Tag: ಸುಮನ್ ನಗರಕರ್

  • ಗಣೇಶ್ ನಡೆಸಿಕೊಡುವ ‘ಇಸ್ಮಾರ್ಟ್ ಶೋ’ ಸ್ಪೆಷಲ್ ಏನು? ಯಾರೆಲ್ಲ ಸೆಲೆಬ್ರಿಟಿ ಜೋಡಿ ಭಾಗಿಯಾಗ್ತಿದ್ದಾರೆ ಗೊತ್ತಾ?

    ಗಣೇಶ್ ನಡೆಸಿಕೊಡುವ ‘ಇಸ್ಮಾರ್ಟ್ ಶೋ’ ಸ್ಪೆಷಲ್ ಏನು? ಯಾರೆಲ್ಲ ಸೆಲೆಬ್ರಿಟಿ ಜೋಡಿ ಭಾಗಿಯಾಗ್ತಿದ್ದಾರೆ ಗೊತ್ತಾ?

    ವೀಕೆಂಡ್ ಮನೋರಂಜನೆಗೆ ಸ್ಟಾರ್ ಸುವರ್ಣ ವಾಹಿನಿ ಈಗ  “ಇಸ್ಮಾರ್ಟ್ ಜೋಡಿ”‌ ಎಂಬ ಸುಂದರ ಕಾರ್ಯಕ್ರಮ ಆರಂಭಿಸಲಿದೆ. ಖ್ಯಾತ ನಟ ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ ಈ ರಿಯಾಲಿಟಿ ಶೋ ಇದೇ ಜುಲೈ 16ರ ಶನಿವಾರದಿಂದ ಆರಂಭವಾಗಲಿದೆ. ಹತ್ತು ಸೆಲೆಬ್ರಿಟಿ ಜೋಡಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ-ಅರವಿಂದ ಪಾಲಿಗೆ ಈ ದಿನ ಯಾಕೆ ಸ್ಪೆಷಲ್ ಗೊತ್ತಾ?

