Tag: ಸುಮಲತಾ ಅಂಬರೀಶ್

  • ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ: ಡಿಕೆಶಿ

    ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ: ಡಿಕೆಶಿ

    – ಸಂಸದೆ ಸುಮಲತಾಗೆ ಟಾಂಗ್

    ಮಂಡ್ಯ: ಸಕ್ಕರೆ ನಾಡಿನ ಲೋಕಸಭಾ ಕ್ಷೇತ್ರಕ್ಕೆ ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಅವರು ತಮ್ಮ ಅಭ್ಯರ್ಥಿಯನ್ನು ಪರಿಚಯಿಸಿದ್ದಾರೆ.

    ಮಂಡ್ಯದ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಭಾಷಣದ ಆರಂಭದಲ್ಲೇ ಸ್ಟಾರ್ ಚಂದ್ರು ಅವರನ್ನು ಪರಿಚಯ ಮಾಡಿಕೊಟ್ಟರು. ಯಾರು ಅಂತಾ ನಿಮಗೆಲ್ಲ ಗೊತ್ತಲ್ವಾ?. ಸ್ಟಾರ್ ಚಂದ್ರು ಅವರು ಅಂತಾ ಪರಿಚಯಿಸಿದರು. ಈ ಮೂಲಕ ಸ್ಟಾರ್ ಚಂದ್ರು (Star Chandru) ಅವರನ್ನ ಮಂಡ್ಯದ ಗಂಡು ಎಂದು ಡಿಕೆಶಿ ಬಣ್ಣಿಸಿದರು. ಡಿಕೆಶಿ ಪರಿಚಯಿಸ್ತಿದ್ದಂತೆ ಸ್ಟಾರ್ ಚಂದ್ರು ಅವರು ಎದ್ದು ನಿಂತು ಕೈ ಮುಗಿದು ನಮಸ್ಕರಿಸಿದರು.

    ತೆನೆ ಬಿಸಾಕಿ ಕಮಲ ತಬ್ಬಿದ ಕುಮಾರಣ್ಣ: ನಾನು, ಸಿದ್ದರಾಮಯ್ಯ ನಿಮ್ಮಿಂದ ಜೈಕಾರ, ಹೂ ಹಾರ ಹಾಕಿಸಿಕೊಳ್ಳಲು ಬಂದಿಲ್ಲ. 5 ಗ್ಯಾರಂಟಿ ಅನುಷ್ಠಾನಕ್ಕೆ ಕಾರಣಕರ್ತರಾದ ನಿಮಗೆ ಧನ್ಯವಾದ ಹೇಳಲು ಬಂದಿದ್ದೇವೆ. ದೇವರು ವರವನ್ನು ಕೊಡಲ್ಲ, ಶಾಪವನ್ನು ಕೊಡಲ್ಲ ಅವಕಾಶ ಮಾತ್ರ ಕೊಡುತ್ತಾನೆ. ನೀವು ಕೊಟ್ಟ ಅವಕಾಶದಿಂದ ದೇಶಕ್ಕೆ ಮಾದರಿ ಆಡಳಿತ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದಿದ್ದೆ. 5 ಗ್ಯಾರಂಟಿ ನೋಡಿ ಅರಳಿದ ಕಮಲ ಮುದುಡಿತು. ಕುಮಾರಣ್ಣ ತೆನೆ ಬಿಸಾಕಿ ಕಮಲ ತಬ್ಬಿದರು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಪ್ರತಾಪ್ ಸಿಂಹ 10 ವರ್ಷದಲ್ಲಿ ಉತ್ತಮವಾದ ಕೆಲಸ ಮಾಡಿದ್ದಾರೆ, ಟಿಕೆಟ್ ಸಿಗುವ ವಿಶ್ವಾಸವಿದೆ: ಜಿಟಿಡಿ

    ಕೃಷ್ಣನ‌ ತಂತ್ರ ಇದ್ರೆ ಯಶಸ್ಸು: ತಾಯಂದಿರ ಮೊಗದಲ್ಲಿ ನಗು ಕಾಣುತ್ತಿದೆ. ಗ್ಯಾರಂಟಿ ಯೋಜನೆಗಳು ಬಳಕೆ ಆಗುತ್ತಿವೆ. ಫ್ರೀಯಾಗಿ ಬಸ್‌ನಲ್ಲಿ ಓಡಾಡುತ್ತಿದ್ದೀರಾ?. ಇದೇ ವೇಳೆ 2000 ಸಾವಿರ ಬರ್ತಿದೆಯಾ ಎಂದು ಕೇಳಿದರು. ನಿಮ್ಮ‌ ಹೆಂಡತಿಯರಿಗೂ 2000 ಬರ್ತಿದೆ ಅಲ್ವಾ ಕೈ ಎತ್ತಿ ಎಂದು ಹಾಸ್ಯ ಚಟಾಕಿ ಹಾರಿಸಿದ ಡಿಕೆ, ಇಂತಹ ಕಾರ್ಯಕ್ರಮ ಮಾಡಿದ್ದು ಕುಮಾರಸ್ವಾಮಿ, ಯಡಿಯೂರಪ್ಪ ಅಲ್ಲ. ಗ್ಯಾರಂಟಿ ಯೋಜನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನುಡಿದಂತೆ ನಡೆದದ್ದು ಕಾಂಗ್ರೆಸ್ ಸರ್ಕಾರ. ಧರ್ಮರಾಯ ಧರ್ಮತ್ವ, ಕರ್ಣನ ದಾನ, ಅರ್ಜುನ ಗುರಿ, ಕೃಷ್ಣನ‌ ತಂತ್ರ ಇದ್ರೆ ಯಶಸ್ಸು ಎಂದು ಹೇಳಿದರು.

    ರೈತರೇ ಆತ್ಮಸಾಕ್ಷಿ ಮುಟ್ಟಿ ಹೇಳಿ: ಇವತ್ತಿಗೆ ಕೆಪಿಸಿಸಿ ಅಧ್ಯಕ್ಷನಾಗಿ 4 ವರ್ಷ ತುಂಬಿದೆ. ಖಾಲಿ ಇದ್ದ ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಹೇಳಿ. ಕೆರೆ ತುಂಬಿಸಲು, ನಾಲೆ ಅಭಿವೃದ್ಧಿಗೆ 2000 ಕೋಟಿ ಮಂಜೂರು. KRS ಪ್ರವಾಸಿ ಕೇಂದ್ರ ಮಾಡಲು ತೀರ್ಮಾನ. ರೈತರ ಬದುಕು, ನೀರಿಗಾಗಿ ಮೇಕೆದಾಟು ಯೋಜನೆ. ಮೇಕೆದಾಟು ಅನುಷ್ಠಾನ ಆದರೆ ಕಷ್ಟಕಾಲದಲ್ಲಿ ಸಹಕಾರಿ. ಬಿಜೆಪಿ, ಜೆಡಿಎಸ್‌ ಸರ್ಕಾರ ಇದ್ದಾಗ ಇದ್ಯಾವುದನ್ನು ಮಾಡಲಿಲ್ಲ. ರೈತರಿದ್ದೀರಾ ನಿಮ್ಮ ಬೆಳೆಗಳನ್ನು ಉಳಿಸಿದ್ದೇವೆ, ಆತ್ಮಸಾಕ್ಷಿ ಮುಟ್ಟಿ ಹೇಳಿ ಎಂದರು.

    ಅಂಬರೀಶ್‌ ಹೆಸರಲ್ಲಿ ರಸ್ತೆ: ಇವತ್ತು ನಂಟಸ್ಥನ ಮಾಡಿಕೊಂಡು ಓಡಾಡುವ ಜೆಡಿಎಸ್‌-ಬಿಜೆಪಿ (JDS- BJP) ಏನು ಮಾಡಿದ್ದಾರೆ. ದೇವೇಗೌಡರು ಇವತ್ತು ಅಯ್ಯಯ್ಯೋ ಎಂದು ಕಣ್ಣೀರು ಹಾಕುತ್ತಿದ್ದಾರೆ. ನಿಮ್ಮ ಕಣ್ಣೀರು ನಿಮ್ಮ‌ ಮನೆಗೆ ಹೊರತು ರಾಜ್ಯಕ್ಕಲ್ಲ ದೇವೇಗೌಡರೇ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರನ್ನು ಉಳಿಸಲು ಗ್ಯಾರಂಟಿ ಯೋಜನೆ. ನಿಮ್ಮ‌ ಋಣ ತೀರಿಸಿದ ಸಮಾಧಾನ ನಮಗಿದೆ. ಅಂಬರೀಶ್ ನಮ್ಮ ಪಕ್ಷದಲ್ಲಿ ಮಂತ್ರಿಯಾಗಿದ್ದರು. ಅಂಬರೀಶ್ (Ambareesh) ಅವರ ಹೆಸರಲ್ಲಿ ರಸ್ತೆ ಮಾಡುತ್ತೇವೆ. ಪ್ರಾಣ ಬಿಡುವಾಗ ಕಾಂಗ್ರೆಸ್ಸಿಗರಾಗಿ ಬಿಟ್ರು. ಇದೆಲ್ಲಾ ನಿಮ್ಮ ತಲೇಲಿ ಇರಲಿ. ಅಂಬರೀಶ್ ಸ್ನೇಹಿತರನ್ನೇ ಅಭ್ಯರ್ಥಿ ಮಾಡಿದ್ದೇವೆ. ಸೂರ್ಯ ಚಂದ್ರರಷ್ಟೇ ಸ್ಟಾರ್ ಗೆಲುವು ಸತ್ಯ. ನಿಜತಾನೇ ಅಮ್ಮಾ, ಅಕ್ಕಾ ಎಂದು ಡಿಕೆಶಿ ಮತಯಾಚಿಸುವ ಮೂಲಕ ಸಂಸದೆ‌ ಸುಮಲತಾಗೆ ಡಿಸಿಎಂ‌ ಡಿಕೆಶಿ ಟಾಂಗ್ ಕೊಟ್ಟರು.

  • ಹೊಸ ಮೈಶುಗರ್ ಕಾರ್ಖಾನೆ ನಿರ್ಮಾಣಕ್ಕೆ MP ಸುಮಲತಾ ತೀವ್ರ ವಿರೋಧ

    ಹೊಸ ಮೈಶುಗರ್ ಕಾರ್ಖಾನೆ ನಿರ್ಮಾಣಕ್ಕೆ MP ಸುಮಲತಾ ತೀವ್ರ ವಿರೋಧ

    ಬೆಂಗಳೂರು: ಮಂಡ್ಯದಲ್ಲಿ ಹೊಸ ಮೈಶುಗರ್‌ ಕಾರ್ಖಾನೆ ನಿರ್ಮಾಣ ಮಾಡಲು ಹೊರಟಿರುವುದಕ್ಕೆ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿರುವ ಸಂಸದೆ, ಹೊಸ ಸಕ್ಕರೆ ಕಾರ್ಖಾನೆ ಬದಲು, ಮೈ ಶುಗರ್ ಫ್ಯಾಕ್ಟರಿಯನ್ನೇ (My Sugar Factory) ಮತ್ತಷ್ಟು ಬಲಪಡಿಸಲಿ ಎಂದು ಆಗ್ರಹಿಸಿದ್ದಾರೆ.

    ಪೋಸ್ಟ್‌ನಲ್ಲೇನಿದೆ..?: ಮಂಡ್ಯದ ಅಸ್ಮಿತೆ, ರೈತರ ಒಡನಾಡಿಯಾಗಿರುವ ಮೈ ಶುಗರ್ ಫ್ಯಾಕ್ಟರಿಗೆ ಮರುಜೀವ ಕೊಡುವುದಕ್ಕಾಗಿ ನಾನು ಮಾಡಿದ ಹೋರಾಟ ತಮಗೆಲ್ಲ ಗೊತ್ತಿದೆ. ಆ ಫ್ಯಾಕ್ಟರಿಗೆ ಮತ್ತಷ್ಟು ಶಕ್ತಿ ತುಂಬುವ ಬದಲು, ಹೊಸ ಕಾರ್ಖಾನೆ ಹಾಗೂ ಅದೇ ಆವರಣದಲ್ಲಿ ಐಟಿ ಹಬ್ ಮಾಡಲು ಕರ್ನಾಟಕ ಸರಕಾರ ಹೊರಟಿರುವುದಕ್ಕೆ ನನ್ನ ವಿರೋಧವಿದೆ.

