Tag: ಸುಮನ್

  • ಮತ್ತೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡ ಸುಮನ್: ತ್ರಿಷ ಚಿತ್ರದಲ್ಲಿ ನಟ

    ಮತ್ತೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡ ಸುಮನ್: ತ್ರಿಷ ಚಿತ್ರದಲ್ಲಿ ನಟ

    ಸ್ನೇಹಾಲಯಂ ಕ್ರಿಯೇಷನ್ಸ್ ಬ್ಯಾನರ್  ಅಡಿಯಲ್ಲಿ ಈಶ್ವರ್ ನಾಗನಾಥ್, ಹನುಮಂತರಾಯ ಮತ್ತು ಎಂ.ಎಸ್. ದಂಡಿನ್ ಸೇರಿ ನಿರ್ಮಿಸುತ್ತಿರುವ ಭಕ್ತಿಪ್ರಧಾನ ಚಲನಚಿತ್ರ ‘ತ್ರಿಷ’ (Trisha). ತೆಲುಗಿನ ಪ್ರೇಮಭಿಕ್ಷ, ಆಗಸ್ಟ್ 6 ರಾತ್ರಿ, ರುದ್ರಾಕ್ಷಪುರಂ ಚಿತ್ರಗಳನ್ನು ನಿರ್ದೇಶಿಸಿರುವ ಆರ್. ಕೆ. ಗಾಂಧಿ (R.K. Gandhi) ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ.

    ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ  ತ್ರಿಷ ಚಿತ್ರದ ಮುಹೂರ್ತ ಇತ್ತೀಚೆಗೆ ಹೈದರಾಬಾದ್ ನ ಮೀಯಾಪುರ್ ನಲ್ಲಿ ನೆರವೇರಿತು. ಭಕ್ತಿಪ್ರಧಾನ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಸಂಭವಾಮಿ  ಯುಗೇ ಯುಗೇ ಎಂಬ ಟ್ಯಾಗ್ ಲೈನ್ ಇದ್ದು, ಮುಳಬಾಗಿಲು ತಾಲ್ಲೂಕಿನ ವಿರೂಪಾಕ್ಷ ದೇವಾಲಯದಲ್ಲಿ ನಡೆದ ಸತ್ಯ ಘಟನೆಗಳನ್ನು ಆಧರಿಸಿ ಚಿತ್ರಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ಶಿವನ ಪರಮಭಕ್ತ ವಿರೂಪಾಕ್ಷನ ಪಾತ್ರವನ್ನು ಪಂಚಭಾಷಾ ತಾರೆ ಸುಮನ್ (Suman) ನಿರ್ವಹಿಸುತ್ತಿದ್ದಾರೆ.

    ಶಿವನೇ ಸರ್ವಸ್ವ ಎಂದು ನಂಬಿರುವ ಶಿವಭಕ್ತನಿಗೆ ಎದುರಾಗುವ ಸಮಸ್ಯೆಗಳು, ಮತ್ತು ಅವುಗಳಿಂದ ನೊಂದ  ಆ ಶಿವಭಕ್ತ ದುಷ್ಕರ್ಮಿಗಳಿಗೆ ಕೊಡುವ ಶಾಪ  ಹೇಗೆಲ್ಲಾ ಪ್ರತಿಫಲಿಸುತ್ತದೆ ಎಂಬ ಕಥಾನಕ  ತ್ರಿಷ ಸಿನಿಮಾದಲ್ಲಿದೆ.

    ಹೈದರಾಬಾದ್ ಸ್ಟುಡಿಯೋದಲ್ಲಿ ನಾಲ್ಕು ದಿನ ಚಿತ್ರೀಕರಿಸಿಕೊಂಡು ಬಂದಿರುವ ತಂಡ ಇದೇ 26ರಿಂದ ಹೊಸಕೋಟೆ ತಾಲೂಕಿನ ಭಕ್ತರಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವಾರ, ಮತ್ತು ಮುಳಬಾಗಿಲು ತಾಲೂಕಿನ ವಿರೂಪಾಕ್ಷ ದೇವಾಲಯದಲ್ಲಿ ಶೂಟಿಂಗ್ ಮುಂದುವರೆಸಲಿದೆ.

