Tag: ಸುಮನ್ ಡಿ ಪನ್ನೇಕರ್

  • ಸಕ್ಕರೆ ನಾಡಿಗೆ ನೂತನ ಎಸ್‍ಪಿ ಆಗಮನ

    ಸಕ್ಕರೆ ನಾಡಿಗೆ ನೂತನ ಎಸ್‍ಪಿ ಆಗಮನ

    ಮಂಡ್ಯ: ಕೊನೆಗೂ ಎಸ್‍ಪಿ ನೇಮಕ ಗೊಂದಲಕ್ಕೆ ತೆರೆಬಿದ್ದಿದ್ದು, ಇಂದು ಎನ್.ಯತೀಶ್ ಮಂಡ್ಯದಲ್ಲಿ ವಿನೂತನ ಎಸ್‍ಪಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.

    ಸಕ್ಕರೆ ನಾಡಿಗೆ ನೂತನ ಎಸ್‍ಪಿ ಯಾರೆಂದು ಎಲ್ಲರಲ್ಲಿಯೂ ಗೊಂದಲ ಮೂಡಿದ್ದು, ಕಳೆದ ಹತ್ತು ದಿನದಿಂದ ಎಸ್‍ಪಿ ಹುದ್ದೆ ಖಾಲಿಯಾಗಿತ್ತು. ಆದರೆ ಕೊನೆಗೂ ಎಸ್‍ಪಿ ನೇಮಕ ಗೊಂದಲಕ್ಕೆ ತೆರೆ ಬಿದ್ದಿದ್ದು, ಗದಗ ಎಸ್‍ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ಎನ್.ಯತೀಶ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನಾಕಾರರನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತೆ: ರಾಕೇಶ್ ಟಿಕಾಯತ್

    ಈ ಹಿಂದೆ ಎಸ್‍ಪಿಯಾಗಿ ನೇಮಕಗೊಂಡಿದ್ದ ಸುಮನ್ ಡಿ.ಪನ್ನೇಕರ್ ಅವರಿಗೆ ಚಾರ್ಜ್ ತೆಗೆದುಕೊಳ್ಳದಂತೆ ಸೂಚನೆ ನೀಡಲಾಗಿತ್ತು. ಆದರೆ ಈಗ ಯತೀಶ್ ಅವರು ಹೊಸದಾಗಿ ಅಧಿಕಾರಕ್ಕೆ ಬಂದಿದ್ದಾರೆ. ಈ ವೇಳೆ ಯತೀಶ್ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ, ರಾಷ್ಟ್ರೀಯ ಏಕತಾ ದಿನ ಹಿನ್ನೆಲೆ ಪೊಲೀಸ್ ಅಧಿಕಾರಿಗಳಿಗೆ, ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ತಿಂಗಳ 20 ರಂದು ನೇಮಕವಾಗಿದ್ದ ಸುಮನ್ ಡಿ ಪನ್ನೇಕರ್ ಉತ್ತರಕನ್ನಡ ಎಸ್‍ಪಿಯಾಗಿ ನೇಮಕಗೊಂಡಿದ್ದಾರೆ.

  • ಮೈಕೊರೆಯೋ ಚಳಿಯಲ್ಲಿ ಮಂಜಿನ ನಗರಿ ಮಂದಿಯ ಸೈಕ್ಲಿಂಗ್, ಮ್ಯಾರಥಾನ್

    ಮೈಕೊರೆಯೋ ಚಳಿಯಲ್ಲಿ ಮಂಜಿನ ನಗರಿ ಮಂದಿಯ ಸೈಕ್ಲಿಂಗ್, ಮ್ಯಾರಥಾನ್

    ಮಡಿಕೇರಿ: ಮಂಜಿನ ನಗರಿ ಹಾಗೂ ಪ್ರವಾಸಿಗರ ಸ್ವರ್ಗ ಕೊಡಗು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು. ಮೈಕೊರೆಯುವ ಚಳಿಯಲ್ಲಿ ನೂರಾರು ಮಂದಿ ಬಹಳ ಉತ್ಸಾಹದಿಂದ ಸೈಕ್ಲಿಂಗ್, ಮ್ಯಾರಥಾನ್‍ನಲ್ಲಿ ಭಾಗಿಯಾಗಿ ಖುಷಿಪಟ್ಟರು.

    ಕೊಡಗು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಮ್ಯಾರಥಾನ್ ಮತ್ತು ಸೈಕ್ಲಿಂಗ್ ಆಯೋಜಿಸಲಾಗಿತ್ತು. ನಗರದ ಕಾರ್ಯಪ್ಪ ವೃತ್ತದಿಂದ ಕೋಟೆ ಆವರಣದವರೆಗೆ 5 ಕಿ.ಮೀ ಸೈಕ್ಲಿಂಗ್, ಮ್ಯಾರಥಾನ್‍ಗೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪನ್ನೇಕರ್ ಚಾಲನೆ ನೀಡಿದರು.

    ಮೈಕೊರೆಯುವ ಚಳಿಯ ನಡುವೆಯೂ ಸೈಕ್ಲಿಂಗ್ ಮತ್ತು ಮ್ಯಾರಥಾನ್ ಕಾರ್ಯಕ್ರಮದಲ್ಲಿ ನೂರಾರು ಮಂದಿ ಉತ್ಸಾಹದಿಂದ ಭಾಗವಹಿಸಿದ್ದರು. ಡಿಸಿ, ಎಸ್‌ಪಿ ಇಬ್ಬರೂ ಖುದ್ದು ಸೈಕ್ಲಿಂಗ್ ಮಾಡೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕೊಡಗು ಪ್ರಾಕೃತಿಕ ವಿಕೋಪ ನಡುವೆಯೂ ಕೊಡಗು ಪ್ರವಾಸೋದ್ಯಮ ಸೇಫ್ ಎನ್ನುವ ಸಂದೇಶ ಸಾರಿದರು. ಅಲ್ಲದೆ ಕೊಡಗಿಗೆ ಹೆಚ್ಚು ಹೆಚ್ಚು ಪ್ರವಾಸಿಗರು ಭೇಟಿ ನೀಡುವಂತೆ ಕರೆಯಿತ್ತರು.