Tag: ಸುನೀಲ್ ಬೋಸ್

  • ಹೈಕಮಾಂಡ್, ಶಾಸಕರ ಬೆಂಬಲ ಇರೋವರೆಗೂ ಸಿದ್ದರಾಮಯ್ಯರೇ ಸಿಎಂ: ಸಂಸದ ಸುನೀಲ್ ಬೋಸ್

    ಹೈಕಮಾಂಡ್, ಶಾಸಕರ ಬೆಂಬಲ ಇರೋವರೆಗೂ ಸಿದ್ದರಾಮಯ್ಯರೇ ಸಿಎಂ: ಸಂಸದ ಸುನೀಲ್ ಬೋಸ್

    ಚಾಮರಾಜನಗರ: ಹೈಕಮಾಂಡ್ ಹಾಗೂ ಶಾಸಕರ ಬೆಂಬಲ ಎಲ್ಲಿಯವರೆಗೂ ಸಿದ್ದರಾಮಯ್ಯ ಅವರಿಗೆ ಇರುತ್ತೋ ಅಲ್ಲಿಯವರೆಗೂ ಅವರೇ ಸಿಎಂ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.

    ನಗರದಲ್ಲಿ ಮಾತನಾಡಿದ ಅವರು, ಇದೀಗ ಸಿಎಂ ಬದಲಾವಣೆ ಬಗ್ಗೆ ಚರ್ಚೆಯಾಗ್ತಿಲ್ಲ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆAಬ ವಿಶ್ವಾಸವಿದೆ ಎಂದರು.

    ಮುಡಾ ಕೇಸ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರೇ ಹೆಚ್ಚು ದಾಖಲೆ ಕೊಟ್ಟಿದ್ದಾರೆಂದು ಸ್ನೇಹಮಯಿ ಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸಿಎಂ ಆಗದಿದ್ದ ಅವಧಿಯಲ್ಲಿ ಅಧಿಕಾರಿಗಳು ಸೈಟ್ ಕೊಟ್ಟಿರೋದು. 14 ಸೈಟ್‌ಗಳ ಬಗ್ಗೆ ಎಷ್ಟು ದೊಡ್ಡ ಮಟ್ಟದ ಚರ್ಚೆಯಾಗಿದೆ. ಕಾಂತರಾಜು ಕಮಿಷನರ್ ಆಗಿದ್ದ ಅವಧಿಯಲ್ಲಿ 9 ಸಾವಿರ ಸೈಟ್‌ಗಳು ಎಲ್ಲೋದವು?. ಇದರ ಬಗ್ಗೆ ಯಾರೂ ಕೂಡ ಚರ್ಚೆ ಮಾಡ್ತಿಲ್ಲ. 14 ಸೈಟ್ ವಿಚಾರ ಮಾತ್ರ ಪ್ರಚಾರ ಪಡೀತಿದೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.

    ಈ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದೆ. ಲೋಕಾ ಅಧಿಕಾರಿಗಳು ಕೂಡ ಸಿಎಂ ನಿರ್ದೋಷಿ ಅಂತಾ ಹೇಳಿದ್ದಾರೆ. 9 ಸಾವಿರ ಸೈಟ್ ವಿಚಾರವಾಗಿ ಚರ್ಚೆ ಆಗಲಿ. ಸ್ನೇಹಮಯಿ ಕೃಷ್ಣ ಕಾಂಗ್ರೆಸ್ ನಾಯಕರಲ್ಲಿ ಗೊಂದಲ ಮೂಡಿಸಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.

    ಸಿಎಂ ಸಿದ್ದರಾಮಯ್ಯ ದಾಖಲೆಯ 16 ನೇ ಬಜೆಟ್ ಮಂಡಿಸಲಿದ್ದಾರೆ. ಬಡವರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಬಜೆಟ್ ಮಂಡಿಸುವ ಸಾಧ್ಯತೆಯಿದೆ. ಯಾವುದೇ ತೆರಿಗೆ ವಿಧಿಸದೆ ಸಂಪನ್ಮೂಲಗಳ ಕ್ರೋಢೀಕರಣ, ಜಲ ಸಂಪನ್ಮೂಲ, ರಸ್ತೆ ಯೋಜನೆಗಳಿಗೆ ಆದ್ಯತೆ ಸಿಗಲಿದೆ. 24% ಎಸ್ಸಿ,ಎಸ್ಟಿ ಹಣವನ್ನು ಕೂಡ ಬಜೆಟ್ ಗಾತ್ರದ ಅನುಸಾರ ಮೀಸಲಿಡುತ್ತಾರೆ ಎಂದರು.

  • ಪ್ರಾಥಮಿಕ ಮಾಹಿತಿ ಇಲ್ಲದೇ ಸೂಲಿಬೆಲೆ ಸುಳ್ಳು ಹೇಳ್ತಿದ್ದಾರೆ: ಬೋಸ್ ಕಿಡಿ

    ಪ್ರಾಥಮಿಕ ಮಾಹಿತಿ ಇಲ್ಲದೇ ಸೂಲಿಬೆಲೆ ಸುಳ್ಳು ಹೇಳ್ತಿದ್ದಾರೆ: ಬೋಸ್ ಕಿಡಿ

    ಮೈಸೂರು: ಯುವ ಬ್ರಿಗೇಡ್ (Yuva Brigade) ಸಂಚಾಲಕ ವೇಣುಗೋಪಾಲ್ (Venugopal Murder Case) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಕ ಚಕ್ರವರ್ತಿ ಸೂಲಿಬೆಲೆಯವರು ಪ್ರಾಥಮಿಕ ಮಾಹಿತಿ ಇಲ್ಲದೇ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮಹದೇವಪ್ಪ ಪುತ್ರ ಸುನೀಲ್ ಬೋಸ್ (Sunil Bose) ತೀಕ್ಷ್ಣ ತಿರುಗೇಟು ನೀಡಿದ್ದಾರೆ.

