Tag: ಸುಮಲತಾ ಅಂಬರೀಶ್

  • ಸುಮಲತಾ ಪರ ನಿಂತ ಯುವ ಕಾಂಗ್ರೆಸ್‍ನ 6 ಪದಾಧಿಕಾರಿಗಳ ಉಚ್ಛಾಟನೆ

    ಸುಮಲತಾ ಪರ ನಿಂತ ಯುವ ಕಾಂಗ್ರೆಸ್‍ನ 6 ಪದಾಧಿಕಾರಿಗಳ ಉಚ್ಛಾಟನೆ

    ಮಂಡ್ಯ: ಪಕ್ಷೇತರ ಆಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ನಿಂತಿದ್ದ ಯುವ ಕಾಂಗ್ರೆಸ್ ನ 6 ಪದಾಧಿಕಾರಿಗಳ ಉಚ್ಛಾಟನೆ ಮಾಡಲಾಗಿದೆ. ಯುವ ಕಾಂಗ್ರೆಸ್ಸಿನ ರಾಜ್ಯ ಕಾರ್ಯದರ್ಶಿ ಗೀತಾ ರಾಜಣ್ಣರಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದ್ದಾರೆ.

    ಯುವ ಕಾಂಗ್ರೆಸ್ ನ ಜಿಲ್ಲಾ ಉಪಾಧ್ಯಕ್ಷ ಅರವಿಂದ್ ಕುಮಾರ್, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ್, ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಶರತ್ ರಾಮಣ್ಣ, ಮಂಡ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಿಜಯ್ ಕುಮಾರ್, ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಕೃಷ್ಣೇಗೌಡ ಮತ್ತು ಮಳವಳ್ಳಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮಹದೇವ ಪ್ರಸಾದ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಇದನ್ನೂ ಓದಿ: ಪಕ್ಷೇತರರಾಗಿ ಸ್ಪರ್ಧಿಸಿದ್ರೂ ಸುಮಲತಾ ಪರವಾಗಿಯೇ ಕೆಲಸ ಮಾಡ್ತೇವೆ- ಕೆಪಿಸಿಸಿ ಸದಸ್ಯ

    ಶುಕ್ರವಾರ ಮುಖಂಡ ಹಿಂಡವಾಳು ಸಚ್ಚಿದಾನಂದ ಅವರನ್ನು ಉಚ್ಛಾಟನೆ ಮಾಡಲಾಗಿತ್ತು. ಉಚ್ಛಾಟನೆಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಚ್ಚಿದಾನಂದ್, ನನ್ನಂತಹ ಲಕ್ಷಾಂತರ ಕಾರ್ಯಕರ್ತರು ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುತ್ತಾರೆ. ಅವರನ್ನೂ ಉಚ್ಛಾಟನೆ ಮಾಡಿ ಪಕ್ಷಕ್ಕೆ ಬೀಗ ಜಡಿಯುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಸಂಧಾನಕ್ಕೆ ಬರಬೇಡಿ, ಏನೇ ಆದ್ರೂ ನಾವು ಸುಮಲತಾರನ್ನ ಬೆಂಬಲಿಸುತ್ತೇವೆ: ಕೈ ನಾಯಕ ಸಚ್ಚಿದಾನಂದ

    ಪಕ್ಷದಿಂದ ನನ್ನ ಉಚ್ಛಾಟನೆ ಮಾಡಿರುವುನ್ನು ಸ್ವಾಗತಿಸುತ್ತೇನೆ. ಆದರೆ ಜೆಡಿಎಸ್ ಅವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ಕಗ್ಗೊಲೆ ಮಾಡ್ತಿದ್ದಾರಲ್ಲ ಅವರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತೀರಾ? ಕಾಂಗ್ರೆಸ್ ಕಾರ್ಯಕರ್ತರು ತೊಂದರೆ ಅನುಭವಿಸುತ್ತಿದ್ದಾಗ ಯಾವ ರಾಜ್ಯ ನಾಯಕರು ಸಹಾಯಕ್ಕೆ ಬರುವುದಿಲ್ಲ. ಆದರೆ ಜೆಡಿಎಸ್‍ನವರಿಗೆ ತೊಂದರೆ ಆದರೆ ಅವರ ಕುಟುಂಬವೇ ಬಂದು ಆತ್ಮಸ್ಥೈರ್ಯ ತುಂಬುತ್ತದೆ. ಕಾಂಗ್ರೆಸ್ ಕಾರ್ಯಕರ್ತರು ಅನಾಥರಾಗಿದ್ದಾರೆ ಎಂದು ಸಚ್ಚಿದಾನಂದ ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಕೈ ಮುಖಂಡರ ಉಚ್ಛಾಟನೆ ನಿರೀಕ್ಷಿಸಿದ್ದೆ- ಸುಮಲತಾ

  • ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೇಫ್ ಗೇಮ್!

