್ ಶೋರೂಂ (Car Showroom) ನಡೆಸುತ್ತಿದ್ದರು. ಇವರಿಗೆ ಶ್ರೀಮಂತ ವ್ಯಕ್ತಿಗಳ ಪರಿಚಯವಿತ್ತು. ಕೆಲವು ಶಾಸಕರು ಸೇರಿದಂತೆ ಪ್ರಭಾವಿ ವ್ಯಕ್ತಿಗಳೊಂದಿಗೆ ದಂಪತಿ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಳಿಕ ಅವುಗಳು ವಿವಾದಕ್ಕೆ ಕಾರಣವಾಗಿವೆ. ಇತ್ತ ಅರ್ಚನಾ ಅವರು ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿದರು. ಈ ಮಧ್ಯೆ ಅವರಿಗೆ ಕೆಲ ಸ್ತ್ರೀಯರ ಪರಿಚಯ ಮಾಡಿಕೊಟ್ಟಿದ್ದಾಳೆ. ಅಂತೆಯೇ ಅವರು ಮಹಿಳೆಯರ ಜೊತೆ ತೆಗೆಸಿಕೊಂಡ ಫೋಟೋಗಳನ್ನಿಟ್ಟುಕೊಂಡು ಅವರಿಗೆ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿನಿಮಾ ನಿರ್ಮಾಪಕರೊಬ್ಬರು ನಯಾಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತಾನು ಕೆಲವು ಹುಡುಗಿಯರೊಂದಿಗೆ ಇರುವ ಫೋಟೋವನ್ನು ತೋರಿಸಿ ಅರ್ಚನಾ 3 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಅರ್ಚನಾ ನನ್ನನ್ನು ಆಕೆಯ ದಂಧೆಗೆ ಬಳಸಿಕೊಂಡಿದ್ದಾಳೆ ಎಂದು ವಿವರಿಸಿದ್ದಾರೆ. ಈ ದೂರು ಸ್ವೀಕರಿಸಿದ ಪೊಲೀಸರಿಗೆ ತನಿಖೆ ನಡೆಸಿದ ವೇಳೆ ಸತ್ಯ ಬಯಲಾಗಿದೆ.
2018 ರಿಂದ 2022 ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ದಂಪತಿ 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅರ್ಚನಾ ನಾಗ್ ಆಮದು ಮಾಡಿದ ಮನೆಯ ಒಳಾಂಗಣ ಅಲಂಕಾರಗಳು, ಐಷಾರಾಮಿ ಕಾರುಗಳು, ನಾಲ್ಕು ಉನ್ನತ ತಳಿ ನಾಯಿಗಳು ಮತ್ತು ಬಿಳಿ ಕುದುರೆಗಳು ತನ್ನ ಆಸ್ತಿಯಲ್ಲಿ ಹೊಂದಿದ್ದಾಳೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಗಲಾಟೆ – ಸೊಸೆಯಿಂದಲೇ ಅತ್ತೆಯ ಕೊಲೆ
ಪ್ರಕರಣದ ಕುರಿತು ಭುವನೇಶ್ವರ್ ಡಿಸಿಪಿ ಪ್ರತೀಕ್ ಸಿಂಗ್ ಪ್ರತಿಕ್ರಿಯಿಸಿ, ಈ ಸಂಬಂಧ ಅರ್ಚನಾ ವಿರುದ್ಧ ಕೇವಲ ಎರಡು ಪ್ರಕರಣಗಳನ್ನು ಮಾತ್ರ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಇತರ ಸಂತ್ರಸ್ತರು ಆಕೆಯ ವಿರುದ್ಧ ದೂರು