    ವೇಣುಗೋಪಾಲ್ ಹತ್ಯೆಯ ಹಿಂದೆ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಕೈವಾಡ ಇದೆ ಎಂಬ ಚಕ್ರವರ್ತಿ (Chakravarti Sulibele) ಆರೋಪಕ್ಕೆ ಪ್ರತಿಕ್ರಿಯಿಸಿದ ಬೋಸ್, ಚಕ್ರವರ್ತಿ ಸೂಲಿಬೆಲೆಗೆ ತಲೆ ಸರಿ ಇಲ್ಲ. ಅವರಿಗೆ ಮೊದಲು ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯತೆ ಇದೆ. ಸುಳ್ಳಿನಿಂದಲೇ ಜೀವನ ಕಟ್ಟಿಕೊಂಡಿರುವ ವ್ಯಕ್ತಿ ಅವರು. ಈ ಕೊಲೆ ಪ್ರಕರಣದಲ್ಲಿಯೂ ಸುಳ್ಳು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಕೊಲೆ ವಿಚಾರದಲ್ಲಿ ಸೂಲಿಬೆಲೆಗೆ ಪ್ರಾಥಮಿಕ ಮಾಹಿತಿ ಇಲ್ಲ. ಸತ್ತಿರುವ ಯುವಕ ನಾಯಕ ಸಮುದಾಯದ ವ್ಯಕ್ತಿ. ಆದರೆ ಸೂಲಿಬೆಲೆ ಅವರನ್ನ ದಲಿತ ಸಮುದಾಯ ಎಂದು ಸುಳ್ಳು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

    ವೈಯಕ್ತಿಕ ವಿಚಾರಕ್ಕೆ ಮಾಡುವ ಕೊಲೆಗೆ ಒಬ್ಬ ವ್ಯಕ್ತಿ ಅಥವಾ ಪಕ್ಷ ಹೇಗೆ ಹೊಣೆಗಾರರಾಗುತ್ತಾರೆ. ವೈಯಕ್ತಿಕ ಗಲಭೆಗಳು, ಕೃತ್ಯಗಳಿಗೆ ನಾವು ಹೊಣೆಗಾರರಾಗಲು ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತನೊಬ್ಬ ಈ ರೀತಿ ಘಟನೆಯಲ್ಲಿ ಭಾಗಿಯಾದ್ರೆ ಅದರ ಹೊಣೆಯನ್ನ ಬಿಜೆಪಿ ಹೊರುತ್ತಾ..?. ಇಂತಹ ಸಾವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಪಕ್ಷದ ಅನೇಕ ಕಾರ್ಯಕರ್ತರು ನಮ್ಮ ಜೊತೆ ಫೋಟೋ ತೆಗೆಸಿಕೊಂಡಿರುತ್ತಾರೆ. ನಾನು ಈ ಭಾಗದ ಮುಖಂಡ. ಅವರು ಮಾಡುವ ವೈಯಕ್ತಿಕ ತಪ್ಪಿಗೆ ನಾವು ಹೇಗೆ ಪ್ರೇರಣೆಯಾಗುತ್ತೇವೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವೇಣುಗೋಪಾಲ್‌ ಹತ್ಯೆಯ ಹಿಂದೆ ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ ಕೈವಾಡ: ಸೂಲಿಬೆಲೆ

    ಪ್ರಕರಣದ 4ನೇ ಆರೋಪಿ ಬಿಜೆಪಿ (BJP) ಪಾಲಿಕೆ ಸದಸ್ಯೆಯ ತಮ್ಮ. ಇದನ್ನು ನೋಡಿ ಬಿಜೆಪಿಯವರೇ ಹೇಳಿಕೊಟ್ಟಿದ್ದಾರೆ ಎಂದು ನಾನು ಪ್ರಶ್ನಿಸಿದರೆ ಅದು ಹೇಗಿರುತ್ತದೆ ಹೇಳಿ. ನೀನು ಕೊಲೆ ಮಾಡು, ನಾವು ರಾಜಕಾರಣ ಮಾಡುತ್ತೇವೆ ಎಂದು ಆತನಿಗೆ ಹೇಳಿಕೊಟ್ಟಿದ್ರಾ ಎಂದು ನಾನು ಪ್ರಶ್ನಿಸುತ್ತೇನೆ. ಈ ಪ್ರಶ್ನೆಗೆ ಅವರು ಉತ್ತರಿಸಲು ಸಾಧ್ಯನಾ..?. ಸಾವಿನಲ್ಲಿ ರಾಜಕಾರಣ ಯಾರೂ ಮಾಡಬಾರದು. ಬಿಜೆಪಿಯವರು ಶವದ ಮೇಲೆ ರಾಜಕಾರಣ ಮಾಡಲು ಹೊರಟಿದ್ದಾರೆ. ಬಿಜೆಪಿಗೆ ಸದಾ ಕಾಲ ಇಂತ ಕೊಲೆ ಗಲಭೆಗಳ ಬಗ್ಗೆ ಆಸಕ್ತಿ ಜಾಸ್ತಿ ಎಂದು ಗರಂ ಆದರು.

    ನಾನು ಈ ಕೊಲೆಯನ್ನ ನಾನು ಖಂಡಿಸುತ್ತೇನೆ. ಸರಿಯಾದ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ನಮ್ಮ ತಂದೆ ಮಹದೇವಪ್ಪ ಕೂಡ ಸೂಚನೆ ನೀಡಿದ್ದಾರೆ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]