Tag: ಸುನೀತಾ ಕೇಜ್ರಿವಾಲ್

  • 24 ಗಂಟೆ ವಿದ್ಯುತ್‌ ಉಚಿತ, ಯುವಕರಿಗೆ ಉದ್ಯೋಗ ಖಚಿತ, ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. – ʻಕೇಜ್ರಿವಾಲ್‌ ಕಿ ಗ್ಯಾರಂಟಿʼ ಘೋಷಣೆ!

    24 ಗಂಟೆ ವಿದ್ಯುತ್‌ ಉಚಿತ, ಯುವಕರಿಗೆ ಉದ್ಯೋಗ ಖಚಿತ, ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. – ʻಕೇಜ್ರಿವಾಲ್‌ ಕಿ ಗ್ಯಾರಂಟಿʼ ಘೋಷಣೆ!

    ಚಂಡೀಗಢ: ಮುಂದಿನ ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ (Assembly Election) ಆಮ್‌ ಆದ್ಮಿ ಪಕ್ಷ ಹರಿಯಾಣದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದೆ. ಪ್ರಚಾರದ ವೇಳೆ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಮಾದರಿಯಲ್ಲೇ ಹಲವು ಉಚಿತ ಗ್ಯಾರಂಟಿಗಳನ್ನ (AAP Guarantees) ಘೋಷಣೆ ಮಾಡಿದೆ.

    ಹರಿಯಾಣದಲ್ಲಿಂದು ನಡೆದ ಆಮ್‌ ಆದ್ಮಿ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ʻಕೇಜ್ರಿವಾಲ್ ಕಿ ಗ್ಯಾರಂಟಿʼ (Kejriwal ki guarantees) ಘೋಷಣೆ ಮಾಡಿದ್ದಾರೆ. ಸುನೀತಾ ಕೇಜ್ರಿವಾಲ್ (Sunita Kejriwal), ಆಪ್ ಹಿರಿಯ ನಾಯಕ ಸಂಜಯ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದಂತೆ ಇತರ ಆಪ್‌ ನಾಯಕರು ಗ್ಯಾರಂಟಿ ಪತ್ರಗಳನ್ನ ಬಿಡುಗಡೆ ಮಾಡಿದ್ದಾರೆ.

    ಆಪ್‌ ಗ್ಯಾರಂಟಿ ಏನು?
    24 ಗಂಟೆ ಉಚಿತ ವಿದ್ಯುತ್‌ ಸರಬರಾಜು, ಪ್ರತಿಯೊಬ್ಬರಿಗೂ ಉಚಿತ ವೈದ್ಯಕೀಯ ಚಿಕಿತ್ಸೆ, ಮಕ್ಕಳಿಗೆ ಗುಣಮಟ್ಟದ ಉಚಿತ ಶಿಕ್ಷಣ, ನಿರುದ್ಯೋಗ ಯುವಕರಿಗೆ ಉದ್ಯೋಗ ಮತ್ತು ಮಹಿಳೆಯರಿಗೆ ಪ್ರತಿ ತಿಂಗಳು 1 ಸಾವಿರ ರೂ. ನೀಡುವುದಾಗಿ ಆಪ್‌ ಘೋಷಣೆ ಮಾಡಿದೆ.

    ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸುನೀತಾ ಕೇಜ್ರಿವಾಲ್‌, ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರ ದೆಹಲಿ ಮತ್ತು ಪಂಜಾಬ್‌ನಲ್ಲಿ ಅನೇಕ ಬದಲಾವಣೆಗಳನ್ನು ತಂದಿದೆ. ಮುಂದುವರಿದು ದೆಹಲಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸೂಚಿಸಿದ್ದಾರೆಂದು ತಿಳಿಸಿದಾರೆ.

    ಕೇಜ್ರಿವಾಲ್‌ ಹುಟ್ಟಿ ಬೆಳೆದಿದ್ದು ಹರಿಯಾಣದ ಹಿಸಾರ್‌ನಲ್ಲಿ. ಇಲ್ಲಿ ಹುಟ್ಟಿದ ಹುಡುಗನೊಬ್ಬ ರಾಷ್ಟ್ರ ರಾಜಧಾನಿಯನ್ನು ಆಳುತ್ತಾನೆ ಅಂತ ಯಾರೊಬ್ಬರು ಸಹ ಕನಸಿನಲ್ಲೂ ಊಹಿಸಿರಲಿಲ್ಲ. ಇದು ಯಾವುದೇ ಪವಾಡಕ್ಕಿಂತ ಕಡಿಮೆಯೇನಿಲ್ಲ. ಅವರು ಇನ್ನೂ ಏನಾದರೂ ಮಹತ್ಕಾರ್ಯ ಮಾಡಬೇಕು ಆ ದೇವರು ಬಯಸಿದ್ದಾನೆ ಎಂದು ಭಾವುಕರಾದರು.

    ಇದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ದೆಹಲಿ, ಹರಿಯಾಣ ಮತ್ತು ಗುಜರಾತ್‌ನ ಆಪ್‌ ಅಭ್ಯರ್ಥಿಗಳ ಪರ ಸಕ್ರೀಯವಾಗಿ ಪ್ರಚಾರ ಮಾಡಿದ್ದರು. ಇದೀಗ ಮುಂಬರುವ ವಿಧಾನಸಭಾ ಚುನಾವಣೆಗೆ ಹರಿಯಾಣದ ಎಲ್ಲಾ 90 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆಪ್‌ ನಿರ್ಧರಿಸಿದೆ.

