Tag: ಸುನೇತ್ರಾ ಪಂಡಿತ್

  • ರಸ್ತೆ ಗುಂಡಿಗೆ ಬಿದ್ದ ಕಿರುತೆರೆ ಕಲಾವಿದೆ – N.R ಕಾಲೋನಿ ಬಳಿ ನಟಿ ಸುನೇತ್ರಾ ಸ್ಕೂಟರ್ ಅಪಘಾತ

    ರಸ್ತೆ ಗುಂಡಿಗೆ ಬಿದ್ದ ಕಿರುತೆರೆ ಕಲಾವಿದೆ – N.R ಕಾಲೋನಿ ಬಳಿ ನಟಿ ಸುನೇತ್ರಾ ಸ್ಕೂಟರ್ ಅಪಘಾತ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗೆ ಬಿದ್ದು ಕಿರುತೆರೆ ಕಲಾವಿದೆಯೊಬ್ಬರು ಗಾಯಗೊಂಡಿದ್ದಾರೆ.

    ಹೌದು. ಕಿರುತೆರೆನಟಿ ಸುನೇತ್ರಾ ಪಂಡಿತ್ ಅವರ ಸ್ಕೂಟರ್ ಅಪಘಾತಕ್ಕೀಡಾಗಿದೆ. ಅವೈಜ್ಞಾನಿಕ ಹಂಪ್, ರಸ್ತೆಗುಂಡಿಯಿಂದಾಗಿ ನಟಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಇದೀಗ ತಲೆಗೆ ಏಟು ಬಿದ್ದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: `ಕೆಜಿಎಫ್’ ಚಿತ್ರದ ಬಗ್ಗೆ ಹಗುರವಾಗಿ ಮಾತಾನಾಡಿದ ನಿರ್ದೇಶಕ ಸರೆಂಡರ್: ನೀಲ್- ಬುಚ್ಚಿಬಾಬು ಮೀಟಿಂಗ್

    ನಟಿ ಶೂಟಿಂಗ್ ಮುಗಿಸಿ ಮನೆಗೆ ಹೋಗ್ತಿದ್ದರು. ಈ ವೇಳೆ ಎನ್.ಆರ್ ಕಾಲೋನಿ 9ನೇ ಅಡ್ಡರಸ್ತೆಯಲ್ಲಿ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಸುನೇತ್ರಾ ಅವರನ್ನು ಕೂಡಲೇ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ನಟಿ ಬಸವನಗುಡಿಯ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆಯ ಬಗ್ಗೆ ಸ್ಥಳೀಯರು ಪ್ರತಿಕ್ರಿಯಿಸಿ, ಹೆಲ್ಮೆಟ್ ಹಾಕಿದ್ರೂ ಸುನೇತ್ರಾ ಅವರ ತಲೆಗೆ ಪೆಟ್ಟಾಗಿ ರಕ್ತ ಬರುತ್ತಿತ್ತು. ಇಲ್ಲಿ ಯಾವಾಗಲೂ ಅಪಘಾತ ಆಗುತ್ತಲೇ ಇರುತ್ತೆ. ಹಂಪ್ಸ್, ಗುಂಡಿಗಳಿಂದಲೇ ಇಲ್ಲಿ ಅಪಘಾತವಾಗ್ತಿದೆ. ಪಾಲಿಕೆಗೆ ಎಷ್ಟೇ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮದುವೆಗೂ ಮುನ್ನ ನಯನತಾರಾ ಮತ್ತು ವಿಘ್ನೇಶ್ ಶಿವನ್ ಟೆಂಪಲ್ ರನ್

  • ಕೊರೊನಾ ಇಲ್ಲ ಅಂದವರ ಕಪಾಳಕ್ಕೆ ಹೊಡೆಯಿರಿ: ನಟಿ ಸುನೇತ್ರಾ ಪಂಡಿತ್

    ಕೊರೊನಾ ಇಲ್ಲ ಅಂದವರ ಕಪಾಳಕ್ಕೆ ಹೊಡೆಯಿರಿ: ನಟಿ ಸುನೇತ್ರಾ ಪಂಡಿತ್

    – ಮಾಧ್ಯಮದಲ್ಲಿ ಬರುತ್ತಿರುವುದು ಸುಳ್ಳಲ್ಲ

    ಬೆಂಗಳೂರು: ಯಾರು ಕೊರೊನಾ ಇಲ್ಲ ಅಂತ ಬೇಜಬ್ದಾರಿತನ ತೋರಿಸುತ್ತಾರೋ ಅವರ ಕಪಾಳಕ್ಕೆ ಹೊಡೆಯಿರಿ ಅಂತ ನಟಿ ಸುನೇತ್ರಾ ಪಂಡಿತ್ ಹೇಳಿದ್ದಾರೆ.

