Tag: ಸುಭಾಷ್ ರಾಥೋಡ್

  • ಚಿಂಚೋಳಿ ಉಪಚುನಾವಣೆ ಕುರುಡು ಕಾಂಚಾಣ – ವೋಟಿಗಾಗಿ ನೋಟು ಆಡಿಯೋ ವೈರಲ್!

    ಚಿಂಚೋಳಿ ಉಪಚುನಾವಣೆ ಕುರುಡು ಕಾಂಚಾಣ – ವೋಟಿಗಾಗಿ ನೋಟು ಆಡಿಯೋ ವೈರಲ್!

    ಕಲಬುರಗಿ: ಭಾನುವಾರ ನಡೆಯಲಿರುವ ಚಿಂಚೋಳಿ ಉಪಚುನಾವಣೆಯಲ್ಲಿ ಕುರುಡು ಕಾಂಚಾಣ ಕುಣಿಯುತ್ತಲಿದೆ. ಎರಡೂ ಪಕ್ಷಗಳು ತೆರೆಮರೆಯಲ್ಲಿ ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎನ್ನಲಾದ ಆಡಿಯೋ ಒಂದು ಬಿಡುಗಡೆಯಾಗಿದ್ದು, ಸ್ಥಳೀಯ ಮಟ್ಟದಲ್ಲಿ ಸಖತ್ ವೈರಲ್ ಆಗಿದೆ.

    ಚಿಂಚೋಳಿ ಬಿಜೆಪಿ ಮುಖಂಡ ಮತ್ತು ಗ್ರಾಮ ಪಂಚಾಯತಿಯ ಅಧ್ಯಕ್ಷರೊಬ್ಬರು ನಡೆಸಿದ್ದಾರೆ ಎನ್ನಲಾಗುವ ಆಡಿಯೋ ಸಂಭಾಷಣೆಯಲ್ಲಿ ಈ ಬಾರಿಯ ಉಪಚುನಾವಣೆಯಲ್ಲಿ ಎರಡು ಪಕ್ಷಗಳು ಹಣದ ಹೊಳೆಯನ್ನೇ ಹರಿಸುತ್ತಿವೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಯಾರು ಯಾರಿಗೇ ಹಣ ಕೊಟ್ಟಿದ್ದೇವೆ. ಎಷ್ಟು ಎಷ್ಟು ಹಣ ಕೊಡಲಾಗುತ್ತಿದೆ?. ಯಾರಿಗೆ ಹಣ ನೀಡಲಾಗುತ್ತಿಲ್ಲ ಎನ್ನುವುದರ ಬಗ್ಗೆ ಸ್ವತಃ ಸ್ಥಳೀಯ ಬಿಜೆಪಿ ಮುಖಂಡ ಆಡಿಯೋ ನಲ್ಲಿ ಬಿಚ್ಚಿಟ್ಟಿದ್ದಾರೆ. ಈ ಆಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಚರ್ಚೆಗೆ ಒಳಪಟ್ಟಿದೆ. ಆದ್ರೆ ಈ ಕುರಿತು ಯಾವುದೇ ನಾಯಕರು ಪ್ರತಿಕ್ರಿಯೆಯನ್ನ ನೀಡಿಲ್ಲ.

    ಈ ಉಪಚುನಾವಣೆ ಎರಡು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್ ನಿಂದ ಸುಭಾಷ್ ರಾಥೋಡ್ ಸ್ಪರ್ಧೆ ಮಾಡಿದರೆ, ಬಿಜೆಪಿಯಿಂದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧಾವ್ ಸ್ಪರ್ಧೆಯಲ್ಲಿದ್ದಾರೆ.

  • ಮಾನವೀಯತೆ ಮೆರೆದ್ರು ಸುಭಾಷ್ ರಾಥೋಡ್

    ಮಾನವೀಯತೆ ಮೆರೆದ್ರು ಸುಭಾಷ್ ರಾಥೋಡ್

    ಯಾದಗಿರಿ: ಚಿಂಚೋಳಿ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಮಾನವೀಯತೆ ಮೆರೆದಿದ್ದಾರೆ.

    ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಬೈಕ್ ಸವಾರನ ಜೀವ ಉಳಿಸುವ ಮೂಲಕ ಸುಭಾಷ್ ಮಾನವೀಯತೆಯ ಕೆಲಸವನ್ನು ಮಾಡಿದ್ದಾರೆ.

