Tag: ಸುರಂಗ ಮಾರ್ಗ

  • ಡಿಕೆಶಿ ಕನಸಿನ ಕೂಸು ಟನಲ್‌ ರಸ್ತೆ ಯೋಜನೆಗೆ ವಿಘ್ನ – ಡಿಪಿಆರ್‌ನಲ್ಲಿ ಲೋಪದೋಷ ಪತ್ತೆ

    ಡಿಕೆಶಿ ಕನಸಿನ ಕೂಸು ಟನಲ್‌ ರಸ್ತೆ ಯೋಜನೆಗೆ ವಿಘ್ನ – ಡಿಪಿಆರ್‌ನಲ್ಲಿ ಲೋಪದೋಷ ಪತ್ತೆ

    – ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯಿಂದಲೇ ಲೋಪದೋಷ ಪತ್ತೆ; ವರದಿ ಸಲ್ಲಿಕೆ
    – ಕನಿಷ್ಠ 25 ವರ್ಷಕ್ಕೆ ಯೋಜನೆ ರೂಪಿಸಬೇಕು, 10 ವರ್ಷಕ್ಕಲ್ಲ ಅಂತ ಎಚ್ಚರಿಕೆ

    ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಸಿನ ಕೂಸು ಟನಲ್ ರಸ್ತೆ ಡಿಪಿಆರ್‌ನಲ್ಲಿ ಲೋಪದೋಷ ಕಂಡುಬಂದಿದೆ. ಹೀಗಾಗಿ ಆರಂಭದಲ್ಲೇ ಯೋಜನೆಗೆ ವಿಘ್ನ ಎದುರಾಯ್ತಾ? ಅನ್ನೋ ಪ್ರಶ್ನೆಯೂ ಎದ್ದಿದೆ.

    ಹೌದು. ಟನಲ್ ಡಿಪಿಆರ್ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರವೇ ನಗರಾಭಿವೃದ್ಧಿ ಇಲಾಖೆಯ ಐವರ ತಜ್ಞರ ಸಮಿತಿ ರಚನೆ ಮಾಡಿತ್ತು. ಈಗ ಆ ಸಮಿತಿಯೇ ಡಿಪಿಆರ್‌ನಲ್ಲಿ ಇರುವ ಲೋಪದೋಷಗಳನ್ನ ಪತ್ತೆಹಚ್ಚಿದೆ.

    ತರಾತುರಿಯಲ್ಲಿ ಡಿಪಿಆರ್ ತಯಾರಿಕೆ ಮಾಡಿದ್ದಾರೆ ಎಂದು ಹೇಳಿರುವ ಸಮಿತಿ ಟನಲ್ ದೊಡ್ಡ ಯೋಜನೆ ಕೇವಲ 4 ಕಡೆ ಮಾತ್ರ ಮಣ್ಣಿನ ಪರೀಕ್ಷೆ ಇದು ಸಾಕಾಗಲ್ಲ ಎಂದು ತಿಳಿಸಿದೆ. ಹೆಬ್ಬಾಳ – ಸಿಲ್ಕ್ ಬೋರ್ಡ್‌ಗೆ ರೆಡ್‌ಲೈನ್ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಏಕೆ? ಲಾಲ್ ಬಾಗ್ ಬಳಿ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಯಾಕೆ ಅಂತಲೂ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ? ಹೀಗಾಗಿ ರಾಜ್ಯ ಸರ್ಕಾರದ ಮುಂದಿನ ನಡೆ ಏನು ಅನ್ನೋದನ್ನ ಕಾದುನೋಡಬೇಕಿದೆ.

    ಟನಲ್ ಡಿಪಿಆರ್‌ನಲ್ಲಿ ಲೋಪದೋಷ – ತಜ್ಞರ ವರದಿಯಲ್ಲೇನಿದೆ?
    * ಟನಲ್ ದೊಡ್ಡ ಯೋಜನೆ, 4 ಕಡೆ ಮಾತ್ರ ಮಣ್ಣಿನ ಪರೀಕ್ಷೆ ಸಾಕಾಗಲ್ಲ
    * ಹೆಬ್ಬಾಳ-ಸಿಲ್ಕ್ ಬೋರ್ಡ್‌ಗೆ ರೆಡ್‌ಲೈನ್ ಮೆಟ್ರೋ ಇದ್ರೆ ಟನಲ್ ಏಕೆ..?
    * ಲಾಲ್‌ಬಾಗ್ ಬಳಿ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಯಾಕೆ..?
    * ಪೀಕ್ ಅವರ್ ಟ್ರಾಫಿಕ್ ಗಣನೆಗೆ ತೆಗೆದುಕೊಂಡಿಲ್ಲ
    * ಕನಿಷ್ಠ 25 ವರ್ಷಕ್ಕೆ ಯೋಜನೆ ರೂಪಿಸಬೇಕು, 10 ವರ್ಷಕ್ಕಲ್ಲ
    * ಪಾದಚಾರಿ, ಒಳಚರಂಡಿ, ನೈಸರ್ಗಿಕ ವಿಪತ್ತು ನಿರ್ವಹಣೆ ಬಗ್ಗೆ ಉಲ್ಲೇಖ
    * ಬಿಎಂಟಿಸಿ, ಮೆಟ್ರೋ, ಉಪನಗರ ರೈಲುಗಳಿಗೆ ಅನಾನುಕೂಲದ ಮಾಹಿತಿ ಇಲ್ಲ
    * ಸುರಂಗ ರಸ್ತೆ, ಪರಿಸರ ಕಾಳಜಿ, ಸಾರಿಗೆ ವ್ಯವಸ್ಥೆ ನಿರ್ವಹಣೆ ಉಲ್ಲೇಖಿಸಿಲ್ಲ
    * ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಜಿಬಿಎಯಿಂದ ಡಿಪಿಆರ್
    * ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಪರಿಶೀಲನೆ ನಡೆಸಿಲ್ಲ.

