Tag: ಸುಮಲತಾ ಅಂಬರೀಶ್

  • ಇಂದು ಗಣಿಗಾರಿಕೆ ಪ್ರದೇಶಕ್ಕೆ ಸಂಸದೆ ಸುಮಲತಾ ಅಂಬರೀಶ್ ಭೇಟಿ

    ಇಂದು ಗಣಿಗಾರಿಕೆ ಪ್ರದೇಶಕ್ಕೆ ಸಂಸದೆ ಸುಮಲತಾ ಅಂಬರೀಶ್ ಭೇಟಿ

    ಬೆಂಗಳೂರು: ಕೆಆರ್‍ಎಸ್ ಡ್ಯಾಂ ಬಿರುಕಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಸಂಸದೆ ಸುಮಲತಾ ಇಂದು ಗಣಿಗಾರಿಕೆ ಪ್ರಾಂತ್ಯ ಬೇಬಿ ಬೆಟ್ಟಕ್ಕೆ ತೆರಳಿ ಪರಿಶೀಲನೆ ನಡೆಸಲು ತೀರ್ಮಾನಿಸಿದ್ದಾರೆ. ಈ ಮಧ್ಯೆ, ಕೆಆರ್‍ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಸೂಪರಿಂಡೆಂಟ್ ಎಂಜಿನಿಯರ್ ವಿಜಯಕುಮಾರ್ ಸ್ಪಷ್ಟಪಡಿಸಿದ್ದಾರೆ. ಡ್ಯಾಮ್ ಸೇಫ್ಟಿ ಬಗ್ಗೆ ಸರ್ಕಾರ, ಎಂಪಿ ಸುಮಲತಾ ಅವರಿಗೆ ವರದಿ ಕೊಡಲಾಗಿದೆ.

    ಕ್ರ್ಯಾಕ್ ಬಿಟ್ಟಿದೆ ಅನ್ನೋ ವೈರಲ್ ವೀಡಿಯೋ ಬಿರುಕಿನದ್ದಲ್ಲ. ರೈತರು ಆತಂಕ ಪಡಬೇಕಿಲ್ಲ ಎಂದಿದ್ದಾರೆ. ಇನ್ನು ಡ್ಯಾಂ ಬಿರುಕು ಬಿಡಲು ಅವಕಾಶವೇ ಇಲ್ಲ ಅಂತಾ ಕಾವೇರಿ ತಾಂತ್ರಿಕ ಸಲಹಾ ಸಮಿತಿ ಹೇಳಿದೆ. ಆದರೆ ಕಲ್ಲು ಗಣಿಗಾರಿಕೆ ಮುಂದುವರಿದರೆ ಡ್ಯಾಂಗೆ ಅಪಾಯ ಎಂದಿದೆ. ಈ ಬೆನ್ನಲ್ಲೇ ಸಂಸದೆ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸುಮಲತಾ ಬೇಬಿ ಬೆಟ್ಟಕ್ಕೆ ಹೋಗುತ್ತಿರುವ ಉದ್ದೇಶವೇನು ಎಂದು ಪ್ರಶ್ನೆ ಮಾಡಿದ್ದಾರೆ.

    ಶ್ರೀರಂಗಪಟ್ಟಣ ತಾಲೂಕಿನ ಚನ್ನಕೆರೆ, ಹಂಗರಹಳ್ಳಿ, ಪಾಂಡವಪುರ ತಾಲೂಕಿನ ಬೇಬಿಬೆಟ್ಟಕ್ಕೂ ಸುಮಲರಾ ಅಂಬರೀಶ್ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ – ಇಂತಹ ಮಾತುಗಳಿಗೆ ನಾನು ಐ ಡೋಂಟ್ ಕೇರ್ ಅಂದ್ರು ಸಂಸದೆ

  • ಸುಮಲತಾ Vs ಕುಮಾರಸ್ವಾಮಿ – ಮೈ ಶುಗರ್ ವಿವಾದ ಈಗ ಎದ್ದಿದ್ದು ಯಾಕೆ?

    ಸುಮಲತಾ Vs ಕುಮಾರಸ್ವಾಮಿ – ಮೈ ಶುಗರ್ ವಿವಾದ ಈಗ ಎದ್ದಿದ್ದು ಯಾಕೆ?

    ಬೆಂಗಳೂರು: ರಾಜ್ಯದಲ್ಲಿರುವ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಯಾದ ಮಂಡ್ಯದ ಮೈ ಶುಗರ್ ವಿಚಾರದಲ್ಲಿ ವಿವಾದ ಎದ್ದಿದೆ. ಇದನ್ನು ಖಾಸಗೀಕರಣ ಮಾಡಲು ಸರ್ಕಾರ ಹೊರಟಿದೆ ಎಂಬ ಕೂಗೆದ್ದಿದೆ.

    1933ರಲ್ಲಿ ಮಂಡ್ಯದಲ್ಲಿ ಮೈ ಶುಗರ್ ಕಾರ್ಖಾನೆ ಆರಂಭಗೊಂಡಿದ್ದು ಮಂಡ್ಯ ಭಾಗದ ಜೀವನಾಡಿಯಾಗಿತ್ತು. ಮೊದಲ 50 ವರ್ಷ ಲಾಭದಾಯಕವಾಗಿದ್ದರೆ ನಂತರ ಕೆಟ್ಟ ಆಡಳಿತದಿಂದ ನಷ್ಟ. ಪುನಶ್ಚೇತನಕ್ಕಾಗಿ 2004ರಿಂದ ಈವರೆಗೆ 504 ಕೋಟಿ ಅನುದಾನ ನೀಡಲಾಗಿದೆ. ಇದನ್ನೂ ಓದಿ: ಆಡಿಯೋ, ವೀಡಿಯೋ, ಫೋನ್ ಟ್ಯಾಪಿಂಗ್ ಕುಮಾರಸ್ವಾಮಿಗೆ ಅಭ್ಯಾಸ ಆಗಿದೆ: ಸುಮಲತಾ

     

    ಸರ್ಕಾರದಿಂದ ಕೋಟಿ ಕೋಟಿ ಸುರಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಸಂಪೂರ್ಣ ಬಂದ್ ಆಗಿದೆ, ಈಗ ಖಾಸಗಿಯವರಿಗೆ 40 ವರ್ಷ ಗುತ್ತಿಗೆ ನೀಡಲು ಸರ್ಕಾರ ಪ್ಲಾನ್ ಮಾಡಿದೆ. 2021-22ರ ಸಾಲಿನ ಹಂಗಾಮಿನಿಂದ ಗುತ್ತಿಗೆ ನೀಡಲು ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ.

