Tag: ಸುನೀಲ್

  • ಪ್ರಜ್ವಲ್‌ ದೇವರಾಜ್-‌ ಶ್ರುತಿ ಹರಿಹರನ್‌ ನಟನೆಯ ಸಿನಿಮಾದಲ್ಲಿ ‌’ಜೈಲರ್‌’ ಸುನೀಲ್

    ಪ್ರಜ್ವಲ್‌ ದೇವರಾಜ್-‌ ಶ್ರುತಿ ಹರಿಹರನ್‌ ನಟನೆಯ ಸಿನಿಮಾದಲ್ಲಿ ‌’ಜೈಲರ್‌’ ಸುನೀಲ್

    ‘ಜೈಲರ್’ (Jailer) ನಟ ಸುನೀಲ್‌ಗೆ (Sunil) ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಖತ್ ಬೇಡಿಕೆಯಿದೆ. 180ಕ್ಕೂ ಹೆಚ್ಚು ಸೌತ್ ಚಿತ್ರಗಳಲ್ಲಿ ನಟಿಸಿರುವ ಸುನೀಲ್ ಈಗ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರೆ. ಪ್ರಜ್ವಲ್ ದೇವರಾಜ್ ನಟನೆಯ ಸಿನಿಮಾದಲ್ಲಿ ‘ಜೈಲರ್’ ನಟ ಕಾಣಿಸಿಕೊಳ್ಳುತ್ತಿದ್ದಾರೆ.

    ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್‌ಗೆ ನಾಯಕಿಯಾಗಿ ಶ್ರುತಿ ಹರಿಹರನ್ (Shruthi Hariharan) ನಟಿಸಲಿದ್ದಾರೆ. ಈ ಚಿತ್ರಕ್ಕೆ ಸುನೀಲ್ ಅವರು ಎಂಟ್ರಿ ಕೊಡುತ್ತಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

    ಪ್ರಜ್ವಲ್ (Prajwal Devaraj) ನಟನೆಯ ಹೆಸರಿಡದ ಚಿತ್ರದಲ್ಲಿ ಸುನೀಲ್ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿಲ್ಲ. ಇದನ್ನೂ ಓದಿ:ಮತ್ತೆ ಆಸ್ಪತ್ರೆಗೆ ದಾಖಲಾದ ನಟಿ ಸಮಂತಾ

    ಸುದೀಪ್ ನಟನೆಯ ‘ಮ್ಯಾಕ್ಸ್’ (Max) ಚಿತ್ರದಲ್ಲಿ ಸುನೀಲ್ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಈ ಬಗ್ಗೆ ಅಧಿಕೃತ ಅಪ್‌ಡೇಟ್ ಹೊರಬೀಳಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರದಂಟು ಉದ್ಯಮಿ ಬೆನ್ನಿಗೆ ನಿಂತ ಅಶ್ವಿನಿ ಪುನೀತ್ ರಾಜ್ ಕುಮಾರ್

    ಕರದಂಟು ಉದ್ಯಮಿ ಬೆನ್ನಿಗೆ ನಿಂತ ಅಶ್ವಿನಿ ಪುನೀತ್ ರಾಜ್ ಕುಮಾರ್

    ಮೀನಘಡದ ಜನಪ್ರಿಯ ವಿಜಯ ಕರದಂಟು (Karadantu) ಸಂಸ್ಥೆಯ ಐದನೇ ಮಳಿಗೆ ಮೊನ್ನೆ ಮಲ್ಲೇಶ್ವರದಲ್ಲಿ ಪ್ರಾರಂಭವಾಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ (Ashwini Puneeth Rajkumar) ಈ ಮಳಿಗೆಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ಯುವ ಉದ್ಯಮಿಗಳ ಬೆನ್ನಿಗೆ ನಿಂತಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್.