    ಈ ಕುರಿತು ಗಣೇಶ್ ಮಾತನಾಡಿ, ಇದುವರೆಗೂ ಮನರಂಜನೆಯ ಮತ್ತು ಸ್ನೇಹದ ಕುರಿತಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೇನೆ. ಈಗ ಮೊದಲ ಬಾರಿಗೆ ಸೆಲೆಬ್ರಿಟಿ ಜೋಡಿಗಳ ಕುರಿತಾಗಿ ಒಂದು ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ. ಎರಡು ವರ್ಷ ಗ್ಯಾಪ್​ ಆಗಿತ್ತು. ಬೇರೇನೋ ಹೊಸದು ಮಾಡಬೇಕು,  ಫ್ಯಾಮಿಲಿ ಆಡಿಯನ್ಸ್​ ತಲುಪಬೇಕು ಎಂದು ಯೋಚಿಸುತ್ತಿದ್ದಾಗ ಸ್ಟಾರ್​ ಸುವರ್ಣದವರು ಈ ಕಾರ್ಯಕ್ರಮದ ಕುರಿತು ಹೇಳಿದರು. ಇದೊಂದು ಸೆಲೆಬ್ರಿಟಿ ಜೋಡಿಯ ಕುರಿತಾದ ಕಾರ್ಯಕ್ರಮ. ಇಲ್ಲಿ ಹೊಸದಾಗಿ ಮದುವೆಯಾದವರಿಂದ 40 ವರ್ಷ ದಾಂಪತ್ಯ ಜೀವನ ನಡೆಸಿದ ಹಿರಿಯರವರೆಗೂ ಇದ್ದಾರೆ. ಇವತ್ತಿನ ದಿನಗಳಲ್ಲಿ ದಂಪತಿಗಳು ಸಣ್ಣಸಣ್ಣ ವಿಷಯಕ್ಕೂ ಬಹಳ ಬೇಗ ದೂರ ಆಗುತ್ತಿದ್ದಾರೆ. ಜೀವನ ಎಂದರೆ ಅದಲ್ಲ, ಇಲ್ಲಿ ಏಳುಬೀಳು, ಸುಖ-ಸಂತೋಷ ಎಲ್ಲವೂ ಇರುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಇದು. ಈ ಕಾರ್ಯಕ್ರಮವು ನಾಲ್ಕು ಜನರಿಗೆ ಮಾದರಿ ಆಗಬೇಕು, ನೀವೇ ಇದನ್ನು ನಡೆಸಿಕೊಡಬೇಕು ಎಂದರು. ಒಳ್ಳೆಯ ಕಾನ್ಸೆಪ್ಟ್​ ಆದ್ದರಿಂದ ಒಪ್ಪಿಕೊಂಡೆ. ಒಟ್ಟು 26 ಕಂತುಗಳು. ಪ್ರತಿ ಶನಿವಾರ ಮತ್ತು ಭಾನುವಾರ ರಾತಿ 9ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಆರಂಭಿಕ ಎರಡು ಕಂತುಗಳ ಚಿತ್ರೀಕರಣ ನಡೆದಿದೆ.  ಈಗ ಇನ್ನೆರೆಡು ಕಂತುಗಳ ಚಿತ್ರೀಕರಣ ಆಗುತ್ತಿದೆ. ಇಲ್ಲಿ ಒಬ್ಬೊಬ್ಬರ ಜರ್ನಿ ಒಂದೊಂದು ರೀತಿ. ಹಿರಿಯರ ಜೊತೆಗೆ ಮಾತನಾಡುವಾಗ ಅವರ ಜೀವನದ ಬಗ್ಗೆ ಕೇಳಿ ಬಹಳ ಖುಷಿಯಾಯಿತು. ನಾನು ಸಹ ಒಬ್ಬ ಪ್ರೇಕ್ಷಕನಾಗಿ ಬಹಳ ಕುತೂಹಲ ಎಂದನಿಸಿತು. ಒಟ್ಟಿನಲ್ಲಿ ಎಲ್ಲರೂ ಪ್ರೀತಿಯಿಂದ ಬದುಕಿ ಅಂತ ಸಂದೇಶ ಸಾರುವಂತಹ ಕಾರ್ಯಕ್ರಮ ಇದು. ಇಲ್ಲಿ ತೀರ್ಪುಗಾರರಿರುವುದಿಲ್ಲ. ನಾನು ನಿರೂಪಕನಾಗಿರುತ್ತೇನೆ. ಸ್ಪರ್ಧಿಗಳಿಗೆ ಹಲವು ಟಾಸ್ಕ್​ಗಳನ್ನು ನೀಡಲಾಗುತ್ತದೆ. ಗೆದ್ದವರಿಗೆ ಅಂಕಗಳನ್ನು ನೀಡಲಾಗುತ್ತದೆ. ಮೊದಲ ಐದು ಕಂತುಗಳಲ್ಲಿ ಯಾವುದೇ ಎಲಿಮಿನೇಷನ್​ ಇರುವುದಿಲ್ಲ. ಗೆದ್ದವರಿಗೆ 10 ಲಕ್ಷ ಬಹುಮಾನ ನೀಡಲಾಗುತ್ತದೆ. ಇಲ್ಲಿ ಚಿತ್ರರಂಗ, ಕಿರುತೆರೆ ಮತ್ತು ಸೋಷಿಯಲ್​ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಜೋಡಿಗಳು ಭಾಗವಹಿಸುತ್ತಿವೆ. ಜತೆಗೆ ಸಿನಿಮಾ ಪ್ರಮೋಷನ್​ಗಳು ಸಹ ಇರುತ್ತವೆ. ಸೆಲೆಬ್ರಿಟಿಗಳು ಆಗಾಗ ಅತಿಥಿಯಾಗಿ ಬರುತ್ತಿರುತ್ತಾರೆ ಎಂದರು ಗಣೇಶ್.