    ಸರ್ಕಾರದ ನಿಲುವಿಗೆ ರೈತರು, ಹೋರಾಟಗಾರರ ತೀವ್ರ ವಿರೋಧ ವ್ಯಕ್ತವಾಗಿದೆ. ಖಾಸಗೀಕರಣಕ್ಕೆ ಕುಮಾರಸ್ವಾಮಿ ವಿರೋಧ, ಸಿಎಂಗೆ ಮನವಿ ಮಾಡಿದ್ದರೆ ಸರ್ಕಾರವೇ ಆಗಲಿ, ಖಾಸಗಿಯೇ ಆಗಲಿ ಒಟ್ಟಿನಲ್ಲಿ ಕಾರ್ಖಾನೆ ಆರಂಭವಾಗಬೇಕು ಎನ್ನುವುದು ಸುಮಲತಾ ಅವರ ಮನವಿ.

  • ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ

    ಹೆಣ್ಣಿನ ಬಗ್ಗೆ ಹೇಗೆ ಮಾತಾಡ್ಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು: ಸುಮಲತಾ ಕಿಡಿ

    – ಇಂತಹ ಮಾತುಗಳಿಗೆ ನಾನು ಐ ಡೋಂಟ್ ಕೇರ್ ಅಂದ್ರು ಸಂಸದೆ

    ಬೆಂಗಳೂರು: ಮಾಜಿ ಸಿಎಂ ಆದವರು ಹೇಗೆ ಮಾತಾಡಬೇಕು ಅಂತ ಗೊತ್ತಿಲ್ಲವಾ. ಸಂಸದರು ಅನ್ನೋದು ಬಿಡು ಒಂದು ಹೆಣ್ಣಿನ ಬಗ್ಗೆ ಹೇಗೆ ಮಾತಾಡಬೇಕು ಅಂತ ಮಾಜಿ ಸಿಎಂ ಅರ್ಥ ಮಾಡಿಕೊಳ್ಳಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಶುಗರ್ ಅನ್ನು ಯಾವುದಾದರು ಒಂದು ಮಾಡೆಲ್ ನಲ್ಲಿ ಪ್ರಾರಂಭ ಮಾಡಿ ಅಂತ ಸರ್ಕಾರಕ್ಕೆ ಮನವಿ ಮಾಡಿದ್ದೆ. ನನ್ನ ಸಲಹೆ ಪಡೆದು ಸರ್ಕಾರ ನಿರ್ಧಾರ ಮಾಡಿದೆ ಅನ್ನೋ ಅಷ್ಟು ಪವರ್ ನನಗೆ ಇಲ್ಲ. ಯಾಕೆ ಕುಮಾರಸ್ವಾಮಿ ಹೀಗೆ ಮಾತಾಡಿದ್ರು ಅಂತ ಗೊತ್ತಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯಾಕೆ ಮೈ ಶುಗರ್ ಪ್ರಾರಂಭ ಮಾಡಿಲ್ಲ. ಸಿಎಂ ಆಗಿದ್ದಾಗ ಅವರು ಏನು ಮಾಡಿದ್ರು ಎಂದು ಪ್ರಶ್ನಿಸಿದರು.

    400 ಕೋಟಿ ಅಕ್ರಮ ಆಗಿದೆ ಅಂತ ಹೇಳಿದ್ರು. ರೈತರ ಪರವಾಗಿ ಅ ಕಾರ್ಖಾನೆ ಪ್ರಾರಂಭ ಆಗಬೇಕು. ಯಾವುದಾದರು ಒಂದು ಮಾದರಿಯಲ್ಲಿ ಕಾರ್ಖಾನೆ ಓಪನ್ ಮಾಡಲಿ. ಈ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿ. ಎಲ್ಲರ ಜೊತೆ ಮಾತಾಡಿ ನಾನು ಕಾರ್ಖಾನೆ ಪ್ರಾರಂಭ ಮಾಡಿ ಅಂತ ಮನವಿ ಮಾಡಿದ್ದೇನೆ. ನಾನು ಖಾಸಗೀಕರಣ ಮಾಡಿ ಅಂತ ಹೇಳಿಲ್ಲ. ಅಂತ ಮೂರ್ಖ ಕೆಲಸ ನಾನು ಮಾಡೊಲ್ಲ ಎಂದು ವಾಗ್ದಾಳಿ ನಡೆಸಿದರು.

    ಮಹಿಳೆ ಬಗ್ಗೆ ಪರ್ಸನಲ್ ಟೀಕೆ ಎಷ್ಟು ಸರಿ..? ಮಾಜಿ ಸಿಎಂ ಆದವರು ಹೀಗೆ ಮಾತಾಡೋದು ಸರಿನಾ..? ಇಂತಹ ಮಾತುಗಳಿಗೆ ನಾನು ಐ ಡೋಂಟ್ ಕೇರ್. ಚುನಾವಣೆ ಸಮಯದಲ್ಲಿ ನಾನು ಇಂತಹ ಪದ ಬಳಿಕೆ ಮಾಡಿಲ್ಲ. ಕೆಅರ್.ಎಸ್ ಬಿರುಕು ವಿಚಾರದಲ್ಲಿ ನಾನು ಯಾರ ಬಗ್ಗೆಯೂ ಮಾತನಾಡಿಲ್ಲ. ನಾನು ಗಣಿ ಸಚಿವರನ್ನ ಕರೆದುಕೊಂಡು ಹೋಗಿ ತೋರಿಸಿದ್ದೇನೆ. ಆಗ 100 ಕೋಟಿ ದಂಡ ಹಾಕಿದ್ದಾರೆ. ಯಾಕೆ ಕುಮಾರಸ್ವಾಮಿ ಹೀಗೆ ಮಾತಾಡ್ತಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.

    ಅಕ್ರಮ ಗಣಿಗಾರಿಕೆ ತನಿಖೆಗೆ ನಾನು ಒತ್ತಾಯ ಮಾಡ್ತೀನಿ. ಕುಮಾರಸ್ವಾಮಿ ಅವರಿಗೆ ಯಾಕೆ ಈ ಆತಂಕ ಗೊತ್ತಿಲ್ಲ. ಕುಮಾರಸ್ವಾಮಿ ಮಾತಿನಿಂದ ಅವರ ಸಂಸ್ಕಾರ, ಅವರ ವ್ಯಕ್ತಿತ್ವ ಏನು ಅಂತ ತೋರಿಸುತ್ತಿದ್ದಾರೆ. ಮಾತಾಡಲಿ ಬಿಡಿ ಎಂದು ಸಂಸದೆ ತಿಳಿಸಿದರು. ಇದನ್ನೂ ಓದಿ: ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್‍ವೈ ಭೇಟಿಯಾದ ಹೆಚ್‍ಡಿಕೆ

