Tag: ಸುನಿಲ್ ಚೆಟ್ರಿ

  • ಫೋಟೋಗಾಗಿ ಬೆಂಗ್ಳೂರು ಎಫ್‍ಸಿ ನಾಯಕ ಸುನಿಲ್ ಚೆಟ್ರಿಯನ್ನು ತಳ್ಳಿದ ಬಂಗಾಳದ ಗವರ್ನರ್

    ಫೋಟೋಗಾಗಿ ಬೆಂಗ್ಳೂರು ಎಫ್‍ಸಿ ನಾಯಕ ಸುನಿಲ್ ಚೆಟ್ರಿಯನ್ನು ತಳ್ಳಿದ ಬಂಗಾಳದ ಗವರ್ನರ್

    ಕೋಲ್ಕತ್ತಾ: ಡುರಾಂಡ್ ಕಪ್ ಫುಟ್‍ಬಾಲ್ 2022ರನ್ನು (Durand Cup Football Tournament) ಬೆಂಗಳೂರು ಎಫ್‍ಸಿ ತಂಡ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಫೈನಲ್‍ನಲ್ಲಿ ಹೋರಾಡಿ ಪ್ರಸ್ತಿಗೆದ್ದ ಬೆಂಗಳೂರು ಎಫ್‍ಸಿ (Bengaluru FC) ತಂಡದ ನಾಯಕ ಸುನಿಲ್‌ ಚೆಟ್ರಿ (Sunil Chhetri) ಅವರನ್ನು ಪ್ರಶಸ್ತಿ ಸಮಾರಂಭದ ವೇಳೆ ಬಂಗಾಳದ ಗವರ್ನರ್ (Governor) ಲಾ ಗಣೇಶನ್ (La Ganesan) ಫೋಟೋಗಾಗಿ (Photo) ತಳ್ಳಿದ ಪ್ರಸಂಗವೊಂದು ನಡೆದಿದೆ.

    ಡುರಾಂಡ್ ಕಪ್ 2022 ಫೈನಲ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಿತು. ಫೈನಲ್‍ನಲ್ಲಿ ಬೆಂಗಳೂರು ಎಫ್‍ಸಿ ಮತ್ತು ಮುಂಬೈ ಸಿಟಿ ಎಫ್‍ಸಿ (Mumbai City FC) ತಂಡಗಳು ಕಾದಾಟ ನಡೆಸಿದವು. ರೋಚಕ ಹೋರಾಟದಲ್ಲಿ ಬೆಂಗಳೂರು ಎಫ್‍ಸಿ ತಂಡ ಮುಂಬೈ ವಿರುದ್ಧ 2-1 ಅಂತರದ ಜಯದೊಂದಿಗೆ ಪ್ರಶಸ್ತಿಗೆ ಮುತ್ತಿಕ್ಕಿತು. ಇದನ್ನೂ ಓದಿ: ನಮ್ದು ಕಲ್ಲಂಗಡಿಯಾದರೆ ನಿಮ್ದು ಹಾರ್ಪಿಕ್ – ಇಂಡೋ ಪಾಕ್ ಅಭಿಮಾನಿಗಳ ಜೆರ್ಸಿ ಫೈಟ್

    ಬಳಿಕ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬೆಂಗಳೂರು ಎಫ್‍ಸಿ ತಂಡದ ನಾಯಕ ಸುನಿಲ್‌ ಚೆಟ್ರಿ ಪ್ರಶಸ್ತಿ ಪಡೆಯಲು ವೇದಿಕೆ ಮೇಲೆ ತೆರಳಿದ್ದಾರೆ. ಈ ವೇಳೆ ಪ್ರಶಸ್ತಿ ಪ್ರಧಾನ ಮಾಡಿದ ಬಂಗಾಳದ ಗವರ್ನರ್ ಲಾ ಗಣೇಶನ್ ಫೋಟೋಗಾಗಿ ಛೆಟ್ರಿಯನ್ನು ತಳ್ಳಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ರಾಹುಲ್ ಗಾಂಧಿ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ರೋಹಿತ್ – ಆ್ಯಂಕರ್ ಎಡವಟ್ಟು

    ಇದೀಗ ಈ ಘಟನೆಯ ಸಾಕಷ್ಟು ವೀಡಿಯೋಗಳು ವೈರಲ್ ಆಗುತ್ತಿದ್ದು, ಈ ರಾಜಕಾರಣಿಗಳಿಗೆ ಯಾಕಿಷ್ಟು ಫೋಟೋ ಹುಚ್ಚು ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಕಪ್ ಗೆಲ್ಲಲು ಮೈದಾನದಲ್ಲಿ ಹೋರಾಡಿದವರು ಸುನಿಲ್ ಚೆಟ್ರಿ ಆದರೆ ಫೋಟೋಗೆ ಫೋಸ್ ನೀಡಲು ಒದ್ದಾಡಿದವರು ಗವರ್ನರ್ ಎಂಬ ಆಕ್ರೋಶದ ಮಾತುಗಳು ಕೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ತನ್ನ ಮೊದಲ ಗೋಲನ್ನು ಪಾಕ್ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ್ದ ಸುನಿಲ್ ಚೆಟ್ರಿ!

    ತನ್ನ ಮೊದಲ ಗೋಲನ್ನು ಪಾಕ್ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ್ದ ಸುನಿಲ್ ಚೆಟ್ರಿ!

    ಮುಂಬೈ: ಟೀಂ ಇಂಡಿಯಾ ಫುಟ್ಬಾಲ್ ತಂಡದ ನಾಯಕರ ಸುನಿಲ್ ಚೆಟ್ರಿ ತಮ್ಮ ಮೊದಲ ಗೋಲನ್ನು ಪಾಕಿಸ್ತಾನಿ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ್ದಾಗಿ ಹೇಳಿದ್ದಾರೆ.

    ಕೀನ್ಯಾ ವಿರುದ್ಧ ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯ ಭಾಗವಾಗಿ ಸೋಮವಾರ ನಡೆಯುವ ಪಂದ್ಯದಲ್ಲಿ ಸುನಿಲ್ ಚೆಟ್ರಿ ತಮ್ಮ ನೂರನೇ ಪಂದ್ಯವನ್ನು ಪೂರ್ಣಗೊಳಿಸಲಿದ್ದಾರೆ. ಈ ಕುರಿತು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಹರ್ಷ ವ್ಯಕ್ತಪಡಿಸಿದ ಚೆಟ್ರಿ, ತಮ್ಮ ಮೊದಲ ಪಂದ್ಯವನ್ನು ಪಾಕಿಸ್ತಾನದಲ್ಲಿ ಆಡಿದ್ದು, ಈ ವೇಳೆ ಗೋಲು ಗಳಿಸಿ ಪಾಕ್ ಅಭಿಮಾನಿಗಳ ಜೊತೆ ಸಂಭ್ರಮಿಸಲು ತೆರಳಿದ್ದಾಗಿ ಹೇಳಿದ್ದರು.

    ತಮ್ಮ ವೃತ್ತಿ ಜೀವನದಲ್ಲಿ ಭಾರತದ ಪರ ನೂರನೇ ಪಂದ್ಯವನ್ನು ಆಡುವ ಕುರಿತು ಕನಸು ಕಂಡಿರಲಿಲ್ಲ. ಇದು ನಂಬಲೂ ಸಹ ಅಸಾಧ್ಯವಾಗಿದೆ. ದೇಶದ ಪರ ಆಡಲು ಮಾತ್ರ ನಿರ್ಧರಿಸಿದ್ದೆ. ಇದೇ ನನ್ನ ಬಹುದೊಡ್ಡ ಕನಸಾಗಿತ್ತು ಎಂದು ತಿಳಿಸಿದ್ದಾರೆ.

    100 ಪಂದ್ಯ ಎಂಬುವುದನ್ನು ಹೊರತು ಪಡಿಸಿದರೆ, ಅಂತರಾಷ್ಟ್ರೀಯ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಸ್ಥಾನವನ್ನು ಉತ್ತಮಪಡಿಸುವುದು ನಮ್ಮ ಮುಂದಿರುವ ಗುರಿ. ಪ್ರತಿ ಪಂದ್ಯವನ್ನು ಗೆಲ್ಲುವ ಮೂಲಕ ಇದನ್ನು ಸಾಧಿಸುವತ್ತ ಸಾಗಬೇಕಿದೆ. ನನ್ನ ಈ ಸಾಧನೆಗೆ ತಾಯಿಯ ಪ್ರೇರಣೆ ಕೂಡ ಪ್ರಮುಖ ಪಾತ್ರವಹಿಸಿದೆ ಎಂದು ಭಾವುಕರಾದರು.

    ಇಂದಿನ ಪಂದ್ಯವನ್ನು ಆಡಿದರೆ ಭಾರತದ ಪರ 100 ಪಂದ್ಯಗಳಲ್ಲಿ ಆಡಿದ ಎರಡನೇ ಆಟಗಾರರ ಎಂಬ ಹೆಗ್ಗಳಿಕೆಗೆ ಸುನಿಲ್ ಚೆಟ್ರಿ ಪಾತ್ರವಾಗಲಿದ್ದಾರೆ. ಅಲ್ಲದೇ ಕಳೆದ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿ ಒಟ್ಟಾರೆ 59 ಗೋಲು ದಾಖಲಿಸುವ ಮೂಲಕ ಭಾರತದ ಪರ ಹೆಚ್ಚು ಗೋಲು ದಾಖಲಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸಕ್ರೀಯ ಗೋಲು ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

    ಚೈನೀಸ್ ತೈಪೆ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದ ಬಳಿಕ ಭಾರತೀಯ ಅಭಿಮಾನಿಗಳಲ್ಲಿ ಬೆಂಬಲ ನೀಡಲು ಮನವಿ ಮಾಡಿ ಚೆಟ್ರಿ ವಿಡಿಯೋ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಹಾಗೂ ಸಾನಿಯಾ ಮಿರ್ಜಾ ಅಭಿಮಾನಿಗಳಲ್ಲಿ ಮೈದಾನಕ್ಕೆ ತೆರಳಿ ಬೆಂಬಲ ನೀಡುವಂತೆ ಮನವಿ ಮಾಡಿದ್ದರು.

  • ಸ್ನೇಹಿತನ ಪರ ಅಭಿಮಾನಿಗಳಿಗೆ ಕೊಹ್ಲಿಯಿಂದ ವಿಶೇಷ ಮನವಿ

    ಸ್ನೇಹಿತನ ಪರ ಅಭಿಮಾನಿಗಳಿಗೆ ಕೊಹ್ಲಿಯಿಂದ ವಿಶೇಷ ಮನವಿ

    ನವದೆಹಲಿ: ಟೀಂ ಇಂಡಿಯಾ ಫುಟ್ಬಾಲ್ ತಂಡದ ನಾಯಕರ ಸುನಿಲ್ ಚೆಟ್ರಿ ತಂಡಕ್ಕೆ ಬೆಂಬಲ ಸೂಚಿಸಲು ಅಭಿಮಾನಿಗಳಲ್ಲಿ ಮನವಿ ಮಾಡಿದ ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ನೇಹಿತ ಚೆಟ್ರಿ ಬೆಂಬಲಕ್ಕೆ ನಿಂತಿದ್ದಾರೆ.

    ಹೌದು, ಟೀಂ ಇಂಡಿಯಾ ಫುಟ್ಬಾಲ್ ತಂಡಕ್ಕೆ ಕೊಹ್ಲಿ ಸಹ ದೊಡ್ಡ ಅಭಿಮಾನಿಯಾಗಿದ್ದು, ಚೆಟ್ರಿ ನಾಯಕತ್ವದ ತಂಡಕ್ಕೆ ಬೆಂಬಲ ನೀಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಕೊಹ್ಲಿ, ಚೆಟ್ರಿ ನಾಯಕತ್ವದ ಟೀಂ ಇಂಡಿಯಾ ಫುಟ್ಬಾಲ್ ತಂಡ ಉತ್ತಮ ಪ್ರದರ್ಶನಗಳನ್ನು ನೀಡುತ್ತಿದ್ದು, ಅಭಿಮಾನಿಗಳು ಮೈದಾನಕ್ಕೆ ತೆರಳಿ ಪಂದ್ಯ ವಿಕ್ಷೀಸುವ ಮೂಲಕ ಬೆಂಬಲ ನೀಡಬೇಕು ಎಂದಿದ್ದಾರೆ.

     ಸುನಿಲ್ ಚೆಟ್ರಿ ಬಹಳ ಕಾಲದಿಂದ ನನಗೆ ಗೊತ್ತು, ಅವರು ಹಾಗೂ ಟೀಂ ಇಂಡಿಯಾ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಲು ಸಾಕಷ್ಟು ಪರಿಶ್ರಮ ಪಡುತ್ತಿದೆ. ದೇಶದ ಎಲ್ಲಾ ಕ್ರೀಡೆಗಳಿಗೂ ಸಮಾನ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯವಾಗಿದೆ. ಟೀಂ ಇಂಡಿಯಾ ಫುಟ್ಬಾಲ್ ತಂಡಕ್ಕೂ ಬೆಂಬಲ ನೀಡಿ ಎಂದು ತಿಳಿಸಿದ್ದಾರೆ.

    ಸುನಿಲ್ ಚೆಟ್ರಿ ಸಹ ಅಭಿಮಾನಿಗಳ ಬೆಂಬಲ ಕೇಳಿ ಇದಕ್ಕೂ ಮುನ್ನ ವಿಡಿಯೋ ಮಾಡಿ ಟ್ವೀಟ್ ಮಾಡುವ ಮೂಲಕ ಮನವಿ ಮಾಡಿದ್ದರು. ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯ ಭಾಗವಾಗಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದ ಬಳಿಕ ಅಭಿಮಾನಿಗಳ ಬೆಂಬಲ ಕೋರಿ ಚೆಟ್ರಿ ಮನವಿ ಮಾಡಿದ್ದರು.

    ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಭಾರತ 5-0 ಅಂತರದಿಂದ ಜಯಗಳಿಸಿತ್ತು. ಸದ್ಯ ಉತ್ತಮ ಫಾರ್ಮ್ ಹೊಂದಿರುವ ಚೆಟ್ರಿ ತಮ್ಮ 99ನೇ ಪಂದ್ಯದಲ್ಲಿ ಮೂರು ಗೋಲು ದಾಖಲಿಸುವ ಮೂಲಕ ಭಾರತ ಪರ ಅತೀ ಹೆಚ್ಚು (59) ಗೋಲು ದಾಖಲಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯ ಗೋಲು ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

    ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯ ಭಾಗವಾಗಿ ಟೀಂ ಇಂಡಿಯಾ ಜೂನ್ 4 ರಂದು ಕೀನ್ಯಾ ಮತ್ತು ಜೂನ್ 7 ರಂದು ನ್ಯೂಜಿಲೆಂಡ್ ವಿರುದ್ಧ ಪಂದ್ಯಗಳನ್ನು ಆಡಲಿದೆ.

    https://www.facebook.com/IndianSuperLeague/videos/1000106360165287/