Tag: ಸುದ್ದಿ ನಿರೂಪಕ

  • ಮಹಿಳೆಯರ ಬಗ್ಗೆ ಅಸಭ್ಯ ಮಾತು – ಪತಿಯಿಂದ ದೂರಾದ ಇಟಲಿ ಪ್ರಧಾನಿ

    ಮಹಿಳೆಯರ ಬಗ್ಗೆ ಅಸಭ್ಯ ಮಾತು – ಪತಿಯಿಂದ ದೂರಾದ ಇಟಲಿ ಪ್ರಧಾನಿ

    ರೋಮ್‌: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ತಮ್ಮ ಪತಿ ಆಂಡ್ರಿಯಾ ಗಿಯಾಂಬ್ರುನೊ ಅವರಿಂದ ಬೇರೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ 10 ವರ್ಷಗಳ ಸಂಬಂಧವನ್ನು ಕೊನೆಗೊಳಿಸುತ್ತಿರುವುದಾಗಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಮೆಲೋನಿ ಪತಿ ಆಂಡ್ರಿಯಾ ಗಿಯಾಂಬ್ರುನೊ (Andrea Giambruno) ಟಿವಿ ಪತ್ರಕರ್ತನಾಗಿದ್ದು, ಇತ್ತೀಚೆಗೆ ಟಿವಿ ಲೈವ್‌ನಲ್ಲೇ ಲೈಂಗಿಕ (ಸೆಕ್ಸಿಯೆಷ್ಟ್) ಕಾಮೆಂಟ್ (TV Comments) ಮಾಡಿ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಕೆಲ ಸಮಯದಿಂದ ನಮ್ಮಿಬ್ಬರ ಹಾದಿ ಭಿನ್ನವಾಗಿವೆ, ಈಗ ಅದನ್ನು ಒಪ್ಪಿಕೊಳ್ಳುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ. ದಂಪತಿಗೆ ಒಂದು ಹೆಣ್ಣು ಮಗುವಿದೆ.

    ಮೀಡಿಯಾ ಸೆಟ್‌ನಲ್ಲಿ ಸುದ್ದಿ ನಿರೂಪಕನಾಗಿ ಆಂಡ್ರಿಯಾ ಗಿಯಾಂಬ್ರುನೊ ಕೆಲಸ ಮಾಡುತ್ತಿದ್ದರು. ಇದು ಇಟಲಿ ಮಾಜಿ ಪ್ರಧಾನ ಮಂತ್ರಿ ಮತ್ತು ಜಾರ್ಜಿಯಾ ಮೆಲೋನಿ ಮಿತ್ರ ದಿವಂಗತ ಸಿಲ್ವಿಯೊ ಬೆರ್ಲುಸ್ಕೋನಿಯ ಉತ್ತರಾಧಿಕಾರಿಯ ಮಾಲೀಕತ್ವದ ಮಾಧ್ಯಮ ಸಂಸ್ಥೆಯಾಗಿದೆ. ಇದೇ ವಾರದ ಆರಂಭದಲ್ಲಿ ಮೀಡಿಯಾಸೆಟ್‌, ಮೆಲೋನಿ ಪತಿ ಜಿಯಾಂಬ್ರುನೋ ಸುದ್ದಿ ಪ್ರಸಾರದ ವೇಳೆ ಅಸಭ್ಯ ಭಾಷೆ ಬಳಸುತ್ತಿರುವ ವೀಡಿಯೋ ಪ್ರಸಾರ ಮಾಡಲಾಗಿತ್ತು. ಪ್ರಸಾರದ ವೇಳೆ ಅವರು ಮಹಿಳಾ ಸಹೋದ್ಯೋಗಿಯ ಜೊತೆ ಫ್ಲರ್ಟ್‌ ಕೂಡ ಮಾಡುತ್ತಿದ್ದರು. ಆಗ ಮಹಿಳಾ ಸಹೋದ್ಯೋಗಿ ನಾನೇಕೆ ನಿನ್ನ ಈ ಮೊದಲೇ ಭೇಟಿ ಮಾಡಲಿಲ್ಲ? ಎಂದು ಕೇಳಿದ್ದಳು.

