Tag: ಸುನೀಲ್ ಕುಮಾರ್

  • ವಿಧಾನಸಭೆಯಲ್ಲೂ ಧರ್ಮಸ್ಥಳ ಪ್ರಕರಣ ಸದ್ದು – ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಸದಸ್ಯರ ಪಟ್ಟು

    ವಿಧಾನಸಭೆಯಲ್ಲೂ ಧರ್ಮಸ್ಥಳ ಪ್ರಕರಣ ಸದ್ದು – ಚರ್ಚೆಗೆ ಅವಕಾಶ ಕೊಡುವಂತೆ ಬಿಜೆಪಿ ಸದಸ್ಯರ ಪಟ್ಟು

    – ಹಿಂದೂ ಧಾರ್ಮಿಕ ಕೇಂದ್ರವನ್ನ ಟಾರ್ಗೆಟ್ ಮಾಡಲಾಗಿದೆ
    – ಇನ್ನೆಷ್ಟು ಗುಂಡಿ ಅಗೆಯುತ್ತೀರಾ? – ಸುನೀಲ್‌ ಕುಮಾರ್‌ ಪ್ರಶ್ನೆ

    ಬೆಂಗಳೂರು: ವಿಧಾನಸಭೆಯಲ್ಲಿಂದು ಧರ್ಮಸ್ಥಳ ಪ್ರಕರಣ (Dharmasthala Burials Case) ಪ್ರತಿಧ್ವನಿಸಿ ಗದ್ದಲಕ್ಕೆ ಕಾರಣವಾಯ್ತು. ಶೂನ್ಯವೇಳೆಯಲ್ಲಿ ಬಿಜೆಪಿ (BJP_ ಶಾಸಕ ಸುನೀಲ್ ಕುಮಾರ್ ಪ್ರಸ್ತಾಪಿಸಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.

    ತನಿಖೆಗೆ ನಮ್ಮ ಆಕ್ಷೇಪ ಇಲ್ಲ. ಆದ್ರೆ ಹಿಂದೂ ಧಾರ್ಮಿಕ ಕೇಂದ್ರ ಟಾರ್ಗೆಟ್ ಮಾಡಲಾಗಿದೆ. ಅಪಪ್ರಚಾರ ನಡೆಯುತ್ತಿದೆ. ಅನಾಮಿಕ, ಐದು ಗುಂಡಿ, ಹತ್ತು ಗುಂಡಿ ಅಂತ ಹೇಳ್ತಾ 13 ಗುಂಡಿ ಆಗಿದೆ. ಊಹಾಪೋಹಗಳಿಗೆ ಸರ್ಕಾರ ತೆರೆ ಎಳೆಯಬೇಕು. ಧಾರ್ಮಿಕ ನಂಬಿಕೆ ಮೇಲೆ ಅಪಪ್ರಚಾರ ಮಾಡ್ತಿರುವವರ ಮೇಲೆ ಕ್ರಮ ಆಗಬೇಕು. ತನಿಖೆ ಎಲ್ಲಿವರೆಗೆ ಬಂದಿದೆ? ಇನ್ನೆಷ್ಟು ಗುಂಡಿ ತೆಗಿಯುತ್ತೀರಾ? ಅಂತ ಗೃಹ ಸಚಿವರು ಸ್ಪಷ್ಟನೆ ಕೊಡಬೇಕು ಅಂತಾ ಸುನೀಲ್ ಕುಮಾರ್ (Sunil Kumar) ಆಗ್ರಹಿಸಿದ್ರು. ಇದನ್ನೂ ಓದಿ: ನನ್ನ ಮಾತು ಇಷ್ಟೊಂದು ತೀವ್ರ ಸ್ವರೂಪಕ್ಕೆ ಹೋಗುತ್ತೆ ಅಂತ ಗೊತ್ತಿರಲಿಲ್ಲ: ರಾಜಣ್ಣ ಪಶ್ಚಾತ್ತಾಪದ ಮಾತು

    ಈ ವೇಳೆ ಉತ್ತರ ಕೊಟ್ಟ ಗೃಹ ಸಚಿವ ಪರಮೇಶ್ವರ್ (Parameshwar), ತನಿಖೆ ನಡೆಯುತ್ತಿದೆ, ತನಿಖೆ ಮಧ್ಯೆ ನಾವು ಮಧ್ಯ ಪ್ರವೇಶ ಮಾಡಲ್ಲ. ತನಿಖೆ ಒಂದು ಹಂತಕ್ಕೆ ಬಂದ ನಂತರ ವರದಿ ಕೊಡ್ತಾರೆ. ವರದಿ ಕೊಟ್ಟ ನಂತರ ನಾನು ಪೂರ್ಣ ಉತ್ತರ ಕೊಡ್ತೇನೆ ಅಂದ್ರು. ಆದರೆ ಪರಮೇಶ್ವರ್ ಉತ್ತರಕ್ಕೆ ಬಿಜೆಪಿ ಸದಸ್ಯರು ಒಗ್ಗಟ್ಟಾಗಿ ವಿರೋಧ ವ್ಯಕ್ತಪಡಿಸಿ, ಸ್ಪಷ್ಟೀಕರಣ ಕೊಡಬೇಕು, ಇನ್ನೂ ಎಷ್ಟು ಗುಂಡಿ ಅಗೆಯುತ್ತೀರಾ ಹೇಳಿ? ಅಪಪ್ರಚಾರ ನಿಲ್ಲಿಸಿ, ಸುಳ್ಳುಪ್ರಚಾರ ಇದು, ಪ್ರಕರಣದ ಚರ್ಚೆಗೆ ಅವಕಾಶ ಕೊಡಿ ಅಂತ ಬಿಜೆಪಿ ಸದಸ್ಯರು ಆಗ್ರಹಿಸಿದ್ರು. ಇದನ್ನೂ ಓದಿ: ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣ ವಜಾ ಖಂಡಿಸಿ ಬೆಂಬಲಿಗರ ಆಕ್ರೋಶ – ಮಧುಗಿರಿ ಬಂದ್

    ಆಗ ಸದನದಲ್ಲಿ ಧರ್ಮಸ್ಥಳ ಗದ್ದಲ ಜೋರಾಯ್ತು. ಮಧ್ಯಪ್ರವೇಶ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ನಾವು ಯಾರ ಪರವೂ ಇಲ್ಲ, ನಾವು ಸತ್ಯದ ಪರ ಅಂದ್ರು. ಚರ್ಚೆಗೆ ಈಗ ಅವಕಾಶ ಕೊಡಿ ಅಂತಾ ಆರ್.ಅಶೋಕ್ ಆಗ್ರಹಿಸಿದ್ರೆ, ಮಧ್ಯಂತರ ವರದಿ ಪಡೆದುಕೊಂಡು ಕ್ಲಾರಿಟಿ ಕೊಡಿ. ಇನ್ನೊಬ್ಬ ಬಂದು ಗುಂಡಿ ಅಗೆಯಬೇಕು ಅಂತಾನೆ, ಅಗೆಯುತ್ತೀರಾ? ಅಂತಾ ಸುನೀಲ್ ತಿರುಗೇಟು ನೀಡಿದ್ರು.