ನೀಡಿದರೆ ಪೊಲೀಸರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಅರ್ಚನಾ ಅವರ ಬ್ಯಾಂಕ್ ಸ್ಟೇಟ್‍ಮೆಂಟ್‍ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಬ್ಲಾಕ್‍ಮೇಲ್ ಪ್ರಕರಣವು ರಾಜಕೀಯ ಕೋನವನ್ನು ಸಹ ಹೊಂದಿದೆ ಎಂದು ಬಿಜೆಪಿ ಭುವನೇಶ್ವರ ಘಟಕದ ಅಧ್ಯಕ್ಷ ಬಾಬು ಸಿಂಗ್ ಹೇಳಿದ್ದಾರೆ. 18 ಮಂದಿ ಶಾಸಕರು ಮತ್ತು ಸಚಿವರು ಸೇರಿದಂತೆ 25 ರಾಜಕೀಯ ನಾಯಕರು, ಬಿಜೆಡಿ (BJD)ಗೆ ಸೇರಿದ ಹೆಚ್ಚಿನವರು ಅರ್ಚನಾ ಜಾಲದಲ್ಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ನರಬಲಿ ಕೇಸ್ – ಮಾಟ ಮಂತ್ರ ತಡೆಗೆ ಕಠಿಣ ಕಾನೂನು: ಕೇರಳ ಸರ್ಕಾರ ನಿರ್ಧಾರ
ಆಡಳಿತಾರೂಢ ಬಿಜೆಡಿ ಶಾಸಕರು ಮತ್ತು ಸಚಿವರೊಂದಿಗಿನ ಆಕೆಯ ಸಂಪರ್ಕವನ್ನು ಬಹಿರಂಗಪಡಿಸಿದರೆ, ಒಡಿಶಾದಲ್ಲಿ 22 ವರ್ಷದ ನವೀನ್ ಪಟ್ನಾಯಕ್ (Naveen Patnaik) ಸರ್ಕಾರ ಪತನಕ್ಕೆ ಕಾರಣವಾಗಬಹುದು ಎಂದು ಕಾಂಗ್ರೆಸ್ ಶಾಸಕಿ ಎಸ್ ಎಸ್ ಸಲೂಜಾ ಹೇಳಿದ್ದಾರೆ. ಈ ಮಧ್ಯೆ ಆಡಳಿತಾರೂಢ ಬಿಜೆಡಿ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, ಈ ವಿಷಯದಲ್ಲಿ ತನ್ನ ನಾಯಕರು ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ನೀಡುವಂತೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಕೇಳಿದೆ.
Live Tv
[brid partner=56869869 player=32851 video=960834 autoplay=true]
ಚಿಕ್ಕಬಳ್ಳಾಪುರ: ರೈತನ ಬಳಿ ಹಣ ಕಸಿದು ನಂದಿಬೆಟ್ಟಕ್ಕೆ ಹೋಗಿ ಮಜಾ ಮಾಡಿದ್ದ ಯುವಕರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ನಂದಿಬೆಟ್ಟ ನೋಡಬೇಕು ಅಂತ ಬೆಂಗಳೂರಿನಿಂದ ಬೈಕ್ ಏರಿ ನಂದಿಬೆಟ್ಟಕ್ಕೆ ಬಂದಿದ್ದ ಯುವಕರು ಚೆಕ್ ಪೋಸ್ಟ್‌ನಲ್ಲಿ ಟಿಕೆಟ್ ಖರೀದಿ ಮಾಡಲು ಹಣ ಇಲ್ಲದೆ, ರೈತರೊಬ್ಬರ ಬಳಿ ಹಣ ಹಾಗೂ ಮೊಬೈಲ್ ಸುಲಿಗೆ ಮಾಡಿ ನಂದಿಬೆಟ್ಟಕ್ಕೆ ಹೋಗಿ ಮೋಜು ಮಸ್ತಿ ಮಾಡಿರುವ ಘಟನೆ ಈ ಹಿಂದೆ ನಡೆದಿತ್ತು.
