Tag: ಸುಧಾಕರ್‌ ರೆಡ್ಡಿ

  • ದೆಹಲಿ ಚುನಾವಣಾ ಫಲಿತಾಂಶ ಬಿಜೆಪಿ ಮೇಲಿನ ನಂಬಿಕೆ ವೃದ್ಧಿಸಿದೆ: ಸುಧಾಕರ್ ರೆಡ್ಡಿ

    ದೆಹಲಿ ಚುನಾವಣಾ ಫಲಿತಾಂಶ ಬಿಜೆಪಿ ಮೇಲಿನ ನಂಬಿಕೆ ವೃದ್ಧಿಸಿದೆ: ಸುಧಾಕರ್ ರೆಡ್ಡಿ

    ಬೆಂಗಳೂರು: ದೆಹಲಿ ಚುನಾವಣೆಯಲ್ಲಿ (Delhi Election Result) ಬಿಜೆಪಿ ಗೆಲುವು ಸಾಧಿಸಿದ ಕುರಿತು ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ (Sudhakar Reddy) ಸಂತೋಷ ವ್ಯಕ್ತಪಡಿಸಿದ್ದಾರೆ.

    ದೆಹಲಿಯ ಜನತೆಗೆ ಅಭಿನಂದನೆ ಕೋರಿರುವ ಅವರು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಚಿಂತನೆಯನ್ನೇ ಧ್ಯೇಯವಾಗಿಸಿಕೊಂಡ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಜೀ (Narendra Modi) ಅವರ ನಾಯಕತ್ವವನ್ನು ದೇಶ ಒಪ್ಪಿಕೊಂಡಿದೆ. ದೇಶದಲ್ಲಿ ಬಿಜೆಪಿ ಮೋದಿಯವರು ನುಡಿದಂತೆ ನಡೆದು ತೋರಿಸುತ್ತಿದ್ದಾರೆ. ಇದರಿಂದ ಬಿಜೆಪಿ ಕುರಿತು ಜನರಲ್ಲಿ ನಂಬಿಕೆ – ವಿಶ್ವಾಸ ವೃದ್ಧಿಸಿದೆ. ಈ ವಿಷಯ ದೆಹಲಿ ಚುನಾವಣೆ ಫಲಿತಾಂಶದ ಮೂಲಕ ಸಾಬೀತಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುವಾಗ ಏಕಾಏಕಿ ಕಾಡಾನೆ ದಾಳಿ – ಮಹಿಳೆ ಸಾವು

    ಆಪ್ ಪ್ರತಿ ಸಂದರ್ಭದಲ್ಲೂ ಸುಳ್ಳು ಹೇಳುತ್ತಿತ್ತು. ಆಪ್ ಮುಖಂಡರು ಭ್ರಷ್ಟ ಸರ್ಕಾರವನ್ನು ನಡೆಸುತ್ತಿದ್ದರು. ಮುಂದಿನ ದಿನಗಳಲ್ಲಿ ದೆಹಲಿ ಜನತೆಗೆ ಒಳಿತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚುನಾವಣೆಯ ಗೆಲುವಿಗೆ ಕಾರಣಕರ್ತರಾದ ಮತದಾರರು, ಶ್ರಮಿಸಿದ ಪಕ್ಷದ ಕಾರ್ಯಕರ್ತರು, ನಾಯಕರನ್ನು ಅಭಿನಂದಿಸಿದ್ದಾರೆ. ಇದನ್ನೂ ಓದಿ: ಜನರ ತೀರ್ಪು ಸ್ವಾಗತಿಸುತ್ತೇವೆ.. ಸೋಲನ್ನ ಹೀನಾಯ ಸೋಲು ಎಂದು ಹೇಳಲ್ಲ: ಮುಖ್ಯಮಂತ್ರಿ ಚಂದ್ರು