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೇಫ್ ಗೇಮ್!

    – ಎಚ್ಚರಿಕೆಯ ಹೆಜ್ಜೆ ಇಡಲು ಸುಮಕ್ಕ ಪ್ಲಾನ್

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಈಗಾಗಲೇ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದ್ದು, ಇತ್ತ ಬಿಜೆಪಿ ಕೂಡ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದೆ. ಈ ಬೆನ್ನಲ್ಲೇ ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ.

    ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೇಫ್ ಗೇಮ್ ಆಡುತ್ತಿದೆ. ಹಾಗೆಯೇ ಸುಮಲತಾ ಕೂಡ ಎಚ್ಚರಿಕೆಯ ಹೆಜ್ಜೆ ಇಡಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೂಚನೆಯಂತೆ ಹೆಜ್ಜೆ ಇಡಲು ಸುಮಲತಾ ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಎಸ್‍ಎಂಕೆ ಅವರನ್ನು ಮಾತ್ರ ಮಂಡ್ಯದಲ್ಲಿ ಪ್ರಚಾರಕ್ಕೆ ಆಹ್ವಾನಿಸಲು ಚಿಂತನೆ ನಡೆಸಲಾಗಿದೆ. ಈ ಮೂಲಕ ಎಸ್‍ಎಂಕೆ ಅವರನ್ನೇ ಬಿಜೆಪಿ ಎಂದು ಬಿಂಬಿಸಿ ಉಳಿದ ನಾಯಕರನ್ನು ದೂರ ಇಡಲು ಸುಮಲತಾ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

    ಈ ಕಡೆ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರಿಗೆ ಇರಿಸುಮುರುಸು ಉಂಟಾಗದಂತೆ ಹೆಜ್ಜೆ ಇಡೋದು. ಈ ಮೂಲಕ ಬಿಜೆಪಿಯ ಬಾಹ್ಯ ಬೆಂಬಲದಿಂದ ಕೈ ಪಡೆಯೊಂದಿಗೆ ಅಖಾಡಕ್ಕೆ ಇಳಿಯುವ ಪ್ಲಾನ್ ಇದಾಗಿದೆ. ಈ ತಂತ್ರಗಾರಿಕೆಯಿಂದ ಮಾತ್ರ ಜೆಡಿಎಸ್ ವರ್ಸಸ್ ಸುಮಲತಾ ಅಖಾಡಕ್ಕೆ ಛಾನ್ಸ್ ಸಿಗಲಿದೆ. ಒಂದು ವೇಳೆ ಬಿಜೆಪಿ ನಾಯಕರನ್ನೇ ನೆಚ್ಚಿಕೊಂಡ್ರೆ ಸುಮಲತಾಗೆ ಕಷ್ಟ ಎದುರಾಗಲಿದೆ. ಹೀಗಾಗಿ ಈ ಎಲ್ಲಾ ಮುಂದಾಲೋಚನೆಗಳನ್ನು ಇಟ್ಟುಕೊಂಡು ಸುಮಲತಾ ಮಹತ್ವದ ಹೆಜ್ಜೆ ಇಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  • ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಇಲ್ಲ-ಸುಮಲತಾಗೆ ಕಮಲ ಬೆಂಬಲ

    ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಇಲ್ಲ-ಸುಮಲತಾಗೆ ಕಮಲ ಬೆಂಬಲ

    ನವದೆಹಲಿ: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹಾಕದೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಸೂಚಿಸಿದೆ.

    ಬಿಜೆಪಿ ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆಗೊಳಿಸಿದ ಜೆ.ಪಿ.ನಡ್ಡಾ, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುವುದಾಗಿ ಎಂದು ಅಧಿಕೃತವಾಗಿ ಘೋಷಿಸಿದರು.  ಇದೀಗ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾರ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ.

