Tag: ಸುರೇಶ್ ಗೌಡ

  • ನವೆಂಬರ್ 14ರ ಬಳಿಕ ಕಾಂಗ್ರೆಸ್ ಸರ್ಕಾರ ಪತನ: ಸುರೇಶ್ ಗೌಡ

    ನವೆಂಬರ್ 14ರ ಬಳಿಕ ಕಾಂಗ್ರೆಸ್ ಸರ್ಕಾರ ಪತನ: ಸುರೇಶ್ ಗೌಡ

    – ಕಾಂಗ್ರೆಸ್ ಪಕ್ಷವನ್ನು ಅವರ ಶಾಸಕರೇ ಹಾದಿಬೀದಿಯಲ್ಲಿ ಟೀಕಿಸುತ್ತಿದ್ದಾರೆ
    – ಡಿಕೆಶಿ ಪರ ಬ್ಯಾಟ್ ಬೀಸಿದ ಬಿಜೆಪಿ ಶಾಸಕ

    ತುಮಕೂರು: ನವೆಂಬರ್ 14ಕ್ಕೆ ಬಿಹಾರ ಚುನಾವಣೆ (Bihar Election) ನಡೆಯುತ್ತದೆ. ಫಲಿತಾಂಶ ಬಂದ ನಂತರ ಕಾಂಗ್ರೆಸ್ (Congress) ಸರ್ಕಾರ ಪತನ ಆಗುತ್ತದೆ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ (Suresh Gowda) ಹೇಳಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯ ಸುತ್ತಾಡಿ, ಫಂಡಿಂಗ್ ಮಾಡಿ 138 ಸ್ಥಾನ ಗಳಿಸಿ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ವಾಡಿಕೆಯಂತೆ ಅವರೇ ಸಿಎಂ ಆಗಬೇಕಿತ್ತು ಎಂದು ಡಿಕೆಶಿ ಪರ ಬ್ಯಾಟ್ ಬೀಸಿದರು. ಇದನ್ನೂ ಓದಿ: ಏರ್‌ ಇಂಡಿಯಾ 4,000 ಕೋಟಿ ನಷ್ಟ ಅನುಭವಿಸಲು ಪಾಕಿಸ್ತಾನ ಕಾರಣ – ಸಿಇಒ ಸ್ಪೋಟಕ ಮಾಹಿತಿ

    ಡಿಕೆಶಿ ಅವರ ತಾಖತ್‌ನಿಂದ ಫಂಡ್ ಮೊಬಿಲೈಜ್ ಮಾಡಿರೋದ್ರಿಂದ, ಪರಿಶ್ರಮ ಹಾಕಿರೋದ್ರಿಂದ ಸರ್ಕಾರ ಬಂದಿದೆ. ಆದರೆ ಸಿದ್ದರಾಮಯ್ಯ ಸಿಎಂ ಆದರು. ಸಿದ್ದರಾಮಯ್ಯ ಏನಾದರೂ ಫಂಡಿಂಗ್ ಮಾಡಿದ್ರಾ? ಹಣ ಕೊಟ್ಟರ‍್ಯಾರು ಡಿಕೆಶಿ ಅಲ್ಲವೇ? ಡಿಕೆ ಶಿವಕುಮಾರ್ ಪರಿಶ್ರಮಕ್ಕೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಈಗಲೂ ಸಿದ್ದರಾಮಯ್ಯ ಡಿಕೆಶಿಯನ್ನು ಸಿಎಂ ಮಾಡಬಾರದು ಎಂದು ತಂತ್ರ ರೂಪಿಸುತಿದ್ದಾರೆ. ಆದರೆ ಡಿಕೆ ಶಿವಕುಮಾರ್ ಮಾತ್ರ ತಾನು ನೂರಕ್ಕೆ ನೂರು ಸಿಎಂ ಆಗುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಡಿಕೆಶಿ, ಜಾರಕಿಹೊಳಿ ಅಲ್ಲ.. ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಸಿಎಂ ಆಗ್ತಾರೆ: ಯತ್ನಾಳ್ ಬಾಂಬ್

    ಆಗಾಗ ಕೊಕ್ಕೆ ಹಾಕುವ ಸಿದ್ದರಾಮಯ್ಯ, ಜಿ ಪರಮೇಶ್ವರ್, ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಮತ್ತು ಎಂ.ಬಿ.ಪಾಟೀಲ್‌ಗೆ ನೀವುಗಳೇ ಸಿಎಂ ಆಗಿ ಎಂದು ಎತ್ತಿಕಟ್ಟುತ್ತಿದ್ದಾರೆ. ಸಿದ್ದರಾಮಯ್ಯರ ಎಲ್ಲಾ ಸ್ಟ್ರಾಟಜಿ ಡಿ.ಕೆ.ಶಿವಕುಮಾರ್‌ಗೆ ಗೊತ್ತಾಗಿದೆ. ಇಬ್ಬರು ಮೇಲ್ನೋಟಕ್ಕೆ ಚೆನ್ನಾಗಿದ್ದವರಂತೆ ಕಾಣುತ್ತಾರೆ. ಆದರೆ ಸಿದ್ದರಾಮಯ್ಯ ಡಿಕೆಶಿಯನ್ನು ಗೋಡೆಗೆ ತಳ್ಳಿ ಬಕಾ, ಬಕಾ ಎಂದು ದಿನಕ್ಕೊಬ್ಬರನ್ನು ಬಿಟ್ಟು ಬಾಕ್ಸಿಂಗ್ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಮಾತ್ರ ದೇವರ ಥರ ನಿಂತುಕೊಂಡಿದ್ದಾರೆ. ಏನೇ ಇದ್ದರೂ ನವೆಂಬರ್ 14ರ ಬಳಿಕ ಈ ಸರ್ಕಾರ ಪತನ ಆಗೋದು ಗ್ಯಾರಂಟಿ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆಶಿ ಟಾಂಗ್‌

  • ಹನಿಟ್ರ್ಯಾಪ್‌ ಗದ್ದಲ| ಯತ್ನಾಳ್‌ಗೆ ಚೀಟಿ ಕೊಟ್ಟವರು ಸಿಎಂ ಆಪ್ತರಾ? – ಸಿಬಿಐ ತನಿಖೆಯಾಗಲಿ ಎಂದ ಸುರೇಶ್‌ ಗೌಡ

    ಹನಿಟ್ರ್ಯಾಪ್‌ ಗದ್ದಲ| ಯತ್ನಾಳ್‌ಗೆ ಚೀಟಿ ಕೊಟ್ಟವರು ಸಿಎಂ ಆಪ್ತರಾ? – ಸಿಬಿಐ ತನಿಖೆಯಾಗಲಿ ಎಂದ ಸುರೇಶ್‌ ಗೌಡ

    ಬೆಂಗಳೂರು: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಚೀಟಿ ಕೊಟ್ಟವರು ಯಾರು? ಇದರ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಸುರೇಶ್‌ ಗೌಡ ಆಗ್ರಹಿಸಿದ್ದಾರೆ.

    ವಿಧಾಸನಸಭೆಯಲ್ಲಿ ಮಾತನಾಡಿದ ಅವರು, ಯತ್ನಾಳ್‌ ಮಾತನಾಡುತ್ತಿದ್ದಾಗ ಅವರಿಗೆ ಒಂದು ಚೀಟಿ ಬಂತು. ಚೀಟಿ ಬಂದ ಮೇಲೆ ಯತ್ನಾಳ್ ಹನಿಟ್ರ್ಯಾಪ್ ವಿಚಾರದ ಬಗ್ಗೆ ಮಾತಾಡಿದರು ಎಂದರು.

    ಯತ್ನಾಳ್‌ ಹನಿಟ್ರ್ಯಾಪ್ ಮಾತನಾಡುವುದಕ್ಕೂ ಮುನ್ನ ಒಂದು ಚೀಟಿ ಆಡಳಿತ ಪಕ್ಷದಿಂದ ಬಂತು. ಈ ಚೀಟಿ ಕೊಟ್ಟವರು ಯಾರು? ಇದರ ತನಿಖೆ ಆಗಬೇಕು? ಚೀಟಿ ಕೊಟ್ಟವರು ಸಿಎಂಗೆ ಆಪ್ತರಾ? ಇದರ ತನಿಖೆ ಆಗಬೇಕು, ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

    ಶುಕ್ರವಾರ ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ನೇರವಾಗಿಯೇ ಸಹಕಾರಿ ಸಚಿವ ರಾಜಣ್ಣ ಮೇಲೆ ಹನಿಟ್ರ್ಯಾಪ್‌ ಯತ್ನ ನಡೆದಿದೆ ಎಂದು ಪ್ರಸ್ತಾಪ ಮಾಡಿದರು. ಮಾರ್ಶಲ್‌ ಒಬ್ಬರು ಚೀಟಿ ನೀಡಿದ ಬಳಿಕ ಹನಿಟ್ರ್ಯಾಪ್‌ ವಿಚಾರವನ್ನು ಪ್ರಸ್ತಾಪಿಸಿದ್ದರು.  ಯತ್ನಾಳ್ ಪ್ರಸ್ತಾಪ ಬೆನ್ನಲ್ಲೇ ತಮ್ಮ ಮೇಲೆ ಹನಿಟ್ರ್ಯಾಪ್‌ ಪ್ರಯತ್ನ ನಡೆದಿರುವುದು ಸತ್ಯ ಎಂಬುದನ್ನು ರಾಜಣ್ಣ ಒಪ್ಪಿಕೊಂಡರು.