ಗೋವಿಂದಪುರದ 7 ಮಂದಿ ಆರೋಪಿಗಳು ಏಪ್ರಿಲ್ 29 ರಂದು ಬೆಳ್ಳಂಬೆಳಗ್ಗೆ ನಂದಿಬೆಟ್ಟಕ್ಕೆ ಬಂದಿದ್ದರು. ಚೆಕ್ ಪೋಸ್ಟ್ ಬಳಿ ಟಿಕೆಟ್ ಖರೀದಿ ಮಾಡೋಕು ದುಡ್ಡಿಲ್ಲದೆ ವಾಪಾಸ್ಸಾಗಿದ್ದಾರೆ. ಆದರೆ ಈ ವೇಳೆ ದೊಡ್ಡಬಳ್ಳಾಪುರ ಮಾರ್ಗದ ಕಡೆಗೆ ಬಂದ ಮೂವರು ಯುವಕರು ಮೇಳೆಕೋಟೆ ಕ್ರಾಸ್ ಬಳಿ ಮೇಳೆಕೋಟೆ ಗ್ರಾಮದ ರೈತ ರಾಜಣ್ಣ ನನ್ನ ಬೆದರಿಸಿ ರಾಜಣ್ಣನ ಬಳಿ ಇದ್ದ ಮೊಬೈಲ್ ಹಾಗೂ 25,200 ರೂಪಾಯಿ ಹಣ ಕಸಿದು ಪರಾರಿಯಾದ್ದರು. ಇದನ್ನೂ ಓದಿ: ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣು
ಕದ್ದ ಹಣದಿಂದ ಮತ್ತೆ ನಂದಿಬೆಟ್ಟಕ್ಕೆ ಹೋಗಿ ಮಸ್ತ್ ಮಜಾ ಮಾಡಿದ್ದಲ್ಲದೇ ನಂದಿಬೆಟ್ಟದಿಂದ ವಾಪಸ್ ಬಂದು ಮದ್ಯ, ಚಿಕನ್ ಮಟನ್ ಪಾರ್ಟಿ ಅಂತ ಹಣ ಖರ್ಚು ಮಾಡಿದ್ದಾರೆ. ಆದರೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬೆಂಗಳೂರು ಮೂಲದ ಇಬ್ಬರು ಯುವಕನರನ್ನು ಬಂಧಿಸಿದ್ದೇವೆ ಅಂತ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಎಸ್ಪಿ ಕೋನವಂಶಿ ಕೃಷ್ಣ ತಿಳಿಸಿದರು.
ಏಪ್ರಿಲ್ 29 ರಂದು ರೈತ ರಾಜಣ್ಣ ತಾನು ಬೆಳೆದಿದ್ದ ಬೀನ್ಸ್‌ನ್ನು ದೊಡ್ಡಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಗೆ ಹಾಕಿ ಬಂದು 25,200 ರೂಪಾಯಿ ಹಣ ಜೇಬಲ್ಲಿ ಇಟ್ಟು ಕೊಂಡು ತನ್ನದೇ ಸ್ಕೂಟಿಯಲ್ಲಿ ಸ್ವಗ್ರಾಮ ಮೇಳೆಕೋಟಗೆ ಬರುತ್ತಿದ್ದರು. ಈ ವೇಳೆ ಮೇಳೆಕೋಟೆ ಕ್ರಾಸ್‍ನಿಂದ ಮೇಳೆಕೋಟೆ ಗ್ರಾಮದ ಕಡೆಯು ರಸ್ತೆ ಮಧ್ಯೆ ಬಂದ ಈ ಸಯ್ಯದ್ ಸಲೀಂ, ಹಾಗೂ ಸಯ್ಯದ್ ಅಬೀಬ್ ಉಲ್ಲಾ ಹಾಗೂ ಮತ್ತೋರ್ವ ಯುವಕ ಘಾಟಿ ದೇವಾಲಯಕ್ಕೆ ಹೇಗೆ ಹೋಗಬೇಕು ಅಂತ ಅಡ್ರೆಸ್ ಕೇಳೋ ನೆಪದಲ್ಲಿ ಅಡಗಟ್ಟಿದ್ದರು.