    ಮತ್ತೆ ಉತ್ತರ ಕೊಟ್ಟ ಪರಮೇಶ್ವರ್, ಎಸ್‌ಐಟಿ ತನಿಖೆ ಮುಗಿಯುವವರೆಗೂ ನಾವು ಮಧ್ಯಪ್ರವೇಶ ಮಾಡಲ್ಲ, ತನಿಖೆ ನಂತರ ವರದಿ ಪಡೆಯುತ್ತೇವೆ ಅಂತಾ ಸ್ಪಷ್ಟನೆ ಕೊಟ್ಟರು. ನಿಯಮ 69ರಡಿ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಮನವಿ ಮಾಡಿದ್ದು, ನಾಳೆ, ನಾಡಿದ್ದು ಕಲಾಪದಲ್ಲಿ ಚರ್ಚೆಗೆ ಅವಕಾಶ ಸಿಗುತ್ತಾ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ರಾಜಣ್ಣ ಮಾಡಿದ ಘೋರ ಅಪರಾಧವೇನು? ಸಿಎಂ ಸದನದಲ್ಲಿ ಉತ್ತರಿಸಲಿ: ವಿಜಯೇಂದ್ರ ಆಗ್ರಹ

  • ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶಾಸಕ ಸುನೀಲ್ ಕುಮಾರ್ ಪುತ್ರಿಗೆ ಶೇ.97 ಅಂಕ

    ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶಾಸಕ ಸುನೀಲ್ ಕುಮಾರ್ ಪುತ್ರಿಗೆ ಶೇ.97 ಅಂಕ

    ಬೆಂಗಳೂರು/ಉಡುಪಿ: ಬಿಜೆಪಿ ಶಾಸಕ ಸುನೀಲ್‌ ಕುಮಾರ್‌ (Sunil Kumar) ಅವರ ಪುತ್ರಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.97 ಅಂಕ ಬಂದಿದೆ.

    ಪುತ್ರಿಯ ಸಾಧನೆಗೆ ಸುನೀಲ್ ಕುಮಾರ್ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ಮಗಳು ಪ್ರೇರಣಾ ಅವರ ಸಾಧನೆ ವಿಚಾರವನ್ನು ಶಾಸಕರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ ರಿಸಲ್ಟ್: ಪಾಸಾದವರಿಗೆ ವಿಶ್ ಮಾಡಿ, ಫೇಲ್ ಆದವರಿಗೆ ಧೈರ್ಯ ತುಂಬಿದ ಸಿಎಂ

    ಫೇಸ್‌ಬುಕ್‌ ಪೋಸ್ಟ್‌ನಲ್ಲೇನಿದೆ?
    ಮಗಳೇ ಓದಿಯಾಯ್ತಾ ಎಂದು ಪ್ರಶ್ನಿಸಿದಾಗಲೆಲ್ಲ, ‘ಒಳ್ಳೆ ಮಾರ್ಕ್ಸ್ ತೆಗೆದರೆ ಆಯ್ತಲ್ವಾ ಈಗ ಕಿರಿಕಿರಿ ಮಾಡಬೇಡಿ’ ಎಂದು ಹುಸಿಕೋಪ ಪ್ರದರ್ಶಿಸುತ್ತಿದ್ದಳು ನನ್ನ ಮುದ್ದಿನ ಮಗಳು ಪ್ರೇರಣಾ. ಈಗ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.97 ರಷ್ಟು ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ.‌

    ಪರೀಕ್ಷೆಯೆಂದರೆ ಮಕ್ಕಳಿಗಿಂತ ಹೆತ್ತವರಿಗೆ ಕಾಳಜಿ ಹೆಚ್ಚು. ಆದರೆ ನಾವೆಂದೂ ಅಂಕ ಗಳಿಕೆಯ ಒತ್ತಡವನ್ನು ಅವಳ ಮೇಲೆ ಹೇರಿರಲಿಲ್ಲ. ಆದರೆ, ತನ್ನ ಜವಾಬ್ದಾರಿಯನ್ನು ಅರಿತು ಪರಿಶ್ರಮದಿಂದ ಓದಿದಳು. ಜ್ಞಾನಸುಧಾದ ಉಪನ್ಯಾಸಕರ ತಂಡ ಸೂಕ್ತ ಮಾರ್ಗದರ್ಶನ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲೇಬೇಕು. ಒಬ್ಬ ವಿಧೇಯ ವಿದ್ಯಾರ್ಥಿನಿಯಾಗಿ ಓದು ಹಾಗೂ ಮುಂದಿನ ಗುರಿಯೆಡೆಗಿನ ನಿನ್ನ ಸ್ಪಷ್ಟತೆಯ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಉಡುಪಿ ಫಸ್ಟ್‌, ದಕ್ಷಿಣ ಕನ್ನಡ ಸೆಕೆಂಡ್‌

    ವಿದ್ಯಾರ್ಥಿ ಜೀವನದಲ್ಲಿ ಸುಖಕ್ಕಿಂತ ಪರಿಶ್ರಮದ ಹಾದಿ ಮುಖ್ಯ ಎಂಬ ನಮ್ಮ ಕಿವಿ ಮಾತನ್ನು ಸದಾ ಮನಸಿನಲ್ಲಿಟ್ಟುಕೊಂಡಿದ್ದ ಮಗಳು. ಆರು ಬಾರಿ ಪೂರ್ವಸಿದ್ಧತಾ ಪರೀಕ್ಷೆ ಬರೆದು ನಿರಂತರ ಶ್ರಮ ವಹಿಸಿದ್ದಳು. ತನ್ನ ನಿರೀಕ್ಷೆಯಷ್ಟು ಅಂಕ ಬಂದಿಲ್ಲ ಎಂಬ ಬೇಸರ ಅವಳಿಗಿದ್ದರೂ ತಂದೆಯಾಗಿ ಅವಳ ಈ ಸಾಧನೆ ಸಂತೋಷ ನೀಡಿದೆ. ಮತ್ತೊಮ್ಮೆ ಅಭಿನಂದನೆಗಳು ಮಗನೆ… ಪುಸ್ತಕದ ಪಾಠದಷ್ಟೇ ಜೀವನದ ಪಾಠವೂ ಮುಖ್ಯ. ಆ ಸವಾಲನ್ನು ಅರ್ಥ ಮಾಡಿಕೊಳ್ಳುವುದೇ ನಿಜವಾದ ಭವಿಷ್ಯ ಎಂದು ಮಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶಾಸಕ ಸುನೀಲ್‌ ಕುಮಾರ್‌ ಖುಷಿ ವ್ಯಕ್ತಪಡಿಸಿದ್ದಾರೆ.

  • ಪ್ರತ್ಯೇಕ ಕರಾವಳಿಯ ಕೂಗು ಎಬ್ಬಿಸಿದ ಪೂಂಜಾ

    ಪ್ರತ್ಯೇಕ ಕರಾವಳಿಯ ಕೂಗು ಎಬ್ಬಿಸಿದ ಪೂಂಜಾ

    ಬೆಂಗಳೂರು: ಪ್ರತ್ಯೇಕ ಕರಾವಳಿಯ ಕೂಗು ದಿಢೀರ್ ಎಂದು ಕೇಳಿ ಬಂದಿದೆ. ವಿಧಾನಸಭೆ ಕಲಾಪದಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುವಾಗ ಬಿಜೆಪಿಯ ಹರೀಶ್ ಪೂಂಜಾ (Harish Poonja) ಈ ಕೂಗೆಬ್ಬಿಸಿದ್ದಾರೆ.