    1907ರಲ್ಲಿ ಅಮೀನಘಡದಲ್ಲಿ ಪ್ರಾರಂಭವಾದ ವಿಜಯ ಕರದಂಟು ಇಂದು ರಾಜ್ಯಾದ್ಯಂತ 18 ಶಾಖೆಗಳನ್ನು ಹೊಂದಿದೆ. ಅಮೀನಘಡದಲ್ಲಿ ಪ್ರಾರಂಭವಾದ ಮಳಿಗೆ ಇಂದು ಬಾದಾಮಿ, ಐಹೊಳೆ, ಬಾಗಲಕೋಟೆ, ರಾಯಚೂರು, ಸಿಂಧನೂರು, ಇಳಕಲ್ಲು, ಹುಬ್ಬಳ್ಳಿ, ಬೆಂಗಳೂರು ಮುಂತಾದ ಊರುಗಳಲ್ಲಿವೆ. ಬೆಂಗಳೂರಿನಲ್ಲೇ ವಿಜಯನಗರ, ಮಲ್ಲೇಶ್ವರ, ಜಯನಗರ, ಡಿ.ವಿ.ಜಿ. ರಸ್ತೆ ಮತ್ತು ಮಲ್ಲೇಶ್ವರದಲ್ಲಿ ಮಳಿಗೆಗಳಿದ್ದು, ಈ ಸಂಸ್ಥೆಯನ್ನು ಕುಟುಂಬದ ನಾಲ್ಕನೇ ತಲೆಮಾರಿನವರಾದ ಸಂತೋಷ್​ (Santhosh) ಮತ್ತು ಸುನೀಲ್​ (Sunil) ಮುನ್ನಡೆಸುತ್ತಿದ್ದಾರೆ. ಇದನ್ನೂ ಓದಿ: ತೆರೆಗೆ ಅಪ್ಪಳಿಸಲು ಸಜ್ಜಾದ ರಕ್ಷಿತ್‌ ನಟನೆಯ `ಸಪ್ತಸಾಗರದಾಚೆ ಎಲ್ಲೋ’ ಚಿತ್ರ

    ‘ಪೌಷ್ಠಿಕ ಸಿಹಿತಿನಿಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರದಂಟಿಗೆ ಶುದ್ಧ ತುಪ್ಪ, ಸಾವಯವ ಬೆಲ್ಲ, ಗೋಡಂಬಿ, ಬಾದಾಮಿ, ಅಂಜೂರ, ಒಣಕೊಬ್ಬರಿ, ಗಸಗಸೆ, ಒಣದ್ರಾಕ್ಷಿ ಮುಂತಾದ ಪೌಷ್ಠಿಕ ಪದಾರ್ಥಗಳನ್ನು ಬೆರಸಿ ಮಾಡಲಾಗುತ್ತದೆ. ಹಿಂದೆ ಗರಡಿಮನೆ ಪೈಲ್ವಾನರ ಶಕ್ತಿ-ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರದಂಟನ್ನು ನೀಡಲಾಗುತ್ತಿತ್ತು. ಅಷ್ಟೇ ಅಲ್ಲ, ಗರ್ಭಿಣಿಯರಲ್ಲಿ ಪೌಷ್ಠಿಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಕರದಂಟನ್ನು ಕೊಡಲಾಗಿತ್ತು. ಆದರೆ, ಈಗ ಕರದಂಟು ಆರೋಗ್ಯಕರ ಸಿಹಿತಿನಿಸಾಗಿದ್ದು, ಎಲ್ಲ ವಯಸ್ಸಿನವರೂ ಸವಿಯಬಹುದಾಗಿದೆ’ ಎನ್ನುತ್ತಾರೆ ಸುನೀಲ್ ಮತ್ತು ಸಂತೋಷ್.

