Tag: ಸುರೇಶ್ ಗೌಡ

  • ಸುರೇಶ್‌ ಗೌಡ ಕೊಲೆಗೆ ಸುಪಾರಿ ಆರೋಪ – ಶಾಸಕ ಗೌರಿಶಂಕರ ಸೇರಿ ಮೂವರ ವಿರುದ್ಧ FIR

    ಸುರೇಶ್‌ ಗೌಡ ಕೊಲೆಗೆ ಸುಪಾರಿ ಆರೋಪ – ಶಾಸಕ ಗೌರಿಶಂಕರ ಸೇರಿ ಮೂವರ ವಿರುದ್ಧ FIR

    ತುಮಕೂರು: ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ (Suresh Gowda) ಅವರನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾರೆ ಎಂಬ ಆರೋಪದ ಮೇಲೆ ತುಮಕೂರು ಗ್ರಾಮಾಂತರದ ಹಾಲಿ ಜೆಡಿಎಸ್ ಶಾಸಕ ಡಿಸಿ ಗೌರಿಶಂಕರ್ (Gowrishankar) ಸೇರಿದಂತೆ ಒಟ್ಟು ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ಸುರೇಶ್ ಗೌಡರು ಕೊಟ್ಟ ದೂರಿನ ಅನ್ವಯ ತುಮಕೂರಿನ (Tumakuru) ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಗ್ರಾಮಾಂತರ ಶಾಸಕ ಗೌರಿಶಂಕರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಿರೇಹಳ್ಳಿ ಮಹೇಶ್, ಶಾಸಕ ಗೌರಿಶಂಕರ, ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಅಟ್ಟಿಕಾ ಬಾಬು ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಇದನ್ನೂ ಓದಿ: ಸುರೇಶ್ ಗೌಡ ಕೊಲೆಗೆ ಸುಪಾರಿ ಆರೋಪ- 5 ಕೋಟಿ ಡೀಲ್ ನಡೆದಿದೆ ಎಂದ ಮಾಜಿ ಶಾಸಕ

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಗೌರಿಶಂಕರ ಅಕ್ರಮ ಎಸಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ಆಯೋಗಕ್ಕೆ ದೂರು‌ ನೀಡಿದ್ದರು. ಅಲ್ಲದೇ ನಕಲಿ ಬಾಂಡ್ ಹಂಚಿ ಮತದಾರರಿಗೆ ಮೋಸ ಮಾಡಿದ್ದಾರೆ ಎಂದು ದೂರಿದ್ದರು. ಈ ದೂರಿ‌ನಿಂದ ಶಾಸಕ ಗೌರಿಶಂಕರ ಕೆರಳಿ ನನ್ನ ಕೊಲೆ ಮಾಡಲು ಸುಪಾರಿ ನೀಡಿದ್ದಾರೆ ಎಂದು ಸುರೇಶ್ ಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ತುಮಕೂರಿನ ಮಾಜಿ ಮೇಯರ್ ಗಡ್ಡ ರವಿಯನ್ನು ಕೊಲೆ ಮಾಡಿ ಜೈಲಿನಲ್ಲಿದ್ದ ರೌಡಿಶೀಟರ್ ಸುಜಯ್ ಭಾರ್ಗವ್‌ಗೆ ಸುಮಾರು 5 ಕೋಟಿ ರೂ.ಗೆ ಸುಪಾರಿ ನೀಡಲಾಗಿದೆ. ಅದರ ವೆಚ್ಚವನ್ನು ತುಮಕೂರು ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಗೋಲ್ಡ್‌ ಕಂಪನಿಯ ಮಾಲೀಕ ಅಟ್ಟಿಕಾ ಬಾಬು ಭರಿಸುವ ಪ್ಲಾನ್ ಮಾಡಿದ್ದಾರೆ ಎಂದು ದೂರಲಾಗಿದೆ. ಅಲ್ಲದೇ ಭಾರಿ ವಾಹನ ಹತ್ತಿಸಿ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸುವ ಸಂಚು ರೂಪಿಸಿದ್ದಾರೆ ಎಂದು ಸುರೇಶ್ ಗೌಡ ದೂರಿದ್ದಾರೆ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಶಾಸಕ ಗೌರಿಶಂಕರ್‌ಗೆ ಥೈಲ್ಯಾಂಡ್ ಅಂದರೆ ಬಲು ಪ್ರೀತಿ, ಗೋವಾ ಅಂದರೆ ಮೋಜು, ಅಸೆಂಬ್ಲಿ ಅಂದರೆ ಅಲರ್ಜಿ: ಸುರೇಶ್ ಗೌಡ

    Live Tv
    [brid partner=56869869 player=32851 video=960834 autoplay=true]

  • ಸುರೇಶ್ ಗೌಡ ಕೊಲೆಗೆ ಸುಪಾರಿ ಆರೋಪ- 5 ಕೋಟಿ ಡೀಲ್ ನಡೆದಿದೆ ಎಂದ ಮಾಜಿ ಶಾಸಕ

    ಸುರೇಶ್ ಗೌಡ ಕೊಲೆಗೆ ಸುಪಾರಿ ಆರೋಪ- 5 ಕೋಟಿ ಡೀಲ್ ನಡೆದಿದೆ ಎಂದ ಮಾಜಿ ಶಾಸಕ

    ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾ ಜಿದ್ದಿ ತಾರಕಕ್ಕೇರಿದೆ. ಹಾಲಿ ಮತ್ತು ಮಾಜಿ ಶಾಸಕರುಗಳ ಆರೋಪ-ಪ್ರತ್ಯಾರೋಪಗಳು ಮಿತಿ ಮೀರಿದೆ. ಮಾಜಿ ಶಾಸಕ ಸುರೇಶ್ ಗೌಡರ ಕೊಲೆಗೆ ಹಾಲಿ ಜೆಡಿಎಸ್ (JDS) ಶಾಸಕ ಗೌರಿಶಂಕರ್ (Gauri shankar) ಸುಪಾರಿ ಕೊಟ್ಟಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟುಮಾಡಿದೆ.

    ತುಮಕೂರು ಜಿಲ್ಲೆಯಲ್ಲೇ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ರಾಜಕೀಯ ಸೆಡ್ಡು, ಜಿದ್ದಾಜಿದ್ದಿಗೆ ಕುಖ್ಯಾತಿ. ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ (Suresh Gowda) ರು ತನ್ನದ್ದು ಶೇರು ಎಂದರೆ ಹಾಲಿ ಶಾಸಕ ಗೌರಿಶಂಕರ್ ತಾನೇನು ಕಡಿಮೆ ಇಲ್ಲ ತನ್ನದು ಸವಾಶೇರು ಎನ್ನುತ್ತಾರೆ. ಅಷ್ಟರ ಮಟ್ಟಿಗೆ ಪರಸ್ಪರ ರೋಶಾವೇಷ ಇದೆ. ಆದರೆ ಇದ್ದಕಿದ್ದ ಹಾಗೇ ಸುರೇಶ್ ಗೌಡರು ವೇದಿಕೆಯೊಂದರಲ್ಲಿ ಮಾತನಾಡುತ್ತಾ, ನನ್ನ ಕೊಲೆಗೆ ಗೌರಿಶಂಕರ್ ಸುಪಾರಿ ಕೊಟ್ಟಿದ್ದಾರೆ ಎಂದು ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಶಾಸಕ ಗೌರಿಶಂಕರ್‌ಗೆ ಥೈಲ್ಯಾಂಡ್ ಅಂದರೆ ಬಲು ಪ್ರೀತಿ, ಗೋವಾ ಅಂದರೆ ಮೋಜು, ಅಸೆಂಬ್ಲಿ ಅಂದರೆ ಅಲರ್ಜಿ: ಸುರೇಶ್ ಗೌಡ

    ಈ ಹೇಳಿಕೆ ಜಿಲ್ಲೆಯ ರಾಜಕಾರಣದಲ್ಲಿ ತೀವ್ರ ಸಂಚಲನ ಉಂಟು ಮಾಡಿದೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುರೇಶ್ ಗೌಡರು, ಸ್ಫೋಟಕ ವಿಚಾರ ಬಿಚ್ಚಿಟ್ಟಿದ್ದಾರೆ. ಜೈಲಿನಲ್ಲಿ ಇರುವ ವ್ಯಕ್ತಿಗಳ ಜೊತೆ ಶಾಸಕರ ಬಲಗೈ ಬಂಟ ಹಿರೇಹಳ್ಳಿ ಮಹೇಶ್ ನೇರಸಂಪರ್ಕದಲ್ಲಿ ಇದ್ದು 5 ಕೋಟಿ ರೂ ಗೆ ಸುಪಾರಿ ನೀಡಿದ್ದಾರೆ. ವಿಜಯ ದಶಮಿ ಹಬ್ಬದ ಹಿಂದಿನ ದಿನವೇ ನಾನು ಸಂಚನ್ನು ಸಿಎಂ ಹಾಗೂ ಗೃಹ ಸಚಿವರ ಗಮನಕ್ಕೆ ತಂದಿದ್ದೇನೆ. ಪೊಲೀಸ್ ಕಮಿಷನರ್‍ಗೂ ದೂರು ಕೊಟ್ಟಿದ್ದೇನೆ. ಕಳೆದ ನಾಲ್ಕು ತಿಂಗಳಿನಿಂದ ಕೊಲೆಗೆ ಸಂಚು ನಡೆಯುತಿದ್ದು, ನನಗೆ ಇಂಟಲಿಜೆನ್ಸಿಯಿಂದ ತಿಳಿದುಬಂದಿದೆ ಎಂದರು.

    ಶಾಸಕ ಗೌರಿಶಂಕರ್, ಹಿರೇಹಳ್ಳಿ ಮಹೇಶ್ ಜೊತೆಗೆ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕನ ಹೆಸರನ್ನೂ ಸುರೇಶ್ ಗೌಡರು ತಗ್ಲಾಕಿದ್ದಾರೆ. ಕಂಪನಿ ಮಾಲೀಕ ಬಾಬು ತುಮಕೂರು ನಗರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ. ಇವರು ಗೌರಿಶಂಕರ್ ಆಪ್ತರೂ ಕೂಡ ಹೌದು. ಇವರು ಮೂರು ಜನ ಸೇರಿಕೊಂಡು ಮಾಜಿ ಮೇಯರ್ ಹತ್ಯೆ ಮಾಡಿ ಜೈಲಿನಲ್ಲಿದ್ದ ಆರೋಪಿಗಳನ್ನು ಸಂಪರ್ಕಿಸಿ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂದು ಸುರೇಶ್ ಗೌಡ ಗಂಭೀರಾತಿಗಂಭೀರ ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶಾಸಕ ಗೌರಿಶಂಕರ್‌ಗೆ ಥೈಲ್ಯಾಂಡ್ ಅಂದರೆ ಬಲು ಪ್ರೀತಿ, ಗೋವಾ ಅಂದರೆ ಮೋಜು, ಅಸೆಂಬ್ಲಿ ಅಂದರೆ ಅಲರ್ಜಿ: ಸುರೇಶ್ ಗೌಡ

    ಶಾಸಕ ಗೌರಿಶಂಕರ್‌ಗೆ ಥೈಲ್ಯಾಂಡ್ ಅಂದರೆ ಬಲು ಪ್ರೀತಿ, ಗೋವಾ ಅಂದರೆ ಮೋಜು, ಅಸೆಂಬ್ಲಿ ಅಂದರೆ ಅಲರ್ಜಿ: ಸುರೇಶ್ ಗೌಡ