    ಸುಭಾಷ್ ಅವರು ಕನಕಪುರದಿಂದ ತಮ್ಮ ಚುನಾವಣಾ ಪ್ರಚಾರ ಸಭೆಯನ್ನು ಮುಗಿಸಿ ಚಿಂಚೋಳಿ ಕಡೆಗೆ ಬರುತ್ತಿದ್ದರು. ಈ ವೇಳೆ ಬೈಕ್ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡು ಬಿದ್ದಿದ್ದರು. ಇದನ್ನು ಗಮನಿಸಿದ ಸುಭಾಷ್ ರಾಥೋಡ್ ಹಾಗೂ ಬೆಂಬಲಿಗರು ತಮ್ಮ ಪ್ರಚಾರ ಗಾಡಿಯಲ್ಲಿ ಚಿಂಚೋಳಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಬೈಕ್ ಸವಾರನಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.

    ಸದ್ಯ ಬೈಕ್ ಸವಾರ ಮಲ್ಲಿಕಾರ್ಜುನ್ ಹೊಸಮನಿ ಪ್ರಾಣಾಪಾಯದಿಂದ ಪಾರಾಗಿದ್ದು, ಸುಭಾಷ್ ಅವರ ಕೆಲಸವನ್ನು ಜನ ಶ್ಲಾಘಿಸಿದ್ದಾರೆ.

     

  • ಈ ಚುನಾವಣೆ ನನ್ನ ಜೀವನದ ಅತಿ ಮುಖ್ಯ ಘಟ್ಟ – ಸುಭಾಷ್ ರಾಥೋಡ್

    ಈ ಚುನಾವಣೆ ನನ್ನ ಜೀವನದ ಅತಿ ಮುಖ್ಯ ಘಟ್ಟ – ಸುಭಾಷ್ ರಾಥೋಡ್

    ಕಲಬುರಗಿ: ಈ ಚುನಾವಣೆ ನನ್ನ ಜೀವನದ ಅತಿ ಮುಖ್ಯ ಘಟ್ಟ ಎಂದು ಚಿಂಚೋಳಿ ಉಪಚುನಾವಣೆಯ ಮೈತ್ರಿ ಅಭ್ಯರ್ಥಿ ಸುಭಾಷ್ ರಾಥೋಡ್ ಅವರು ಹೇಳಿದ್ದಾರೆ.

    ಚಿಂಚೋಳಿಯ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಅವರು, ಉಮೇಶ್ ಜಾಧವ್ ಅವರಿಗೆ ಗರ್ವ ಹೆಚ್ಚಾಗಿದೆ ಎಂದು ಕಿಡಿಕಾರಿದರು.

    ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್‍ಗೆ ಕ್ಷೇತ್ರದ ಯಾವ ಪ್ರದೇಶದ ಬಗ್ಗೆಯೂ ಗೊತ್ತಿಲ್ಲ. ಕೇವಲ ಅವನಿಗಷ್ಟೇ ಅಲ್ಲ ಅವರಪ್ಪ ಉಮೇಶ್ ಜಾಧವ್‍ಗೂ ಕ್ಷೇತ್ರದ ಬಗ್ಗೆ ಅರಿವಿಲ್ಲ. ಕೊಂಚಾವರಂನಲ್ಲಿ ಇಸ್ಪಿಟ್ ಆಡಿಸಿದ್ದು ಬಿಟ್ಟರೇ ಅವರು ಯಾವ ಅಭಿವೃದ್ಧಿಯನ್ನು ಮಾಡಿಲ್ಲ. ಉಮೇಶ್ ಜಾಧವ್‍ಗೆ ಗರ್ವ ಎಷ್ಟು ಹೆಚ್ಚಾಗಿದೆ ಅಂದರೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೇ ಸ್ಪರ್ಧಿಸುವ ಭಸ್ಮಾಸುರನಾಗಿದ್ದಾನೆ. ಈ ಭಸ್ಮಾಸುರನಿಗೂ ಒಂದು ದಿನ ಅಂತ್ಯವಿದೆ  ಎಂದು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.

