Tag: ಸುಬ್ರಮಣ್ಯಪುರ ಕೆರೆ

  • ರಾತ್ರೋರಾತ್ರಿ ಸುಬ್ರಹ್ಮಣ್ಯಪುರ ಕೆರೆ ಎಡದಂಡೆ ಒಡೆದ ಕಿಡಿಗೇಡಿಗಳು- ಕೆರೆ ಒತ್ತುವರಿ ಯತ್ನ ಆರೋಪ

    ರಾತ್ರೋರಾತ್ರಿ ಸುಬ್ರಹ್ಮಣ್ಯಪುರ ಕೆರೆ ಎಡದಂಡೆ ಒಡೆದ ಕಿಡಿಗೇಡಿಗಳು- ಕೆರೆ ಒತ್ತುವರಿ ಯತ್ನ ಆರೋಪ

    ಬೆಂಗಳೂರು: ಗುರುವಾರ ರಾತ್ರಿ ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಸುಬ್ರಹ್ಮಣ್ಯಪುರ ಕೆರೆಯ ಎಡದಂಡೆಯನ್ನು ಯಾರೋ ಕಿಡಿಗೇಡಿಗಳು ಒಡೆದುಹಾಕಿದ್ದಾರೆ.

    ನೀರು ಖಾಲಿ ಮಾಡಿದ್ರೆ ಕೆರೆ ಒತ್ತುವರಿ ಮಾಡಿಕೊಳ್ಳಬಹುದು ಅಂತ ರಾತ್ರೋರಾತ್ರಿ ಈ ಕೃತ್ಯ ನಡೆದಿದೆ. ಈಗಾಗಲೇ ರಾಸಾಯನಿಕಯುಕ್ತ ನೊರೆಯಿಂದಾಗಿ ಕೆರೆ ಹಾಳಾಗಿದ್ದು, ಈಗ ಕೆರೆ ಕಟ್ಟೆ ಒಡೆದಿರೋದ್ರಿಂದ ಕೆರೆ ಅಳಿವಿನಂಚಿಗೆ ಬಂದು ನಿಂತಿದೆ.

    ರಾತ್ರಿಯಿಂದ ಕೆರೆಯ ನೀರು ಯತೇಚ್ಛವಾಗಿ ಹರಿದುಹೋಗಿದ್ದು, ಬಹುತೇಕ ಬರಿದಾಗಿದೆ. ಸುಮಾರು ಆರು ಎಕರೆಯ ಕೆರೆ ಇದಾಗಿದ್ದು, ಇರೋ ಅಲ್ಪಸ್ವಲ್ಪ ನೀರಲ್ಲೂ ನೊರೆ ಕಾಣಿಸಿಕೊಂಡಿದೆ. ಕೆರೆಯ ಡ್ಯಾಮೇಜ್ ಹಿಂದೆ ಮಲ್ಲಿಕ್ ಅಂಡ್ ಮಂತ್ರಿ ಅಪಾರ್ಟ್‍ಮೆಂಟ್ಸ್ ಬಿಲ್ಡರ್ಸ್‍ಗಳ ಕೈವಾಡವಿರುವ ಆರೋಪ ಕೇಳಿಬಂದಿದೆ.