Tag: ಸುಧೀರ್ ಸರಾಫ್

  • ಮಾಜಿ ಮಹಾಪೌರ ಸುಧೀರ್ ಸರಾಫ್ ನಿಧನ – ಗಣ್ಯರ ಕಂಬನಿ

    ಮಾಜಿ ಮಹಾಪೌರ ಸುಧೀರ್ ಸರಾಫ್ ನಿಧನ – ಗಣ್ಯರ ಕಂಬನಿ

    ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರ, ಭಾರತೀಯ ಜನತಾ ಪಕ್ಷದ ಮುಖಂಡರಾಗಿದ್ದ ಸುಧೀರ್ ಸರಾಫ್ ಅವರ ನಿಧನಕ್ಕೆ ಗಣ್ಯರು ಕಂಬಿ ಮೀಡಿದಿದ್ದಾರೆ.

    ಹಲವು ದಿನಗಳಿಂದ ಕಾನ್ಸರ್‍ನಿಂದ ಬಳಲುತ್ತಿದ್ದ ಸುಧೀರ್ ಸರಾಫ್ ಅವರು ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಸುಧೀರ್ ಸರಾಫ್ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಸುಧೀರ್ ಸರಾಫ್ ಕಳೆದ ರಾತ್ರಿ ನಿಧನರಾಗಿದ್ದು, ಮೃತರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಇಂದು (ಗುರುವಾರ) ಬೆಳಗ್ಗೆ 9.30 ಗಂಟೆಗೆ ಅವರ ಸ್ವಗೃಹದಿಂದ ಹೊರಟು ಕೇಶ್ವಾಪುರ ಮುಕ್ತಿ ಧಾಮದಲ್ಲಿ ನೇರವೇರಲಿದೆ.