    ಇದರಲ್ಲಿ ಸಕ್ಕರೆ ಪ್ರಮಾಣ ಬಹಳ ಕಡಿಮೆ ಇರುವುದರಿಂದ ಮಧುಮೇಹ ಇರುವವರು ಸಹ ಯಾವುದೇ ಭಯವಿಲ್ಲದೆ ಈ ಸಿಹಿತಿನಿಸನ್ನು ತಿನ್ನಬಹುದಾಗಿದೆಯಂತೆ. ವಿಜಯ ಕರದಂಟು ಮಳಿಗೆಗಳಲ್ಲಿ ಕರದಂಟು ಅಲ್ಲದೆ ಕಾಜು, ಪೇಡ, ಬಂಗಾಲಿ ಸೇರಿದಂತೆ ಬೇರೆ ಸಿಹಿತಿನಿಸುಗಳು ಸಹ ಲಭ್ಯವಿದೆ ಎನ್ನುವುದು ಸುನೀಲ್ ಮಾತು.

  • Bigg Boss 9- ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶ್ ಸಾವು: ಬಿಗ್ ಬಾಸ್ ಮನೆಗೆ ಬರ್ತಾರಾ ನಟ ಸುನೀಲ್?

    Bigg Boss 9- ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶ್ ಸಾವು: ಬಿಗ್ ಬಾಸ್ ಮನೆಗೆ ಬರ್ತಾರಾ ನಟ ಸುನೀಲ್?

    ನ್ನಡದ ಫೇಮಸ್ ಧಾರಾವಾಹಿಯ (Serial) ಬಹುಮುಖ್ಯ ಪಾತ್ರವನ್ನು ದಿಢೀರ್ ಅಂತ ಸಾಯಿಸಲಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೆಂಡಸಂಪಿಗೆ (Kendasampige) ಧಾರಾವಾಹಿ ನೋಡಿದವರಿಗೆ ರಾಜೇಶ್ ಪಾತ್ರವನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಕಥಾ ನಾಯಕಿಯ ತಮ್ಮನಾಗಿ ರಾಜೇಶ್ (Rajesh) ಫೇಮಸ್. ಈ ಪಾತ್ರದ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದ ಧಾರಾವಾಹಿ ದಿಢೀರ್ ಅಂತ ರಾಜೇಶ್ ನನ್ನು ಬೀಳ್ಕೊಟ್ಟಿದೆ.

    ಕೆಂಡಸಂಪಿಗೆ ಕಥಾ ನಾಯಕಿಯ ಜೊತೆ ಸದಾ ಇರುತ್ತಿದ್ದ ರಾಜೇಶ್ ಪಾತ್ರವನ್ನು ಅಚ್ಚರಿ ಎನ್ನುವಂತೆ ಸಾಯಿಸಲಾಗಿದ್ದು, ಇದಕ್ಕೆ ಕಾರಣ ಆ ಹುಡುಗನನ್ನು ಬಿಗ್ ಬಾಸ್ (Bigg Boss Season 9) ಮನೆಗೆ ಕಳುಹಿಸುವ ಪ್ಲ್ಯಾನ್ ಮಾಡಲಾಗಿದೆಯಂತೆ. ಹಾಗಾಗಿ ಬೇಗನೆ ಪಾತ್ರವನ್ನು ಸಾಯಿಸಿ, ತರಾತುರಿಯಲ್ಲಿ ಈ ಪಾತ್ರವನ್ನು ಮಾಡುತ್ತಿದ್ದ ಸುನೀಲ್ (Sunil) ನನ್ನು ಬಿಗ್ ಬಾಸ್ ಸೀಸನ್ 9 ಕ್ಕೆ ಕಳುಹಿಸಿ ಕೊಡಲಾಗಿದೆ ಎನ್ನುವ ಮಾಹಿತಿ ಇದೆ. ಅದು ನಾಳೆ ಅಧಿಕೃತಗೊಳ್ಳಲಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಶನಿ (Shani) ಧಾರಾವಾಹಿಯ ಮೂಲಕ ಫೇಮಸ್ ಆದವರು ಸುನೀಲ್. ಈ ಧಾರಾವಾಹಿಯ ಮೂಲಕ ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ಸುನೀಲ್, ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿತ್ತು. ಇದೀಗ ಅವರು ನಿರ್ವಹಿಸುತ್ತಿದ್ದ ರಾಜೇಶ್ ಪಾತ್ರವನ್ನು ಸಾಯಿಸಿದ್ದಕ್ಕಾಗಿ ಸುದ್ದಿ ಮಹತ್ವ ಪಡೆದುಕೊಂಡಿದೆ. ನಾಳೆಯಿಂದ ಬಿಗ್ ಬಾಸ್ ಸೀಸನ್ 9 ಶುರುವಾಗಲಿದ್ದು, ಆ ಮನೆಯಲ್ಲಿ ಸುನೀಲ್ ಇರುತ್ತಾರಾ ಕಾದು ನೋಡಬೇಕು.