    ಮಂಡ್ಯ ಹಾಲು ಉತ್ಪಾದಕ ಮಂಡಳಿ ಅಕ್ರಮ ವಿಚಾರಕ್ಕೆ ಪ್ರತಿಕ್ರಿಯಿಸಿ, ಗೊತ್ತಿದ್ರು ಕುಮಾರಸ್ವಾಮಿ ಯಾಕೆ ಸುಮ್ಮನೆ ಇದ್ದಾರೆ. ಇದಕ್ಕೆ ಯಾವುದೇ ಉತ್ತರ ಇಲ್ಲ. ಸ್ಕ್ಯಾಮ್ ಮಾಡೋವಾಗ ಕುಮಾರಸ್ವಾಮಿ ಸುಮ್ಮನೆ ಇದ್ದರು. ನಾನು ಕೆ.ಆರ್.ಎಸ್ ಬಗ್ಗೆ ಮಾತಾಡಿದಾಗ ಯಾಕೆ ಕುಮಾರಸ್ವಾಮಿ ಮಾತಾಡಬೇಕು. ಮೈಮೂಲ್ ಅಕ್ರಮದ ಬಗ್ಗೆ ಕುಮಾರಸ್ವಾಮಿ ಯಾಕೆ ಮಾತಾಡಿಲ್ಲ. ಮಂಡ್ಯದಲ್ಲಿ ಏನ್ ನಡೆಯುತ್ತಿದೆ ಎಲ್ಲರಿಗೂ ಗೊತ್ತಿದೆ. ಸಿಐಡಿ ತನಿಖೆ ಆಗ್ತಿದೆ. ಸತ್ಯ ಹೊರ ಬರುತ್ತೆ ಎಮದು ಕುಮಾರಸ್ವಾಮಿ ವಿರುದ್ದ ಸುಮಲತಾ ವಾಗ್ದಾಳಿ ನಡೆಸಿದರು.

  • ನುಡಿದಂತೆ ನಡೆದ ಸುಮಲತಾ- ಸ್ವಂತ ಖರ್ಚಿನಲ್ಲಿ ಮಂಡ್ಯಕ್ಕೆ ನಿತ್ಯ 2000 ಲೀ. ಆಕ್ಸಿಜನ್

    ನುಡಿದಂತೆ ನಡೆದ ಸುಮಲತಾ- ಸ್ವಂತ ಖರ್ಚಿನಲ್ಲಿ ಮಂಡ್ಯಕ್ಕೆ ನಿತ್ಯ 2000 ಲೀ. ಆಕ್ಸಿಜನ್

    ಮಂಡ್ಯ: ಜಿಲ್ಲೆಯಲ್ಲಿ ಎದುರಾಗುತ್ತಿರುವ ಆಕ್ಸಿಜನ್ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಜಿಲ್ಲೆಗೆ ಪ್ರತಿ ದಿನ 2000 ಲೀಟರ್ ಸಾಮರ್ಥ್ಯದ 20 ಜಂಬೋ ಸಿಲಿಂಡರ್ ಗಳನ್ನು ನೀಡಲು ಮುಂದಾಗಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಸಂಸದೆ ಸುಮಲತಾ ಅಂಬರೀಶ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದಿದ್ದರು. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕನ್ನು ತಡೆಗಟ್ಟಲು ಏನು ಕ್ರಮ ಕೈಗೊಳ್ಳಬೇಕೆಂದು ಚರ್ಚೆ ಮಾಡಲಾಯಿತು. ಇದೇ ವೇಳೆ ಜಿಲ್ಲೆಯಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆ ನೀಗಿಸಲು ಏನು ಮಾಡಬೇಕೆಂದು ಸಹ ಚಿಂತನೆ ಮಾಡಲಾಯಿತು. ಆದರೆ ಸದ್ಯ ಸರ್ಕಾರದಿಂದ ಎಂಪಿ ಫಂಡ್ ಅಥವಾ ಬೇರೆ ಯಾವುದೂ ಅನುದಾನ ಇಲ್ಲದ ಕಾರಣ ಸುಮಲತಾ ಅವರು ನನ್ನ ಸ್ವಂತ ಖರ್ಚಿನಲ್ಲಿ ಪ್ರತಿ ದಿನ 2000 ಲೀಟರ್ ಆಕ್ಸಿಜನ್ ಕಳಿಸಿಕೊಡುತ್ತೇನೆ ಎಂದು ತಿಳಿಸಿದ್ದರು.

    ಸುಮಲತಾ ಅವರು ಅಂದು ಕೊಟ್ಟ ಭರವಸೆಯಂತೆ ಇಂದು 2000 ಲೀಟರ್ ಸಾಮರ್ಥ್ಯ 20 ಜಂಬೋ ಸಿಲಿಂಡರ್‍ನ್ನು ಜಿಲ್ಲಾಡಳಿತದ ಮೂಲಕ ಮದ್ದೂರಿನ ಗುರುಶಾಂತಪ್ಪ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಪ್ರತಿ ದಿನ ಇದೇ ರೀತಿ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಸಂಸದೆ ಸುಮಲತಾ ಅಂಬರೀಶ್ ಅವರು ನುಡಿದಂತೆ ನಡೆದುಕೊಂಡಿದ್ದಾರೆ. ಸುಮಲತಾ ಅವರ ಈ ಕಾರ್ಯಕ್ಕೆ ಜಿಲ್ಲೆಯ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

  • ಮಂಡ್ಯದ ಗಣಿಗಾರಿಕೆ ಪ್ರದೇಶಗಳಿಗೆ ಸುಮಲತಾ, ನಿರಾಣಿ ಭೇಟಿ

    ಮಂಡ್ಯದ ಗಣಿಗಾರಿಕೆ ಪ್ರದೇಶಗಳಿಗೆ ಸುಮಲತಾ, ನಿರಾಣಿ ಭೇಟಿ

    ಮಂಡ್ಯ: ಸಂಸತ್‍ನಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಸಚಿವ ಮುರುಗೇಶ್ ನಿರಾಣಿ ಅವರೊಂದಿಗೆ ಮಂಡ್ಯದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದರು.

