Tag: ಸುರಕ್ಷ ಆ್ಯಪ್

  • ಪಿಂಕ್ ಹೊಯ್ಸಳ, ಸುರಕ್ಷ ಆ್ಯಪ್ ಬಂದ ಒಂದೇ ದಿನಕ್ಕೆ ಎಷ್ಟು ದೂರುಗಳು ದಾಖಲಾದ್ವು ಗೊತ್ತಾ?

    ಪಿಂಕ್ ಹೊಯ್ಸಳ, ಸುರಕ್ಷ ಆ್ಯಪ್ ಬಂದ ಒಂದೇ ದಿನಕ್ಕೆ ಎಷ್ಟು ದೂರುಗಳು ದಾಖಲಾದ್ವು ಗೊತ್ತಾ?

    ಬೆಂಗಳೂರು: ನಗರದಲ್ಲಿ ಮಹಿಳೆಯರ ಸುರಕ್ಷತೆಗಾಗಿಯೇ ನಿಯೋಜಿಸಲಾಗಿರುವ ಪಿಂಕ್ ಹೊಯ್ಸಳ ಹಾಗೂ ಸುರಕ್ಷ ಆ್ಯಪ್‍ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

    ಉದ್ಘಾಟನೆಯಾದ ಒಂದೇ ದಿನದಲ್ಲಿ ಸುರಕ್ಷ ಆ್ಯಪ್ ನಲ್ಲಿ 600ಕ್ಕೂ ಹೆಚ್ಚು ಮಹಿಳೆಯರಿಂದ ದೂರು ದಾಖಲಾಗಿದೆ. ಇನ್ನು ಪಿಂಕ್ ಹೊಯ್ಸಳ ವಾಹನಕ್ಕೆ 35ಕ್ಕೂ ಹೆಚ್ಚು ಕರೆಗಳು ಬಂದಿವೆ. ಕಂಟ್ರೋಲ್ ರೂಂಗೆ ಹೆಣ್ಣು ಮಕ್ಕಳಿಂದ ನಿರಂತರವಾಗಿ ದೂರು ಬರ್ತಿದೆ. ನನ್ನನ್ನ ಚುಡಾಯಿಸಿದ್ರು, ಗುರಾಯಿಸಿದ್ರು, ನನ್ನನ್ನ ಫಾಲೋ ಮಾಡಿದ್ರು, ನನಗೆ ಅಶ್ಲೀಲ ಎಸ್‍ಎಂಎಸ್ ಕಳಿಸ್ತಿದ್ದಾರೆ, ನನಗೆ ಕಚೇರಿಯಲ್ಲಿ ಟಾರ್ಚರ್ ಹೀಗೆ ಒಂದಲ್ಲ ಎರಡಲ್ಲ ಹತ್ತಾರು, ನೂರಾರು ಕಾರಣ ನೀಡಿ ದೂರು ದಾಖಲಾಗ್ತಿವೆ.

    ಸೋಮವಾರದಂದು ವಿಧಾನಸೌಧದ ಆವರಣದಲ್ಲಿ ಸಿಎಂ ಸದ್ದರಾಮಯ್ಯ ಪಿಂಕ್ ಹೊಯ್ಸಳ ವಾಹನಗಳು ಹಾಗೂ ಸುರಕ್ಷ ಆ್ಯಪ್ ಲೋಕಾರ್ಪಣೆ ಮಾಡಿದ್ದರು.

