Tag: ಸುಮಂತ್ ಕ್ರಾಂತಿ

  • ನಟ ವಸಿಷ್ಠ ಸಿಂಹಗೆ ನಿರ್ದೇಶಕನಿಂದ ನಂಬಿಕೆ ದ್ರೋಹ

    ನಟ ವಸಿಷ್ಠ ಸಿಂಹಗೆ ನಿರ್ದೇಶಕನಿಂದ ನಂಬಿಕೆ ದ್ರೋಹ

    ಮಗೆ ನಂಬಿಕೆ ದ್ರೋಹವಾಗಿದೆ. ಇನ್ಮುಂದೆ ಸಿನಿಮಾ ಒಪ್ಪಿಕೊಳ್ಳುವಾಗ ಅಗ್ರಿಮೆಂಟ್ ಕ್ಲಿಯರ್ ಆಗಿ ಮಾಡಿಕೊಳ್ಳಬೇಕು ಅನಿಸಿದೆ ಎಂದಿದ್ದಾರೆ ನಟ ವಸಿಷ್ಠ ಸಿಂಹ (Vasishtha Simha). ತಾವು ಇಷ್ಟಪಟ್ಟು ಮಾಡಿದ್ದ ಕಾಲಚಕ್ರ (Kalachakra) ಸಿನಿಮಾವನ್ನು ನಿರ್ದೇಶಕ ಸುಮಂತ್ ಕ್ರಾಂತಿ (Sumanth Kranti) ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದಾರಂತೆ. ಹೀಗಾಗಿ ಸಿಂಹಗೆ ಸಹಜವಾಗಿ ಬೇಸರವಾಗಿದೆ.

    ಒಂದು ಸಿನಿಮಾ ಮಾಡುವಾಗ ಎಲ್ಲರೂ ಕಷ್ಟ ಪಡುತ್ತಾರೆ. ಅದನ್ನು ತೆರೆಯ ಮೇಲೆ ನೋಡಲು ಇಷ್ಟ ಪಡುತ್ತಾರೆ. ಆದರೆ, ಕಾಲಚಕ್ರ ಸಿನಿಮಾ ಹಾಗಾಗಲಿಲ್ಲ. ಯಾರದೋ ಮೇಲಿನ ಕೋಪಕ್ಕೆ ನಿರ್ದೇಶಕರು ಎಲ್ಲರ ಕನಸು ನಾಶ ಮಾಡೋದು ಸರಿ ಅಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

     

    ಕಾಲಚಕ್ರ ಸಿನಿಮಾದ ಬಗ್ಗೆ ಸಿಂಹಗೆ ಅತೀವ ನಿರೀಕ್ಷತೆ ಇತ್ತು. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಂದು ಹಲವಾರು ಬಾರಿ ನಿರ್ದೇಶಕರೇ ಹೇಳಿಕೊಂಡಿದ್ದಾರೆ. ಆದರೆ, ಯೂಟ್ಯೂಬ್ ನಲ್ಲಿ ಹಾಕಿದ್ದು ಯಾಕೆ ಎನ್ನುವುದನ್ನು ಸಿಂಹ ಸ್ಪಷ್ಟ ಪಡಿಸಲಿಲ್ಲ. ಯಾರದೋ ಮೇಲಿನ ಕೋಪಕ್ಕೆ ಎಂದು ಹೇಳುವ ಮೂಲಕ ಚಿತ್ರತಂಡದಲ್ಲಿ ಯಾವುದೂ ಸರಿ ಇರಲಿಲ್ಲ ಎನ್ನುವ ಕುರುಹು ಬಿಟ್ಟುಕೊಟ್ಟಿದ್ದಾರೆ.