ರಾಜಣ್ಣ ಸ್ಕೂಟಿ ನಿಲ್ಲಿಸಿ ಅಡ್ರೆಸ್ ಹೇಳುತ್ತಿದ್ದರೆ ಇತ್ತ ಮೂವರು ಯುವಕರು ಚಾಕು ಹಿಡಿದು ರಾಜಣ್ಣನಿಗೆ ಕುತ್ತಿಗೆ ಹೊಟ್ಟೆ ಬೆನ್ನಿಗೆ ಚುಚ್ಚಿ ಹಿಡಿದಿದ್ದಾರೆ. ಈ ವೇಳೆ ಯುವಕರೇ ಕೈ ಹಾಕಿ ರಾಜಣ್ಣ ಜೇಬಿನಲ್ಲಿದ್ದ ಹಣ ಹಾಗೂ ಮೊಬೈಲ್ ತೆಗೆದುಕೊಂಡು ಎಸ್ಕೇಪ್ ಆಗಿದ್ದರು. ರೈತ ರಾಜಣ್ಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು 2 ತಿಂಗಳ ನಂತರ ಕದ್ದಿದ್ದ ಮೊಬೈಲ್ ಲೋಕೇಷನ್ ಪತ್ತೆ ಹಚ್ಚಿ ಇಬ್ಬರು ಯುವಕರನ್ನ ಬಂಧಿಸಿದ್ದಾರೆ. ಬಂಧಿತರಿಂದ 10,000 ರೂ. ನಗದು ಒಂದು ಮೊಬೈಲ್ ವಶಪಡಿಸಿಕೊಂಡು ಉಳಿದವರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಗಿರಿಧಾಮ ಬಂದ್ ಆಗಿದ್ದನ್ನು ತಿಳಿದು ಮತ್ತೆ ನಂದಿಬೆಟ್ಟ ಚಪ್ಪರಕಲ್ಲು ಐವಿಸಿ ರೋಡ್ ತಿಂಡ್ಲು ಸರ್ಕಲ್ ಮಾರ್ಗವಾಗಿ ಯಲಹಂಕದ ಕಡೆಗೆ ಬೈಕ್‍ನಲ್ಲಿ ಬರುತ್ತಿದ್ದರು. ಆದರೆ ದೇವನಹಳ್ಳಿ ತಾಲೂಕು ತಿಂಡ್ಲು ಸರ್ಕಲ್ ಬಳಿ ಡಿಯೋ ಬೈಕ್‍ನಲ್ಲಿ ಬಂದ ಇಬ್ಬರು ಯುವಕರು ಇವರ ಬೈಕನ್ನು ಅಡ್ಡಗಟ್ಟಿದ್ದಾರೆ.ಇದನ್ನೂ ಓದಿ:ಗಣೇಶೋತ್ಸವಕ್ಕೆ ಅವಕಾಶ ನೀಡದೇ ಇದ್ದರೆ ಚುನಾವಣೆ ಬಹಿಷ್ಕಾರ: ಶ್ರೀರಾಮ ಸೇನೆ
ಆ ಯುವಕರು ಅತುಲ್ ಮತ್ತು ದಿವ್ಯಾಗೆ ಚಾಕು ತೋರಿಸಿ ಬೆದರಿಸಿ ಹಣ ಕೇಳಿದ್ದಾರೆ. ಹಣ ಇಲ್ಲ ಎಂದಾಗ ದುಡ್ಡಿಲ್ಲದೆ ಶೋಕಿ ಮಾಡೋಕೆ ಬರ್ತೀರಾ ಎಂದು ಬೈದು ದಿವ್ಯಾ ಬಳಿಯಿದ್ದ ಪರ್ಸ್, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಅತುಲ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವ ಕಾರ್ಯದಲ್ಲಿದ್ದಾರೆ.ಇದನ್ನೂ ಓದಿ:ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ: ಗೋವಿಂದ ಕಾರಜೋಳ
ಅತುಲ್ ಕತ್ರಿ ಮೂಲತಃ ಚತ್ತೀಸ್‍ಘಡದವರಾಗಿದ್ದು, ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಎಂ.ಎಸ್ ಪಾಳ್ಯದಲ್ಲಿ ವಾಸವಾಗಿದ್ದಾರೆ.
ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮದ ಗುಂಡುಕುಟ್ಟಿ ಎಸ್ಟೇಟ್ ಸಮೀಪ ನಡೆಸಿದ್ದ ಸುಲಿಗೆ ಪ್ರಕರಣ ಮೂವರು ಆರೋಪಗಳನ್ನು ಬಂಧಿಸಿವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ತಿಳಿಸಿದರು.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಣಗಾಲ್ ನಿವಾಸಿ ಟಿ.ವಿ.ಹರೀಶ್ (57), ಸುಂಟಿಕೊಪ್ಪದ ವಿಜಯನಗರ ನಿವಾಸಿ ಕುಮರೇಶ್ (42) ಹಾಗೆಯೇ ಸುಲಿಗೆಯ ಮಾಸ್ಟರ್ ಮೈಂಡ್ ಇದಕ್ಕೂ ಮೊದಲು ಎಸ್ಟೇಟ್‍ನಲ್ಲಿ ರೈಟರ್ ಕೆಲಸ ಮಾಡಿಕೊಂಡಿದ್ದ ಇಗ್ಗೋಡ್ಲು ಗ್ರಾಮದ ಜಗ್ಗರಂಡ ಕಾವೇರಪ್ಪ (56) ಆರೋಪಗಳನ್ನು ಬಂಧಿಸಿ, ಅವರಿಂದ 5.2 ಲಕ್ಷ ಹಣ ಹಾಗೂ ಕಾರು, ಬೈಕ್ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದರೋಡೆಗೂ ಮೊದಲೇ ಪೂರ್ವ ನಿಯೋಜಿತ ಸಂಚು ರೂಪಿಸಿದ್ದ ಖದೀಮರು ರೈಟರ್ ವಿಜಯ್ ಕುಮಾರ್ ಕಳ್ಳತನ ಮಾಡಿದ್ದಾನೆ ಎಂದು ಸುಳ್ಳು ವದಂತಿಗಳನ್ನು ವ್ಯವಸ್ಥಿತವಾಗಿ ಹಬ್ಬಿಸಿದ್ದರು. 2014 ರವರೆಗೆ ಜೈಲಿನಲ್ಲೇ ಇದ್ದು ಬಿಡುಗಡೆಯಾಗಿದ್ದ ಈ ಕೃತ್ಯದ ಎ(1) ಆರೋಪಿ ಹರೀಶ್ 2004 ರಲ್ಲಿ ಸೋಮವಾರಪೇಟೆಯಲ್ಲಿ ಬಂದೂಕು ಕಳವು ಪ್ರಕರಣ, ಸುಂಟಿಕೊಪ್ಪದಲ್ಲಿ ಟ್ಯಾಕ್ಸಿ ಡ್ರೈವರ್ ಒಬ್ಬರನ್ನು ಕೊಲೆ ಆರೋಪ, ಹಾಗೆಯೇ ಸೆಂಟ್ರಲ್ ಬ್ಯಾಂಕ್ ದರೋಡೆ ಸೇರಿದಂತೆ ಕುಶಾಲನಗರದ ಜೋಸ್ಕೊ ಜ್ಯುವೆಲರಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮತ್ತೊರ್ವ ಆರೋಪಿ ಕುಮಾರೇಶ್ ವಿರುದ್ಧವೂ ಹೆಬ್ಬಾಲೆಯಲ್ಲಿ ನಡೆದಿದ್ದ ಕೊಲೆ ಸುಫಾರಿ, ಬಿಜಾಪುರದಲ್ಲಿ ದರೋಡೆ ಪ್ರಕರಣ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿಸಿರು.
