Tag: ಸುರತ್ಕಲ್ ಟೋಲ್ ಗೇಟ್

  • ಸಂಸದರ ಟ್ವೀಟ್‍ಗೆ ಸಿಮೀತವಾದ ಸುರತ್ಕಲ್ ಟೋಲ್ ರದ್ದತಿ – ಮುಂದುವರಿದ ಹಣ ಸಂಗ್ರಹ

    ಸಂಸದರ ಟ್ವೀಟ್‍ಗೆ ಸಿಮೀತವಾದ ಸುರತ್ಕಲ್ ಟೋಲ್ ರದ್ದತಿ – ಮುಂದುವರಿದ ಹಣ ಸಂಗ್ರಹ

    ಮಂಗಳೂರು: ಸುರತ್ಕಲ್ ಟೋಲ್‍ಗೇಟ್ (Surathkal Toll Gate) ರದ್ದಾಗಿದೆ ಆದ್ರೂ ಟೋಲ್ ಸಂಗ್ರಹ ಮಾತ್ರ ಇನ್ನೂ ನಿಂತಿಲ್ಲ. ನಮಗೆ ಸರ್ಕಾರದ ನೋಟಿಫಿಕೇಷನ್ ಕೈಸೇರಿಲ್ಲ ಎನ್ನುತ್ತಿದ್ದಾರೆ ಟೋಲ್‍ಗೇಟ್ ಗುತ್ತಿಗೆದಾರರು.

    ಈ ಟೋಲ್‍ಗೇಟ್ ಹೆಜಮಾಡಿ ಟೋಲ್‍ಗೇಟ್ ಜೊತೆಗೆ ವಿಲೀನಗೊಳ್ಳುತ್ತಿರುವುದರಿಂದ ಜನತೆಗೆ ದುಪ್ಪಟ್ಟು ಬರೆ ಬೀಳುವ ಆತಂಕ ಎದುರಾಗಿದೆ. ಟೋಲ್‍ಗೇಟ್ ವಿಚಾರದಲ್ಲಿ ಈವರೆಗೆ ಒಂದು ಹಂತದ ರಾಜಕೀಯ ಮೇಲಾಟ ನಡೆದಿದ್ರೆ ಇದೀಗ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ವೇದಿಕೆಯಾಗಿದೆ. ಟೋಲ್‍ಗೇಟ್ ರದ್ದಾಯ್ತು ಎನ್ನುವ ಸಂಸದರ ಟ್ವೀಟ್ ನಂಬಿ ಟೋಲ್‍ಗೇಟ್ ರದ್ದಾಯ್ತು ಅಂತಾ ಅಂದ್ಕೊಂಡ್ರೆ ಅಲ್ಲಿ ಟೋಲ್ ಕಲೆಕ್ಷನ್ ಮಾತ್ರ ನಡೆಯುತ್ತಲೇ ಇದೆ. ಯಾಕೆ ಅಂತಾ ಕೇಳಿದ್ರೆ ಸರ್ಕಾರದ ನೋಟಿಫಿಕೇಷನ್ ಟೋಲ್ ಕಂಪನಿಯ ಕೈಸೇರಿಲ್ಲ ಎನ್ನುವ ಉತ್ತರ ಬರ್ತಾ ಇದೆ. ಅಷ್ಟೇ ಅಲ್ಲ, ಈ ಟೋಲ್‍ಗೇಟ್ ಹೆಜಮಾಡಿ ಟೋಲ್ ಜೊತೆ ವಿಲೀನ ಆಗಿರೋದ್ರಿಂದ ಇಲ್ಲಿನ ಹಣವನ್ನೂ ಸೇರಿಸಿ ಪಡೆಯುವ ಸಾಧ್ಯತೆಯಿದ್ದು, ಜನತೆಯ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಈ ವಿಚಾರ ಮತ್ತೆ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಮದ್ರಾಸ್ ಐ ಹಾವಳಿ- ನಿತ್ಯ 100ಕ್ಕೂ ಹೆಚ್ಚು ಮಂದಿಗೆ ವೈರಸ್