    ವಿಧಾನಸಭೆಯಲ್ಲಿ 69 ನಿಯಮದಡಿಯಲ್ಲಿ ಕರಾವಳಿ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಇಂದು ಚರ್ಚೆ ನಡೆಯಿತು. ಈ ವೇಳೆ ಸುನಿಲ್ ಕುಮಾರ್ ಮಾತನಾಡಿ, ಸದನದಲ್ಲಿ ಉತ್ತರ ಕರ್ನಾಟಕ, ಬೆಂಗಳೂರು ಬಗ್ಗೆ ಚರ್ಚೆ ಆಗುತ್ತದೆ. ಆದರೆ ಕರಾವಳಿ ಬಗ್ಗೆ ಯಾವತ್ತೂ ಚರ್ಚೆಗಳು ನಡೆದಿಲ್ಲ. ಟೆಂಪಲ್ ಟೂರಿಸಂ ವಿಚಾರವಾಗಿ ಕರಾವಳಿಯನ್ನು ಅಭಿವೃದ್ಧಿ ಪಡಿಸಬೇಕು. 330 ಕಿ.ಮೀ ಇರುವ ಬೀಚ್ ಟೂರಿಸಂ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಪ್ರವಾಸಿಗರೇ ಗಮನಿಸಿ; ಕಾಫಿನಾಡ ಮುಳ್ಳಯ್ಯನಗಿರಿ-ದತ್ತಪೀಠ 3 ದಿನ ಬಂದ್!

    ಕರಾವಳಿಯನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯುತ್ತಾರೆ. ಕರಾವಳಿ ಜಿಲ್ಲೆಯ ಜನ ರಾಷ್ಟ್ರೀಯತೆ, ಹಿಂದುತ್ವದಲ್ಲಿ ಮುಂಚೂಣಿಯಲ್ಲಿದ್ದಾರೆ. ಕರಾವಳಿ ಜನ ಹೋಟೆಲ್ ಮ್ಯಾನೇಜ್ಮೆಂಟ್, ದೇವಸ್ಥಾನ ಮ್ಯಾನೇಜ್ಮೆಂಟ್ ಹಾಗೂ ಖಾಸಗಿ ಬಸ್ ಮ್ಯಾನೇಜ್ಮೆಂಟ್‌ನಲ್ಲಿ ಪ್ರಸಿದ್ದರು. ಸರ್ಕಾರವನ್ನು ಅವಲಂಬಿಸದೇ ಸರ್ಕಾರಿ ಶಾಲೆಗಳನ್ನು ನಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಆದರೆ ಕರಾವಳಿ ಭಾಗದ ಸಮಸ್ಯೆ ಬಗ್ಗೆ ಚರ್ಚೆ ನಡೆಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಮತಾಂತರ ಆಗುವಂತೆ ನನಗೆ ಒತ್ತಡ ಹೇರುತ್ತಿದ್ದರು: ಮಾಜಿ ಪಾಕ್ ಕ್ರಿಕೆಟಿಗ ಕನೇರಿಯಾ

    ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್ ಪೂಂಜಾ, ಕರಾವಳಿ ಅಭಿವೃದ್ಧಿ ಕಡೆಗಣಿಸಿದ್ರೆ ನಾವು ಪ್ರತ್ಯೇಕ ವಿಧಾನಸೌಧ ಕಟ್ಟಿಸಿಕೊಂಡು ಮಾತಾಡುವ ವ್ಯವಸ್ಥೆ ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸ್ಪೀಕರ್ ಯು.ಟಿ.ಖಾದರ್ ಅವರು ಹರೀಶ್ ಪೂಂಜಾ ಮಾತಾಡುವಾಗ ಬೇಗ ಮುಗಿಸಿ ಎಂದರು. ಇದನ್ನೂ ಓದಿ: ಐಪಿಎಸ್ ಸೂಚನೆಯಂತೆ ರನ್ಯಾಗೆ ಗ್ರೀನ್‌ಚಾನಲ್ – ಡಿಆರ್‌ಐ ಮುಂದೆ ಶಿಷ್ಟಾಚಾರ ಅಧಿಕಾರಿ ಹೇಳಿಕೆ

    ಕರಾವಳಿ ಜಿಲ್ಲೆಗಳು ನಮ್ಮ ಜೊತೆಗೇ ಇರಬೇಕು. ನೀವೂ ನಾವೂ ಒಟ್ಟಿಗೆ ಇರಬೇಕು, ಅಪಸ್ವರ ಬೇಡ ಎಂದು ಕಾಂಗ್ರೆಸಿಗರು ಹೇಳಿದರು.

  • ರಾಜ್ಯದಲ್ಲಿರೋದು ದಪ್ಪ ಎಮ್ಮೆ ಚರ್ಮದ ಸರ್ಕಾರ: ಸುನೀಲ್ ಕುಮಾರ್

    ರಾಜ್ಯದಲ್ಲಿರೋದು ದಪ್ಪ ಎಮ್ಮೆ ಚರ್ಮದ ಸರ್ಕಾರ: ಸುನೀಲ್ ಕುಮಾರ್

    ಉಡುಪಿ: ರಾಜ್ಯದಲ್ಲಿರುವುದು ದಪ್ಪ ಚರ್ಮದ, ಎಮ್ಮೆ ಚರ್ಮದ ಸರ್ಕಾರ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.

    ಉಡುಪಿಯ ಕಾರ್ಕಳದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರೋದು ಸಂವೇದನಾಶೀಲತೆ ಇಲ್ಲದ ಭಂಡ ಸರ್ಕಾರ. 22 ಲಕ್ಷ ರೇಷನ್ ಕಾರ್ಡ್, 12 ಲಕ್ಷ ಬಗರ್‌ಹುಕುಂ ಜಮೀನು ತಿರಸ್ಕಾರ ಮಾಡಲು ಹೊರಟಿದೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಆರ್ಭಟ ಮಾಡುತ್ತಿದೆ. ಮೈಕ್ರೋ ಫೈನಾನ್ಸ್ಗೆ ಕಡಿವಾಣ ಹಾಕುವ ಕೆಲಸವನ್ನು ಮಾಡುತ್ತಿಲ್ಲ. ರಾಜ್ಯದಲ್ಲಿ ದುಡಿಯುವ ಕೈಗಳಿಗೆ ಕೆಲಸ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಟ್ಟಡ ನಿರ್ಮಾಣಕ್ಕೆ ಸಂಬAಧಪಟ್ಟ ಯಾವುದೇ ವಸ್ತುಗಳು ಸಿಗುತ್ತಿಲ್ಲ ಎಂದು ಬೇಸರ ಹೊರಹಾಕಿದರು.