    ತುಮಕೂರು: ಗ್ರಾಮಾಂತರ ಶಾಸಕರಿಗೆ ವಿದೇಶಿ ಪ್ರವಾಸ ಅಂದ್ರೆ ಬಹಳ ಪ್ರೀತಿ ಥೈಲ್ಯಾಂಡ್ (Thailand) ಅಂದರೆ ಬಲು ಪ್ರೀತಿ, ಗೋವಾ (Goa) ಅಂದರೆ ಮೋಜು, ಅಸೆಂಬ್ಲಿ ಅಂದರೆ ಅಲರ್ಜಿ ಎಂದು ಮಾಜಿ ಶಾಸಕ ಸುರೇಶ್ ಗೌಡ (Suresh Gowda) ಹಾಲಿ ಶಾಸಕ ಗೌರಿಶಂಕರ್ (Gowrishankar) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ತುಮಕೂರು (Tumakuru) ಗ್ರಾಮಾಂತರದ ಬೆಳಗುಂಬದಲ್ಲಿ ಸಿದ್ದರಾಮ ದೇವಸ್ಥಾನದಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸುರೇಶ್ ಗೌಡ, ಶಾಸಕರಿಗೆ ಥೈಲ್ಯಾಂಡ್‌ಗೆ ಹೋಗೋದಕ್ಕೆ ಸಮಯ ಇರುತ್ತದೆ. ಶಾಸಕರಿಗೆ ಗೋವಾಗೆ ಹೋಗೋದಕ್ಕೆ ಸಮಯ ಇರುತ್ತದೆ. ಅಸೆಂಬ್ಲಿಗೆ ಹೋಗೋದಕ್ಕೆ ಸಮಯ ಇರಲ್ಲ. ಅಸೆಂಬ್ಲಿಗೆ ಹೋಗುವ ಸಮಯದಲ್ಲಿ ಗೋವಾದಲ್ಲಿ ಇರುತ್ತಾರೆ. ಇಲ್ಲದಿದ್ದರೆ ಥೈಲಾಂಡ್‍ನಲ್ಲಿ ಇರುತ್ತಾರೆ. ಶಾಸಕರಾಗಿ ನಾಲ್ಕು ವರ್ಷ ಆಗಿದೆ. ಶಾಸಕರ ಪಾಸ್‍ಪೋರ್ಟ್‌ ತೆಗೆದರೆ ಗೊತ್ತಾಗುತ್ತದೆ. ಶಾಸಕರು ಎಷ್ಟು ಸಾರಿ ದುಬೈಗೆ ಹಾರಿದ್ದಾರೆ, ಎಷ್ಟು ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ ಎಂದು ಸ್ಪಷ್ಟವಾಗುತ್ತದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಕೆಲ ಮುಸ್ಲಿಂ ನಾಯಕರಿಗೆ ದಿನನಿತ್ಯ ಊಟ ತಿಂಡಿ ತಿಂದಂತೆ ಬ್ಲಾಸ್ಟ್ ಮಾಡೋದು ರೂಢಿ: ಚಕ್ರವರ್ತಿ ಸೂಲಿಬೆಲೆ

    ನನ್ನ ಪಾಸ್‍ಪೋರ್ಟ್‌ ತೆಗೆದು ನೋಡಿ ಎಷ್ಟು ವಿದೇಶಿ ಪ್ರವಾಸ ಮಾಡ್ತೇನೆ ಅಂತ. ಶಾಸಕನಾಗಿದ್ದ 10 ವರ್ಷದಲ್ಲಿ ಮನೆ ದೇವರಲ್ಲಿಗೆ ಬಿಟ್ರೆ ಎಲ್ಲೂ ಹೋಗಿಲ್ಲ ನಾನು. ಎಂತೆಂತಹ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಸೋಲಿಸಿರೋದನ್ನು ನೋಡಿದ್ದೇವೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಹಿಡಿದು, ಯಡಿಯೂರಪ್ಪ, ಇಂದಿರಾಗಾಂಧಿ, ವಾಜಪೇಯಿ, ದೇವೇಗೌಡರು ಎಲ್ಲರನ್ನೂ ಸೋಲಿಸಿರೋದನ್ನು ಪ್ರಪಂಚದಲ್ಲಿ ನೋಡಿದ್ದೇವೆ ಎಂದು ಅಭಿಪ್ರಾಪಟ್ಟಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿ- 15ರ ಬಾಲಕಿ ಸಾವು

    ಸೋತೆ ಅಂತಾ ಯಾರೂ ಸುಮ್ಮನೆ ಕೂರಲ್ಲ ರಾಜಕಾರಣಿಗಳು. ಸೋಲು ಅನಿರೀಕ್ಷಿತ. ನನ್ನನ್ನು ಕೆಲಸ ಮಾಡಿಲ್ಲ ಅಂತಾ ಸೋಲಿಸಲಿಲ್ಲ. ಕುತಂತ್ರದಿಂದ ನನ್ನನ್ನು ಸೋಲಿಸಿದ್ದು, ವಂಚನೆ, ಮೋಸ, ಕುತಂತ್ರ ಮಾಡಿ. ಈ ಶಾಸಕರು ನಕಲಿ ಬಾಂಡ್ ಹಂಚಿ ಗೆದ್ದಿದ್ದಾರೆ. ನ್ಯಾಯ ಅನ್ನೋದು ಇದ್ರೆ, ಸಿದ್ದರಾಮೇಶ್ವರನ ಮುಂದೆ ಹೇಳ್ತೇನೆ. ಸಿದ್ದರಾಮೇಶ್ವರ ನಿನ್ನನ್ನು ನಂಬಿದ್ದೇನೆ. ಇನ್ನೊಂದು ತಿಂಗಳಲ್ಲಿ ತೀರ್ಪು ಬರಬೇಕು. ಸಿದ್ದರಾಮೇಶ್ವರನಲ್ಲಿ ಪ್ರಾರ್ಥನೆ ಮಾಡ್ತೇನೆ. ಈ ಮಣ್ಣಲ್ಲಿ ನ್ಯಾಯ ಇದ್ರೆ ಮೋಸಕ್ಕೆ ಶಿಕ್ಷೆ ಆಗ್ಲಿ ಎಂದು ದೇವರ ಮೊರೆ ಹೋಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್‌ ಟಿವಿ ಕ್ಯಾಮೆರಾ ನೋಡ್ತಿದ್ದಂತೆ ಕಾಲ್ಕಿತ್ತ ಸುರೇಶ್‌ ಗೌಡ

    ಪಬ್ಲಿಕ್‌ ಟಿವಿ ಕ್ಯಾಮೆರಾ ನೋಡ್ತಿದ್ದಂತೆ ಕಾಲ್ಕಿತ್ತ ಸುರೇಶ್‌ ಗೌಡ

    ಬೆಂಗಳೂರು: ಪಬ್ಲಿಕ್ ಟಿವಿ ಕ್ಯಾಮೆರಾ ನೋಡುತ್ತಿದ್ದಂತೆ ಮಾಜಿ ಸಚಿವ ಸುರೇಶ್‌ ಗೌಡ ಕಾಲ್ಕಿತ್ತ ಪ್ರಸಂಗ ಇಂದು ನಡೆದಿದೆ.