    ಮೊದಲು ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಸಮೀಪ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದರು. ಈ ವೇಳೆ ದಿಲೀಪ್ ಕನ್‍ಸ್ಟ್ರಕ್ಷನ್ ಅವರು ನಡೆಸುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅವರು ಅಧಿಕಾರಿಗಳ ಬಳಿ ಇದ್ದ ಮಾಹಿತಿಯನ್ನು ಸಚಿವ ಮುರುಗೇಶ್ ನಿರಾಣಿ ಅವರಿಗೆ ನೀಡಲು ಸೂಚನೆ ನೀಡಿದರು. ಬಳಿಕ ದಿಲೀಪ್ ಕನ್‍ಸ್ಟ್ರಕ್ಷನ್ ಅವರು ಅಕ್ರಮವಾಗಿ ಮಾಡಿರುವ ಗಣಿಗಾರಿಕೆಯ ವರದಿ ತೆಗೆದುಕೊಂಡು ಅವರಿಗೆ ದಂಡ ವಿಧಿಸುವುದಾಗಿ ಮುರುಗೇಶ್ ನಿರಾಣಿ ಅವರು ತಿಳಿಸಿದರು. ಅಲ್ಲದೇ ರಾಜಧನ ಪಾವತಿ ಮಾಡದವರ ವಿರುದ್ಧ ಕ್ರಮಕೈಗೊಂಡು ಅವರಿಂದ ರಾಜಧನ ವಸೂಲಿ ಮಾಡುವುದಾಗಿ ಅವರು ತಿಳಿಸಿದರು.

    ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ನಾನು ಸಂಸದೆ ಆದಾಗಿನಿಂದ ಮಂಡ್ಯ ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ. ನನ್ನ ಉದ್ದೇಶ ನನ್ನ ಜನರಿಗೆ ಹಾಗೂ ರೈತರಿಗೆ ಅನ್ಯಾಯವಾಗ ಬಾರದು, ನಾನು ಅಭಿವೃದ್ಧಿಯ ಪರವಾಗಿ ಇದ್ದೇನೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕು. ಆದರೆ ಮಂಡ್ಯ ಜಿಲ್ಲೆಯಲ್ಲಿ ಕೆಲವು ಕಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ. ಅದಕ್ಕಾಗಿ ನಾನು ಈ ಬಗ್ಗೆ ಸಚಿವರಾದ ಮುರುಗೇಶ್ ನಿರಾಣಿ ಅವರಿಗೆ ಹೇಳಿದ್ದೆ. ಅದರಂತೆ ಇಂದು ಅವರೊಂದಿಗೆ ಬಂದು ಪರಿಶೀಲನೆ ಮಾಡುತ್ತಿರುವುದಾಗಿ ತಿಳಿಸಿದರು.

  • ರಾಜ್ಯದಲ್ಲೇ ಅತೀ ಹೆಚ್ಚು ದಿಶಾ ಸಭೆ ನಡೆಸಿದ ಸುಮಲತಾ ಅಂಬರೀಶ್

    ರಾಜ್ಯದಲ್ಲೇ ಅತೀ ಹೆಚ್ಚು ದಿಶಾ ಸಭೆ ನಡೆಸಿದ ಸುಮಲತಾ ಅಂಬರೀಶ್

    ಮಂಡ್ಯ: ರಾಜ್ಯದಲ್ಲೇ ಅತೀ ಹೆಚ್ಚು ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲಾ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಗಳನ್ನು ನಿಯಮಬದ್ಧವಾಗಿ ನಡೆಸಿದ ಏಕೈಕ ಸಂಸದೆ ಎಂಬ ಹೆಗ್ಗಳಿಕೆಗೆ ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಅವರು ಪಾತ್ರರಾಗಿದ್ದಾರೆ.

    ಪ್ರತಿ ಸಂಸದರು ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತ್ರೈಮಾಸಿಕಕ್ಕೆ ಒಂದು ದಿಶಾ ಸಭೆಯಂತೆ ವರ್ಷಕ್ಕೆ ವರ್ಷಕ್ಕೆ ನಾಲ್ಕು ಸಭೆಗಳನ್ನು ಮಾಡಬೇಕೆಂಬ ನಿಯಮ ಇದೆ. ಆದರೆ ರಾಜ್ಯದ ಕೆಲ ಸಂಸದರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ 2 ಸಭೆಗಳನ್ನು ನಡೆಸಿದ್ದರೆ, ಇನ್ನೂ ಕೆಲ ಸಂಸದರು ಕೇವಲ ಒಂದು ಸಭೆಯನ್ನು ಮಾತ್ರ ಮಾಡಿದ್ದಾರೆ. ಆದರೆ ಮಂಡ್ಯ ಲೋಕಸಭಾ ಸದಸ್ಯ ಸುಮಲತಾ ಅಂಬರೀಶ್ ಅವರು 2020-21ನೇ ಸಾಲಿನಲ್ಲಿ ನಾಲ್ಕು ಸಭೆಗಳನ್ನು ಮಾಡುವ ಮೂಲಕ ರಾಜ್ಯ ಮಾತ್ರವಲ್ಲದೆ ದೇಶದಲ್ಲಿ ಗಮನ ಸೆಳೆದಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ದಿಶಾ ಸಭೆಗಳನ್ನು ಮಾಡಿದ ಮೊದಲ ಸಂಸದೆ ಎಂದು ಭಾರತ ಸರ್ಕಾರದ ವೆಬ್‍ಸೈಟ್‍ನಲ್ಲಿ ದಾಖಲಾಗಿದೆ.

    ಸುಮಲತಾ ಅಂಬರೀಶ್ ಅವರು ಕಳೆದ ನಾಲ್ಕು ದಿಶಾ ಸಭೆಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯ ಬಗ್ಗೆ ಹಾಗೂ ಇತರ ಅಭಿವೃದ್ಧಿ ಕೆಲಸಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಇದಲ್ಲದೇ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ.

  • ವಿಷ್ಣುವರ್ಧನ್ ಬಗ್ಗೆ ಮಾತಾಡಿದ ವ್ಯಕ್ತಿ ಕ್ಷಮೆಗೆ ಅರ್ಹರಲ್ಲ, ಕ್ಷಮಿಸಲೂ ಬಾರದು: ಸುಮಲತಾ ಕಿಡಿ

    ವಿಷ್ಣುವರ್ಧನ್ ಬಗ್ಗೆ ಮಾತಾಡಿದ ವ್ಯಕ್ತಿ ಕ್ಷಮೆಗೆ ಅರ್ಹರಲ್ಲ, ಕ್ಷಮಿಸಲೂ ಬಾರದು: ಸುಮಲತಾ ಕಿಡಿ

    ಬೆಂಗಳೂರು: ಸ್ಯಾಂಡಲ್‍ವುಡ್ ಸಾಹಸಸಿಂಹ ವಿಷ್ಣುವರ್ಧನ್ ಅವರ ಕುರಿತು ತೆಲುಗು ಚಿತ್ರರಂಗದ ನಟ ವಿಜಯ್ ರಂಗರಾಜು ವಿವಾದಾತ್ಮಹಕ ಹೇಳಿಕೆ ನೀಡಿರುವ ಕುರಿತು ಭಾರೀ ಚರ್ಚೆಯಾಗುತ್ತಿದೆ. ಅಲ್ಲದೆ ಈ ಬಗ್ಗೆ ಕನ್ನಡ ಚಿತ್ರರಂಗದ ಮಂದಿ ನಟನ ವಿರುದ್ಧ ಸಿಡಿದೆದ್ದಿದ್ದಾರೆ. ಅಂತೆಯೇ ಇದೀಗ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರು ವಿಜಯ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಈ ಸಂಬಂಧ ಸರಣಿ ಟ್ವೀಟ್ ಮಾಡುವ ಮೂಲಕ ರೊಚ್ಚಿಗೆದ್ದ ಸಂಸದೆ, ಕರ್ನಾಟಕದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಘನತೆ ಏನೆಂಬುವುದು ಚೆನ್ನಾಗಿಯೇ ಗೊತ್ತು ಎಂದು ಕಿಡಿಕಾರಿದ್ದಾರೆ.