     

    ತ್ರಿಷ ಚಿತ್ರಕ್ಕೆ ಎಂ.ಎಲ್.ರಾಜ ಅವರ ಸಾಹಿತ್ಯ, ಸಂಗೀತ, ಮರಳಿಕೃಷ್ಣ ಅವರ ಛಾಯಾಗ್ರಹಣ, ನಾರ್ಸಿಂಗ್ ರಾಥೋಡ್ ಸಂಕಲನ, ಪ್ರಸಾದ್ ಕಲೆ, ಸೂರ್ಯಕಿರಣ್ ನೃತ್ಯ ಸಂಯೋಜನೆಯಿದ್ದು, ಸುರೇಶ್ ಸೂರ್ಯ, ಖುಷಿಗೌಡ, ಯುವೀನ, ಸುಪ್ರಿತಾ ರಾಜ್, ಮಹಾಂತೇಶ, ವಿರೂಪಾಕ್ಷಿ, ಭಕ್ತರಹಳ್ಳಿ ರವಿ, ಸುನಂದಾ ಕಲಬುರ್ಗಿ, ಗಣೇಶ್ ರಾವ್ ಕೇಸರಕರ್  ಉಳಿದ ತಾರಾಗಣದಲ್ಲಿದ್ದಾರೆ.

  • ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್

    ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್

    ನ್ನಡ ಚಿತ್ರರಂಗದಲ್ಲಿ ಸಿಂಹಾದ್ರಿ ಪ್ರೊಡಕ್ಷನ್ಸ್ ಮೂಲಕ ಉತ್ತಮ ಚಿತ್ರಗಳನ್ನು ನೀಡಿರುವ ರಮೇಶ್ ಕಶ್ಯಪ್ ಮತ್ತೊಂದು ಸಿನಿಮಾ ನಿರ್ಮಾಣ ಮಾಡಿದ್ದು, ಈ ಚಿತ್ರಕ್ಕೆ ರಾಕ್ಷಸರು ಎಂದು ಹೆಸರಿಡಲಾಗಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

    ಇದೊಂದು ಸಖತ್ ಕ್ರೈಮ್ ಥ್ರಿಲ್ಲರ್ ಚಿತ್ರ. ಐದು ಜನ ಕ್ರಮಿನಲ್ ಗಳು  ಮಾಡಬಾರದ ದುಷ್ಕೃತ್ಯಗಳನ್ನು ಮಾಡಿ ತಲೆ ಮರಸಿಕೊಂಡಿರುತ್ತಾರೆ. ಇವರನ್ನು ಪೊಲೀಸರು ಹೇಗೆ ಹುಡುಕುತ್ತಾರೆ? ಎಂಬುದೇ ಕಥಾಹಂದರ. ದಂಡುಪಾಳ್ಯದ ಕ್ರಿಮಿನಲ್ ಗಳನ್ನು ಮೀರಿಸುವ ಕ್ರಿಮಿನಲ್ ಗಳು ಈ “ರಾಕ್ಷಸರು”. ರಜತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಅವರ ಚೊಚ್ಚಲ ಚಿತ್ರ. ಇದನ್ನೂ ಓದಿ:ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ-ಅರವಿಂದ ಪಾಲಿಗೆ ಈ ದಿನ ಯಾಕೆ ಸ್ಪೆಷಲ್ ಗೊತ್ತಾ?

    ಚಿತ್ರ ಸಿದ್ದವಾಗಿ ಬಹಳ ದಿನಗಳಾಗಿದೆ. ಆದರೆ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿ, ಕ್ರೈಂ ಹೆಚ್ಚಾಗಿರುವುದರಿಂದ ಬಿಡುಗಡೆಗೆ ಒಪ್ಪಿಗೆ ನೀಡಲು ನಿರಾಕರಿಸಿದರು. ಆ ನಂತರ ನಿರ್ಮಾಪಕರ ಮನವಿ ಮೇರೆಗೆ ಕೆಲವು ಕಟ್ ಗಳ ಜೊತೆಗೆ A ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡಿದೆ.

    ಆಗಸ್ಟ್‌ ಎರಡನೇ ವಾರ ಚಿತ್ರ ಭಾರತದಾದ್ಯಂತ ತೆರೆ ಕಾಣುತ್ತಿದೆ ಎಂದು ತಿಳಿಸಿರುವ ನಿರ್ಮಾಪಕರು, ಈ ಚಿತ್ರವನ್ನು ಆರಕ್ಷಕರಿಗೆ ಅರ್ಪಿಸಲು ನಿರ್ಧರಿಸಿದ್ದಾರೆ. ಎರಡು ಹಾಡುಗಳಿರುವ ಈ‌ ಚಿತ್ರಕ್ಕೆ ಎಮಿಲ್ ಸಂಗೀತ ನೀಡಿದ್ದಾರೆ. ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಮನು ಅವರ ನೃತ್ಯ ನಿರ್ದೇಶನ ಈ  ಚಿತ್ರಕ್ಕಿದೆ.

    ಡೈಲಾಗ್ ಕಿಂಗ್ ಸಾಯಿಕುಮಾರ್, ರಾಜಶೇಖರ್, ನಾಜರ್, ಸುಮನ್, ಕಿರಣ್ ಸುನೀಲ್, ತ್ರಿವೇಣಿ, ಅವಿನಾಶ್ ನೀರಜ್ ಯಾದವ್, ಹರ್ಷಿತ್, ಚೈತ್ರ, ಮಾನಸ, ಆಶಾ, ಮಂಜುಳ, ಸುರೇಖ, ರಚನ, ಕಮಲ, ಚಂದ್ರಕಲಾ ರಾಧ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪ್ಪುಗೆ ಯಾವುದೇ ರೀತಿಯ Attitude ಇರಲಿಲ್ಲ: ಹಿರಿಯ ನಟ ಸುಮನ್

    ಅಪ್ಪುಗೆ ಯಾವುದೇ ರೀತಿಯ Attitude ಇರಲಿಲ್ಲ: ಹಿರಿಯ ನಟ ಸುಮನ್

    ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಯಾವುದೇ ರೀತಿಯ ಆಟಿಟ್ಯೂಡ್ ಇರಲಿಲ್ಲ. ಅವರ ಜೀವನ ಶೈಲಿ ಹಲವರಿಗೆ ಮಾರ್ಗದರ್ಶನ ಎಂದು ತೆಲುಗು ಹಿರಿಯ ನಟ ಸುಮನ್ ಹೇಳಿದರು.

    ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ಸಮಾಧಿಗೆ ಬೇಟಿ ಕೊಟ್ಟ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಅಪ್ಪು ಅಗಲಿಕೆ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಲಾಸ್ ಆಗಿದೆ. ಇಂದು ಪುನೀತ್ ರಾಜ್ ಕುಮಾರ್ ಅವರ ಜನ್ಮದಿನ. ಅವರ ಸಮಾಜಸೇವೆ ಅವರ ಚಿಂತನೆ ತುಂಬಾ ಮೆಚುರ್ಡ್ ಆಗಿದೆ. ನಟನೆ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಭಾವುಕರಾದರು. ಇದನ್ನೂ ಓದಿ: ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

    ಚಿಕ್ಕ ವಯಸ್ಸಿನಲ್ಲೆ ತುಂಬಾ ಮೆಚುರ್ಡ್ ಥಿಂಕಿಂಗ್ ಅವರಲ್ಲಿತ್ತು. ತುಂಬಾ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಿರೋದು ನೋವು ತಂದಿದೆ. ಅಪ್ಪುಗೆ ಯಾವುದೇ ರೀತಿಯ ಆಟ್ಯಿಡ್ಯೂಡ್ ಇರಲಿಲ್ಲ. ಅವರ ಜೀವನ ಶೈಲಿ ಹಲವರಿಗೆ ಮಾರ್ಗದರ್ಶನ ಆಗಿದೆ ಎಂದು ಹೇಳುತ್ತಾ ಇಂದು ಜೇಮ್ಸ್ ರಿಲೀಸ್ ಆಗಿದೆ ಶುಭ ಹಾರೈಸುತ್ತೇವೆ ಅಂದ್ರು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಹುಟ್ಟಹುಬ್ಬ- ಬಿಎಸ್‍ವೈ, ಬೊಮ್ಮಾಯಿ ಹೇಳಿದ್ದೇನು..?

    ಇಂದು ಪುನೀತ್‍ಗೆ 47 ವರ್ಷದ ಹುಟ್ಟುಹಬ್ಬವಾಗಿದ್ದು, ಇಂದೇ ಅಪ್ಪು ನಟನೆಯ ಕೊನೆಯ ಸಿನಿಮಾ ಜೇಮ್ಸ್ ಕೂಡ ರಿಲೀಸ್ ಆಗಿದೆ. ಈ ಮೂಲಕ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ. ಆದರೆ ಈ ನಡುವೆ ಅಪ್ಪು ಇಲ್ಲ ಅನ್ನೋ ನೋವು ಕೂಡ ಅಭಿಮಾನಿಗಳಲ್ಲಿದೆ. ರಾಜ್ಯದ ಥಿಯೇಟರ್ ಗಳ್ಲಿ ಜೇಮ್ಸ್ ಜಾತ್ರೆ ಈಗಾಗಲೇ ಆರಂಭವಾಗಿದ್ದು, ಅಪ್ಪು ಚಿತ್ರ ನೋಡಿ ಕರುನಾಡು ಕಣ್ಣಿರಾಗಿದೆ. ಇದನ್ನೂ ಓದಿ: ಡಾ.ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ – ಸಮಾಧಿ ಬಳಿ ಕೇಕ್ ಕತ್ತರಿಸಿದ ದೊಡ್ಮನೆ ಕುಟುಂಬ

  • ನಮ್ಮಣ್ಣ ಒಬ್ಬ ಕ್ರೂರಿ ಮನುಷ್ಯ -ನವಜೋತ್ ಸಿಂಗ್ ಸಹೋದರಿ ಸುಮನ್

    ನಮ್ಮಣ್ಣ ಒಬ್ಬ ಕ್ರೂರಿ ಮನುಷ್ಯ -ನವಜೋತ್ ಸಿಂಗ್ ಸಹೋದರಿ ಸುಮನ್

    ನವದೆಹಲಿ: ನಮ್ಮಣ್ಣ ಒಬ್ಬ ಕ್ರೂರಿ ಮನುಷ್ಯ ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಅವರ ಸಹೋದರಿ ಸುಮನ್  ವಾಗ್ದಾಳಿ  ಮಾಡಿದ್ದಾರೆ.

    ಅನಿವಾಸಿ ಭಾರತೀಯರಾದ ಸದ್ಯ ಅಮೆರಿಕಾದಲ್ಲಿ ನೆಲೆಸಿರುವ ನವಜೋತ್ ಸಹೋದರಿ ಸುಮನ್ ತೋರ್, ನವಜೋತ್ ಸಿಂಗ್ ಅವರ ಕುರಿತಾಗಿ ಸಾಕಷ್ಟು ವಿಚಾಗರಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ನವಜೋತ್ ನಮ್ಮ ಹಿರಿಯ ಸಹೋದರಿ ಅಪಘಾತದಲ್ಲಿ ದುರ್ಮರಣ ಕಂಡಾಗ ನೋಡಲಿಕ್ಕೂ ಬರಲಿಲ್ಲ. ಜೊತೆಗೆ ಕನಿಷ್ಠ ಪಕ್ಷ ಒಂದು ಶ್ರದ್ಧಾಂಜಲಿ ಸಲ್ಲಿಸಲೂ ಆಗಮಿಸಿರಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