    ನಿನ್ನೆ ಸುರೇಶ್‌ ಗೌಡ ಸಿಎಂ ಬದಲಾವಣೆ ಆಗಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆ ವಿಧಾನಸೌಧದಲ್ಲಿ ಸ್ಪಷ್ಟನೆ ಕೇಳಲು ಪಬ್ಲಿಕ್‌ ಟಿವಿ ಮುಂದಾದಾಗ ಕ್ಯಾಮೆರಾ ನೋಡಿ ಸುರೇಶ್‌ ಗೌಡ ಯಾವುದೇ ಪ್ರತಿಕ್ರಿಯೆ ನೀಡದೇ ಓಡಿ ಹೋಗಿದ್ದಾರೆ.

     

    ಲೋಗೋ ನೋಡದೇ, ಈಗಾಗಲೇ ಸಿಎಂ ಜಾಡಿಸ್ತಿದ್ದಾರೆ. ಈಗ ಮತ್ತೆ ಮಾತಾಡಿದ್ರೆ ಇನ್ನೂ ಹತ್ತಿಕೊಳ್ಳುತ್ತೆ ಎಂದು ಹೇಳಿ ಮೆಟ್ಟಿಲು ಇಳಿಯುತ್ತಾ ಮುಂದಕ್ಕೆ ಸಾಗಿದ್ದಾರೆ.

    ಸಿಎಂ ಕ್ಲಾಸ್‌: ಸುರೇಶ್ ಗೌಡಗೆ ಸಿಎಂ ಬೊಮ್ಮಾಯಿ ಫುಲ್ ಕ್ಲಾಸ್ ಮಾಡಿದ್ದಾರೆ. ಕರೆ ಮಾಡಿದ ಸಿಎಂ ಹೀಗೆಲ್ಲ ಮಾತಾಡಿದ್ದು ಸರಿಯಲ್ಲ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿಎಂ ಬದಲಾವಣೆ ವಿಚಾರವನ್ನು ಪ್ರಸ್ತಾಪ ಮಾಡಿ ಕಾಂಗ್ರೆಸ್‌ಗೆ ಟೀಕೆ ಮಾಡಲು ಆಹಾರ ಒದಗಿಸಿದ್ದಕ್ಕೆ ಸುರೇಶ್ ಗೌಡ ವಿರುದ್ಧ ಶಿಸ್ತು ಕ್ರಮಕ್ಕೆ ಬೊಮ್ಮಾಯಿ ಆಪ್ತರು ಒತ್ತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕದಿಂದ ಸ್ಪಷ್ಟನೆ ಕೇಳಿ ನೋಟಿಸ್‌ ನೀಡುವ ಸಾಧ್ಯತೆಯಿದೆ.

    ಸುರೇಶ್‌ ಗೌಡ ಹೇಳಿದ್ದೇನು?
    ಈಗಿರುವ ಮುಖ್ಯಮಂತ್ರಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಅವರ 1 ವರ್ಷದ ಅವಧಿಯಲ್ಲಿ ಕೆರೆ ಕಟ್ಟೆಗಳು ತುಂಬಿವೆ. ಆದರೆ ಪಕ್ಷ ಏನು ನಿರ್ಧಾರ ತೆಗೆದು ಕೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಾಗಿದ್ದೇವೆ. ಬಿಜೆಪಿ ಪಕ್ಷ ವಿಧಾನಸಭಾ ಚುನಾವಣೆಗೆ 6-7 ತಿಂಗಳುಗಳು ಇರಬೇಕಾದರೆಯೇ ಮುಖ್ಯಮಂತ್ರಿ ಬದಲಾವಣೆ ಮಾಡಿದ ಉದಾಹರಣೆ ಇದೆ. ಆಗಸ್ಟ್ 15ರ ಒಳಗೆ ಎಲ್ಲವೂ ಆಗಬಹುದು ಎನ್ನುವ ಅಭಿಪ್ರಾಯ ನನ್ನದು ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಆಗಸ್ಟ್ 15 ರೊಳಗೆ ಪಕ್ಷದಲ್ಲಿ ಕೆಲ ಚೇಂಜ್ ಆಗುತ್ತದೆ- ಸಿಎಂ ಬದಲಾವಣೆಯ ಸೂಚನೆ ಕೊಟ್ಟ ಸುರೇಶ್ ಗೌಡ

    ಆಗಸ್ಟ್ 15 ರೊಳಗೆ ಪಕ್ಷದಲ್ಲಿ ಕೆಲ ಚೇಂಜ್ ಆಗುತ್ತದೆ- ಸಿಎಂ ಬದಲಾವಣೆಯ ಸೂಚನೆ ಕೊಟ್ಟ ಸುರೇಶ್ ಗೌಡ

    ತುಮಕೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಬಹುದು ಎಂಬ ಊಹಾಪೋಹಗಳು ಹಬ್ಬಿರುವ ಬೆನ್ನಲ್ಲೇ ಮಾಜಿ ಶಾಸಕ ಬಿ. ಸುರೇಶ್ ಗೌಡ ಆಗಸ್ಟ್ 15ರ ಒಳಗಾಗಿ ಎಲ್ಲವೂ ಆಗಬಹುದು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಸಿಎಂ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ಮುಖ್ಯಮಂತ್ರಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಅವರ 1 ವರ್ಷದ ಅವಧಿಯಲ್ಲಿ ಕೆರೆ ಕಟ್ಟೆಗಳು ತುಂಬಿವೆ. ಆದರೆ ಪಕ್ಷ ಏನು ನಿರ್ಧಾರ ತೆಗೆದು ಕೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

    ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಆಗುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅವರನ್ನು ಭೇಟಿಯಾಗಿದ್ದೆ. ಅವರು ಅದರ ಬಗ್ಗೆ ಮಾತನಾಡಿಲ್ಲ. ಅದು ಮಾಧ್ಯಮದ ಸೃಷ್ಟಿ. ಆದರೆ ಅವರು ಮುಖ್ಯಮಂತ್ರಿ ಆದರೆ ಸಂತೋಷ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಚುನಾವಣಾ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನಿಸುತ್ತೆ: ವಿಜಯೇಂದ್ರ

    ಬಿಜೆಪಿ ಪಕ್ಷ ವಿಧಾನಸಭಾ ಚುನಾವಣೆಗೆ 6-7 ತಿಂಗಳುಗಳು ಇರಬೇಕಾದರೆಯೇ ಮುಖ್ಯಮಂತ್ರಿ ಬದಲಾವಣೆ ಮಾಡಿದ ಉದಾಹರಣೆ ಇದೆ. ಆಗಸ್ಟ್ 15ರ ಒಳಗೆ ಎಲ್ಲವೂ ಆಗಬಹುದು ಎನ್ನುವ ಅಭಿಪ್ರಾಯ ನನ್ನದು ಎಂದರು.