    ಟ್ವೀಟ್‍ನಲ್ಲೇನಿದೆ..?
    ಇತ್ತೀಚಿನ ದಿನಗಳಲ್ಲಿ ಜನಪ್ರಿಯ ವ್ಯಕ್ತಿಗಳ ಬಗ್ಗೆ ಇಲ್ಲ ಸಲ್ಲದ ವಿವಾದಾತ್ಮಕ ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆಯುವುದೇ ಕೆಲವರಿಗೆ ಹವ್ಯಾಸವಾಗಿ ಹೋಗಿದೆ. ಇಡೀ ದೇಶವೇ, ಅದರಲ್ಲೂ ದಕ್ಷಿಣ ಭಾರತೀಯ ಚಿತ್ರ ರಸಿಕರಿಗೆ ನಮ್ಮ ಕರ್ನಾಟಕದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಘನತೆ ಏನೆಂಬುವುದು ಚೆನ್ನಾಗಿಯೇ ಗೊತ್ತು.

    ವಿಷ್ಣು ನಮ್ಮನ್ನು ದೈಹಿಕವಾಗಿ ದೂರವಾಗಿ ಹತ್ತು ವರುಷಗಳೇ ಕಳೆದರೂ ಅವರ ಮೇಲಿನ ಅಭಿಮಾನ ಎಳ್ಳಷ್ಟೂ ಕಡಿಮೆಯಾಗದಿರುವುದೇ ಅದಕ್ಕೆ ಸಾಕ್ಷಿ. ಯಾರಿಗೂ ತಿಳಿಯದ, ಯಾರೋ ಒಬ್ಬ ಅವರ ಬಗ್ಗೆ ಮನಸ್ಸೋ ಇಚ್ಛೆ ಕೆಲವು ಕೆಟ್ಟ ಪದಗಳಿಂದ ನಿಂದಿಸಿದರೆ ಅದರಿಂದ ನಮ್ಮ ವಿಷ್ಣುವಿನ ಘನತೆಗೆ ಒಂದು ಸಾಸಿವೆ ಕಾಳಷ್ಟು ಧಕ್ಕೆಯಾಗದು!

    ಅದು ಕೇವಲ ಅಂತಹ ಬಾಯಿಬಡುಕ ವ್ಯಕ್ತಿಯ ಕೆಟ್ಟ ಗುಣ ಹಾಗೂ ನೀಚ ಬುದ್ಧಿಯ ಅನಾವರಣವಲ್ಲದೆ ಬೇರೇನಲ್ಲ. ಅದರಲ್ಲೂ ನಮ್ಮನ್ನು ಅಗಲಿದ ವ್ಯಕ್ತಿಯ ಬಗ್ಗೆ ಈ ರೀತಿಯ ತುಚ್ಛವಾಗಿ ಮಾತನಾಡುವುದು ಕ್ಷಮಿಸಲಾಗದ ದೊಡ್ಡ ಅಪರಾಧ. ಇದನ್ನೂ ಓದಿ: ವಿಷ್ಣುವರ್ಧನ್ ಬಗ್ಗೆ ಮಾತಾಡಿದವನ ಚಳಿ ಬಿಡಿಸಿದ ರಾಕಿಭಾಯ್

    ಸರಿಯಾದ ಮನಸ್ಥಿತಿ ಉಳ್ಳವನು, ಒಬ್ಬ ವ್ಯಕ್ತಿಯು ಬದುಕಿದ್ದಾಗಲೇ ಅವರ ಬಗ್ಗೆ ಮಾತನಾಡಿ ಅವರ ಪ್ರತಿಕ್ರಿಯೆ ನಿರೀಕ್ಷಿಸುವುದು ಸರಿಯೇ ಹೊರತು, ಅವರ ನಿಧನದ ನಂತರ ಅವರ ಚಾರಿತ್ರ್ಯಕ್ಕೆ ಮಸಿ ಬಳಿಯುವ ಪ್ರಯತ್ನ, ಕೇವಲ ಹೇಡಿತನದ ಪರಮಾವಧಿ ಅಲ್ಲದೆ ಮತ್ತೇನೂ ಅಲ್ಲ.

    ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ವರ್ಚಸ್ಸು ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳಿಗೆ ಗೊತ್ತು. ನಾಯಿ ಬೊಗಳಿದರೆ ದೇವಲೋಕ ಹಾಳಾಗದು ಎಂಬುದಕ್ಕೆ ಇದೊಂದು ಸರಿಯಾದ ಉದಾಹರಣೆ. ಇಂತಹ ‘ಚೀಪ್ ಪಬ್ಲಿಸಿಟಿ’ ಗಾಗಿ ಮನಬಂದಂತೆ ಬಾಯಿ ಹರಟುವ ವ್ಯಕ್ತಿಗಳು ಕ್ಷಮೆ ಕೇಳಲು ಅರ್ಹರಲ್ಲ. ಕ್ಷಮಿಸಲು ಆಗದು, ಕ್ಷಮಿಸಲು ಬಾರದು ಎಂದು ಸರಣಿ ಟ್ವೀಟ್ ಮಾಡುವ ಮೂಲಕ ಸಂಸದೆ ಕಿಡಿಕಾರಿದ್ದಾರೆ.

    ನಟ ಹೇಳಿದ್ದೇನು?
    ತೆಲುಗು ಚಿತ್ರರಂಗದ ನಟ ವಿಜಯ್ ರಂಗರಾಜು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ವೈರಲ್ ಆಗಿದೆ. ಇದನ್ನು ಗಮನಿಸಿದ ಸ್ಯಾಂಡಲ್‍ವುಡ್ ತಾರೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಶಕಗಳ ಹಿಂದೆ ವಿಷ್ಣುವರ್ಧನ್ ಜೊತೆ ನಟಿಸಿದ್ದಾಗಿ ಹೇಳಿಕೊಂಡಿದ್ದು, ಇದೇ ವೇಳೆ ವಿಷ್ಣುವರ್ಧನ್ ಅವರ ನಡತೆ ಬಗ್ಗೆ ಆಕ್ಷೇಪಣೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಅಂದು ವಿಷ್ಣುವರ್ಧನ್ ಕಾಲರ್ ಹಿಡಿದು ಜಗಳ ಮಾಡಿದ್ದಾಗಿ ಸಹ ಹೇಳಿದ್ದಾರೆ. ಹೀಗಾಗಿ ಆಕ್ರೋಶ ಭುಗಿಲೆದ್ದಿದೆ.