    ವಿನಯ್​ ಗೌಡ ಮತ್ತು ಅಕ್ಷತಾ ಗೌಡ, ಸುಮನ್​ ನಗರ್​ಕರ್​ ಮತ್ತು ಗುರುದೇವ್​ ನಾಗರಾಜ, ದಿಶಾ ಮದನ್​ ಮತ್ತು ಶಶಾಂಕ್​ ವಾಸುಕಿ ಗೋಪಾಲ್​, ಪ್ರತಿಕ್​ ಪ್ರೊ ಮತ್ತು ಮೌಲ್ಯಶ್ರೀ ಎಂ,ಶ್ರೀರಾಮ ಸುಳ್ಯ ಮತ್ತು ಪುನೀತ ಆಚಾರ್ಯ, ರಘು ವೈನ್​ ಸ್ಟೋರ್​ ಮತ್ತು ವಿದ್ಯಾಶ್ರೀ, ಇಂಪನಾ ಜಯರಾಜ್​ ಮತ್ತು ಅಜಿತ್​  ಜಯರಾಜ್​, ಸಪ್ನ ದೀಕ್ಷಿತ್​ ಮತ್ತು ಅಶ್ವಿನ್​ ದೀಕ್ಷಿತ್​, ಜೈಜಗದೀಶ್​ ಮತ್ತು ವಿಜಯಲಕ್ಷ್ಮಿ ಸಿಂಗ್​, ರಿಚರ್ಡ್​ ಲೂಯಿಸ್​ ಮತ್ತು ಹ್ಯಾರಿಯೆಟ್​ ಲೂಯಿಸ್​.

    ರಾಕ್​ಲೈನ್​ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅದ್ಭುತ  ಸೆಟ್​ನಲ್ಲಿ ಚಿತ್ರೀಕರಣ ನಡೆಯುತ್ತಿದೆ.  ಶೀರ್ಷಿಕೆ ಹಾಡಿಗೆ ALL OK ಸಂಗೀತ ಸಂಯೋಜನೆ ಮಾಡಿ ಅವರೆ ಹಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೊದಲ್ಲಿ ಈ ಹಾಡು ಜನರ ಮನ ಗೆದ್ದಿದೆ. ನಿರ್ದೇಶಕ ಪ್ರಶಾಂತ್​, ವರ್ಷ, ಉಷಾ ಗೌಡ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

    Live Tv
    [brid partner=56869869 player=32851 video=960834 autoplay=true]

  • ‘ಬಬ್ರೂ’ ಈ ವಾರ ತೆರೆಗೆ

    ‘ಬಬ್ರೂ’ ಈ ವಾರ ತೆರೆಗೆ

    ಸುಮನ್ ನಗರಕರ್ ಪ್ರೊಡಕ್ಷನ್ಸ್ ಹಾಗೂ ಯುಗ ಕ್ರಿಯೆಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಬಬ್ರೂ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ಸುಜಯ್ ರಾಮಯ್ಯ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಸುಮುಖ್ ಹಾಗೂ ಸುಜಯ್ ರಾಮಯ್ಯ ಅವರ ಛಾಯಾಗ್ರಹಣ, ಬಿಂದು ಮಾಧವ ಸಂಕಲನ ಈ ಚಿತ್ರಕ್ಕಿದೆ. ವರುಣ್ ಶಾಸ್ತ್ರಿ ಅವರು ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಲೋಕೇಶ್ ಬಿ.ಎಸ್ ಅವರ ಸಹ ನಿರ್ದೇಶನ ಹಾಗೂ ನಿರ್ಮಾಣ ಮೇಲ್ವಿಚಾರಣೆಯಿದೆ. ಗುರುದೇವ್ ನಾಗರಾಜ(ಗುರು) ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಇದನ್ನೂ ಓದಿ:  ಬಿಡುಗಡೆಗೂ ಮುನ್ನವೇ ಬಬ್ರೂ ದಾಖಲೆ!

    ಸುಮನ್ ನಗರಕರ್, ಮಾಹಿ ಹಿರೇಮಠ್, ರೇತೊಸ್ತಾಡೊ, ಸನ್ನಿ ಮೋಜ, ಪ್ರಕೃತಿ ಕಶ್ಯಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ಸೊಗಸಾಗಿದೆ ಬೆಳದಿಂಗಳ ಬಾಲೆಯ ‘ಬಬ್ರೂ’ ಟ್ರೇಲರ್!