    ಬಿಗ್ ಬಾಸ್ ಸೀಸನ್ 9 ನಾಳೆಯಿಂದ ಶುರುವಾಗುತ್ತಿದ್ದು, ಈಗಾಗಲೇ ಹಲವು ಅಚ್ಚರಿಯ ಹೆಸರುಗಳು ಕೇಳಿ ಬಂದಿವೆ. ನಟಿ ಪ್ರೇಮಾ (Prema), ನವೀನ್ ಕೃಷ್ಣ ಸೇರಿದಂತೆ ಹಲವಾರು ನಟ ನಟಿಯರ ಹೆಸರು ಈ ಪಟ್ಟಿಯಲ್ಲಿವೆ. ಅಲ್ಲದೇ, ಬಿಗ್ ಬಾಸ್ ಓಟಿಟಿಯ ನಾಲ್ಕು ಸ್ಪರ್ಧಿಗಳು ಕೂಡ ಹೊಸ ಬಿಗ್ ಬಾಸ್ ಮನೆಯನ್ನು ಸೇರಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನಗೆ ಜೀವ ಭಯ ಇದೆ, ರಕ್ಷಣೆ ಕೊಡಿ- ಟ್ರಾಫಿಕ್ ಪೊಲೀಸ್ ಕಿರುಕುಳದಿಂದ ನೊಂದ ಸುನೀಲ್ ಅಳಲು

    ನನಗೆ ಜೀವ ಭಯ ಇದೆ, ರಕ್ಷಣೆ ಕೊಡಿ- ಟ್ರಾಫಿಕ್ ಪೊಲೀಸ್ ಕಿರುಕುಳದಿಂದ ನೊಂದ ಸುನೀಲ್ ಅಳಲು

    ಬೆಂಗಳೂರು: ನನಗೆ ಜೀವ ಭಯ ಇದೆ. ನಾನು ಸಾಯುವ ನಿರ್ಧಾರ ಮಾಡಿದ್ದೇನೆ. ನನಗೆ ರಕ್ಷಣೆ ಕೊಡಿ. ತಪ್ಪು ಯಾರದು ಇದೆಯೋ ಅವರಿಗೆ ಶಿಕ್ಷೆ ಕೊಡಿ ಎಂದು ಟ್ರಾಫಿಕ್ ಪೊಲೀಸ್ ನಿಂದ ನಿಂದನೆಗೊಳಗಾಗಿದ್ದ ಟಾಟಾಏಸ್ ಚಾಲಕ ಸುನೀಲ್ ಪಬ್ಲಿಕ್ ಟಿವಿ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ನಾನು ಮಾರ್ಕೆಟ್ ಕಡೆಯಿಂದ ಜೆಸಿ ರಸ್ತೆ ಕಡೆಗೆ ಹೋಗುತ್ತಿದ್ದೆ. ನಾನು ಯಾವುದೇ ರಾಂಗ್ ರೂಟಲ್ಲಿ ಹೋಗುತ್ತಿರಲಿಲ್ಲ. ಒನ್ ವೇ ನಲ್ಲಿ ಹೋಗು ಎಂದು ಹೇಳಿದ್ದೇ ಟ್ರಾಫಿಕ್ ಪೊಲೀಸ್. ಬೇರೋಬ್ಬ ಪೊಲೀಸ್ ಬಂದು ಏಕಾಏಕಿ ತಲೆ ಮೇಲೆ ಹೆಲ್ಮೆಟ್ ನಲ್ಲಿ ಹೊಡೆದರು. ನನ್ನದು ತಪ್ಪಿಲ್ಲ ಅಂದರೂ ಕೇಳದೇ ಕೆಟ್ಟಕೆಟ್ಟದಾಗಿ ಬೈದರು ಎಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