  • ರಾಜ್ಯ ಬಿಜೆಪಿ ನಾಯಕರು ಯಾರೂ ಬಹಿರಂಗವಾಗಿ ಮಾತನಾಡಬಾರದು: ಸುಧಾಕರ್ ರೆಡ್ಡಿ

    ರಾಜ್ಯ ಬಿಜೆಪಿ ನಾಯಕರು ಯಾರೂ ಬಹಿರಂಗವಾಗಿ ಮಾತನಾಡಬಾರದು: ಸುಧಾಕರ್ ರೆಡ್ಡಿ

    ಬೆಂಗಳೂರು: ರಾಜ್ಯ ಬಿಜೆಪಿ ಆಂತರಿಕ ಕಿತ್ತಾಟಕ್ಕೆ ಕೊನೆಗೂ ಹೈಕಮಾಂಡ್ ಕಠಿಣ ಸಂದೇಶವನ್ನು ಕಳಿಸಿದೆ.‌ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಮೂಲಕ ರಾಜ್ಯ ನಾಯಕರಿಗೆ ಸಂದೇಶ ರವಾನೆ ಮಾಡಿರೋ ಬಿಜೆಪಿ ಹೈಕಮಾಂಡ್, ಯಾರು ಕೂಡ ಬಹಿರಂಗವಾಗಿ ಮಾತಾಡದಂತೆ ಸೂಚಿಸಿದೆ.

    ವಿಪಕ್ಷ ನಾಯಕ ಅಶೋಕ್‌ ಅವರನ್ನ ಬಿಜೆಪಿ ಕಚೇರಿಗೆ ಕರೆಸಿಕೊಂಡು ಸುಧಾಕರ್ ರೆಡ್ಡಿ ಮಾತುಕತೆ ನಡೆಸಿದರು. ಅಲ್ಲದೇ, ಯಾವುದೇ ನಾಯಕರು ಬಹಿರಂಗವಾಗಿ ಮಾತಾಡದಂತೆ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಬಹಿರಂಗವಾಗಿಯೇ ರಾಜ್ಯ ನಾಯಕರಿಗೆ ಸಂದೇಶ ರವಾನೆ ಮಾಡಿದರು.

    ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸುಧಾಕರ್ ರೆಡ್ಡಿ, ನಾನು ಪ್ರತಿಯೊಬ್ಬರಿಗೂ ಹೇಳುತ್ತೇನೆ. ಎಲ್ಲರೂ ಅತಿ ಮುಖ್ಯ ಹಿರಿಯರು. ಮಾಧ್ಯಮ ಮೂಲಕ ನಾವು ಎಲ್ಲರ ವ್ಯೂ ನೋಡಿದ್ದೇವೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಆಂತರಿಕ ಚುನಾವಣಾ ಮುಕ್ತಾಯ ಆಗಿದೆ. ಕರ್ನಾಟಕದಲ್ಲಿ ಕೂಡ ಆ ಪ್ರೊಸಿಜರ್ ನಡೆಯುತ್ತಿದೆ. ಈಗಾಗಲೇ ಅನೇಕ ಜಿಲ್ಲಾಧ್ಯಕ್ಷರ ಆಯ್ಕೆ ಆಗಿದೆ. ಯಾರೇ ಮಾತಾಡುವುದು ಇದ್ದರೂ ಪಾರ್ಟಿ ವೇದಿಕೆಯಲ್ಲಿ ಮಾತಾಡಿ ಎಂದು ಮನವಿ ಮಾಡಿದರು.

    ರಾಜ್ಯದ ಯಾವುದೇ ನಾಯಕರು ಆಗಲಿ A ಅಥವಾ B ಯಾರೇ ಆಗಲಿ, ಒಂದು ವೇದಿಕೆಯಲ್ಲಿ ಚರ್ಚೆ ಮಾಡಲಿ. ಪಾರ್ಟಿಯ ಗೈಡ್‌ಲೈನ್ಸ್ ಅಡಿ ನಡೆಯಬೇಕು. ಭ್ರಷ್ಟಾಚಾರದ ಕಾಂಗ್ರೆಸ್ ಇದೆ. ಜನರ ವಿರೋಧ ಕಾಂಗ್ರೆಸ್ ಮೇಲೆ ಇದೆ. ಸ್ವತಃ ಸಿದ್ದರಾಮಯ್ಯ ಆರೋಪ ಹೊತ್ತಿದ್ದಾರೆ. ಹೀಗಾಗಿ ಎಲ್ಲರೂ ಶಾಂತ ರೀತಿಯಲ್ಲಿ, ಸಹೋದರ ಭಾವದಲ್ಲಿ ಶಿಸ್ತಿನಿಂದ ನಡೆಯಬೇಕು. ಏನೇ ಸಮಸ್ಯೆ ಇದ್ದರೂ ಪಕ್ಷ ಅದನ್ನು ನೋಡಿಕೊಳ್ಳಲಿದೆ ಎಂದು ತಿಳಿಸಿದರು.