    ಸುಮ್ಮನಳ್ಳಿ ಚಿತಾಗಾರ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಕ್ಕ ಕೋವಿಡ್ ನಿಂದ ಸತ್ತೋದ್ಳು. ಒಂದು ದಿನ ಕೇರ್‍ಲೆಸ್ ಹಾಗೂ ಮಿಸ್ ಗೈಡ್ ಆಗಿದ್ದಕ್ಕೆ ಅಂತ ಹೇಳೋಕೆ ನಾನು ಬಯಸಲ್ಲ. ಆದರೆ ಅದೂ ಒಂದು ಕಾರಣ ಎಂದು ಹೇಳಿದರು.

    ನಮ್ಮ ಅಕ್ಕ ಹೊರಟೋದ್ಳು. ಅವಳಿಗೆ ಮಕ್ಕಳಿದ್ದಾರೆ, ಆ ಮಕ್ಕಳು ಏನ್ ಮಾಡ್ಬೇಕು. ಈ ರೀತಿಯ ಪರಿಸ್ಥಿತಿ ಯಾರಿಗೂ ಬರಬಾರದು. ಕೊರೊನಾ ಇಲ್ಲ ಅಂತ ಹೇಳೋರಿಗೆ ಕಪಾಳಕ್ಕೆ ಹೊಡೆಯಿರಿ. ಯಾರು ಯಾರಿಗೆ ಕೊರೊನಾ ಅನುಭವ ಆಗಿದೆಯೋ ಅವರಿಗೆ ಗೊತ್ತು ಅದರ ಕಷ್ಟ. ಬೇಜವಾಬ್ದಾರಿತನವೇ ಬಹುಮುಖ್ಯ ಸಮಸ್ಯೆ ಅಂತ ಗರಂ ಆದರು.

    ಡಯಾಬಿಟಿಸ್ ಯಾರಿಗೆ ಇಲ್ಲ ಹೇಳಿ, ಪ್ರತಿಯೊಬ್ಬರಿಗೂ ಇದೆ. ಅದು ಎಲ್ಲರಿಗೂ ಗೊತ್ತಿರುವ ಸತ್ಯ. ದಯವಿಟ್ಟು ಬಿಬಿಎಂಪಿ ಒಂದು ಬೆಡ್ ಅಲರ್ಟ್ ಮಾಡುವಾಗ ಐಸಿಯು ಇರೋ ಆಸ್ಪತ್ರೆಗೆ ಅಲರ್ಟ್ ಮಾಡಿ ಎಂದು ಕಣ್ಣೀರಾಕುತ್ತಾ ಮನವಿ ಮಾಡಿಕೊಂಡರು.

    ಈವಾಗ ನನ್ನ ಅಕ್ಕ ಮೃತಪಟ್ಟಳು ಅಂತ ಹೇಳ್ತಿಲ್ಲ. ಒಬ್ಬ ಸಾಮಾನ್ಯ ನಾಗರಿಕಳಾಗಿ ಕೇಳಿಕೊಳ್ಳುತ್ತಿದ್ದೇನೆ. ನಾಯಕರು ಹಾಗೂ ಸರ್ಕಾರ ಎಲ್ಲರಿಗೂ ಒತ್ತಡ ಇದೆ ಎಂದು ಗೊತ್ತು. ಕೆಲಸ ಇಲ್ಲದೆ ಒದ್ದಾಡುತ್ತಿರುವ ಪ್ರತಿಯೊಬ್ಬ ಮನುಷ್ಯನಿಗೂ ಪ್ರೆಶರ್ ಇದೆ. ಮೀಡಿಯಾದವರಿಗೂ ಪ್ರೆಶರ್ ಇದೆ. ಎಷ್ಟು ಕಷ್ಟಪಟ್ಟು ಅವರು ಇದನ್ನೆಲ್ಲ ಕವರ್ ಮಾಡ್ಬೇಕು. ಕಷ್ಟಪಟ್ಟು ನ್ಯೂಸ್ ಮಾಡಬೇಕು. ಎಲ್ಲಾ ಗೊತ್ತು. ಆದರೂ ನಮ್ಮ ಜೀವನ ನಮ್ಮ ಕೈಯಲ್ಲಿದೆ ಎಂದು ತಿಳಿಸಿದರು.