  • ಡಾರ್ಲಿಂಗ್ ಕೃಷ್ಣ ಅಭಿನಯದ ‘ದಿಲ್ ಪಸಂದ್’ ಟೀಸರ್ ಬಿಡುಗಡೆ

    ಡಾರ್ಲಿಂಗ್ ಕೃಷ್ಣ ಅಭಿನಯದ ‘ದಿಲ್ ಪಸಂದ್’ ಟೀಸರ್ ಬಿಡುಗಡೆ

    ಡಾರ್ಲಿಂಗ್ ಕೃಷ್ಣ (Darling Krishna) ಅವರು ನಾಯಕನಾಗಿ ನಟಿಸಿರುವ “ದಿಲ್ ಪಸಂದ್” (Dil Pasand) ಚಿತ್ರದ ಟೀಸರ್ (Teaser) ಇತ್ತೀಚೆಗೆ ಬಿಡುಗಡೆಯಾಯಿತು.‌‌ ಟೀಸರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ. ಕಳೆದ ಹನ್ನೊಂದು ತಿಂಗಳ ಹಿಂದೆ ನಮ್ಮ ಚಿತ್ರ ಆರಂಭವಾಗಿತ್ತು. ಇದೇ ನವೆಂಬರ್ 11 ರಂದು ಚಿತ್ರ ತೆರೆಗೆ ಬರುತ್ತಿದೆ. ಕುಟುಂಬ ಸಮೇತ ನೋಡಬಹುದಾದ ನಮ್ಮ ಚಿತ್ರ “ದಿಲ್ ಪಸಂದ್” ನಷ್ಟೇ ಸಿಹಿಯಾಗಿದೆ . ನನ್ನ ಕಥೆ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ಸುಮಂತ್ ಕ್ರಾಂತಿ ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಶಿವತೇಜಸ್. ‌

    ಐಶು ನನ್ನ ಪಾತ್ರದ ಹೆಸರು. ಈ ಚಿತ್ರದಲ್ಲಿ ತುಂಬಾ ಎಮೋಷನ್ ಹುಡುಗಿ ನಾನು. ಲವ್ ಟ್ರ್ಯಾಕ್ ಇರುವ ಚಿತ್ರಗಳಲ್ಲಿ ನಾನು ಅಭಿನಯಿಸಿದ್ದೇನೆ. ಆದರೆ ಕಂಪ್ಲೀಟ್ ಲವ್ ಸ್ಟೋರಿಯಳ್ಳ ಚಿತ್ರದಲ್ಲಿ ಅಭಿನಯಿಸಿರಲಿಲ್ಲ. ನಾನು ನಟಿಸಿರುವ ಪೂರ್ಣ ಪ್ರೇಮಕಥೆಯುಳ್ಳ ಮೊದಲ ಚಿತ್ರ  “ದಿಲ್ ಪಸಂದ್” ಎಂದು ನಿಶ್ವಿಕಾ ನಾಯ್ಡು ತಿಳಿಸಿದರು. ಈ ಚಿತ್ರದಲ್ಲಿ ಮುಗ್ದ ಹುಡುಗಿಯ ಪಾತ್ರ ನನ್ನದು. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ “ದಿಲ್ ಪಸಂದ್”. ಈ ಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ಖುಷಿಯಾಗಿದೆ ಎಂದರು ನಟಿ ಮೇಘಾ ಶೆಟ್ಟಿ. ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆ ಲಿಪ್‌ಲಾಕ್ ಕಾರಣಕ್ಕಾಗಿ ಟ್ರೋಲ್ ಆದ ಬಗ್ಗೆ ರಶ್ಮಿಕಾ ಮಾತು

    ನಾನು ಕಥೆ ಕೇಳಬೇಕಾದರೆ ಸಾಕಷ್ಟು  ಖುಷಿ ಪಟ್ಟಿದೆ.  ಸಾಕಷ್ಟು ಎಂಜಾಯ್ ಮಾಡಿಕೊಂಡು ಡಬ್ಬಿಂಗ್ ಮಾಡಿದ್ದೇನೆ. ಉತ್ತಮ ಮನೋರಂಜನೆಯಿರುವ “ದಿಲ್ ಪಸಂದ್” ಎಲ್ಲರಿಗೂ ಪ್ರಿಯವಾಗಲಿದೆ.  ಕಾಮಿಡಿ ಜೊತೆಗೆ ತಂದೆ-ಮಗನ ಭಾವನಾತ್ಮಕ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು ನಾಯಕ ಡಾರ್ಲಿಂಗ್ ಕೃಷ್ಣ.

    ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ ಸಿನಿಮಾ ಮಾಡಿಕೊಟ್ಟಿದ್ದಾರೆ. ಕೆಲವರು ಕಥೆ ಹೇಳುವುದೆ ಬೇರೆ. ಚಿತ್ರ ಮಾಡುವುದೇ ಬೇರೆ. ನಾನು ಇತ್ತೀಚೆಗೆ ಚಿತ್ರ ನೋಡಿದೆ.  ಶಿವತೇಜಸ್ (Shivatejas) ಹೇಳಿದ ರೀತಿಯಲ್ಲೇ ಚಿತ್ರ ಮಾಡಿದ್ದಾರೆ. ನಮ್ಮ”ದಿಲ್ ಪಸಂದ್” ಚಿತ್ರ ಚೆನ್ನಾಗಿದೆ. ನವೆಂಬರ್ 11 ತೆರೆಗೆ ಬರುತ್ತಿದೆ. ನೋಡಿ ಪ್ರೋತ್ಸಾಹ ನೀಡಿ ಎನ್ನುತ್ತಾರೆ ನಿರ್ಮಾಪಕ ಸುಮಂತ್ ಕ್ರಾಂತಿ. (Sumanth Kranti) ಕಾರ್ಯಕಾರಿ ನಿರ್ಮಾಪಕ ರಂಗಸ್ವಾಮಿ ಹಾಗೂ ಸಹ ನಿರ್ದೇಶಕ, ಮಾರ್ಕೆಟಿಂಗ್ ಹೆಡ್ ಹರೀಶ್ ದೇವಿತ್ “ದಿಲ್ ಪಸಂದ್” ಕುರಿತು ಮಾತನಾಡಿದರು.

    Live Tv
    [brid partner=56869869 player=32851 video=960834 autoplay=true]

  • ‘ಲಕ್ಕಿಮ್ಯಾನ್’ ರಿಲೀಸ್ ಬೆನ್ನಲ್ಲೇ ಡಾರ್ಲಿಂಗ್ ಕೃಷ್ಣ ನಟನೆಯ ಮತ್ತೊಂದು ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ

    ‘ಲಕ್ಕಿಮ್ಯಾನ್’ ರಿಲೀಸ್ ಬೆನ್ನಲ್ಲೇ ಡಾರ್ಲಿಂಗ್ ಕೃಷ್ಣ ನಟನೆಯ ಮತ್ತೊಂದು ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ

    ಡಾರ್ಲಿಂಗ್ ಕೃಷ್ಣ (Darling Krishna) ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ ” ದಿಲ್ ಪಸಂದ್” (Dil Pasand)  ಚಿತ್ರ ನವೆಂಬರ್ 11ರಂದು ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇತ್ತೀಚೆಗೆ ಘೋಷಣೆ ಮಾಡಿದೆ. ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ (Sumanth Kranti) ಅವರು ನಿರ್ಮಿಸಿರುವ ಈ ಚಿತ್ರವನ್ನು ಶಿವತೇಜಸ್ (Shivatejas) ನಿರ್ದೇಶಿಸಿದ್ದಾರೆ. ಪ್ರೇಮಕಥೆಯೊಂದಿಗೆ, ಕೌಟುಂಬಿಕ ಕಥಾಹಂದರವನ್ನು ಈ ಚಿತ್ರ  ಹೊಂದಿದೆ. ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ ನಡೆದಿದೆ.

    ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿದ್ದು, ಮಾಸಾಂತ್ಯಕ್ಕೆ ಟೀಸರ್ ಬಿಡುಗಡೆಯಾಗುವ ಸಾಧ್ಯತೆಯಿದೆ. ನಾಲ್ಕು ಸುಮಧುರ ಹಾಡುಗಳಿಗೆ ಮ್ಯೂಸಿಕ್ ‌ಮಾಂತ್ರಿಕ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್

    ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ನಿಶ್ವಿಕಾ‌ ನಾಯ್ಡು (Nishvika Naidu) ಅಭಿನಯಿಸಿದ್ದಾರೆ. ಮೇಘ ಶೆಟ್ಟಿ, ಸಾಧು ಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಅರುಣಾ ಬಾಲರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]