    ಬಿಟ್‌ಕಾಯಿನ್ ಜಾಲದಲ್ಲಿ ಮೊಹಮ್ಮದ್ ನಲಪಾಡ್ ಸಿಲುಕಿರುವ ಬಗ್ಗೆ ಮಾತನಾಡಿ, ಇದು 60 ಪರ್ಸೆಂಟ್ ಸರ್ಕಾರ. ಎಲ್ಲ ಸಚಿವರು ಹಗರಣದಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್‌ನ ಕಾರ್ಯಕರ್ತರು ಬ್ರೋಕರ್‌ಗಳಾಗಿದ್ದಾರೆ. ಯೂಥ್ ಕಾಂಗ್ರೆಸ್ ಅಧ್ಯಕ್ಷ ಬಿಟ್ ಕಾಯಿನ್‌ನಲ್ಲಿ ಸಿಲುಕಿದ್ದಾರೆ. ಆರಂಭದಲ್ಲೇ ತೀವ್ರ ವಿಚಾರಣೆ ಮಾಡದೆ ಇರುವುದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.

    ಹಣ ಚುನಾವಣೆಗಾಗಿ ಹೈಕಮಾಂಡ್‌ಗೆ ಹೋಗಿದೆ ಎಂಬ ಕಾರಣಕ್ಕೆ ಸಾಫ್ಟ್ ಕಾರ್ನರ್ ತೋರಲಾಗಿದೆ. ಅಬಕಾರಿ ಇಲಾಖೆ ಹಣ ದೆಹಲಿ, ಮಹಾರಾಷ್ಟ್ರ ಮತ್ತು ಕೇಂದ್ರದ ಚುನಾವಣೆಗೆ ರವಾನೆಯಾಗಿದೆ. ಈ ಕಾರಣಕ್ಕೆ ತನಿಖೆಯನ್ನು ಬಹಳ ಮಂದಗತಿಯಲ್ಲಿ ಮಾಡುತ್ತಿದೆ ಎಂದು ಆರೋಪಿಸಿದರು.

  • ಬಣ ಬಡಿದಾಟದ ನಡುವೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೆ ಸುನಿಲ್ ಕುಮಾರ್ ಮನವಿ

    ಬಣ ಬಡಿದಾಟದ ನಡುವೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೆ ಸುನಿಲ್ ಕುಮಾರ್ ಮನವಿ

    ಬೆಂಗಳೂರು: ಬಿಜೆಪಿಯಲ್ಲಿ ಬಣ ಬಡಿದಾಟದ ನಡುವೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಕಾರ್ಕಳ ಶಾಸಕ, ಮಾಜಿ ಸಚಿವ ವಿ. ಸುನೀಲ್ ಕುಮಾರ್ (Sunil Kumar) ಮನವಿ ಮಾಡಿಕೊಂಡಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರಿಗೆ ಪಕ್ಷದ ಹುದ್ದೆಯಿಂದ ತಮ್ಮನ್ನು ಬಿಡುಗಡೆಗೊಳಿಸಲು ಮನವಿ ಮಾಡಿಕೊಂಡಿದ್ದು, ಇದಕ್ಕೂ ಮುಂಚೆ ಮೌಖಿಕವಾಗಿ ಕೋರಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪಕ್ಷದ ಬಣ ಬಡಿದಾಟ ಕಾರಣವಲ್ಲ, ವೈಯಕ್ತಿಕ ಕಾರಣಕ್ಕೆ ಪ್ರ‍್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಬೇಕು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಶೀಲ ಶಂಕಿಸಿ ಪತ್ನಿ, ಅತ್ತೆಯ ಮೇಲೆ ತಲ್ವಾರ್‌ನಿಂದ ಅಟ್ಯಾಕ್‌ ಮಾಡಿದ ದುಷ್ಕರ್ಮಿ

    ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಾಮಾನ್ಯವಾಗಿ ನಾಲ್ವರು ಪ್ರಮುಖರನ್ನು ಮಾತ್ರ ನಿಯೋಜನೆ ಮಾಡಲಾಗುತ್ತದೆ. ಸದ್ಯ ಸುನೀಲ್ ಕುಮಾರ್, ನಂದೀಶ್ ರೆಡ್ಡಿ, ಪ್ರೀತಮ್ ಗೌಡ ಹಾಗೂ ಪಿ.ರಾಜೀವ್ ಈ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಸುನೀಲ್ ಕುಮಾರ್ ಹಾಗೂ ವಿಜಯೇಂದ್ರ ನಡುವೆ ಯಾವುದೇ ರೀತಿಯ ಭಿನ್ನಭಿಪ್ರಾಯವಿಲ್ಲದ ತಟಸ್ಥ ಸಂಬಂಧವಿದೆ.

    ಕಳೆದ ಲೋಕಸಭಾ ಚುನಾವಣೆಯ ರಾಜ್ಯ ಉಸ್ತುವಾರಿಯಾಗಿದ್ದ ಸುನೀಲ್ ಕುಮಾರ್, ವಿಜಯೇಂದ್ರ ಜೊತೆ ಯಾವುದೇ ವಿವಾದ ಇಲ್ಲದೆ ಕಾರ್ಯನಿರ್ವಹಿಸಿದ್ದರು. ಇನ್ನೂ ಬಣ ಬಡಿದಾಟದ ವಿಷಯದಲ್ಲಿ ಸುನೀಲ್ ಕುಮಾರ್ ಯಾರ ಬಣಕ್ಕೂ ಸೇರಿಕೊಂಡಿಲ್ಲ. ಆದರೆ ಇದೀಗ ತಮ್ಮನ್ನು ಪ್ರ‍್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿರುವುದು ಕೂತುಹಲ ಮೂಡಿಸಿದೆ.

    ಸದ್ಯ ಈ ಕುರಿತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ವಿಜಯೇಂದ್ರ ಮಾಹಿತಿ ನೀಡಿದ್ದು, ಈ ಸಂಬಂಧ ಪಕ್ಷ ಯಾವುದೇ ರೀತಿಯ ನಿರ್ಧಾರವನ್ನು ಕೈಗೊಂಡಿಲ್ಲ.ಇದನ್ನೂ ಓದಿ: ಸೈಫ್‌ ಮೇಲೆ ಹಲ್ಲೆ ಎಸಗಿದ ದಾಳಿಕೋರ ಬಾಂಗ್ಲಾ ಪ್ರಜೆ: ಮುಂಬೈ ಪೊಲೀಸ್‌

     

  • ಈಗಿನ ಸರ್ಕಾರ ಬಂದ್ಮೇಲೆ ಮತ್ತೆ ನಕ್ಸಲರ ಚಟುವಟಿಕೆಗಳು ಶುರುವಾಗಿದೆ – ಸುನೀಲ್ ಕುಮಾರ್

    ಈಗಿನ ಸರ್ಕಾರ ಬಂದ್ಮೇಲೆ ಮತ್ತೆ ನಕ್ಸಲರ ಚಟುವಟಿಕೆಗಳು ಶುರುವಾಗಿದೆ – ಸುನೀಲ್ ಕುಮಾರ್

    ಬೆಂಗಳೂರು: ಈಗಿನ ಸರ್ಕಾರ ಬಂದ್ಮೇಲೆ ಮತ್ತೆ ನಕ್ಸಲರ ಚಟುವಟಿಕೆಗಳು ಶುರುವಾಗಿದೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ (Sunil Kumar) ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮತ್ತು ಪೊಲೀಸರ ಕಾರ್ಯಚರಣೆಯನ್ನು ಸ್ವಾಗತ ಮಾಡುತ್ತೇನೆ. ಅನೇಕ ವರ್ಷಗಳಿಂದ ನಕ್ಸಲ್ ಚಟುವಟಿಕೆಗಳು ಸ್ತಬ್ದವಾಗಿತ್ತು. ಆದರೆ ಕಳೆದ ಒಂದೂವರೆ ವರ್ಷದಿಂದ ಮತ್ತೆ ನಕ್ಸಲ್ ಚಟುವಟಿಕೆಗಳು ಶುರುವಾಗಿದೆ. ನಗರ ನಕ್ಸಲ್‌ಗಳು ಸಹ ಇದ್ದಾರೆ. ಕಾಡಿನಲ್ಲಿ ಕೂತು ಬಂದೂಕು ಹಿಡಿದು ಕಾರ್ಯಚರಣೆ ಮಾಡುವವರು ಇದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ನಕ್ಸಲ್ ಚಟುವಟಿಕೆಯನ್ನು ಮಟ್ಟ ಹಾಕಿದ್ದೆವು. ಇವರೆಲ್ಲ ಹೊರ ರಾಜ್ಯಗಳಲ್ಲಿ ತಲೆಮರಿಸಿಕೊಂಡಿದ್ದರು. ಈಗಿನ ಸರ್ಕಾರ ಬಂದ್ಮೇಲೆ ಮತ್ತೆ ತಮ್ಮ ಚಟುವಟಿಕೆಗಳನ್ನು ಮಾಡಲು ಬಂದಿದ್ದಾರೆ. ನಗರ ನಕ್ಸಲ್‌ಗಳ ಚಟುವಟಿಕೆಗಳನ್ನ ಸರ್ಕಾರ ಗಮನಿಸಬೇಕು. ವಿಶ್ವವಿದ್ಯಾಲಯ, ಸಾಹಿತಿಗಳು ಎಂದು ಹೇಳಿಕೊಳ್ಳುವವರು, ಬುದ್ಧಿ ಜೀವಿಗಳು ಈ ನಕ್ಸಲ್ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಾರೆ ಎಂದರು.ಇದನ್ನೂ ಓದಿ: ಕ್ಷೇತ್ರದ ಅಭಿವೃದ್ಧಿಗೆ ಅನುದಾನವೇ ಸಿಗುತ್ತಿಲ್ಲ: ಸರ್ಕಾರದ ವಿರುದ್ಧವೇ ಕೈ ಶಾಸಕ ಗವಿಯಪ್ಪ ಆಕ್ರೋಶ

    ನಕ್ಸಲರ ಮಟ್ಟ ಹಾಕಬೇಕು. ಕ್ಷಮೆ ಕೋರಿ ಬರುವ ವಿಚಾರದಲ್ಲಿ ಸರ್ಕಾರ ಚರ್ಚೆ ಮಾಡಬೇಕು. ನಕ್ಸಲ್ ಚಟುವಟಿಕೆಯನ್ನ ಮತ್ತೆ ನಗರಕ್ಕೆ ಬಂದು ಮುಂದುವರಿಸುವವರಿದ್ದಾರೆ. ಅದರ ಬಗ್ಗೆ ನಿಗಾವಹಿಸಬೇಕು. ನಕ್ಸಲ್ ನಿಗ್ರಹ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕು ಎಂದು ತಿಳಿಸಿದರು.

    ವಿಜಯನಗರ (Vijayanagar) ಶಾಸಕ ಗವಿಯಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಶಾಸಕರಿಗೆ ಮಾತ್ರ ಅನುದಾನ ನೀಡುತ್ತಿಲ್ಲ ಅಂದುಕೊಂಡಿದ್ದೆ. ರಾಜ್ಯದ 224 ಕ್ಷೇತ್ರದ ಅಭಿವೃದ್ಧಿಗೆ ಈ ಸರ್ಕಾರ ಒಂದು ರೂಪಾಯಿ ನೀಡುತ್ತಿಲ್ಲ. ಅವರ ಶಾಸಕರೇ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯಾಗುತ್ತಿದೆ. ಉಡುಪಿ, ಕಾರ್ಕಳ, ಮೂಡಿಗೆರೆ ಸೇರಿದಂತೆ ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳು ಆಗಿದೆ. ಇನ್ನೂ ಅಭಿವೃದ್ಧಿ ಕೆಲಸಗಳನ್ನ ಸರ್ಕಾರ ಮಾಡಬೇಕು. ಅದಕ್ಕಾಗಿ ವಿಶೇಷ ಪ್ಯಾಕೇಜ್ ನೀಡಬೇಕು. ಆದರೆ ಇವರು ಒಂದೇ ಒಂದು ಅಭಿವೃದ್ಧಿ ಕಾರ್ಯಕ್ರಮದ ಶಂಕುಸ್ಥಾಪನೆಯನ್ನು ಇಲ್ಲಿಯವರೆಗೆ ಮಾಡಿಲ್ಲ. ಈ ಸರ್ಕಾರ ಹಗರಣಗಳಲ್ಲಿ, ಭ್ರಷ್ಟಾಚಾರದಲ್ಲಿ ಮುಳುಗಿದೆ. ಎರಡು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯವನ್ನೂ ಮಾಡಿಲ್ಲ ಎಂದು ಆಗ್ರಹಿಸಿದರು.ಇದನ್ನೂ ಓದಿ: ಮಸ್ಕ್‌ ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಇಸ್ರೋ ಉಪಗ್ರಹ ಉಡಾವಣೆ ಯಶಸ್ವಿ

  • ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ: ಮೀಸಲಾತಿ ರದ್ದು ಮಾಡಲು ಬಿಜೆಪಿ ಬಿಡುವುದಿಲ್ಲ- ಸುನಿಲ್ ಕುಮಾರ್

    ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ: ಮೀಸಲಾತಿ ರದ್ದು ಮಾಡಲು ಬಿಜೆಪಿ ಬಿಡುವುದಿಲ್ಲ- ಸುನಿಲ್ ಕುಮಾರ್

    ಚಿಕ್ಕಮಗಳೂರು: ತಲತಲಾಂತರದಿಂದ ಮೀಸಲಾತಿ ಮೂಲಕ ಏಳಿಗೆ ಕಂಡ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯವು ಮೀಸಲಾತಿ ರದ್ದತಿ ಕುರಿತ ರಾಹುಲ್ ಗಾಂಧಿಯವರ (Rahul Gandhi) ಹೇಳಿಕೆಯಿಂದ ಗಾಬರಿಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ (Sunil Kumar) ತಿಳಿಸಿದರು.

    ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದಿದ್ದರೆ ಮೀಸಲಾತಿಯನ್ನು ರದ್ದು ಮಾಡುತ್ತಿತ್ತೋ ಎಂಬಷ್ಟು ಆತಂಕ ನಿರ್ಮಾಣವಾಗಿದೆ. ಈ ಹೇಳಿಕೆಯನ್ನು ಖಂಡಿಸುತ್ತೇವೆ. ಮೀಸಲಾತಿಯನ್ನು ರದ್ದು ಮಾಡಲು ಬಿಜೆಪಿ (BJP) ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ಶಿಮ್ಲಾದಲ್ಲಿ ಅಕ್ರಮ ಮಸೀದಿ ನಿರ್ಮಾಣ ವಿಚಾರ – ಸ್ಥಳೀಯರು, ಪೊಲೀಸರ ನಡುವೆ ಗಲಾಟೆ

    ಮೀಸಲಾತಿಗೆ ನಾವು ಇವತ್ತು ಕೂಡ ಬದ್ಧರಿದ್ದೇವೆ. ಅದು ಮುಂದುವರೆಯಲಿದೆ. ರಾಹುಲ್ ಗಾಂಧಿಯವರ ಹೇಳಿಕೆಯನ್ನು ಈ ದೇಶದ ಜನರು ಸಮರ್ಥಿಸಲು ಸಾಧ್ಯವಿಲ್ಲ. ರಾಹುಲ್ ಅವರು ದೇಶದ ಜನರಿಗೆ ಕ್ಷಮೆಯಾಚಿಸಬೇಕು. ಕಾಂಗ್ರೆಸ್ ಮೀಸಲಾತಿ ವಿರೋಧಿ ಎಂಬ ವಿಷಯವನ್ನು ಇಟ್ಟುಕೊಂಡು ನಾಳೆಯಿಂದ ಇಡೀ ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಯನ್ನು ಮಾಡಲು ಕರೆ ಕೊಡಲಾಗಿದೆ ಎಂದು ತಿಳಿಸಿದರು.

    ರಾಹುಲ್ ಗಾಂಧಿಯವರು ಅಮೆರಿಕದಿಂದ ವಾಪಸ್ ಬರುವುದರ ಒಳಗೆ ಕಾಂಗ್ರೆಸ್ ಇದಕ್ಕೆ ಪಶ್ಚಾತ್ತಾಪದ ಹೇಳಿಕೆ ಬಿಡುಗಡೆ ಮಾಡಬೇಕು. ಮೀಸಲಾತಿಗೆ ಸಂಬಂಧಿಸಿ ಕಾಂಗ್ರೆಸ್ ಇಲ್ಲಿಯವರೆಗೆ ಕೇವಲ ಮೊಸಳೆ ಕಣ್ಣೀರನ್ನು ಸುರಿಸಿದೆ. ಸಂವಿಧಾನದ ಕುರಿತು ಕಾಂಗ್ರೆಸ್ ಕೇವಲ ಭಾಷಣ ಮಾಡಿದೆ. ಕೈಯಲ್ಲಿ ಸಂವಿಧಾನದ ಪುಸ್ತಕ ಮಾತ್ರ ಹಿಡಿದುಕೊಂಡಿದ್ದರು. ಆದರೆ ಮನಸ್ಸಿನಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಯನ್ನೇ ಮಾಡಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.ಇದನ್ನೂ ಓದಿ: ಟಾಟಾ ನೆಕ್ಸಾನ್ EV ಬೆಲೆ 3 ಲಕ್ಷ ರೂಪಾಯಿ ಕಡಿತ

  • Toxic: ಯಶ್ ಚಿತ್ರದಲ್ಲಿ 7.8 ಅಡಿ ಎತ್ತರದ ನಟ ಸುನೀಲ್ ಕುಮಾರ್ ಎಂಟ್ರಿ

    Toxic: ಯಶ್ ಚಿತ್ರದಲ್ಲಿ 7.8 ಅಡಿ ಎತ್ತರದ ನಟ ಸುನೀಲ್ ಕುಮಾರ್ ಎಂಟ್ರಿ

    ಶ್ (Yash) ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ.  7.8 ಅಡಿ ಎತ್ತರದ ನಟ ಸುನೀಲ್ ಕುಮಾರ್ ಅವರು ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾಗಾಗಿ ಕೈಜೋಡಿಸಿದ್ದಾರೆ. ರಾಕಿ ಬಾಯ್‌ಗಾಗಿ ಮತ್ತೊಮ್ಮೆ ಕನ್ನಡಕ್ಕೆ ಬರಲಿದ್ದಾರೆ. ಇದನ್ನೂ ಓದಿ:ಬೆಂಗಳೂರು ಹೋಟೆಲ್‌ನಲ್ಲಿ ನಟನಿಗೆ ನಿರ್ಮಾಪಕ ರಂಜಿತ್ ಲೈಂಗಿಕ ಕಿರುಕುಳ- ದೂರು ದಾಖಲು

    ‘ದಿ ಗ್ರೇಟ್ ಕಲಿ ಆಫ್ ಜಮ್ಮು’ ಅಂತ ಕರೆಸಿಕೊಳ್ಳುವ ಸುನೀಲ್ ಕುಮಾರ್ ಅವರು ಯಶ್ ಸಿನಿಮಾದಲ್ಲಿ ನಟಿಸುವ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ಅವರೇ ರಿವೀಲ್ ಮಾಡಿದ್ದಾರೆ. ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸೋ ಬಗ್ಗೆ ಮಾತುಕತೆ ನಡೆಯುತ್ತಿದೆ ಅಂತಲೇ ಹೇಳಿಕೊಂಡಿದ್ದಾರೆ. ವಿಲನ್‌ ಪಾತ್ರನಾ? ಅಥವಾ ಯಾವ ಪಾತ್ರಕ್ಕಾಗಿ ಎಂಬುದನ್ನು ನಟ ರಿವೀಲ್‌ ಮಾಡಿಲ್ಲ.

     

    View this post on Instagram

     

    A post shared by Sunil kumar (@sunil_kumar81_)

    ಇನ್ನೂ ‘ಟಾಕ್ಸಿಕ್’ ಸಿನಿಮಾಗೂ ಮುನ್ನ ಈಗಾಗಲೇ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಚಿಕ್ಕಣ್ಣ ನಟನೆಯ ‘ಫಾರೆಸ್ಟ್’ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನೇ ಸುನೀಲ್‌ ಕುಮಾರ್ ಮಾಡಿದ್ದಾರೆ.

    ಅಂದಹಾಗೆ, ಸುನೀಲ್ ಕುಮಾರ್ ಅವರು ‘ಸ್ತ್ರೀ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಎದುರು ಖಡಕ್ ವಿಲನ್ ಆಗಿ ನಟಿಸಿದ್ದಾರೆ. ಸರ್ಕಟ ಎಂಬ ಅವರ ಹೆಸರಿನ ಪಾತ್ರ ಫೇಮಸ್ ಆಗಿದೆ. ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಿಂದ ‌ಅವರಿಗೆ ಆಫರ್‌ಗಳು ಅರಸಿ ಬರುತ್ತಿವೆ.

  • ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತ್ರ ಹೈಕಮಾಂಡ್ ತೀರ್ಮಾನ ಏನು ಗೊತ್ತಿಲ್ಲ – ಸತೀಶ್ ಜಾರಕಿಹೋಳಿ

    ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತ್ರ ಹೈಕಮಾಂಡ್ ತೀರ್ಮಾನ ಏನು ಗೊತ್ತಿಲ್ಲ – ಸತೀಶ್ ಜಾರಕಿಹೋಳಿ

    ಬೆಂಗಳೂರು: ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ನಂತರ ಹೈಕಮಾಂಡ್ ತೀರ್ಮಾನ ಏನು ಅನ್ನೋದು ಗೊತ್ತಿಲ್ಲ ಮುಂದೆ ತೀರ್ಮಾನ ಮಾಡುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ‌ (Satish Jarkiholi) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸಿಎಂ, ಡಿಸಿಎಂ ದೆಹಲಿ ಭೇಟಿ ನಮಗೆ ಅಷ್ಟೊಂದು ಗೊತ್ತಿಲ್ಲ ವಿಷ್ಯ ಏನೂ ಗೊತ್ತಿಲ್ಲ. ಸಾಮಾನ್ಯವಾಗಿ ಇಲ್ಲಿ ನಡೀತಿರೋ ವಿಚಾರವನ್ನ ಹೈಕಮಾಂಡ್ ಗಮನಕ್ಕೆ ತರೋ ಕೆಲಸ ಆಗ್ತಿದೆ. ಅದೇ ಕಾರಣಕ್ಕೆ ದೆಹಲಿಗೆ ಹೋಗಿದ್ದಾರೆ. ಪ್ರಾಸಿಕ್ಯೂಷನ್ (Prosecution) ನಂತ್ರ ಹೈಕಮಾಂಡ್ ತೀರ್ಮಾನ ಏನು? ಎಂಬ ವಿಚಾರದ ಬಗ್ಗೆ ಯಾವುದೇ ಕ್ಲಾರಿಫಿಕೇಷನ್ ಬಂದಿಲ್ಲ. ಕೋರ್ಟ್ ನಲ್ಲಿ ಆದೇಶ ಬಂದ್ಮೇಲೆ ಮುಂದಿನ ತೀರ್ಮಾನ. ಇಂಡಿಯಾ ಒಕ್ಕೂಟ ‌ಏನು ತೀರ್ಮಾನ ಕೈಗೊಳ್ಳುತ್ತದೆ ನೋಡಬಹುದು. ಬೇರೆ ಕಡೆ ಕೂಡ ಈ ರೀತಿ ಕೆಲಸ ಆಗ್ತಿವೆ ಎಂದು ಹೇಳಿದ್ದಾರೆ.

    ಹಲವು ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಸರ್ಕಾರಗಳ ನಡುವೆ ಸಂಘರ್ಷ ನಡೆದಿವೆ. ತಮಿಳುನಾಡು, ಬಂಗಾಳ ಸೇರಿ ನಮ್ಮ ರಾಜ್ಯದಲ್ಲೂ ನಡೀತಿದೆ. ರಾಜ್ಯಪಾಲರು ಬಿಲ್ ವಾಪಸ್ ಕಳಿಸಿದ್ದಾರೆ. ಕೆಲ ಬಿಲ್‌ಗಳನ್ನ ವಾಪಸ್ ಕಳಿಸಿದ್ದಾರೆ. ಅವರು ಬಿಲ್ ಕುರಿತು ಸ್ಪಷ್ಟನೆ ಕೇಳೋಕೆ ಹಕ್ಕಿದೆ. ಅದನ್ನ ಸರ್ಕಾರ ಕೂಡ ಉತ್ತರ ಕೊಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಾಖಲೆಗಳ ನಾಶ ಪಡಿಸಲು ವೈಟ್ನರ್ ಹಚ್ಚಿದ್ದು ಯಾರು? – ನಾವು ಸರ್ಕಾರ ಬೀಳಿಸಲ್ಲ: ಸಿಎಂ ವಿರುದ್ಧ ಸುನೀಲ್ ಕುಮಾರ್ ಕಿಡಿ

    ಇನ್ನೂ ಸರ್ಕಾರ ಅಸ್ಥಿರ‌ಗೊಳಿಸುವ ಕುರಿತು ಮಾತನಾಡಿ, ಸರ್ಕಾರ ಅಸ್ಥಿರ ಗೊಳಿಸೋ‌ ವಿಚಾರದ ಬಗ್ಗೆ ಸಿಎಂ ಹೇಳಿದ್ದಾರೆ. ಹಿಂದೆಯಿಂದಲೂ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಆದ್ರೆ ಯಾವುದೇ ಬದಲಾವಣೆ ಆಗಲ್ಲ. 6 ಗಳಿಗೊಮ್ಮೆ‌ ಸರ್ಕಾರ ಬೀಳಿಸೋ ವಿಚಾರ ಮುನ್ನಲೆಗೆ ಬರುತ್ತಿರುತ್ತೆ. ಮುಂದಿನ 4 ವರ್ಷಗಳ ಕಾಲ ನಮ್ಮದೇ ಸರ್ಕಾರ ಅಲ್ಲಿವರೆಗೆ ಬೀಳಿಸುವ ಪ್ರಯತ್ನ ನಡೆಯುತ್ತಲೇ ಇರುತ್ತೆ ಎಂದಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಕಪ್ಪುಚುಕ್ಕಿ ತರುವ ಸುಳ್ಳು ಆರೋಪಕ್ಕೆ‌ ರಾಜ್ಯಪಾಲರ ಸಮ್ಮತಿ: ಸಚಿವ ಎಂ.ಬಿ.ಪಾಟೀಲ್

  • ದಾಖಲೆಗಳ ನಾಶ ಪಡಿಸಲು ವೈಟ್ನರ್ ಹಚ್ಚಿದ್ದು ಯಾರು? – ನಾವು ಸರ್ಕಾರ ಬೀಳಿಸಲ್ಲ: ಸಿಎಂ ವಿರುದ್ಧ ಸುನೀಲ್ ಕುಮಾರ್ ಕಿಡಿ

    ಬೆಂಗಳೂರು: ಆರೋಪ ಬಂದ ಮೇಲೆ ರಾಜೀನಾಮೆ ಕೋಡಬೇಕಿತ್ತು. ಆದ್ರೆ ಕುರ್ಚಿಗೆ ಅಂಟಿಕೊಡು ಸಿಎಂ (Chief Minister) ಕೂತ್ಕೊಂಡು ರಾಜ್ಯಪಾಲರ ಮೇಲೆ ಗೂಬೆ ಕೂರಿಸೋದನ್ನ ಬಿಡಬೇಕು ಅಂತಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ (Sunil Kumar) ಕಿಡಿ ಕಾರಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ (BJP Office) ಮಾತನಾಡಿದ ಅವರು, ಮೊದಲು ರಾಜೀನಾಮೆ ಕೊಟ್ಟು ತನಿಖೆ ಎದರಿಸಲಿ, ನಂತರ ಅದರಲ್ಲಿ ತಪ್ಪಿಲ್ಲ ಅಂದರೆ ಮತ್ತೆ ಸಿಎಂ ಆಗಲಿ. ಇನ್ನೂ ನಾವು ಯಾವುದೇ ಅಪರೇಷನ್ ಕಮಲಕ್ಕೆ ಕೈ ಹಾಕಿಲ್ಲ ಕೈ ಹಾಕೋದು ಇಲ್ಲ. ಅವರರವರ ಒಳಗಿನ ಮತ್ತೆ ಭ್ರಷ್ಟಾಚಾರ ಮುಚ್ಚಿ ಕೊಳ್ಳಲು ಈ ಹೇಳಿಕೆ ಕೊಡ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವ ಅಂತಹ ಪ್ರಯತ್ನ ಬಿಜೆಪಿ ಮಾಡಲ್ಲ ಅಂತ ಹೇಳಿದರು. ಇದನ್ನೂ ಓದಿ: ಟೀಚರ್ ಹೊಡೆದ್ರು ಅಂತಾ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ – ಶಾಲಾ ಬಿಲ್ಡಿಂಗ್‌ನ 3ನೇ ಫ್ಲೋರ್‌ನಿಂದ ಏಕಾಏಕಿ ಜಿಗಿದ ವಿದ್ಯಾರ್ಥಿನಿ!