    ಹೌದು ಈ ಆತಂಕಕ್ಕೆ ಕಾರಣವಾಗಿರೋದು ಸ್ಥಳೀಯ ಶಾಸಕ ಭರತ್ ಶೆಟ್ಟಿ (Bharath Shetty) ನೀಡಿರುವ ಹೇಳಿಕೆ. ಸರ್ಕಾರದ ನಿಯಮದ ಪ್ರಕಾರ ಹೆಜಮಾಡಿಯಲ್ಲಿ ಸುಂಕ ಜಾಸ್ತಿ ಪಡೆಯಬಹುದು. ಎಷ್ಟು ದರ ಅನ್ನೋದು ನೋಟಿಫಿಕೇಶನ್ ಬಂದ ಬಳಿಕವಷ್ಟೇ ಗೊತ್ತಾಗಲಿದೆ. ಒಂದು ವಾರದಲ್ಲಿ ನೋಟಿಫಿಕೇಶನ್ ಬರುವ ಸಾಧ್ಯತೆಗಳಿವೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಹೇಳಿಕೆ ನೀಡಿದ್ದು, ಇದು ಹೆಜಮಾಡಿ ಟೋಲ್‍ಗೇಟ್‍ನಲ್ಲಿ ದರ ಏರಿಕೆಯಾಗುವ ಮುನ್ಸೂಚನೆ ಎನ್ನಲಾಗಿದೆ. ಈ ಮೂಲಕ ಸುರತ್ಕಲ್ ಟೋಲ್ ರದ್ದಾದರೂ ಜನರಿಗೆ ಉಪಯೋಗವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

    ಈ ನಿರ್ಧಾರವನ್ನು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ (UTKhader) ವಿರೋಧಿಸಿದ್ದಾರೆ. ಟೋಲ್‍ಗೇಟ್‍ನ್ನು ಶಿಫ್ಟ್ ಮಾಡಿದ್ದಾರಷ್ಟೇ. ಎಲ್ಲೂ ಕೂಡ ರದ್ದಾಗಿಲ್ಲ. ಇದನ್ನು ಹೆಜಮಾಡಿ ಟೋಲ್‍ಗೇಟ್ ಜೊತೆಗೆ ಮರ್ಜ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೋರಾಟಕ್ಕೆ ಜಯ – ಕೊನೆಗೂ ಸುರತ್ಕಲ್‌ ಟೋಲ್‌ ಸಂಗ್ರಹ ಕೇಂದ್ರ ರದ್ದು

    ಸುರತ್ಕಲ್‍ನಲ್ಲಿ ಟೋಲ್ ಸಂಗ್ರಹ ಮುಂದುವರೆಸಿದ್ದು, ಒಂದು ವಾರದಲ್ಲಿ ನೋಟಿಫಿಕೇಶನ್ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹೆಜಮಾಡಿ ಟೋಲ್‍ಗೇಟ್‍ನಲ್ಲಿ ದರ ಎಷ್ಟಾಗಬಹುದು ಎನ್ನುವ ಬಗ್ಗೆ ನಿರೀಕ್ಷೆಯಿದ್ದು, ಎಷ್ಟು ದರ ಅನ್ನೋದು ನೋಟಿಫಿಕೇಶನ್ ಬಂದ ಬಳಿಕವಷ್ಟೇ ಗೊತ್ತಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರದ ನೋಟಿಫಿಕೇಶನ್‍ನತ್ತ ಎಲ್ಲರ ಚಿತ್ತ ನೆಟ್ಟಿದೆ.