    ಅಗತ್ಯ ಬಿದ್ದರೆ ಮೈ ಶುಗರ್ ಫ್ಯಾಕ್ಟರಿಯ ಆಸ್ತಿಯನ್ನು ಮಾರಾಟಕ್ಕೆ ಇಡುತ್ತೇವೆ ಎನ್ನುವ ಸರಕಾರದ ನಿಲುವಿಗೆ ನನ್ನ ತೀವ್ರ ವಿರೋಧವಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪುವುದಕ್ಕೆ ಸಾಧ್ಯವಿಲ್ಲ. ಜೊತೆಗೆ ಐಟಿ ಹಬ್ ಅನ್ನು ಬೇರೆ ಯಾವುದಾದರೂ ಸ್ಥಳದಲ್ಲಿ ಮಾಡಿ, ಮೈ ಶುಗರ್ ಆವರಣದಲ್ಲಿ ಮಾಡುವುದಕ್ಕೆ ನಾನಂತೂ ಬಿಡುವುದಿಲ್ಲ. ಇದನ್ನೂ ಓದಿ: ಶಿವರಾತ್ರಿ ಮೆರವಣಿಗೆ ವೇಳೆ ವಿದ್ಯುತ್‌ ಶಾಕ್‌ – 14 ಮಕ್ಕಳು ಆಸ್ಪತ್ರೆಗೆ ದಾಖಲು

    ಈವರೆಗೂ ಮೈ ಶುಗರ್ ಫ್ಯಾಕ್ಟರಿಗೆ ಬಂದಿರುವ ಹಣ ಏನಾಯಿತು ಎನ್ನುವುದಕ್ಕೆ ಉತ್ತರವೇ ಇಲ್ಲ. ಆದರೂ, ಹೊಸ ಕಾರ್ಖಾನೆ ಪ್ರಾರಂಭ ಮಾಡುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಹೊಸ ಸಕ್ಕರೆ ಕಾರ್ಖಾನೆ ಬದಲು, ಮೈ ಶುಗರ್ ಫ್ಯಾಕ್ಟರಿಯನ್ನೇ ಮತ್ತಷ್ಟು ಬಲಪಡಿಸಲಿ ಎಂದು ಸಂಸದೆ ಆಗ್ರಹಿಸಿದ್ದಾರೆ.

  • ಚುನಾವಣೆ ಹೊಸ್ತಿಲಲ್ಲೇ ಸಂಸದೆ ಸುಮಲತಾಗೆ ಶುಭ ಸೂಚನೆ

    ಚುನಾವಣೆ ಹೊಸ್ತಿಲಲ್ಲೇ ಸಂಸದೆ ಸುಮಲತಾಗೆ ಶುಭ ಸೂಚನೆ

    ಮಂಡ್ಯ: ಲೋಕಸಭಾ ಚುನಾವಣೆ (Loksabha Election 2024) ಹೊಸ್ತಿಲಲ್ಲಿಯೇ ಸಂಸದೆ ಸುಮಲತಾಗೆ ಶಕ್ತಿ ದೇವಿಯಿಂದ ಶುಭ ಸೂಚನೆ ಸಿಕ್ಕಿದೆ.

    ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ನಿಮಿಷಾಂಬ ದೇಗುಲದಲ್ಲಿ (Nimishambha Temple) ಸುಮಲತಾ ಅಂಬರೀಶ್ ಅವರು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸುತ್ತಿರುವಾಗ ದೇವಿಯು ಬಲಭಾಗದಲ್ಲಿ ಹೂ ನೀಡುವ ಮೂಲಕ ಶುಭ ಸೂಚನೆ ನೀಡಿದ್ದಾಳೆ.

    ದೇವಿ ಬಲಗಡೆ ಹೂ ನೀಡಿದ್ರೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಒಳಿತಾಗಬಹುದು ಎಂಬ ಚರ್ಚೆ ನಡೆಯುತ್ತಿದೆ. ದೇವಿಯ ಶುಭ ಸೂಚನೆಯಿಂದ ಸುಮಲತಾ ಸಂತಸಗೊಂಡಿದ್ದಾರೆ. ಇದನ್ನೂ ಓದಿ: ಸಂಧಾನ ಬಳಿಕವೂ ಶಮನವಾಗದ ಸುಮಲತಾ-ಸಚ್ಚಿದಾನಂದ ನಡುವಿನ ಮುನಿಸು!

    ನಿಮಿಷಾಂಬ ದೇಗುಲಕ್ಕೆ ಬಂದ್ರೆ ಒಂದು ವೈಬ್ರೇಷನ್ ಬರುತ್ತದೆ. ನನಗೋಸ್ಕರ ಅಂತ ನಾನು ಯಾವತ್ತೂ ಕೇಳಿಕೊಳ್ಳಲ್ಲ. ದೇಗುಲಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದೇನೆ. ಇವತ್ತು ದೇವಿ ಆಶೀರ್ವಾದ ಮಾಡಿದ್ದಾಳೆ ಎಂದು ಸಂಸದೆ ಹೇಳಿದರು.

  • ಸಂಧಾನ ಬಳಿಕವೂ ಶಮನವಾಗದ ಸುಮಲತಾ-ಸಚ್ಚಿದಾನಂದ ನಡುವಿನ ಮುನಿಸು!

    ಸಂಧಾನ ಬಳಿಕವೂ ಶಮನವಾಗದ ಸುಮಲತಾ-ಸಚ್ಚಿದಾನಂದ ನಡುವಿನ ಮುನಿಸು!

    ಮಂಡ್ಯ: ಸಕ್ಕರೆ ನಾಡಿನ ಲೋಕಸಭಾ ಅಖಾಡ ರಂಗೇರಿದೆ. ಅಂದು 2019ರ ಲೋಕಸಭಾ ಚುನಾವಣೆ (Loksabha Election) ವೇಳೆ ಸುಮಲತಾ-ನಿಖಿಲ್ ಕುಮಾರಸ್ವಾಮಿ ಮಧ್ಯೆ ಲೋಕ ಯುದ್ಧ ಜೋರಾಗಿ ನಡೆದಿತ್ತು. ನಿಖಿಲ್ ಪರ ಅವರ ತಂದೆ ಆಗಿನ ಸಿಎಂ ಕುಮಾರಸ್ವಾಮಿ, ಮಂತ್ರಿ ಮಂಡಲದ ಮಂತ್ರಿಗಳು ಸೇರಿದಂತೆ ಹಲವು ಘಟಾನುಘಟಿ ನಾಯಕರು ಅಬ್ಬರದ ಪ್ರಚಾರ ಮಾಡಿದ್ದರು. ಇನ್ನೊಂದೆಡೆ ಸುಮಲತಾ ಅಂಬರೀಶ್ ಪರವಾಗಿ ಜೋಡೆತ್ತಿನ ರೀತಿ ಅಬ್ಬರದ ಪ್ರಚಾರ ಮಾಡಿದ್ದು ದರ್ಶನ್ (Darshan) ಮತ್ತು ಯಶ್ (Yash). ಸುಮಲತಾ ಅಂಬರೀಶ್ (Sumalatha Ambareesh) ಅವರ ಗೆಲುವಿನ ಹಿಂದೆ ಕೇವಲ ದರ್ಶನ್ ಮತ್ತು ಯಶ್ ಅವರ ಪಾತ್ರದ ಜೊತೆಗೆ ಬ್ಯಾಕ್ ಬೋನ್ ಆಗಿ ಇಂದಿನ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಕೆಲಸ ಮಾಡಿದ್ರು.