    ಇಷ್ಟು ಮಾತ್ರವಲ್ಲದೇ ಅಪರಿಚಿತರು ನಮ್ಮ ಮನೆಗೆ ಹೋಗಿ ತಾಯಿಗೂ ಧಮ್ಕಿ ಹಾಕಿದ್ದಾರೆ. ಚಾಲಕರಿಗೆ ಬೆಲೆನೇ ಇಲ್ವ. ನನಗೆ ಇನ್ನೂ ಜೀವ ಭಯ ಇದೆ ರಕ್ಷಣೆ ಬೇಕು. ನಾನು ಕಂಪ್ಲೆಂಟ್ ಮಾಡಿದ್ದೀನಿ. ನನಗೆ ನ್ಯಾಯ ಕೊಡಿಸಿ ಎಂದು ಸುನೀಲ್ ತಿಳಿಸಿದ್ದಾರೆ. ಇದನ್ನೂ ಓದಿ: ಮರ್ಯಾದೆ ಹೋಯ್ತು, ನಾನ್ ಮನೆಗೆ ಬರಲ್ಲ – ಹಲ್ಲೆಗೊಳಗಾಗಿದ್ದ ಸುನೀಲ್ ಫೋನ್ ಸ್ವಿಚ್ ಆಫ್

    ಏನಿದು ಪ್ರಕರಣ..?
    ಚಾಲಕ ಸುನೀಲ್ ಅವರು ಶುಕ್ರವಾರ ಬಿಬಿಎಂಪಿ ಕಡೆಯಿಂದ ಟೌನ್ ಹಾಲ್ ಬಳಿ ಯೂಟರ್ನ್ ತೆಗೆದುಕೊಂಡರು ಎಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸರೊಬ್ಬರು ಥಳಿಸಿದ್ದರು. ಅಲ್ಲದೆ ಅವಾಚ್ಯ ಶಬ್ದಳಿಂದ ನಿಂದಿಸಿದ್ದರು. ಟ್ರಾಫಿಕ್ ಪೊಲೀಸ್ ಹಲ್ಲೆ ಹಾಗೂ ನಿಂದಿಸಿರುವುದನ್ನು ಸುನೀಲ್ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೀಡಾಗಿತ್ತು. ಟ್ರಾಫಿಕ್ ಪೊಲೀಸಪ್ಪನ ದೌರ್ಜನ್ಯವನ್ನು ಕಂಡ ಜಾಲತಾಣಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

    ಯೂಟರ್ನ್ ತೆಗೆದುಕೊಂಡ ಎಂಬ ಕಾರಣಕ್ಕೆ ವಾಹನ ಏರಿ ಚಾಲಕ ಸುನೀಲ್ ಪಕ್ಕ ಕುಳಿತ ಪೇದೆ ಮೊದಲಿಗೆ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವಂತೆ ಹೇಳಿದ್ದಾರೆ. ಈ ವೇಳೆ ಚಾಲಕ ಇಲ್ಲಿ ವಾಹನಗಳಿವೆ ಮುಂದೆ ನಿಲ್ಲಿಸುತ್ತೇನೆ ಎಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸ್, ತಾನೇ ವಾಹನದ ಸ್ಟೇರಿಂಗ್ ವ್ಹೀಲ್ ಹಿಡಿದು ಪಕ್ಕಕ್ಕೆ ಎಳೆಯು ಪ್ರಯತ್ನ ಮಾಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋ ವೈರಲ್ ಆದ ಬೆನ್ನಲ್ಲೇ ಸುನೀಲ್ ವಿರುದ್ಧವೇ ಟ್ರಾಫಿಕ್ ಪೊಲೀಸ್ ಎಫ್‍ಐಆರ್ ದಾಖಲು ಮಾಡಿದ್ದರು. ಆ ಬಳಿಕ ಜೀವ ಭಯದಿಂದ ಪರಾರಿಯಾಗಿದ್ದ ಚಾಲಕ ಸುನೀಲ್ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ 5 ದಿನಗಳ ಬಳಿಕ ಪ್ರತ್ಯಕ್ಷವಾಗಿದ್ದು, ಟ್ರಾಫಿಕ್ ಪೊಲೀಸರ ದೌರ್ಜನ್ಯದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಬಿಚ್ಚಿಟ್ಟಿದ್ದಾರೆ.