  • ತಿಹಾರ್ ಜೈಲಿಗೆ ಹೋಗಿ ಬಂದ ಡಿಕೆಶಿ ನೀತಿ ಪಾಠ ಹೇಳೋದು ಬೇಡ: ಸುರೇಶ್ ಗೌಡ

    ತಿಹಾರ್ ಜೈಲಿಗೆ ಹೋಗಿ ಬಂದ ಡಿಕೆಶಿ ನೀತಿ ಪಾಠ ಹೇಳೋದು ಬೇಡ: ಸುರೇಶ್ ಗೌಡ

    ತುಮಕೂರು: ಕೋಟಿ ಕೋಟಿ ಲೂಟಿ ಹೊಡೆದು ತಿಹಾರ್ ಜೈಲಿಗೆ (Tihar Jail) ಹೋಗಿ ಬಂದ ಡಿಕೆಶಿ (DK Shivakumar) ನಮಗೆ ನೀತಿ ಪಾಠ ಹೇಳೋದು ಬೇಡ ಎಂದು ಶಾಸಕ ಸುರೇಶ್ ಗೌಡ (B Suresh Gowda) ಕಿಡಿಕಾರಿದ್ದಾರೆ.

    ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ (Hemavathi Express Canal) ವಿರೋಧಿ ಹೋರಾಟಗಾರರು ಬ್ಲಾಕ್ ಮೇಲ್ ಮಾಡುತಿದ್ದಾರೆ ಎಂದು ಡಿಸಿಎಂ ಡಿಕೆಶಿ ಹೇಳಿರೋದು ತುಮಕೂರು ಜಿಲ್ಲೆಯಲ್ಲಿ ಇನ್ನಷ್ಟು ಕಿಚ್ಚು ಹೆಚ್ಚಿಸಿದೆ. ಡಿಕೆಶಿ ಹೇಳಿಕೆಗೆ ಪಾದಯಾತ್ರಿಗಳು ಮುಗಿ ಬಿದ್ದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸುರೇಶ್, ವೈಕೆ ರಾಮಯ್ಯನವರು ಹೋರಾಟ ಮಾಡಿ ಹೇಮಾವತಿ ನೀರು ತಂದಾಗ ಡಿಕೆಶಿ ಹುಟ್ಟೇ ಇರಲಿಲ್ಲ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಸಿಎಂ ಪಟ್ಟಕ್ಕೆ ಕುಮಾರಸ್ವಾಮಿ, ಅಶೋಕ್‌ ಕನಸು – 5 ವರ್ಷ ನಮ್ಮದೇ ಸರ್ಕಾರ ಎಂದ ಸಿದ್ದರಾಮಯ್ಯ

    ಮಾಜಿ ಶಾಸಕ ಮಸಾಲಾ ಜಯರಾಮ್ ಕೂಡ ಉಪಮುಖ್ಯಮಂತ್ರಿಗಳು ಹಠದ ಧೋರಣೆ ಬಿಡಲಿ ಎಂದಿದ್ದಾರೆ. ಇದೇ ರೀತಿ ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ಡಿಕೆ ಶಿವಕುಮಾರ್ ಅವರ ಸ್ವಪ್ರತಿಷ್ಠೆಯಿಂದ ಜಿಲ್ಲೆಯ ಜನತೆಗೆ ಅನ್ಯಾಯ ಆಗುತ್ತಿದೆ. ನಮ್ಮ ಧ್ವನಿ ಅಡಗಿಸಲು ಅವರಿಂದ ಸಾಧ್ಯ ಇಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಸೇತುವೆಯಿಂದ ಕೆರೆಗೆ ಬಿದ್ದ ವಿದ್ಯಾರ್ಥಿನಿ; ಜೀವದ ಹಂಗು ತೊರೆದು ರಕ್ಷಿಸಿದ ಗೃಹರಕ್ಷಕ

  • ಕೈ ಪ್ರಭಾವಿ ನಾಯಕ ಶಿವರಾಮೇಗೌಡರಿಗೆ 5 ಕೋಟಿ ಕೊಟ್ಟಿದ್ದಾರೆ: ಸುರೇಶ್ ಗೌಡ ಹೊಸ ಬಾಂಬ್

    ಕೈ ಪ್ರಭಾವಿ ನಾಯಕ ಶಿವರಾಮೇಗೌಡರಿಗೆ 5 ಕೋಟಿ ಕೊಟ್ಟಿದ್ದಾರೆ: ಸುರೇಶ್ ಗೌಡ ಹೊಸ ಬಾಂಬ್

    – ಪೆನ್ ಡ್ರೈವ್ ಹಂಚಲು ಹತ್ತಾರು ಕೋಟಿ ಖರ್ಚು
    – ಪ್ರಕರಣದಲ್ಲಿ ಮೂರ್ನಾಲ್ಕು ಆತ್ಮಹತ್ಯೆ ಆಗಿದೆ ಅನ್ನೋ ಮಾಹಿತಿ

    ಮಂಡ್ಯ: ಪೆನ್‍ಡ್ರೈವ್ ಕೇಸಲ್ಲಿ (Pendrive Case) ಡಿಕೆಶಿ ಕೈವಾಡ ಇರೋದು 100ರಷ್ಟು ಸತ್ಯ. ಶಿವರಾಮೇಗೌಡರಿಗೆ ಕೈ ಪ್ರಭಾವಿ ನಾಯಕ 5 ಕೋಟಿ ಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ಸುರೇಶ್ ಗೌಡ (Suresh Gowda) ಹೊಸ ಬಾಂಬ್ ಸಿಡಿಸಿದ್ದಾರೆ.

    ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡ್ಡಿಗಾಗಿ, ಸ್ವಾರ್ಥಕ್ಕಾಗಿ ಏನನ್ನಾದರೂ ಮಾಡುವಂತ ವ್ಯಕ್ತಿ ಶಿವರಾಮೇಗೌಡ . ಆತನ ಹೆಸರು ಹೇಳಿದರೆ ನಮ್ಮ ನಾಲಿಗೆಗೆ ಹುಳ ಬೀಳುತ್ತದೆ. ಅಂತಹ ಕೆಟ್ಟ ವ್ಯಕ್ತಿ ಮನುಷ್ಯನಾಗಿ ಹುಟ್ಟಲೇಬಾರದಿತ್ತು. ಕಳೆದ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪ್ಲಾನ್ ಮಾಡಿದ್ರು. ಈಗ ಡಿಕೆ ಶಿವಕುಮಾರ್ ಮುಗಿಸಲು ಕ್ರಾಂಟ್ರಾಕ್ಟ್ ಪಡೆದಿರುವ ಬಗ್ಗೆ ಅನುಮಾನ ಇದೆ. ಪ್ರಜ್ವಲ್ ಪೆನ್ ಡ್ರೈವ್ ವಿಚಾರದಲ್ಲಿ ಡಿಕೆಶಿ ಕೈವಾಡ ನೂರಕ್ಕೆ ನೂರರಷ್ಟು ಸತ್ಯ. ಅದನ್ನು ಉಪಯೋಗಿಸಿಕೊಂಡು ಅವರನ್ನ ಮುಗಿಸಲು ಪ್ಲಾನ್ ನಡೆದಿದೆ ಎಂದು ಕಿಡಿಕಾರಿದರು.

    ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವಕ್ಕಾಗಿ ಕಿತ್ತಾಟ. ಡಿಕೆಶಿ ಜೈಲಿಗೆ ಹೋದರೆ ನಾನು ನಾಯಕ ಆಗಬಹುದು ಎಂಬ ಆಲೋಚನೆ ಹಲವರಲ್ಲಿದೆ. ಹಾಗಾಗಿ ಈ ಕೆಲಸಕ್ಕೆ ಶಿವರಾಮೇಗೌಡ‌ (Shivarame Gowda) ಒಬ್ಬ ಏಜೆಂಟ್. ಒಬ್ಬರನ್ನು ತುಳಿಯಲು ಮತ್ತೊಬ್ಬರಿಗೆ ಕಾಂಟ್ರಾಕ್ಟ್. ಕಾಂಗ್ರೆಸ್ ಪ್ರಭಾವಿ ನಾಯಕ ಶಿವರಾಮೇಗೌಡರಿಗೆ 5 ಕೋಟಿ ಕೊಟ್ಟಿದ್ದಾರೆ. ಎಚ್ಡಿಕೆ ನಾಮಪತ್ರ ಸಲ್ಲಿಸುವ 15 ದಿನ ಮುಂಚೆ ಹಣ ವರ್ಗಾವಣೆ ಆಗಿದೆ. ಆ ವಿಚಾರ ಕೇಳಿದಾಗ ಅನುಮಾನ ಮೂಡಿತ್ತು. ಈ ವ್ಯಕ್ತಿ ಅಷ್ಟು ಬೆಲೆ ಬಾಳುವುದಿಲ್ಲ ಮತ್ಯಾಕೆ ಹಣ ಕೊಟ್ಟಿದ್ದಾರೆ ಎಂದು ಸಂಶಯ. ಈಗ ಸಂಶಯ ನಿಜವಾಗಿದೆ ಎಂದರು. ಇದನ್ನೂ ಓದಿ: ಪ್ರಜ್ವಲ್ ಕೇಳಿದ್ದ ಕಾಲಾವಕಾಶ ಇಂದಿಗೆ ಅಂತ್ಯ – ಎಲ್ಲಾ ಏರ್‌ಪೋರ್ಟ್‌ಗಳಲ್ಲಿ ಎಸ್‌ಐಟಿ ನಿಗಾ

    ಪೆನ್ ಡ್ರೈವ್ ಹಂಚಲು ಹತ್ತಾರು ಕೋಟಿ ಖರ್ಚಾಗಿದೆ. ಅದರಲ್ಲಿ 5 ಕೋಟಿ ಶಿವರಾಮೇಗೌಡರಿಗೆ ಬಂದಿದೆ. ಪೆನ್ ಡ್ರೈವ್ ಕೊಂಡುಕೊಳ್ಳುವುದಕ್ಕಾ?, ಮಾಫಿರ್ಂಗ್ ಮಾಡಿಸುವುದಕ್ಕಾ? ಅಥವಾ ಹಂಚುವುದಕ್ಕಾ?. ಕೊಟ್ಟವರು, ಇಸ್ಕೊಂಡವರು ಈ ಬಗ್ಗೆ ಹೇಳಬೇಕು. ಎಲ್ಲರ ಮನೆಮುಂದೆ ಸಿಸಿಟಿವಿ ಇದೆ ಚೆಕ್ ಮಾಡಲಿ. ಪೆನ್ ಡ್ರೈವ್ ಮಾರ್ಫಿಂಗ್ ಮಾಡಿ, ಹಂಚಲು ದುಡ್ಡು ವರ್ಗಾವಣೆ ಮಾಡಲು ಹಣ ಕೊಟ್ಟಿದ್ದಾರೆ. ನಾಗಮಂಗಲದಲ್ಲೂ ಪೆನ್ ಡ್ರೈವ್ ಹಂಚಿಕೆಯಾಗಿದೆ ಎಂದು ಸುರೇಶ್ ಗೌಡ ಗರಂ ಆದರು.

    ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ: ಇದೆ ವೇಳೆ ಸರ್ಕಾರದ ವಿರುದ್ದವೂ ಗರಂ ಆದ ಸುರೇಶ್ ಗೌಡ, ಕಾಂಗ್ರೆಸ್ ಸರ್ಕಾರ (Congress Govt) ಹೆಣ್ಣುಮಕ್ಕಳ ಮಾನ ಬೀದಿಗೆ ತಂದಿದೆ. ಪ್ರಜ್ವಲ್ ಮಾಡಿದ ಅಪರಾಧಕ್ಕಿಂತ ಘೋರ ಅಪರಾಧ ಈ ಸರ್ಕಾರ ಮಾಡಿದೆ. 4 ಗೋಡೆಗಳ ಮಧ್ಯೆ ನಡೆದ ವಿಷಯವನ್ನ ಪೆನ್ ಡ್ರೈವ್ ಮಾಡಿ ಹಂಚಿದ್ದಾರೆ. ಇದು ಮಹಾನ್ ಅಪರಾಧ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಎಷ್ಟೋ ಹೆಣ್ಣುಮಕ್ಕಳ ಸಂಸಾರದಲ್ಲಿ ಬಿರುಕಾಗಿದೆ. ಈ ಪ್ರಕರಣದಲ್ಲಿ 3-4 ಆತ್ಮಹತ್ಯೆ ಆಗಿದೆ ಎನ್ನುವ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.

    ವೀಡಿಯೋದಲ್ಲಿ ಭಾಗಿಯಾದವರು ಎನ್ನಲಾದ ಸರ್ಕಾರಿ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಮಾಡಲಾಗ್ತಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ಆ ಅಧಿಕಾರಿಗಳನ್ನು ಹೆದರಿಸುತ್ತಿದ್ದಾರೆ. ಹಣಕ್ಕಾಗಿ, ಬೇರೆ ರೀತಿ ಉಪಯೋಗಿಸಿಕೊಳ್ಳಲು ಪ್ರಯತ್ನ ಮಾಡ್ತಿದ್ದಾರೆ. ಎಸ್‍ಐಟಿ ತನಿಖೆ ನ್ಯಾಯಯುತವಾಗಿ ನಡೆಯುತ್ತಿಲ್ಲ. ಸತ್ಯವನ್ನು ಮರೆಮಾಚಲಾಗ್ತಿದೆ. ಸಂತ್ರಸ್ತೆಯರಿಗೆ ಎಸ್‍ಐಟಿ (SIT) ನ್ಯಾಯ ಕೊಡುವುದಿಲ್ಲ. ಈ ಪ್ರಕರಣವನ್ನ ರಾಜಕೀಯ, ಚುನಾವಣೆಗಾಗಿ ಮಾತ್ರ ಉಪಯೋಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

    ನ್ಯಾಯ ಸಿಗುವವರೆಗೂ, ಸಿಬಿಐಗೆ (CBI) ವಹಿಸುವವರೆಗೂ ಜೆಡಿಎಸ್ (JDS) ಹೋರಾಟ ಮಡಲಿದೆ. ಈ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರ ಹೆಸರನ್ನ ತಂದು ಅವಮಾನ ಮಾಡಿದ್ದಾರೆ. ಇದು ರಾಜದ್ರೋಹದ ಕೆಲಸ. ಯಾವುದೇ ವಿಷ್ಯದಲ್ಲೂ ಭಾಗಿಯಾಗದ ದೇವೇಗೌಡರ ಹೆಸರನ್ನು ಎಳೆತಂದಿದ್ದಾರೆ. ಕಾಂಗ್ರೆಸ್ ರಾಜ್ಯದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಳು ಮಾಡಿದೆ. ಆತ್ಮಹತ್ಯೆ ಮಾಡಿಕೊಂಡವರು, ಡಿವೋರ್ಸ್ ಆದವರು, ಮನೆ ಹಾಳು ಮಾಡಿಕೊಂಡವರ ವಿಚಾರ ಮುಂದೆ ತಿಳಿಯಲಿದೆ. ಹೆಚ್ಚು ಈ ವಿಚಾರಗಳನ್ನು ಸರ್ಕಾರ ಮುಚ್ಚಿಡಲು ಆಗಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಶಾಸಕ ಸುರೇಶ್ ಗೌಡ ಆಕ್ರೋಶ ಹೊರ ಹಾಕಿದರು.