    ಇಂಡುವಾಳು ಸಚ್ಚಿದಾನಂದ (Indavalu Sacchidananda) ಅವರು ಸುಮಲತಾರನ್ನು ಗೆಲ್ಲಿಸಲು ಎಲ್ಲಾ ನಾಯಕರನ್ನು ಒಗ್ಗೂಡಿಸಿ ಚುನಾವಣೆಯ ರಣ ತಂತ್ರವನ್ನು ಹೆಣೆದಿದ್ದರು. ಸುಮಲತಾ ಅವರ ಗೆಲುವಿಗೆ ಈ ಅಂಶವು ಪ್ರಮುಖ ಕಾರಣವಾಗಿತ್ತು. ಇದಾದ ಬಳಿಕ ಸಚ್ಚಿದಾನಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಈ ವೇಳೆ ಸಚ್ಚಿದಾನಂದ ಪರ ಸುಮಲತಾ ಅವರು ನಾಮಿನೇಶನ್ ಫೈಲ್ ಹಾಗೂ ಒಂದು ದಿನದ ಪ್ರಚಾರದಲ್ಲಿ ಅಷ್ಟೇ ಕಾಣಿಸಿಕೊಂಡಿದ್ದರು. ಇದು ಸಚ್ಚಿದಾನಂದ ಅವರಲ್ಲಿ ಅಸಮಾಧಾನ ಸೃಷ್ಟಿ ಮಾಡಿದೆ.  ಇದನ್ನೂ ಓದಿ: ಗಂಗಾವತಿಯಲ್ಲಿ ‘ಗಾಲಿ’ಗೆ ಗಾಳ ಹಾಕಿದ ‘ಕೈ’ ಪಡೆ

    ಮೊನ್ನೆ ಬೆಂಗಳೂರಿನ ಸುಮಲತಾ ಅಂಬರೀಶ್ ಮನೆಯಲ್ಲಿ ನಡೆದ ಸಭೆಯಗೆ ನಟ ದರ್ಶನ್ ಕೋರಿಕೆ ಮೇರೆಗೆ ಸಚ್ಚಿದಾನಂದ ಹೋಗಿದ್ರು. ಈ ವೇಳೆ ಸುಮಲತಾ ಹಾಗೂ ಸಚ್ಚಿದಾನಂದ ಅವರ ನಡುವೆ ರಾಜಿ ಸಂಧಾನವೂ ಸಹ ಆಗಿದೆ. ಈ ಬಳಿಕ ಸಚ್ಚಿದಾನಂದ ಎಲ್ಲಾ ಮರೆತಿದ್ದಾರೆ ಎನ್ನಲಾಗಿತ್ತು. ನಿನ್ನೆ ಸುಮಲತಾ ಅಂಬರೀಶ್ ಸಚ್ಚಿದಾನಂದ ಅವರ ಶ್ರೀರಂಗಪಟ್ಟಣ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಲತಾ ಅವರು ಕೆಲ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಈ ವೇಳೆ ನಿನ್ನೆ ಮಂಡ್ಯದಲ್ಲಿ ಇದ್ದ ಸಚ್ಚಿದಾನಂದ ಅಲ್ಲಿ ಕಾಣಿಸಿಕೊಂಡಿಲ್ಲ. ಈ ಮೂಲಕ ಸಚ್ಚಿದಾನಂದ ಸುಮಲತಾ ಅವರ ನಡುವಿನ ಮನಸ್ತಾಪ ಮುಂದುವರೆದಿದೆ ಎಂದು ಹೇಳಲಾಗುತ್ತಿದೆ.

    ಒಟ್ಟಾರೆ 2019ರ ಚುನಾವಣೆಯಲ್ಲಿ ಸುಮಲತಾ ಅವರ ಬ್ಯಾಕ್ ಬೋನ್ ಆಗಿ ಕೆಲಸ ಮಾಡಿದ್ದ ಸಚ್ಚಿದಾನಂದ ಈಗ ಅಂತರ ಕಾಯ್ದು ಕೊಂಡಿದ್ದಾರೆ. ಇದನ್ನು ಸುಮಲತಾ ಅವರು ಹೇಗೆ ಶಮನ ಮಾಡ್ತಾರೆ ಎನ್ನೋದನ್ನು ಕಾದು ನೋಡಬೇಕಿದೆ.

  • ‘ಮಂಡ್ಯ’ ಟಿಕೆಟ್‌ಗೆ ಸುಮಲತಾ ಬಿಗಿಪಟ್ಟು – ಸಂಸದೆಗೆ ಸಾಥ್ ಕೊಡ್ತಾರಾ ಇಂಡವಾಳು ಸಚ್ಚಿದಾನಂದ?

    ‘ಮಂಡ್ಯ’ ಟಿಕೆಟ್‌ಗೆ ಸುಮಲತಾ ಬಿಗಿಪಟ್ಟು – ಸಂಸದೆಗೆ ಸಾಥ್ ಕೊಡ್ತಾರಾ ಇಂಡವಾಳು ಸಚ್ಚಿದಾನಂದ?

    ಬೆಂಗಳೂರು/ಮಂಡ್ಯ: ಮಂಡ್ಯ ಲೋಕಸಭಾ ಅಖಾಡ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಮಂಡ್ಯ (Mandya) ಬಿಜೆಪಿ ಟಿಕೆಟ್‌ಗೆ ಬಿಗಿಪಟ್ಟು ಹಿಡಿದಿರುವ ಸಂಸದೆ ಸುಮಲತಾ (Sumalatha Ambareesh) ಇಂದು ಬೆಂಬಲಿಗರು, ಹಿತೈಷಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಇನ್ನು ಸಂಸದೆಯೊಂದಿಗೆ ಅಂತರ ಕಾಯ್ದುಕೊಂಡಿರುವ ಇಂಡವಾಳು ಸಚ್ಚಿದಾನಂದ (Induvalu Sachidananda)  ಅವರನ್ನು ಸಭೆಗೆ ಕರೆತರಲು ಸುಮಲತಾ ನಟ ದರ್ಶನ್ ಅವರ ಮೊರೆ ಹೋಗಿದ್ದಾರೆ.

    ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಕಹಳೆ ಊದಿ ಸಂಸದೆಯಾಗಿದ್ದ ಸುಮಲತಾ ಮತ್ತೆ ಅಖಾಡಕ್ಕೆ ಧುಮುಕಿದ್ದಾರೆ. ಬಿಜೆಪಿಗೆ (BJP) ಈಗಾಗಲೇ ಬಾಹ್ಯ ಬೆಂಬಲ ನೀಡಿರುವ ಸುಮಲತಾ ಬಿಜೆಪಿ ಟಿಕೆಟ್‌ಗೆ ಬಿಗಿಪಟ್ಟು ಹಿಡಿದಿದ್ದಾರೆ. ಮಂಡ್ಯದಿಂದಲೇ ನನ್ನ ಸ್ಪರ್ಧೆ ಖಚಿತ ಎಂದು ಸ್ಪಷ್ಟ ಸಂದೇಶ ತಿಳಿಸಿದ್ದಾರೆ. ಆದರೆ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಹಿನ್ನೆಲೆ ಮೈತ್ರಿ ಟಿಕೆಟ್ ಜೆಡಿಎಸ್ ಪಾಲಾಗಿದೆ ಎನ್ನಲಾಗುತ್ತಿದೆ. ಇದರ ನಡುವೆ ಸಂಸದೆ ಸುಮಲತಾ ಇಂದು ಬೆಂಬಲಿಗರು, ಆಪ್ತರ ಸಭೆ ಕರೆದಿದ್ದಾರೆ. ಬೆಂಗಳೂರಿನ ಸುಮಲತಾ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಬೆಂಬಲಿಗರು, ಹಿತೈಷಿಗಳು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸಮುದ್ರದಲ್ಲಿ ವೇವ್ ರೈಡರ್ ಬಾಯ್‌ ಜಾಗ ಪತ್ತೆ – ನೌಕಾದಳದ ಭದ್ರತೆ ನಡುವೆ ಕಳವು?

    ಸುಮಲತಾರ ಬೆಂಗಳೂರು ನಿವಾಸದಲ್ಲಿ ಸಂಜೆ 4 ಗಂಟೆಗೆ ಹೈವೋಲ್ಟೇಜ್ ಮೀಟಿಂಗ್ ನಡೆಯಲಿದೆ. ಸಭೆಯಲ್ಲಿ ಸುಮಲತಾ ಹಾಗೂ ಅಂಬರೀಶ್ ಅವರ 100 ರಿಂದ 150ಕ್ಕೂ ಹೆಚ್ಚು ಪ್ರಮುಖ ಬೆಂಬಲಿಗರು, ಆಪ್ತರು ಭಾಗಿಯಾಗಲಿದ್ದಾರೆ. ಚುನಾವಣೆ ಸಿದ್ಧತೆ ಕುರಿತು ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಇದನ್ನೂ ಓದಿ: ಮುಳ್ಳಯ್ಯನಗಿರಿ ತಪ್ಪಲಿನ ಬೈರೇಗುಡ್ಡದಲ್ಲಿ ಕಾಡ್ಗಿಚ್ಚು – ನೂರಾರು ಎಕರೆ ಅರಣ್ಯ ನಾಶ

    ಇನ್ನು ಈ ಸಭೆಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ ಕೂಡ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಮತ್ತಷ್ಟು ಕುತೂಹಲ ಕೆರಳಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಸುಮಲತಾ ಬೆನ್ನಿಗೆ ನಿಂತ ಇಂಡವಾಳು ಸಚ್ಚಿದಾನಂದ ಸದ್ಯ ಸಂಸದೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ಸಂಸದೆ ಸುಮಲತಾಗೆ ದೊಡ್ಡ ಹಿನ್ನಡೆಯಾಗಿದ್ದು, ಮತ್ತೆ ಅಖಾಡಕ್ಕೆ ಧುಮುಕಿದರೆ ಸಚ್ಚಿದಾನಂದ ಸಂಸದೆಗೆ ಅನಿವಾರ್ಯ. ಆದ್ದರಿಂದ ಸಚ್ಚಿ ಜೊತೆ ಮತ್ತೆ ಬಾಂಧವ್ಯ ಬೆಸಯಲು ಡಿ ಬಾಸ್ ಮೊರೆ ಹೋಗಿರುವ ಸುಮಲತಾ ಅವರು ಸಚ್ಚಿದಾನಂದ ಜೊತೆ ಸಂಧಾನ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಲೋಕಸಮರಕ್ಕೆ ಭರ್ಜರಿ ತಾಲೀಮು – ಬಿಜೆಪಿಗೆ 10 ಕ್ಷೇತ್ರಗಳದ್ದೇ ತಲೆನೋವು

    ಒಟ್ಟಾರೆ ಇಂದಿನ ಹೈವೋಲ್ಟೇಜ್ ಮೀಟಿಂಗ್ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದು, ಸಂಸದೆ ಸುಮಲತಾರ ನಡೆ ಏನು ಎಂದು ತೀವ್ರ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಮೋಸ್ಟ್ ಕಮ್ಯುನಲ್‌ & ಕ್ರಿಮಿನಲ್ ಪಾರ್ಟಿ – ಸಿ.ಟಿ ರವಿ ವಾಗ್ದಾಳಿ

  • ಮೈತ್ರಿ ಟಿಕೆಟ್ ಸ್ಪರ್ಧೆ- ಭಾನುವಾರ ಬೆಂಗಳೂರು ನಿವಾಸದಲ್ಲಿ ಸುಮಲತಾ ಸಭೆ

    ಮೈತ್ರಿ ಟಿಕೆಟ್ ಸ್ಪರ್ಧೆ- ಭಾನುವಾರ ಬೆಂಗಳೂರು ನಿವಾಸದಲ್ಲಿ ಸುಮಲತಾ ಸಭೆ

    ಮಂಡ್ಯ: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆ. ಈ ಮೈತ್ರಿ ಮಂಡ್ಯದಲ್ಲಿ ಸಾಕಷ್ಟು ಬಿಕ್ಕಟ್ಟನ್ನು ಸೃಷ್ಟಿ ಮಾಡಿದೆ. ಮೈತ್ರಿ ಟಿಕೆಟ್‌ಗಾಗಿ ಜೆಡಿಎಸ್ (JDS) ನಾಯಕರು ರಾಷ್ಟ್ರ ನಾಯಕರ ಜೊತೆ ಸಭೆಗಳ ಮೇಲೆ ಸಭೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಜೆಡಿಎಸ್‌ಗೆ ಟಕ್ಕರ್ ನೀಡಿದ್ದ ಸುಮಲತಾ ಅಂಬರೀಶ್ (Sumalatha Ambareesh), ಈ ಬಾರಿಯ ತಮಗೆ ಮೈತ್ರಿ ಟಿಕೆಟ್ ನೀಡಬೇಕೆಂದು ತಾವೇನು ಕಡಿಮೆ ಇಲ್ಲ ಎಂದು ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.

