Tag: ಸುಮಲತಾ ಅಂಬರಿಷ್

  • ದಶಪಥ ರಸ್ತೆ ಅವೈಜ್ಞಾನಿಕ ಕಾಮಗಾರಿ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತೆ: ಸುಮಲತಾ

    ದಶಪಥ ರಸ್ತೆ ಅವೈಜ್ಞಾನಿಕ ಕಾಮಗಾರಿ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತೆ: ಸುಮಲತಾ

    ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಲೇ ಪ್ರವಾಹ ಸಮಸ್ಯೆ ಎದುರಾಗಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ರೆ ಹೀಗೆ ಆಗುತ್ತಿರಲಿಲ್ಲ. ಇಂತಹ ಅವೈಜ್ಞಾನಿಕ ಕಾಮಗಾರಿ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಸಂಸದೆ ಸುಮಲತಾ ಅಂಬರೀಶ್ ಗುಡುಗಿದ್ದಾರೆ.

    ಮಂಡ್ಯದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ. ಅವೈಜ್ಞಾನಿಕ ಕಾಮಗಾರಿಯಿಂದಲೇ ಪ್ರವಾಹದ ಸಮಸ್ಯೆ ಎದುರಾಗಿದೆ. ಇದು ಯಾರ ಯೋಜನೆಯೂ ಅಲ್ಲ, ಇದು ಇದು ಎನ್‌ಹೆಚ್‌ಎ ಅವರ ಯೋಜನೆ. ಇದಕ್ಕೆ ಎಲ್ಲರೂ ಜನಪ್ರತಿನಿಧಿಗಳು ಅಷ್ಟೇ ಎಂದು ಕುಟುಕಿದ್ದಾರೆ.

    ಆಗುತ್ತಿರುವ ಸಮಸ್ಯೆ ಬಗ್ಗೆ ನಾವು ಧ್ವನಿ ಎತ್ತಬೇಕು. ನಾನಿಲ್ಲಿ ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ. ಅಥವಾ ಯಾರನ್ನೂ ಸಹ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಆದ್ರೆ ರಾಜಕೀಯ ಮಾಡುತ್ತಿದ್ದೀರಾ ಎಂದು ಹೇಳೋರಿಗೆ ನಾನು ಕೇರ್ ಮಾಡಲ್ಲ. ಹೆದ್ದಾರಿ ವ್ಯಾಪ್ತಿಯಲ್ಲಿ 16 ಕಡೆ ಸಮಸ್ಯೆಗಳಾಗಿದೆ. ಸಮರ್ಥನೆ ಮಾಡಿಕೊಳ್ಳೋರು ಮೊದಲು 16 ಕಡೆ ಸರಿಪಡಿಸಿ ಎಂದು ತಿರುಗೇಟು ನೀಡಿದ್ದಾರೆ.

    ಈ ಹಿಂದೆ ಇಂದಿಗಿಂತಲೂ ದೊಡ್ಡ ಪ್ರಮಾಣದ ಮಳೆ ಬಿದ್ದಿದೆ. ಆದರೆ ಈ ಬಾರಿಯ ಮಳೆಯಿಂದ ಹೆದ್ದಾರಿ ವ್ಯಾಪ್ತಿಯಲ್ಲಿ ಹೊಸ ಸಮಸ್ಯೆಗಳು ಉದ್ಭವಾಗಿವೆ. ಇದಕ್ಕೆ ಪ್ರಮುಖ ಕಾರಣ ಅವೈಜ್ಞಾನಿಕ ಕಾಮಗಾರಿ. ಈ ಯೋಜನೆಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತದೆ. ಆದ್ರೆ ಈ ಕಾಮಗಾರಿಯಿಂದ ಈ ಭಾಗದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಎಲ್ಲರೂ ನೋಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಗಸ್ಟ್‌ ಜಿಎಸ್‌ಟಿ ಶೇ.28 ಏರಿಕೆ – 1.43 ಲಕ್ಷ ಕೋಟಿ ರೂ.ನಲ್ಲಿ ಯಾವ ರಾಜ್ಯದ ಪಾಲು ಎಷ್ಟು?

    ನಾನು ಯಾರನ್ನು ಸಹ ಟಾರ್ಗೆಟ್ ಮಾಡುತ್ತಿಲ್ಲ. ಕಾಲುವೆಗಳನ್ನು ಮುಚ್ಚಿ ಪೈಪ್‌ಗಳನ್ನು ಹಾಕಿರೋದಾಗಿ ಎಂಜಿಯರ್‌ಗಳೇ ಒಪ್ಪಿಕೊಂಡಿದ್ದಾರೆ. ಈ ಪೈಪ್‌ಗಳು ಕಟ್ಟಿಕೊಂಡು ಹೆದ್ದಾರಿ ವ್ಯಾಪ್ತಿಯಲ್ಲಿ ಪ್ರವಾಹ ಬಂದಿದೆ. ಇದಕ್ಕೆಲ್ಲಾ ಯಾರು ಜವಾಬ್ದಾರಿಯಾಗುತ್ತಾರೆ? ಇದರ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪುನರಾರಂಭಗೊಂಡ ಮೈಶುಗರ್ ಸಕ್ಕರೆ ಕಾರ್ಖಾನೆ – ರೈತರ ಮುಖದಲ್ಲಿ ಮಂದಹಾಸ