    ಈ ಮೊದಲು ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಡಾ. ಸಿದ್ದರಾಮಯ್ಯರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿತ್ತು. ಆದ್ರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸುಮಲತಾರಿಗೆ ಬೆಂಬಲ ನೀಡುವ ಮೂಲಕ ಸಿಎಂ ಕುಮಾರಸ್ವಾಮಿ ಅವರನ್ನು ಕಟ್ಟಿಹಾಕಲು ಬಿಜೆಪಿ ತೀರ್ಮಾನಿಸಿದೆ. ಅದರೆ ಉಳಿದ ಐದು ಕ್ಷೇತ್ರಗಳ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಿಲ್ಲ. ಬಾಕಿ ಉಳಿದ ಚಿಕ್ಕೋಡಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ರಾಯಚೂರು ಮತ್ತು ಕೊಪ್ಪಳ ಕ್ಷೇತ್ರಗಳ ಅಭ್ಯರ್ಥಿಗಳನ್ನು ಶೀಘ್ರ ಘೋಷಿಸುವುದಾಗಿ ಜೆ.ಪಿ.ನಡ್ಡಾ ಹೇಳಿದರು.

  • ಮಂಡ್ಯ ಕಾಂಗ್ರೆಸ್‍ನಲ್ಲಿ ಭುಗಿಲೆದ್ದ ಆಕ್ರೋಶ – ಸಾಮೂಹಿಕ ರಾಜೀನಾಮೆಗೆ ಯುವಪಡೆ ನಿರ್ಧಾರ!

    ಮಂಡ್ಯ ಕಾಂಗ್ರೆಸ್‍ನಲ್ಲಿ ಭುಗಿಲೆದ್ದ ಆಕ್ರೋಶ – ಸಾಮೂಹಿಕ ರಾಜೀನಾಮೆಗೆ ಯುವಪಡೆ ನಿರ್ಧಾರ!

    ಮಂಡ್ಯ: ಜೆಡಿಎಸ್ ಪರವಾಗಿ ಕೆಲಸ ಮಾಡಿ ಎಂದಿದ್ದ ಕೆಪಿಸಿಸಿ ನಾಯಕರ ವಿರುದ್ಧ ಮಂಡ್ಯ ಕಾಂಗ್ರೆಸ್‍ನ ಯುವ ನಾಯಕರು ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖಂಡರು, ನೀವೇನು ಶಿಸ್ತು ಕ್ರಮ ತೆಗೆದುಕೊಳ್ಳೋದು. ನಾವೇ ರಾಜೀನಾಮೆ ಕೊಡುತ್ತೇವೆ. ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಸಿಎಂ ಕುಮಾರಸ್ವಾಮಿಯವರೇ ಕಾಂಗ್ರೆಸ್‍ನವರ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಮಂಡ್ಯ ಕಾಂಗ್ರೆಸ್ ಇಬ್ಭಾಗ ಮಾಡಲು ಬಂದಿದ್ದಾರೆ. ಮಂಡ್ಯ ಕಾಂಗ್ರೆಸ್ ಮುಖಂಡರು ಯಾವುದೇ ಕಾರಣಕ್ಕೂ ಜೆಡಿಎಸ್ ಪರ ಪ್ರಚಾರ ಮಾಡಬಾರದು. ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಸಿಎಂ ಬಳಿ ಕೆಲಸ ಮಾಡಿಸಿಕೊಳ್ಳಬಹುದೆಂದು ಕೆಲವರ ಉಚ್ಛಾಟನೆಗೆ ಮುಂದಾಗಿದ್ದಾರೆ. ಅವರಿಗೆ ಪಕ್ಷ ಸಂಘಟನೆಗಿಂತ ಸ್ವ-ಹಿತಾಸಕ್ತಿ ಮುಖ್ಯ ಎಂದು ಆಕ್ರೋಶ ಹೊರಹಾಕಿದರು.

    ಕಾಂಗ್ರೆಸ್ ಅಧ್ಯಕ್ಷರಿಗೆ ಗಟ್ಟಿತನ ಇದ್ದರೆ ಸುಮಾರು 80 ರಿಂದ 90 ಮಂದಿಯನ್ನು ಉಚ್ಛಾಟನೆ ಮಾಡಬೇಕಾಗುತ್ತದೆ. ಕೆಲವರನ್ನು ಮಾತ್ರ ಉಚ್ಛಾಟನೆ ಮಾಡುವುದು ಸರಿಯಲ್ಲ. ಈ ಹಿಂದಿನ ಚುನಾವಣೆಯಲ್ಲಿ ಯಾರೆಲ್ಲ ಪಕ್ಷ ನಿಷ್ಠೆ ತೋರಿದ್ದಾರೆ ಎಂಬುದು ನಮಗೂ ತಿಳಿದಿದೆ. ಆದ್ದರಿಂದ ಇಂತಹ ಅನಗತ್ಯ ಕ್ರಮಗಳನ್ನು ಬಿಟ್ಟು ಮೈತ್ರಿ ಧರ್ಮದ ಪಾಲನೆಯನ್ನು ಜೆಡಿಎಸ್ ಅವರು ಮಾಡಲಿ. ಕೇವಲ ಮಂಡ್ಯದಲ್ಲಿ ಮಾತ್ರ ಮೈತ್ರಿ ಆದರೆ ಆಗುವುದಿಲ್ಲ ಅಂದಿದ್ದಾರೆ.

    ಸೌಜನ್ಯಕ್ಕಾದರು ಕಾಂಗ್ರೆಸ್ ಮಾಜಿ ಶಾಸಕರನ್ನು ಭೇಟಿ ಮಾಡಲು ಸಿಎಂ ಅವರಿಗೆ ಮನಸ್ಸಿಲ್ಲ. ಸಚಿವ ಎಚ್‍ಡಿ ರೇವಣ್ಣ ಅವರು ಭೇಟಿ ಮಾಡಿ ಸಹಕಾರ ಕೇಳಿದ್ದಾರೆ. ಆದರೆ ಮಂಡ್ಯದ ಯಾವುದೇ ಮಾಜಿ ಕಾಂಗ್ರೆಸ್ ಶಾಸಕರನ್ನು ಜೆಡಿಎಸ್ ಅಭ್ಯರ್ಥಿ ಭೇಟಿ ಮಾಡಿದ್ದಾರಾ ಎಂದು ಪ್ರಶ್ನೆ ಮಾಡಿದರು. ರಾಜೀನಾಮೆ ನೀಡುವ ಸಂದರ್ಭ ಬಂದರೆ ಎಲ್ಲರೂ ಒಟ್ಟಿಗೆ ಮಾಧ್ಯಮಗಳ ಮುಂದೆಯೇ ನೀಡುತ್ತೆವೆ ಎಂದು ಸ್ಪಷ್ಟಪಡಿಸಿದರು.

    ಮಂಡ್ಯ ಯುವ ಕಾಂಗ್ರೆಸ್‍ನ ವಿವಿಧ ಘಟಕಗಳ ಅಧ್ಯಕ್ಷರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಮುಖವಾಗಿ ಜಿಲ್ಲಾ ಯುವ ಕಾಂಗ್ರೆಸ್‍ನ ಅರವಿಂದ್, ಹೆಚ್.ಪಿ.ಶಶಿಕುಮಾರ್, ಶರತ್ ರಾಮು, ಕೃಷ್ಣೇಗೌಡ, ವಿಜಯ್ ಕುಮಾರ್, ಪ್ರದೀಪ್ ಕುಮಾರ್, ಮಂಜುನಾಥ್ ಸೇರಿದಂತೆ ಹಲವರು ಯುವ ಮುಖಂಡರು ರಾಜೀನಾಮೆಗೆ ಮುಂದಾಗಿದ್ದಾರೆ.

  • ಕೈ ಮುಖಂಡರ ಉಚ್ಛಾಟನೆ ನಿರೀಕ್ಷಿಸಿದ್ದೆ- ಸುಮಲತಾ

    ಕೈ ಮುಖಂಡರ ಉಚ್ಛಾಟನೆ ನಿರೀಕ್ಷಿಸಿದ್ದೆ- ಸುಮಲತಾ

    – ಪುಟ್ಟಣ್ಣಯ್ಯ ಇಲ್ಲದ ಕೊರತೆ ಕಾಡುತ್ತಿದೆ

    ಮಂಡ್ಯ: ನನ್ನನ್ನು ಬೆಂಬಲಿಸಿದ್ದ ಕಾಂಗ್ರೆಸ್ ಮುಖಂಡರ ಉಚ್ಛಾಟನೆಯನ್ನು ನಾನು ನಿರೀಕ್ಷಿಸಿದ್ದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ಕ್ಯಾತನಹಳ್ಳಿಯ ದಿ.ಕೆ.ಎಸ್.ಪುಟ್ಟಣ್ಣಯ್ಯ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನನ್ನನ್ನು ಬೆಂಬಲಿಸಿದ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಹಿಂಡವಾಳು ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದಾರೆ. ಕಾಂಗ್ರೆಸ್ ಅವರು ಹೀಗೆ ಮಾಡುತ್ತಾರೆ ಎಂದು ನನಗೆ ಮೊದಲೇ ತಿಳಿದಿತ್ತು. ಇದನ್ನ ನಮ್ಮ ಬೆಂಬಲಿಗರು ಸವಾಲಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