    ಬಿಜೆಪಿ 2023ರಲ್ಲಿ ಪುನಃ ಅಧಿಕಾರ ಹಿಡಿಯುವ ಉದ್ದೇಶದಿಂದ ಪಕ್ಷದಲ್ಲಿ ಕೆಲವು ಬದಲಾವಣೆಗಳು ಆಗಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ಥಾನಕ್ಕೆ ಕಂಟಕ ಬರುವ ಸಾಧ್ಯತೆಗಳನ್ನು ಪುಷ್ಟೀಕರಿಸಿದರು. ಇದನ್ನೂ ಓದಿ: ಧ್ವಜದ ಬಗ್ಗೆ ಸಿದ್ದರಾಮಯ್ಯ ಮಾತು ಕೇಳಿ ದುಃಖವಾಗುತ್ತಿದೆ: ನಾಗೇಶ್ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಸುರೇಶ್ ಗೌಡ ರಾಜೀನಾಮೆ- ಕಾಂಗ್ರೆಸ್ ಸೇರಲು ಪ್ಲ್ಯಾನ್?

    ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಸುರೇಶ್ ಗೌಡ ರಾಜೀನಾಮೆ- ಕಾಂಗ್ರೆಸ್ ಸೇರಲು ಪ್ಲ್ಯಾನ್?

    ತುಮಕೂರು: ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಸುರೇಶ್ ಗೌಡ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದು, ರಾಜೀನಾಮೆ ಕೊಟ್ಟಿರುವುದಾಗಿ ಫೆಸ್ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    ಕಳೆದ ಒಂದೂವರೆ ವರ್ಷದಿಂದ ಜಿಲ್ಲಾಧ್ಯಕ್ಷರಾಗಿದ್ದ ಸುರೇಶ್ ಗೌಡ, ಗ್ರಾಮಾಂತರ ಕ್ಷೇತ್ರದಲ್ಲಿ ಸಕ್ರಿಯವಾಗಲು ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಕಮಲ ಬಿಟ್ಟು ಕೈ ಹಿಡಿತಾರಾ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‍ಗೆ ಏಳು ವಸಂತಗಳ ಸಂಭ್ರಮ

    ಇತ್ತಿಚೆಗೆ ಪಕ್ಷದಲ್ಲಿ ಸಚಿವ ಮಾಧುಸ್ವಾಮಿ ಪ್ರಭಾವ ಹೆಚ್ಚಳವಾಗಿದ್ದು, ಸುರೇಶ್ ಗೌಡ ಮಾಧುಸ್ವಾಮಿ ವಿರುದ್ಧ ಅಸಮಾಧಾನಗೊಂಡಿದ್ದರು. ಇತ್ತೀಚೆಗೆ ಸಿಎಂ ತುಮಕೂರಿಗೆ ಬಂದಿದ್ದಾಗ ಸಹ ಸುರೇಶ್ ಗೌಡ ಗೈರಾಗಿದ್ದರು. ಕಾಂಗ್ರೆಸ್ ಸೇರಲು ತೆರೆ ಮರೆಯ ಕಸರತ್ತು ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಒಕ್ಕಲಿಗ ನಾಯಕರು ಒಗಟ್ಟಾಗುತಿದ್ದಾರೆ. ಜಿಲ್ಲೆಯ ಒಕ್ಕಲಿಗ ರಾಜಕೀಯ ನಾಯಕರಾದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್, ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಬಳಿಕ ಸುರೇಶ್ ಗೌಡ ಕಾಂಗ್ರೆಸ್‍ಗೆ ಸೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಜಿಲ್ಲೆಯ ಇನ್ನಿಬ್ಬರು ಬಿಜೆಪಿಯ ಒಕ್ಕಲಿಗ ಶಾಸಕರ ಕಾಂಗ್ರೆಸ್ ಸೇರ್ಪಡೆಗೆ ಸಹ ತೆರೆಮರೆಯ ವೇದಿಕೆ ಸಿದ್ಧವಾಗಿದೆ. ಒಕ್ಕಲಿಗ ಸಮುದಾಯದ ಪ್ರಭಾವಿ ಸ್ವಾಮೀಜಿಯ ಮೂಲಕ ಬಿಜೆಪಿಯ ಒಕ್ಕಲಿಗ ಶಾಸಕರಿಗೆ ಗಾಳ ಹಾಕಲಾಗಿದೆ ಎನ್ನಲಾಗುತ್ತಿದೆ.

  • ಸಿಡಿ ಪ್ರಕರಣದ ಉದ್ದೇಶ ಈಗಾಗಲೇ ಈಡೇರಿದೆ, ಮುಂದೆ ನಡೆಯುವುದೆಲ್ಲ ಡ್ರಾಮಾ – ಸುರೇಶ್ ಗೌಡ

    ಸಿಡಿ ಪ್ರಕರಣದ ಉದ್ದೇಶ ಈಗಾಗಲೇ ಈಡೇರಿದೆ, ಮುಂದೆ ನಡೆಯುವುದೆಲ್ಲ ಡ್ರಾಮಾ – ಸುರೇಶ್ ಗೌಡ

    ಮಂಡ್ಯ : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಉದ್ದೇಶ ಈಗಾಗಲೇ ಈಡೇರಿದೆ. ಇನ್ನು ಈ ಪ್ರಕರಣ ಎಲ್ಲಿ ಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಸಿಡಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು ಈ ಪ್ರಕರಣದಲ್ಲಿ ಯಾವ ವಿಷಯವೂ ಸ್ಪಷ್ಟವಾಗಿಲ್ಲ. ಈ ಪ್ರಕರಣದ ತನಿಖೆ ಸ್ವತಂತ್ರವಾಗಿಲ್ಲ. ಅಲ್ಲಿಯೂ ನಿರ್ದೇಶಕರು, ನಿರ್ಮಾಪಕರು ಯಾರ್ಯಾರೋ ಇದ್ದಾರೆ. ಇಲ್ಲಿ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷ ಎರಡರ ಒಳ ಒಪ್ಪಂದವೂ ಇದೆ ಎಂದಿದ್ದಾರೆ.

