Tag: ಸುಮನಾ

  • ಬೆಂಗ್ಳೂರಲ್ಲಿ ಸರ್ಕಾರಿ ಶಾಲೆಗಳೀಗ ಕಲರ್‌ಫುಲ್‌ – ಗೋಡೆಗಳಲ್ಲಿ ರಾರಾಜಿಸಿದ ಏರ್ ಇಂಡಿಯಾ

    ಬೆಂಗ್ಳೂರಲ್ಲಿ ಸರ್ಕಾರಿ ಶಾಲೆಗಳೀಗ ಕಲರ್‌ಫುಲ್‌ – ಗೋಡೆಗಳಲ್ಲಿ ರಾರಾಜಿಸಿದ ಏರ್ ಇಂಡಿಯಾ

    ಬೆಂಗಳೂರು: ಸುಂದರ ಮನಸ್ಸಿನ ನಾಗರೀಕರು. ಈ ಹೆಸರಿನಲ್ಲಿ ಒಂದು ತಂಡ, ಪಾಳುಬಿದ್ದ ಸರ್ಕಾರಿ ಶಾಲೆಗಳಿಗೆ ಪುನಶ್ಚೇತನ ನೀಡುತ್ತಿದೆ.

    ಗೋಡೆಗಳಲ್ಲಿ ಕರಾವಳಿ ಗಂಡುಕಲೆ ಯಕ್ಷಗಾನ, ಕೋಳಿ, ವಿಮಾನದ ಅದ್ಭುತವಾದ ಕಲಾಕೃತಿಗಳು. ಇದು ಕಂಡು ಬಂದಿದ್ದು ಹೆಬ್ಬಾಳ ಬಳಿಯ ಚೋಳನಾಯಕನ ಹಳ್ಳಿಯ ಸರ್ಕಾರಿ ಶಾಲೆಯ ಗೋಡೆ ಹಾಗೂ ಕಾಪೌಂಡ್‍ಗಳಲ್ಲಿ. ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವರೇ ಹೆಚ್ಚು. ಆದರೆ ನಗರದಲ್ಲಿ ಪಾಳು ಬಿದ್ದ ಸರ್ಕಾರಿ ಶಾಲೆಗಳಿಗೆ ರಂಗು ಬಳಿದು ಮಕ್ಕಳು ಶಾಲೆಗಳತ್ತ ಓಡೋಡಿ ಬರುವಂತೆ ಮಾಡ್ತಿರುವುದು ಸುಮನಾ ತಂಡ.

    ಪಾಳುಬಿದ್ದ 20ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಈ ಸುಮನಾ ತಂಡ ಚಿತ್ತಾರ ಮೂಡಿಸಿ ಮಕ್ಕಳು ಹಾಗೂ ಪೋಷಕರನ್ನ ಸರ್ಕಾರಿ ಶಾಲೆಗಳತ್ತ ಆಕರ್ಷಿಸುವಂತೆ ಮಾಡಿದೆ. ಈ ಶಾಲೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿದ್ರು.. ಸುಮನಾ ತಂಡದ ಅತ್ಯದ್ಭುತ ಕೆಲಸವನ್ನು ಶ್ಲಾಘಿಸಿದ್ರು. ಇದನ್ನೂ ಓದಿ: ಸ್ವಂತ ಕಂಪನಿ ತೆರೆದ ಮಹಿಳೆಯರು: ಬಿಲಿಯನೇರ್ ಪಟ್ಟಿಯಲ್ಲಿ ನೈಕಾ ಸಂಸ್ಥಾಪಕಿ

    ಕಳೆದ 8 ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡ್ತಿರುವ ಸುಂದರ ಮನಸ್ಸಿನ ನಾಗರೀಕರ ತಂಡ.. ಅಪಾಯದ ಅಂಚಿನಲ್ಲಿರುವ ಸರ್ಕಾರಿ ಶಾಲೆಗಳ ಪುನರುಜೀವನ ಕಾರ್ಯದಲ್ಲಿ ತೊಡಗಿದೆ. ಅಲ್ಲದೇ ಈ ತಂಡಕ್ಕೆ ಸ್ವಯಂಪ್ರೇರಿತರಾಗಿಯೂ ಆಗಮಿಸಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದಾರೆ.

    ಸರ್ಕಾರಿ ಶಾಲೆಗಳತ್ತ ಮಕ್ಕಳನ್ನ ಸೆಳೆಯಲು ಈ ಸುಂದರ ಮನಸ್ಸಿನ ನಾಗರಿಕರ ವೇದಿಕೆ ಮಾಡುತ್ತಿರುವ ಕೆಲಸ ಸಕಾರವಾಗಲಿ ಅನ್ನೋದೇ ಪಬ್ಲಿಕ್ ಆಶಯವಾಗಿದೆ. ಇದನ್ನೂ ಓದಿ: ರಾಜ್ಯದ ಕೋಮು ಸಂಘರ್ಷ ದೇಶದ ಐಟಿ ಹಬ್‍ಗೆ ಮಾರಕ ಬೊಮ್ಮಾಯಿ ಬಗೆಹರಿಸುವ ಭರವಸೆ ನೀಡಿದ್ದಾರೆ: ಕಿರಣ್ ಮಜುಂದಾರ್