    ಪ್ರಸ್ತುತ ಸನ್ನಿವೇಶದಲ್ಲಿ ಪುಟ್ಟಣ್ಣಯ್ಯ ಇಲ್ಲದಿರುವುದು ದೊಡ್ಡ ಕೊರತೆ ಕಾಡುತ್ತಿದೆ. ರೈತರ ಪರ ನಿಲ್ಲಲು ನಾನು ಬೆಂಬಲ ಕೇಳಿದ್ದೇನೆ ಎಂದು ಹೇಳಿದ ಅವರು, ತಮ್ಮ ಪರ ಪ್ರಚಾರಕ್ಕೆ ನಿಂತಿರೋ ದರ್ಶನ ಬಗ್ಗೆ ಮಾತನಾಡಿದ ಜೆಡಿಎಸ್‍ನವರ ವಿರುದ್ಧ ಕಿಡಿಕಾರಿದ್ದಾರೆ. ಟೀಕೆ ಮಾಡೋದ್ರಿಂದ ದರ್ಶನ್ ಇಮೇಜ್ ಗೆನೋ ಏನೂ ಧಕ್ಕೆ ಆಗಲ್ಲ ಅಂದ್ರು. ಇದನ್ನೂ ಓದಿ: ಸುಮಲತಾ ಬೆನ್ನಿಗೆ ನಿಂತ ಕಾಂಗ್ರೆಸ್ಸಿನ ಮೊದಲ ವಿಕೆಟ್ ಪತನ

    ಇದೇ ವೇಳೆ ಅಮರಾವತಿ ಚಂದ್ರಶೇಖರ್ ವಿರುದ್ಧವೂ ಹರಿಹಾಯ್ದ ಅವರು, ಅಂಬರೀಶ್ ರೀತಿ ಯಾರೂ ಇರಲ್ಲ. ಅವರು ಪಕ್ಷಾತೀತವಾಗಿದ್ದರು. ಕೆಲವರು ಇದ್ದಾಗೊಂತರ ಇಲ್ಲದಿದ್ದಾಗೊಂತರ ನಡೆದುಕೊಳ್ತಾರೆ. ಇದು ಅಮರಾವತಿ ವ್ಯಕ್ತಿತ್ವ ತೋರುತ್ತದೆ ಎಂದು ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಬೇರೆಯವರು ಏನೇ ಮಾತನಾಡಿದ್ರೂ ದರ್ಶನ್, ಯಶ್ ಇಮೇಜ್ ಹಾಗೆ ಇರುತ್ತೆ: ಸುಮಲತಾ

  • ಮಂಡ್ಯ ‘ಕೈ’ ನಾಯಕರ ಅಮಾನತು – ಸ್ವಾಗತಿಸುತ್ತೇನೆ ಎಂದ ಮುಖಂಡ

    ಮಂಡ್ಯ ‘ಕೈ’ ನಾಯಕರ ಅಮಾನತು – ಸ್ವಾಗತಿಸುತ್ತೇನೆ ಎಂದ ಮುಖಂಡ

    ಮಂಡ್ಯ: ಮೈತ್ರಿ ಧರ್ಮದ ಅನ್ವಯ ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲಾಗಿದ್ದ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡಿದ ಪಕ್ಷ ಮುಖಂಡರಿಗೆ ಕಾಂಗ್ರೆಸ್ ಅಮಾನತು ಶಿಕ್ಷೆ ನೀಡಿದೆ. ಆದರೆ ಪಕ್ಷದ ಈ ನಿರ್ಧಾರವನ್ನು ನಾನು ಸ್ವಾಗತ ಮಾಡುತ್ತೇನೆ ಎಂದು ಅಮಾನತುಗೊಂಡ ಮುಖಂಡ ಶಶಿಕುಮಾರ್ ಹೇಳಿದ್ದಾರೆ.

    ಸುಮಲತಾ ಜೊತೆಗೆ ಗುರುತಿಸಿಕೊಂಡಿದ್ದಕ್ಕೆ ಕಾಂಗ್ರೆಸ್ಸಿಗರ ಅಮಾನತು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ನಾಯಕರು ಅಮಾನತು ಮಾಡುವುದನ್ನು ನಾವು ನಿರೀಕ್ಷೆ ಮಾಡಿದ್ದೆವು. ಈ ವಿಚಾರವನ್ನು ನಾನು ಸ್ವಾಗತ ಮಾಡುತ್ತೇನೆ. ಅಮಾನತು ಆದೇಶ ನನಗೆ ಕೊಡುವ ಮೊದಲು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ರಮೇಶ್ ಜಾರಕಿಹೊಳಿ ಹಾಗೂ ಇತರೆ ಶಾಸಕರಿಗೆ ಕೊಡಬೇಕಿತ್ತು. ಅವರಿಗೆ ಏಕೆ ಕೊಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

    ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರ ಚುನಾವಣೆ ಮಾಡಲ್ಲ ಎಂದು ಅಮಾನತು ಮಾಡಿದ್ದಾರೆ. ನಾಳೆ ಸ್ಥಳೀಯ ಸಂಸ್ಥೆ ಚುನಾವಣೆ ಬಂದಾಗ ಜೆಡಿಎಸ್ ನಮ್ಮ ಎದುರಾಳಿ. ಆಗ ಜೆಡಿಎಸ್ ಪರ ಇದ್ದಾನೆಂದು ನೋಟಿಸ್ ಕೊಡುತ್ತರಾ ಎಂದು ಪ್ರಶ್ನೆ ಮಾಡಿದರು. ನಾಯಕರು ನೀಡಿರುವ ಅಮಾನತು ಆದೇಶವನ್ನು ನಾವು ಕೇರ್ ಮಾಡಲ್ಲ. ಸಿಎಂ ಕುಮಾರಸ್ವಾಮಿ ಅವರು ಕಾಂಗ್ರೆಸ್ಸಿಗರ ಸಹಾಯ ಬೇಡ ಎಂದಿದ್ದಾರೆ. ಅದ್ದರಿಂದ ಜೆಡಿಎಸ್ ನಾಯಕರಿಂದಲೇ ಚುನಾವಣೆ ಗೆಲ್ಲಲಿ ಎಂದು ಸವಾಲು ಎಸೆದರು.

    ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಕೇವಲ ಶೇ.25 ರಷ್ಟು ಮತಗಳು ಕಡಿಮೆ ಆಗಿತ್ತು, ಆದರೆ ಈ ಬಾರಿ ಉಳಿದ ಶೇ.75 ರಷ್ಟು ಮತಗಳನ್ನು ಪಕ್ಷ ಕಳೆದುಕೊಳ್ಳಲಿದೆ. ಪಕ್ಷ ಕುಗ್ಗಿ ಹೋಗುತ್ತಿದ್ದರು ಕೂಡ ನಾಯಕರು ಮಾತ್ರ ಏಕೆ ಈ ರೀತಿ ಮೈತ್ರಿಗೆ ಒಂದಾಗಿದ್ದಾರೆ ಎಂಬುವುದು ನಮಗೆ ತಿಳಿಯುತ್ತಿಲ್ಲ ಎಂದರು. ಅಲ್ಲದೆ ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಇಲ್ಲವಾಗುತ್ತದೆ. ಅಂತಹ ಸಂದರ್ಭದಲ್ಲಿ ಇದರ ಪ್ರತಿಫಲವನ್ನು ಕಾಂಗ್ರೆಸ್ ಹೈಕಮಾಂಡ್ ಸ್ವೀಕರಿಸಬೇಕಾಗುತ್ತದೆ ಎಂದರು.

  • ಬೇರೆಯವರು ಏನೇ ಮಾತನಾಡಿದ್ರೂ ದರ್ಶನ್, ಯಶ್ ಇಮೇಜ್ ಹಾಗೆ ಇರುತ್ತೆ: ಸುಮಲತಾ

    ಬೇರೆಯವರು ಏನೇ ಮಾತನಾಡಿದ್ರೂ ದರ್ಶನ್, ಯಶ್ ಇಮೇಜ್ ಹಾಗೆ ಇರುತ್ತೆ: ಸುಮಲತಾ

    – ಅಭಿಮಾನಿಗಳಿಗೆ ಆ ಫೀಲ್ ಬಂದ್ರೆ ತಡೆಯೋಕೆ ಆಗಲ್ಲ

    ಮಂಡ್ಯ: ಬೇರೆಯವರು ಏನು ಮಾತನಾಡಿದರೂ ದರ್ಶನ್ ಹಾಗೂ ಯಶ್ ಅವರ ಪಾಪ್ಯುಲಾರಿಟಿ ಹಾಗೂ ಇಮೇಜ್ ಹಾಗೆ ಇರುತ್ತೆ. ಇವರಿಗೇನೂ ನಷ್ಟ ಆಗಲ್ಲ. ಅಭಿಮಾನಿಗಳಿಗೆ ಆ ಫೀಲ್ ಬಂದರೆ ಯಾರು ತಡೆಯಲು ಆಗಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಹೇಳಿದ್ದಾರೆ.

    ಕೆ. ಆರ್ ನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸುಮಲತಾ, ದರ್ಶನ್ ಹಾಗೂ ಯಶ್ ಅಭಿಮಾನಿಗಳ ಶಕ್ತಿ ಕಡೆಗಣಿಸಲು ಹೋದರೆ ತುಂಬಾ ತಪ್ಪಾಗುತ್ತೆ. ಅದರ ಪರಿಣಾಮ ಅವರ ಮೇಲೆ ಬೀಳುತ್ತೆ. ಏಕೆಂದರೆ ಕೇವಲ ಮಂಡ್ಯ ಅಷ್ಟೇ ಅಲ್ಲ, ಎಲ್ಲಾ ಕಡೆಯೂ ಈ ಪರಿಣಾಮ ಬೀರುತ್ತೆ ಎಂದರು.