  • ಚಲುವರಾಯಸ್ವಾಮಿ ಮೊದಲೇ ಚಡ್ಡಿ ಹಾಕಲ್ಲ: ಮಾಜಿ ಶಾಸಕ ಸುರೇಶ್‌ಗೌಡ ವಾಗ್ದಾಳಿ

    ಚಲುವರಾಯಸ್ವಾಮಿ ಮೊದಲೇ ಚಡ್ಡಿ ಹಾಕಲ್ಲ: ಮಾಜಿ ಶಾಸಕ ಸುರೇಶ್‌ಗೌಡ ವಾಗ್ದಾಳಿ

    ಮಂಡ್ಯ: ಜಿಲ್ಲೆಯಲ್ಲಿ ಜೆಡಿಎಸ್ (JDS) ನಾಯಕರು ಹಾಗೂ ಸಚಿವ ಚಲುವರಾಯಸ್ವಾಮಿ ನಡುವೆ ಚಡ್ಡಿ ಪಾಲಿಟಿಕ್ಸ್ ತಾರಕಕ್ಕೇರಿದೆ. ಬಿಜೆಪಿಯವರು ಹೇಳಿದರೆ ಕುಮಾರಸ್ವಾಮಿ (H.D.Kumaraswamy) ಚಡ್ಡಿನೂ ಹಾಕ್ತಾರೆ, ಮಾಲೆನೂ ಎಂದಿದ್ದ ಸಚಿವ ಚಲುವರಾಯಸ್ವಾಮಿಗೆ (Chaluvaraya Swamy) ಜೆಡಿಎಸ್ ನಾಯಕರು ಟಾಂಗ್ ನೀಡಿದ್ದಾರೆ.

    ಬುಧವಾರ ಚಲುವರಾಯಸ್ವಾಮಿಗೆ ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮದೇ ಶೈಲಿನಲ್ಲಿ ವಾಗ್ದಾಳಿ ನಡೆಸಿದ್ದರು. ಇಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್‌ಗೌಡ (Suresh Gowda) ವಾಗ್ದಾಳಿ ನಡೆಸಿದ್ದಾರೆ. ಚಲುವರಾಯಸ್ವಾಮಿ ಮೊದಲೇ ಚಡ್ಡಿ‌ ಹಾಕಲ್ಲ. ಇವರಿಗೆ ಯಾರು ಹೇಳಬೇಕು ಚಡ್ಡಿ ಹಾಕು ಅಂತ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಮ್ಮ ವರದಿ ನೈಜವಾಗಿ, ವೈಜ್ಞಾನಿಕವಾಗಿದೆ: ಕಾಂತರಾಜು

    ಡಿ.ಕೆ.ಶಿವಕುಮಾರ್ ಅಥವಾ ಸಿದ್ದರಾಮಯ್ಯ ಹೇಳಬೇಕಾ? ಇವರಿಗೆ ಯಾಕೆ ನಮ್ಮ ವಿಷಯ. ಇವರದ್ದು ಎಷ್ಟಿದೆ ಅಷ್ಟು ನೋಡಿಕೊಳ್ಳಬೇಕು. ಈತನಿಗೆ ಪ್ಯಾಂಟ್ ಹಾಕೋದು ಕಲಿಸಿದ್ದವರು ಯಾರು? ಚಲುವರಾಯಸ್ವಾಮಿಗೆ ಚಡ್ಡಿ ಹಾಕಿದ್ರೆ ತೊಂದರೆ ಆಗಬಹುದು. ಅದಕ್ಕೆ ಆತ ಚಡ್ಡಿ ವಿಚಾರ ಹೇಳ್ತಾ ಇದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅಸಮಾಧಾನಿತ ನಾಯಕ ರಮೇಶ್ ಜಾರಕಿಹೊಳಿ ಮನೆಗೆ ವಿಜಯೇಂದ್ರ ಭೇಟಿ

    ಚಡ್ಡಿ ಹಾಕೊಂಡ್ರೆ ಬಿಚ್ಚೋಕೆ ತೊಂದರೆ ಆಗಬಹುದು. ಅದಕ್ಕೆ ಚಡ್ಡಿ ಹಾಕಬಾರದೆಂದು ಚಲುವರಾಯಸ್ವಾಮಿ ತೀರ್ಮಾನ ಮಾಡಿರಬೇಕು. ಪ್ಯಾಂಟ್ ಹಾಕೋದನ್ನು ಕಲಿಸಿದ್ದು ಯಾರು? ಮಾತಾಡೋದನ್ನು ಹೇಳಿಕೊಟ್ಟೋರು ಯಾರು ಅಂತ ಅವರೇ ಹೇಳಬೇಕು. ನಾವು ಚಡ್ಡಿ ಹಾಕೋತಿವೋ ಇಲ್ಲ ಬುಂಡ ಬುಂಡ ಓಡಾಡುತ್ತಿವೋ‌ ಇವರಿಗೆ ಯಾಕೆ? ಚಲುವರಾಯಸ್ವಾಮಿಗೆ ಕುಮಾರಸ್ವಾಮಿ ದೇವೇಗೌಡರ ಬಗ್ಗೆ ಮಾತಾಡಿದ್ರೆ ದೊಡ್ಡ ಲೀಡರ್ ಆಗ್ತೀನಿ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಸಿದ್ದರಾಮಯ್ಯ ಅವರ ಕಿವಿ ತಂಪು ಮಾಡಲು ಹೀಗೆ ಮಾತಾಡುತ್ತಾ ಇದ್ದಾರೆ. ಇವರ ಎಲ್ಲಾ ವಿಚಾರಗಳು ಹೊರಗೆ ಬರುತ್ತವೆ. ಇವರು ಗಾಜಿನ ಮನೆಯಲ್ಲಿ ಇದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

  • ಕಾಂಗ್ರೆಸ್‌ನ ಚೀಪ್ ಯೋಜನೆಗಳಿಂದಾಗಿ ಸಿದ್ದರಾಮಯ್ಯನವ್ರು ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ: ಸುರೇಶ್ ಗೌಡ

    ಕಾಂಗ್ರೆಸ್‌ನ ಚೀಪ್ ಯೋಜನೆಗಳಿಂದಾಗಿ ಸಿದ್ದರಾಮಯ್ಯನವ್ರು ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ: ಸುರೇಶ್ ಗೌಡ

    ಮಂಡ್ಯ: ಕಾಂಗ್ರೆಸ್‌ನವರು ಕೊಟ್ಟಿರುವ ಚೀಪ್ ಯೋಜನೆಗಳಿಂದಾಗಿ ಸಿದ್ದರಾಮಯ್ಯ ಅವರೇ ರಾಜೀನಾಮೆ ಕೊಟ್ಟರೂ ಆಶ್ಚರ್ಯ ಇಲ್ಲ ಎಂದು ಮಾಜಿ ಶಾಸಕ ಸುರೇಶ್‌ಗೌಡ ಹೇಳಿದರು.

    ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಒಳ್ಳೆಯ ಆಡಳಿತ ಮಾಡ್ತಾರೆ. ಕಾಂಗ್ರೆಸ್ ಅವರು ಮಾಡಿರುವ ಚೀಪ್ ಯೋಜನೆಗಳಿಂದ ಸಿದ್ದರಾಮಯ್ಯ ಅವರೇ ರಾಜೀನಾಮೆ ಕೊಟ್ಟರೂ ಆಶ್ಚರ್ಯ ಇಲ್ಲ. ಸರ್ಕಾರ ನಡೆಸಲು ಸಿದ್ದರಾಮಯ್ಯ ಅವರ ಕೈಯಲ್ಲಿ ಆಗುತ್ತಿಲ್ಲ. ಪಂಜಾಬ್ ಸ್ಥಿತಿ ಇಂದು ಏನಾಗಿದೆ. ಅದರ 10% ರಷ್ಟು ಕರ್ನಾಟಕಕ್ಕೆ ಆಗುತ್ತೆ. ಸರ್ಕಾರ ನಡೆಸುತ್ತಿರೋರು ಎಷ್ಟು ಸಾಲ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅಧಿಕಾರ ಬಿಡುತ್ತೇನೆ ಅಂತ ಎಲ್ಲೂ ಹೇಳಿಲ್ಲ: ಪೂರ್ಣಾವಧಿ ಸಿಎಂ ಪ್ರಶ್ನೆಗೆ ಸಿದ್ದರಾಮಯ್ಯ ಮಾತು

    ಜನಸಾಮಾನ್ಯರಿಗೆ ತೆರಿಗೆಯನ್ನು ಹೆಚ್ಚಿಸುತ್ತಿದ್ದಾರೆ. ಜನರ ದುಡ್ಡನ್ನು ಕಿತ್ತು ಅವರಿಗೆ ಕೊಡೋಕೆ ನೀವೇ ಬೇಕಾ? 10 ಕೆ.ಜಿ ಅಕ್ಕಿಯಲ್ಲಿ ಕೇಂದ್ರ ಸರ್ಕಾರದ 5 ಕೆ.ಜಿ ಹೇಳ್ತಾ ಇಲ್ಲ. ಮದ್ಯದ ಮೇಲೆ ತೆರಿಗೆ ಹೆಚ್ಚಿಸಿ ಕೂಲಿ ಕಾರ್ಮಿಕರ ಮನೆ ಹಾಳು ಮಾಡ್ತಾ ಇದ್ದಾರೆ. ಈಗ ಎಲ್ಲಿ ನೋಡಿದ್ರು ಬರಿ ಗಲಭೆಗಳು. ಯಾಕೆ ಬೇರೆ ಸರ್ಕಾರ ಇದ್ದಾಗ ಗಲಭೆಗಳು ಆಗಿಲ್ಲ. ಇವರ ಸರ್ಕಾರದಲ್ಲಿ ಮಾತ್ರ ಯಾಕೆ ಗಲಭೆ ಮಾಡ್ತಾರೆ? ಧರ್ಮ ಧರ್ಮಗಳನ್ನು ಎತ್ತಿ ಕಟ್ಟುತ್ತಾರೆ. ದೇಶದಲ್ಲಿ ನಿಜವಾದ ಜಾತಿವಾದಿಗಳು ಕಾಂಗ್ರೆಸ್‌ನವರು ಎಂದು ತಿಳಿಸಿದರು.

    ಕೆಲವು ವರ್ಗಗಳನ್ನು ಓಲೈಸಿಕೊಳ್ಳಲು ಬಿಟ್ಟಿ ಕಾರ್ಯಕ್ರಮ ತಂದಿದ್ದಾರೆ. ದೇಶದ ವಿರುದ್ಧ ಎತ್ತಿಕಟ್ಟಿ ಅವರಿಗೆ ಶಕ್ತಿ ತುಂಬುತ್ತಾ ಇರೋದು ಕಾಂಗ್ರೆಸ್. ಒಬ್ಬೊಬ್ಬ ಮಂತ್ರಿ ಪತ್ರ ಬರೆಯುತ್ತಾನೆ. ಅವರ ಕೇಸ್ ವಾಪಸ್ ತೆಗೆದುಕೊಳ್ಳಿ ಅಂತ. ಕೆಲವೇ ಕೆಲವು ಸಮಾಜಕ್ಕೆ ಸೀಮಿತವಾಗಿ ಈ ಸರ್ಕಾರ ಕೆಲಸ ಮಾಡ್ತಾ ಇದೆ ಆರೋಪಿಸಿದರು. ಇದನ್ನೂ ಓದಿ: ಕಾರಲ್ಲಿ ಕುಳಿತಿದ್ದಾಗಲೇ RSS ಮುಖಂಡ ಹೃದಯಾಘಾತದಿಂದ ಸಾವು

    ಸಿದ್ದರಾಮಯ್ಯ ಸರ್ಕಾರ ಓವರ್ ಲೋಡ್ ಆಗಿದೆ. ಈ ಬೋಟ್ ಯಾವಾಗ ಮುಳುಗುತ್ತೆ ಗೊತ್ತಿಲ್ಲ. ಈ ಬೋಟ್‌ನಲ್ಲಿ ಮೊದಲಿಗೆ ಚಲುವರಾಯಸ್ವಾಮಿ. ಜನ ಕೊಟ್ಟ ಅಧಿಕಾರವನ್ನು ಎಷ್ಟಕ್ಕೆ ಮಾರಿಕೊಳ್ಳಬೇಕು ಎನ್ನುವುದೇ ಗೊತ್ತಿರೋದು ಈತನಿಗೆ. ಸಿದ್ದರಾಮಯ್ಯ ಅವರ ಕ್ಯಾಬಿನೆಟ್‌ನಲ್ಲಿ ಅತ್ಯಂತ ಭ್ರಷ್ಟಾಚಾರ ಮಾಡ್ತಾ ಇರೋದು ಚಲುವರಾಯಸ್ವಾಮಿ. ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಎರಡನೇ ರ‍್ಯಾಂಕ್. ನಾವು ಬಿಜೆಪಿ ಜೊತೆ ಮೈತ್ರಿಯಾಗಿರೋದೆ ಇಂತಹ ಭ್ರಷ್ಟ ಸರ್ಕಾರ ತೆಗೆಯಲು. ಇಂಥವನು ದೇವೇಗೌಡರು, ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಚಿವ ಸಂಪುಟದ ದೋಸ್ತಿಗಳ ನಡುವೆ ಮಹಾ ಬಿರುಕಿದೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಶಾಸಕ

    ಸಚಿವ ಸಂಪುಟದ ದೋಸ್ತಿಗಳ ನಡುವೆ ಮಹಾ ಬಿರುಕಿದೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಶಾಸಕ

    ಮಂಡ್ಯ: ಸಚಿವ ಸಂಪುಟದ ಸಚಿವರಿಬ್ಬರ ನಡುವೆ ಹಲವು ತಿಂಗಳುಗಳಿಂದ ಮಾತಿಲ್ಲ. ದೋಸ್ತಿಗಳಿಬ್ಬರ ನಡುವೆ ಮಹಾ ಬಿರುಕು ಬಿಟ್ಟಿದೆ ಎನ್ನುವ ಸ್ಫೋಟಕ ಮಾಹಿತಿಯನ್ನು ಮಾಜಿ ಶಾಸಕ ಸುರೇಶ್ ಗೌಡ (Suresh Gowda) ಬಿಚ್ಚಿಟ್ಟಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಸುರೇಶ್ ಗೌಡ, ಸಚಿವರಾದ ಜಮೀರ್ (Zameer Ahmed Khan), ಚಲುವರಾಯಸ್ವಾಮಿ (Chaluvaraya Swamy) ಕಳೆದ 7-8 ತಿಂಗಳಿಂದ ಮಾತನಾಡುತ್ತಿಲ್ಲ. ಚಲುವರಾಯಸ್ವಾಮಿ ಪರ ಕ್ಯಾಂಪೇನ್‌ಗೂ ಬರಲಿಲ್ಲ. ಮುನಿಸಿಗೆ ಕಾರಣ ಏನೆಂದು ಚೆಲುವರಾಯಸ್ವಾಮಿ ಉತ್ತರ ಕೊಡ್ತಾರಾ? ಕುಮಾರಸ್ವಾಮಿ ಫಾರೀನ್‌ಗೆ ಹೋಗುವ ಬಗ್ಗೆ ಮಾತನಾಡುತ್ತಾನೆ. ಕುಮಾರಣ್ಣ ಯಾವುದಾದರೂ ಕ್ಯಾಸಿನೋಗೆ ಇಸ್ಪಿಟ್ ಆಡೋಕೆ ಹೋಗಿದ್ರಾ? ಆದರೆ ಚಲುವರಾಯಸ್ವಾಮಿ ಆ ಕೆಲಸ ಮಾಡುತ್ತಾನೆ. ಎಲ್ಲೆಲ್ಲಿ ಜಮೀರ್ ಹೆಸರು ದುರ್ಬಳಕೆ ಆಗಿತ್ತು, ಏನೇನಾಗಿತ್ತು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

    ಜೊತೆಯಲ್ಲಿ ವ್ಯಾಪಾರ ಮಾಡಿಕೊಂಡು ಹೋದವರು. ಜಮೀರ್, ಚಲುವರಾಯಸ್ವಾಮಿ, ಆಪ್ತಮಿತ್ರರು. ಒಂದು ಬಾರಿಯಾದರೂ ಮಾತಾಡೋದು ನೋಡಿದ್ದೀರಾ ಟಿವಿಯಲ್ಲಿ? ಅವರು ಈಗ್ಯಾಕೆ ಮಾತನಾಡುತ್ತಿಲ್ಲ? ಒಂದು ಕಾಲದಲ್ಲಿ ಜಮೀರ್ ಸಾಹೇಬ್ರು ಆತನಿಗೆ ನೆಂಟರಲ್ವಾ? ಈಗ್ಯಾಕೆ ಇಲ್ಲ? ಈತ ಸ್ನೇಹದ್ರೋಹಿ, ಮಿತ್ರದೋಹಿ ಕೆಲಸವನ್ನು ಕರಗತ ಮಾಡ್ಕೊಂಡಿರೋನು. ಇವನು ಕುಮಾರಣ್ಣನ ಬಗ್ಗೆ ಮಾತನಾಡ್ತಾನೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಭ್ರಷ್ಟಾಚಾರದಲ್ಲಿ ಚಲುವರಾಯಸ್ವಾಮಿಗೆ ಮೊದಲ ಸ್ಥಾನ ನೀಡಬೇಕು. ಚಲುವರಾಯಸ್ವಾಮಿ 300-400 ಕೋಟಿ ರೂ. ಲೂಟಿ ಹೊಡೆದಿದ್ದಾನೆ. ಮಂಡ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡಿ ದುಡ್ಡನ್ನು ಏರ್‌ಲಿಫ್ಟ್ ಮಾಡುತ್ತಿದೆ. ಹಿಂದಿನ ಸರ್ಕಾರದಲ್ಲಿ ಜೆಸಿಬಿಯಲ್ಲಿ ಹಣ ತುಂಬುತ್ತಿದ್ದಾರೆ ಎನ್ನುತ್ತಿದ್ದರು. ಆದರೆ ಈ ಸರ್ಕಾರ ಭ್ರಷ್ಟ ಹಣವನ್ನು ಏರ್‌ಲಿಫ್ಟ್ ಮಾಡುತ್ತಿದೆ. ರಾಜ್ಯವನ್ನೇ ಲೂಟಿ ಹೊಡೆಯುತ್ತಿದ್ದಾರೆ ಎಂದರು.