    ಇವರಿಬ್ಬರ ಫೈಟ್‌ನಿಂದ ಬಿಜೆಪಿ ನಾಯಕರು ಯಾರಿಗೆ ಟಿಕೆಟ್ ನೀಡಬೇಕೆಂದು ಥಂಡಾ ಹೊಡೆಯುತ್ತಿದ್ದಾರೆ. ಮೈತ್ರಿ ಟಿಕೆಟ್ ನಮಗೆ ಖಚಿತ ಎಂದು ದಳಪತಿಗಳು ಆತ್ಮವಿಶ್ವಾಸದಲ್ಲಿ ಇದ್ದರೆ, ರೆಬಲ್ ಲೇಡಿ ಸಹ ಮಂಡ್ಯ ಟಿಕೆಟ್ ಅನ್ನು ಬಿಜೆಪಿ ಉಳಿಸಿಕೊಳ್ಳುತ್ತೆ ಎಂದು ಹೇಳುತ್ತಿದ್ದಾರೆ. ಶುಕ್ರವಾರವಷ್ಟೇ ಸುಮಲತಾ ಅಂಬರೀಶ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಭಾನುವಾರ ಬೆಂಗಳೂರಿನಲ್ಲಿ ತಮ್ಮ ಆಪ್ತರು ಹಾಗೂ ಮುಖಂಡರ ಸಭೆಯನ್ನು ಕರೆದಿದ್ದಾರೆ. ಇದನ್ನೂ ಓದಿ: ಸಿಎಂ ಬಂಗಲೆಗೆ ನವಕೋಟಿ ಸಿಂಗಾರ, ರೈತರ ಬರ ಪರಿಹಾರಕ್ಕೆ 2 ಸಾವಿರ: ಅಶೋಕ್ ಕಿಡಿ

    ಈ ಸಭೆಯಲ್ಲಿ ಮೈತ್ರಿ ಟಿಕೆಟ್ ಅನ್ನು ಹೇಗೆ ಪಡೆಯಬೇಕು?, ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಏನು ಮಾಡಬೇಕೆಂದು ಚರ್ಚೆ ಮಾಡಲಾಗುತ್ತದೆ. ಈ ಸಭೆ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೂ ಸಹ ಗ್ರಾಸವಾಗಿದೆ. ಸುಮಲತಾ ಅಂಬರೀಶ್ ಮಂಡ್ಯದಿಂದ ಸ್ಪರ್ಧೆಯ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಈ ಹೊತ್ತಿನಲ್ಲಿಯೇ ಸುಮಲತಾ ಅವರ ಸಭೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಇದನ್ನೂ ಓದಿ: ಅಂತರ್ ಜಲ ಹೆಚ್ಚಿರುವ ಕಡೆ ಬೋರ್ ಕೊರೆಸುವ ಮೂಲಕ ನೀರಿನ ವ್ಯವಸ್ಥೆ: ಬಿಬಿಎಂಪಿ ಆಯುಕ್ತ

  • ನನಗೆ ಪ್ರಾಣ ಬೆದರಿಕೆ ಇತ್ತು: ಸುಮಲತಾ  

    ನನಗೆ ಪ್ರಾಣ ಬೆದರಿಕೆ ಇತ್ತು: ಸುಮಲತಾ  

    ಮಂಡ್ಯ: ನನಗೂ ಪ್ರಾಣ ಬೆದರಿಕೆ ಇತ್ತು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಬಹಿರಂಗಪಡಿಸಿದ್ದಾರೆ.

    ಮಂಡ್ಯದಲ್ಲಿ ಇಂದು ನಡೆದ ದಿಶಾ ಸಭೆಯಲ್ಲಿ ಸುಮಲತಾ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ತಮ್ಮ 5 ವರ್ಷದ ಕೆಲಸದ ಬಗ್ಗೆ ಮೆಲುಕು ಹಾಕಿಕೊಂಡ ಅವರು ಪ್ರಾಣ ಬೆದರಿಕೆ ಇದ್ದ ಬಗ್ಗೆ ಹೇಳಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ: ಸುಮಲತಾ ಅಂಬರೀಶ್

    ಸುಮಲತಾ ಹೇಳಿದ್ದೇನು..?: ನಾನು ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದೆ. ಈ ವೇಳೆ ಹೋರಾಟ ನಿಲ್ಲಿಸುವಂತೆ ನನಗೆ ಒತ್ತಡ ಹಾಗೂ ಪ್ರಾಣ ಬೆದರಿಕೆ ಇತ್ತು. ಆದರೆ ಈ ಬೆದರಿಕೆಗೆ ಹೆದರದೆ ಕೆಆರ್‌ಎಸ್ ಅಣೆಕಟ್ಟೆಯ ಉಳಿವಿಗಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದೆ. ಹೋರಾಟದ ಫಲವಾಗಿ ಹೈಕೋರ್ಟ್ ಗಣಿಗಾರಿಕೆಯನ್ನು ನಿಲ್ಲಿಸಿದೆ ಎಂದು ಹೇಳಿದರು.

    ಸುಮಲತಾ ಅಧ್ಯಕ್ಷತೆಯ ಕೊನೆಯ ದಿಶಾ ಸಭೆಯಾಗಿದ್ದರಿಂದ ಜಿಲ್ಲಾಡಳಿತದಿಂದ ಸಂಸದೆಯನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂಡ್ಯ ಡಿಸಿ ಡಾ.ಕುಮಾರ್, ಸಿಇಓ ತನ್ವೀರ್ ಆಸೀಫ್, ಎಸ್ ಪಿ  ಎನ್.ಯತೀಶ್ ರಿಂದ ಸುಮಲತಾ ಅವರಿಗೆ ಸನ್ಮಾನ ನಡೆಯಿತು. ಶಾಲು ಹೊದಿಸಿ, ಹಾರ ಹಾಕಿ ಗಣಪತಿ ವಿಗ್ರಹ ಗಿಫ್ಟ್ ನೀಡಿ ಬೀಳ್ಕೊಡಲಾಯಿತು.

  • ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ: ಸುಮಲತಾ ಅಂಬರೀಶ್

    ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ: ಸುಮಲತಾ ಅಂಬರೀಶ್

    ಮಂಡ್ಯ: ಈ ಬಾರಿ ಲೋಕಸಭೆಗೆ (Lok Sabha Election) ನನ್ನ ಸ್ಪರ್ಧೆ ಖಚಿತ ಎಂದು ಹಾಲಿ ಮಂಡ್ಯ (Mandya) ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಹೇಳಿದ್ದಾರೆ.