    ಅಲ್ಲದೆ ಈ ಮಾತುಗಳಿಂದ ದರ್ಶನ್ ಹಾಗೂ ಯಶ್‍ಗೆ ಏನು ಆಗಲ್ಲ. ಅವರ ಪಾಪ್ಯುಲಾರಿಟಿ ಹಾಗೂ ಇಮೇಜ್ ಹಾಗೆ ಇರುತ್ತೆ. ಜನ ಕೂಡ ಅವರ ಸಿನಿಮಾಗಳನ್ನು ಇಷ್ಟಪಟ್ಟು ನೋಡುತ್ತಾರೆ. ಇವರಿಗೇನೂ ನಷ್ಟ ಆಗಲ್ಲ. ಅಭಿಮಾನಿಗಳಿಗೆ ಆ ಫೀಲ್ ಬಂದರೆ(ಕೋಪ) ಯಾರು ತಡೆಯೋಕೆ ಆಗಲ್ಲ ಎಂದು ಫ್ಯಾನ್ಸ್ ಗಳ ಮೇಲೆ ಅಸಮಾಧಾನ ವ್ಯಕ್ತವಾದ ವಿಚಾರಕ್ಕೆ ಸುಮಲತಾ ಸ್ಪಷ್ಟನೆ ನೀಡಿದ್ದಾರೆ.

    ಕೆ.ಆರ್ ನಗರದಲ್ಲಿ ಸುಮಲತಾ ಮಿಂಚಿನ ಪ್ರಚಾರ ನಡೆಯುತ್ತಿದೆ. ಇಂದು ನಗರದ ಜಾಮಿಯಾ ಮಸೀದಿಗೆ ಸುಮಲತಾ ಹಾಗೂ ಪುತ್ರ ಅಭಿಷೇಕ್ ಭೇಟಿ ನೀಡಿದ್ದಾರೆ. ಅಭಿಷೇಕ್ ಟೋಪಿ ಧರಿಸಿ, ಮಸಿದಿ ಒಳಗೆ ಮುಸ್ಲಿಂ ಭಾಂದವರ ಜೊತೆ ಕುಳಿತುಕೊಂಡರು. ಈ ವೇಳೆ ಸುಮಲತಾ ಮಸೀದಿ ಹೊರಗೆ ನಿಂತಿದ್ದರು.

    ಅಭಿಷೇಕ್ ಮಸೀದಿಗೆ ಹೋದಾಗ ಮುಸ್ಲಿಂ ಬಾಂಧವರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ನಮಾಜ್ ನಡೆಯುತ್ತಿದ್ದ ಹಿನ್ನಲೆಯಲ್ಲಿ ಸುಮಲತಾ ಹಾಗೂ ಪುತ್ರ ಅಭಿಷೇಕ್ 10 ನಿಮಿಷಕ್ಕೂ ಹೆಚ್ಚು ಕಾಲ ಮಸೀದಿ ಹೊರಗಡೆ ಕಾದು ನಿಂತಿದ್ದರು. ಮಸೀದಿ ದ್ವಾರದ ಮುಂದೆಯೇ ನಿಂತು ಜನರ ಜೊತೆ ಮಾತುಕತೆ ನಡೆಸಿದರು. ನಮಾಜ್ ಮುಗಿದ ಬಳಿಕ ಅಭಿಷೇಕ್ ಮಸೀದಿ ಒಳಗೆ ಹೋಗಿದ್ದಾರೆ.

  • ‘ರೆಬೆಲ್ ‘ ರಣಭೇರಿ..!

    ‘ರೆಬೆಲ್ ‘ ರಣಭೇರಿ..!

    https://www.youtube.com/watch?v=S5Ed7g_lTcE

  • ಮಂಡ್ಯಗಾಗಿ ಬೆಂಗ್ಳೂರಿನಲ್ಲಿ ಬೆಟ್ಟಿಂಗ್-ಮತದಾರರ ಮನೆಯಂಗಳದಲ್ಲಿ ಬಾಡೂಟ!

    ಮಂಡ್ಯಗಾಗಿ ಬೆಂಗ್ಳೂರಿನಲ್ಲಿ ಬೆಟ್ಟಿಂಗ್-ಮತದಾರರ ಮನೆಯಂಗಳದಲ್ಲಿ ಬಾಡೂಟ!

    -ಮಂಡ್ಯ ಮೆನು ಹೀಗಿದೆ?

    ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ರಣಕಹಳೆಯ ಸದ್ದು ಮುಗಿಲು ಬಿಟ್ಟಿದೆ. ಅದರಲ್ಲೂ ಮಂಡ್ಯದ ಅಖಾಡವಂತೂ ಸಖತ್ ರಂಗೇರಿದೆ. ಈಗ ರಾಜ್ಯದ ಅಂಗಳದಲ್ಲಿ ಚುನಾವಣಾ ಬೆಟ್ಟಿಂಗ್ ಅಬ್ಬರ, ಇನ್ನೊಂದಡೆ ಯುಗಾದಿಗೆ ಬಾಡೂಟ, ಸಿಹಿ ಊಟದ ಮೆನು ಕೂಡ ರೆಡಿಯಾಗಿದೆ ಮಾತುಗಳು ಸಕ್ಕರೆ ನಾಡಿನಲ್ಲಿ ಕೇಳಿ ಬರುತ್ತಿವೆ.

    ಮಂಡ್ಯದಲ್ಲಿ ಸುಮಲತಾ ಗೆಲ್ತಾರೆ ಎಂದು ಕೆಲವರು ಹೇಳಿದರೆ, ಹಲವರು ನಿಖಿಲ್ ಮಂಡ್ಯ ಚಕ್ರವ್ಯೂಹ ಭೇದಿಸುತ್ತಾರೆ ಎಂದು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಸಾವಿರ ರೂಪಾಯಿಯಿಂದ ಕೋಟಿ ಲೆಕ್ಕದಲ್ಲಿ ಬೆಟ್ಟಿಂಗ್ ಹವಾ ಜೋರಾಗಿದೆ. ದುಡ್ಡಿನ ಬೆಟ್ಟಿಂಗ್ ಅಷ್ಟೇ ಅಲ್ವಂತೆ, ಜಮೀನು ಅಡವಿಟ್ಟು ಕೂಡ ಬೆಟ್ಟಿಂಗ್ ಮೇನಿಯಾ ಶುರುವಾಗಿದ್ಯಯಂತೆ. ಇನ್ನು ಕಲಬುರ್ಗಿ ಮೈಸೂರು-ಕೊಡಗು ಕ್ಷೇತ್ರದ ಬಗ್ಗೆಯೂ ಬೆಟ್ಟಿಂಗ್ ಶುರುವಾಗಿದೆ ಎಂದು ಮತದಾರರು ಹೇಳುತ್ತಿದ್ದಾರೆ.

     

    ಮಂಡ್ಯದ ಮತದಾರಿಗೆ ಈಗ ಯುಗಾದಿ ಹಬ್ಬಕ್ಕೆ ಭರ್ಜರಿ ಬಾಡೂಟ, ಸಿಹಿ ಊಟದ ಮೆನು ಹಂಚಿಕೆಯಾಗುತ್ತಿದೆ. ಸೈಲೆಂಟ್ ಆಗಿ ಮತದಾರರ ಮನೆಯಂಗಳದಲ್ಲಿ ಮೆನುಗಳು ಬೀಳುತ್ತಿದೆಯಂತೆ ಎಂದು ಹೇಳಲಾಗುತ್ತಿದೆ. 2 ಕೆಜಿ ಮಟನ್, 2 ಕೆಜಿ ಚಿಕನ್, 10 ಕೆಜಿ ಅಕ್ಕಿ, 2 ಕೆಜಿ ಬೆಲ್ಲ, 1 ಕೆಜಿ ಸಕ್ಕರೆ, 2 ಕೆಜಿ ಬೇಳೆ, 2 ಕೆಜಿ ಚಿರೋಟಿ ರವೆ, 2 ಕೆಜಿ ಸನ್ ಪ್ಲವರ್ ಆಯಿಲ್ ಮತ್ತು 2 ಕೆಜಿ ಬಿರಿಯಾನಿ ರೈಸ್ ಮಂಡ್ಯ ಮತದಾರರ ಮನೆಯನ್ನ ಈ ಎಲ್ಲ ದಿನಸಿ ಪದಾರ್ಥಗಳು ಸೇರಲು ಸಿದ್ಧವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

    ಇತ್ತ ಚುನಾವಣಾ ಆಯೋಗ ಮಂಡ್ಯದ ಮೇಲೆ ಸಹ ಹದ್ದಿನ ಕಣ್ಣಿಟ್ಟಿದೆ. ಬುಧವಾರ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲಿದ್ದಾರೆ.