Tag: ಸುಮಾ

  • ಸಂಬಂಧದ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ, ಆದ್ರೆ ಕೊಲೆ ಮಾಡಿಲ್ಲ: ಅನಂತರಾಜು ಪತ್ನಿ

    ಸಂಬಂಧದ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ, ಆದ್ರೆ ಕೊಲೆ ಮಾಡಿಲ್ಲ: ಅನಂತರಾಜು ಪತ್ನಿ

    ಬೆಂಗಳೂರು: ರೇಖಾ ಜೊತೆ ಪತಿ, ಬಿಜೆಪಿ ಮುಖಂಡ ಅನಂತರಾಜುಗೆ ಸಂಬಂಧ ಇದೆ ಎಂಬ ವಿಚಾರ ಗೊತ್ತಾಗಿ ನೋವಿನಿಂದ ಗಲಾಟೆ ಮಾಡಿದ್ದು ನಿಜ. ಆದರೆ ನಾನು ಅವರನ್ನು ಕೊಲೆ ಮಾಡಿಲ್ಲ ಎಂದು ಪತ್ನಿ ಸುಮಾ ಹೇಳಿದ್ದಾರೆ.

    ಬ್ಯಾಡರಹಳ್ಳಿಯಲ್ಲಿರುವ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೇಖಾ ಆರೋಪದ ಬಗ್ಗೆ ತಿಳಿಸಿದರು. ಮಾರ್ಚ್ 22ಕ್ಕೆ ನನಗೆ ವಿಚಾರ ಗೊತ್ತಾಗಿದ್ದು. ಹೋಮ್ ಅರೆಸ್ಟ್ ಆರೋಪ ಸುಳ್ಳು. ಗಂಡನಿಗೆ ಯಾವುದೇ ಕಿರುಕುಳ ಕೊಟ್ಟಿಲ್ಲ. ಬ್ಲ್ಯಾಕ್‍ಮೇಲ್ ಮೆಸೇಜ್ ಕಳಿಸಿದ ಬಳಿಕ ನಾನು ಕೋಪ ಬಂದು ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡರು.

    Anantaraju

    ನನ್ನ ಗಂಡನನ್ನ ನಾನು ಕೊಲೆ ಮಾಡಿಲ್ಲ. ನನ್ನ ಗಂಡನ ಸಾಯಿಸೋ ಅಷ್ಟು ಕೆಟ್ಟವಳಲ್ಲ. ನನ್ನ ಮಕ್ಕಳಿಗೆ ಅಪ್ಪ ಇಲ್ಲ ಅನ್ನೋ ನೋವು ಇದೇ. ಮೆಂಟಲಿ ಟಾರ್ಚರ್ ಆಗ್ತಿದೆ. ಕೆಲವೊಂದು ಕ್ಲಿಪ್ಪಿಂಗ್ ಅಷ್ಟೇ ರೇಖಾ ಕೊಟ್ಟಿದ್ದಾಳೆ. ಅನಂತರಾಜು ನನಗೆ ಇಲ್ಲ ಅಂದ್ರೆ ನಿನಗೂ ಸಿಗಬಾರದು ಅಂತ ರೇಖಾ ಧಮ್ಕಿ ಹಾಕ್ತಾ ಇದ್ದಳು. ಅನಂತರಾಜುಗೆ ರೇಖಾ ಟಾರ್ಚರ್ ಕೊಡ್ತಾ ಇದ್ದಳು ಎಂದು ಸುಮ ಹೇಳಿದರು. ಇದನ್ನೂ ಓದಿ: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ – 2 ಬಾರಿ ಅಬಾರ್ಷನ್ ಮಾಡಿಸಿದ್ದ ರೇಖಾ