    ಸಿಡಿ ಪ್ರಕರಣದ ತನಿಖೆ ಮುಗಿಯುವವರೆಗೂ ಕಾಯಬಹುದಿತ್ತು. ಆದರೆ ತನಿಖೆಯನ್ನು ಕೆದಕುವ ಕೆಲಸವನ್ನು ಎರಡೂ ಪಕ್ಷಗಳು ಮಾಡುತ್ತಿವೆ. ಎರಡೂ ಕಡೆಯವರು ಏನೇನೋ ಹೇಳಿಕೆಯನ್ನು ನೀಡುತ್ತಿದ್ದಾರೆ. ಒಟ್ಟಾರೆ ಇದು ಮನೋರಂಜನಾ ಕಾರ್ಯಕ್ರಮವಾಗುತ್ತಿದೆ ಎಂದರು.

    ಈ ಪ್ರಕರಣದಲ್ಲಿ ಯಾವ ಸತ್ಯವೂ ಹೊರಬರುವುದಿಲ್ಲ. ಯಾರಿಗೂ ನ್ಯಾಯ ಸಿಗುವುದಿಲ್ಲ. ಇಲ್ಲಿ ರಮೇಶ್ ಜಾರಕಿಹೊಳಿಯವರಿಂದ ರಾಜೀನಾಮೆ ಪಡೆಯಬೇಕಾಗಿತ್ತು, ಪಡೆದಾಗಿದೆ. ಉದ್ದೇಶ ಈಡೇರಿದೆ. ಮುಂದಕ್ಕೆ ನಡೆಯುತ್ತಿರುವಂತದ್ದೆಲ್ಲ ಡ್ರಾಮಾ. ತನಿಖೆಯಾದಮೇಲೆ ಎಲ್ಲಾ ಸತ್ಯ ಹೊರ ಬರುತ್ತದೆ. ಆದರೆ ಇಲ್ಲಿ ಸತ್ಯವೇ ಹೊರ ಬರುವುದಿಲ್ಲ ಎಂದಾದರೆ ತನಿಖೆ ಯಾಕೆ ನಡೆಸುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಎಂದು ಹೇಳಿದರು.

  • 224 ಮಂದಿಯ ಶೀಲ ಪರೀಕ್ಷೆ ಮಾಡುವಂತೆ ಸಿಎಂಗೆ ಸುಧಾಕರ್ ಪತ್ರ ಬರೆಯಲಿ: ಸುರೇಶ್ ಗೌಡ

    224 ಮಂದಿಯ ಶೀಲ ಪರೀಕ್ಷೆ ಮಾಡುವಂತೆ ಸಿಎಂಗೆ ಸುಧಾಕರ್ ಪತ್ರ ಬರೆಯಲಿ: ಸುರೇಶ್ ಗೌಡ

    ತುಮಕೂರು: 224 ಮಂದಿಯ ಶೀಲ ಪರೀಕ್ಷೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿ ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಅವರು ಸಚಿವ ಸುಧಾಕರ್ ವಿರುದ್ಧ ಹರಿಹಾಯ್ದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸುಧಾಕರ್ ಅವರು ಶಾಸಕರ ಶೀಲ ಪರೀಕ್ಷೆ ಮಾಡಲಿ. 224 ಜನ ಶಾಸಕರನ್ನ ತನಿಖೆ ಮಾಡಬೇಕು ಎಂದು ಸಚಿವ ಸುಧಾಕರ್ ಸಿಎಂಗೆ ಪತ್ರ ಬರೆಯಲಿ. ಹೇಗಿದ್ರೂ ಅವರು ಆರೋಗ್ಯ ಮಂತ್ರಿ, ಹಾಗಾಗಿ ಶೀಲ ಪರೀಕ್ಷೆ ಮಾಡುವಂತೆ ಸಿಎಂಗೆ ಪತ್ರ ಬರೆಯಲಿ ಎಂದು ಗರಂ ಆಗಿದ್ದಾರೆ.

    ಮನುಷ್ಯನ ದೇಹದ ಅಂಗಾಂಗಗಳ ಬಗ್ಗೆ ಆರೋಗ್ಯ ಸಚಿವರಿಗೆ ಅರಿವಿದೆ. ಅವು ಹೇಗೆ ಕೆಲಸ ಮಾಡುತ್ತವೆ ಅನ್ನೋದು ಅವರಿಗೆ ತಿಳಿದಿದೆ. ಹಾಗಾಗಿ ಅವರೇ ಮುಖ್ಯಮಂತ್ರಿಗೆ ಹೇಳಿ ಪರೀಕ್ಷೆ ಮಾಡಿಸಲಿ ಎಂದು ಸಚಿವರ ವಿರುದ್ಧ ಮಾಜಿ ಶಾಸಕರು ಕಿಡಿಕಾರಿದ್ದಾರೆ.

    ಸುಧಾಕರ್ ಹೇಳಿದ್ದೇನು..?
    ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸುಧಾಕರ್ ವಿಪಕ್ಷ ನಾಯಕರಿಗೆ ಸವಾಲು ಎಸೆದರು. ಕಾನೂನಿನ ಪ್ರಕಾರ ನ್ಯಾಯಾಲಯದಿಂದ ರಕ್ಷಣೆ ಪಡೆದಿದ್ದೇವೆ. ಆರೋಪಗಳನ್ನ ಮಾಡುವ ನಾಯಕರು ಸಂವಿಧಾನಕ್ಕೆ ಗೌರವ ನೀಡಬೇಕು. ರಾಷ್ಟ್ರೀಯ ನಾಯಕರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮರ್ಯಾದೆ ಪುರುಷರು, ಶ್ರೀರಾಮಚಂದ್ರ ಅನ್ಕೊಂಡು ಮಾತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

