Tag: ಸುರಕ್ಷತೆ

  • 8 ಪ್ರಯಾಣಿಕರ ವಾಹನದಲ್ಲಿ 6 ಏರ್‌ಬ್ಯಾಗ್‌ ಕಡ್ಡಾಯ

    8 ಪ್ರಯಾಣಿಕರ ವಾಹನದಲ್ಲಿ 6 ಏರ್‌ಬ್ಯಾಗ್‌ ಕಡ್ಡಾಯ

    ನವದೆಹಲಿ: 8 ಪ್ರಯಾಣಿಕರು ಪ್ರಯಾಣಿಸಬಹುದಾದ ವಾಹನದಲ್ಲಿ ಉತ್ಪಾದಕರು ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಒದಗಿಸಬೇಕೆಂಬ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ.

    8 ಪ್ರಯಾಣಿಕರನ್ನು ಸಾಗಿಸುವ ಮೋಟಾರು ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಈಗ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಕರಡು ನಿಯಮನ್ನು ನಾನು ಅನುಮೋದಿಸಿದ್ದೇನೆ ಎಂದು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

    ಏರ್‌ಬ್ಯಾಗ್‌ ಕಡ್ಡಾಯಗೊಳಿಸಿದ್ದರಿಂದ ವಾಹನಗಳ ಬೆಲೆ 8-10 ಸಾವಿರ ರೂ. ಏರಿಕೆಯಾಗುವ ಸಾಧ್ಯತೆಯಿದೆ. ಈ ವರ್ಷದ ಅಕ್ಟೋಬರ್‌ನಿಂದಲೇ ಇದು ಜಾರಿಗೆ ಬರುವ ಸಾಧ್ಯತೆಯಿದೆ. ಇದನ್ನೂ ಓದಿ: 3 ಲಕ್ಷ ರೂ. ಗೆ ಹೆತ್ತ ಮಗುವನ್ನೇ ಮಾರಿದ ದಂಪತಿ ಅರೆಸ್ಟ್

    ಜುಲೈ 1, 2019 ರಿಂದ ಡ್ರೈವರ್ ಏರ್‌ಬ್ಯಾಗ್ ಮತ್ತು ಜನವರಿ 1, 2022 ರಿಂದ ಮುಂಭಾಗದ ಸಹ ಪ್ರಯಾಣಿಕನ ಏರ್‌ಬ್ಯಾಗ್‌ ಅನ್ನು ಸರ್ಕಾರ ಈಗಾಗಲೇ ಕಡ್ಡಾಯಗೊಳಿಸಿದೆ. ಈಗ ಎಂ1 ವಾಹನದ ಮುಂಭಾಗ ಮತ್ತು ಹಿಂಭಾಗದ ಎರಡೂ ವಿಭಾಗಗಳಲ್ಲಿ ಕುಳಿತಿರುವ ಪ್ರಯಾಣಿಕರಿಗೆ ನಾಲ್ಕು ಹೆಚ್ಚುವರಿ ಏರ್‌ಬ್ಯಾಗ್‌ ಕಡ್ಡಾಯಗೊಳಿಸಲಾಗಿದೆ. ಇದನ್ನೂ ಓದಿ: ರಾವತ್ ಹೆಲಿಕಾಪ್ಟರ್ ಪತನಕ್ಕೆ ಮೋಡ ಕಾರಣ: ಭಾರತೀಯ ವಾಯುಪಡೆ

    ಸುರಕ್ಷತಾ ವೈಶಿಷ್ಟ್ಯಗಳ ವಿಷಯ ಬಂದಾಗ ಜಾಗತಿಕ ಕಂಪನಿಗಳ ಕಾರಿಗೆ ಹೋಲಿಸಿದರೆ ಭಾರತದ ಕಂಪನಿಗಳ ಕಾರು ಹಿಂದೆ ಉಳಿದಿವೆ. ಜಾಗತಿಕ ಕಂಪನಿಗಳು ಬೇರೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ವೇಳೆ ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುವುದಿಲ್ಲ.