    ವಿಷ್ಣುಸೇನೆ, ವಿಷ್ಟುವರ್ಧನ್ ಅಭಿಮಾನಿಗಳು ನಟನ ವಿರುದ್ಧ ಹಲವು ಕಡೆ ದೂರು ದಾಖಲಿಸಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಸಹ ದೂರು ದಾಖಲಿಸಿಕೊಂಡಿದೆ. ಅಲ್ಲದೆ ಸ್ಯಾಂಡಲ್‍ವುಡ್ ನಟರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಯಶ್ ಈ ಬಗ್ಗೆ ಕಿಡಿಕಾರಿದ್ದಾರೆ.

  • ನನಗೆ ಮಂಡ್ಯ ಸಂಸದೆ ಎಂದು ಹೇಳಲು ಹೆಮ್ಮೆ – ಸುಮಲತಾ

    ನನಗೆ ಮಂಡ್ಯ ಸಂಸದೆ ಎಂದು ಹೇಳಲು ಹೆಮ್ಮೆ – ಸುಮಲತಾ

    ಮಂಡ್ಯ: ಅಂಬರೀಶ್ ಅಗಲಿ ಎರಡು ವರ್ಷವಾದರೂ ನಿಮ್ಮ ಪ್ರೀತಿ ಚೂರು ಕಡಿಮೆ ಆಗಿಲ್ಲ. ಬದುಕಿದ್ದಾಗ ತೋರಿದ ಪ್ರೀತಿ ಅವರು ಸತ್ತ ಮೇಲು ತೋರಿಸಿದ್ದೀರಿ. ನನಗೆ ಮಂಡ್ಯ ಸಂಸದೆ ಎಂದು ಹೇಳಲು ಹೆಮ್ಮೆ ಎಂದು ಸುಮಲತಾ ಅಂಬರೀಶ್‌ ಹೇಳಿದ್ದಾರೆ.

    ಮದ್ದೂರು ತಾಲೂಕಿನ ಹೊಟ್ಟೆಗೌಡನ ದೊಡ್ಡಿ ಗ್ರಾಮದಲ್ಲಿ ಅಭಿಮಾನಿಗಳು ನಿರ್ಮಿಸಿದ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದು ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ನಿಮ್ಮ ಪ್ರೀತಿ ನನ್ನ ಚುನಾವಣೆಯಲ್ಲೂ ತೋರಿಸಿದ್ದೀರಿ. ಎಷ್ಟೋ ಸವಾಲುಗಳನ್ನ ಎದುರಿಸಿ ಚುನಾವಣೆ ಗೆಲ್ಲಲು ನಿಮ್ಮ ಪ್ರೀತಿ ಕಾರಣ. ಈ ಕಾರಣಕ್ಕೆ ನನಗೆ ಮಂಡ್ಯ ಸಂಸದೆ ಎಂದು ಹೇಳಲು ಹೆಮ್ಮೆ ಎಂದರು.

    ದಶಕಗಳಿಂದ ಅಂಬರೀಶ್‌ರವರ ಹುಟ್ಟುಹಬ್ಬ ಆಚರಿಸುತ್ತೀದ್ದೀರಿ. ಅಂಬಿಗಾಗಿ ಗುಡಿ ಕಟ್ಟಲು ಯಾರೂ ಹಣ ಕೇಳಿದವರಲ್ಲ. ಪುಣ್ಯಸ್ಮರಣೆ ದಿನ ನೀವು ಬಂದು ಉದ್ಘಾಟನೆ ಮಾಡಬೇಕು ಅಂತ ಕೇಳಿದರು. ಈ ಪ್ರೀತಿಗೆ ನಾನೇನು ವಾಪಸ್‌ ಕೊಡಲಿ. ನೀವು ನನ್ನ ಇಟ್ಟ ವಿಶ್ವಾಸ ಎಂದಿಗೂ ಮರೆಯುವುದಿಲ್ಲ. ನನ್ನ ಉಸಿರೂ ಇರುವವರೆಗೂ ನಾನು ಮರೆಯುವುದಿಲ್ಲ ಎಂದು ಹೇಳಿ ಭಾವುಕರಾದರು. ಇದನ್ನೂ ಓದಿ: ಅಭಿಮಾನಿಗಳಿಂದ ಅಂಬರೀಶ್‌ಗೆ ಗುಡಿ ನಿರ್ಮಾಣ

    ಕೆಟ್ಟ ಕೆಲಸ ಮಾಡುವುದು ಅವರ ಕರ್ಮ‌. ಒಳ್ಳೆಯ ಕೆಲಸ ಮಾಡುವುದು ನಮ್ಮ ಧರ್ಮ. ಈ ಮಾತನ್ನು ಅಂಬರೀಶ್ ನನಗೆ ಹೇಳಿಕೊಟ್ಟಿದ್ದಾರೆ. ಮಾತನಾಡುವವರು ಮಾತನಾಡಲಿ. ನಮ್ಮ ಕೆಲಸ ಮಾಡಬೇಕು ಎಂದು ಹೇಳಿ ಪರೋಕ್ಷವಾಗಿ ತನ್ನನ್ನು ಟೀಕಿಸಿದವರಿಗೆ ಸುಮಲತಾ ಟಾಂಗ್ ನೀಡಿದರು.

    ಅಂಬರೀಶ್ ಹೆಸರು ಹೇಳಬಾರದು ಅಂತ ಕೆಲವರು ಹೇಳ್ತಾರೆ. ನಾನು ಯಾಕೆ ಅಂಬರೀಶ್ ಹೆಸರನ್ನು ಹೇಳಬಾರದು ಎಂದು ಪ್ರಶ್ನಿಸಿದ ಅವರು ನನ್ನ ಹೆಸರಿನಲ್ಲೇ ಅಂಬಿ ಹೆಸರಿದೆ. ನನ್ನ ಹೆಸರು ಸುಮಲತಾ ಅಂಬರೀಶ್. ಅಂಬರೀಶ್ ಹೆಸರು ನನಗೆ ಸ್ಪೂರ್ತಿ. ಸಾಯುವವರೆಗೂ ಅಂಬಿ ಹೆಸರು ಹೇಳುತ್ತಾ ಕೆಲಸ ಮಾಡುತ್ತೇನೆ ಎಂದು ಟೀಕಿಸಿದವರಿಗೆ ಈ ಪ್ರತಿಕ್ರಿಯೆ ನೀಡುವ ಮೂಲಕ ಸುಮಲತಾ ಖಡಕ್‌ ತಿರುಗೇಟು ಕೊಟ್ಟರು.

  • ಮಂಡ್ಯ ಜನ ಅಂಬರೀಶ್‍ನನ್ನು ದೇವರಂತೆ ಪೂಜಿಸ್ತಾ ಇದ್ರು: ಸುಮಲತಾ

    ಮಂಡ್ಯ ಜನ ಅಂಬರೀಶ್‍ನನ್ನು ದೇವರಂತೆ ಪೂಜಿಸ್ತಾ ಇದ್ರು: ಸುಮಲತಾ

    – ಅಂಬಿ ಬಾಂಧವ್ಯದ ಬಗ್ಗೆ ಗೋಪಾಲಯ್ಯ ಮಾತು
    – ಸ್ಮಾರಕಕ್ಕೆ ಬಂದ ನಟ ದರ್ಶನ್

    ಬೆಂಗಳೂರು: ಮಂಡ್ಯದ ಜನ ಅಂಬರೀಶ್ ಅವರನ್ನು ವಿಶೇಷವಾಗಿ ದೇವರಂತೆ ಪೂಜಿಸುತ್ತಿದ್ದರು. ಪ್ರೀತಿ ಒಂದೇ ಅವರು ಸಂಪಾದಿಸಿರೋ ಆಸ್ತಿ. ಜನರ ಅವರನ್ನ ಹೃದಯಲ್ಲಿ ಇಟ್ಟುಕೊಂಡು ಪೂಜಿಸ್ತಾ ಇದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ಇಂದು ಅಂಬಿ ಎರಡನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರು ಎಲ್ಲರನ್ನೂ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದರು. ಎಲ್ಲರ ಪ್ರೀತಿ ಗಳಿಸಿ ಆ ಪ್ರೀತಿಯನ್ನ ಶಾಶ್ವತವಾಗಿ ಉಳಿಸಿಕೊಂಡಿದ್ದಾರೆ. ಇದಕ್ಕಿಂತ ಹೆಮ್ಮೆ ಯಾವುದೂ ಇಲ್ಲ ಎಂದರು.

    ಮಂಡ್ಯದಲ್ಲಿ ನಿಜಕ್ಕೂ ಅಂಬಿ ಗುಡಿ ಕಟ್ಟಿರೋದು ಅದ್ಭುತ. ಆ ಊರಿನವರು ನನ್ನಿಂದ ಯಾವುದೇ ಸಹಾಯ ತಗೊಂಡಿಲ್ಲ. ನನಗೆ ಇದು ಸರ್ಪ್ರೈಸ್, ಜೊತೆಗೆ ಅಂಬಿ ಪ್ರೀತಿಗೆ ಕಂಚಿನ ಪುತ್ಥಳಿ ಸಂಕೇತ. ಅವರು ಬದುಕಿದ್ದಾಗ ಪ್ರತಿದಿನ ಜನರ ಮಧ್ಯೆ ಇರುತ್ತಿದ್ದರು ಎಂದು ತಿಳಿಸಿದರು.

    ವಿಶೇಷವಾಗಿ ಮಂಡ್ಯ ಜನ ಅವರನ್ನ ದೇವರಂತೆ ಪೂಜಿಸ್ತಾ ಇದ್ದರು. ಪ್ರೀತಿ ಒಂದೇ ಅವರು ಸಂಪಾದಿಸಿರುವ ಆಸ್ತಿ. ಜನರ ಅವರನ್ನ ಹೃದಯಲ್ಲಿ ಇಟ್ಕೊಂಡು ಪೂಜಿಸ್ತಾ ಇದ್ದಾರೆ. ಅಂಬರೀಶ್ ಅವರಿಗೆ ಮನಸ್ಸಿನಲ್ಲೇ ಗುಡಿ ಕಟ್ಕೊಂಡಿದ್ದಾರೆ. ಸ್ಮಾರಕಕ್ಕೆ ಈಗಷ್ಟೇ ಟ್ರಸ್ಟ್ ರಿಜಿಸ್ಟಾರ್ ಆಗಿದೆ. ಇನ್ನಷ್ಟು ಮಿಟೀಂಗ್ ಮಾಡಿ ಯಾವ ರೀತಿ ಡಿಸೈನ್ ಮಾಡ್ಬೇಕು ಅನ್ನೋದನ್ನ ಚರ್ಚೆ ಮಾಡ್ತೀವಿ ಎಂದು ಹೇಳಿದರು.

    ಇದೇ ವೇಳೆ ಸಚಿವ ಗೋಪಾಲಯ್ಯ ಮಾತನಾಡಿ, ಅಂಬರೀಶ್ ಬದುಕಿದ್ದಾಗ ಎಲ್ಲರಿಗೂ ಪ್ರೀತಿ-ಪಾತ್ರರಾಗಿದ್ದರು. ಎಲ್ಲರಿಗೂ ಸಹಾಯ ಮಾಡಿದ್ದ ಮೇರುನಟ, ನನ್ನ ಅವರ ನಡುವೆ ಬಾಂಧವ್ಯ ಚೆನ್ನಾಗಿತ್ತು. ಅಂಬಿ ಸಚಿವರಾಗಿದ್ದಾಗ ನಮ್ಮ ಕ್ಷೇತ್ರಕ್ಕೆ ಮಾಡಿರೋ ಸಹಾಯ ಮರೆಯುವಂತಿಲ್ಲ. ಸ್ಮಾರಕ ಕಟ್ಟೋ ಬಗ್ಗೆ ಮುಖ್ಯಮಂತ್ರಿ ಜೊತೆ ಮೀಟಿಂಗ್ ಆಗಿದೆ ಎಂದು ತಿಳಿಸಿದರು. ನಟ ದರ್ಶನ್ ಕೂಡ ಅಂಬಿ ಸ್ಮಾರಕಕ್ಕೆ ಆಗಮಿಸಿದ್ದಾರೆ.