    ಅಧಿಕಾರ ಸಿಕ್ಕಾಗ ಜನರಿಗೆ ಒಳ್ಳೆಯದು ಮಾಡಬೇಕು. ಕಡಿಮೆ ಎಂದರೂ ಇಲ್ಲಿಯವರೆಗೆ 300-400 ಕೋಟಿ ರೂ. ಲೂಟಿ ಹೊಡೆದಿದ್ದಾನೆ. ಟ್ರಾನ್ಸ್‌ಫರ್‌ನಲ್ಲಿ 150 ಕೋಟಿ, ಜಲಧಾರೆ ಯೋಜನೆಯಲ್ಲಿ 100 ಕೋಟಿ, ಅಧಿಕಾರಿಗಳ ಬಳಿ ಲೂಟಿ ಸೇರಿ 300 ಕೋಟಿ ರೂ. ಚಲುವರಾಯಸ್ವಾಮಿ ಒಬ್ಬರೇ ಮಾಡಿದ್ದಾರೆ. ಇಡೀ ಕಾಂಗ್ರೆಸ್ ಹಣ ಏರ್‌ಲಿಫ್ಟ್ ಮಾಡುತ್ತಿದೆ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಿಂದ ಫಂಡ್ ಹೋಗುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸೇತುವೆ ನಿರ್ಮಿಸಿಕೊಡಿ ಪ್ಲೀಸ್: ಪ್ರಧಾನಿ ಮೋದಿಗೆ ಮಕ್ಕಳ ಪತ್ರ

    ಚಲುವರಾಯಸ್ವಾಮಿಗೆ ಬ್ರೈನ್ ಮ್ಯಾಪಿಂಗ್ ಮಾಡಬೇಕು. ಎಲ್ಲೆಲ್ಲಿ ಎಷ್ಟೆಷ್ಟು ತಿಂದಿದ್ದಾನೆ ಗೊತ್ತಾಗುತ್ತದೆ. ಬೆಂಗಳೂರಿನಲ್ಲಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದೆ. ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷನದು. ಅಲ್ಲಿ ಚಲುವರಾಯಸ್ವಾಮಿ ಎಷ್ಟು ಬ್ಲ್ಯಾಕ್ ಮನಿ ವೈಟ್ ಮಾಡಿದ್ದಾನೆ? ಅದೆಲ್ಲವೂ ಆಚೆ ಬರುತ್ತವೆ. ಇಡಿ ಕಣ್ಣು ಬಿಡಲಿದೆ. ಬೆಳ್ಳೂರು ಕ್ರಾಸ್‌ನಲ್ಲಿ ಪೆಟ್ರೋಲ್ ಬ್ಯಾಂಕ್ ಮಾಲೀಕರತ್ರ ಎಷ್ಟು ಕಲೆಕ್ಷನ್ ಮಾಡ್ತಿದಾನೆ, ಎಲ್ಲವೂ ಜನರಿಗೆ ಗೊತ್ತಿದೆ. ಮೆಜೆಸ್ಟಿಕ್‌ನಲ್ಲಿರುವ ಕೋ ಆಪರೇಟಿವ್ ಸೊಸೈಟಿ ಸರಿಯಾಗಿ ತನಿಖೆ ನಡೆಸಿದರೆ ಸಾಕು. ಸಿದ್ದರಾಮಯ್ಯ ತನಿಖೆ ಮಾಡಿಸಿದರೆ ಬ್ಲ್ಯಾಕ್ ಹೇಗೆ ವೈಟ್ ಆಗುತ್ತಿದೆ. ಯಾವ ಯಾವ ಥಿಯೇಟರ್ ತೆಗೆದುಕೊಳ್ಳದ್ದಕ್ಕೆ ಸಹಾಯ ಆಗಿದೆ ಗೊತ್ತಾಗುತ್ತದೆ. ತಿಂದವನು ಕಕ್ಕಲೇ ಬೇಕು. ಎಲ್ಲಾ ಮುಂದೆ ಗೊತ್ತಾಗುತ್ತದೆ ಎಂದು ಟಾಂಗ್ ನೀಡಿದರು.

    ಅಧಿಕಾರಿಗಳು ಪತ್ರ ಬರೆದದ್ದು ಸತ್ಯ. ಬೆಂಗಳೂರಿನ 37 ಕ್ರಸೆಂಟ್ ಹೋಟೆಲ್‌ಗೆ ಕರೆಸಿಕೊಂಡು ಅಧಿಕಾರಿಗಳಿಗೆ ಒತ್ತಡ ಹೇರಿದ್ದಾರೆ. ಎಲ್ಲಾ ಬಿಗಿ ಭದ್ರತೆ ಮಾಡಿಕೊಂಡು, ಅಧಿಕಾರಿಗಳ ಬಳಿ ಪತ್ರ ಬರೆದಿಲ್ಲ ಎಂದು ಸುಳ್ಳು ಹೇಳಿದ್ದಾರೆ. 37 ಕ್ರಸೆಂಟ್ ಹೋಟೆಲ್ ಹಾಗೂ ಆ ರಸ್ತೆಯ ಸಿಸಿಟಿವಿ ದೃಶ್ಯ ತೆಗೆಸಿ. ಆಗ ಯಾವ ಎಡಿ, ಜೆಡಿ ಯಾರೆಲ್ಲಾ ಹೋಗಿದ್ರು ತಿಳಿಯುತ್ತದೆ. ಪೊಲೀಸರು ಇವರನ್ನು ಕೇಳಿ ತನಿಖೆ ಮಾಡುತ್ತಾರೆ. ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಾರೆ. ಜೆಡಿ, ಎಡಿಗಳನ್ನು ಬ್ರೈನ್ ಮ್ಯಾಪಿಂಗ್ ಮಾಡಿದರೆ ಎಷ್ಟು ದುಡ್ಡು ಕೊಟ್ಟಿದ್ದಾರೆ ಅಂತ ಬಾಯಿ ಬಿಡ್ತಾರೆ. ಬ್ರೈನ್ ಮ್ಯಾಪಿಂಗ್ ನಮಗಲ್ಲ, ಚಲುವರಾಯಸ್ವಾಮಿಗೆ. ಎಲ್ಲೆಲ್ಲಿ ಎಷ್ಟೆಷ್ಟು ತಿಂದಿದ್ದಾನೆ ತಿಳಿಯಬೇಕು ಅಲ್ವಾ? ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬಟ್ಟೆ ವ್ಯಾಪಾರಿಯ ಹಣ ಎಗರಿಸಿದ್ದ ಆರೋಪಿ 24 ಗಂಟೆಯಲ್ಲಿ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆಎಸ್‌ಆರ್‌ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್ – ಅಂಬುಲೆನ್ಸ್ ಅಡ್ಡಗಟ್ಟಿದ ದೃಶ್ಯ ಪತ್ತೆ

    ಕೆಎಸ್‌ಆರ್‌ಟಿಸಿ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್ – ಅಂಬುಲೆನ್ಸ್ ಅಡ್ಡಗಟ್ಟಿದ ದೃಶ್ಯ ಪತ್ತೆ

    – ವೀಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ ಜೆಡಿಎಸ್

    ಮಂಡ್ಯ: ಕೆಎಸ್‌ಆರ್‌ಟಿಸಿ ಚಾಲಕ (KSRTC Driver) ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ (Suicide Attempt) ಪ್ರಕರಣಕ್ಕೆ ಈಗ ಒಂದು ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮಾಜಿ ಶಾಸಕ ಸುರೇಶ್ ಗೌಡ  (Suresh Gowda) ಹಾಗೂ ಜೆಡಿಎಸ್ (JDS) ಕಾರ್ಯಕರ್ತರು ಅಂಬುಲೆನ್ಸ್ (Ambulence) ಅನ್ನು ತಡೆದಿದ್ದರು ಎಂದು ಸಚಿವ ಚಲುವರಾಯಸ್ವಾಮಿ (Chaluvaraya Swamy) ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯವನ್ನು ಜೆಡಿಎಸ್ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದೆ.