    ಗಂಡನ ಕೈ ನಾನು ಮುರಿದಿಲ್ಲ. ನಾನು ಈ ರೀತಿಯಾಗಿ ಎದುರಿಸಿದ್ರೆ ಅವಳು ಬಿಡ್ತಾಳೆ ಅಂತ ಈ ರೀತಿ ಮಾತನಾಡಿದ್ದು. ಆತ್ಮಹತ್ಯೆ ದಿನ ನಾನು ಮನೆಯಲ್ಲಿ ಇರಲಿಲ್ಲ. ನಾವು ಇಬ್ಬರು ಫಂಕ್ಷನ್ ಹೋಗಿ ಬಂದ್ವಿ. ಬಳಿಕ ಅವರು ಮೇಲೆ ಮನೆಯಲ್ಲಿ ಮಲಗಿರುವಾಗ ಆತ್ಮಹತ್ಯೆ ಮಾಡಿಕೊಂಡಿದ್ರು. ಗಂಡನ ಫೋಟೋ ವೀಡಿಯೋ ಇಟ್ಕೊಂಡು ರೇಖಾ ಟಾರ್ಚರ್ ಕೊಡ್ತಾ ಇದ್ದಳು. ರೇಖಾ ಮಗಳ ಮೇಡಿಕಲ್ ಸೀಟ್ ಆಗುವಷ್ಟು ಹಣ ಕೊಡಬೇಕೆಂದು ಡಿಮಾಂಡ್ ಮಾಡ್ತಾ ಇದ್ದಳು. ಈ ಹಿಂದೆ ಡಿಪ್ರೇಷನ್ ನಲ್ಲಿದ್ದ ಆನಂತ್ ರಾಜು ನಿದ್ದೆ ಮಾತ್ರೆ ತಗೆದುಕೊಂಡಿದ್ದರು. ಇತ್ತೀಚಿಗೆ ಆನಂತರಾಜುಗೆ ಎದೆನೋವು ಇತ್ತು ಎಂದು ಹೇಳಿದರು.

    ಘಟನೆ ನಡೆದ ದಿನ ಲಾಂಗ್ ಡ್ರೈವ್ ಹೋಗೋಣ ಅಂತ ಕರೆದುಕೊಂಡು ಹೋಗಿದ್ದರು. ಗ್ಯಾಸ್ಟ್ರೀಕ್ಟ್ ಅಂತಾ ಒಳಗಡೆ ಮಲಗಿದ್ದರು. ಅಡುಗೆ ಮಾಡಿಕೊಂಡು ಹೋಗಿ ರೂಂ ಬಾಗಿಲು ತಗೆಸಿದಾಗ ಆನಂತರಾಜು ಹ್ಯಾಂಗ್ ಮಾಡಿಕೊಂಡಿದ್ದರು. ಅನಂತರಾಜು ಆತ್ಮಹತ್ಯೆಗೆ ಕಾರಣ ನಮಗೂ ಗೊತ್ತಿಲ್ಲ ಎಂದು ಸುಮಾ ವಿವರಿಸಿದರು. ಇದನ್ನೂ ಓದಿ: RSSಗೆ ಗೊತ್ತಾಗಿದೆ ಈ ಹೋರಾಟದಲ್ಲಿ ಸೋಲಾಗುತ್ತೆ ಅಂತಾ ಹಾಗಾಗಿ ಭಾಗವತ್ ಈ ಹೇಳಿಕೆ ನೀಡಿದ್ದಾರೆ: ಅಬ್ದುಲ್ ರಜಾಕ್

  • ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ – 2 ಬಾರಿ ಅಬಾರ್ಷನ್ ಮಾಡಿಸಿದ್ದ ರೇಖಾ

    ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ – 2 ಬಾರಿ ಅಬಾರ್ಷನ್ ಮಾಡಿಸಿದ್ದ ರೇಖಾ

    ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿಂತೆ ಸುಮಾ-ರೇಖಾ ನಡುವಿನ ಸಂಭಾಷಣೆಯ ಮತ್ತೊಂದು ಆಡಿಯೋ ವೈರಲ್ ಆಗುತ್ತಿದೆ.

    ಹೌದು, ಇಷ್ಟು ದಿನ ಸುಮಾ-ರೇಖಾ ಹಲವಾರು ವಿಚಾರಗಳಿಗೆ ಜಗಳ ಆಡಿದ್ದ ಆಡಿಯೋ ವೈರಲ್ ಆಗಿತ್ತು. ಆದರೆ ಇದೀಗ ರೇಖಾ ಅಬಾರ್ಷನ್ ಮಾಡಿಸಿಕೊಂಡಿರುವ ವಿಚಾರವಾಗಿ ಇಬ್ಬರು ಮಾತನಾಡಿರುವ ಆಡಿಯೋ ರಿವೀಲ್ ಆಗಿದೆ. ಇದನ್ನೂ ಓದಿ: ಅನಂತ ರಾಜು ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್- ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ ರೇಖಾ..?

    ಅನಂತ ರಾಜು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಸತ್ಯ ಹೊರಬರುತ್ತಿದೆ. ರೇಖಾ ತಾಯಿಯಾಗಿರುವುದರ ಬಗ್ಗೆ ಸುಮಾ-ರೇಖಾ ಮಾತನಾಡಿದ್ದಾರೆ. ಆಡಿಯೋದಲ್ಲಿ ಎರಡು ಬಾರಿ ಅಬಾರ್ಷನ್ ಮಾಡಿಕೊಂಡಿರುವುದಾಗಿ ರೇಖಾ ಹೇಳಿದ್ದಾರೆ. ಇದನ್ನೂ ಓದಿ: ಚಂದ್ರಶೇಖರ ಕಂಬಾರರ ಹೆಸರಿನಲ್ಲಿ ವಂಚನೆಗೆ ಯತ್ನ: ದೂರು ದಾಖಲು

    ತಾಯಿಯಾಗಿರುವ ವಿಚಾರ ಅನಂತುಗೆ ಹೇಳಿದ್ಯಾ ಇಲ್ಲವಾ ಅಂತಾ ರೇಖಾಗೆ ಸುಮಾ ಕೇಳಿದಾಗ, ವಾಟ್ಸಪ್‍ನಲ್ಲಿ ಅನಂತುಗೆ ಹೇಳಿದ್ದೆ ಅಂತ ರೇಖಾ ಕಣ್ಣೀರು ಹಾಕಿದ್ದಾರೆ. ಅದರಲ್ಲೂ ಎರಡು ಬಾರಿ ತಾಯಿಯಾಗಿದ್ದು, ಎರಡು ಬಾರಿಯೂ ಅಬಾರ್ಷನ್ ಮಾಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ

    ನನಗೆ ಈಗಾಗಲೇ ಎರಡು ಮಗು ಇದೆ. ಮತ್ತೊಂದು ಮಗು ಇದ್ದರೆ ಸಾಕುವುದಕ್ಕೆ ಕಷ್ಟ ಆಗುತ್ತದೆ. ನಾಳೆ ವಿನೋದ್‍ಗೆ ಗೊತ್ತಾದರೆ ತೊಂದರೆಯಾಗುತ್ತದೆ. ನನ್ನನ್ನು ನಂಬುವುದಾದರೆ ಮಗು ತೆಗೆಸು ಅಂತ ಅನಂತರಾಜು ಅಂದಿದ್ದರು. ಹೀಗಾಗಿ ಮಗು ಅಬಾರ್ಷನ್ ಮಾಡಿಸಿದ್ದೆ. ಎರಡು ಬಾರಿ ಅಬಾರ್ಷನ್ ಮಾಡಿಸಿದ್ದು ಅನಂತುಗೆ ಗೊತ್ತಿತ್ತು ಅಂತ ರೇಖಾ, ಸುಮಾಗೆ ತಿಳಿಸಿದ್ದಾರೆ.