    ಬಡವರು ಖರೀದಿಸುವ ಸಣ್ಣ ಕಾರುಗಳಲ್ಲಿ ಏರ್‌ಬ್ಯಾಗ್‌ ಇರುವುದಿಲ್ಲ. ಆದರೆ ಶ್ರೀಮಂತರು ಖರೀದಿಸುವ ಕಾರುಗಳಲ್ಲಿ ಏರ್‌ಬ್ಯಾಗ್‌ ನೀಡಲಾಗುತ್ತದೆ. ಈ ರೀತಿಯ ತಾರತಮ್ಯ ಯಾಕೆ ಎಂದು ಸಚಿವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

  • ಈ ತಂತ್ರ ಅಳವಡಿಸಿಕೊಂಡ್ರೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಯತ್ನ ತಡೆಯಬಹುದು – ವಿಡಿಯೋ

    ಈ ತಂತ್ರ ಅಳವಡಿಸಿಕೊಂಡ್ರೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಯತ್ನ ತಡೆಯಬಹುದು – ವಿಡಿಯೋ

    ಬೆಂಗಳೂರು: ನಾಗಸಂದ್ರ-ಯಲಚೇನಹಳ್ಳಿ ಮಧ್ಯೆ ಸಂಚರಿಸುವ ಹಸಿರು ಮೆಟ್ರೋದ ಇತಿಹಾಸದಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಇನ್ನಾದರೂ ನಮ್ಮ ಮೆಟ್ರೋ ಹೆಚ್ಚಿನ ಸುರಕ್ಷತೆಗಳನ್ನು ಅಳವಡಿಸಿಕೊಂಡರೆ ಈ ರೀತಿಯ ಆತ್ಮಹತ್ಯೆ ಯತ್ನಗಳನ್ನು ತಡೆಯಬಹುದು.

    ಹೌದು. ಪ್ರಸ್ತುತ ಮೆಟ್ರೋ ರೈಲು ಬರುವಾಗ ಸಿಬ್ಬಂದಿ ಮುಂದಕ್ಕೆ ಹೋಗಬೇಡಿ ಎಂದು ತಡೆಯುತ್ತಾರೆ. ಆದರೆ ರೈಲು ಹತ್ತಿರ ಬರುತ್ತಿದ್ದಾಗ ಏಕಾಏಕಿ ಹಾರಿದರೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದರೆ ಮೆಟ್ರೋ ನಿಗಮಗಳು ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಹಣ ಖರ್ಚು ಮಾಡಿದರೆ ಸಂಭವಿಸಬಹುದಾಗಿರುವ ಅವಘಡಗಳನ್ನು ತಪ್ಪಿಸಬಹುದು.

    ಏನು ಮಾಡಬಹುದು?:
    ವಿದೇಶಗಳಲ್ಲಿರುವ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತುವ ಜಾಗವನ್ನು ಗ್ಲಾಸ್ ಗೋಡೆಗಳಿಂದ ಮುಚ್ಚಲಾಗುತ್ತದೆ. ರೈಲು ಬಂದಾಗ ಗ್ಲಾಸ್ ಗಳ ಮಧ್ಯೆ ಎಲ್ಲಿ ಡೋರ್ ಇರುತ್ತದೋ ಅಲ್ಲೇ ನಿಲ್ಲುತ್ತದೆ. ರೈಲು ನಿಂತ ಬಳಿಕ ಸೆನ್ಸರ್ ಇರುವ ಡೋರ್ ಓಪನ್ ಆಗುತ್ತದೆ. ಹೊರಡುವ ವೇಳೆ ಗ್ಲಾಸ್ ಡೋರ್ ಮತ್ತು ರೈಲಿನ ಡೋರ್ ಮುಚ್ಚಿಕೊಳ್ಳುತ್ತದೆ. ಈ ರೀತಿಯಾಗಿ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಿದರೆ ಮುಂದೆ ಆತ್ಮಹತ್ಯೆ ಯತ್ನದಂತಹ ಪ್ರಕರಣಗಳನ್ನು ತಡೆಯಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv