Tag: ಸುಮಲತಾ ಅಂಬರೀಶ್

  • ಅಂಬಿ ಮಾಮನಿಗೆ ಥ್ಯಾಂಕ್ಯೂ ಹೇಳಿದ ಕಿಚ್ಚ

    ಅಂಬಿ ಮಾಮನಿಗೆ ಥ್ಯಾಂಕ್ಯೂ ಹೇಳಿದ ಕಿಚ್ಚ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ರೆಬೆಲ್ ಸ್ಟಾರ್ ಅಂಬರೀಶ್‍ಗೆ ಥ್ಯಾಂಕ್ಯೂ ಮಾಮ ಅಂತಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಗುರುವಾರ ಸುದೀಪ್ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದ ಹೇ ಜಲೀಲ ವಿಡಿಯೋ ಸಾಂಗ್ ಯುಟ್ಯೂಬ್ ಲಿಂಕ್ ಹಾಕಿಕೊಂಡಿದ್ದರು. ಹಾಡಿನ ಚಿತ್ರೀಕರಣದ ವೇಳೆ ಕೆಲವು ಘಟನೆಗಳನ್ನು ನೆನಪು ಮಾಡಿಕೊಂಡ ಕಿಚ್ಚ ಮಂಡ್ಯದ ಗಂಡು ಅಂಬರೀಶ್ ಅವರಿಗೆ ಧನ್ಯವಾದ ತಿಳಿಸಿದ್ದರು.

    ಟ್ವೀಟ್‍ನಲ್ಲಿ ಏನಿದೆ..?
    ‘ಹೇ ಜಲೀಲ’ ಹಾಡಿನ ಚಿತ್ರೀಕರಣ ವೇಳೆ ಅಂಬರೀಶ್ ಅವರಿಗೆ ಆರೋಗ್ಯ ಸಾಥ್ ನೀಡುತ್ತಿರಲಿಲ್ಲ. ನಿರ್ಮಾಪಕರು ಸೇರಿದಂತೆ ಚಿತ್ರತಂಡ ಶೂಟಿಂಗ್ ಮುಂದೂಡೋಣ ಅಂತಾ ಹೇಳಿದ್ದರು. ಅಂಬಿ ಅಣ್ಣ ಎಲ್ಲವನ್ನು ಬದಿಗೊತ್ತಿ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾದರು. ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಮಾಮ ಅಂತಾ ಹೇಳಿದ್ದರು.

    ಸುದೀಪ್ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಸುಮಲತಾ ಅಂಬರೀಶ್, ಅಂಬಿ ನಿಂಗೆ ವಯಸ್ಸಾಯ್ತು ಸಿನಿಮಾ ಮಾಡಲು ಅವರನ್ನು ಒಪ್ಪಿಸಿದ್ದು ನೀವೇ. ಅಂಬರೀಶ್ ನಟಿಸಿರುವ ಉತ್ತಮ ಪಾತ್ರಗಳಲ್ಲಿ ಇದು ಒಂದು ಸಹ. ಥ್ಯಾಂಕ್ಯೂ ಸುದೀಪ್ ಅಂತಾ ಹೇಳಿದ್ದಾರೆ. ಸುಮಲತಾರ ಟ್ವೀಟ್ ಉತ್ತರಿಸಿರುವ ಸುದೀಪ್, ನಿಮ್ಮ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

    ಇದು ತಮಿಳಿನ ಪವರ್ ಪಾಂಡಿ ರಿಮೇಕು. ಅಲ್ಲಿ ರಾಜ್ ಕಿರಣ್ ಮಾಡಿದ ಪಾತ್ರವನ್ನು ಇಲ್ಲಿ ಅಂಬಿ ಮಾಡುತ್ತಿದ್ದಾರೆ. ಆದರೆ ಅದೇ ರಾಜ್ ಕಿರಣ್ ಯೌವ್ವನದ ಪಾತ್ರವನ್ನು ರಜನಿ ಅಳಿಯ ಧನುಶ್ ಮಾಡಿದ್ದರು. ಚಿತ್ರ ಸೆಪ್ಟೆಂಬರ್ 27ರಂದು ತೆರೆಕಾಣಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ತಾಯಿಗೆ ತಕ್ಕ ಮಗನ ಪಕ್ಕಾ ಮಾಸ್ ಲುಕ್!

    ತಾಯಿಗೆ ತಕ್ಕ ಮಗನ ಪಕ್ಕಾ ಮಾಸ್ ಲುಕ್!

    ಬೆಂಗಳೂರು: ಪ್ರೇಕ್ಷಕರ ನಡುವೆ ಲವರ್ ಬಾಯ್ ಆಗಿಯೇ ನೆಲೆ ನಿಂತ ನಟ ಏಕಾಏಕಿ ಮಾಸ್ ಲುಕ್ಕಿನಲ್ಲಿ ಅಭಿಮಾನಿಗಳ ಮನ ಗೆಲ್ಲೋದೊಂದು ಸಾಹಸ. ಆದರೆ ಅಜೇಯ್ ರಾವ್ ಈಗಾಗಲೇ ಅದರಲ್ಲಿ ಗೆದ್ದಿದ್ದಾರೆ. ಈ ಹಿಂದೆ ಧೈರ್ಯಂ ಚಿತ್ರದಲ್ಲಿ ಬೇರೆಯದ್ದೇ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದ ಅಜೇಯ್ ರಾವ್ ಶಶಾಂಕ್ ನಿರ್ದೇಶನದ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಪಕ್ಕಾ ಮಾಸ್ ಲುಕ್ಕಿನಲ್ಲಿ ಮಿಂಚಿದ್ದಾರೆ!

    ಇತ್ತೀಚೆಗಷ್ಟೇ ತಾಯಿಗೆ ತಕ್ಕ ಮಗ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತಲ್ಲಾ? ಅದಕ್ಕೆ ಸಿಕ್ಕಿರುವ ಭರಪೂರ ಮೆಚ್ಚುಗೆ ಮತ್ತು ವ್ಯಾಪಕ ಪ್ರತಿಕಿಯೆಗಳಾ ಅಭಿಮಾನಿಗಳಿಗೆ ಈ ಗೆಟಪ್ಪು ಇಷ್ಟವಾಗಿರೋದರ ಸಂಕೇತ. ಶಶಾಂಕ್ ಅವರು ಈ ಚಿತ್ರದ ಮೂಲಕ ಮೊದಲ ಬಾರಿ ನಿರ್ಮಾಪಕರಾಗಿದ್ದಾರೆ. ಅವರೇ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರೋ ಈ ಚಿತ್ರದ ಟ್ರೇಲರ್ ಗೆ ದೊರೆತಿರೋ ಮನ್ನಣೆಯೇ ಗೆಲುವಿನ ಲಕ್ಷಣದಂತೆಯೂ ಗೋಚರಿಸುತ್ತಿದೆ.

    ಅಮ್ಮ ಮಗನ ಬಾಂಧವ್ಯದೊಂದಿಗೇ ದುಷ್ಟರ ವಿರುದ್ಧ ಬಡಿದಾಡುವ ಕಥಾ ಹಂದರದ ತಾಯಿಗೆ ತಕ್ಕ ಮಗನ ಬಗ್ಗೆ ಪ್ರೇಕ್ಷಕರು ಕುತೂಹಲಗೊಂಡಿದ್ದಾರೆ. ಒಂದು ಟ್ರೇಲರ್ ಮೂಲಕವೇ ಇಡೀ ಚಿತ್ರವನ್ನು ಕೌತುಕದ ಕೇಂದ್ರ ಬಿಂದುವಿಗೆ ತಂದು ನಿಲ್ಲಿಸುವಲ್ಲಿ ನಿರ್ದೇಶಕ ಶಶಾಂಕ್ ಅವರೂ ಗೆದ್ದಿದ್ದಾರೆ. ಇಡೀ ಟ್ರೈಲರಿನಲ್ಲಿ ಎಲ್ಲರನ್ನು ಅಚ್ಚರಿಗೀಡು ಮಾಡಿರುವುದು ಅಜೇಯ್ ರಾವ್ ಅವರ ಗೆಟಪ್. ಈ ಹಿಂದಿನ ಲವರ್ ಬಾಯ್ ಇಮೇಜ್, ಆ ಮುಗ್ಧ ಛಾಯೆಯಿಂದ ಸಂಪೂರ್ಣವಾಗಿ ಹೊರ ಬಂದಂತೆ ಕಾಣಿಸುತ್ತಿರೋ ಅಜೇಯ್ ರಾವ್ ಈ ಚಿತ್ರದ ಮೂಲಕ ಮತ್ತಷ್ಟು ಅಭಿಮಾನಿ ಬಳಗವನ್ನು ಸಂಪಾದಿಸೋದರಲ್ಲಿ ಯಾವ ಸಂಶಯವೂ ಇಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ ಸುಮಲತಾಗೆ ಸರ್ಪ್ರೈಸ್ ಕೊಟ್ಟ ರೆಬೆಲ್ ಅಂಬಿ

    ಪತ್ನಿ ಸುಮಲತಾಗೆ ಸರ್ಪ್ರೈಸ್ ಕೊಟ್ಟ ರೆಬೆಲ್ ಅಂಬಿ

    ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಿಂದ ದೂರ ಉಳಿದಿರುವ ರೆಬಲ್ ಸ್ಟಾರ್ ಅಂಬರೀಶ್ ಆಪ್ತ ಗೆಳೆಯ, ಬಂಧುಗಳನ್ನೆಲ್ಲಾ ಭೇಟಿ ಆಗ್ತಿದ್ದಾರೆ. ರಾಜಕೀಯದಿಂದ ದೂರ ಉಳಿದು ಸದ್ಯ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಮಡದಿ ಸುಮಲಾತಾ ಅವರಿಗೆ ಅಂಬರೀಶ್ ಸರ್ಪ್ರೈಸ್ ನೀಡಿದ್ದಾರೆ.

    ಸುಮಲತಾ ಅಂಬರೀಶ್ ಸಹ ‘ತಾಯಿಗೆ ತಕ್ಕ ಮಗ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಅಂಬರೀಶ್ ದಿಡೀರ್ ಅಂತಾ ‘ತಾಯಿಗೆ ತಕ್ಕ ಮಗ’ ಸಿನಿಮಾ ಸೆಟ್ ಗೆ ತೆರಳಿ ಪತ್ನಿ ಹಾಗು ಚಿತ್ರತಂಡಕ್ಕೆ ಸರ್ಪ್ರೈಸ್ ಕೊಟ್ಟಿದ್ದಾರೆ. ಚಿತ್ರದಲ್ಲಿ ನಟ ಅಜಯ್ ರಾವ್ ತಾಯಿಯ ಪಾತ್ರದಲ್ಲಿ ಸುಮಲತಾ ಬಣ್ಣ ಹಚ್ಚಿದ್ದಾರೆ.

    ಅಂಬರೀಶ್ ಭೇಟಿ ನೀಡಿರುವ ಫೋಟೋಗಳನ್ನು ಅಜಯ್ ರಾವ್ ತಮ್ಮ ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ದಿಡೀರ್ ಅಂತ ನಮ್ಮ “ತಾಯಿಗೆ ತಕ್ಕ ಮಗ” ಶೂಟಿಂಗ್ ಸೆಟ್ ಗೆ ಭೇಟಿ ನೀಡಿದ ರೆಬೆಲ್ ಸ್ಟಾರ್ !!! ತಂದೆ ತಾಯಿ ತರಹ ಇರುವ ಸುಮಾ ಅಮ್ಮ ಹಾಗೂ ಅಂಬರೀಶ್ ಅಣ್ಣನ ಪ್ರೀತಿ ಪಡೆದ ನಾನು ಧನ್ಯ ಅಂತಾ ಅಜಯ್ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ನಟಿ ಸುಮಲತಾ ಅಂಬರೀಶ್ ಟ್ಯಾಟೋ ಹಾಕಿಸಿಕೊಂಡ ಸ್ಯಾಂಡಲ್‍ವುಡ್ ಕೃಷ್ಣ

    ಇತ್ತೀಚೆಗೆ ಅಂಬರೀಶ್ ಬಿಡುವಿನ ವೇಳೆಯಲ್ಲಿ ತಮ್ಮ ಕುಚುಕು ಗೆಳೆಯ ವಿಷ್ಣುವರ್ಧನ್ ಮನೆಗೆ ತೆರಳಿ ಭಾರತೀ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿದ್ರು. 2003ರಲ್ಲಿ ತೆರೆಕಂಡಿದ್ದ ಕನ್ನಡದ ಸೂಪರ್ ಹಿಟ್ `ಎಕ್ಸ್ ಕ್ಯೂಸ್ ಮಿ’ ಸಿನಿಮಾದ ಬಳಿಕ ಸುಮಲತಾ ಮತ್ತು ಅಜಯ್ ತಾಯಿ ಮಗನಾಗಿ ನಟಿಸುತ್ತಿದ್ದಾರೆ. ಶಶಾಂಕ್ ಸಿನಿಮಾಸ್ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬರುತ್ತಿದ್ದು, ನಿರ್ದೇಶಕ ವೇದಗುರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದಿನ ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣ ಲೀಲಾ ಸಿನಿಮಾಗಳೆರೆಡು ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದಿತ್ತು. ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜಯ್‍ ರಾವ್ ಗೆ ಜೊತೆಯಾಗಿ ಆಶಿಕಾ ರಂಗನಾಥ್ ನಟಿಸಲಿದ್ದಾರೆ.

  • ಪಾರ್ವತಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ ಸುಮಲತಾ ಅಂಬರೀಶ್!

    ಪಾರ್ವತಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ ಸುಮಲತಾ ಅಂಬರೀಶ್!

    ಬೆಂಗಳೂರು: ಹಿರಿಯ ನಟಿ ಸುಮಲತಾ ಅಂಬರೀಶ್ ಈಗ ಸ್ಯಾಂಡಲ್‍ವುಡ್‍ನಲ್ಲಿ ಪಾರ್ವತಮ್ಮ ಆಗಲು ರೆಡಿಯಾಗಿದ್ದಾರೆ. ಆದರೆ ಇವರು ಪಾರ್ವತಮ್ಮ ರಾಜ್‍ಕುಮಾರ್ ಅವರಂತೆ ಚಿತ್ರವನ್ನು ನಿರ್ಮಾಣ ಮಾಡುತ್ತಿಲ್ಲ. ಬದಲಾಗಿ ತೆರೆಯ ಮೇಲೆ ಪಾರ್ವತಮ್ಮ ಹೆಸರಿನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

    ಹರಿಪ್ರಿಯಾ ನಟಿಸುತ್ತಿರುವ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದಲ್ಲಿ ಸಮಲತಾ ಅವರು ಪಾರ್ವತಮ್ಮ ಆಗಿ ಮಿಂಚುತ್ತಿದ್ದು, ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಸುಮಲತಾ ನಟಿ ಹರಿಪ್ರಿಯಾ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಈ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಹರಿಪ್ರಿಯಾ ಅವರ 25ನೇ ಸಿನಿಮಾ. ಈ ಸಿನಿಮಾ ಮೂಲಕ ಹರಿಪ್ರಿಯಾ ತಮ್ಮ ಸಿಲ್ವರ್ ಜೂಬ್ಲಿಯ ಸಂಭ್ರಮದಲ್ಲಿದ್ದಾರೆ. ಸದ್ಯ ನಿರ್ದೇಶಕ ಶಂಕರ್ ಈ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ.

    ಈ ಚಿತ್ರದ ಶೀರ್ಷಿಕೆಗೂ ಪಾರ್ವತಮ್ಮ ರಾಜ್‍ಕುಮಾರ್ ಅವರಿಗೂ ಯಾವುದೇ ಸಂಬಂಧವಿಲ್ಲ. ಈ ಚಿತ್ರದಲ್ಲಿ ಪಾರ್ವತಮ್ಮನ ಮಗಳು ಎಂದು ಹರಿಪ್ರಿಯಾರನ್ನು ಕರೆಯುತ್ತಿರುತ್ತಾರೆ. ಹಾಗಾಗಿ ಈ ಚಿತ್ರಕ್ಕೆ ‘ಡಾಟರ್ ಆಫ್ ಪಾರ್ವತಮ್ಮ’ ಎಂದು ಟೈಟಲ್ ಇಡಲಾಗಿದೆ.

    ಮೊದಲ ಬಾರಿಗೆ ಹರಿಪ್ರಿಯಾ ತನಿಖಾಧಿಕಾರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ಈಗ ಹರಿಪ್ರಿಯಾ ಹಾಗೂ ಸುಮಲತಾ ಅಂಬರೀಶ್ ಒಟ್ಟಿಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

  • ನಟಿ ಸುಮಲತಾ ಅಂಬರೀಶ್ ಟ್ಯಾಟೋ ಹಾಕಿಸಿಕೊಂಡ ಸ್ಯಾಂಡಲ್‍ವುಡ್ ಕೃಷ್ಣ

    ನಟಿ ಸುಮಲತಾ ಅಂಬರೀಶ್ ಟ್ಯಾಟೋ ಹಾಕಿಸಿಕೊಂಡ ಸ್ಯಾಂಡಲ್‍ವುಡ್ ಕೃಷ್ಣ

    ಬೆಂಗಳೂರು: ಚಂದನವನದಲ್ಲಿ ಕೃಷ್ಣ ಎಂಬ ಹೆಸರಿನಿಂದಲೇ ಪರಿಚಿತವಾಗಿರುವ ನಟ ಅಜಯ್ ರಾವ್ ತಮ್ಮ ಕೈ ಮೇಲೆ ನಟಿ ಸುಮಲತಾ ಅಂಬರೀಶ್ ಅವರ ಟ್ಯಾಟೋ ಹಾಕಿಸಿಕೊಂಡಿದ್ದಾರೆ.

    ಇತ್ತೀಚೆಗೆ ಅಜಯ್ ರಾವ್ ನಟನೆಯ 25ನೇ ಸಿನಿಮಾ ‘ತಾಯಿಗೆ ತಕ್ಕ ಮಗ’ ಸೆಟ್ಟೇರಿದೆ. ಚಿತ್ರದಲ್ಲಿ ಅಜಯ್‍ರಾವ್ ಗೆ ತಾಯಿಯಾಗಿ ಸುಮಲತಾ ಅಂಬರೀಶ್ ನಟಿಸುತ್ತಿದ್ದಾರೆ. ಚಿತ್ರಕ್ಕಾಗಿ ಅಜಯ್ ತಮ್ಮ ಬಲಗೈ ಮೇಲೆ ಸುಮಲತಾರ ಚಿತ್ರವುಳ್ಳ ಸುಂದರವಾದ ಟ್ಯಾಟೋ ಹಾಕಿಸಿಕೊಂಡಿದ್ದು, ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    2003ರಲ್ಲಿ ತೆರೆಕಂಡಿದ್ದ ಕನ್ನಡದ ಸೂಪರ್ ಹಿಟ್ ‘ಎಕ್ಸ್ ಕ್ಯೂಸ್ ಮಿ’ ಸಿನಿಮಾದ ಬಳಿಕ ಸುಮಲತಾ ಮತ್ತು ಅಜಯ್ ತಾಯಿ ಮಗನಾಗಿ ನಟಿಸುತ್ತಿದ್ದಾರೆ. ಶಶಾಂಕ್ ಸಿನಿಮಾಸ್ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬರುತ್ತಿದ್ದು, ನಿರ್ದೇಶಕ ವೇದಗುರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದಿನ ಕೃಷ್ಣನ್ ಲವ್ ಸ್ಟೋರಿ ಮತ್ತು ಕೃಷ್ಣ ಲೀಲಾ ಸಿನಿಮಾಗಳೆರೆಡು ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದಿತ್ತು. ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜಯ್‍ರಾವ್ ಗೆ ಜೊತೆಯಾಗಿ ಆಶಿಕಾ ರಂಗನಾಥ್ ನಟಿಸಲಿದ್ದಾರೆ.

    2006ರಲ್ಲಿ ರೆಬಲ್ ಸ್ಟಾರ್ ಅಂಬರೀಶ್ ‘ತಂದೆಗೆ ತಕ್ಕ ಮಗ’ ಚಿತ್ರದಲ್ಲಿ ಉಪೇಂದ್ರರಿಗೆ ತಂದೆಯಾಗಿ ನಟಿಸಿದ್ದರು. ಇಂದು ಅದೇ ಮಾದರಿಯ ಶೀರ್ಷಿಕೆಯಲ್ಲಿ ಸುಮಲತಾ ಅಂಬರೀಶ್ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಖುಷಿಯನ್ನು ತಂದಿದೆ. ಈ ಹಿಂದೆಯೇ 1978ರಲ್ಲಿ ಡಾ.ರಾಜ್‍ಕುಮಾರ್ ‘ತಾಯಿಗೆ ತಕ್ಕ ಮಗ’ ಎಂಬ ಶೀರ್ಷಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ರಾಜ್‍ಕುಮಾರ್, ಪದ್ಮಪ್ರಿಯಾ, ಸಾಹುಕಾರ ಜಾನಕಿ, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ಉಮಾ ಶಿವಶಂಕರ್, ಟೈಗರ್ ಪ್ರಭಾಕರ್ ಸೇರಿದಂತೆ ದೊಡ್ಡ ನಟರೆಲ್ಲ ನಟಿಸಿದ್ದರು. ಇಂದಿನ ಪೀಳಿಗೆಯ ಜನರು ಸಹ ಸಿನಿಮಾ ನೋಡಲು ಇಷ್ಟ ಪಡುತ್ತಾರೆ. ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ರಾಜ್‍ಕುಮಾರ್ ಬಾಕ್ಸರ್ ಆಗಿ ನಟಿಸುವ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆಯನ್ನು ನೀಡಿದ್ದರು.

  • ರೆಬೆಲ್ ಅಂಬಿ ಸುಪುತ್ರನಿಗೆ ಭಾರೀ ಡಿಮ್ಯಾಂಡ್- ಮುಂದಿನ ವರ್ಷ ಶುರು ಅಭಿಷೇಕ್ ಸಿನಿ ಸೌಂಡ್!

    ರೆಬೆಲ್ ಅಂಬಿ ಸುಪುತ್ರನಿಗೆ ಭಾರೀ ಡಿಮ್ಯಾಂಡ್- ಮುಂದಿನ ವರ್ಷ ಶುರು ಅಭಿಷೇಕ್ ಸಿನಿ ಸೌಂಡ್!

    ಬೆಂಗಳೂರು: ಅದೊಂದು ಕಾಲವಿತ್ತು. ತಿಂಗಳಿಗೆ ಎರಡೆರಡು ಅಂಬರೀಶ್ ಸಿನಿಮಾಗಳು ರಿಲೀಸ್ ಅಗುತ್ತಿದ್ದವು. ಆ ಎರಡೂ ಚಿತ್ರಗಳು ಸೂಪರ್ ಹಿಟ್ ಆಗುತ್ತಿದ್ದವು. ಅದು ರೆಬೆಲ್ ಸ್ಟಾರ್ ಗಿದ್ದ ಅಭಿಮಾನಿಗಳ ಪ್ರೀತಿ. ಈಗ ಅದೇ ಪ್ರೀತಿಯನ್ನು ಪಡೆಯಲು ರೆಡಿಯಾಗುತ್ತಿದ್ದಾರೆ ಅಂಬಿಯ ಏಕೈಕ ಮಗ ಅಭಿಷೇಕ್.

    ಹೌದು. ಇನ್ನು ಕೆಲವು ವರ್ಷಗಳಲ್ಲಿ ಅಭಿಷೇಕ್ ಹೀರೋ ಆಗಿ ಎಂಟ್ರಿ ಕೊಡುವುದು ಖಚಿತವಾಗಿದೆ. ದೊಡ್ಡ ದೊಡ್ಡ ನಿರ್ಮಾಪಕರು ಅಂಬಿ ಮನೆ ಮುಂದೆ ಜೂನಿಯರ್ ರೆಬೆಲ್ ಸ್ಟಾರ್ ಕಾಲ್ ಶಿಟ್ ಗಾಗಿ ಕಾದು ಕುಳಿತ್ತಿದ್ದಾರೆ.


    ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ದಂಪತಿ ಪ್ರೀತಿಯ ಪುತ್ರನಾದ ಅಭಿ, ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿದ್ದು ತುಂಬಾನೇ ಕಮ್ಮಿ. ಕೆಲವು ಸಿನಿಮಾ ಪಾರ್ಟಿಗಳಲ್ಲಿ ಅಪ್ಪ ಅಮ್ಮನ ಜೊತೆ ಪೋಸ್ ಕೊಟ್ಟಿದ್ದು ಬಿಟ್ಟರೆ ಗಾಂಧಿನಗರದಿಂದ ಈ ಹುಡುಗ ಬಲು ದೂರ ದೂರ. ಅಂಬಿ ಮಗನೂ ಹೀರೋ ಆಗುತ್ತಾನಾ ಎನ್ನುವ ಪ್ರಶ್ನೆ ಅಗಾಗ ಕೇಳುತ್ತಿದ್ದವು. ಈಗ ಆ ಪ್ರೆಶ್ನೆಗೆ ಸರಿಯಾದ ಉತ್ತರ ಸಿಗುವ ಕಾಲ ಸನಿಹವಾಗಿದೆ.

    ಕಥೆ-ಚಿತ್ರಕಥೆ ರೆಡಿ ಮಾಡಿಕೊಳ್ಳದೆಯೇ, ನಿರ್ದೇಶಕ ಯಾರೆಂಬುದನ್ನು ಕನ್ಫರ್ಮ್ ಮಾಡಿಕೊಳ್ಳದೆಯೇ ಪ್ರೋಡ್ಯೂಸರ್ ಗಳು ಅಂಬಿ ಪುತ್ರ ಅಭಿಷೇಕ್ ಗಾಗಿ ಬಲೆ ಬೀಸಿದ್ದಾರೆ. ಸರ್ ನಿಮ್ಮ ಮಗನ್ನ ನಮ್ಮ ಬ್ಯಾನರ್‍ನಲ್ಲಿ ಇಂಟ್ರೊಡ್ಯೂಸ್ ಮಾಡಿ. ಗ್ರ್ಯಾಂಡ್ ಆಗಿ ಲಾಂಚ್ ಮಾಡ್ತೇವೆ ಎಂದು ಬೇಡಿಕೆ ಇಡುತ್ತಿದ್ದಾರಂತೆ. ಗಾಂಧಿನಗರ ಆಫ್ ದಿ ರೆರ್ಕಾಡ್ ಸಮಾಚಾರವೇನಂದ್ರೆ ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾದಲ್ಲಿ ಅಭಿಷೇಕ್ ನಟಿಸುತ್ತಾರೆ ಅನ್ನೊ ಸುದ್ದಿ.

    ಪ್ರಿನ್ಸ್, ಐರಾವತ ಸೇರಿದಂತೆ ಅನೇಕ ಅದ್ಧೂರಿ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಸಂದೇಶ್ ನಾಗರಾಜ್, ಅಭಿಷೇಕ್‍ಗಾಗಿ ಸಿನಿಮಾ ಮಾಡಲಿದ್ದಾರಂತೆ. ಅಂಬರೀಶ್ ಜೊತೆ ಒಂದು ಸುತ್ತಿನ ಮಾತುತೆಯನ್ನೂ ಕೂಡ ಸಂದೇಶ್ ನಾಗರಾಜ್ ಮಾಡಿದ್ದಾರಂತೆ. ಇಂತದೊಂದು ಸಮಾಚಾರ ಸದ್ಯ ಗಾಂಧಿನಗರದ ತುಂಬಾ ಸದ್ದು ಮಾಡುತ್ತಿದೆ. ಅಭಿಷೇಕ್ ಅವರ ಮೊದಲ ಸಿನಿಮಾ ನಿರ್ದೇಶನದ ಜವಾಬ್ದಾರಿಯನ್ನು ಖ್ಯಾತ ನಿರ್ದೇಶಕರಾದ ಪವನ್ ಒಡೆಯರ್ ಅಥವಾ ಚೇತನ್ ಕುಮಾರ್ ವಹಿಸಿಕೊಳ್ಳುವ ಸಾಧ್ಯತೆ ಇದ್ದು, ಬರುವ ಜನವರಿ ತಿಂಗಳು ಈ ಸಿನಿಮಾ ಸೆಟ್ಟೇರಲಿದೆ ಎನ್ನಲಾಗುತ್ತಿದೆ.

    ಇಂತಹ ಸುದ್ದಿ ಹಬ್ಬಿರುವಾಗಲೇ ಅಭಿಷೇಕ್ ಜಿಮ್‍ನಲ್ಲಿ ಮತ್ತು ಮಾರ್ಷಲ್ ಆರ್ಟ್‍ನಲ್ಲಿ ಕಸರತ್ತು ಮಾಡುತ್ತಿರುವ ಕೆಲ ಫೋಟೋಗಳು ವೈರಲ್ ಆಗಿವೆ. ಈ ಫೋಟೋ ನೋಡಿದ ಮಂದಿ ಓಹೋ ಅಭಿಷೇಕ್ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಒಟ್ಟಾರೆಯಾಗಿ ರೆಬೆಲ್ ಸ್ಟಾರ್ ಅಭಿಮಾನಿಗಳಿಗೆ ಹಾಗೂ ಅಂಬಿ ಸ್ನೇಹದ ಕಡಲಲ್ಲಿ ತೇಲಾಡುತ್ತಿರುವ ಸ್ನೇಹಿತರಿಗೆ ಅಭಿಷೇಕ್ ಸಿನಿಮಾ ರಂಗಕ್ಕೆ ಬರುತ್ತಿರುವ ಸಮಾಚಾರ ಮಂಡ್ಯದ ಸಿಹಿ ಬೆಲ್ಲ ಸವಿದಂತಾಗುತ್ತಿದೆ. ಆದಷ್ಟು ಬೇಗ ಅಭಿಷೇಕ್ ಚಿತ್ರರಂಗಕ್ಕೆ ಬರಲಿ, ಅಂಬಿಯಂತೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಲಿ ಅನ್ನೊದೆ ಕೋಟಿ ಕೋಟಿ ಅಭಿಮಾನಿಗಳ ಆಶಯ.

  • 23 ವರ್ಷಗಳ ಹಿಂದಿನ ಸುದೀಪ್ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದು ಹೀಗೆ

    23 ವರ್ಷಗಳ ಹಿಂದಿನ ಸುದೀಪ್ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದು ಹೀಗೆ

    ಬೆಂಗಳೂರು: ಕಿಚ್ಚ ಸುದೀಪ್ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ನಟಿ ಸುಮಲತಾ ಅಂಬರೀಶ್ 23 ವರ್ಷಗಳ ಹಿಂದಿನ ಫೋಟೋವನ್ನು ಪ್ರಕಟಿಸಿ ಶುಭಾಶಯ ತಿಳಿಸಿದ್ದಾರೆ.

    23 ವರ್ಷಗಳ ಹಿಂದೆ ಬೆಳ್ಳಿತೆರೆ ಮೇಲೆ ಮಿನುಗಬೇಕು ಎಂದು ಕಾಯುತ್ತಿದ್ದ ಯುವಕ ಇಂದು ತನ್ನದೇ ರೀತಿಯಲ್ಲಿ ಯಶಸ್ವಿ ಆಗಿದ್ದಾರೆ. ನಿಮ್ಮ ಬಗ್ಗೆ ಹೆಮ್ಮೆ ಆಗುತ್ತದೆ. ಸದಾ ಖುಷಿಯಾಗಿರಿ ಎಂದು ನಟಿ ಸುಮಲತಾ ಅಂಬರೀಶ್ 23 ವರ್ಷಗಳ ಹಿಂದೆ ತೆಗೆಸಿಕೊಂಡ ಫೋಟೋವನ್ನು ತಮ್ಮ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ನಟಿ ಸುಮಲತಾ ಅವರು ಪೋಸ್ಟ್ ಮಾಡಿರುವ ಟ್ವೀಟ್ ವೈರಲ್ ಆಗಿದ್ದು ಇದಕ್ಕೆ 1,527 ಲೈಕ್‍ಗಳು ಹಾಗೂ 179 ರೀ-ಟ್ವೀಟ್‍ ಆಗಿದೆ.

    ಇದನ್ನೂ ಓದಿ: ನನ್ನ ಹುಟ್ಟುಹಬ್ಬವನ್ನು ಈ ರೀತಿಯಾಗಿ ಆಚರಿಸಿ, ಅಭಿಮಾನಿಗಳಿಗೆ ಸುದೀಪ್ ಪತ್ರ