    ಈ ಚುನಾವಣೆಯಲ್ಲಿ ಸುಭಾಷ್ ರಾಥೋಡ್ ಮತ್ತು ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಮಧ್ಯೆ ನಡೆಯುತ್ತಿದೆ. ಆದರೆ ಬಿಜೆಪಿಯವರು ಜಾಧವ್ ವರ್ಸಸ್ ಖರ್ಗೆ ಚುನಾವಣೆ ಎಂದು ಹೇಳುತ್ತಿದ್ದಾರೆ. ಚಿಂಚೋಳಿಯ ಹಲವು ಹೋರಾಟಗಳಲ್ಲಿ ಭಾಗವಹಿಸಿ ಕ್ಷೇತ್ರದ ಬಗ್ಗೆ ತಿಳಿದುಕೊಂಡಿದ್ದೇನೆ. 2008ರಲ್ಲಿ ಮೀಸಲು ಕ್ಷೇತ್ರವಾದ ಬಳಿಕವೂ ಸ್ಪರ್ಧೆಗೆ ಇಚ್ಚಿಸದೇ ಹಲವಾರು ಜನಪರ ಕೆಲಸಗಳನ್ನು ಮಾಡಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅವಕಾಶ ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

  • ಬಿಎಸ್‍ವೈ ಮುಂದೆ ಎಂಪಿ ಚುನಾವಣೆ ಟಿಕೆಟ್‍ಗಾಗಿ ಬಿಜೆಪಿ ನಾಯಕರ ವಾಗ್ದಾಳಿ!

    ಬಿಎಸ್‍ವೈ ಮುಂದೆ ಎಂಪಿ ಚುನಾವಣೆ ಟಿಕೆಟ್‍ಗಾಗಿ ಬಿಜೆಪಿ ನಾಯಕರ ವಾಗ್ದಾಳಿ!

    ಕಲಬುರಗಿ: ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ಕಲಬುರಗಿ ಕ್ಷೇತ್ರದ ಬಿಜೆಪಿ ಟಿಕೆಟ್‍ಗಾಗಿ ಭಾರೀ ಪೈಪೋಟಿ ನಡೆದಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂದೆಯೇ ನಾಯಕರಿಬ್ಬರು ಪರಸ್ಪರ ವಾಗ್ದಾಳಿ ನಡೆಸಿದ್ದಾರೆ.

    ಇಂದು ನಗರದ ಐವಾನ್ ಎ ಶಾಹಿ ಅತಿಥಿ ಗೃಹದಲ್ಲಿ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಿದ್ದರು. ಆಗ ಕಲಬುರಗಿ ಕ್ಷೇತ್ರದ ಟಿಕೆಟ್ ಅನ್ನು ಬಂಜಾರಾ ಸಮುದಾಯದ ಪರವಾಗಿ ಸುಭಾಷ್ ರಾಥೋಡ್ ಅವರಿಗೆ ನೀಡಬೇಕು ಎಂದು ಸುಭಾಷ್ ಬೆಂಬಲಿಗರು ಮನವಿ ಸಲ್ಲಿಸಿದರು.

    ಸಭೆಯಲ್ಲಿ ಕುಳಿತ್ತಿದ್ದ ಟಿಕೆಟ್ ಆಕಾಂಕ್ಷಿ ಹಾಗೂ ಮುಖಂಡ ಬಾಬುರಾವ್ ಚವ್ಹಾಣ್, ವೈಯಕ್ತಿವಾಗಿ ಮನವಿ ಸಲ್ಲಿಸಿ, ಬಂಜಾರಾ ಸಮುದಾಯದಿಂದ ಟಿಕೆಟ್ ನೀಡಿ ಅಂತಾ ನೀವು ಕೇಳುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು. ಜೊತೆಗೆ ಸಮೀಕ್ಷೆ ನಡೆಸಿ ಟಿಕೆಟ್ ನೀಡುವಂತೆ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಿದರು.

    ನಾಯಕರಿಬ್ಬರ ವಾಗ್ದಾಳಿಗೆ ಬೇಸತ್ತ ಬಿ.ಎಸ್.ಯಡಿಯೂರಪ್ಪ, ಸಮೀಕ್ಷೆ ನಡೆಸಿ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ. ರಾಜ್ಯಾಧ್ಯಕ್ಷರ ನಿರ್ಗಮನದ ನಂತರವೂ ಕೆಲ ಹೊತ್ತು ಸುಭಾಷ್ ರಾಥೋಡ್ ಹಾಗೂ ಬಾಬುರಾವ್ ಚವ್ಹಾಣ್ ನಡುವೆ ಮಾತಿನ ಚಕಮಕಿ ನಡೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv