Tag: ಸುನಿಲ್ ನಾಯ್ಕ್

  • ಬಿಜೆಪಿ ಶಾಸಕ ಸುನಿಲ್ ನಾಯ್ಕ್ ಬೆಂಬಲಿಗರ ಅಟ್ಟಹಾಸ – ರಾಡ್ ಹಿಡಿದು ಮೀನುಗಾರರ ಮೇಲೆ ದೌರ್ಜನ್ಯ

    ಬಿಜೆಪಿ ಶಾಸಕ ಸುನಿಲ್ ನಾಯ್ಕ್ ಬೆಂಬಲಿಗರ ಅಟ್ಟಹಾಸ – ರಾಡ್ ಹಿಡಿದು ಮೀನುಗಾರರ ಮೇಲೆ ದೌರ್ಜನ್ಯ

    ಕಾರವಾರ: ಭಟ್ಕಳ ಶಾಸಕ ಸುನಿಲ್ ನಾಯ್ಕ್ ಆಪ್ತ ಗುತ್ತಿಗೆದಾರರಿಂದ ಮೀನುಗಾರರ ಮೇಲೆ ರಾಡ್ ಹಿಡಿದು ಗೂಂಡಾಗಿರಿ ನಡೆಸಿದ ಘಟನೆ ಹೊನ್ನಾವರ ಕಾಸರಕೋಡ ಟೊಂಕಾದ ಕಡಲತೀರದ ಬಳಿ ನಡೆದಿದೆ.

    ಉತ್ತರ ಕನ್ನಡದ ಭಟ್ಕಳದ ಬಿಜೆಪಿ ಶಾಸಕ ಸುನಿಲ್ ನಾಯ್ಕ್ ಬೆಂಬಲಿಗರ ಅಟ್ಟಹಾಸ ಎಲ್ಲೆ ಮೀರಿದೆ. ಶಾಸಕರ ಆಪ್ತ ಗುತ್ತಿಗೆದಾರರು ರಾಡ್ ಹಿಡಿದು ಮೀನುಗಾರರ ಮೇಲೆ ದೌರ್ಜನ್ಯ ನಡೆಸಲು ಯತ್ನಿಸಿದ ಘಟನೆ ಕಾಸರಕೋಡ ಟೊಂಕಾದ ಕಡಲತೀರದ ಬಳಿ ನಡೆದಿದೆ. ವಾಣಿಜ್ಯ ಬಂದರು ನಿರ್ಮಾಣಕ್ಕೆ ಕೋರ್ಟ್ ತಡೆಯಾಜ್ಞೆ ಇದ್ದರೂ, ಕಳೆದ ಮೂರು ದಿನದಿಂದ ಅಕ್ರಮವಾಗಿ ಕಾಮಗಾರಿ ನಡೆಸಲು ಶಾಸಕರ ಬೆಂಬಲಿಗರು ಯತ್ನಿಸಿದ್ರು. ಇದನ್ನೂ ಓದಿ: ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿದ ಶಾಸಕ ರೇಣುಕಾಚಾರ್ಯ

    ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿತ್ತು. ಆದರೇ ಇಂದು ಕೂಡ, ಶಾಸಕರ ಆಪ್ತರಾದ ತುಂಬೊಳ್ಳಿ ಜಗದೀಶ್, ರಮೇಶ್ ಅಕ್ರಮ ಕಾಮಗಾರಿಗೆ ಯತ್ನಿಸಿದ್ರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ವಾಹನಗಳನ್ನು ತಡೆದ ಮೀನುಗಾರರ ಮೇಲೆ ರಾಡ್ ಮೂಲಕ ಬೆದರಿಸಲು ನೋಡಿದ್ದಾರೆ. ಮೀನುಗಾರರು ವಿರೋಧ ವ್ಯಕ್ತಪಡಿಸಿ ವಾಹನಗಳನ್ನು ತಡೆದಿದ್ದು, ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ವಾಹನದಿಂದ ರಾಡ್ ಅನ್ನು ಹೊರತೆಗೆದ ಶಾಸಕರ ಆಪ್ತರು ಮೀನುಗಾರರಿಗೆ ಹೆದರಿಸಿದ್ದಾರೆ. ನಂತರ ತಮ್ಮ ಆತ್ಮ ರಕ್ಷಣೆಗಾಗಿ ರಾಡ್ ಇಟ್ಟುಕೊಂಡಿರುವುದಾಗಿ ಸಮಜಾಯಿಸಿ ನೀಡಿದ್ದು, ಈ ಕುರಿತು ಮೀನುಗಾರರು ಮತ್ತೊಂದು ಕಂಪ್ಲೇಂಟ್ ನೀಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಯುವತಿಯ ಮೇಲೆ ಬೆಂಗ್ಳೂರಿನಲ್ಲಿ ಗ್ಯಾಂಗ್‌ ರೇಪ್‌ – 7 ಮಂದಿಗೆ ಜೀವಾವಧಿ ಶಿಕ್ಷೆ

     

  • ಭಟ್ಕಳ ಶಾಸಕ ಸುನಿಲ್ ನಾಯ್ಕ್​​​​ಗೆ ಕೊರೊನಾ ಪಾಸಿಟಿವ್

    ಭಟ್ಕಳ ಶಾಸಕ ಸುನಿಲ್ ನಾಯ್ಕ್​​​​ಗೆ ಕೊರೊನಾ ಪಾಸಿಟಿವ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಾಸಕ ಸುನಿಲ್ ನಾಯ್ಕ್ ಅವರಿಗೆ ಕೊರೋನಾ ಸೋಂಕು ತಗುಲಿರೋದು ಇಂದು ದೃಢಪಟ್ಟಿದೆ.

    ಆರೋಗ್ಯದಲ್ಲಿ ಏರುಪೇರಾಗಿದ್ದು ತೀವ್ರ ಜ್ವರದ ಕಾರಣ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಇಂದು ಫಲಿತಾಂಶ ಬಂದಿದ್ದು ತಮಗೆ ಕೊರೊನಾ ಸೋಂಕು ಬಂದಿರುವುದನ್ನು ತಮ್ಮ ಫೇಸ್‍ಬುಕ್ ಖಾತೆ ಮೂಲಕ ದೃಢಪಡಿಸಿದ್ದಾರೆ.

    ಬುಧವಾರ ಯಲ್ಲಾಪುರದ ಮಾಜಿ ಶಾಸಕ ಹಾಗೂ ವಾ.ಕ.ರ.ಸಾ.ಸಂಸ್ಥೆಯ ಅಧ್ಯಕ್ಷ ವಿ.ಸ್ ಪಾಟೀಲ್ ರವರಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು. ಇಬ್ಬರೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ರವರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.