    ನೀವು ನಿಮ್ಮ ಜೀವನದಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿಲ್ವಾ? ಮಾನ್ಯ ಸಿದ್ದರಾಮಯ್ಯ, ಕುಮಾರಸ್ವಾಮಿ, ಮುನಿಯಪ್ಪ, ಡಿ.ಕೆ ಶಿವಕುಮಾರ್ ಮತ್ತು ನನ್ನನ್ನು ಸೇರಿದಂತೆ ಎಲ್ಲ 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆ ಆಗಲಿ. ಯಾರಿಗೆ ಅನೈತಿಕ ಸಂಬಂಧ ಇದೆ, ವಿವಾಹವೇತರ ಸಂಬಂಧ ಇದೆ ಎಂಬುದು ಗೊತ್ತಾಗಲಿ. ಸಿಎಂ ಆಗಿದ್ದಾಗ ಯಾರು ಏನು ಮಾಡಿದ್ರು ಅನ್ನೋದು ಗೊತ್ತಾಗಲಿ. ಸಿದ್ದರಾಮಯ್ಯ, ಕುಮಾರಸ್ವಾಮಿ, ಮುನಿಯಪ್ಪ, ಡಿ.ಕೆ.ಶಿವಕುಮಾರ್ ಏನು ಏಕಪತ್ನಿವ್ರತಸ್ಥರಾ? ನೈತಿಕತೆ ಬಗ್ಗೆ ಮಾತನಾಡೋರು ಮಾದರಿ ಆಗಿದ್ದರೆ ತನಿಖೆಗೆ ಎಲ್ಲರೂ ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದ್ದರು. ಸುಧಾಕರ್ ಈ ಹೇಳಿಕೆ ಇಂದು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯೇ ಎಬ್ಬಿಸಿದ್ದು, ವಿರೋಧ ಪಕ್ಷ ಮಾತ್ರವಲ್ಲದೇ ತಮ್ಮದೇ ಪಕ್ಷದ ನಾಯಕರು ಕೂಡ ಸಚಿವರ ವಿರುದ್ಧ ಕಿಡಿಕಾರಿದರು.

  • ನಾಗಮಂಗಲ ಟಿಕೆಟ್ ನಂದೇ, ನೆಕ್ಸ್ಟ್ ಎಂಎಲ್‍ಎ ನಾನೇ: ಶಿವರಾಮೇಗೌಡ

    ನಾಗಮಂಗಲ ಟಿಕೆಟ್ ನಂದೇ, ನೆಕ್ಸ್ಟ್ ಎಂಎಲ್‍ಎ ನಾನೇ: ಶಿವರಾಮೇಗೌಡ

    ಮಂಡ್ಯ: ಸಕ್ಕರೆ ನಾಡಿನಲ್ಲಿ ಟಿಕೆಟ್ ಫೈಟ್ ಶುರುವಾಗಿದೆ. 2023ರ ಚುನಾವಣೆಗೆ ನಾಗಮಂಗಲ ಕ್ಷೇತ್ರದ ಟಿಕೆಟ್‍ಗಾಗಿ ಸಮರ ಆರಂಭವಾಗಿದ್ದು, ಹಾಲಿ ಶಾಸಕ, ಮಾಜಿ ಸಂಸದರ ನಡುವೆ ಪೈಪೋಟಿ ಶುರುವಾಗಿದೆ. ನಾಗಮಂಗಲದಲ್ಲಿ ಎಲೆಕ್ಷನ್ ತಯಾರಿ ಆರಂಭಿಸಿರುವ ಶಿವರಾಮೇ ಗೌಡ, ಟಿಕೆಟ್ ನಂದೇ, ನೆಕ್ಸ್ಟ್ ಎಂಎಲ್‍ಎ ನಾನೇ ಎಂದು ಗುಡುಗಿದ್ದಾರೆ. ಈ ಮೂಲಕ ಶಾಸಕ ಸುರೇಶ್ ಗೌಡ ವಿರುದ್ಧ ಮಾಜಿ ಸಂಸದರು ತೊಡೆತಟ್ಟಿದ್ದಾರೆ.

    ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ, ಈ ಬಾರಿ ನಾಗಮಂಗಲದಲ್ಲಿ ನಂದೇ ಆಟ. ಟಿಕೆಟ್ ತೆಗೆದುಕೊಂಡು ನೋಡಿದ್ದೀನಿ, ತೆಗೆದುಕೊಳ್ಳದೆಯೂ ನೋಡಿದ್ದೀನಿ. ಚುನಾವಣೆ ಸಿದ್ದತೆ ಪ್ರಾರಂಭ ಮಾಡಿದ್ದೇವೆ. ನಾವು ಎಷ್ಟೇ ಹಳಬರು ಇದ್ದರೂ ಜನ ಸಂಪರ್ಕದಲ್ಲೆ ಇರಬೇಕು. ಜೆಡಿಎಸ್ ನಲ್ಲಿದ್ದೇನೆ, ಜೆಡಿಎಸ್ ಅಭ್ಯರ್ಥಿಯಾಗುತ್ತೇನೆ ಎಂದು ಶಿವರಾಮೇ ಗೌಡ ಹೇಳಿದ್ದಾರೆ.

    ಹಾಲಿ ಶಾಸಕ ಸುರೇಶ್ ಗೌಡರನ್ನ ಲೋಕಸಭೆಗೆ ಕಳಿಸೋಣ. ಅವರು ತುಂಬಾ ಚೆನ್ನಾಗಿ ಇಂಗ್ಲಿಷ್-ಹಿಂದಿ ಮಾತನಾಡುತ್ತಾರೆ. ಸುರೇಶ್ ಗೌಡರು ಒಪ್ಪದಿದ್ರೇ ಜನರೇನು ದಡ್ಡರಾ..?, ನಮ್ಮ ನಾಯಕರು ದಡ್ಡರಾ..? ಸುರೇಶ್ ಗೌಡರಿಗೆ ಟಿಕೆಟ್ ಎಂದು ಎಚ್‍ಡಿಡಿ, ಎಚ್‍ಡಿಕೆ ಮಾತುಕೊಟ್ಟಿದ್ದಾರಾ ಎಂದು ಪ್ರಶ್ನಿಸುವ ಮೂಲಕ ಹಾಲಿ ಶಾಸಕ ಸುರೇಶ್‍ಗೌಡಗೆ ಶಿವರಾಮೇಗೌಡ ಟಕ್ಕರ್ ಕೊಟ್ಟಿದ್ದಾರೆ.