    ಟೈಮ್ ಅಥವಾ ದುಡ್ಡು ಉಳಿಸೋಕೆ ಈ ಕಾಮಗಾರಿ ಮಾಡಿದ್ದಾರೋ ನನಗೆ ಗೊತ್ತಿಲ್ಲ. ಎನ್‌ಹೆಚ್‌ಎಗೆ ಸಿಎನ್‌ಎನ್‌ಎಲ್‌ನಿಂದ 21 ಪತ್ರಗಳು ಬಂದಿದೆ. ಆದರೆ ಒಂದಕ್ಕೂ ಉತ್ತರ ನೀಡಿಲ್ಲ. ಅವೈಜ್ಞಾನಿಕ ಕಾಮಗಾರಿ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಸಿದ್ದಾರೆ.

    ನಾನು ಈ ಹಿಂದೆ ಅವೈಜ್ಞಾನಿಕ ಕಾಮಗಾರಿ ಎಂದು ಹೋರಾಟ ಮಾಡಿದಾಗ ಇದು ರಾಜಕೀಯ ಎಂದು ಹೇಳಿದ್ರು. ಈಗ ಸಮಸ್ಯೆಗಳು ಎಲ್ಲರಿಗೂ ಗೊತ್ತಾಗುತ್ತಿದೆ. ನಾವು ಮಾಡುವ ಕೆಲಸವನ್ನು ಪ್ರಮಾಣಿಕವಾಗಿ ಮಾಡಿದ್ರೆ ಹೀಗೆ ಆಗುತ್ತಿರಲಿಲ್ಲ. ಇಂತಹ ದೊಡ್ಡ ಕಾಮಗಾರಿಯನ್ನು ಶೇ.100 ರಷ್ಟು ಸರಿಯಾಗಿ ಮಾಡೋಕೆ ಆಗಲ್ಲ. ಆದ್ರೆ ಗೊತ್ತಿದ್ದೂ ಅವೈಜ್ಞಾನಿಕಚವಾಗಿ ಕಾಮಗಾರಿ ಮಾಡಿದ್ದಾರೆ. ಈ ಸಮಸ್ಯೆಯನ್ನು ಯಾರೇ ಸಮರ್ಥನೆ ಮಾಡಿದ್ರೂ ಅದನ್ನು ಒಪ್ಪಿಕೊಳ್ಳೋದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಂಬಿ ಪುತ್ರ ಅಭಿಷೇಕ್‍ಗೆ ಬಿಜೆಪಿ ಗಾಳ – ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ?

    ಅಂಬಿ ಪುತ್ರ ಅಭಿಷೇಕ್‍ಗೆ ಬಿಜೆಪಿ ಗಾಳ – ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ?

    ಬೆಂಗಳೂರು: ಇವತ್ತಿನಿಂದ ಆಪರೇಷನ್ ಹಳೆ ಮೈಸೂರು ಚಾಪ್ಟರ್ 1 ಶುರುವಾಗಿದೆ. ಅಂಬಿ ಪುತ್ರ ಅಭಿಷೇಕ್‍ಗೆ ಬಿಜೆಪಿ ಗಾಳ ಹಾಕಿದ್ದು, ಮತ್ತೆ ಅಂಬಿ ಫ್ಯಾಮಿಲಿ ಮಂಡ್ಯ ಅಖಾಡಕ್ಕೆ ಇಳಿದರೆ ರಣಕಣ ಗ್ಯಾರಂಟಿ. ಹಾಗಾದರೆ ಸುಮಲತಾ ನಡೆ ಏನು? ಪುತ್ರನನ್ನ ರಾಜಕೀಯಕ್ಕೆ ಎಂಟ್ರಿ ಕೊಡಿಸ್ತಾರಾ ಎಂಬ ಕುತೂಹಲ ಇದೆ.