    ಮಂಡ್ಯದಲ್ಲಿ ಮಾತನಾಡಿದ ಅವರು, ಮಂಡ್ಯ ಕ್ಷೇತ್ರ ಅಭ್ಯರ್ಥಿಯ ಬಗ್ಗೆ ಅಂತೆ ಕಂತೆ ಮೊದಲಿನಿಂದಲೂ ಇದೆ. ಅಧಿಕೃತ ನಿರ್ಧಾರ ಬರೋವರೆಗೂ ಕಾಯೋಣ. ಮಂಡ್ಯ ಬಿಜೆಪಿಗೆ (BJP) ಸಿಗಲಿದೆ ಎಂಬ ವಿಶ್ವಾಸ ನನಗಿದೆ. ನಾನು ನನ್ನ ಟಿಕೆಟ್‌ಗಾಗಿ ಹೋರಾಟ ಮಾಡುತ್ತಿಲ್ಲ. ನನ್ನ ಹೋರಾಟ ಮಂಡ್ಯಕ್ಕೋಸ್ಕರ, ಮಂಡ್ಯದಲ್ಲಿ ಬಿಜೆಪಿ ಸಂಘಟಿಸಲು ನನ್ನ ಹೋರಾಟ ಇದೆ ಎಂದರು. ಇದನ್ನೂ ಓದಿ: ರಾಜಮೌಳಿ ಸಿನಿಮಾಗಾಗಿ ಮಹೇಶ್ ಬಾಬು ಸಿಕ್ಸ್ ಪ್ಯಾಕ್ ತಯಾರಿ

     

     ಈ ವೇಳೆ ಮಂಡ್ಯದಿಂದ ಸ್ಪರ್ಧೆ ಮಾಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ನಕ್ಕು ಉತ್ತರ ನೀಡದೇ ಸುಮಲತಾ ಹೊರಟರು. ಈ ಮೂಲಕ ಇನ್ನಷ್ಟು ಕುತೂಹಲವನ್ನು ಸುಮಲತಾ ಮೂಡಿಸಿದ್ದಾರೆ.

    ನನಗೆ ಟಿಕೆಟ್ ಪಡೆಯುವ ಉದ್ದೇಶ ಇದ್ದಿದ್ದರೆ ಎಲ್ಲಾದರೂ ಅವಕಾಶ ಸಿಗುತ್ತಿತ್ತು. ಜೆಡಿಎಸ್‌ (JDS) ನಾಯಕರು ಏನಾದರೂ ಹೇಳಬಹುದು. ಅಂತಿಮ ಘೋಷಣೆ ಆಗುವವರೆಗೂ ಮಾತನಾಡುವುದು ಸೂಕ್ತವಲ್ಲ. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದರು.

     

  • ಸುಮಲತಾ ಅವರಷ್ಟು ಬುದ್ಧಿವಂತ ನಾನಲ್ಲ: ಚಲುವರಾಯಸ್ವಾಮಿ ಟಾಂಗ್

    ಸುಮಲತಾ ಅವರಷ್ಟು ಬುದ್ಧಿವಂತ ನಾನಲ್ಲ: ಚಲುವರಾಯಸ್ವಾಮಿ ಟಾಂಗ್

    ಮಂಡ್ಯ: ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಅವರಷ್ಟು ಬುದ್ಧಿವಂತ ನಾನಲ್ಲ. ಅವರು ತುಂಬಾ ಬುದ್ಧಿವಂತರು ಎನ್ನುವ ಮೂಲಕ ಚಲುವರಾಯಸ್ವಾಮಿ (Chaluvarayaswamy) ಟಾಂಗ್ ನೀಡಿದ್ದಾರೆ.

    ಚಲುವಣ್ಣ ನಾಟಿಯನ್ನು ಅಡುಗೆಯಲ್ಲಿ ಇಟ್ಟುಕೊಳ್ಳಬೇಕೆಂಬ ಸುಮಲತಾ ಹೇಳಿಕೆ ವಿಚಾರವಾಗಿ ಮಂಡ್ಯದಲ್ಲಿ (Mandya) ಪ್ರತಿಕ್ರಿಯೆ ನೀಡಿದ ಅವರು, ನಾನು ನಮ್ಮ ಜಿಲ್ಲೆಯ, ಮಣ್ಣಿನ ಒಬ್ಬರನ್ನು ಅಭ್ಯರ್ಥಿ ಮಾಡುತ್ತೇವೆ ಎಂದಿದ್ದೆ. ಅದಕ್ಕೆ ಸುಮಲತಾ ಅವರು ಏನು ವಿವರಣೆ ಕೊಡುತ್ತಾರೆ ಕೊಡಲಿ. ಅವರು ಸಂಸದರು, ರಾಷ್ಟ್ರೀಯ ಪಕ್ಷದಲ್ಲಿ ಟಿಕೆಟ್‌ಗೆ ಫೈಟ್ ಮಾಡುತ್ತಿದ್ದಾರೆ ಒಳ್ಳೆಯದಾಗಲಿ ಎಂದರು. ಇದನ್ನೂ ಓದಿ: ಹ್ಯಾರಿಸ್‍ಗೆ ಸಂಕಷ್ಟ – ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಹೈಕೋರ್ಟ್ ಅಸ್ತು

    ಇನ್ನೂ ಪಾರ್ಲಿಮೆಂಟ್‌ಗೆ (Parliament) ಯಾರು ಯಾವಾಗ ಸೂಟ್ ಹಾಕುತ್ತಾರೆ ಎಂದು ನಿರ್ಧಾರ ಮಾಡೋದು ಜನ. ನಾನು, ಸುಮಲತಾ, ಕುಮಾರಸ್ವಾಮಿ ಒಬ್ಬರ ಹೆಸರನ್ನು ಬರೆದು ಘೋಷಣೆ ಮಾಡುವ ಕಾಲ ಅಲ್ಲ. ಇದು ಪ್ರಜಾಪ್ರಭುತ್ವದ ಕಾಲ. ಈ ಜಿಲ್ಲೆಯ ಜನರೇ ತೀರ್ಮಾನ ಮಾಡಬೇಕಾಗಿದೆ. ಪಾರ್ಲಿಮೆಂಟ್ ಸ್ಟ್ರಾಂಗ್ ಇದ್ದವರು ಹೋಗಬೇಕೆಂದು ಅವರು ಹೇಳಿದ್ದಾರೆ. ಯಾರು ಯಾವ ಕಾಲದಲ್ಲಿ ಪಾರ್ಲಿಮೆಂಟ್‌ಗೆ ಹೋಗಿ ಸ್ಟ್ರಾಂಗ್ ಆಗಿದ್ದಾರೆ ಎಂಬ ಇತಿಹಾಸ ಗೊತ್ತಿದೆ. ಜನರು ಯಾರು ಹೋಗಬೇಕೆಂದು ತೀರ್ಮಾನ ಮಾಡುತ್ತಾರೆ. ಜನರು ತೀರ್ಮಾನ ಮಾಡುವವರೆಗೆ ತಡೆದುಕೊಂಡು ಇರಬೇಕು ಎಂದು ಹೇಳಿದರು. ಇದನ್ನೂ ಓದಿ: ಗಮನಿಸಿ: ಬೆಂಗಳೂರಿನಲ್ಲಿ 2 ದಿನ ನೀರು ಪೂರೈಕೆ ಇರಲ್ಲ