    ನಮ್ಮ ತಂದೆ ಭಗವಂತ ಸಿಂಗ್ ಸಿಧು ಸಾವನ್ನಪ್ಪುತ್ತಿದ್ದಂತೆ ನವಜೋತ್ ನನ್ನ ಹಾಗೂ ನಮ್ಮ ತಾಯಿಯನ್ನು ಮನೆಯಿಂದ ಹೊರ ಹಾಕಿದರು. ಆ ಕ್ಷಣದಲ್ಲಿ ನಾವು ಬಸ್‍ಸ್ಟ್ಯಾಂಡ್‍ವರೆಗೆ ಬರಿಗಾಲಿನಲ್ಲೇ ನಡೆದುಕೊಂಡು ಹೋಗಿದ್ದೆವು. ಅಷ್ಟರ ಮಟ್ಟಿಗೆ ಅವರು ಕ್ರೂರತೆಯಿಂದ ನಮ್ಮೊಂದಿಗೆ ವರ್ತಿಸಿದ್ದಾರೆ ಎಂದು ಸುಮನ್ ಆರೋಪಿಸಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ

    ನಾನು ಜನವರಿ 20 ರಂದು ಅವರ ಭೇಟಿಗೆ ಹೋಗಿದ್ದೆ. ಮನೆ ಬಾಗಿಲು ತೆರೆಯದೇ ನನ್ನನ್ನು ಅವಮಾನಿಸಿ ಕಳಿಸಿದ್ದರು ಎಂದು ಸಹೋದರನ ಕುರಿತಾಗಿ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಗುವಾದ ಬಳಿಕ ಡಿಪ್ರೆಷನ್‌ಗೆ ಒಳಗಾಗಿದ್ರಾ ಬಿಎಸ್‌ವೈ ಮೊಮ್ಮಗಳು?

  • ಜನ್‍ಧನ್ ಪ್ರಥಮ ಪ್ರತಿ ಸಿದ್ಧ

    ಜನ್‍ಧನ್ ಪ್ರಥಮ ಪ್ರತಿ ಸಿದ್ಧ

    ಬೆಂಗಳೂರು: ಶ್ರೀ ಸಿದ್ಧವಿನಾಯಕ ಫಿಲಂಸ್ ಲಾಂಛನದಲ್ಲಿ ಟಿ.ನಾಗಚಂದ್ರ, ಸ್ನೇಹಿತರೊಂದಿಗೆ ಕೂಡಿ ನಿರ್ಮಿಸುತ್ತಿರುವ ‘ಜನ್‍ಧನ್’ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ.

    ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರ ಬೆಂಗಳೂರಿನಿಂದ-ಶಿರಾವರೆಗೂ ನಡೆಯುವ ಒಂದು ದಿನದ ಕಥೆಯಾಗಿದ್ದು, ಎನ್‍ಹೆಚ್4 ನಲ್ಲಿ ಬೆಳಗ್ಗೆ 4 ಗಂಟೆಯಿಂದ ಪ್ರಾರಂಭವಾಗಿ ಸಂಜೆ ಕೊನೆಗೊಳ್ಳುತ್ತದೆ. ಸಾಮಾನ್ಯ ಜನರ ಭಾವನೆಗಳನ್ನು ಬಿತ್ತರಿಸುವ ಕಥೆ ಇದು.

    ಈ ಚಿತ್ರವನ್ನು ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಟಿ.ನಾಗಚಂದ್ರ, ಛಾಯಾಗ್ರಹಣ – ಉಮೇಶ್ ಕಂಪ್ಲಾಪುರ್, ಸಂಗೀತ – ಟಾಪ್ ಸ್ಟಾರ್ ರೇಣು, ಹಿನ್ನೆಲೆ ಸಂಗೀತ – ಗೌತಮ್ ಶ್ರೀವತ್ಸ, ನಿರ್ವಹಣೆ- ರಾಜರಾವ್, ತಾರಾಗಣದಲ್ಲಿ – ಸುನೀಲ್ ಶಶಿ, ರಚನಾ, ಮಾಸ್ಟರ್ ಲಕ್ಷಣ್, ಅರುಣ್, ಟಾಪ್ ಸ್ಟಾರ್ ರೇಣು, ಜಯಲಕ್ಷ್ಮಿ, ಸುನಿಲ್ ವಿನಾಯಕ, ಸುಮನ್, ತೇಜೇಶ್ವರ್ ಮುಂತಾದವರಿದ್ದಾರೆ.