  • ಕಲಬುರಗಿಯಲ್ಲಿ ಸಿಕ್ತು ಹನುಮಂತನಿಗೆ ಭರ್ಜರಿ ಸ್ವಾಗತ

    ಕಲಬುರಗಿಯಲ್ಲಿ ಸಿಕ್ತು ಹನುಮಂತನಿಗೆ ಭರ್ಜರಿ ಸ್ವಾಗತ

    ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಇಂದು ಸಂತ ಸೇವಾಲಾಲ ಜಯಂತಿಯನ್ನು ಅದ್ಧೂರಿಯಾಗಿ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಸರಿಗಮಪ ಸೀಸನ್ 15ರ ರನ್ನರಪ್ ಹನುಮಂತ ಹಾಗೂ ಸೀಸನ್ 13ರ ಚಾಂಪಿಯನ್ ಸುನಿಲ್ ಗುಜಗುಂಡ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದರು.

    ಈ ಕಾರ್ಯಕ್ರಮಕ್ಕೆ ಹನುಮಂತ ಅವರೇ ಕೇಂದ್ರ ಬಿಂದುವಾಗಿದ್ದರು. ಹನುಮಂತ ಅವರನ್ನು ಪ್ರೀತಿಯಿಂದ ಅಭಿಮಾನಿಗಳು ಯಡ್ರಾಮಿ ಪಟ್ಟಣದ ಪ್ರಮುಖ ವೃತಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಗೌರವಿಸಿದರು. ಈ ಸಂದರ್ಭದಲ್ಲಿ ಸರಿಗಮಪ ಸೀಸನ್ 13ರಲ್ಲಿ ಚಾಂಪಿಯನ್ ಆಗಿದ್ದ ಸುನೀಲ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ವೇದಿಕೆಗೆ ಬರುತ್ತಿದ್ದಂತೆ ಮೈಕ್ ಹಿಡಿದ ಹನುಮಂತ ಅವರು ಹಾಡು ಹಾಡಿ ಜನರ ಮನಸ್ಸು ಗೆದ್ದಿದ್ದಾರೆ. ಇನ್ನು ಹನುಮಂತ ಸಹ ಬಂಜಾರಾ ಸಮುದಾಯದ ಜನಾಂಗಕ್ಕೆ ಸೇರಿದ್ದು, ಲಂಬಾಣಿ ಭಾಷೆಯಲ್ಲಿ ಸಹ ಹಾಡು ಹಾಡಿ ಜನರನ್ನು ರಂಜಿಸಿದ್ದಾರೆ. ಅದಾದ ಬಳಿಕ ಸುನೀಲ್ ಹನುಮಂತ ಅವರಿಗೆ ಸಾಥ್ ನೀಡಿದ್ದು, ಇಬ್ಬರ ಹಾಡಿಗೆ ನೆರೆದ ಜನ ವಿಸಿಲ್ ಹಾಕಿ ಭರಪೂರ ಎಂಜಾಯ್ ಮಾಡಿದ್ದಾರೆ.