ಏನಿದು ಪ್ರಕರಣ: ಮೇ 5 ರಂದು ಗುಂಡುಕುಟ್ಟಿ ಎಸ್ಟೇಟ್‍ನಲ್ಲಿ ಮಾಲೀಕರಾದ ಕರ್ನಲ್ ಕುಮಾರ್ ತೋಟದ ಕಾರ್ಮಿಕರಿಗೆ ಹಣವನ್ನು ಬಟವಾಡೆ ಮಾಡಲು ರೈಟರ್ ವಿಜಯ್ ಕುಮಾರ್ ಅವರಿಗೆ ಚೆಕ್ಕುಗಳನ್ನು ನೀಡಿ ಕಳುಹಿಸಿದ್ದರು. ಅದರಂತೆ ಸುಂಟಿಕೊಪ್ಪದ ಕೆನರಾ ಬ್ಯಾಂಕ್‍ನಲ್ಲಿ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಗುಂಡುಕುಟ್ಟಿ ಎಸ್ಟೇಟ್ ಸಮೀಪ ಅಡ್ಡಗಟ್ಟಿದ ಖದೀಮರು ವಿಜಯ್ ಕುಮಾರ್‍ಗೆ ಮಾರಣಾಂತಿಕ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರನ್ನು ಆಟೋ ಚಾಲಕ ಹಾಗೂ ಮೂವರು ದುಷ್ಕರ್ಮಿಗಳು ಸೇರಿ ಸುಲಿಗೆ ಮಾಡಿದ್ದಾರೆ.
ಸಿಲಿಕಾನ್ ಸಿಟಿಯ ಜೆಪಿ ನಗರದ ಇಸ್ರೋ ಲೇಔಟ್‍ನಲ್ಲಿ ಈ ಘಟನೆ ನಡೆದಿದೆ. ಟೆಕ್ಕಿ ಜೆಫಿನ್ ಬಳಿ ಖದೀಮರು ಸುಲಿಗೆ ಮಾಡಿದ್ದಾರೆ. ಜೆಫಿನ್ ತಡರಾತ್ರಿ ಆಟೋಗೆ ಕಾಯುತ್ತಾ ನಿಂತಿದ್ದರು. ಈ ವೇಳೆ ಡ್ರಾಪ್ ಮಾಡುವುದಾಗಿ ಆಟೋ ಚಾಲಕ ಅವರನ್ನು ಆಟೋಗೆ ಹತ್ತಿಸಿಕೊಂಡಿದ್ದನು. ಬಳಿಕ ಮುಂದೆ ಇನ್ನೂ ಮೂವರನ್ನು ಆಟೋಗೆ ಹತ್ತಿಸಿಕೊಂಡಿದ್ದನು.
ಇದಾದ ಕೆಲ ನಿಮಿಷಗಳಲ್ಲಿ ಚಾಲಕ ದಾರಿ ಮಧ್ಯೆ ಆಟೋ ನಿಲ್ಲಿಸಿದನು. ಬಳಿಕ ಆಟೋದಲ್ಲಿದ್ದ ಮೂವರು ಹಾಗೂ ಚಾಲಕ ಜೊತೆಗೂಡಿ ಟೆಕ್ಕಿ ಮೇಲೆ ಹಲ್ಲೆ ಮಾಡಿ ಅವರ ಬಳಿ ಇದ್ದ ಹಣ, ಪರ್ಸ್, ಮೊಬೈಲ್ ಕಸಿದುಕೊಂಡಿದ್ದಾರೆ.
ಟೆಕ್ಕಿ ಬಳಿ ಇದ್ದಿದ್ದನ್ನೆಲ್ಲಾ ದೋಚಿದ ಬಳಿಕ ಅವರನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ. ಸದ್ಯ ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉಡುಪಿ: ಮದುವೆ ಆಮಂತ್ರಣ ಕೊಡುವ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ಸುಲಿಗೆ ಮಾಡಲು ಯತ್ನಿಸಿದ ಕೊಲೆ ಆರೋಪಿಗಳಿಗೆ ಸಖತ್ ಗೂಸಾ ಬಿದ್ದಿದೆ. ಈ ಘಟನೆ ಉಡುಪಿ ಜಿಲ್ಲೆ ಕುಂದಾಪುರದ ಜಿ.ಎಂ. ರೋಡ್ ಮಸೀದಿ ಬಳಿ ನಡೆದಿದ್ದು, ಮಹಿಳೆ ಮತ್ತು ಯುವಕನನ್ನು ಪೋಲಿಸರಿಗೆ ಒಪ್ಪಿಸಲಾಗಿದೆ.
ಕಾಪು ಮಜೂರಿನ ಮಹಿಳೆ ಫಿರ್ದೋಸ್ ಮತ್ತು ಕಾರ್ಕಳ ತಾಲೂಕು ಕುಂಟಲಪಾಡಿಯ ನಿವಾಸಿ ಮೊಹಮ್ಮದ್ ಆಸೀಫ್ ಬಂಧಿತ ಆರೋಪಿಗಳು. ಆಸೀಫ್ ಕುಂದಾಪುರ ಜಿ. ಎಂ ರೋಡ್ ನಿವಾಸಿಯಾಗಿದ್ದು, ಮೆಹರುನ್ನೀಸಾ(74) ಕುಟುಂಬಕ್ಕೆ ಡ್ರೈವರ್ ಆಗಿದ್ದನು.
ಹಳೆಯ ಪರಿಚಯದ ನೆಪದಲ್ಲಿ ಕುಟುಂಬದ ಮತ್ತು ಮನೆಯ ಆಗುಹೋಗುಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿದ್ದನು. ನಿನ್ನೆ ಶುಕ್ರವಾರವಾದ ಕಾರಣ ಮೆಹರುನ್ನೀಸಾ ಅವರ ಪತಿ ಅಬು ಮಹಮ್ಮದ್ ಮಸೀದಿಗೆ ತೆರಳಿದ್ದರು. ಇದೇ ಸಂದರ್ಭ ಮದುವೆ ಆಮಂತ್ರಣ ಪತ್ರಿಕೆ ಕೊಡೋ ನೆಪದಲ್ಲಿ ಮನೆಗೆ ಬಂದ ಇಬ್ಬರು ಆರೋಪಿಗಳು, ಮೆಹರುನ್ನೀಸಾ ಅವರ ಕೈಯನ್ನು ಕಟ್ಟಿ ಕುತ್ತಿಗೆಯಲ್ಲಿದ್ದ ಚಿನ್ನದ ಒಡವೆಗಳನ್ನು ಕಸಿದಿದ್ದಾರೆ.
ಇದೇ ಸಂದರ್ಭ ಮೆಹರುನ್ನೀಸಾ ಕೂಗಾಡಿದ್ದನ್ನು ಕೇಳಿದ ಸಾರ್ವಜನಿಕರು ಆಗಮಿಸಿ ಇಬ್ಬರಿಗೂ ಚೆನ್ನಾಗಿ ಗೂಸ ನೀಡಿದ್ದಾರೆ. ಆರೋಪಿ ಮಹಿಳೆ ಫಿರ್ದೋಸ್, ಆಸೀಫ್ ಜೊತೆ ಸೇರಿ ತನ್ನ ಪತಿ ಸಮೀರ್ ನನ್ನು ತಮಿಳುನಾಡಿಗೆ ಕರೆದುಕೊಂಡು ಮೋಸದಿಂದ ಕೊಲೆಗೈದ ಆರೋಪಿಗಳಾಗಿದ್ದಾರೆ.
ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಕಳೆದ ತಿಂಗಳಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಮತ್ತೆ ಇಬ್ಬರೂ ಸೇರಿ ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು: ಐದು ಜಿಲ್ಲೆಗಳಲ್ಲಿ 10 ದರೋಡೆ ಮಾಡಿದ್ದ ಅಂತರ್ ಜಿಲ್ಲೆ ದರೋಡೆಕೋರರನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದು, ಕೇವಲ 13 ದಿನಗಳಲ್ಲಿ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಜೂನ್ 17ರಂದು ನಡೆದ ಹೆಬ್ಬಾಲೆಯ ಎಆರ್ ಪೆಟ್ರೋಲ್ ಬಂಕ್ ದರೋಡೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಬೆನ್ನತ್ತಿದ್ದರು. ಈ ವೇಳೆ 5 ಜಿಲ್ಲೆಗಳ 10 ಪ್ರಕರಣಗಳು ಬಯಲಿಗೆ ಬಂದಿದ್ದು, ಅಂತರ್ ಜಿಲ್ಲೆ ಸುಲಿಗೆಕೋರರ ತಂಡವನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರಾಮನಗರ, ಹಾಸನ, ಮೈಸೂರು ಮೂಲದ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಲಾಂಗ್ ತೋರಿಸಿ ಹಲ್ಲೆ ಮಾಡಿ ಹಣ, ಮೊಬೈಲ್ ದೋಚಿ ಸುಲಿಗೆಕೋರರು ಪರಾರಿಯಾಗುತ್ತಿದ್ದರು. ಐಪಿಸಿ ಸೆಕ್ಷನ್ 420, 394, 427 ಅಡಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಡಗು ಎಸ್‍ಪಿ ಡಾ.ಸುಮನ್.ಡಿ.ಪನ್ನೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಸಿಸಿಟಿವಿ ಫೂಟೇಜ್, ಬೆರಳಚ್ಚಿನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ರಾಮನಗರದ ಪ್ರವೀಣ್(25), ಹಾಸನದ ಗಣೇಶ್(30), ಮೈಸೂರಿನ ಕುಮಾರ್(33) ಮತ್ತು ಅಭಿಷೇಕ್(23) ಎಂದು ಗುರುತಿಸಲಾಗಿದೆ.
ಒಂಟಿ ಮನೆ, ಪೆಟ್ರೋಲ್ ಬಂಕ್‍ಗಳೇ ಇವರು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ರಾಮನಗರ, ಮಂಡ್ಯ, ಮೈಸೂರು, ಹಾಸನ ಹಾಗೂ ಕೊಡಗಿನಲ್ಲಿ ಈ ಆರೋಪಿಗಳ ವಿರುದ್ಧ ದರೋಡೆ ಪ್ರಕರಣ ದಾಖಲಾಗಿವೆ. ಬಂಧಿತರಿಂದ ಒಟ್ಟು 2.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, 2 ಬೈಕ್, 2 ಲಾಂಗ್, 10ಕ್ಕೂ ಅಧಿಕ ಮೊಬೈಲ್, ಟಿವಿ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಪ್ರವೀಣ್ ಮೇಲೆ ಶನಿವಾರಸಂತೆ ಠಾಣೆಯಲ್ಲಿ ಈ ಹಿಂದೆ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ 13 ದಿನಗಳಲ್ಲಿ ಕೊಡಗು ಪೊಲೀಸರು ಪ್ರಕರಣ ಬೇಧಿಸಿದ್ದು, ಕೊಡಗು ಎಸ್‍ಪಿ ಡಾ.ಸುಮನ್.ಡಿ.ಪನ್ನೇಕರ್ ಅವರು ತನಿಖಾ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.