  • ನಾಗಮಂಗಲಕ್ಕೆ ಸುರೇಶ್ ಗೌಡ ಮುಂದಿನ ಅಭ್ಯರ್ಥಿ: ನಿಖಿಲ್ ಕುಮಾರಸ್ವಾಮಿ

    ನಾಗಮಂಗಲಕ್ಕೆ ಸುರೇಶ್ ಗೌಡ ಮುಂದಿನ ಅಭ್ಯರ್ಥಿ: ನಿಖಿಲ್ ಕುಮಾರಸ್ವಾಮಿ

    – ಕುಟುಂಬ ರಾಜಕೀಯ ತಪ್ಪಾ ಅಂತ ಪ್ರಶ್ನೆ

    ಮಂಡ್ಯ: ನಾಗಮಂಗಲ ಕ್ಷೇತ್ರಕ್ಕೆ ಮುಂದಿನ ಅಭ್ಯರ್ಥಿ ಸುರೇಶ್ ಗೌಡ ಎಂದು ಜೆಡಿಎಸ್ ಯುವಘಟಕದ ಅದ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳ ಸ್ಪಷ್ಟವಾಗಿ ಹೇಳುತ್ತೇನೆ, ನಮ್ಮ ಪಕ್ಷದ ತೀರ್ಮಾನ. ರಾಷ್ಟ್ರೀಯ ಅಧ್ಯಕ್ಷ ಕುಮಾರಣ್ಣ, ಕಾರ್ಯಕರ್ತರ ತೀರ್ಮಾನವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸುರೇಶ್ ಗೌಡ ಅವರನ್ನು ಆಯ್ಕೆ ಮಾಡಲಾಗುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಸೃಷ್ಟಿ ಮಾಡಲು ನಾವು ಬಿಡುವುದಿಲ್ಲ ಎಂದು ಹೆಳುವ ಮೂಲಕ ಪರೋಕ್ಷವಾಗಿ ಶಿವರಾಮೇಗೌಡಗೆ ಟಾಂಗ್ ನೀಡಿದರು.

    ಶಿವರಾಮೇಗೌಡ ಅವರು ಮುಂದಿನ ಬಾರಿ ಚುನಾವಣೆಗೆ ನಿಲ್ತೀನಿ ಎಂದಿದ್ದರು. ಶಿವರಾಮೇಗೌಡರ ನಡೆಯಿಂದ ಶಾಸಕ ಸುರೇಶ್‍ಗೌಡ ಬೇಸರ ವ್ತಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ವಿಚಾರವಾಗಿ ಇವರಿಬ್ಬರ ನಡುವೆ ವಾಕ್ಸಮರ ನಡೆದಿತ್ತು. ಈಗ ಸುರೇಶ್ ಗೌಡರೇ ಅಭ್ಯರ್ಥಿ ಎನ್ನುವ ಮೂಲಕ ರಾಜಕೀಯ ಮೇಲಾಟಕ್ಕೆ ನಿಖಿಲ್ ಬ್ರೇಕ್ ಹಾಕಿದ್ದಾರೆ.

    ಇದೇ ವೇಳೆ ನಿಖಿಲ್ ರಾಜಕೀಯಕ್ಕೆ ರೀ ಎಂಟ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಶಾಸಕ ಆಗಬೇಕೆಂದು ಹುಚ್ಚು ಹಿಡಿಸಿಕೊಂಡಿದ್ರೇ ಯಾವತ್ತೋ ರಾಜಕಾರಣಕ್ಕೆ ನುಗ್ಗುತ್ತಿದೆ. ಎಷ್ಟೋ ಜನ ನಮ್ಮ ತಂದೆ ಹೆಸರಲ್ಲಿ ಶಾಸಕರಾಗಿದ್ದಾರೆ. ನಾನು 10 ವರ್ಷದ ಹಿಂದೆಯೇ ಶಾಸಕ ಆಗಿಬಿಡ್ತಿದ್ದೆನೇನೋ. ಸಿನಿಮಾ ರಂಗದಲ್ಲಿ ನನ್ನನ್ನ ನಾನು ತೊಡಗಿಸಿಕೊಂಡಿದ್ದೇನೆ. ನನಗೆ ಒಂದು ಪ್ಯಾಷನ್ ಇತ್ತು, ಅದನ್ನು ಮುಂದುವರಿಸುತ್ತೇನೆ ಎಂದರು.

    ಪಕ್ಷ ಒಂದು ಜವಬ್ದಾರಿ ಕೊಟ್ಟಿದೆ, ಯುವ ಘಟಕದ ಸ್ಥಾನ ನೀಡಿದ್ದಾರೆ. ರಾಮನಗರ ಜಿಲ್ಲೆ, ಮಂಡ್ಯ ಜಿಲ್ಲೆ ಯುವಕರು ನಾನು ಬರಬೇಕೆಂದು ಬಯಸುತ್ತಾರೆ. ಇದು ಒಂದು ಉದ್ದೇಶ ಬಿಟ್ಟರೆ, ಅಲ್ಲಿ ನಿಲ್ಲಬೇಕು, ಇಲ್ಲಿ ನಿಲ್ಲಬೇಕೆಂಬ ಉದ್ದೇಶ ಇಲ್ಲ. ಮುಂದಿನ ದಿನಗಳಲ್ಲಿ ಜನ ತೀರ್ಮಾನ ಮಾಡ್ತಾರೆ. ಅದಕ್ಕೆ ನಾನು ಬದ್ಧನಾಗಿ ಕೆಲಸ ಮಾಡ್ತೇನೆ ಎಂದು ಹೇಳಿದರು.

    ಕುಟುಂಬ ರಾಜಕಾರಣ ಕುರಿತು ಸ್ಪಷ್ಟನೆ ಕೊಟ್ಟ ನಿಖಿಲ್, ಯಡಿಯೂರಪ್ಪರ ಮಕ್ಕಳು ರಾಜಕಾರಣ ಮಾಡ್ತಿಲ್ವಾ, ಸಿದ್ದರಾಮಯ್ಯ ಮಕ್ಕಳು ರಾಜಕಾರಣದಲ್ಲಿಲ್ವ..?, ಅವರಿಗೂ ಪ್ರಶ್ನೆ ಮಾಡಬೇಕಾಗುತ್ತೆ. ನಾವು ಜನಗಳ ಜೊತೆ ಬೆರಿತೀವಿ, ಇರ್ತಿವಿ ಎಂದಿದ್ದಾರೆ.