    ಸಿಸಿಟಿವಿ ದೃಶ್ಯದಲ್ಲೇನಿದೆ?
    ನಾಗಮಂಗಲದ ಕೆಎಸ್‌ಆರ್‌ಟಿಸಿ ಡ್ರೈವರ್ ಜಗದೀಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದ್ದ ಅಂಬುಲೆನ್ಸ್ ಅನ್ನು ಮಾಜಿ ಶಾಸಕ ಸುರೇಶ್ ಗೌಡ ಹಾಗೂ ಬೆಂಬಲಿಗರು ಅಡ್ಡಗಟ್ಟುವ ದೃಶ್ಯ ಪತ್ತೆಯಾಗಿದೆ. ನಾಗಮಂಗಲ ಟಿಬಿ ವೃತ್ತದ ಬಳಿ ಸುರೇಶ್‌ಗೌಡ ಅಡ್ಡಗಟ್ಟಿ ನಿಲ್ಲಿಸಿದ್ದರು. ಬಳಿಕ ಅಂಬುಲೆನ್ಸ್‌ನಲ್ಲಿದ್ದವರೊಂದಿಗೆ ಸುರೇಶ್ ಗೌಡ ಮಾತನಾಡಿದ್ದರು. ಈ ಘಟನೆ ಜುಲೈ 6ರ ಮಧ್ಯರಾತ್ರಿ 1 ಗಂಟೆ ವೇಳೆ ನಡೆದಿದೆ.

    ಘಟನೆಗೆ ಸಂಬಂಧಿಸಿದಂತೆ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ಸುರೇಶ್‌ಗೌಡ ಹಾಗೂ ಜೆಡಿಎಸ್ ಕಾರ್ಯಕರ್ತರು ಅಂಬುಲೆನ್ಸ್ ತಡೆದಿದ್ದರು. ಜಗದೀಶ್‌ನ್ನು ಬಿಜಿಎಸ್ ಆಸ್ಪತ್ರೆಯಿಂದ ಮೈಸೂರಿಗೆ ರವಾನೆ ಮಾಡುವಾಗ ತಡೆದಿದ್ದಾರೆ. ಅವರಿಗೆ ಜಗದೀಶ್ ಬದುಕಿಸುವ ಉದ್ದೇಶ ಇರಲಿಲ್ಲ ಎಂದು ಚಲುವರಾಯಸ್ವಾಮಿ ಆರೋಪಿಸಿದ್ದರು. ಇದನ್ನೂ ಓದಿ: ಜೈನ ಮುನಿ ಕೊಲೆ ಮಾಡಿದ್ದು ಒಬ್ಬರಲ್ಲ ಇಬ್ಬರು – ಎಫ್‌ಐಆರ್‌ನಲ್ಲಿ ಬಹಿರಂಗ

    ಇದಾದ ಬಳಿಕ ನಮ್ಮ ಕಾರ್ಯಕರ್ತರು ಅಂಬುಲೆನ್ಸ್ ಅಡ್ಡಗಟ್ಟಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಇದೀಗ ಘಟನೆಗೆ ಸಂಬಂಧಿಸಿಂತೆ ವೀಡಿಯೋ ಬಿಡುಗಡೆ ಮಾಡಿರುವ ಜೆಡಿಎಸ್, ನಾವು ಜಗದೀಶ್‌ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ವಿಚಾರಿಸಲು ಅಂಬುಲೆನ್ಸ್ ಅನ್ನು ನಿಲ್ಲಿಸಿದ್ದೆವು ಎಂದು ಸ್ಪಷ್ಟಪಡಿಸಿದೆ. ಜಗದೀಶ್‌ನ ಎಲ್ಲಿಗೆ ಕರೆದುಕೊಂಡು ಹೋಗ್ತಾ ಇದ್ದೀರಾ? ಬಿಜಿಎಸ್‌ನಲ್ಲಿ ಚಿಕಿತ್ಸೆ ಕೊಡೋಕೆ ಆಗಲ್ವಾ? ಮಣಿಪಾಲ್‌ಗೆ ಕರೆದುಕೊಂಡು ಹೋಗ್ತಾ ಇದ್ದೀರಾ? ಸರಿ ಹೋಗಿ ಎಂದು ಸುರೇಶ್ ಗೌಡ ಮಾತನಾಡಿರುವ ವೀಡಿಯೋ ರಿಲೀಸ್ ಆಗಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರಕ್ರಿಯೆ ನೀಡಿರುವ ಸುರೇಶ್ ಗೌಡ, ನನಗೆ ಯಾವ ದುರುದ್ದೇಶವಿಲ್ಲ. ನಾನು ಜಗದೀಶ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗುವಾಗ ಅವರ ಕುಟುಂಬಸ್ಥರು ಫೋನ್ ಮಾಡಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾ ಇದ್ದೀವಿ, ನೀವು ನಾಗಮಂಗಲದಲ್ಲಿಯೇ ಇರಿ. ಅಲ್ಲಿ ನಿಲ್ಲಿಸುತ್ತೇವೆ ಎಂದಿದ್ದರು. ಹಾಗೆ ನಾಗಮಂಗಲದಲ್ಲಿ ಅಂಬುಲೆನ್ಸ್ ನಿಲ್ಲಿಸಿದ್ರು. ಬಳಿಕ ನಾನು ಹೋಗಿ ಎಂದಾಗ ಅವರು ಹೋದರು ಎಂದು ತಿಳಿಸಿದರು.  ಇದನ್ನೂ ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಖತರ್ನಾಕ್ ರಾಬರ್ ಕಾಲಿಗೆ ಪೊಲೀಸರ ಗುಂಡೇಟು

    ಜಗದೀಶ್ ಆಸ್ಪತ್ರೆಗೆ ಸೇರಿಸಿದ್ದು ಜೆಡಿಎಸ್ ಕಾರ್ಯಕರ್ತರೆ, ಆತನನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದು ನಮ್ಮ ಕಾರ್ಯಕರ್ತರೆ. ನನಗೆ ಯಾವುದೇ ದುರುದ್ದೇಶವಿಲ್ಲ, ಹಾಗೆ ಏನಾದ್ರು ಇದ್ರೆ ದೊಡ್ಡ ಸರ್ಕಲ್‌ನಲ್ಲಿ ಅದು ಸಿಸಿಟಿವಿ ಇರೋ ಪ್ರದೇಶದಲ್ಲೇ ಏಕೆ ನಿಲ್ಲುತ್ತಿದ್ದೆವು ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರೆಂಟ್ ಬಿಲ್ ಕೇಳಲು ಬಂದ್ರೆ ನನ್ನನ್ನು ಕರೆಯಿರಿ: ಸುರೇಶ್ ಗೌಡ

    ಕರೆಂಟ್ ಬಿಲ್ ಕೇಳಲು ಬಂದ್ರೆ ನನ್ನನ್ನು ಕರೆಯಿರಿ: ಸುರೇಶ್ ಗೌಡ

    – ಕೈ ನಾಯಕರ ಡೈಲಾಗ್ ಹೇಳಿ ಉಚಿತ ಭಾಗ್ಯಗಳನ್ನು ಲೇವಡಿ

    ಮಂಡ್ಯ: ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರ ಡೈಲಾಗ್ ಹೇಳಿ ಕಾಂಗ್ರೆಸ್‌ನ (Congress) ಗ್ಯಾರಂಟಿಗಳ ಬಗ್ಗೆ ಮಂಡ್ಯ ಜಿಲ್ಲೆ ನಾಗಮಂಗಲದ ಜೆಡಿಎಸ್ ಮಾಜಿ ಶಾಸಕ ಸುರೇಶ್‌ಗೌಡ (Suresh Gowda) ಕುಟುಕಿದ್ದಾರೆ.

    ನಾಗಮಂಗದಲ್ಲಿ (Nagamangala) ಮತದಾರರಿಗೆ ಧನ್ಯವಾದ ಹೇಳಲು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಭರವಸೆಗಳನ್ನು ಲೇವಡಿ ಮಾಡಿದ್ದಾರೆ. ಇವತ್ತು ಸುಳ್ಳು ಭರವಸೆ ಮೂಲಕ ಸರ್ಕಾರ ಬಂದಿದೆ. ಯಾರೂ ಕರೆಂಟ್ ಬಿಲ್ ಕಟ್ಟಬೇಡಿ, ಕರೆಂಟ್ ಬಿಲ್ ಕೇಳಲು ಬಂದರೆ ನನ್ನನ್ನು ಕರೆಯಿರಿ. ನಾನು ಬರ್ತೀನಿ. ಮಹಿಳೆಯರಿಗೆ ಫ್ರೀ ಬಸ್, ಬಸ್ ಹತ್ತಿ ಕುಳಿತುಕೊಳ್ಳಿ. ಯಾರೂ ಬಸ್ ಟಿಕೆಟ್ ತೆಗೆದುಕೊಳ್ಳಬೇಡಿ. ನಂಗೂ ಫ್ರೀ, ನಿನಗೂ ಫ್ರೀ, ಮಹದೇವಪ್ಪನಿಗೂ ಫ್ರೀ, ಉಚಿತ, ಖಚಿತ, ನಿಶ್ಚಿತ ಎಂದು ಟೀಕೆ ಮಾಡಿದರು. ಇದನ್ನೂ ಓದಿ: ಅಂದು ನನ್ನ ಒಂದು ದಿನ ಜೈಲಿಗೆ ಹಾಕಿದ್ದಕ್ಕೆ ಇಂದು ನಾನು ಎಂಎಲ್‌ಎ ಆದೆ: ಪ್ರದೀಪ್ ಈಶ್ವರ್

    ರಾಮಲಿಂಗಾ ರೆಡ್ಡಿ (Ramalinga Reddy) ಆ ಖಾತೆಯಲ್ಲಿ ದುಡ್ಡೇ ಬರಲ್ಲ. ನನಗೆ ಸಚಿವ ಸ್ಥಾನ ಬೇಡ, ದಮ್ಮಯ್ಯ ಎನ್ನುತ್ತಿದ್ದಾರೆ. ದುಡ್ಡು ಇಲ್ಲದೆ ಇಂಧನ ಇಲಾಖೆ ಹೇಗೆ ನಡೆಸೋದು ಎನ್ನುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳದ್ದು ಒಂದೇ ಒಂದು ಗುರಿ. ಕಾಂಗ್ರೆಸ್ ಪಕ್ಷಕ್ಕೆ ಎಲ್ಲಿಯೂ ಆದಾಯವಿಲ್ಲ. ಕರ್ನಾಟಕ ರಾಜ್ಯವೇ ಕಾಂಗ್ರೆಸ್‌ಗೆ ಆದಾಯ. ಮುಂದಿನ ಚುನಾವಣೆಗೆ ದುಡ್ಡು ಮಾಡಿಕೊಳ್ಳಬೇಕು. ದೇಶದಲ್ಲಿ ಅಧಿಕಾರ ಹಿಡಿಯಲು ಕರ್ನಾಟಕದ ದುಡ್ಡು ಬೇಕಾಗಿದೆ. ಬಿಜೆಪಿವರದ್ದು (BJP) ಕೂಡ ಅದೇ ದೃಷ್ಟಿ ಇತ್ತು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಗ್ಯಾರಂಟಿಗಳ ಬಗ್ಗೆ ಮಾತನಾಡೋರ ಬಾಯಿ ಮುಚ್ಚುವಂತೆ ಮಾಡ್ತೀವಿ: ಹೆಚ್‌ಕೆ ಪಾಟೀಲ್

  • ಮಂಡ್ಯದಲ್ಲಿ ಆಣೆ ಪ್ರಮಾಣದ ಪಾಲಿಟಿಕ್ಸ್

    ಮಂಡ್ಯದಲ್ಲಿ ಆಣೆ ಪ್ರಮಾಣದ ಪಾಲಿಟಿಕ್ಸ್

    ಮಂಡ್ಯ: ಚುನಾವಣೆ ಬಳಿಕ ಮಂಡ್ಯದಲ್ಲಿ ಆಣೆ ಪ್ರಮಾಣ ಪಾಲಿಟಿಕ್ಸ್ ಮುಂದುವರಿದಿದ್ದು, ನಾಗಮಂಗಲ ಕ್ಷೇತ್ರದ ಜೆಡಿಎಸ್ (JDS) ಪರಾಜಿತ ಅಭ್ಯರ್ಥಿ ಸುರೇಶ್ ಗೌಡ (Suresh Gowda) ರನ್ನು ಆಣೆ ಪ್ರಮಾಣಕ್ಕೆ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಆಹ್ವಾನಿಸಿದ್ದಾರೆ.

    ಕಾಂಗ್ರೆಸ್ (Congress) ಜೊತೆ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದರ ಪರಿಣಾಮ ನನ್ನ ಸೋಲು ಆಯ್ತು ಎಂದು ಸುರೇಶ್ ಗೌಡ ಆರೋಪ ಮಾಡಿದ್ದರಿಂದ ಸುರೇಶ್ ಗೌಡರನ್ನ ಪ್ರಮಾಣಕ್ಕೆ ಎಲ್.ಆರ್.ಶಿವರಾಮೇಗೌಡ ಆಹ್ವಾನ ಮಾಡಿದ್ದಾರೆ. ನಾಗಮಂಗಲ ಕ್ಷೇತ್ರ (Nagamangala Constituency) ದಲ್ಲಿ ಜೆಡಿಎಸ್ ಸೋಲಿಸೋದಕ್ಕೆ ಶಿವರಾಮೇಗೌಡ ಒಳ ಒಪ್ಪಂದ ಮಾಡಿಕೊಂಡಿದ್ರು, ಮೂರು ವರ್ಷದಿಂದ ಕುತಂತ್ರ ನಡೆಯುತ್ತಿತ್ತು. ನನ್ನನ್ನ ಸೋಲಿಸೋದಕ್ಕಾಗಿಯೇ ಶಿವರಾಮೇಗೌಡ್ರು ಪತ್ನಿಯನ್ನ ಬಿಜೆಪಿಯಿಂದ ಕಣಕ್ಕಿಳಿಸಿ ಷಡ್ಯಂತ್ರ ಮಾಡಿ ನನ್ನನ್ನು ಸೋಲಿಸಲಾಯಿತು ಎಂದು ಸುರೇಶ್ ಗೌಡ ಆರೋಪ ಮಾಡಿದ್ದರು.

    ಸುರೇಶ್ ಗೌಡ ಆರೋಪಕ್ಕೆ ಎಲ್.ಆರ್.ಶಿವರಾಮೇಗೌಡ ಕೆಂಡಾಮಂಡಲವಾಗಿದ್ದು, ನಾನು ನಮ್ಮ ಅಪ್ಪನಿಗೆ ಹುಟ್ಟಿರೋದು, ಸುರೇಶ್ ಗೌಡನ ಅಪ್ಪನಿಗಲ್ಲ. ಗೆಲ್ಲೋದಕ್ಕಾಗಿಯೇ ನನ್ನ ಪತ್ನಿಯನ್ನ ಚುನಾವಣೆಯಲ್ಲಿ ಬಿಜೆಪಿ (BJP) ಯಿಂದ ಸ್ಪರ್ಧೆ ಮಾಡಿಸಿದ್ದೆ. ಆದರೆ ಗೆಲ್ಲೋದಕ್ಕೆ ಸಾಧ್ಯವಾಗಲಿಲ್ಲ ಎಂದು ಇದೇ ವೇಳೆ ಶಿವರಾಮೇಗೌಡ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಒಂದು ಕರೆಗೆ ಕರಗಿದ ಕನಕಪುರದ ಬಂಡೆ – ತಡರಾತ್ರಿ ನಡೆದಿದ್ದು ಏನು?

    ಜೆಡಿಎಸ್ ಸೋಲಿಸಲು ನಾನು ಚಲುವರಾಯಸ್ವಾಮಿ ಜೊತೆ ಒಪ್ಪಂದ ಮಾಡಿಕೊಂಡಿಲ್ಲ ಆರೋಪ ಮಾಡಿರುವ ಸುರೇಶ್ ಗೌಡ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ. ನಾನು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ ಪ್ರಮಾಣ ಮಾಡುತ್ತೇನೆ. ಅವರೇ ದಿನಾಂಕವನ್ನ ನಿಗದಿ ಮಾಡಲಿ, ಇಲ್ಲ ನನಗೆ ಹೇಳಿದ್ರೂ ಡೇಟ್ ಫಿಕ್ಸ್ ಮಾಡ್ತೀನಿ. ತಾಕತ್ತಿದ್ರೆ ಆಣೆ ಪ್ರಮಾಣಕ್ಕೆ ಬರಲಿ ಎಂದು ಶಿವರಾಮೇಗೌಡ ಆಹ್ವಾನ ಮಾಡಿದ್ದಾರೆ.