  • ಟಿಕೆಟ್‌ಗಾಗಿ ನಾನು ಲಾಬಿ ಮಾಡಿಲ್ಲ: ಸುಮಲತಾ ಅಂಬರೀಶ್

    ಟಿಕೆಟ್‌ಗಾಗಿ ನಾನು ಲಾಬಿ ಮಾಡಿಲ್ಲ: ಸುಮಲತಾ ಅಂಬರೀಶ್

    ಮಂಡ್ಯ: ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಚೆನ್ನಾಗಿದೆ. ಬಿಜೆಪಿಗೆ ಮಂಡ್ಯ ಉಳಿಸಿಕೊಂಡರೆ ಪಕ್ಷ ಕಟ್ಟಲು ಸಹಕಾರಿಯಾಗಿದ್ದು, ನಾನು ಯಾವತ್ತೂ ನನಗಾಗಿ ಟಿಕೆಟ್ ಕೊಡಿ ಎಂದು ಲಾಬಿ ಮಾಡಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಹೇಳಿದ್ದಾರೆ.

    ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಸೇರ್ಪಡೆಗೆ ತಾಂತ್ರಿಕವಾಗಿ ಅಡ್ಡಿಯಾಗಿದೆ. ಆ ಕಾರಣಕ್ಕಾಗಿ ನಾನು ಬಾಹ್ಯ ಬೆಂಬಲ ನೀಡಿದ್ದು, ಇದು ಬಿಜೆಪಿ ರಾಷ್ಟ್ರೀಯ ನಾಯಕರೆ ನನಗೆ ಹೇಳಿದ್ದಾರೆ. ನಾನು ಮೋದಿ ಹಾಗೂ ಜೆ.ಪಿ‌.ನಡ್ಡಾ (JP Nadda) ಅವರನ್ನು ಭೇಟಿಯಾದಾಗಲೂ ಮಂಡ್ಯದಲ್ಲಿ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ್ದೇನೆ. ಬಿಜೆಪಿಯೇ ಮಂಡ್ಯ ಟಿಕೆಟ್ ಉಳಿಸಿಕೊಳ್ಳಬೇಕು ಎಂದು ಕೇಳಿದ್ದಾರೆ. ನನಗೆ ಟಿಕೆಟ್ ನೀಡಬೇಕೆಂದು ನಾನು ಲಾಬಿ ಮಾಡಿಲ್ಲ ಎಂದರು.

    ಕಾಂಗ್ರೆಸ್‌ಗೆ (Congress) ಯಾರು ಆಹ್ವಾನ ಕೊಟ್ಟರು ಹೇಳಲಿ ಎಂದು ಚಲುವರಾಯಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ 25 ವರ್ಷ ಅಂಬರೀಶ್ ಇದ್ದರು. ಪರಿಚಯಸ್ಥರು ಇರುವ ಪಕ್ಷ ಅದು ಯಾವುದಾದರೂ ಕಾರ್ಯಕ್ರಮಗಳಲ್ಲಿ ಸಿಕ್ಕಾಗ ಪಕ್ಷಕ್ಕೆ ಕರೆದಿದ್ದಾರೆ. ಆದರೆ ಅದನ್ನ ಅಧಿಕೃತ ಆಹ್ವಾನ ಎನ್ನಲು ಆಗಲ್ಲ. ಚಲುವರಾಯಸ್ವಾಮಿ (Chaluvaraswamy) ನನ್ನನ್ನು ವೈಯಕ್ತಿಕವಾಗಿ ಕೇಳಿದ್ರೆ ನಾನು ಹೇಳ್ತೀನಿ‌. ಆದರೆ ಕರೆದವರ ಹೆಸರು ಬಹಿರಂಗ ಮಾಡಿ ಮುಜುಗರ ಮಾಡಲ್ಲ ಎಂದರು. ಇದನ್ನೂ ಓದಿ: ಮೋದಿ ರಾಜ್ಯಸಭೆಗೆ ಬರುವುದು 20 ನಿಮಿಷ ಮಾತ್ರ: ಶರದ್ ಪವಾರ್ ಲೇವಡಿ

    ಸದ್ಯ ಸ್ವಾಭಿಮಾನ ಪದ ಕಳೆದ ಚುನಾವಣೆಯಿಂದ ಟ್ರೆಂಡ್ ಆಗಿದೆ ಒಳ್ಳೆಯದು. ಯಾವುದೇ ನಿರೀಕ್ಷೆಗಳಿಲ್ಲದೆ ರಾಜಕೀಯಕ್ಕೆ ಬಂದವಳು ನಾನು ಜನರ ಒತ್ತಾಯದ ಮೇರೆಗೆ ರಾಜಕೀಯಕ್ಕೆ ಬಂದೆ. ಅಂಬರೀಶ್ ಅವರ ಮೇಲಿನ ಜನರ ಅಭಿಮಾನ ನನ್ನ ರಾಜಕೀಯಕ್ಕೆ ಕರೆದುಕೊಂಡು ಬಂತು‌. ನನ್ನ ಗಮನಕ್ಕೆ ಬಂದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದೇನೆ ನನ್ನ ಕೈಲಾದಷ್ಟು ಪ್ರಯತ್ನ ಮಾಡಿದ್ದೇನೆ. ನನ್ನ ಸ್ಪರ್ಧೆ ಬಗ್ಗೆ ಕನ್ಫರ್ಮ್ ಮಾಡಬೇಕಿರುವುದು ಜನ, ಪಕ್ಷ. ನಾನು ನನ್ನ ನಿಲುವು ತಿಳಿಸಿದ್ದೇನೆ ಅಷ್ಟೇ. ನನ್ನ ಸ್ಪರ್ಧೆಗೆ ಉಹಾಪೋಹ ಇದೆ. ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರೆ ಇಷ್ಟು ಚಾಲೆಂಜಸ್ ಇರಲ್ಲ ಆದರೆ ನಾನು ಯಾಕೆ ಮಂಡ್ಯ ಅಂತಾನೆ ಸ್ಟಿಕ್ ಆಗಿದ್ದೀನಿ ಅಂತ ಹೇಳಿ ಎಂದರು.