  • ಕೇಜ್ರಿವಾಲ್ ಪತ್ನಿಗೆ ದೆಹಲಿ ಹೈಕೋರ್ಟ್ ಬಿಗ್ ರಿಲೀಫ್

    ಕೇಜ್ರಿವಾಲ್ ಪತ್ನಿಗೆ ದೆಹಲಿ ಹೈಕೋರ್ಟ್ ಬಿಗ್ ರಿಲೀಫ್

    ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಪತ್ನಿ ಸುನೀತಾ ಕೇಜ್ರಿವಾಲ್ (Sunita Kejriwal) ವಿರುದ್ಧ ತೀಸ್ ಹಜಾರಿ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ಗೆ ದೆಹಲಿ ಹೈಕೋರ್ಟ್ (High Court) ತಡೆ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಬನ್ಸಾಲ್ (Justice Amit Bansal) ಫೆಬ್ರವರಿ 1 ರವರೆಗೂ ಮಧ್ಯಂತರ ತಡೆ ನೀಡಿದ್ದಾರೆ.

    ಎರಡು ವಿಭಿನ್ನ ಕ್ಷೇತ್ರಗಳಿಗೆ ಮತದಾರರ ಪಟ್ಟಿಗೆ ಏಕಕಾಲದಲ್ಲಿ ಸೇರ್ಪಡೆಗೊಳ್ಳುವ ಮೂಲಕ 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ಹರೀಶ್ ಖುರಾನಾ ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ತೀಸ್ ಹಜಾರಿ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅರ್ಜಿಂದರ್ ಕೌರ್ ಅವರು ಆಗಸ್ಟ್ 29ರಂದು ಸಮನ್ಸ್ ಜಾರಿ ಮಾಡಿದ್ದರು. ಇದನ್ನೂ ಓದಿ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ – ಕಾಮಿಗೆ 20 ವರ್ಷ ಕಠಿಣ ಶಿಕ್ಷೆ, 1.25 ಲಕ್ಷ ರೂ. ದಂಡ

    2019ರಲ್ಲಿ ಸುನೀತಾ ಕೇಜ್ರಿವಾಲ್ ವಿರುದ್ಧ ಖುರಾನಾ ದೂರು ದಾಖಲಿಸಿದ್ದರು, ಸುನೀತಾ ದೆಹಲಿಯ ಸಾಹಿಬಾಬಾದ್ (ಗಾಜಿಯಾಬಾದ್ ಕ್ಷೇತ್ರ) ಮತ್ತು ಚಾಂದಿನಿ ಚೌಕ್‌ನ ಮತದಾರರ ಪಟ್ಟಿಯಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಇದು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 17ಅನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದರು. ಇದನ್ನೂ ಓದಿ: ‘ಮೈ ಲಾರ್ಡ್’ ಹೇಳೋದು ಬಿಟ್ರೆ ನನ್ನ ಸಂಬಳದಲ್ಲಿ ಅರ್ಧ ಕೊಡ್ತೀನಿ: ಸುಪ್ರೀಂ ಜಡ್ಜ್

    ಸಮನ್ಸ್ ಜಾರಿ ಮಾಡಿರುವ ಆದೇಶವನ್ನು ಪ್ರಶ್ನಿಸಿ ಸುನೀತಾ ಕೇಜ್ರಿವಾಲ್ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರೆಬೆಕಾ ಜಾನ್ ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ವ್ಯಕ್ತಿಯೊಬ್ಬರು ಸುಳ್ಳು ಹೇಳಿಕೆ ನೀಡಿದರೆ ಮಾತ್ರ ಅಪರಾಧವಾಗುತ್ತದೆ ಎಂದು ಹೈಕೋರ್ಟ್ಗೆ ತಿಳಿಸಿದರು. ಸುಳ್ಳು ಘೋಷಣೆ ಮಾಡಲಾಗಿದೆ. ಸರಿಯಾದ ಮನಸ್ಸಿನ ಅನ್ವಯವಿಲ್ಲದೆ ಸಮನ್ಸ್ ನೀಡಲಾಗಿದೆ ಎಂದು ಜಾನ್ ವಾದಿಸಿದರು. ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಕೊಡುಗೆ ಆಡಳಿತ ಪಕ್ಷಕ್ಕೆ ಹೆಚ್ಚು – ಸುಪ್ರೀಂಗೆ ಕೇಂದ್ರ ಹೇಳಿಕೆ

    ಇದು ಖಾಸಗಿ ದೂರು. ಮ್ಯಾಜಿಸ್ಟ್ರೇಟ್ ಸಮನ್ಸ್ ನೀಡುವ ಮೊದಲು, ಚುನಾವಣಾ ಆಯೋಗದಿಂದ ಮಾಹಿತಿ ಪಡೆಯಬೇಕು ಜಾನ್ ಹೇಳಿದ್ದರು. ರಾಜ್ಯದ ಪರ ಹಾಜರಾದ ವಕೀಲರು ದೂರನ್ನು ಮಿತಿಯಿಂದ ನಿರ್ಬಂಧಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತು. ಇದನ್ನೂ ಓದಿ: ಚಂದ್ರಬಾಬು ನಾಯ್ಡುಗೆ 4 ವಾರಗಳ ಮಧ್ಯಂತರ ಜಾಮೀನು