    ಬಂಜಾರಾ ಸಮುದಾಯದ ವತಿಯಿಂದ ಹನುಮಂತ ಹಾಗು ಸುನೀಲ್ ಅವರನ್ನು ಶಾಲು ಹೊದಿಸಿ ಸಮುದಾಯದ ಮುಖಂಡರು ಸನ್ಮಾನಿಸಿ ಗೌರವಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣ- ಸ್ಪಾಟ್ ನಾಗ ಸೇರಿ 9 ಆರೋಪಿಗಳ ಬಂಧನ

    ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣ- ಸ್ಪಾಟ್ ನಾಗ ಸೇರಿ 9 ಆರೋಪಿಗಳ ಬಂಧನ

    – ಆಂಧ್ರದಲ್ಲಿ ಸೆರೆಸಿಕ್ಕ ಆರೋಪಿಗಳು

    ಬೆಂಗಳೂರು: ಬಸವೇಶ್ವರ ನಗರದಲ್ಲಿ ನಡೆದ ರೌಡಿ ಶೀಟರ್ ಸುನಿಲ್ ಕೊಲೆ ಪ್ರಕರಣ ಸಂಬಂಧ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಕೊಲೆ ಪ್ರಕರಣ ಸಂಬಂಧ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಆಂಧ್ರ ಮತ್ತು ಧರ್ಮಸ್ಥಳಕ್ಕೆ ಪೊಲೀಸರ ತಂಡ ತೆರಳಿತ್ತು. ಇನ್ನೆರಡು ತಂಡ ಬೆಂಗಳೂರಿನಲ್ಲಿಯೇ ಹುಡುಕಾಟ ಆರಂಭಿಸಿತ್ತು. ಆಂಧ್ರದಲ್ಲಿ ಗುರುವಾರ ರಾತ್ರಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ನಾಗರಾಜ ಅಲಿಯಾಸ್ ಸ್ಪಾಟ್ ನಾಗ ಸೇರಿ 9 ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ನಡೆದಿದ್ದೇನು?: ಕಳೆದ ಬುಧವಾರ ಬಸವೇಶ್ವರ ನಗರದಲ್ಲಿರೋ ಸುನಿಲ್ ಮನೆಗೆ ನುಗ್ಗಿದ ನಾಲ್ವರ ತಂಡ ಆತನನ್ನು ಮನೆಯಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೈದಿತ್ತು. ಬಳಿಕ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿತ್ತು. ಈ ವೇಳೆ ಸುನಿಲ್ ಪೋಷಕರಿಗೂ ಗಾಯಗಳಾಗಿತ್ತು.

    ಹಿಂದಿನ ದಾಳಿಗೆ ಸೇಡು: ಸ್ಪಾಟ್ ನಾಗನ ಮೇಲೆ ರೌಡಿ ಸುನಿಲ್ ಗ್ಯಾಂಗ್ 2016ರ ಮಾರ್ಚ್ ನಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಘಟನೆಯಿಂದ ಹೆಂಡತಿ ಮತ್ತು ಮಕ್ಕಳು ನಾಗನನ್ನು ತೊರೆದಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಸುನಿಲ್ 10 ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಬಿಡುಗಡೆಯಾದ ಬಳಿಕವೂ ನಾಗನನ್ನು ಕುಂಟ ಎಂದು ಲೇವಡಿ ಮಾಡುತ್ತಿದ್ದ. ಹಲ್ಲೆ ಮತ್ತು ಲೇವಡಿಯಿಂದ ಮನನೊಂದಿದ್ದ ನಾಗ ಒಂದು ವರ್ಷದ ಹಿಂದಿನ ದಾಳಿಗೆ ಸುನಿಲ್‍ನನ್ನು ಬುಧವಾರದಂದು ಕೊಲೆ ಮಾಡಿದ್ದ.

