Tag: ಸುನೀತಾ ಅಹುಜಾ

  • ನಮ್ಮಿಬ್ಬರನ್ನು ದೂರ ಮಾಡಲು ಸಾಧ್ಯವೇ ಇಲ್ಲ: ಗೋವಿಂದ ಪತ್ನಿ ಸುನೀತಾ ಸ್ಪಷ್ಟನೆ

    ನಮ್ಮಿಬ್ಬರನ್ನು ದೂರ ಮಾಡಲು ಸಾಧ್ಯವೇ ಇಲ್ಲ: ಗೋವಿಂದ ಪತ್ನಿ ಸುನೀತಾ ಸ್ಪಷ್ಟನೆ

    ಬಾಲಿವುಡ್ ನಟ ಗೋವಿಂದ (Govinda) ದಾಂಪತ್ಯದಲ್ಲಿ ಬಿರುಕಾಗಿದೆ ಎನ್ನಲಾದ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿದೆ. ಇದುವರೆಗೂ ಇಬ್ಬರ ಡಿವೋರ್ಸ್ ಕುರಿತು ಅಧಿಕೃತವಾಗಿ ಘೋಷಣೆ ಆಗಿಲ್ಲ. ಹೀಗಿರುವಾಗ ಗೋವಿಂದ ಪತ್ನಿ ಸುನೀತಾ ಅಹುಜಾ ರಿಯಾಕ್ಟ್ ಮಾಡಿದ್ದಾರೆ. ನಮ್ಮಿಬ್ಬರನ್ನು ದೂರ ಮಾಡಲು ಸಾಧ್ಯವೇ ಇಲ್ಲ ಎಂದು ಸುನೀತಾ ಅಹುಜಾ (Sunita Ahuja) ಹೇಳಿದ್ದಾರೆ.

    ಗೋವಿಂದ ಮತ್ತು ಸುನೀತಾ ಪ್ರತ್ಯೇಕವಾಗಿ ವಾಸಿಸುತ್ತಿರುವ ಬಗ್ಗೆ ಅಸಲಿ ಕಾರಣವನ್ನು ನಟನ ಪತ್ನಿ ಹಂಚಿಕೊಂಡಿದ್ದಾರೆ. ಗೋವಿಂದ ಅವರು ರಾಜಕೀಯಕ್ಕೆ ಸೇರ್ಪಡೆಗೊಂಡಾಗ ಪಕ್ಷದ ಅನೇಕ ಕಾರ್ಯಕರ್ತರು ಮನೆಗೆ ಭೇಟಿ ನೀಡುತ್ತಿದ್ದರು. ಆ ಸಮಯದಲ್ಲಿ ನಮ್ಮ ಮಗಳು ಹದಿಹರೆಯದವಳು. ನಮಗೆ ಪ್ರೈವಸಿ ಬೇಕಾಗಿತ್ತು. ಇನ್ನೂ ಸಾಮಾನ್ಯವಾಗಿ ಮನೆಯಲ್ಲಿ ಶಾರ್ಟ್ಸ್ ಧರಿಸಿ ತಿರುಗಾಡುತ್ತಿರುತ್ತೇವೆ. ನಿರಂತರವಾಗಿ ಮನೆಗೆ ಜನರು ಬರುತ್ತಿದ್ದರು. ಹಾಗಾಗಿ ನಾವು ಮನೆಯ ಎದುರೇ ಕಚೇರಿ ತೆರೆಯಲು ನಿರ್ಧರಿಸಿದೇವು ಎಂದು ತಿಳಿಸಿದ್ದಾರೆ.

    ಈ ಜಗತ್ತಿನಲ್ಲಿ ನಮ್ಮಿಬ್ಬರನ್ನು ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೋವಿಂದ ಪತ್ನಿ ಸುನೀತಾ ಅವರು ಹೇಳಿಕೆ ನೀಡಿದ್ದಾರೆ. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಇದನ್ನೂ ಓದಿ:ಪ್ರೆಗ್ನೆನ್ಸಿ ಗುಡ್ ನ್ಯೂಸ್ ಕೊಟ್ಮೇಲೆ ಮತ್ತೆ ಚಿತ್ರೀಕರಣದಲ್ಲಿ ಕಿಯಾರಾ ಬ್ಯುಸಿ

    ಅಂದಹಾಗೆ, ನಟ ಗೋವಿಂದ ಮತ್ತು ಸುನೀತಾ ಅವರು 1987ರಲ್ಲಿ ಮದುವೆಯಾದರು. ಈ ದಂಪತಿಗೆ ಟೀನಾ ಮತ್ತು ಯಶವರ್ಧನ್ ಎಂಬ ಇಬ್ಬರೂ ಮಕ್ಕಳಿದ್ದಾರೆ.

  • ಬಾಲಿವುಡ್‍ಗೆ ಎಂಟ್ರಿ ಕೊಡ್ತಿದ್ದಾರಾ ನಟ ಗೋವಿಂದ ಪುತ್ರ?

    ಬಾಲಿವುಡ್‍ಗೆ ಎಂಟ್ರಿ ಕೊಡ್ತಿದ್ದಾರಾ ನಟ ಗೋವಿಂದ ಪುತ್ರ?

    ಮುಂಬೈ: ಬಾಲಿವುಡ್‍ನಲ್ಲಿ ತಮ್ಮ ವಿಭಿನ್ನವಾದ ಡ್ಯಾನ್ಸ್ ಸ್ಟೈಲ್ ಮೂಲಕ ಮಿಂಚಿದ್ದ ನಟ ಗೋವಿಂದ್ರವರ ಪುತ್ರ ಇದೀಗ ಬಾಲಿವುಡ್‍ಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ ಎಂಬ ಸುದ್ದಿ ಬಹಿರಂಗಗೊಂಡಿದೆ.

    ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಗೋವಿಂದ ಅವರ ಪತ್ನಿ ಸುನಿತಾ ಅಹುಜಾ ಮಾತನಾಡಿದ್ದು, ಈ ಕುರಿತಂತೆ ಈಗಾಗಲೇ ಕೆಲವರೊಟ್ಟಿಗೆ ಮಾತುಕತೆ ನಡೆಸಲಾಗಿದೆ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಕೊರೊನಾ ಲಾಕ್‍ಡೌನ್‍ನಿಂದ ಈ ಯೋಜನೆಗಳು ವಿಳಂಬವಾಗಿದೆ ಮತ್ತು ಮಗನ ಚೊಚ್ಚಲ ಸಿನಿಮಾದ ನಿರ್ಮಾಣಕ್ಕೆ ಉತ್ತಮ ಪ್ರೊಡಕ್ಷನ್ ಹೋಂ ಬೇಕಾಗಿದೆ ಎಂದಿದ್ದಾರೆ. ಇದನ್ನೂ ಓದಿ:  ಗೌಡ್ರ ಕುಟುಂಬದಲ್ಲಿ ಸಂಭ್ರಮ – ನಿಖಿಲ್, ರೇವತಿ ದಂಪತಿಗೆ ಗಂಡು ಮಗು

    Govinda son

    ಹೌದು, ಯಶವರ್ಧನ್ ಚೊಚ್ಚಲ ಸಿನಿಮಾ ಲಾಕ್‍ಡೌನ್‍ನಿಂದ ವಿಳಂಬವಾಗಿದೆ. ಮಗನನ್ನು ಲಾಂಚ್ ಮಾಡಲು ಈಗಾಗಲೇ ಕೆಲವರೊಂದಿಗೆ ಮಾತುಕತೆ ನಡೆಸಲಾಗಿದೆ. ನಮಗೆ ಉತ್ತಮ ನಿರ್ಮಾಣ ಸಂಸ್ಥೆ ಹಾಗೂ ಉತ್ತಮ ಚಿತ್ರ ಕಥೆ ಬೇಕಾಗಿದೆ. ಏಕೆಂದರೆ ಇದು ನಮ್ಮ ಮಗನ ಮೊದಲ ಸಿನಿಮಾ. ಈಗಾಗಲೇ ಯಶವರ್ಧನ್ ತನ್ನ ಮೊದಲ ಸಿನಿಮಾಕ್ಕೆ ನಟನೆ, ನೃತ್ಯ ಮತ್ತು ಫಿಟ್‍ನೆಸ್ ಸೇರಿದಂತೆ ಸಾಕಷ್ಟು ತಯಾರಿ ನಡೆಸಿದ್ದಾರೆ. ನಾವು ಶೀಘ್ರದಲ್ಲಿಯೇ ಯಶವರ್ಧನ್ ಚಿತ್ರರಂಗಕ್ಕೆ ಲಾಂಚ್ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ

    govinda wife

    ಯಶವರ್ಧನ್ ಸಾಜಿದ್ ನಾಡಿಯದ್ವಾಲಾ ಅವರ ಅಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಡಿಶೂಮ್, ಕಿಕ್ 2 ಮತ್ತು ತಡಪ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.