    ಸೇವೆ ಹೇಗೆ?: ಮಹಿಳೆಯರ ರಕ್ಷಣೆಗೆಂದೇ ಇರುವ ಪಿಂಕ್ ಹೊಯ್ಸಳ ವಾಹನದ ಸೇವೆ ಪಡೆಯಲು ಮೊದಲು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಐ ಟ್ಯೂನ್ ಸ್ಟೋರ್‍ನಿಂದ `ಸುರಕ್ಷ’ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಈ ವಾಹನದ ಅಗತ್ಯ ಬಿದ್ದಲ್ಲಿ ಆ್ಯಪ್‍ನಲ್ಲಿರೋ ಬಟನ್ ಒತ್ತಬೇಕು. ಈ ರೀತಿ ಮಾಡಿದ 15 ನಿಮಿಷದಲ್ಲಿ ಪಿಂಕ್ ಹೊಯ್ಸಳ ಸ್ಥಳಕ್ಕೆ ಬರಲಿದೆ. ಪ್ರತಿ ವಾಹನದಲ್ಲಿ ಮೂರು ಮಹಿಳಾ ಪೊಲೀಸರು ಇರುತ್ತಾರೆ. ಶಾಲೆ, ಮಹಿಳಾ ಕಾಲೇಜುಗಳು, ಆಫೀಸ್‍ಗಳು, ದೇವಸ್ಥಾನ, ಶಾಪಿಂಗ್ ಮಾಲ್, ಚಿತ್ರಮಂದಿರಗಳ ಬಳಿ ಈ ವಾಹನಗಳನ್ನ ನಿಯೋಜಿಸಲಾಗಿರುತ್ತದೆ. ವಿಶೇಷ ತರಬೇತಿ ಪಡೆದ ಸಿಬ್ಬಂದಿ, ಪೊಲೀಸ್ ಕಂಟ್ರೋಲ್ ರೂಮ್ 100 ಹಾಗೂ ಸುರಕ್ಷ ಆ್ಯಪ್ ಮೂಲಕ ಸ್ವೀಕರಿಸಿದ ದೂರಿನ ಆಧಾರದ ಮೇಲೆ ಕಾರ್ಯ ನಿರ್ವಹಿಸಲಿದ್ದಾರೆ. ಪೊಲೀಸ್ ಕಂಟ್ರೋಲ್ ರೂಮಿಗೆ ಯಾವುದಾದ್ರೂ ದೂರು ಬಂದ್ರೆ ಆ ಸ್ಥಳಕ್ಕೆ ಹತ್ತಿರವಿರುವ ಹೊಯ್ಸಳ ವಾಹನಕ್ಕೆ ಮಾಹಿತಿ ನೀಡಿ ಅಲ್ಲಿಗೆ ಹೋಗುವಂತೆ ಸೂಚಿಸಲಾಗುತ್ತದೆ. ಹೊಯ್ಸಳದಲ್ಲಿ ಜಿಪಿಎಸ್ ಹಾಗೂ ಕ್ಯಾಮೆರಾ ಅಳವಡಿಸಲಾಗಿರುತ್ತದೆ. ಕ್ಯಾಮೆರಾ ದೃಶ್ಯಾವಳಿಗಳನ್ನ ಪೊಲೀಸ್ ಕಂಟ್ರೋಲ್ ರೂಮಿನ ಸಿಬ್ಬಂದಿ ನಿರ್ವಹಣೆ ಮಾಡ್ತಾರೆ.

    ಈ ಹಿಂದೆ ಮಹಿಳೆಯರಿಗೆ ಸಂಬಂಧಿಸಿದ ತಂದರೆಗಳಿಗೆ ಸ್ಪಂದಿಸಲು ನಗರದ ಪೊಲೀಸರ ಬಳಿ 7 ಅಭಯ ವಾಹನಗಳು ಇದ್ದವು. ಇದೀಗ ಅಭಯ ವಾಹನಗಳ ಬದಲಾಗಿ ಪಿಂಕ್ ಹೊಯ್ಸಳ ವಾಹನಗಳು ಕಾರ್ಯ ನಿರ್ವಹಿಸಲಿವೆ.

    ಸುರಕ್ಷಾ ಆಪ್ “ಪಿಂಕ್ ಹೊಯ್ಸಳ’ದೊಂದಿಗೆ ಲಿಂಕ್ ಆಗಿದೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಉದ್ದೇಶದಿಂದಲೇ 51 ಪಿಂಕ್ ಹೊಯ್ಸಳ ವಾಹನಗಳು ನಗರಾದ್ಯಂತ ಗಸ್ತು ತಿರುಗಲಿವೆ. ಒಟ್ಟಾರೆ 272 ಹೊಯ್ಸಳ ವಾಹನಗಳು ಸಂಚರಿಸಲಿವೆ. ಈ ವಾಹನದಲ್ಲಿ ಮೊಬೈಲ್ ಡೆಟಾ ಟರ್ಮಿನಲ್(ಮಾರ್ಗ ತೋರಿಸುವ ವ್ಯವಸ್ಥೆ), ವೈರ್‍ಲೆಸ್, ಅಗ್ನಿನಂದಕ, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಸ್ಟಾಂಡರ್ಡ್ ಆಪರೇಟರ್ ಪ್ರೊಸೀಜರ್ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಈ ವಾಹನದಲ್ಲಿ ಅಳವಡಿಸಲಾಗಿದೆ. ಜೊತೆಗೆ ಈ ವಾಹನದಲ್ಲಿ ಪುರುಷ ಚಾಲಕ(ಕಾನ್‍ಸ್ಟೆಬಲ್), ಮಹಿಳಾ ಹೆಡ್ ಕಾನ್‍ಸ್ಟೆಬಲ್ ಅಥವಾ ಕಾನ್‍ಸ್ಟೆಬಲ್ ಹಾಗೂ ಒಬ್ಬ ಮಹಿಳಾ ಎಎಸ್‍ಐ ಇರಲಿದ್ದಾರೆ.