Tag: ಸುನೀಲ್ ನಾಯ್ಕ್

  • ನಂಗೆ ಕೋವಿಡ್ ಬರಲ್ಲ, ಮಾಸ್ಕ್ ಹಾಕಲ್ಲ: ಬಿಜೆಪಿ ಶಾಸಕ ಸುನೀಲ್ ನಾಯ್ಕ್

    ನಂಗೆ ಕೋವಿಡ್ ಬರಲ್ಲ, ಮಾಸ್ಕ್ ಹಾಕಲ್ಲ: ಬಿಜೆಪಿ ಶಾಸಕ ಸುನೀಲ್ ನಾಯ್ಕ್

    ಕಾರವಾರ: ವ್ಯಾಕ್ಸಿನ್ ಬರೋವರೆಗೂ ಕೊರೊನಾ ವಿರುದ್ಧ ಇರುವ ಏಕೈಕ ಅಸ್ತ್ರ ಮಾಸ್ಕ್ ಅಂತ ಪ್ರಧಾನಿಗಳಿಂದ ಹಿಡಿದು ತಜ್ಞ ವೈದ್ಯರವರೆಗೆ ಎಲ್ಲರೂ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಮಾತ್ರ ಇದಕ್ಕೆ ತದ್ವಿರುದ್ಧದ ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

    ತಾನು ಮಾಸ್ಕ್ ಧರಿಸದೇ ಕೊರೊನಾ ಜಾಗೃತಿ ಮಾಡುತ್ತೇನೆ ಎಂದು ಭಟ್ಕಳದ ಬಿಜೆಪಿ ಶಾಸಕ ಸುನೀಲ್ ನಾಯ್ಕ ಎಡವಟ್ಟು ಹೇಳಿಕೆ ಕೊಟ್ಟಿದ್ದಾರೆ. ಭಟ್ಕಳದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ನನಗೆ ಕೋವಿಡ್ ಬಂದು ಹೋಗಿದೆ. ಮತ್ತೆ ಬರುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾಗಿ ಮಾಸ್ಕ್ ಧರಿಸಿಲ್ಲ. ನಾನು ಮಾಸ್ಕ್ ಧರಿದೇ ಜನರಲ್ಲಿ ಕೊರೊನಾ ಜಾಗೃತಿ ಮಾಡುತ್ತೇನೆ ಎಂದಿದ್ದಾರೆ.

    ಶಾಸಕರ ಹೇಳಿಕೆ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.