  • ದಯಮಾಡಿ ಇಡೀ ಚಿತ್ರರಂಗವನ್ನು ಟಾರ್ಗೆಟ್ ಮಾಡಬೇಡಿ: ಸುಮಲತಾ

    ದಯಮಾಡಿ ಇಡೀ ಚಿತ್ರರಂಗವನ್ನು ಟಾರ್ಗೆಟ್ ಮಾಡಬೇಡಿ: ಸುಮಲತಾ

    ಬೆಂಗಳೂರು: ದಯಮಾಡಿ ಇಡೀ ಚಿತ್ರರಂಗವನ್ನು ಟಾರ್ಗೆಟ್ ಮಾಡಬೇಡಿ ಎಂದು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡ್ರಗ್ಸ್ ಇಲ್ಲವೇ ಇಲ್ಲ ಅಂತ ಹೇಳಿಲ್ಲ. ನಮ್ಮ ಅನುಭವದಲ್ಲಿ ಇಲ್ಲ ಎಂದಷ್ಟೇ ಹೇಳಿದ್ದು. ಮಾಹಿತಿ ಇರದ ವಿಚಾರದ ಬಗ್ಗೆ ಪ್ರತಿಕ್ರಿಯೆ ಮಾಡಬಾರದು. ಆರೋಪ ಸಾಬೀತಾಗುವ ಮೊದಲೇ ಜಡ್ಜ್‍ಮೆಂಟ್ ಕೊಡಬಾರದು. ಚಲನಚಿತ್ರರಂಗ ಅಷ್ಟೇ ಅಲ್ಲ, ಎಲ್ಲ ಕಡೆಯಲ್ಲೂ ಇದೆ. ಇಡೀ ಕನ್ನಡ ಚಿತ್ರರಂಗವನ್ನೇ ಬೊಟ್ಟು ಮಾಡಬಾರದು. ಎಷ್ಟು ಪರ್ಸೆಂಟ್ ಇದೆ ಅನ್ನೋದನ್ನ ನೋಡಬೇಕು ಎಂದರು.

    ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ಎಲ್ಲ ಚಿತ್ರರಂಗದಲ್ಲಿಯೂ ಜನರೇಶನ್ ಚೇಂಜ್ ಆಗಿದೆ. ಹಿರಿಯರ ಜನರೇಶನ್ ಗೆ ಕೊಡುತ್ತಿದ್ದ ಗೌರವ ಈಗ ಕಡಿಮೆಯಾಗಿದೆ. ಅಭ್ಯಾಸ ಆಗಿರೋರಿಗೆ ಬಿಡುವುದು ಕಷ್ಟ. ಡ್ರಗ್ಸ್ ಪೆಡ್ಲರ್ ಗಳ ಜೊತೆ ದಂಧೆ ನಡೆಯುತ್ತಿದೆ. ನಾಯಕಿಯರ ಹೆಸರೇ ದಂಧೆಯಲ್ಲಿ ಕೇಳಿಬರ್ತಿದೆ. ವಿನಾಕಾರಣ ಮಾಹಿತಿ ಇಲ್ಲದೇ ನಾನು ಮಾತನಾಡುವುದಿಲ್ಲ. ಡ್ರಗ್ಸ್ ದಂಧೆಯಲ್ಲಿ ಇತರೆ ನಟರು ಇದ್ದಾರಾ ಅನ್ನೋದ್ರ ಬಗ್ಗೆ ತನಿಖಾಧಿಕಾರಿಗಳೇ ಮಾಹಿತಿ ಕೊಡಬೇಕು ಎಂದು ತಿಳಿಸಿದರು.

    ಇದೇ ವೇಳೆ ನಾಗಮಂಗಲದಲ್ಲಿ ಡ್ರಗ್ಸ್ ಮಾರಾಟ ಆಗ್ತಿದೆ ಎಂಬ ಮಾಜಿ ಸಂಸದ ಶಿವರಾಮೇಗೌಡಗೆ ತಿರುಗೇಟು ನೀಡಿದ ಸುಮಲತಾ, ಮಾಧ್ಯಮಗಳ ಮುಂದೆ ಸುಮ್ಮನೆ ಆರೋಪ ಮಾಡಬಾರದು. ದಾಖಲೆ ಇದ್ದರೆ ಪೊಲೀಸರಿಗೆ ಕೊಡಿ. ಸಾಕ್ಷಿ ಪುರಾವೆ ಸಹಿತ ಸಾಬೀತುಪಡಿಸಿ. ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಿ. ಸುಖಾಸುಮ್ಮನೆ ಆರೋಪ ಮಾಡಬೇಡಿ ಎಂದು ಹೇಳಿದರು.

    ಡಗ್ರ್ಸ್ ಚಿತ್ರರಂಗದಷ್ಟೇ ಅಲ್ಲ, ಎಲ್ಲ ಕಡೆ ಇದೆ ಅಂತ ಹೇಳುವುದನ್ನ ಕೇಳಿದ್ದೇನೆ. ಈಗ ತನಿಖೆ ನಡೆಯುತ್ತಿದೆ, ಸತ್ಯಾಂಶ ಬರುವ ತನಕ ಕಾಯೋಣ. ಇಂದಿನ ಜನರೇಶನ್ ಹಾಳಾಗುವ ವಿಚಾರ ಇದು. ಇದರಲ್ಲಿ ಎಲ್ಲರ ತಪ್ಪು ಇದೆ. ಚಿತ್ರರಂಗದಲ್ಲಿ ಎಷ್ಟು ಜನರೇಶನ್ ನಿಂದ ನಟನಟಿಯರು ಇದ್ದಾರೆ. ಆದರೆ ಡ್ರಗ್ಸ್ ವಿಚಾರದಲ್ಲಿ ಎಷ್ಟು ಪರ್ಸೆಂಟ್ ಇದ್ದಾರೆ. ಚಿತ್ರರಂಗದಲ್ಲಿ ಏನೇ ನಡೆದ್ರೂ ವಿಪರೀತವಾಗಿ ತೋರಿಸುವುದು ಅಭ್ಯಾಸವಾಗಿಬಿಟ್ಟಿದೆ, ಇದು ಸರಿ ಇಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದರು.

    ಕನ್ನಡ ಚಿತ್ರರಂಗದಲ್ಲಿ ಯಜಮಾನಿಕೆ ಇಲ್ಲದಿರುವುದೇ ಇಷ್ಟಕ್ಕೆಲ್ಲ ಕಾರಣ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ವಿಚಾರಗಳು ನಡೆಯಬೇಕಾದ್ರೆ ಯಾರೂ ಹೇಳಿ ಮಾಡಲ್ಲ. ಎಲ್ಲೆಲ್ಲಿ ನಡೆಯುತ್ತೆ ಅದು ನಡೆಯುತ್ತಿರುತ್ತೆ. ಯಜಮಾನ ಇದ್ದಾರೆ, ಇಲ್ಲ ಅನ್ನೋದನ್ನ ನೋಡಿಕೊಂಡು ಮಾಡುವುದಿಲ್ಲ. ದಯಮಾಡಿ ಇಡೀ ಚಿತ್ರರಂಗವನ್ನು ಟಾರ್ಗೆಟ್ ಮಾಡಬೇಡಿ ಅಂತ ಮನವಿ ಮಾಡಿಕೊಂಡರು.