    ಕಾಂಗ್ರೆಸ್ ಸರ್ಕಾರದಲ್ಲಿ (Karnataka Government) ಅಸ್ಥಿರತೆ ಕಾಣ್ತಿದೆ. ಸ್ವತಃ ಸಿಎಂ ತಮ್ಮ ಕುರ್ಚಿ ಉಳಿಸಿಕೊಳ್ಳಲು ಜನ ಕಲ್ಯಾಣದ ಯೋಜನೆಗಳ ಕೈ ಬಿಟ್ಟಿದ್ದಾರೆ. ಯಾವುದೇ ಜಿಲ್ಲೆಗಳಲ್ಲೂ ಸಚಿವರು ಪ್ರವಾಸ ಸಭೆಗಳನ್ನು ನಡೆಸ್ತಿಲ್ಲ. ಜನರ ಬವಣೆಗಳನ್ನು ಕೇಳದಿರುವ ಪರಿಸ್ಥಿತಿ ಇದೆ. ಆಡಳಿತ ಪಕ್ಷದ ಸದಸ್ಯರೇ ಬೇರೆ ಬೇರೆ ಪ್ರತಿಭಟನೆ ಮಾಡ್ತಿದ್ದಾರೆ. ಜನರ ಬಗ್ಗೆ ಯೋಚನೆ ಮಾಡದಿರುವುದು ಅತ್ಯಂತ ಶೋಚನೀಯ ಸ್ಥಿತಿ ಅಂತಾ ಟೀಕಿಸಿದರು. ಆದ್ರೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ಗೆ ವರದಿ ಕೊಡಲು ಸಿಎಂ ದೆಹಲಿಗೆ ತೆರಳಿದ್ದಾರೆ.

    ಸಿಎಂ ರಾಜ್ಯದ ಜನರ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಮೈಸೂರಿನಲ್ಲಿರುವ ಜಮೀನನ್ನು ಹೇಗೇ ಅಕ್ರಮವಾಗಿ ತಮ್ಮ ಬಾಮೈದನಿಗೆ ರಿಜಿಸ್ಟರ್ ಮಾಡಿಸಿಕೊಂಡ್ರು? ದಾಖಲೆಗಳ ನಾಶ ಪಡಿಸಲು ವೈಟ್ನರ್ ಹಚ್ಚಿದ್ದು ಯಾರು? ಇಷ್ಟು ದೊಡ್ಡ ಪ್ರಮಾಣದ ಹಗರಣ ಆಗ್ತಿದ್ರು ಸಿಎಂ ಯಾಕೇ ಕೈ ಕಟ್ಟಿಕೊಂಡು ಕುಳಿತುಕೊಂಡಿದ್ಸಾರೆ?ವಾಲ್ಮೀಕಿ ಹಗರಣದಲ್ಲಿ ತನಿಖೆ ಮಾಡ್ತಾ ಮಾಡ್ತಾ ಚಾರ್ಜ್ ಶೀಟ್ ನಲ್ಲಿ ಯಾಕೇ ಸಚಿವರು, ಶಾಸಕರ ಹೆಸರನ್ನು ಕೈ ಬಿಟ್ರಿ? ನಾವು ದಲಿತರ ಪರ ಎಂದು ಏಕೆ ಹೇಳ್ತಿದ್ದೀರಿ? ಇದಕ್ಕೆಲ್ಲಾ ಸ್ವತಃ ತಾವೇ ಉತ್ತರವನ್ನು ಕೊಡಬೇಕು ಅಂತಾ ಆಗ್ರಹಿಸಿದ್ರು. ಇದನ್ನೂ ಓದಿ: ಸರ್ಕಾರದ ಎಲ್ಲಾ ಇಲಾಖೆಗಳ ನಾಮಫಲಕವನ್ನ ಕಡ್ಡಾಯವಾಗಿ ಕನ್ನಡದಲ್ಲೇ ಪ್ರದರ್ಶಿಸಬೇಕು – CS ಆದೇಶ

    ಸರ್ಕಾರವನ್ನು ಬೀಳಿಸ್ತೀವಿ ಅಂತಾ ನಾವು ಯಾರು ಹೇಳಿಲ್ಲ. ಸರ್ಕಾರ ಉರುಳಿಸಲು ನಿಮ್ಮ ಪಾರ್ಟಿಯಿಂದಲೇ ನಡೆದಿದ್ಯಾ? ಸಿದ್ದರಾಮಯ್ಯ ಇಳಿದ್ರೆ ಕಾಂಗ್ರೆಸ್‌ನಲ್ಲಿ ಮತ್ತೊಬ್ಬ ಸಿಎಂ ಆಗುವ ಅರ್ಹತೆ ಇಲ್ಲವಾ? ನಿಮ್ಮ ಮಾತು ನೋಡಿದ್ರೆ ರಾಜ್ಯದ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಬಿಟ್ಟರೆ, ಮತ್ತೊಬ್ಬ ಪರ್ಯಾಯ ಸಿಎಂ ಆಗುವ ಅರ್ಹತೆ ಇಲ್ಲ ಅಂತಾ ವಾಗ್ದಾಳಿ ನಡೆಸಿದ್ರು. ಬಿಲ್‌ಗಳನ್ನ ವಾಪಸ್‌ ಕಳುಹಿಸಿದ್ದಾರೆಂದು ಗವರ್ನರ್ ಬಗ್ಗೆ ಮಂತ್ರಿಗಳು ಎಲ್ಲೆ ಮೀರಿ ಮಾತಾಡ್ತಿದ್ದಾರೆ. ಹಿಂದೆಯೂ ಗವರ್ನರ್‌ಗಳು ವಿಧೇಯಕ ವಾಪಸ್ಸು ಕಳುಹಿಸಿರುವ ಉದಾಹರಣೆಗಳಿವೆ. ಯಾವ ವಿಧೇಯಕ ಜನಪರವಾಗಿ ಇರುತ್ತೋ ಅದನ್ನು ಗವರ್ನರ್ ಅಂಗೀಕಾರ ಮಾಡಿ ಕಳುಹಿಸ್ತಾರೆ. ಯಾವುದಾದರೂ ಅನುಮಾನ ಇದ್ದರೇ ಏಕ ಪಕ್ಷೀಯವಾಗಿ ಇರಬಹುದು ಅಂತಾ ವಾಪಸ್ಸು ಕಳುಹಿಸ್ತಾರೆ. ಇದೇನೂ ಮೊದಲ ಬಾರಿಯಾಗಿ ಅಲ್ಲ. ಗವರ್ನರ್ ಸಂವಿಧಾನ ಬದ್ಧವಾಗಿ ನಡೆಯುತ್ತಿದ್ದಾರೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಮಾತಾಡ್ತಿರೋದು ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ ಅಂತಾ ಕಿಡಿಕಾರಿದ್ರು. ಇದನ್ನೂ ಓದಿ: ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ: ಸಿಎಂಗೆ ಹೈಕಮಾಂಡ್ ಅಭಯ