    ಗುರುವಾರ ಪ್ರಸಾರವಾದ ಮತ್ತೊಂದು ರೆಕಾರ್ಡಿಂಗ್‌ನಲ್ಲಿ, ಜಿಯಾಂಬ್ರುನೋ ಅವರು ತಾನು ಹೊಂದಿರುವ ಅಫೇರ್‌ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಮಹಿಳಾ ಸಹೋದ್ಯೋಗಿಗಳು ಗುಂಪು ಲೈಂಗಿಕತೆಯಲ್ಲಿ ಭಾಗವಹಿಸಿದರೆ ಅವರು ತನಗಾಗಿ ಕೆಲಸ ಮಾಡಬಹುದು ಎಂದು ಹೇಲಿದ್ದರು. ಇದಕ್ಕೂ ಮೊದಲು ಆಗಸ್ಟ್‌ನಲ್ಲಿ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯನ್ನು ನಿಂದಿಸುತ್ತಿರುವ ಕಾಮೆಂಟ್‌ಗಳ ಕಾರಣಕ್ಕೂ ಈ ಪತ್ರಕರ್ತ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಇದನ್ನೂ ಓದಿ: ಡಿಕೆಶಿ ನೂರಕ್ಕೆ ನೂರರಷ್ಟು ತಪ್ಪಿತಸ್ಥ, ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ಲಿ- ಈಶ್ವರಪ್ಪ ಆಗ್ರಹ

    ನೀವು ಡಾನ್ಸ್‌ ಮಾಡೋದಕ್ಕೆ ಹೋದ್ರೆ, ಅಲ್ಲಿ ಡ್ರಿಂಗ್ಸ್‌ ಮಾಡೋದಕ್ಕೂ ಅವಕಾಶವಿದೆ. ಆದ್ರೆ ನೀವು ಕುಡಿದು ನಿಮ್ಮ ಇಂದ್ರಿಯಗಳ ಮೇಲೆ ಹಿಡಿತ ಕಳೆದುಕೊಳ್ಳಬಾರದು. ಹಿಡಿತ ಕಳೆದುಕೊಳ್ಳುವುದನ್ನು ತಪ್ಪಿಸಿದರೆ, ನೀವು ಕೆಲವು ಸಮಸ್ಯೆಗಳಿಗೆ ಒಳಗಾಗುವುದನ್ನೂ ತಪ್ಪಿಸಬಹುದು ಎಂದು ಆಂಡ್ರಿಯಾ ಗಿಯಾಂಬ್ರುನೊ ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ: Cash for Query – ಪಾಸ್‌ವರ್ಡ್‌ ಶೇರ್‌ ಆಗಿತ್ತು: ಸಂಸದೆ ಮೊಯಿತ್ರಾ ಜೊತೆ ನಂಟು ಒಪ್ಪಿಕೊಂಡ ಉದ್ಯಮಿ

    ನನ್ನ ಪತಿ ಮಾಡಿದ ಕಾಮೆಂಟ್‌ಗೆ ಜನ ನನ್ನನ್ನು ಪ್ರಶ್ನೆ ಮಾಡಬಾರದು, ಮುಂದಿನ ದಿನಗಳಲ್ಲಿ ಆತನ ನಡವಳಿಕೆಯ ಬಗ್ಗೆ ನಾನು ಉತ್ತರಿಸುವಂತಾಗಬಾರದು, ಅದಕ್ಕಾಗಿ ಬೇರಾಗುವ ನಿರ್ಧಾರಕ್ಕೆ ಬಂದಿರುವುದಾಗಿ ಮೆಲೋನಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಕಾಂಗ್ರೆಸ್ ಕಲೆಕ್ಷನ್ ವಂಶಾವಳಿ, ನಿಗಮ ಮಂಡಳಿಗಳ ರೇಟ್ ಕಾರ್ಡ್ ರಿಲೀಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]