    ಏನಿದು ಯೋಜನೆ?
    ಹೆಬ್ಬಾಳದಿಂದ-ಸಿಲ್ಕ್ ಬೋರ್ಡ್‌ ವರೆಗೆ 18 ಸಾವಿರ ಕೋಟಿ ರೂ. ವೆಚ್ಚದಲ್ಲಿ 19 ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ಡಿಪಿಆರ್‌ ಕೂಡ ರಚನೆ ಮಾಡಲಾಗಿದೆ. ಸುರಂಗ ಮಾರ್ಗದಿಂದ ಲಾಲ್‌ಬಾಗ್‌ಗೂ ಹಾನಿಯಾಗುವ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕರ ವಿರೋಧ, ಡಿಪಿಆರ್ ಲೋಪದೋಷಗಳನ್ನ ಗಮನದಲ್ಲಿಟ್ಟುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ ತಜ್ಞರ ಸಮಿತಿ

  • Bengaluru | ಸುರಂಗ ಮಾರ್ಗಕ್ಕೆ ಶೀಘ್ರದಲ್ಲೇ ಟೆಂಡರ್: ಡಿಕೆಶಿ

    Bengaluru | ಸುರಂಗ ಮಾರ್ಗಕ್ಕೆ ಶೀಘ್ರದಲ್ಲೇ ಟೆಂಡರ್: ಡಿಕೆಶಿ

    ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನ ಎರಡು ಹಂತದ ಸುರಂಗ ರಸ್ತೆ (Tunnel Road) ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಮೊದಲ ಹಂತದ ಯೋಜನೆಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದರು.

    ಬೆಂಗಳೂರಲ್ಲಿ ಸುರಂಗ ರಸ್ತೆ ನಿರ್ಮಾಣ ಹಾಗೂ ಮಂಡ್ಯದ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ನಡೆಸುವ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ಬೆಂಗಳೂರಿನ ಸುರಂಗ ರಸ್ತೆಯ ಪ್ರವೇಶ ಹಾಗೂ ನಿರ್ಗಮನದ ಭಾಗದಲ್ಲಿ ಸಂಚಾರ ದಟ್ಟಣೆ ಆಗಬಾರದು ಎಂಬ ಉದ್ದೇಶದಿಂದ ಈ ಯೋಜನೆಗೆ ಟೆಂಡರ್ ಕರೆಯುವ ಮುನ್ನ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳು, ಪೊಲೀಸ್ ಇಲಾಖೆಯ ಡಿಜಿಪಿ, ಐಜಿಪಿ ಮತ್ತು ಸಂಚಾರಿ ಪೊಲೀಸ್ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಯಾದಗಿರಿ ಕಾಂಗ್ರೆಸ್ ಕಚೇರಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು – ಸೋಫಾ, ಎಸಿ ಎಲ್ಲವೂ ಭಸ್ಮ

    ವಿಧಾನಸೌಧದ ಒಂದು ಕಿ.ಮೀ ಸುತ್ತಮುತ್ತ ಎಲ್ಲೂ ನಿರ್ಗಮನಕ್ಕೆ ಅವಕಾಶ ಕಲ್ಪಿಸುವುದಿಲ್ಲ. ಇಲ್ಲಿ ಟ್ರಾಫಿಕ್ ಜಾಮ್ ಆದರೆ ಎಲ್ಲಾಕಡೆ ಆಗುತ್ತದೆ. ಹೀಗಾಗಿ ಇದನ್ನು ಪರಿಶೀಲಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಾನು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಜಿಬಿಎ ಮುಖ್ಯ ಆಡಳಿತಾಧಿಕಾರಿಗಳು ಈ ಸಭೆ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: Davanagere | ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿ – 40ಕ್ಕೂ ಹೆಚ್ಚು ಮಂದಿಗೆ ಗಾಯ

    ಇನ್ನು ಬೆಂಗಳೂರಿನಲ್ಲಿ 114 ಕಿ.ಮೀ ಎಲಿವೆಟೆಡ್ ಕಾರಿಡಾರ್ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದು, ಈ ಯೋಜನೆ ಸಂಬಂಧ ಸಂಚಾರ ಪೊಲೀಸ್ ಅಧಿಕಾರಿಗಳ ಅಭಿಪ್ರಾಯ ಪಡೆಯಲಾಗಿದೆ ಎಂದರು. ಇದನ್ನೂ ಓದಿ: ಚಾ.ನಗರ| ಈ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟವಾಡಿದ್ರೆ 50,000 ದಂಡ – ಮಾಹಿತಿ ಕೊಟ್ಟವರಿಗೆ 10,000 ಬಹುಮಾನ

  • ಶಿರಾಡಿಯಲ್ಲಿ ಸುರಂಗ ಮಾರ್ಗ – ಡಿಪಿಆರ್‌ ತಯಾರಿಸಲು ಕೇಂದ್ರ ಒಪ್ಪಿಗೆ

    ಶಿರಾಡಿಯಲ್ಲಿ ಸುರಂಗ ಮಾರ್ಗ – ಡಿಪಿಆರ್‌ ತಯಾರಿಸಲು ಕೇಂದ್ರ ಒಪ್ಪಿಗೆ

    ನವದೆಹಲಿ: ಮಂಗಳೂರು-ಬೆಂಗಳೂರು (Mangaluru-Bengaluru) ಸಂಪರ್ಕಿಸುವ ಶಿರಾಡಿ ಘಾಟ್‌ನಲ್ಲಿ (Shiradi Ghat) ಸುರಂಗ, ಗ್ರೀನ್‌ಫೀಲ್ಡ್ ಮಾರ್ಗ ನಿರ್ಮಾಣ ಸಂಬಂಧ ಸಮಗ್ರ ಯೋಜನಾ ವರದಿ(DPR) ತಯಾರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

    ಸುರಂಗ (Tunnel Project) ನಿರ್ಮಾಣಕ್ಕೆ ಭಾರಿ ಮೊತ್ತ ಬೇಕಾಗುತ್ತದೆ. ಜೊತೆಗೆ ಇದು ಕಾರ್ಯಸಾಧು ಅಲ್ಲ ಎಂದು 2022ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ಉತ್ತರ ನೀಡಿದ್ದರು. ಆದರೆ ಸುರಂಗ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ 3 ಬಾರಿ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಈ ಮನವಿಯ ಬೆನ್ನಲ್ಲೇ ಡಿಪಿಆರ್ ತಯಾರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದನ್ನೂ ಓದಿ: ಇನ್ನು ಮುಂದೆ 5, 8ನೇ ಕ್ಲಾಸ್‌ನಲ್ಲಿ ವಿದ್ಯಾರ್ಥಿಯನ್ನು ಫೇಲ್‌ ಮಾಡಬಹುದು

    ಏನಿದು ಸುರಂಗ ಮಾರ್ಗ?
    ಒಟ್ಟು 30 ಕಿಲೋಮೀಟರ್ ಉದ್ದದ ಯೋಜನೆ ಇದಾಗಿದ್ದು 3.8 ಕಿಲೋಮೀಟರ್ ಸುರಂಗ ಇದ್ದರೆ, 10 ಕಿ.ಮೀ ವಯಡಕ್ಟ್‌ ಇರಲಿದೆ. ಮಾರೇನಹಳ್ಳಿಯಿಂದ ಪ್ರಾರಂಭವಾಗಿ ಅಡ್ಡಹೊಳೆಯವರೆಗೆ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಇಲ್ಲಿ ಬಹಳಷ್ಟು ಅರಣ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ವಿವರವಾದ ಅಂದಾಜು ಮಾಡಬೇಕಿದೆ ಎಂದು ಹಿಂದೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದರು.