    Live Tv
    [brid partner=56869869 player=32851 video=960834 autoplay=true]

  • ತುಳುನಾಡಿನ ಜನರನ್ನು ಬೆಸೆಯುವ ಸಾಧನವಾಗಿ ಟೋಲ್ ತೆರವು ಹೋರಾಟ ಪರಿವರ್ತನೆಗೊಂಡಿದೆ: ಶಕುಂತಲಾ ಶೆಟ್ಟಿ

    ತುಳುನಾಡಿನ ಜನರನ್ನು ಬೆಸೆಯುವ ಸಾಧನವಾಗಿ ಟೋಲ್ ತೆರವು ಹೋರಾಟ ಪರಿವರ್ತನೆಗೊಂಡಿದೆ: ಶಕುಂತಲಾ ಶೆಟ್ಟಿ

    ಮಂಗಳೂರು: ಸುರತ್ಕಲ್ ಅಕ್ರಮ ಟೋಲ್ ಗೇಟ್ (Surathkal Toll Gate) ತೆರವಿನ ವಿಚಾರದಲ್ಲಿ ಬಿಜೆಪಿ (BJP) ಸರ್ಕಾರದ ಭಂಡತನ ಅಚ್ಚರಿ ಮೂಡಿಸುತ್ತಿದೆ. ತುಳುನಾಡಿನ ಘಟ್ಟದ ತಪ್ಪಲು ಹಾಗೂ ಸಮುದ್ರ ದಂಡೆಯ ಜನರನ್ನು ಬೆಸೆಯುವ ಸಾಧನವಾಗಿ ಟೋಲ್ ಗೇಟ್ ವಿರೋಧಿ ಹೋರಾಟ ಪರಿವರ್ತನೆಗೊಂಡಿದೆ. ಬಿಜೆಪಿ ಸಂಸದ, ಶಾಸಕರುಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ (Shakunthala Shetty) ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಸುರತ್ಕಲ್ ಟೋಲ್ ಗೇಟ್ ಸಮೀಪ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹಗಲು ರಾತ್ರಿ ಧರಣಿಯ ನಾಲ್ಕನೇ ದಿನದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರಾವಳಿಯ (Karavalli) ಜನ ಸರ್ಕಾರದ ಟೋಲ್ ಸುಲಿಗೆ ನೀತಿಯ ವಿರುದ್ಧ ಆಕ್ರೋಶ ಭರಿತರಾಗಿದ್ದು, ಘಟ್ಟದ ಬದಿಯ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಜನರೂ ಸಮುದ್ರ ದಂಡೆಯ ಸುರತ್ಕಲ್‌ನಲ್ಲಿರುವ ಟೋಲ್ ಗೇಟ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸತೊಡಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯದ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ಪ್ರತಿಭಟನೆಯಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಶಾಸಕರುಗಳಾದ ಅಭಯಚಂದ್ರ ಜೈನ್, ಮೊಯ್ದಿನ್ ಬಾವಾ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ಶಾಲೆಟ್ ಪಿಂಟೊ, ಬಿ.ಕೆ ಇಮ್ತಿಯಾಜ್, ಪುರುಷೋತ್ತಮ ಚಿತ್ರಾಪುರ, ಪ್ರಮೀಳಾ ಶಕ್ತಿನಗರ, ಆಶಾ ಬೋಳೂರು, ಶ್ರೀನಾಥ್ ಕುಲಾಲ್, ರಮೇಶ್ ಟಿ ಎನ್, ರಾಜೇಶ್ ಪೂಜಾರಿ, ಡಾ ರಾಜಾರಾಮ್ ಉಪ್ಪಿನಂಗಡಿ, ಮುಹಮ್ಮದ್ ಕುಂಜತ್ತಬೈಲ್, ಆನಂದ ಅಮೀನ್, ಅಕ್ಬರ್ ಅಲಿ ಮುಕ್ಕ, ಹರೀಶ್ ಪೇಜಾವರ, ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

    Live Tv
    [brid partner=56869869 player=32851 video=960834 autoplay=true]

  • ಸುರತ್ಕಲ್ ಟೋಲ್ ಗೇಟ್ ಕಿತ್ತೆಸೆಯುತ್ತೇವೆ ಎಂದ ಹೋರಾಟಗಾರಿಗೆ ಬಿಸಿ ಮುಟ್ಟಿಸಿದ ಪೊಲೀಸರು

    ಸುರತ್ಕಲ್ ಟೋಲ್ ಗೇಟ್ ಕಿತ್ತೆಸೆಯುತ್ತೇವೆ ಎಂದ ಹೋರಾಟಗಾರಿಗೆ ಬಿಸಿ ಮುಟ್ಟಿಸಿದ ಪೊಲೀಸರು

    ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಟೋಲ್ ಗೇಟ್ (Surathkal Toll Gate) ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ಹೋರಾಟಗಾರರಿಗೆ ಪೊಲೀಸರು (Police) ಮಧ್ಯ ರಾತ್ರಿ ಬಿಸಿ ಮುಟ್ಟಿಸಿದ್ದಾರೆ.

    ಸುರತ್ಕಲ್‍ನ ಎನ್‍ಐಟಿಕೆ (NITK) ಬಳಿ ಇರುವ ಟೋಲ್ ಗೇಟ್ ಅಕ್ರಮವಾಗಿ ಇದೆ ಅದನ್ನು ತೆರವುಗೊಳಿಸಬೇಕೆಂದು ಸಾಕಷ್ಟು ಹೋರಾಟಗಳು ನಡೆದಿತ್ತು. ಆದ್ರೆ ಈವರೆಗೂ ಅಧಿಕಾರಿಗಳು ಹಾಗೂ ರಾಜಕಾರಣಿಗಳು ತೆರವಿಗೆ ಪ್ರಯತ್ನಪಟ್ಟಿಲ್ಲ. ಹೀಗಾಗಿ ಅಕ್ಟೋಬರ್ 18 ರಂದು ಸಾವಿರಾರು ಸಂಖ್ಯೆಯಲ್ಲಿ ಹೋರಾಟಗಾರರೇ ಬೃಹತ್ ಪ್ರತಿಭಟನೆಯ (Protesters)  ಮೂಲಕ ಟೋಲ್ ಗೇಟನ್ನು ಕಿತ್ತು ಬಿಸಾಡೋದಾಗಿ ಈಗಾಗಲೇ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಪ್ರಮುಖ ಹೋರಾಟಗಾರರ ಮನೆಗೆ ಮಧ್ಯ ರಾತ್ರಿ ದಾಳಿ ನಡೆಸಿದ ಪೊಲೀಸರು ಎಲ್ಲರಿಗೂ ನೋಟಿಸ್ ನೀಡಿದ್ದಾರೆ. ಹೋರಾಟ ಕೈಬಿಡಬೇಕೆಂದು ನೋಟಿಸ್ ನೀಡಿ ಎರಡು ಲಕ್ಷ ಬಾಂಡ್, ಸರ್ಕಾರಿ ಅಧಿಕಾರಿಯ ಜಾಮೀನು ಸೇರಿ ಮುಚ್ಚಳಿಕೆ ಬರೆದು ಕೊಡಲು ತಾಕೀತು ಮಾಡಲಾಗಿದೆ. ಇದನ್ನೂ ಓದಿ: ಗ್ರಾಮ ವಾಸ್ತವ್ಯದಿಂದ 17 ಸಾವಿರ ಜನರಿಗೆ ಅನುಕೂಲವಾಗಿದೆ: ಆರ್.ಅಶೋಕ್

    ಈ ನಡುವೆ ನೋಟಿಸನ್ನು ಕೆಲ ಹೋರಾಟಗಾರರು ಪಡೆಯಲಿಲ್ಲ. ನೋಟಿಸ್ ಪಡೆದ ಹೋರಾಟಗಾರರೂ ಬಾಂಡ್ ಇಡೋದಿಲ್ಲ ಎಂದಿದ್ದು, ಅಕ್ಟೋಬರ್ 18 ರಂದು ಟೋಲ್ ಗೇಟ್‌ನ್ನು ತೆರವುಗೊಳಿಸಿಯೇ ಸಿದ್ಧ ಎಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹೋರಾಟವನ್ನು ಧಮನಿಸುವ ಕೆಲಸ ಮಾಡುವ ಜಿಲ್ಲಾಡಳಿತ ಕ್ರಮ ಖಂಡನೀಯ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ, ಹಾಸನಾಂಬೆ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ಮಕ್ಕಳು ಸೇರಿ 9 ಮಂದಿ ದುರ್ಮರಣ

    Live Tv
    [brid partner=56869869 player=32851 video=960834 autoplay=true]