    https://www.youtube.com/watch?v=a3vmsD9DKZw

  • ಇದು ನೋಡಲಾಗದ, ಆದರೆ ಬೆಚ್ಚಿಬೀಳಿಸುವ ದೃಶ್ಯ: ಅಟ್ಟಾಡಿಸಿಕೊಂಡು ಎಳೆದಾಡಿ ಬರ್ಬರ ಹತ್ಯೆ

    ಇದು ನೋಡಲಾಗದ, ಆದರೆ ಬೆಚ್ಚಿಬೀಳಿಸುವ ದೃಶ್ಯ: ಅಟ್ಟಾಡಿಸಿಕೊಂಡು ಎಳೆದಾಡಿ ಬರ್ಬರ ಹತ್ಯೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗ್ಯಾಂಗ್ ವಾರ್ ಆರಂಭಗೊಂಡಿದ್ದು, ಬುಧವಾರ ಬೆಳ್ಳಂಬೆಳಗ್ಗೆ ರೌಡಿಯೊಬ್ಬನನ್ನು ಮತ್ತೊಂದು ಗ್ಯಾಂಗ್ ಹತ್ಯೆ ಮಾಡಿದೆ.

    ಸುನೀಲ್ ಹತ್ಯೆಯಾದ ರೌಡಿ ಶೀಟರ್. ಸ್ಪಾಟ್ ನಾಗನ ಗ್ಯಾಂಗ್ ಬಸವೇಶ್ವರನಗರದಲ್ಲಿ ನೆಲೆಸಿದ್ದ ಸುನೀಲ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದೆ.

    ಕೊಲೆ ಹೇಗಾಯ್ತು?
    ಬೆಳಗ್ಗೆ ಎಂಟು ಗಂಟೆ ವೇಳೆಗೆ ನಾಲ್ವರ ತಂಡದಿಂದ ಸುನೀಲ್ ಮನೆ ಮೇಲೆ ದಾಳಿ ನಡೆದಿದೆ. ಈ ವೇಳೆ ಒಳಗೆ ಹೋಗಿ ಬಾಗಿಲು ಹಾಕಿಕೊಂಡು ಪಾರಾಗಲು ರೌಡಿ ಸುನೀಲ್ ಯತ್ನಿಸಿದ್ದಾನೆ. ಈ ವೇಳೆ ಮನೆಯ ಬಾಗಿಲು ಒಡೆದು ಒಳನುಗ್ಗಿ ಹೊರಗಡೆ ಎಳೆದು ಸ್ಪಾಟ್ ನಾಗನ ಗ್ಯಾಂಗ್ ಕೊಲೆ ಮಾಡಿ ಪರಾರಿಯಾಗಿದೆ. ದಾಳಿ ವೇಳೆ ಸುನೀಲ್ ಪೋಷಕರಿಗೂ ಗಾಯವಾಗಿದೆ.

    ಹಳೆ ದಾಳಿಗೆ ಸೇಡು:
    ಸ್ಪಾಟ್ ನಾಗನ ಮೇಲೆ ರೌಡಿ ಸುನೀಲ್ ಗ್ಯಾಂಗ್ 2016ರ ಮಾರ್ಚ್ ನಲ್ಲಿ ಹಲ್ಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಈ ಘಟನೆಯಿಂದ ಹೆಂಡತಿ ಮತ್ತು ಮಕ್ಕಳು ನಾಗನನ್ನು ತೊರೆದಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿದ್ದ ಸುನೀಲ್ 10 ದಿನದ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಬಿಡುಗಡೆಯಾದ ಬಳಿಕವೂ ನಾಗನನ್ನು ಕುಂಟ ಎಂದು ಲೇವಡಿ ಮಾಡುತ್ತಿದ್ದ. ಹಲ್ಲೆ ಮತ್ತು ಲೇವಡಿಯಿಂದ ಮನನೊಂದಿದ್ದ ನಾಗ ಇಂದು ಒಂದು ವರ್ಷದ ಹಿಂದಿನ ದಾಳಿಗೆ ಸುನೀಲ್ ನನ್ನು ಕೊಲೆ ಮಾಡುವ ಮೂಲಕ ಸೇಡನ್ನು ತೀರಿಸಿಕೊಂಡಿದ್ದಾನೆ.

    https://www.youtube.com/watch?v=a3vmsD9DKZw