    ಕರ್ನಾಟಕ ಸರ್ಕಾರವು ಅಲ್ಪ ಪ್ರಮಾಣದ ಅರಣ್ಯ ಭೂಮಿ ನೀಡಲು ಸಿದ್ಧವಿದ್ದರೆ ಶಿರಾಡಿ ಘಾಟ್‌ ರಸ್ತೆಯನ್ನು ಅಭಿವೃದ್ಧಿಪಡಿಸಲು ಕೆಲವು ಸಾವಿರ ಕೋಟಿಗಳನ್ನು ಹೂಡಿಕೆ ಮಾಡಲು ತಮ್ಮ ಇಲಾಖೆ ಪರಿಗಣಿಸಲಿದೆ ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದ್ದರು.

     

  • 2026ಕ್ಕೆ ನಾಗವಾರ ಟು ಗೊಟ್ಟಿಗೆರೆ ಪಿಂಕ್ ಲೈನ್ – ಸುರಂಗ ಕೊರೆಯುವ ಕಾರ್ಯ ಯಶಸ್ವಿ

    2026ಕ್ಕೆ ನಾಗವಾರ ಟು ಗೊಟ್ಟಿಗೆರೆ ಪಿಂಕ್ ಲೈನ್ – ಸುರಂಗ ಕೊರೆಯುವ ಕಾರ್ಯ ಯಶಸ್ವಿ

    -ಇದು ನಮ್ಮ ಮೆಟ್ರೋದ ಅತ್ಯಂತ ದೊಡ್ಡ ಸುರಂಗ ಮಾರ್ಗ

    ಬೆಂಗಳೂರು: ಸಿಲಿಕಾನ್ ಸಿಟಿಯ (Silicon City) ಜನರ ಸಂಚಾರಕ್ಕೆ ಜೀವನಾಡಿಯಾಗಿರುವ ನಮ್ಮ ಮೆಟ್ರೋದ ಪಿಂಕ್ ಲೈನ್ (Pink Line) 2026 ರೊಳಗೆ ಸಾರ್ವಜನಿಕ ಸೇವೆಗೆ ಮುಕ್ತ ಮಾಡುವ ಯೋಜನೆಯನ್ನು ಬಿಎಂಆರ್‌ಸಿಎಲ್ (BMRCL) ಹೊಂದಿದ್ದು, ಸದ್ಯ ಸುರಂಗ ಮಾರ್ಗ ಕೊರೆಯುವ ಕಾರ್ಯ ಯಶಸ್ವಿಯಾಗಿದೆ.

    ವಿಶ್ವದ ಅತ್ಯಂತ ಹೆಚ್ಚು ಟ್ರಾಫಿಕ್ ಇರುವ ನಗರಗಳ ಪೈಕಿ ನಮ್ಮ ಬೆಂಗಳೂರು 6ನೇ ಸ್ಥಾನದಲ್ಲಿದೆ. ಇಂತಹ ಟ್ರಾಫಿಕ್ ಇರುವ ನಗರಕ್ಕೆ ಮುಕ್ತಿ ಎಂದರೆ ಅದು ಮೆಟ್ರೋ ರೈಲು. ನಮ್ಮ ಮೆಟ್ರೋ ಕೂಡ ಸಿಲಿಕಾನ್ ಸಿಟಿಯ ಟ್ರಾಫಿಕ್ ಕಡಿಮೆ ಮಾಡುವ ನಿಟ್ಟಿನಲ್ಲಿ ನಾನಾ ಭಾಗದಲ್ಲಿ ಕಾಮಗಾರಿ ಮಾಡುತ್ತಿದ್ದು, ಇದೀಗ ಅತ್ಯಂತ ಉದ್ದನೇಯ ಸುರಂಗ ಮಾರ್ಗ ಕಾರ್ಯ ಮುಗಿಸಿದೆ.ಇದನ್ನೂ ಓದಿ: ಇ-ಖಾತಾ ಪರೀಕ್ಷೆಗೆ ಹೆಲ್ಪ್‌ಡೆಸ್ಕ್‌ ತೆರೆದ ಬಿಬಿಎಂಪಿ

    ಬೆಂಗಳೂರಿನ (Bengaluru) ಟ್ರಾಫಿಕ್ ಕಿರಿಕಿರಿಗೆ ಕಡಿವಾಣ ಹಾಕಬೇಕಾದರೆ ಅದು ನಮ್ಮ ಮೆಟ್ರೋದಿಂದ ಮಾತ್ರ ಸಾಧ್ಯ. ಎಲ್ಲೆಲ್ಲಿ ಮೆಟ್ರೋ ಮಾರ್ಗ ಇದೆಯೋ ಆ ಮಾರ್ಗದಲ್ಲಿ ಟ್ರಾಫಿಕ್ ಕಿರಿಕಿರಿ ಕಡಿಮೆ ಇದೆ.

    ದೇಶದ ಎರಡನೇ ಅತೀ ದೊಡ್ಡ ಮೆಟ್ರೋ ಸೇವೆ ಇರುವ ಬೆಂಗಳೂರಿನ ನಮ್ಮ ಮೆಟ್ರೋ (Namma Metro) ನಾಗವಾರದಿಂದ (Nagavara) ಕಾಳೇನ ಅಗ್ರಹಾರದವರೆಗೆ ಕಾಮಗಾರಿ ನಡೆಯುತ್ತಿದೆ. ಈ ಪಿಂಕ್ ಲೈನ್ ಮೆಟ್ರೋದಲ್ಲಿ ನಾಗವಾರದಿಂದ ಡೈರಿ ಸರ್ಕಲ್‌ವರಗೆ ಸಂಪೂರ್ಣವಾಗಿ ಸುರಂಗ ಮಾರ್ಗವೇ ಇರಲಿದೆ. ಇದು ನಮ್ಮ ಮೆಟ್ರೋದ ಅತ್ಯಂತ ದೊಡ್ಡ ಸುರಂಗ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೇ 9 ಟನಲ್ ಮಿಷನ್‌ಗಳು ಸತತ ಎರಡು ವರ್ಷಗಳ ಕಾರ್ಯಚರಣೆ ನಡೆಸಿದೆ ಬಳಿಕ ಯಶಸ್ವಿಯಾಗಿ ಸುರಂಗ ಕೊರೆಯುವ ಕೆಲಸವನ್ನ ಕಳೆದ ವಾರದಲ್ಲಿ ಮುಗಿಸಿದೆ.

    ನಾಗವಾರದಿಂದ ಡೈರಿ ಸರ್ಕಲ್‌ವರಗೆ ಮೆಟ್ರೋ ಸುರಂಗ ಕಾರ್ಯ ಸಂಪೂರ್ಣವಾಗಿದ್ದು, ಒಟ್ಟು 12 ಕಿ.ಮೀ ಸುರಂಗ ಮಾರ್ಗ ಇದಾಗಿದೆ. ಎರಡು ಪಥದ ಸುರಂಗ ಕೊರೆಯುವ ಕೆಲಸ ಮುಗಿದಿದ್ದು, ಒಂದೇ ದಿನ 27 ಮೀಟರ್ ಸುರಂಗ ಕೊರೆದ ಸಾಧನೆಯನ್ನು ನಮ್ಮ ಮೆಟ್ರೋ ಮಾಡಿದೆ. ಇದರ ಜೊತೆಗೆ ಅನೇಕ ಸಮಸ್ಯೆಗಳು ಎದುರಾಗಿದ್ದರೂ ಅದನ್ನೆಲ್ಲ ನಮ್ಮ ಮೆಟ್ರೋ ಯಶಸ್ವಿಯಾಗಿ ನಿಭಾಯಿಸಿದೆ. ಆದರೆ ಇನ್ನೂ ಮುಂದೆ ಇರುವ ಕೆಲಸ ಸವಾಲಿನ ಕೆಲಸವಾಗಿದೆ. ಯಾಕೆಂದರೆ ಒಟ್ಟಾರೆ ಎರಡು ಮಾರ್ಗದ 24 ಕಿ.ಮೀ ಟ್ರ್ಯಾಕ್‌ ಹಾಕಿ, ಅದರಲ್ಲಿ ಮುಖ್ಯವಾಗಿ ಸುರಕ್ಷತಾ ಕ್ರಮಗಳನ್ನು ಗಮನಿಸಿಕೊಂಡು ವೆಂಟಿಲೇಟರ್ ವ್ಯವಸ್ಥೆ, ಎಲೆಟ್ರಿಕ್ ವರ್ಕ್, ಹೀಗೆ ಅನೇಕ ಟೆಕ್ನಿಕಲ್ ವರ್ಕ್ ಮಾಡಬೇಕಾಗಿದ್ದು ಹಂತ ಹಂತವಾಗಿ ಕೆಲಸ ಮಾಡಲಾಗುತ್ತದೆ.

    ಒಟ್ಟಿನಲ್ಲಿ ನಮ್ಮ ಮೆಟ್ರೋದ ಈ ಅತ್ಯಂತ ದೊಡ್ಡ ಸುರಂಗ ಮಾರ್ಗ 2026 ರೊಳಗೆ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಯೋಜನೆಯನ್ನು ಬಿಎಂಆರ್‌ಸಿಎಲ್ ಹೊಂದಿದೆ. 2026 ರೊಳಗೆ ಈ ಮಾರ್ಗದ ಕಾಮಗಾರಿ ಮುಗಿಯುತ್ತಾ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ: ಯುವತಿಯ ಖಾಸಗಿ ಕ್ಷಣ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಪ್ರಿಯಕರ, ಅಪ್ರಾಪ್ತ ಸೇರಿದಂತೆ 6 ಮಂದಿಯಿಂದ ಗ್ಯಾಂಗ್‌ ರೇಪ್‌

  • ಮುಂಬೈ ಕರಾವಳಿ ಸುರಂಗ ಮಾರ್ಗ ಮೆಚ್ಚಿದ ಬಿಗ್ ಬಿ

    ಮುಂಬೈ ಕರಾವಳಿ ಸುರಂಗ ಮಾರ್ಗ ಮೆಚ್ಚಿದ ಬಿಗ್ ಬಿ

    ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಮುಂಬೈ ಕರಾವಳಿ (Karavali) ರಸ್ತೆಯ ಸುರಂಗ ಮಾರ್ಗದ ವಿಡಿಯೋ ಹಂಚಿಕೊಂಡು ಹೊಗಳಿದ್ದಾರೆ. ಹಲವು ಕಿಲೋ ಮೀಟರ್ ಸುರಂಗ ಮಾರ್ಗದಲ್ಲೇ ಸಾಗಿರುವ ವಿಡಿಯೋವನ್ನು ಬಿಗ್ ಬಾಸ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಸುರಂಗ ಮಾರ್ಗದ ಬಗ್ಗೆ ಹಾಡಿ ಹೊಗಳಿದ್ದಾರೆ.

    ಒಳ್ಳೆಯದು ಅಂತ ಅನಿಸಿದ್ದೆಲ್ಲವನ್ನೂ ಅಮಿತಾಭ್ ಅಭಿಮಾನಿಗಳಿಗೆ ಪರಿಚಯ ಮಾಡಿಕೊಡುತ್ತಲೇ ಇರುತ್ತಾರೆ. ಈ ಹಿಂದೆಯೂ ಅವರು ಇಂತಹ ಕೆಲಸಗಳನ್ನು ಮಾಡಿದ್ದಾರೆ. ಈಗ ಮುಂಬೈ ಕರಾವಳಿ ರಸ್ತೆಯಲ್ಲಿರುವ ಸುರಂಗ (Tunnel) ಮಾರ್ಗದ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

     

    ಮುಂಬೈ (Mumbai) ಕರಾವಳಿ ರಸ್ತೆಯ ಸುರಂಗ ಮಾರ್ಗಕ್ಕೆ ತನ್ನದೇ ಆದ ಇತಿಹಾಸವಿದೆ. ಈಗಷ್ಟೇ ಅದು ತಯಾರಾಗಿದೆ. ಸಾಕಷ್ಟು ಜನರು ಮೆಚ್ಚಿ ಈ ಸುರಂಗ ಮಾರ್ಗದ ಬಗ್ಗೆ ಬರೆದಿದ್ದಾರೆ. ಆ ಸಾಲಿಗೆ ಅಮಿತಾಬ್ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

  • ಟ್ರಾಫಿಕ್ ಸಮಸ್ಯೆ; 50 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗ್ಳೂರಿನ 12 ಕಡೆ ಸುರಂಗ ನಿರ್ಮಾಣಕ್ಕೆ ಪ್ಲ್ಯಾನ್‌

    ಟ್ರಾಫಿಕ್ ಸಮಸ್ಯೆ; 50 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗ್ಳೂರಿನ 12 ಕಡೆ ಸುರಂಗ ನಿರ್ಮಾಣಕ್ಕೆ ಪ್ಲ್ಯಾನ್‌

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆ (Bengaluru Traffic Problem) ನಿವಾರಣೆಗೆ ಸರ್ಕಾರ ಸುರಂಗ ಮಾರ್ಗದ ಮೊರೆ ಹೋಗಿದೆ. 50 ಕೋಟಿ ರೂ. ವೆಚ್ಚದಲ್ಲಿ 6 ಕಡೆ ಸುರಂಗ ಮಾರ್ಗ ಮಾಡಲು ಮುಂದಾಗಿದೆ. ಈ ಸುರಂಗ ಮಾರ್ಗ ನಿರ್ಮಾಣಕ್ಕೆ ಕನಿಷ್ಠ 5 ವರ್ಷ ಸಮಯ ಬೇಕಾಗಲಿದೆ. ಈ ನಡುವೆ ಸುರಂಗ ಮಾರ್ಗ ನಿರ್ಮಾಣದ ಹೊಣೆ BBMP ಗಾ? ಅಥವಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕಾ? (BDA) ಅನ್ನೋ ಪ್ರಶ್ನೆ ಎದ್ದಿದೆ.

    ಬ್ರ‍್ಯಾಂಡ್ ಬೆಂಗಳೂರು ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರದ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ (DK Shivakumar) ಜನರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕರಿಂದ ಹಲವಾರು ಸಲಹೆಗಳು ಬರ್ತಿವೆ, ಅದರಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಒಂದು. ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಜೋರಾಗಿದ್ದು ಕಿರಿ-ಕಿರಿಗೆ ಪೊಲೀಸರು ಹೈರಾಣಾಗಿದ್ದಾರೆ. ಹಾಗಾಗಿ ಸರ್ಕಾರ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸುರಂಗ ಮಾರ್ಗದ (Subway Road) ಮೊರೆಹೋಗಿದೆ. 50 ಸಾವಿರ ಕೋಟಿ ವೆಚ್ಚದಲ್ಲಿ ಸುರಂಗ ರಸ್ತೆಗಳ ನಿರ್ಮಾಣಕ್ಕೆ ಪ್ಲ್ಯಾನ್ ಮಾಡುತ್ತಿದೆ. ಇದನ್ನೂ ಓದಿ: ಜಗದೀಶ್ ಆತ್ಮಹತ್ಯೆ ಯತ್ನಕ್ಕೆ ಚಲುವರಾಯಸ್ವಾಮಿ ಕಾರಣ- ಗೆಳೆಯರು, ಕುಟುಂಬಸ್ಥರು ಆಕ್ರೋಶ

    ಸುರಂಗ ರಸ್ತೆ ಮಾರ್ಗಗಳ ನಿರ್ಮಾಣ ಬಗ್ಗೆ ಬೇರೆ ದೇಶಗಳ ತಾಂತ್ರಿಕ ತಜ್ಞರಿಂದಲೂ ಸಲಹೆ ಮತ್ತು ಸುರಂಗ ನಿರ್ಮಾಣ ಸಲಹಾ ಸಂಸ್ಥೆ ಅಧಿಕಾರಿಗಳಿಂದಲೂ ಸರ್ಕಾರ ಸಲಹೆ ಪಡೆದಿದೆ. 2 ಹಂತಗಳಲ್ಲಿ ಸುರಂಗ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಿದ್ದು, 22 ಸಾವಿರ ಕೋಟಿ ವೆಚ್ಚದಲ್ಲಿ 50 ಕಿಮೀ ರಸ್ತೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಸುರಂಗ ಮಾರ್ಗವನ್ನ 4 ಅಥವಾ 6 ಪಥದಲ್ಲಿ ನಿರ್ಮಾಣ ಮಾಡಲು ಚಿಂತನೆ ನಡೆದಿದೆ. ಸರ್ಕಾರದ ನಿರ್ಧಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಟನಲ್ ನಿರ್ಮಾಣ ಮಾಡೋಕೆ ಹೋಗಿ ಬೆಂಗಳೂರನ್ನ ಸಮಾಧಿ ಮಾಡಬೇಡಿ. ವೈಜ್ಞಾನಿಕವಾಗಿ ಕೆಲಸ ಮಾಡಿ ಅಂತಾ ಸಲಹೆ ನೀಡಿದ್ದಾರೆ.

    ಅಂದುಕೊಂಡಂತೆ ಈ ಕೆಳಕಂಡ ಮಾರ್ಗಗಳಲ್ಲಿ ರಸ್ತೆ ನಿರ್ಮಾಣ ಮಾಡಬೇಕಿದ್ರೆ ಸುಮಾರು 5 ವರ್ಷ ಸಮಯ ತೆಗೆದುಕೊಳ್ಳಲಿದೆ. ಬೆಂಗಳೂರು ಕೇಂದ್ರದ ಸುತ್ತಲೂ ಹೊರ ವಲಯಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಚಿಂತನೆ ಮಾಡಲಾಗ್ತಿದೆ. ಇದನ್ನೂ ಓದಿ: JDS ಪರ ಪ್ರಚಾರ ಮಾಡಿದ್ದಕ್ಕೆ ಮಗನ ವರ್ಗಾವಣೆ- ಆತ್ಮಹತ್ಯೆಗೆ ಯತ್ನಿಸಿದ ಜಗದೀಶ್ ತಂದೆ ಬೇಸರ

    ಎಲ್ಲೆಲ್ಲಿ ಬರಲಿದೆ ಸುರಂಗ ರಸ್ತೆ?

    * ಉತ್ತರದಿಂದ ದಕ್ಷಿಣ ಕಾರಿಡಾರ್ – ಒಟ್ಟು 27 ಕಿ.ಮೀ
    ಬಳ್ಳಾರಿ ರಸ್ತೆಯಿಂದ ಹೊಸೂರು ರೋಡ್
    ಯಲಹಂಕ – ಮೇಖ್ರಿ ಸರ್ಕಲ್ ಮಾರ್ಗವಾಗಿ ಕೇಂದ್ರೀಯ ರೇಷ್ಮೆಮಂಡಳಿ

    * ಪೂರ್ವದಿಂದ ಪಶ್ಚಿಮ ಕಾರಿಡಾರ್ 1 – ಒಟ್ಟು 29 ಕಿ.ಮೀ
    ಕೆ.ಆರ್ ಪುರದಿಂದ ಗೊರಗುಂಟೆ ಪಾಳ್ಯ
    ಹಳೇ ಮದ್ರಾಸ್ ರಸ್ತೆ – ಐಟಿಪಿಎಲ್ – ವರ್ತುಲ ರಸ್ತೆ
    ರಾಮಮೂರ್ತಿ ನಗರ ಕಡೆಯಿಂದ ಹೊರಗುಂಟೆ ಪಾಳ್ಯ

    * ಪೂರ್ವದಿಂದ ಪಶ್ಚಿಮ ಕಾರಿಡಾರ್ 2 – ಒಟ್ಟು 28.90 ಕಿ.ಮೀ
    ಹಳೇ ಏರ್‌ಪೋರ್ಟ್ ರಸ್ತೆಯಿಂದ ಮೈಸೂರು ರಸ್ತೆ
    ವರ್ತೂರು ಕೋಡಿಯಿಂದ ಜ್ಞಾನಭಾರತಿವರೆಗೆ

    * ಸಂಪರ್ಕ ಕಾರಿಡಾರ್ 1 – ಒಟ್ಟು 4.5 ಕಿ.ಮೀ
    ಸೇಂಟ್ ಜಾನ್ ಆಸ್ಪತ್ರೆ ಜಂಕ್ಷನ್‌ನಿಂದ ಅಗರ ವರೆಗೆ
    * ಸಂಪರ್ಕ ಕಾರಿಡಾರ್ 2 – ಒಟ್ಟು 2.8 ಕಿ.ಮೀ
    * ಸಂಪರ್ಕ ಕಾರಿಡಾರ್ 3 – ಒಟ್ಟು 6.45 ಕಿ.ಮೀ
    ವೀಲರ್ಸ್ ರಸ್ತೆ ಜಂಕ್ಷನ್‌ನಿಂದ ಹೊರವರ್ತುಲದ ಕಲ್ಯಾಣನಗರಕ್ಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುರಂಗ ಮಾರ್ಗದಲ್ಲಿ ಬಿದ್ದಿದ್ದ ಕಸವನ್ನು ಬರಿಗೈಯಲ್ಲೇ ತೆಗೆದ ಮೋದಿ

    ಸುರಂಗ ಮಾರ್ಗದಲ್ಲಿ ಬಿದ್ದಿದ್ದ ಕಸವನ್ನು ಬರಿಗೈಯಲ್ಲೇ ತೆಗೆದ ಮೋದಿ

    ನವದೆಹಲಿ: ಪ್ರಗತಿ ಮೈದಾನ ಇಂಟಿಗ್ರೇಟೆಡ್ ಟ್ರಾನ್ಸಿಟ್ ಅಡಿಯಲ್ಲಿ ನಿರ್ಮಿಸಲಾದ ಐಟಿಪಿಒ ಸುರಂಗದಲ್ಲಿ ಬಿದ್ದಿದ್ದ ಕಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬರಿಗೈಯಲ್ಲಿ ಎತ್ತಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಇದೀಗ ಆಗುತ್ತಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ಸ್ವಚ್ಛ ಭಾರತ್ ಕನಸನ್ನು ನನಸು ಮಾಡುವ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ನೂತನವಾಗಿ ಉದ್ಘಾಟನೆಗೊಂಡ ಸುರಂಗ ಮಾರ್ಗವನ್ನು ಪರಿಶೀಲಿಸುತ್ತಿದ್ದ ವೇಳೆ ಅಲ್ಲಿ ಎಸೆದಿದ್ದ ಖಾಲಿ ಪ್ಲಾಸ್ಟಿಕ್ ನೀರಿನ ಬಾಟಲಿ ಹಾಗೂ ಇತರ ಕೆಲವು ವಸ್ತುಗಳನ್ನು ಎತ್ತಿ ಕಸದ ಬುಟ್ಟಿಗೆ ಹಾಕಿದರು. ನಂತರ ಸುರಂಗದ ಒಳಗೋಡೆಯಲ್ಲಿ ಮೂಡಿದ ವರ್ಣಚಿತ್ರಗಳನ್ನು ವೀಕ್ಷಿಸಿದರು.

    ಈ ವೀಡಿಯೋವನ್ನು ಪಶ್ಚಿಮ ಬಂಗಾಳದ ಬಿಜೆಪಿ ಸಹ-ಪ್ರಭಾರಿ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ. ಐಟಿಪಿಒ ಸುರಂಗ ಮಾರ್ಗದ ಉದ್ಘಾಟನೆಯಲ್ಲಿಯೂ ಅಲ್ಲಿದ್ದ ಕಸವನ್ನು ಅವರೇ ಸ್ವತಃ ತೆಗೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗಾಗಿ ಸಿದ್ಧವಾಗಿದೆ ಚಿನ್ನದ ಅಕ್ಷರಗಳಲ್ಲಿ ಬರೆದ ನೆನಪಿನ ಕಾಣಿಕೆ

    ಪ್ರಗತಿ ಮೈದಾನದ ಪುನರಾಭಿವೃದ್ಧಿಯ ಭಾಗವಾಗಿರುವ ಸುರಂಗ ಮಾರ್ಗ ಮತ್ತು 5 ಅಂಡರ್‌ಪಾಸ್‍ಗಳ ಉದ್ಘಾಟನಾ ಕಾರ್ಯಕ್ರಮ ನಂತರ ಈ ವೀಡಿಯೋ ವೈರಲ್ ಆಗುತ್ತಿದೆ. ಪ್ರಗತಿ ಮೈದಾನ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಯೋಜನೆಯನ್ನು 920 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸಂಪೂರ್ಣ ಕೇಂದ್ರ ಸರಕಾರವೇ ಅನುದಾನ ನೀಡಿದೆ. ಇದನ್ನೂ ಓದಿ: ರಾಜ್ಯಕ್ಕೆ ಮೋದಿ: ಕಾರ್ಯಕ್ರಮಗಳ ವೇಳಾಪಟ್ಟಿಯಲ್ಲಿ ಬದಲಾವಣೆ – ಪಟ್ಟಿ ಹೀಗಿದೆ..

    Live Tv

  • 2023ರಲ್ಲಿ ಭಾರತದ ಮೊದಲ ನೀರೊಳಗಿನ ಮೆಟ್ರೋ ಸುರಂಗ ಮಾರ್ಗ ಆರಂಭ

    2023ರಲ್ಲಿ ಭಾರತದ ಮೊದಲ ನೀರೊಳಗಿನ ಮೆಟ್ರೋ ಸುರಂಗ ಮಾರ್ಗ ಆರಂಭ

    ಕೋಲ್ಕತ್ತಾ: ಭಾರತದ ಮೊದಲ ನೀರೊಳಗಿನ ಮೆಟ್ರೋ ಸುರಂಗ ಮಾರ್ಗ ನಿರ್ಮಾಣವಾಗುತ್ತಿದ್ದು, ಇದು 2023ರ ವೇಳೆಗೆ ಪ್ರಯಾಣಕ್ಕೆ ಲಭ್ಯವಾಗಲಿದೆ.

    ಭಾರತದ ಮೊದಲ ನೀರೊಳಗಿನ ಮೆಟ್ರೋ ಸುರಂಗ ಮಾರ್ಗ ಪಶ್ಚಿಮ ಬಂಗಾಳ ರಾಜ್ಯದಲ್ಲಿ ನಿರ್ಮಾಣವಾಗುತ್ತಿದ್ದು, ಈ ಸುರಂಗ ಮಾರ್ಗ ಹೌರಾ ಹಾಗೂ ಕೋಲ್ಕತ್ತಾ ನಡುವೆ ಸಂಪರ್ಕವನ್ನು ಕಲ್ಪಿಸಲಿದೆ. 16.6 ಕಿ.ಮೀ ಉದ್ದದ ಸುರಂಗ ಮಾರ್ಗದ 520 ಮೀ. ನದಿ ತಳದಲ್ಲಿ ಇರಲಿದೆ. 33 ಮೀ. ನದಿಯ ತಳದ ವರೆಗೆ ಸುರಂಗವನ್ನು ನಿರ್ಮಿಸಲಾಗಿದೆ.

    ನೀರೊಳಗೆ ಸುರಕ್ಷತಾ ಕ್ರಮ:
    ನೀರೊಳಗಿನ ಮೆಟ್ರೋ ಸುರಂಗ ಮಾರ್ಗದ ಯೋಜನೆಯಲ್ಲಿ ಒದಗಿಸಲಾದ ಸೌಲಭ್ಯ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಮಾತನಾಡಿದ ಸೈಟ್ ಮೇಲ್ವಿಚಾರಕ ಮಿಥುನ್ ಘೋಷ್, ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರನ್ನು ಸ್ಥಳಾಂತರಿಸಲು ಸುರಂಗಗಳಲ್ಲಿ ವಾಕ್‌ವೇಗಳು ಇರುತ್ತವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಪರಿಷ್ಕೃತ ವೇಳಾಪಟ್ಟಿ ಪ್ರಕಟ


    ನೀರಿನ ಸುರಂಗದ ಪ್ರದೇಶದಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ, ವಿಶೇಷ ಮಾರ್ಗದ ಮೂಲಕ ಪ್ರಯಾಣಿಕರನ್ನು ಹೊರಕ್ಕೆ ಕರೆದೊಯ್ಯಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಪ್ಯಾಸೇಜ್ ಕಾಮಗಾರಿಯನ್ನೂ ಮಾಡಲಾಗಿದೆ ಎಂದು ಮಿಥುನ್ ತಿಳಿಸಿದರು. ಇದನ್ನೂ ಓದಿ: ಅಡುಗೆ ಎಣ್ಣೆಯಿಂದ ತಯಾರಿಸಿದ ಇಂಧನದಲ್ಲಿ 3 ಗಂಟೆ ಹಾರಾಡಿತು ವಿಮಾನ

    ಪೂರ್ವ-ಪಶ್ಚಿಮ ಹೌರಾ ಮೆಟ್ರೋ ನಿಲ್ದಾಣದ ಸುಮಾರು ಶೇ.80 ರಷ್ಟು ಕೆಲಸ ಪೂರ್ಣಗೊಂಡಿದೆ. ಇದು 2023 ರಲ್ಲಿ ಪೂರ್ಣ ಪ್ರಮಾಣದ ಸೇವೆ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

  • ಬೆಡ್ ಕೆಳಗೆ ಸುರಂಗ ಮಾರ್ಗ – ವೀಡಿಯೋ ವೈರಲ್

    ಬೆಡ್ ಕೆಳಗೆ ಸುರಂಗ ಮಾರ್ಗ – ವೀಡಿಯೋ ವೈರಲ್

    ನೆ ಹಾಗೂ ಅಂಗಡಿಗಳಲ್ಲಿ ರಹಸ್ಯ ಕೋಣೆಗಳಿರುವುದನ್ನು ಕೇಳಿರಬಹುದು ಹಾಗೂ ನೋಡಿರಬಹುದು. ಆದರೆ ಬೆಡ್ ಕೆಳಗೆ ಸುರಂಗ ಮಾರ್ಗ ಇರುವುದನ್ನು ನೀವೆಲ್ಲದರೂ ಕೇಳಿದ್ದಿರಾ? ಹೌದು ಸಾಮಾನ್ಯವಾಗಿ ಬೆಡ್ ಕೆಳಗೆ ಮನೆಯ ವಸ್ತುಗಳನ್ನು ಇಡುತ್ತೇವೆ. ಆದರೆ ವ್ಯಕ್ತಿಯೋರ್ವ ತನ್ನ ಬೆಡ್ ಕೆಳಗೆ ಉದ್ದ ಹಾಗೂ ವಿಶಾಲವಾದ ಸುರಂಗ ಮಾರ್ಗವೊಂದನ್ನು ಮಾಡಿದ್ದಾನೆ. ಸದ್ಯ ಈ ಕುರಿತ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಬೆಡ್ ಕೆಳಗೆ ಕೆಲವು ಮೆಟ್ಟಿಲುಗಳಿರುವುದನ್ನು ಕಾಣಬಹುದಾಗಿದೆ. ನಂತರ ಮೆಟ್ಟಿಲುಗಳಿಂದ ಕೆಳಗೆ ಇಳಿದು ಹೋದರೆ ಸುರಂಗವಿದೆ. ಆ ಸುರಂಗ ರೂಮಿನಷ್ಟೇ ಉದ್ದವಿದ್ದು, ಯಾರಾದರೂ ಒಬ್ಬರು ಸುರಂಗದಲ್ಲಿ ಆರಾಮವಾಗಿ ವಾಸಿಸಬಹುದಾಗಿದೆ. ಅಲ್ಲದೇ ಸುರಂಗ ಮಾರ್ಗದ ಸುತ್ತಲೂ ಹಳದಿ ದೀಪ ಅಳವಡಿಸಲಾಗಿದೆ.

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸುರಂಗದ ಪ್ಲಾನಿಂಗ್ ಕಂಡು ಆಶ್ಚರ್ಯಗೊಂಡಿರುವ ನೆಟ್ಟಿಗರು ಕಮೆಂಟ್‍ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ. ಇದನ್ನೂ ಓದಿ: ಜ್ವಲಂತ ಸಮಸ್ಯೆಗಳನ್ನು ಜೀವಂತ ಇಟ್ಟ ಕಾಂಗ್ರೆಸ್: ಡಿಸಿಎಂ ಕಿಡಿ

  • ಪಾಕ್‍ನಿಂದ ಭಾರತಕ್ಕೆ ಕಳ್ಳ ಎಂಟ್ರಿ- ಉಗ್ರರ ಸುರಂಗ ಮಾರ್ಗ ಪತ್ತೆ

    ಪಾಕ್‍ನಿಂದ ಭಾರತಕ್ಕೆ ಕಳ್ಳ ಎಂಟ್ರಿ- ಉಗ್ರರ ಸುರಂಗ ಮಾರ್ಗ ಪತ್ತೆ

    ಶ್ರೀನಗರ: ಪಾಕಿಸ್ತಾನದಿಂದ ಭಾರತಕ್ಕೆ ಉಗ್ರರು ನುಸುಳಿ ಬರಲು ಕೊರೆದಿದ್ದ 150 ಮೀಟರ್ ಉದ್ದ ಸುರಂಗ ಮಾರ್ಗ ಕಾಶ್ಮೀರ ಗಡಿಯಲ್ಲಿ ಪತ್ತೆಯಾಗಿದೆ.

    ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಪಾಕಿಸ್ತಾನದ ಗಡಿ ಪ್ರದೇಶದ ಪಕ್ಕದಲ್ಲೇ 150 ಮೀಟರ್ ಉದ್ದದ ಸುರಂಗ ಮಾರ್ಗ ಪತ್ತೆ ಮಾಡಲಾಗಿದೆ ಎಂದು ರಾಷ್ಟ್ರೀಯ ಗಡಿ ಭದ್ರತಾ ಪಡೆ ತಿಳಿಸಿದೆ.

    ಹಿರಾನಗರ ಸೆಕ್ಟರ್‍ನ ಬೊಬ್ಬಿಯಾನ್ ಗ್ರಾಮದಲ್ಲಿ 3 ಅಡಿ ಅಗಲ ಮತ್ತು 25 ರಿಂದ 30 ಅಡಿ ಆಳದ ಸುರಂಗ ಮಾರ್ಗ ಪತ್ತೆ ಮಾಡಿದ್ದೇವೆ. ಇದು ಪಾಕಿಸ್ತಾನದಿಂದ ಭಾರತದ ಗಡಿ ಪ್ರದೇಶದೊಳಗೆ 20 ರಿಂದ 30 ಮೀಟರ್‍ನ ಮುಳ್ಳು ತಂತಿಯ ನಡುವೆ ಹಾದು ಬಂದಿದೆ ಎಂದು ಬಿಎಸ್‍ಎಫ್ ಇನ್‍ಸ್ಟೆಕ್ಟರ್ ಜನರಲ್ ಎನ್‍ಎಸ್ ಜಮ್ಮಾಲ್ ತಿಳಿಸಿದ್ದಾರೆ.

    ಇದು ಬಿಎಸ್‍ಎಫ್ ಗಡಿ ಭದ್ರತಾ ಪಡೆ ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿ 6 ತಿಂಗಳ ಅಂತರದಲ್ಲಿ ಪತ್ತೆ ಹಚ್ಚಿದ ಮೂರನೇ ಸುರಂಗ ಮಾರ್ಗವಾಗಿದೆ. ಸೆಪ್ಟೆಂಬರ್ ನಲ್ಲಿ ಅರ್ನಿಯಾ ಪ್ರದೇಶದಲ್ಲಿ ಇದ್ದ ಸುರಂಗ ಮಾರ್ಗವನ್ನು ಸೇನೆಯು ಪತ್ತೆ ಹಚ್ಚಿತ್ತು. ಇತ್ತೀಚಿನ ಮಾಹಿತಿ ಪ್ರಕಾರ ಬಿಎಸ್‍ಎಫ್ ಪಡೆಯು ಉಗ್ರರ ಹಲವು ಭಯೋತ್ಪಾದನ ಸಂಚನ್ನು ವಿಫಲಗೊಳಿಸಿರುವುದು ತಿಳಿದು ಬಂದಿದೆ.

    ಬಿಎಸ್‍ಎಫ್ ಪಡೆಯು ಕೆಲವು ದಿನಗಳಿಂದ ಸುರಂಗ ಮಾರ್ಗವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದರ ಭಾಗವಾಗಿ ಸುರಂಗ ವಿರೋಧಿ ಕಾರ್ಯಚರಣೆಯನ್ನು ಮಾಡಿ ಯಶಸ್ವಿಯಾಗಿದೆ. ಈ ಸುರಂಗಗಳಲ್ಲಿ ಹಲವು ಮರಳು ಚೀಲಗಳು ಸಿಕ್ಕಿವೆ ಇದು 2016, 2017ರ ವರ್ಷದಲ್ಲಿ ತಯಾರಾಗಿರುವುದು ಎಂದು ಚೀಲದ ಮೇಲಿರುವ ಗುರುತಿನಿಂದ ತಿಳಿದು ಬಂದಿದೆ. ಹಾಗೆ ಈ ಮರಳು ಚೀಲಗಳಲ್ಲಿ ಪಾಕಿಸ್ತಾನದ ಗುರುತಿನ ಐಜಿಯನ್ನು ಹೊಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸುರಂಗ ಮಾರ್ಗದ ಮೂಲಕ ಒಳಬರುವ ನುಸುಳುಕೊರರ ವಿರುದ್ಧ ಈಗಾಗಲೇ ಸೇನೆ ತನಿಖೆಯನ್ನು ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಸೇನೆ ನಡೆಸುತ್ತಿರುವ ಸುರಂಗ ವಿರೋಧಿ ಕಾರ್ಯಚರಣೆಯಿಂದಾಗಿ ಯಾವುದೇ ನುಸುಳುಕೊರರು ಒಳಬಂದಿರುವ ಪ್ರಕರಣ ಪತ್ತೆಯಾಗಿಲ್ಲ ಎಂದರು.

    ನಮ್ಮ ಗಡಿ ಭದ್ರತೆಯನ್ನು ಬಿಎಸ್‍ಎಫ್‍ವಹಿಸಿಕಂಡ ನಂತರ ಸೇನೆ ಮತ್ತು ಪೊಲೀಸ್ ಇಲಾಖೆಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದು, ಪಾಕಿಸ್ತಾನದ  ದುಷ್ಕೃತ್ಯ ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಎನ್‍ಎಸ್ ಜಮ್ಮಾಲ್ ಮಾಹಿತಿ ಹಂಚಿಕೊಂಡರು.