    ಮಂಡ್ಯದಲ್ಲಿ ಯುವ ನಾಯಕತ್ವ ಬರುತ್ತೆ ಎಂದು ಸಿಎಂ ಸುಳಿವು ಕೊಟ್ಟ ಬೆನ್ನಲ್ಲೇ ಸಕ್ಕರೆ ನಗರಿಯಲ್ಲೀಗ ಅಂಬಿ ನೆನಪು. ಅಂಬರೀಷ್ ಚುನಾವಣೆ ಅಖಾಡದಲ್ಲಿ ಇರ್ತಾರೆ ಅಂದರೆ ಅದರ ಖದರ್ ಬೇರೆಯೇ ಇರುತ್ತಿತ್ತು. ಅಂಬಿ ಮಂಡ್ಯದ ಗಂಡಾಗಿ ರಾಜಕೀಯದಲ್ಲಿ ಹಲವು ಏಳುಬೀಳುಗಳನ್ನು ಸಹ ಕಂಡಿದ್ದರು. ಇದೀಗ ಅಂಬರೀಷ್ ಫ್ಯಾಮಿಲಿಯನ್ನೇ ಬಿಜೆಪಿ ಕರೆತರಲು ನಾನಾ ರೀತಿಯ ತಂತ್ರಗಾರಿಕೆ ಶುರುವಾಗಿದೆ. ಅಭಿಷೇಕ್ ಕೂಡ ರಾಜಕೀಯಕ್ಕೆ ಎಂಟ್ರಿ ಮಾಡಿಸಲು ಬಿಜೆಪಿಯಿಂದ ಮಹಾ ಪ್ಲ್ಯಾನ್ ನಡೆದಿದೆ. ಮಂಡ್ಯದಲ್ಲಿ ಯುವ ನಾಯಕತ್ವ ಬರಲಿದೆ ಎಂದು ಸಿಎಂ ಹೇಳಿರುವುದರ ಹಿಂದೆ ಅಂಬರೀಷ್ ಅವರ ಮಗ ರಾಜಕೀಯ ಎಂಟ್ರಿ ಇದೆಯಾ ಎಂಬ ಕುತೂಹಲ ಮನೆ ಮಾಡಿದೆ. ಇದನ್ನೂ ಓದಿ: ಬಿಜೆಪಿಯಲ್ಲಿ ಸಿಎಂ ಸಚಿವ ಸ್ಥಾನ ಲಾಭಿಗೆ ಅವಕಾಶವಿಲ್ಲ, ಯತ್ನಾಳ್ ಹೇಳಿಕೆ ತಪ್ಪು: ರೇಣುಕಚಾರ್ಯ

    sumalatha ambarish

    ಅಂದಹಾಗೆ ತಂದೆಯ ಜಾಗಕ್ಕೆ ಪುತ್ರನಿಗೆ ಪಟ್ಟಾಭಿಷೇಕ ಮಾಡಲು ಬಿಜೆಪಿ ಪ್ಲ್ಯಾನ್ ಮಾಡಿದ್ದರೂ ಬಿಜೆಪಿಯ ಆ ಆಪರೇಷನ್‍ಗೆ ಅಂಬಿ ಫ್ಯಾಮಿಲಿ ಒಪ್ಪಿಬಿಡುವುದು ಅಷ್ಟು ಸುಲಭವೂ ಅಲ್ಲ. ಮದುವೆ ವೇಳೆ ಸಿಎಂ ಜೊತೆ ಕುಳಿತು ಮಾತನಾಡುತ್ತಿರುವ ಫೋಟೋ ವೈರಲ್ ಆಗಿದ್ದಾಗ ಬಿಜೆಪಿ ಆಹ್ವಾನವನ್ನು ಕೊಟ್ಟಿರೋದನ್ನ ಸುಮಲತಾ ಒಪ್ಪಿಕೊಂಡಿದ್ದರು. ಆದರೆ ಕ್ಷೇತ್ರದ ಕಾರ್ಯಕರ್ತರು, ಜನರ ಅಭಿಪ್ರಾಯ ಪಡೆದು ತೀರ್ಮಾನ ಎಂದಿದ್ದರು. ಇದನ್ನೂ ಓದಿ: ಸಾಹುಕಾರ ಪಾಪರ್ ಆಗ್ತಿದ್ದಾರೆ: ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ವಾಗ್ದಾಳಿ

    ಈ ನಡುವೆ ಮದ್ದೂರಿನಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಪ್ರಶ್ನೆಗೆ ಕಳೆದ 2021 ಸೆಪ್ಟಂಬರ್‍ನಲ್ಲಿ ಮಾತನಾಡಿದ್ದ ಅಭಿಷೇಕ್ ಅಂಬರೀಷ್ ಅಭಿಮಾನಿಗಳ ಜೊತೆಯಲ್ಲಿ ಇರಬೇಕು ಎಂಬ ಆಸೆ ಇರುತ್ತೆ. ಇಲ್ಲಿ ತನಕ ಅಭಿಮಾನಿಗಳು ನಮ್ಮನ್ನ ಬೆಳೆಸಿದ್ದಾರೆ, ಮುಂದೆಯೂ ಬೆಳೆಸ್ತಾರೆ. ಮುಂದೇನಾಗುತ್ತೋ ನೋಡೋಣ ದೇವರ ಇಚ್ಛೆ ಎಂದು ಹೇಳುವ ಮೂಲಕ ಕುತೂಹಲ ಹುಟ್ಟು ಹಾಕಿದ್ದಾರೆ.

    ಒಟ್ಟಿನಲ್ಲಿ ಅಂಬಿ ಅಡ್ಡಾದಿಂದಲೇ ಆಪರೇಷನ್ ಓಲ್ಡ್ ಮೈಸೂರು ಶುರುವಾಗಿದ್ದು, ಇವತ್ತು ಮಂಡ್ಯದಿಂದ ಬಿಜೆಪಿಗೆ ಹಲವರು ಸೇರ್ಪಡೆಯಾಗಿದ್ದು, ಮುಂದೆ ಎರಡನೇ ಹಂತದಲ್ಲಿ ಅಭಿಷೇಕ್ ರಾಜಕೀಯ ಎಂಟ್ರಿಯ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.